ಬೆಳಗಾವಿ: ಕ್ಷೇತ್ರದಾದ್ಯಂತ ನಿರಂತರವಾಗಿ ಮಂದಿರ, ಸಮುದಾಯ ಭವನ, ಶಾಲಾ ಕೊಠಡಿ, ಅಂಗನವಾಡಿ ಕಟ್ಟಡಗಳ ನಿರ್ಮಾಣ ಮಾಡಲಾಗುತ್ತಿದೆ. ಅಭಿವೃದ್ಧಿ ಮಾಡುವ ಮೂಲಕ ನನಗೆ ಮತ ಹಾಕಿದ ಕ್ಷೇತ್ರದ ಜನರಲ್ಲಿ ಸಾರ್ಥಕ ಭಾವನೆ ಮೂಡುವಂತೆ ಮಾಡುತ್ತಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

11:31 PM (IST) Sep 28
ಭಟ್ಕಳದ ಮೀನು ಮಾರುಕಟ್ಟೆ ವಿವಾದಕ್ಕೆ ಧಾರ್ಮಿಕ ಬಣ್ಣ ಬಳಿಯಲಾಗುತ್ತಿದ್ದು, ಹಿಂದೂ ಮೀನುಗಾರ ಮಹಿಳೆಯರನ್ನು ಗುರಿಯಾಗಿಸಿ ಅಪಪ್ರಚಾರದ ವಿಡಿಯೋವೊಂದು ಹರಿದಾಡುತ್ತಿದೆ. ಗಲ್ಫ್ ದೇಶಗಳಿಂದ ಈ ದ್ವೇಷ ಭಿತ್ತರಿಸುವ ಯತ್ನ ನಡೆದಿದೆ. ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
11:15 PM (IST) Sep 28
ಬೆಂಗಳೂರಿನ ಓರ್ವ ಆಟೋ ಚಾಲಕ ತನ್ನ ಮೃತ ಸಾಕು ನಾಯಿಯ ಭಾವಚಿತ್ರವನ್ನು ಆಟೋದ ಮುಂಭಾಗದಲ್ಲಿ ಇಟ್ಟುಕೊಂಡು ಸವಾರಿ ಮಾಡುತ್ತಿರುವ ಹೃದಯಸ್ಪರ್ಶಿ ಘಟನೆ ವೈರಲ್ ಆಗಿದೆ. ರೆಡ್ಡಿಟ್‌ನಲ್ಲಿ ಪ್ರಯಾಣಿಕರೊಬ್ಬರು ಹಂಚಿಕೊಂಡ ಈ ಪೋಸ್ಟ್, ಚಾಲಕನ ಪ್ರಾಣಿ ಪ್ರೀತಿ, ಜನರ ಭಾವನಾತ್ಮಕ ಪ್ರತಿಕ್ರಿಯೆಯನ್ನು ವಿವರಿಸುತ್ತದೆ.
11:00 PM (IST) Sep 28
ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 12 ಶುಭಾರಂಭಗೊಂಡಿದೆ. ಸ್ಪರ್ಧಿಗಳು ದೊಡ್ಮನೆ ಪ್ರವೇಶ ಮಾಡಿದ್ದಾರೆ. ವಿಧ ವಿಧವಾದ ವ್ಯಕ್ತಿತ್ವವುಳ್ಳ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಈ ಸ್ಪರ್ಧಿಗಳಲ್ಲಿ ಕೆಲವರ ಸುತ್ತ ಕಾಂಟ್ರವರ್ಸಿಗಳು ಸುತ್ತುಕೊಂಡಿವೆ.
10:52 PM (IST) Sep 28
ಪ್ರತಿಯೊಬ್ಬರೂ ಗಿಡ-ಮರಗಳನ್ನು ಬೆಳೆಸುವ ಜತೆಗೆ ಪರಿಸರ ಸಮತೋಲನಕ್ಕಾಗಿ ಸ್ವಚ್ಛತೆಗೆ ಆದ್ಯತೆ ನೀಡುವ ಜವಾಬ್ದಾರಿ ಇದ್ದು, ಇದರಿಂದ ಉತ್ತಮ ಆರೋಗ್ಯ, ಶುದ್ಧ ವಾತಾವರಣ ಪಡೆಯಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್ ಮುನಿಯಪ್ಪ ಹೇಳಿದರು.
10:52 PM (IST) Sep 28
ಚಂದನ್ ಶೆಟ್ಟಿಯೊಂದಿಗೆ ವಿಚ್ಛೇದನ ಪಡೆದ ನಂತರ ನಟಿ ನಿವೇದಿತಾ ಗೌಡ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಸಿಂಗಲ್ ಆಗಿದ್ದ ಬಾರ್ಬಿಡಾಲ್ ಬ್ಯೂನಿ ನಿವೇದಿತಾ ಗೌಡಗೆ ನ್ಯೂ ಬಕರಾ ಸಿಕ್ಕಿದ್ದಾರೆ ಎಂಬುದು ಭಾರೀ ವೈರಲ್ ಆಗುತ್ತಿದೆ. ಯಾರೀ ಬಕರಾ ನೀವೇ ನೋಡಿ..
10:24 PM (IST) Sep 28
kannada bigg boss season 12: ತುಳುನಾಡಿನ ರಕ್ಷಿತಾ ಶೆಟ್ಟಿ ಅವರು ಕನ್ನಡ ಕಲಿಯುವ ಉದ್ದೇಶದಿಂದ ಬಿಗ್‌ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ವೇದಿಕೆಯಲ್ಲಿ ಸುದೀಪ್ ಅವರೊಂದಿಗೆ ಕನ್ನಡ ಮಾತನಾಡಲು ಕಷ್ಟಪಟ್ಟ ಅವರು, ತಮ್ಮ ಯೂಟ್ಯೂಬ್ ಜರ್ನಿ ಮತ್ತು ಬಿಗ್‌ಬಾಸ್‌ಗೆ ಬಂದ ಕಾರಣವನ್ನು ಹಂಚಿಕೊಂಡರು.
10:23 PM (IST) Sep 28
ಮೈಸೂರು ದಸರಾ ಮಹೋತ್ಸವಕ್ಕೆ ಹೊಸ ಮೆರಗು ನೀಡಿದ ಅತ್ಯಾಕರ್ಷಕ ಡ್ರೋನ್ ಪ್ರದರ್ಶನ ಪ್ರೇಕ್ಷಕರ ಮನಸೂರೆ ಮಾಡಿತು. ಬಾನಂಗಳದಲ್ಲಿ ವಿವಿಧ ಕಲಾಕೃತಿಗಳ ಬಣ್ಣಬಣ್ಣದ ಚಿತ್ತಾರಗಳನ್ನು ಬಿಡಿಸಿದ 3,000 ಡ್ರೋನ್‌ಗಳು ಹೊಸ ಲೋಕವನ್ನು ಸೃಷ್ಟಿಸಿತು.
10:18 PM (IST) Sep 28
Bigg Boss Kannada Season 12 Show Karibasappa: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಕರಿಬಸಪ್ಪ ಅವರು ಭಾಗವಹಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕರಿಬಸಪ್ಪ ಅವರು ಪೌರಕಾರ್ಮಿಕರ ಮಗನಂತೆ.
10:06 PM (IST) Sep 28
ಭಾರತದಲ್ಲಿ ಅತೀ ಹೆಚ್ಚು ಅಕ್ರಮ ಸಂಬಂಧವಿರುವ ನಗರ ಪಟ್ಟಿ ಪ್ರಕಟ, ಅಚ್ಚರಿ ಫಲಿತಾಂಶ ಹೊರಬಿದ್ದಿದೆ. ಮೊದಲ ಸ್ಥಾನದಲ್ಲಿರುವ ನಗರ ದೆಹಲಿ, ಮುಂಬೈ ಅಲ್ಲ ಹಾಗಾದರೆ ಮತ್ಯಾವುದು ಅನ್ನೋ ಕುತೂಹಲ ಜೊತೆಗೆ ಎಚ್ಚರಿಕೆಯೂ ಅಗತ್ಯ.
09:52 PM (IST) Sep 28
Bigg Boss Kannada Season 12: ‘ಮುದ್ದುಲಕ್ಷ್ಮೀ’ ಧಾರಾವಾಹಿ ಹೀರೋಯಿನ್ ಅಶ್ವಿನಿ ಕೂಡ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಈಗ ಈ ಸೀರಿಯಲ್ ಹೀರೋ ಚರಿತ್ ಬಾಳಪ್ಪ ಅಲಿಯಾಸ್ ಧ್ರುವಂತ್ ಕೂಡ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
09:48 PM (IST) Sep 28
ಸಾಕಷ್ಟು ಸೌಂದರ್ಯ ಹೊಂದಿರುವ ಈ ಜಿಲ್ಲೆಯಲ್ಲಿ ದೇಶದಲ್ಲೇ ಅತೀ ಹೆಚ್ಚು ಶುದ್ಧಗಾಳಿ ಇದೆ ಎಂದು ಕೇಂದ್ರ ಪರಿಸರ ಇಲಾಖೆಯೇ ಮಾಹಿತಿ ನೀಡಿದೆ. ಆದರೂ ಜನರು ಉಸಿರಾಟಕ್ಕೆ ಪರಿಶುದ್ಧ ಗಾಳಿ ಸಿಗದೆ ಉಸಿರುಗಟ್ಟಿ ಸಾವನ್ನಪ್ಪಬೇಕಾದ ಪರಿಸ್ಥಿತಿ ಎದುರಾಗಿದೆ.
09:28 PM (IST) Sep 28
08:47 PM (IST) Sep 28
ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕುಟುಂಬದೊಂದಿಗೆ ಸಫಾರಿಗೆ ತೆರಳಿದ್ದ ನಾಗರಬಾವಿ ನಿವಾಸಿ ನಂಜಪ್ಪ (45) ಎಂಬುವವರು, ಹುಲಿ ಮತ್ತು ಸಿಂಹಗಳನ್ನು ನೋಡುತ್ತಿದ್ದಾಗ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಸಾವು.
08:46 PM (IST) Sep 28
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳ ಪೈಕಿ ಅನ್ನಭಾಗ್ಯ ಮತ್ತು ಶಕ್ತಿ ಯೋಜನೆಗಳು ದುರುಪಯೋಗ ಆಗುತ್ತಿರುವುದು ಗಮನಕ್ಕೆ ಬಂದಿದೆ. ಇದಕ್ಕೆ ಕಡಿವಾಣ ಹಾಕಲು ಯೋಜನೆಗಳಲ್ಲಿ ಕೆಲ ಬದಲಾವಣೆ ತರಲು ಚಿಂತನೆ ಮಾಡಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
08:45 PM (IST) Sep 28
Bigg Boss Kannada Season 12 contestants: ಕನ್ನಡ ಬಿಗ್‌ಬಾಸ್ ಸೀಸನ್ 12 ಅದ್ಧೂರಿಯಾಗಿ ಆರಂಭವಾಗಿದ್ದು, ಸ್ಪರ್ಧಿಗಳು ಮನೆ ಪ್ರವೇಶಿಸುತ್ತಿದ್ದಾರೆ. ಈ ಬಾರಿ ವೀಕ್ಷಕರ ನಿರ್ಧಾರದಂತೆ ಸ್ಪರ್ಧಿಗಳು ಜಂಟಿಯಾಗಿ ಮನೆ ಪ್ರವೇಶಿಸುತ್ತಿದ್ದಾರೆ.
08:30 PM (IST) Sep 28
ಗ್ಯಾರಂಟಿ ಯೋಜನೆಗಳು ಜನರಿಗೆ ಶಕ್ತಿ ತುಂಬಿದ್ದು, ರಾಜ್ಯದ ತಲಾ ಆದಾಯ 2 ಲಕ್ಷಕ್ಕೆ ಮುಟ್ಟಿದೆ. ಬಿಟ್ಟಿ ಭಾಗ್ಯಗಳೆಂದು ಲೇವಡಿ ಮಾಡುತ್ತಿದ್ದ ಬಿಜೆಪಿಯವರು ತಾವು ಆಡಳಿತವಿರುವ ರಾಜ್ಯಗಳಲ್ಲಿಯೇ ಗ್ಯಾರಂಟಿಗಳನ್ನು ಜಾರಿ ಮಾಡಿದ್ದಾರೆ ಎಂದು ಎಚ್.ಎಂ.ರೇವಣ್ಣ ಟೀಕಿಸಿದರು.
08:06 PM (IST) Sep 28
ವಿಜ್ಞಾನಿಗಳು ರೋಬೋ ಫಾಲ್ಕನ್ 2.0 ಎಂಬ ಸುಧಾರಿತ ಪಕ್ಷಿ ರೋಬೋಟ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಪಕ್ಷಿಗಳಂತೆ ರೆಕ್ಕೆಗಳನ್ನು ಮಡಚುವ, ಬೀಸುವ ಸಾಮರ್ಥ್ಯ ಹೊಂದಿದ್ದು, ಸಹಾಯವಿಲ್ಲದೆ ಟೇಕ್-ಆಫ್ ಆಗಬಲ್ಲದು ಮತ್ತು ಕಡಿಮೆ ವೇಗದಲ್ಲಿ ಸ್ಥಿರವಾಗಿ ಹಾರಬಲ್ಲದು.
07:58 PM (IST) Sep 28
ordered silver coin got noodles:ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಲ್ಲಿ ಬೆಳ್ಳಿ ನಾಣ್ಯಗಳನ್ನು ಆರ್ಡರ್ ಮಾಡಿದ ವ್ಯಕ್ತಿಯೊಬ್ಬರಿಗೆ, ಮ್ಯಾಗಿ ನೂಡಲ್ಸ್ ಮತ್ತು ಹಲ್ದಿರಾಮ್ ತಿಂಡಿಗಳು ಡೆಲಿವರಿಯಾಗಿವೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಜನ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
07:51 PM (IST) Sep 28
ದೇಶ ವ್ಯಾಪಿ ನಿರುದ್ಯೋಗ ಹೆಚ್ಚಾಗುತ್ತಿದ್ದು, ಮೋದಿ ಅಧಿಕಾರಕ್ಕೆ ಬಂದರೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತಿನಿ ಅಂದಿದ್ದರು. ಆದರೆ, ಇನ್ನೂ ಉದ್ಯೋಗ ಸೃಷ್ಟಿ ಮಾಡಿಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಆರೋಪಿಸಿದರು.
07:06 PM (IST) Sep 28
06:46 PM (IST) Sep 28
ಸಿಎಂ ಸಿದ್ದರಾಮಯ್ಯನವರು ಇತ್ತೀಚೆಗೆ ಹಿಂದೂ ಧರ್ಮದಲ್ಲಿ ಅಸಹಿಷ್ಣತೆ ಇದೆ ಎಂದು ದೊಡ್ಡ ಜವಾಬ್ದಾರಿ ಸ್ಥಾನದಲ್ಲಿದ್ದುಕೊಂಡು ಹೇಳಿಕೆ ನೀಡಿರುವುದು ನೋವಿನ ಸಂಗತಿಯಾಗಿದೆ ಎಂದು ಶಿವಮೊಗ್ಗದ ಸಂಸದ ಬಿ.ವೈ.ರಾಘವೇಂದ್ರ ವಿಷಾದ ವ್ಯಕ್ತಪಡಿಸಿದರು.
06:42 PM (IST) Sep 28
ಉಡುಪಿ ಜಿಲ್ಲೆಯ ಕೊಡವೂರಿನಲ್ಲಿ, ರೌಡಿಶೀಟರ್ ಹಾಗೂ ಖಾಸಗಿ ಬಸ್ ಸಂಸ್ಥೆಯ ಮಾಲಕನಾಗಿದ್ದ ಸೈಫುದ್ದೀನ್‌ನನ್ನು ದುಷ್ಕರ್ಮಿಗಳು ಆತನ ಮನೆಯಲ್ಲೇ ತಲವಾರು ಮತ್ತು ಚಾಕುವಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
06:40 PM (IST) Sep 28
ಕಿವುಡರ ಕಷ್ಟಗಳು ಅರ್ಥವಾಗುತ್ತಿದೆ. ಇಲ್ಲಿ ನಾವೆಲ್ಲರೂ ಒಂದೇ. ಭೇದ-ಭಾವ ಬೇಡ, ಮಾನವೀಯತೆಯ ದೃಷ್ಟಿಯಿಂದ ಇವರ ತಲ್ಲಣಗಳನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
06:32 PM (IST) Sep 28
ಮುಂದಿನ ಒಂದು ತಿಂಗಳೊಳಗೆ ನಗರದ ಎಲ್ಲ ಗುಂಡಿಗಳನ್ನು ಗುಣಮಟ್ಟ ಕಾಪಾಡಿಕೊಂಡು ಮುಚ್ಚಿ, ವಾಹನಗಳ ಸಂಚಾರಕ್ಕೆ ಯೋಗ್ಯವಾಗಿಸಬೇಕು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ ಸಿದ್ದರಾಮಯ್ಯ.
05:44 PM (IST) Sep 28
ಬಿಗ್ ಬಾಸ್ ಕನ್ನಡ ಸೀಸನ್ 12ರ ಚಿತ್ರೀಕರಣ ಆರಂಭವಾಗಿದ್ದು, ನಿರೂಪಕ ಕಿಚ್ಚ ಸುದೀಪ್ ಸ್ಪರ್ಧಿಗಳನ್ನು 'ಆಸಕ್ತಿದಾಯಕ' ಎಂದು ಬಣ್ಣಿಸಿದ್ದಾರೆ. ಈ ಬಾರಿಯ ಸೀಸನ್‌ನಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ಸ್, ಕಿರುತೆರೆ-ಸಿನಿಮಾ ಸೇರಿ ವಿಭಿನ್ನ ಕ್ಷೇತ್ರಗಳ ವ್ಯಕ್ತಿಗಳು ದೊಡ್ಮನೆ ಪ್ರವೇಶಿಸುತ್ತಿದ್ದಾರೆ.
05:17 PM (IST) Sep 28
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವೇಳೆ ಸರ್ವರ್ ಸಮಸ್ಯೆ ಎದುರಾಗುತ್ತಿರುವುದು ನಿಜ. ಈ ಟೆಕ್ನಿಕಲ್ ಸಮಸ್ಯೆ ಬಗೆಹರಿಸಲು ಸರ್ಕಾರ ಮುಂದಾಗಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
05:13 PM (IST) Sep 28
ಬೆಂಗಳೂರಿನಲ್ಲಿ, ಮೃತ ವ್ಯಕ್ತಿಯ ಹೆಸರಿನಲ್ಲಿದ್ದ ಕೋಟ್ಯಂತರ ಮೌಲ್ಯದ ಬಿಡಿಎ ನಿವೇಶನವನ್ನು ನಕಲಿ ದಾಖಲೆ ಸೃಷ್ಟಿಸಿ ವಶಪಡಿಸಿಕೊಳ್ಳಲು ಯತ್ನಿಸಿದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ನಿವೃತ್ತ ಬಿಡಿಎ ಉದ್ಯೋಗಿ ಸೇರಿ ಮೂವರ ಬಂಧನ. ಇವರು 'ನಕಲಿ ಬೈರಪ್ಪ'ನನ್ನು ಸೃಷ್ಟಿಸಿ ಖಾತೆ ಬದಲಾವಣೆಗೆ ಯತ್ನಿಸಿದ್ದರು.
04:48 PM (IST) Sep 28
ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಓಪನಿಂಗ್‌ಗೆ ಕ್ಷಣಗಣನೆ ಆರಂಭವಾಗಿದೆ. ಕಾಕ್ರೋಚ್ ಸುಧಿ, ಮಂಜು ಭಾಷಿಣಿ, ರಕ್ಷಿತಾ ಶೆಟ್ಟಿ ಮತ್ತು ಮಲ್ಲಮ್ಮ ಅವರಂತಹ ವೈವಿಧ್ಯಮಯ ಸ್ಪರ್ಧಿಗಳು ಇದ್ದು, ಸ್ಪರ್ಧಿಗಳಿಗೂ ಮುನ್ನ 'ಬ್ರೌನ್ ಗರ್ಲ್' ಶಿಲ್ಪಿ ದಾಸ್ ಮನೆಗೆ ಭೇಟಿ ನೀಡಿರುವುದು ಕುತೂಹಲ ಮೂಡಿಸಿದೆ.
04:41 PM (IST) Sep 28
ಕಲ್ಬುರ್ಗಿಯಲ್ಲಿ ಸುರಿದ ಮಳೆ ಮತ್ತು ಮಹಾರಾಷ್ಟ್ರದ ಜಲಾಶಯಗಳಿಂದ ಬಿಟ್ಟ ನೀರಿನಿಂದಾಗಿ ಭೀಮಾ ಹಾಗೂ ಬೆಣ್ಣೆತೋರಾ ನದಿಗಳಲ್ಲಿ ಪ್ರವಾಹ ಉಂಟಾಗಿದೆ. ಈ ಹಿನ್ನೆಲೆಯಲ್ಲಿ, ಸಿಎಂ ತಕ್ಷಣದ ರಕ್ಷಣೆ ಮತ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.
04:03 PM (IST) Sep 28
ಸೌಜನ್ಯ ಪ್ರಕರಣದಲ್ಲಿ ಸೃಷ್ಟಿಯಾದ ಕಾಲ್ಪನಿಕ ಪಾತ್ರ ಅನನ್ಯಾ ಭಟ್ ಕುರಿತು, ಆಕೆಯ ತಾಯಿ ಎಂದು ಹೇಳಿಕೊಂಡಿದ್ದ ಸುಜಾತಾ ಭಟ್ ಇದೀಗ ಸುವರ್ಣ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಸತ್ಯ ಬಾಯಿಬಿಟ್ಟಿದ್ದಾರೆ. ತನ್ನನ್ನು ಅಮಾಯಕಿ ಎಂದಿರುವ ಅವರು, ಹೇಳಿದ್ದೇನು?
03:44 PM (IST) Sep 28
ಕರ್ತವ್ಯ ಲೋಪ ಮತ್ತು ಗಂಭೀರ ನಿರ್ಲಕ್ಷ್ಯದ ಆರೋಪದ ಮೇಲೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ಪಿಎಸ್‌ಐ ಅವರನ್ನು ಅಮಾನತುಗೊಳಿಸಲಾಗಿದೆ. ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಬಂಧಿತನಾದ ಅನುಮಾನಾಸ್ಪದ ವ್ಯಕ್ತಿಯನ್ನು ಪ್ರಕರಣ ದಾಖಲಿಸದೆ ಬಿಟ್ಟು ಕಳುಹಿಸಿದ ಆರೋಪ ಅವರ ಮೇಲಿದೆ.
03:40 PM (IST) Sep 28
Rakshitha Shetty Bigg Boss entry 'ತುಳುನಾಡಿನ ಕನ್ನಡತಿ' ರಕ್ಷಿತಾ ಶೆಟ್ಟಿ ಬಿಗ್‌ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ವೇದಿಕೆಯಲ್ಲಿ ಸುದೀಪ್ ಅವರಿಗೆ ತುಳು ಭಾಷೆಯಲ್ಲಿ ಮೀನು ಸಾರು ರೆಸಿಪಿ ಹೇಳಿ ಗೊಂದಲ ಸೃಷ್ಟಿಸಿದ್ದು, ಉತ್ತರ ಕರ್ನಾಟಕದ ಮಲ್ಲಮ್ಮ ಜೊತೆಗಿನ ಅವರ ಸಂಭಾಷಣೆ ಕುತೂಹಲ ಮೂಡಿಸಿದೆ.
03:39 PM (IST) Sep 28
ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ ಆಯೋಜಿಸಿದ್ದ 15ನೇ ವಿಶ್ವ ಸಂವಹನ ಸಮ್ಮೇಳನದಲ್ಲಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತನ್ನ ಸೇವಾ ಗುಣಮಟ್ಟ, ಸಾಮಾಜಿಕ ಬದ್ಧತೆಗಾಗಿ ಒಟ್ಟು 9 ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
03:00 PM (IST) Sep 28
Mallamma Bigg Boss contestant details: ಬಿಗ್‌ಬಾಸ್ ಸೀಸನ್ 12ಕ್ಕೆ ಉತ್ತರ ಕರ್ನಾಟಕದ ಗ್ರಾಮೀಣ ಪ್ರತಿಭೆ ಮಲ್ಲಮ್ಮ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಆಟದ ಬಗ್ಗೆ ಯಾವುದೇ ಅರಿವಿಲ್ಲದ ಇವರು, ತಮ್ಮ ಮುಗ್ಧ ಮಾತುಗಳಿಂದ ಮತ್ತು ದೈಹಿಕ ಸಾಮರ್ಥ್ಯದಿಂದ ಗಮನ ಸೆಳೆದಿದ್ದಾರೆ.
02:11 PM (IST) Sep 28
Acqua di Cristallo: ವಿಶ್ವದ ಅತ್ಯಂತ ದುಬಾರಿ ನೀರಿನ ಬಾಟಲಿ ಅಕ್ವಾ ಡಿ ಕ್ರಿಸ್ಟಲ್ಲೊ ಟ್ರಿಬ್ಯೂಟೊ ಎ ಮೊಡಿಗ್ಲಿಯಾನಿ ಬೆಲೆ ಸುಮಾರು 50 ಲಕ್ಷ ರೂಪಾಯಿ. 24 ಕ್ಯಾರೆಟ್ ಚಿನ್ನದಿಂದ ತಯಾರಾಗಿದೆ.ಫಿಜಿ, ಫ್ರಾನ್ಸ್ ಮತ್ತು ಐಸ್‌ಲ್ಯಾಂಡ್‌ನ ಮೂಲಗಳಿಂದ ಸಂಗ್ರಹಿಸಿದ ನೀರಿದೆ.
01:48 PM (IST) Sep 28
01:42 PM (IST) Sep 28
ಧರ್ಮಸ್ಥಳದಲ್ಲಿ ನಡೆದ ಸತ್ಯ ದರ್ಶನ ಸಮಾವೇಶದಲ್ಲಿ, ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಕ್ಷೇತ್ರದ ವಿರುದ್ಧದ ಷಡ್ಯಂತ್ರದ ಕುರಿತು ಮಾತನಾಡಿದ್ದು, ಎಸ್ಐಟಿ ತನಿخೆಗೆ ಕೃತಜ್ಞತೆ ಸಲ್ಲಿಸಿದರು. ಭಕ್ತರ ಭಕ್ತಿಯೇ ಕ್ಷೇತ್ರದ ಶಕ್ತಿ ಎಂದ ಅವರು, ಸವಾಲುಗಳ ನಡುವೆಯೂ ಧರ್ಮಸ್ಥಳ ಇನ್ನಷ್ಟು ಬೆಳಗಲಿದೆ ಎಂದರು.
01:38 PM (IST) Sep 28
Kalonji seeds health benefits: ಕಲೋಂಜಿ ಅಥವಾ ಕಪ್ಪು ಜೀರಿಗೆಯು ಆಯುರ್ವೇದದಲ್ಲಿ ಔಷಧೀಯವಾಗಿ ಬಳಸಲಾಗುವ ಒಂದು ಅದ್ಭುತ ಮಸಾಲೆಯಾಗಿದೆ. ಇದು ರೋಗನಿರೋಧಕ ಶಕ್ತಿ, ತೂಕ ನಷ್ಟಕ್ಕೆ ಸಹಾಯ, ಮಧುಮೇಹ ನಿಯಂತ್ರಣ ನಿಯಂತ್ರಿಸುವುದು ಹೃದಯ, ಚರ್ಮ, ಕೂದಲಿನ ಆರೋಗ್ಯ ಸುಧಾರಿಸುವ ಅನೇಕ ಪ್ರಯೋಜನ ಹೊಂದಿದೆ.
01:31 PM (IST) Sep 28
Banu Mushtaq: ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್, ದಸರಾ ಉದ್ಘಾಟನೆ ವಿವಾದದ ಕುರಿತು ತಮ್ಮ ಟೀಕಾಕಾರರಿಗೆ ಧನ್ಯವಾದ ತಿಳಿಸಿದ್ದಾರೆ. ದ್ವೇಷಕ್ಕೆ ಪ್ರೀತಿಯೇ ಉತ್ತರ ಎಂದಿದ್ದಾರೆ.
01:06 PM (IST) Sep 28
Laxmi Hebbalkar development work Belagav: ಸಚಿವೆ ಹೆಬ್ಬಾಳಕರ್ ಅವರು ಬೆಳಗಾವಿಯ ನಿಲಜಿ ಗ್ರಾಮದ ಕೋಟಿ ರೂಪಾಯಿ ವೆಚ್ಚದ ಸಮುದಾಯ ಭವನಕ್ಕೆ ಭೂಮಿಪೂಜೆ ನೆರವೇರಿಸಿದರು. ಜೊತೆಗೆ, ಸ್ವಸ್ಥ, ಸ್ವಚ್ಛ ಭಾರತ ನಿರ್ಮಾಣಕ್ಕಾಗಿ ಶ್ರಮಿಸುವ ಆರ್‌ಸಿಎಂ ಸಂಸ್ಥೆಯ 25ನೇ ವರ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.