Published : Sep 27, 2025, 06:53 AM ISTUpdated : Sep 27, 2025, 09:56 PM IST

Karnataka News Live: ಭೂಸ್ವಾಧೀನಕ್ಕಾಗಿ ಬಿಜೆಪಿ ಸರ್ಕಾರಕ್ಕೆ ಸಹಕಾರ ಕೊಟ್ಟವರು ಈಗ ಪ್ರಶ್ನೆ ಮಾಡುತ್ತಿರುವುದೇಕೆ - ಡಿಕೆಶಿ

ಸಾರಾಂಶ

ಬಾಗಲಕೋಟೆ: ನಗರದ ವಿದ್ಯಾಗಿರಿಯ ಖಾಸಗಿ ಪಿಜಿಯಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.ತಾಲೂಕಿನ ಸುನಗ ತಾಂಡಾದ ನಿವಾಸಿಯಾದ ಸೀಮಾ ರಾಠೋಡ (17) ಬಾಗಲಕೋಟೆಯ ವಾಗ್ದೇವಿ ವಿಜ್ಞಾನ ಪಿಯು ಕಾಲೇಜಿನಲ್ಲಿ ಪ್ರಥಮ ವರ್ಷದಲ್ಲಿ ಓದುತ್ತಿದ್ದಳು. ವಿದ್ಯಾರ್ಥಿನಿ ನೇಣು ಹಾಕಿಕೊಂಡ ದೃಶ್ಯ ಕಂಡು ಪಿಜಿಯಿಂದ ಹೊರಗೋಡಿ ಬಂದ ವಿದ್ಯಾರ್ಥಿನಿಯರು ಮಾಹಿತಿ ತಿಳಿಸಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. 

ಶವಾಗಾರದ ಮುಂದೆ ಸೀಮಾ ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿತ್ತು. ಪಿಜಿ ಸಿಬ್ಬಂದಿ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಬೀಳಗಿ ತಾಲೂಕಿನ ಸುನಗ ತಾಂಡಾದ ನಿವಾಸಿ ಸೀಮಾ ಆಗಿದ್ದು, ಸಾವಿನಲ್ಲಿ ಸಂಶಯವಿದೆ. ಸೂಕ್ತ ತನಿಖೆ ಆಗಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ, ನವನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

09:56 PM (IST) Sep 27

ಭೂಸ್ವಾಧೀನಕ್ಕಾಗಿ ಬಿಜೆಪಿ ಸರ್ಕಾರಕ್ಕೆ ಸಹಕಾರ ಕೊಟ್ಟವರು ಈಗ ಪ್ರಶ್ನೆ ಮಾಡುತ್ತಿರುವುದೇಕೆ - ಡಿಕೆಶಿ

ಈ ವಿಚಾರವಾಗಿ ಗಲಾಟೆಗಳಾಗುತ್ತಿವೆಯಲ್ಲ ಎಂದು ಕೇಳಿದಾಗ, ಕಾನೂನಿದೆ, ಕಾನೂನು ಚೌಕಟ್ಟಿನಲ್ಲಿ ನಾವು ಮುಂದುವರಿಯುತ್ತೇವೆ. ನಾನು ರೈತರಿಗೆ ದೊಡ್ಡ ಆಫರ್ ಕೊಟ್ಟಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

Read Full Story

09:38 PM (IST) Sep 27

ಕರೂರು ಕಾಲ್ತುಳಿತ.. ನಟ ವಿಜಯ್ ಬಂಧನ ಸಾಧ್ಯತೆ? ಸರಣಿ ಸಾವುಗಳಿಂದ ಟಿವಿಕೆಗೆ ಭಾರೀ ಸಂಕಷ್ಟ

ನಟ ವಿಜಯ್ ಅವರ ಕರೂರು ಜಿಲ್ಲೆಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಉಂಟಾದ ಕಾಲ್ತುಳಿತದಲ್ಲಿ 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಕಾರ್ಯಕ್ರಮದ ವ್ಯವಸ್ಥೆಯಲ್ಲಾದ ಅಚಾತುರ್ಯದಿಂದಾಗಿ ಟಿವಿಕೆ ಅಧ್ಯಕ್ಷ ವಿಜಯ್ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

Read Full Story

09:07 PM (IST) Sep 27

ವಿದೇಶಿ ವಸ್ತುಗಳ ಖರೀದಿ-ಮಾರಾಟ ತ್ಯಜಿಸಿ - ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕರೆ

ನಮ್ಮ ಪಕ್ಷದ ಸಿದ್ಧಾಂತದಂತೆ ವ್ಯವಸ್ಥೆ ನಿಂತ ನೀರಾಗಲು ಬಯಸುವುದಿಲ್ಲ. ಸ್ವದೇಶಿ ಚಿಂತನೆಯಲ್ಲಿ ವಿದೇಶಿ ವಸ್ತುಗಳ ಮಾರಾಟ ಮತ್ತು ಖರೀದಿ ಎರಡನ್ನೂ ನಾವು ಬಿಡಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

Read Full Story

08:40 PM (IST) Sep 27

ಇಡೀ ವಿಶ್ವಕ್ಕೆ ಸಂವಿಧಾನ ಕೊಟ್ಟ ಬಸವಣ್ಣ - ನಟ ಮುಖ್ಯಮಂತ್ರಿ ಚಂದ್ರು ಹೇಳಿದ್ದೇನು?

ಅಂಬೇಡ್ಕರ್‌ ಸಂವಿಧಾನ ನೀಡಿದರೆ ಜಗಜ್ಯೋತಿ ಬಸವಣ್ಣ ಇಡೀ ವಿಶ್ವಕ್ಕೆ ಏಳು ವಾಕ್ಯಗಳಲ್ಲಿ ಸಂವಿಧಾನವನ್ನು ಕೊಟ್ಟಿದ್ದಾರೆ ಎಂದು ಕನ್ನಡ ಚಲನಚಿತ್ರದ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ.

Read Full Story

08:09 PM (IST) Sep 27

ಕಾಂತಾರ ಚಾಪ್ಟರ್ 1 ಚಿತ್ರಕ್ಕಾಗಿ ನಾನ್‌ವೆಜ್ ಬಿಟ್ಟು ವ್ರತ ಮಾಡಿ ನಟಿಸಿದ್ದು ಯಾಕೆ? ರಿಷಬ್ ಶೆಟ್ಟಿ ಬಿಚ್ಚಿಟ್ಟ ಸತ್ಯವೇನು?

ಕಾಂತಾರ ಚಾಪ್ಟರ್ 1 ಸಿನಿಮಾ ಅಕ್ಟೋಬರ್ 2 ರಂದು ಥಿಯೇಟರ್‌ಗಳಲ್ಲಿ ರಿಲೀಸ್ ಆಗಲಿದೆ. ಈ ಚಿತ್ರಕ್ಕಾಗಿ ವ್ರತ ಮಾಡಿ ನಟಿಸಿದ್ದರ ಬಗ್ಗೆ ನಟ ಮತ್ತು ಚಲನಚಿತ್ರ ನಿರ್ದೇಶಕ ರಿಷಬ್ ಶೆಟ್ಟಿ ಮಾತನಾಡಿದ್ದಾರೆ.

Read Full Story

07:51 PM (IST) Sep 27

KSRTC ಬಸ್ಸಿನ ಆಯುಧ ಪೂಜೆಗೆ ₹150 ಕೊಟ್ಟ ಸಾರಿಗೆ ನಿಗಮ - ಶಕ್ತಿ ಯೋಜನೆ ಲಾಭ ನಮಗಿಲ್ಲವೆಂದ ಸಿಬ್ಬಂದಿ!

'ಶಕ್ತಿ' ಯೋಜನೆಯಿಂದ ಸಾರಿಗೆ ನಿಗಮಗಳಿಗೆ ಆದಾಯ ಹೆಚ್ಚಾಗಿದ್ದರೂ, ದಸರಾ ಆಯುಧ ಪೂಜೆಗಾಗಿ ಪ್ರತಿ ಬಸ್‌ಗೆ ಕೇವಲ ₹150 ನೀಡಿರುವುದು ಸಿಬ್ಬಂದಿಯ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ದುಬಾರಿ ಕಾಲದಲ್ಲಿ ಇಷ್ಟು ಕಡಿಮೆ ಹಣದಲ್ಲಿ ಪೂಜೆ ಅಸಾಧ್ಯವೆಂದಿರುವ ನೌಕರರು ಹೇಳಿದದಾರೆ.

Read Full Story

07:29 PM (IST) Sep 27

ಮಲೆ ಮಹದೇಶ್ವರ ವನ್ಯಧಾಮಕ್ಕೆ ಹುಲಿ ಸಂರಕ್ಷಿತ ಪ್ರದೇಶ ಘೋಷಣೆ - ಕೇಂದ್ರ ಸಮಿತಿ ಶಿಫಾರಸು

ಬಂಡೀಪುರ, ಬಿ.ಆರ್,ಟಿ. ಹಾಗು ಕಾವೇರಿ ವನ್ಯಧಾಮದಿಂದ ವಲಸೆ ಬರುವ ವನ್ಯಜೀವಿಗಳು ಮಲೆ ಮಹದೇಶ್ವರ ವನ್ಯಧಾಮದಲ್ಲಿ ಬೀಡು ಬಿಡುತ್ತಿವೆ. ಹೀಗಾಗಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ.

Read Full Story

07:26 PM (IST) Sep 27

ಅಶ್ಲೀಲ ವಿಡಿಯೋದ 'ಭಂಗಿ'ಗೆ ಆಸೆಪಟ್ಟು, ಹೆಂಡತಿಯಿಂದಲೇ ಒನಕೆ ಪೆಟ್ಟು ತಿಂದು ಜೀವಬಿಟ್ಟ ಗಂಡ!

ಕೊಪ್ಪಳದ ಮುನಿರಾಬಾದ್‌ನಲ್ಲಿ, ನಿರಂತರ ಲೈಂಗಿಕ ಕಿರುಕುಳ ಮತ್ತು ಹಣಕಾಸಿನ ಪೀಡನೆಯಿಂದ ಬೇಸತ್ತ ಪತ್ನಿಯೊಬ್ಬಳು ತನ್ನ ಪತಿಯನ್ನು ಒನಕೆಯಿಂದ ಹೊಡೆದು ಕೊಲೆ ಮಾಡಿದ್ದಾಳೆ. ಕೆಪಿಸಿಎಲ್ ಉದ್ಯೋಗಿಯಾಗಿದ್ದ ಪತಿ, ಅಶ್ಲೀಲ ವಿಡಿಯೋ ಭಂಗಿ ಅನುಕರಿಸುವಂತೆ ಪೀಡಿಸುತ್ತಿದ್ದ ಎಂದು ಆರೋಪಿಸಲಾಗಿದೆ. 

Read Full Story

07:20 PM (IST) Sep 27

ಅಡ್ವಾನ್ಸ್ ಟಿಕೆಟ್ ಬುಕಿಂಗ್‌ನಲ್ಲಿ ಕಾಂತಾರ 1 ದಾಖಲೆ, ರಿಲೀಸ್‌ಗೂ ಮೊದಲೇ ರಿಷಬ್‌ಗೆ ಭರ್ಜರಿ ಯಶ್ಸಸ್ಸು

ಅಡ್ವಾನ್ಸ್ ಟಿಕೆಟ್ ಬುಕಿಂಗ್‌ನಲ್ಲಿ ಕಾಂತಾರ 1 ದಾಖಲೆ, ರಿಲೀಸ್‌ಗೂ ಮೊದಲೇ ರಿಷಬ್ ಶೆಟ್ಟಿಗೆ ಭರ್ಜರಿ ಯಶಸ್ಸು ಕಂಡಿದ್ದಾರೆ. ಅಕ್ಟೋಬರ್ 2ರಂದ ಸಿನಿಮಾ ಬಿಡುಗಡೆಯಾಗಲಿದೆ. ಆದರೆ ರಿಲೀಸ್‌ಗೂ ಮೊದಲೇ ಕಾಂತಾರ 1 ಸಿನಿಮಾ ಹಲವು ದಾಖಲೆ ಬರೆದಿದೆ.

Read Full Story

07:09 PM (IST) Sep 27

ದುಬೈನಲ್ಲಿ HDFC ಬ್ಯಾಂಕ್‌ಗೆ ನಿರ್ಬಂಧ - ಭಾರತೀಯರ ಹಣಕ್ಕೆ ಯುಎಇ ಶಾಕ್!

ದುಬೈನ ಹಣಕಾಸು ನಿಯಂತ್ರಕ ಸಂಸ್ಥೆ (DFSA), ಎಚ್‌ಡಿಎಫ್‌ಸಿ ಬ್ಯಾಂಕ್‌ನ ಡಿಐಎಫ್‌ಸಿ ಶಾಖೆಯ ಮೇಲೆ ಹೊಸ ಗ್ರಾಹಕರನ್ನು ಸೇರಿಸಿಕೊಳ್ಳದಂತೆ ನಿರ್ಬಂಧ ವಿಧಿಸಿದೆ. ನಿಯಮ ಉಲ್ಲಂಘನೆ ಮತ್ತು ಹಳೆಯ ಕ್ರೆಡಿಟ್ ಸ್ಯೂಸ್ ಬಾಂಡ್ ಪ್ರಕರಣ ಇದಕ್ಕೆ ಕಾರಣವಾಗಿದೆ.

Read Full Story

07:00 PM (IST) Sep 27

ನರ್ಸಿಂಗ್ ವಿದ್ಯಾರ್ಥಿನಿ ಅಪಹರಿಸಿ ಇಬ್ಬರಿಂದ ಅತ್ಯಾ*ಚಾರ; ವಿಡಿಯೋ ಮಾಡಿ ನಿರಂತರ ಬೆದರಿಕೆ!

ಹಾವೇರಿ ಜಿಲ್ಲೆಯಲ್ಲಿ ನರ್ಸಿಂಗ್ ವಿದ್ಯಾರ್ಥಿನಿಯನ್ನು ಅಪಹರಿಸಿ, ಅತ್ಯಾ*ಚಾರವೆಸಗಿ, ಆ ಕೃತ್ಯದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಲಾಗಿದೆ. ಈ ಸಂಬಂಧ ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳ ಪೈಕಿ ಓರ್ವನನ್ನು ಬಂಧಿಸಲಾಗಿದೆ.

Read Full Story

06:50 PM (IST) Sep 27

ಅನರ್ಹ ಬಿಪಿಎಲ್‌ ಕಾರ್ಡ್‌ ಪತ್ತೆ ಕಟ್ಟುನಿಟ್ಟು - ಸಚಿವ ಕೆ.ಎಚ್.ಮುನಿಯಪ್ಪ ಸೂಚನೆ

ಅನರ್ಹ ಬಿಪಿಎಲ್ ಕಾರ್ಡುಗಳನ್ನು ಕಟ್ಟುನಿಟ್ಟಾಗಿ ಪತ್ತೆ ಮಾಡಬೇಕು ಮತ್ತು ಅರ್ಹ ಬಿಪಿಎಲ್ ಕಾರ್ಡುದಾರರಿಗೆ ಪಡಿತರದಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಚಿವ ಕೆ.ಎಚ್.ಮುನಿಯಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Read Full Story

06:49 PM (IST) Sep 27

Bigg Bossನಲ್ಲಿ ಎಮೋಷನಲಿ ಬೆತ್ತಲಾಗೋದು ಇಷ್ಟವಿಲ್ಲ, ಸ್ಟಾರ್ಸ್​ಗೆ ದೂರದಿಂದ್ಲೇ ನಮಸ್ಕಾರ ಎಂದ Vijay Suriya

ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿಗಳ ಪಟ್ಟಿಯಲ್ಲಿ ನಟ ವಿಜಯ್ ಸೂರ್ಯ ಅವರ ಹೆಸರು ಬಲವಾಗಿ ಕೇಳಿಬಂದಿತ್ತು. ಆದರೆ,  ಭಾವನಾತ್ಮಕವಾಗಿ ಬೆತ್ತಲಾಗಲು ಇಷ್ಟವಿಲ್ಲದಿರುವುದು ಮತ್ತು ಸುದೀಪ್ ಅವರ ಮೇಲಿನ ಗೌರವವೂ ತಮ್ಮ ನಿರ್ಧಾರಕ್ಕೆ ಕಾರಣ ಎಂದು ವಿಜಯ್ ಸೂರ್ಯ ವಿವರಿಸಿದ್ದಾರೆ.

Read Full Story

06:39 PM (IST) Sep 27

ಗೀತಾ ಶಿವರಾಜ್‌ಕುಮಾರ್ ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಣೆ; ದೊಡ್ಮನೆ ಸೊಸೆ ಮಾತು ಇಲ್ಲಿದೆ!

ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಪುತ್ರಿ ಹಾಗೂ ಡಾ.ರಾಜ್ ಕುಮಾರ್ ಅವರ ಸೊಸೆ ಗೀತಾ ಶಿವರಾಜ್‌ಕುಮಾರ್‌ ಅವರು ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಶಿವಮೊಗ್ಗದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ.

Read Full Story

06:34 PM (IST) Sep 27

ಬೆಂಗಳೂರು ರಸ್ತೆಗಳಲ್ಲಿ ಸಿಎಂ ರೌಂಡ್‌, 30 ದಿನಗಳಲ್ಲಿ ಗುಂಡಿ ಮುಚ್ಚದಿದ್ರೆ ಅಧಿಕಾರಿಗಳ ಅಮಾನತು, ಖಡಕ್ ಸೂಚನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಸಿಟಿ ರೌಂಡ್ಸ್ ನಡೆಸಿ, ರಸ್ತೆ ಗುಂಡಿ ಮತ್ತು ತ್ಯಾಜ್ಯ ನಿರ್ವಹಣೆ ಸಮಸ್ಯೆಗಳನ್ನು ಪರಿಶೀಲಿಸಿದರು. 30 ದಿನಗಳಲ್ಲಿ ಗುಂಡಿ ಮುಚ್ಚಲು ಗಡುವು ನೀಡಿದ್ದು, ಕರ್ತವ್ಯಲೋಪ ಎಸಗಿದ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
Read Full Story

06:29 PM (IST) Sep 27

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಕೈಕೊಟ್ಟ ವ್ಯಾಟ್ಸಾಪ್ ಟಿಕೆಟ್, ಕೌಂಟರ್‌ನಲ್ಲಿ ಪರದಾಟ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಕೈಕೊಟ್ಟ ವ್ಯಾಟ್ಸಾಪ್ ಟಿಕೆಟ್, ಕೌಂಟರ್‌ನಲ್ಲಿ ಪರದಾಟ ಪರಿಸ್ಥಿತಿ ಎದುರಾಗಿದೆ. ವ್ಯಾಟ್ಸಾಪ್ ಮೂಲಕ ಪ್ರಯಾಣಿಕರು ಟಿಕೆಟ್ ಬುಕ್ ಮಾಡಲು ಸಾಧ್ಯವಾಗುತ್ತಿಲ್ಲ. ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಕೌಂಟರ್‌ನಲ್ಲಿ ಭಾರಿ ಕ್ಯೂ ಎದುರಾಗಿದೆ.

Read Full Story

06:23 PM (IST) Sep 27

ಕಾಂತರಾಜು ವರದಿಯನ್ನ ಯಾವ ತಿಪ್ಪೆಗೆ ಎಸೆದಿದ್ದೀರಾ? ರಾಜ್ಯ ಸರ್ಕಾರದ ವಿರುದ್ಧ ಸೋಮಣ್ಣ ವಾಗ್ದಾಳಿ

ಈ ಸರ್ಕಾರಕ್ಕೆ ತಲೆ ಇಲ್ಲ, ಬುಡ ಇಲ್ಲ, ಮಿದುಳು ಸಹಾ ಇಲ್ಲ. ಇದೊಂದು ನಿಷ್ಕ್ರಿಯ ಸರ್ಕಾರ ಎಂದು ರಾಜ್ಯದಲ್ಲಿ ಸಾಮಾಜಿಕ ಆರ್ಥಿಕ ಸಮೀಕ್ಷೆ ವಿಚಾರವಾಗಿ ಕೇಂದ್ರ ಸಚಿವ ವಿ.ಸೋಮಣ್ಣ ವಾಗ್ದಾಳಿ ನಡೆಸಿದರು.

Read Full Story

06:05 PM (IST) Sep 27

ಓಲಾ ಸ್ಕೂಟರ್ ರಿಪೇರಿಗೆ ಕೊಟ್ಟು 1,114 ದಿನವಾಯ್ತು, ಇನ್ನೂ ರಿಪೇರಿಯಾಗಿಲ್ಲ; ಗ್ರಾಹಕನ ಆಕ್ರೋಶದ ವಿಡಿಯೋ ವೈರಲ್!

ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗೆ 1,114 ದಿನಗಳಿಂದ ಸೇವೆ ಸಿಗದ ಗ್ರಾಹಕರೊಬ್ಬರ ಆಕ್ರೋಶವು ಕಂಪನಿ ಕಳಪೆ ಸೇವೆಯನ್ನು ಬಯಲುಮಾಡಿದೆ. ರಾಷ್ಟ್ರವ್ಯಾಪಿ ಇದೇ ರೀತಿಯ ದೂರುಗಳು, ಶೋರೂಂಗಳಿಗೆ ಬೆಂಕಿ ಹಚ್ಚಿದ ಘಟನೆಗಳು ಮತ್ತು ಸರ್ಕಾರದ ತನಿಖೆಯ ಆದೇಶವು ಓಲಾ ಎದುರಿಸುತ್ತಿರುವ ಗಂಭೀರ ಬಿಕ್ಕಟ್ಟನ್ನು ಸೂಚಿಸುತ್ತದೆ.

Read Full Story

06:05 PM (IST) Sep 27

Bigg Boss ಸುಂದರ ಮನೆಗೆ ತಗಲೋ ಖರ್ಚೆಷ್ಟು? ದೊಡ್ಮನೆ ರೆಡಿ ಮಾಡಿದ್ದು ಹೇಗೆ? ಕಣ್ಮನ ತಣಿಸೋ ವಿಡಿಯೋ ಇಲ್ಲಿದೆ

ಬಿಗ್​ಬಾಸ್​ ಕನ್ನಡ ಸೀಸನ್​ 12 ಶೀಘ್ರದಲ್ಲೇ ಆರಂಭವಾಗಲಿದ್ದು, ಈ ಬಾರಿಯ ಮನೆಯನ್ನು ನವರಾತ್ರಿ ವಿಶೇಷವಾಗಿ ಮೈಸೂರು ಅರಮನೆಯ ಥೀಮ್‌ನಲ್ಲಿ ನಿರ್ಮಿಸಲಾಗಿದೆ. ಕರ್ನಾಟಕದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುವ ಈ ಮನೆಯ ನಿರ್ಮಾಣ ಹೇಗೆ ಸಾಗಿದೆ ನೋಡಿ…

Read Full Story

06:03 PM (IST) Sep 27

ಐತಿಹಾಸಿಕ ಪಾತ್ರಕ್ಕೆ ಕಟ್ಟುನಿಟ್ಟಿನ ವರ್ಕೌಟ್‌ - 500 ವರ್ಷಗಳ ಹಿಂದಿನ ವೀರನಾಗಿ ಮಿಂಚಲು ಸಜ್ಜಾದ ಶ್ರೀಮುರಳಿ!

500 ವರ್ಷಗಳ ಹಿಂದಿನ ಐತಿಹಾಸಿಕ ಸಿನಿಮಾವೊಂದರ ಸಿದ್ಧತೆಯಲ್ಲಿದ್ದೇನೆ. ಪಾತ್ರ ಬಹಳ ಪ್ರಾಜೆಕ್ಟ್‌ ಎಕ್ಸೈಟಿಂಗ್‌ ಆಗಿದೆ. ಕತೆ ಸೊಗಸಾಗಿದೆ. ಒಂದು ನಂಬಿಕೆ ಮೇಲೆ ಮುಂದಡಿ ಇಡುತ್ತಿದ್ದೇನೆ ಎಂದಿದ್ದಾರೆ ಶ್ರೀ ಮುರಳಿ.

Read Full Story

05:39 PM (IST) Sep 27

ಕೊಲೆ ರಹಸ್ಯದ ಜೊತೆಗೆ ಪ್ರೇಮಕಥೆ.. ಸಮಾಜದ ಕತ್ತಲೆ ಮುಖ ಬಯಲಿಗೆಳೆಯುವ 'ಕುಂಟೆಬಿಲ್ಲೆ'

ಪೊಲೀಸ್‌ ಹೇಳುವಂತೆ ಈ ಪ್ರಕರಣದ ಅಪರಾಧಿ ಎಂಟು ಅಂಕಣದ ಒಳಗೆ ನಿಜಕ್ಕೂ ಇರುತ್ತಾನಾ ಅಥವಾ ಈ ಚೌಕಟ್ಟು ಮೀರಿದ ಇನ್ನೊಂದು ಸಾಧ್ಯತೆ ಇದೆಯಾ ಎನ್ನುವುದನ್ನು ಕುಂಟೆಬಿಲ್ಲೆ ಎಳೆಎಳೆಯಾಗಿ ವಿವರಿಸುತ್ತದೆ.

Read Full Story

05:24 PM (IST) Sep 27

ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ ಡಬಲ್ - ಸಿಎಂ ಸಿದ್ದರಾಮಯ್ಯಗೆ ಬರೆದ ಪತ್ರದಲ್ಲಿ ಗುತ್ತಿಗೆದಾರರ ಸಂಘದ ಗಂಭೀರ ಆರೋಪ!

Karnataka Contractors Allege Corruption Doubled in Congress Rule ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು (ಕೆಎಸ್‌ಸಿಎ) ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ದುಪ್ಪಟ್ಟಾಗಿದೆ ಎಂದು ಲಿಖಿತವಾಗಿ ಆರೋಪಿಸಿದೆ. 

Read Full Story

05:24 PM (IST) Sep 27

ಪುತ್ತೂರು ಲವ್ ಕೇಸ್‌ಗೆ ಮಹತ್ವದ ತಿರುವು, ಡಿಎನ್‌ಎ ವರದಿಯಿಂದ ಮಗು ಕೃಷ್ಣ ರಾವ್ ನದ್ದೇ ಎಂಬುದು ದೃಢ

ಪುತ್ತೂರಿನ 'ಲವ್, ಸೆಕ್ಸ್, ದೋಖಾ' ಪ್ರಕರಣದಲ್ಲಿ, ಬಿಜೆಪಿ ಮುಖಂಡನ ಪುತ್ರ ಕೃಷ್ಣ ಜೆ. ರಾವ್ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಡಿಎನ್‌ಎ ವರದಿ ಬಂದಿದ್ದು, ಮಗು ಆತನದ್ದೇ ಎಂದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ, ಸಂತ್ರಸ್ತೆಯ ಕುಟುಂಬ   ಮದುವೆ ಮಾಡಿಸಬೇಕೆಂದು ಆಗ್ರಹಿಸುತ್ತಿವೆ.

Read Full Story

05:17 PM (IST) Sep 27

42ರ ಈ ಸ್ಯಾಂಡಲ್​ವುಡ್​ ಬ್ಯೂಟಿ ಜೊತೆ Bigg Boss Winner ಕಾರ್ತಿಕ್​ ಮಹೇಶ್​ಗೆ ಡ್ಯುಯೆಟ್​ ಹಾಡೋ ಆಸೆಯಂತೆ

ಬಿಗ್ ಬಾಸ್ ಕನ್ನಡ 10ರ ವಿಜೇತ ಕಾರ್ತಿಕ್ ಮಹೇಶ್, ಸಂಗೀತಾ ಶೃಂಗೇರಿ ಜೊತೆಗಿನ ಸಂಬಂಧದ ಚರ್ಚೆಯ ನಡುವೆಯೇ ತಮ್ಮ ನಿಜವಾದ ಸೆಲೆಬ್ರಿಟಿ ಕ್ರಷ್ ಯಾರೆಂದು ಬಹಿರಂಗಪಡಿಸಿದ್ದಾರೆ. 42 ವರ್ಷದ ನಟಿ ಮೇಲೆ ತಮಗೆ ಕ್ರಷ್ ಇದೆ ಎಂದು ಹೇಳಿಕೊಂಡಿದ್ದು, ಅವರೊಂದಿಗೆ ನಟಿಸುವ ಆಸೆ ವ್ಯಕ್ತಪಡಿಸಿದ್ದಾರೆ.

Read Full Story

05:09 PM (IST) Sep 27

'ಬಿಗ್ ಬಾಸ್‌ ಮನೆಗೆ ಬಾಂಬ್ ಇಡ್ತೀನಿ' ಎಂದು ವೈರಲ್ ರೀಲ್ಸ್ ಮಾಡಿ ಪೊಲೀಸರ ಅತಿಥಿಯಾದ ಯುವಕ!

ಬಿಗ್ ಬಾಸ್ ಸೀಸನ್ 12ಕ್ಕೆ ನನಗೆ ಆಹ್ವಾನ ನೀಡದಿದ್ದರೆ ಬಿಗ್ ಬಾಸ್ ಮನೆಗೆ ಬಾಂಬ್ ಇಡುವುದಾಗಿ ರೀಲ್ಸ್ ಮೂಲಕ ಬೆದರಿಕೆ ಹಾಕಿದ್ದ ಯುವಕನನ್ನು ಕುಂಬಳಗೋಡು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ, ತನ್ನ ಉದ್ದೇಶವನ್ನೂ ಹಾಗೂ ಬಾಂಬ್ ಇಡುವ ಬೆದರಿಕೆ ವಿಡಿಯೋ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

Read Full Story

04:37 PM (IST) Sep 27

ಸುಮ್​ಸುಮ್ನೆ ಇದ್ರೂ ರಾತ್ರೋರಾತ್ರಿ ಫೇಮಸ್​ ಆಗೋದು ಹೇಗೆ? ಜಾತಕ ಹೀಗಿರ್ಬೇಕು ನೋಡಿ

ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಯಾವುದೇ ಪ್ರಯತ್ನವಿಲ್ಲದೆ ರಾತ್ರೋರಾತ್ರಿ ಸ್ಟಾರ್ ಆಗುತ್ತಾರೆ, ಇದಕ್ಕೆ ಮಂಡ್ಯದ ನಿತ್ಯಶ್ರೀ ಅವರ 'ಹೂವಿನ ಬಾಣದಂತೆ' ಹಾಡು ಒಂದು ಉದಾಹರಣೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹೀಗೆ ಫೇಮಸ್​ ಆಗುವುದು ಹೇಗೆ? 

Read Full Story

03:57 PM (IST) Sep 27

Boys Celebrate Snake Birthday - ಹುಡುಗರು ನಾಗರಹಾವಿನ ಬರ್ತಡೇ ಆಚರಿಸಿದ ಶಾಕಿಂಗ್ ವಿಡಿಯೋ ವೈರಲ್!

cobra birthday celebration videoಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಕೆಲವು ಯುವಕರು ನಾಗರಹಾವಿನ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ ಆಚರಿಸಿದ್ದಾರೆಈ ದೃಶ್ಯವು ಜನರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದಿದ್ದು, ಕೆಲವರು ಇದನ್ನ ಅತ್ಯಂತ ಅಪಾಯಕಾರಿ ಎಂದು ಎಚ್ಚರಿಸಿದ್ದಾರೆ.

Read Full Story

03:56 PM (IST) Sep 27

ಪೈಗಂಬರ್ ಹುಟ್ಟಿ 1500 ವರ್ಷ ಬಳಿಕ 'ಐ ಲವ್ ಮೊಹಮ್ಮದ್' ಅಭಿಯಾನ; ಇದೇನು ಪ್ರೀತಿಯೋ, ಷಡ್ಯಂತ್ರವೋ? ಸಿಟಿ ರವಿ!

'ಐ ಲವ್ ಮೊಹಮ್ಮದ್' ಅಭಿಯಾನವು ಸೌಹಾರ್ದತೆಗಿಂತ ಹೆಚ್ಚಾಗಿ ರಾಜಕೀಯ ಷಡ್ಯಂತ್ರವಾಗಿದೆ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಆರೋಪಿಸಿದ್ದಾರೆ. ಇದು ಹಿಂದಿನ 'ಟೂಲ್ ಕಿಟ್' ತಂತ್ರಗಳಂತೆಯೇ ಇದ್ದು, ಇದಕ್ಕೆ ಪ್ರತಿಯಾಗಿ 'ಐ ಲವ್ ಮಹದೇವ್' ಅಭಿಯಾನವೂ ಆರಂಭವಾಗಿದೆ ಎಂದು ಅವರು ಹೇಳಿದ್ದಾರೆ.
Read Full Story

03:26 PM (IST) Sep 27

ಶೀಘ್ರದಲ್ಲೇ ಕಂಬಳಕ್ಕೆ ಕ್ರೀಡಾ ಸ್ಥಾನಮಾನ, ಅಧಿಕೃತ ಘೋಷಣೆಯೊಂದೇ ಬಾಕಿ!

Kambala to be Declared Karnataka State Sport ಕರ್ನಾಟಕದ ಸಾಂಪ್ರದಾಯಿಕ ಜಾನಪದ ಕ್ರೀಡೆಯಾದ ಕಂಬಳಕ್ಕೆ ರಾಜ್ಯ ಕ್ರೀಡೆಯ ಸ್ಥಾನಮಾನ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಮಾನ್ಯತೆಯಿಂದ ಕ್ರೀಡೆಗೆ ಹೆಚ್ಚಿನ ಸೌಲಭ್ಯಗಳು ದೊರೆಯಲಿದೆ.

Read Full Story

03:05 PM (IST) Sep 27

ಔಷಧಗಳ ಮೇಲೆ ಶೇ 100 ತೆರಿಗೆ ವಿಧಿಸಿದ ಅಮೆರಿಕ, ಸಚಿವ ಎಂ ಬಿ ಪಾಟೀಲ್ ಖಂಡನೆ

ಅಮೆರಿಕದ ತೆರಿಗೆ ನಿರ್ಧಾರಕ್ಕೆ ಮೋದಿಯೇ ಕಾರಣ ಎಂದು ಸಚಿವ ಎಂಬಿ ಪಾಟೀಲ್ ಆರೋಪಿಸಿದ್ದಾರೆ. ಭೀಮಾ ನದಿ ಪ್ರವಾಹ, ಜಾತಿ ಸಮೀಕ್ಷೆ ಗೊಂದಲ, ಪೊಲೀಸ್ ನೇಮಕಾತಿ ವಿಳಂಬ ಸೇರಿದಂತೆ ಹಲವು ವಿಷಯಗಳ ಕುರಿತು ಅವರು ಮಾತನಾಡಿದ್ದು, ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದಿದ್ದಾರೆ.
Read Full Story

03:01 PM (IST) Sep 27

ಬೆಂಗಳೂರಿನ ಏಕೈಕ ಹೋಲ್‌ಸೇಲ್‌ ಜ್ಯುವೆಲ್ಲರ್‌, ರೀಗಲ್‌ ಜ್ಯುವೆಲ್ಲರ್ಸ್‌ ಹೊಸ ಮಳಿಗೆ ಮಾರತಹಳ್ಳಿಯಲ್ಲಿ ಆರಂಭ!

Regal Jewellers Opens in Marathahalli 47 ವರ್ಷಗಳ ಪರಂಪರೆಯ ರೀಗಲ್ ಜ್ಯುವೆಲ್ಲರ್ಸ್, ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ ತನ್ನ ಹೊಸ ಚಿಲ್ಲರೆ ಮಾರಾಟ ಮಳಿಗೆಯನ್ನು ತೆರೆದಿದೆ.ಶಾಸಕಿ ಮಂಜುಳಾ ಲಿಂಬಾವಳಿ ಇದನ್ನು ಉದ್ಘಾಟಿಸಿದರು.

Read Full Story

02:33 PM (IST) Sep 27

ಬೆಂಗಳೂರಲ್ಲಿ ಕನ್ನಡ ಮಾತಾಡಿದ ಮಹಿಳಾ ಪಿಎಸ್‌ಐ ಮೇಲೆ ನಡುರಾತ್ರಿ ಹಿಂದಿ ಭಾಷಿಕನ ದರ್ಪ; ಅಗರ್ವಾಲ್ ಅರೆಸ್ಟ್!

ಬೆಂಗಳೂರಿನ ಇಂದಿರಾನಗರದಲ್ಲಿ ಕುಡಿದು ವಾಹನ ಚಲಾಯಿಸುತ್ತಿದ್ದ ಉತ್ತರ ಭಾರತ ಮೂಲದ ವ್ಯಕ್ತಿಯೊಬ್ಬ, ತಪಾಸಣೆ ನಡೆಸುತ್ತಿದ್ದ ಮಹಿಳಾ ಪಿಎಸ್‌ಐ ಜೊತೆ ಕನ್ನಡ ಮಾತನಾಡಿದ್ದಕ್ಕೆ ಗಲಾಟೆ ಮಾಡಿದ್ದಾನೆ. 'ಹಿಂದಿಯಲ್ಲಿ ಮಾತನಾಡಿ' ಎಂದು ಹಠ ಹಿಡಿದು, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಬಂಧಿಸಲಾಗಿದೆ.

Read Full Story

01:30 PM (IST) Sep 27

ಏಕಾಏಕಿ ಪತ್ನಿ ಫೋಟೋ ಡಿಲೀಟ್​ ಮಾಡಿದ್ಯಾಕೆ Vijay Suriya? ವೈಷ್ಣವಿ ಗೌಡ ಮದ್ವೆಯಲ್ಲಿ ಏನಾಯ್ತು?

ನಟ ವಿಜಯ್ ಸೂರ್ಯ ಅವರು ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಸ್ಪರ್ಧಿಯಾಗಿ ಹೋಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಇದೇ ವೇಳೆ, ತಮ್ಮ ಡಿವೋರ್ಸ್​ ಸುದ್ದಿಯ ಬಗ್ಗೆಯೂ ಸ್ಪಷ್ಟನೆ ನೀಡಿರುವ ಅವರು, ಸೋಷಿಯಲ್ ಮೀಡಿಯಾದಿಂದ ಪತ್ನಿ ಫೋಟೋ ಡಿಲೀಟ್​ ಮಾಡಿದ್ಯಾಕೆ ಎನ್ನುವ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. 

Read Full Story

01:19 PM (IST) Sep 27

ಬೆಂಗಳೂರು-ಮುಂಬೈ ನಡುವೆ ಹೊಸ ಸೂಪರ್ ಫಾಸ್ಟ್ ರೈಲು - 30 ವರ್ಷಗಳ ಕಾಯುವಿಕೆಗೆ ತೆರೆ ಎಂದ ಸಂಸದ ತೇಜಸ್ವಿ ಸೂರ್ಯ!

ಕಳೆದ ಮೂರು ದಶಕಗಳಿಂದ ಬೆಂಗಳೂರು ಮತ್ತು ಮುಂಬೈ ನಡುವೆ ಕೇವಲ ಒಂದೇ ಸೂಪರ್‌ಫಾಸ್ಟ್ ರೈಲು ಸಂಪರ್ಕವಿತ್ತು. ಸಂಸದ ತೇಜಸ್ವಿ ಸೂರ್ಯ ಅವರ ನಿರಂತರ ಪ್ರಯತ್ನದ ಫಲವಾಗಿ, ರೈಲ್ವೆ ಸಚಿವಾಲಯವು ಲೇನ್ ಸಾಮರ್ಥ್ಯವನ್ನು ಹೆಚ್ಚಿಸಿದ್ದು, ಶೀಘ್ರದಲ್ಲೇ ಎರಡೂ ನಗರಗಳ ನಡುವೆ ಹೆಚ್ಚಿನ ರೈಲು ಸೇವೆಗಳು ಆರಂಭವಾಗಲಿವೆ.
Read Full Story

01:17 PM (IST) Sep 27

ಬಿಎಂಟಿಸಿ ನೂತನ ಅಧ್ಯಕ್ಷರಾಗಿ ವಾಗ್ಮಿ ನಿಕೇತ್ ರಾಜ್ ಮೌರ್ಯ ಅಧಿಕಾರ ಸ್ವೀಕಾರ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ವಕ್ತಾರರಾದ ನಿಕೇತ್ ರಾಜ್ ಮೌರ್ಯ ಅವರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಬಿಎಂಟಿಸಿಯನ್ನು ಮತ್ತಷ್ಟು ಜನಪರ ಮತ್ತು ಪರಿಣಾಮಕಾರಿಯಾಗಿಸಲು ಶ್ರಮಿಸುವುದಾಗಿ ಅವರು ಭರವಸೆ ನೀಡಿದೆ.

Read Full Story

01:16 PM (IST) Sep 27

ರಾಜ್ಯ ಸರ್ಕಾರದಿಂದ ಗುಡ್‌ನ್ಯೂಸ್; ಮುಂದಿನ ತಿಂಗಳಿಂದಲೇ ಹೊಸ ಬಿಪಿಎಲ್ ಗೆ ಅರ್ಜಿ!

New BPL card application Karnataka ಸ್ಥಗಿತಗೊಂಡಿರುವ ಹೊಸ ಬಿಪಿಎಲ್ ಕಾರ್ಡ್ ಅರ್ಜಿ ಸ್ವೀಕಾರ ಮತ್ತು ವಿತರಣೆ ಪ್ರಕ್ರಿಯೆಯನ್ನು ತಿಂಗಳೊಳಗೆ ಆರಂಭಿಸಲಾಗುವುದು ಎಂದು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ. ಅನರ್ಹ ಕಾರ್ಡುಗಳ ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ ಎಂದರು.

Read Full Story

01:03 PM (IST) Sep 27

ಕಿಚ್ಚ ಸುದೀಪ್‌ ಷರತ್ತಿಗೆ ತಲೆ ಬಾಗಿದ ವಾಹಿನಿ; ಕನ್ನಡಿಗರ ಮನೆ ಗೆದ್ದಿದ್ದು Bigg Boss ಮನೆ ಅಲ್ಲ, ಅರಮನೆ

ಬಿಗ್‌ ಬಾಸ್‌ ಕನ್ನಡ 12 ಶೋ ಶುರುವಾಗಲು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಈ ಬಾರಿಯ ಮನೆ ಹೇಗಿರಲಿದೆ ಎಂಬ ಕುತೂಹಲ ಅನೇಕರಿಗೆ ಇರಬೇಕಲ್ಲ… “ಕನ್ನಡಕ್ಕೆ ಆದ್ಯತೆ ಕೊಟ್ಟರೆ ಮಾತ್ರ ನಾನು ಬಿಗ್‌ ಬಾಸ್‌ ಶೋ ನಡೆಸುತ್ತೇನೆ” ಎಂದು ಕಿಚ್ಚ ಸುದೀಪ್‌ ಕಂಡೀಶನ್‌ ಹಾಕಿದ್ದರು. ಈಗ ವಾಹಿನಿ ತಲೆಬಾಗಿದೆ. 

 

Read Full Story

12:45 PM (IST) Sep 27

ಕೆಎಸ್‌ಆರ್‌ಟಿಸಿ ಬಸ್-ಜೆಸಿಬಿ ಡಿಕ್ಕಿ; ದಸರಾ ಕರ್ತವ್ಯಕ್ಕೆ ತೆರಳುತ್ತಿದ್ದವರು, ಆಸ್ಪತ್ರೆಗೆ ದಾಖಲು!

ಕೊಡಗಿನ ಕುಶಾಲನಗರ ಬಳಿ ಕೆಎಸ್ಆರ್‌ಟಿಸಿ ಬಸ್ ಮತ್ತು ಜೆಸಿಬಿ ನಡುವೆ ನಡೆದ ಭೀಕರ ಅಪಘಾತದಲ್ಲಿ 15 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಮಡಿಕೇರಿ ದಸರಾ ಕರ್ತವ್ಯಕ್ಕೆ ತೆರಳುತ್ತಿದ್ದ ಏಳು ಹೋಂ ಗಾರ್ಡ್‌ಗಳು ಸೇರಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
Read Full Story

12:44 PM (IST) Sep 27

Dharwad social survey challenges - 'ಜಾತಿ ಪತ್ರ ತಂದುಕೊಡಿ, ಸಾಲಮನ್ನಾ ಮಾಡ್ಸಿ' ಶಿಕ್ಷಕರಿಗೆ ಹೊಸ ತಲೆನೋವು!

Dharwad social survey challenges: ಧಾರವಾಡದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ, ಗಣತಿದಾರರು ಸರ್ವರ್ ಸಮಸ್ಯೆ ಮತ್ತು ತಾಂತ್ರಿಕ ದೋಷಗಳಿಂದ ಬಳಲುತ್ತಿದ್ದಾರೆ. ಇದರೊಂದಿಗೆ, ‘ಸಾಲಮನ್ನಾ ಮಾಡಿಸಿ, ಜಾತಿ ಪ್ರಮಾಣಪತ್ರ ಕೊಡಿಸಿ’ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

Read Full Story

12:19 PM (IST) Sep 27

ಹೊಸ ರಾಜಕೀಯ ಪಕ್ಷ ಕಟ್ಟಲು ಎಷ್ಟು ಹಣ ಬೇಕು? ಕನಿಷ್ಟ ಎಷ್ಟು ಕಾರ್ಯಕರ್ತರಿರಬೇಕು?

how to register a political party in India:ತೇಜ್ ಪ್ರತಾಪ್ ಯಾದವ್ 'ಜನಶಕ್ತಿ ಜನತಾದಳ' ಎಂಬ ಹೊಸ ಪಕ್ಷವನ್ನು ಆರಂಭಿಸಿದ್ದಾರೆ. ಭಾರತದಲ್ಲಿ ಹೊಸ ರಾಜಕೀಯ ಪಕ್ಷ ಸ್ಥಾಪಿಸಲು ಚುನಾವಣಾ ಆಯೋಗದ ನಿಯಮಗಳು, ಬೇಕಾದ ಕನಿಷ್ಠ ಸದಸ್ಯರು ನೋಂದಣಿ ಶುಲ್ಕ ಒಟ್ಟಾರೆ ಪ್ರಕ್ರಿಯೆಯ ಬಗ್ಗೆ ಈ ಲೇಖನ ವಿವರಿಸುತ್ತದೆ.

Read Full Story

More Trending News