- Home
- Entertainment
- Sandalwood
- ಐತಿಹಾಸಿಕ ಪಾತ್ರಕ್ಕೆ ಕಟ್ಟುನಿಟ್ಟಿನ ವರ್ಕೌಟ್: 500 ವರ್ಷಗಳ ಹಿಂದಿನ ವೀರನಾಗಿ ಮಿಂಚಲು ಸಜ್ಜಾದ ಶ್ರೀಮುರಳಿ!
ಐತಿಹಾಸಿಕ ಪಾತ್ರಕ್ಕೆ ಕಟ್ಟುನಿಟ್ಟಿನ ವರ್ಕೌಟ್: 500 ವರ್ಷಗಳ ಹಿಂದಿನ ವೀರನಾಗಿ ಮಿಂಚಲು ಸಜ್ಜಾದ ಶ್ರೀಮುರಳಿ!
500 ವರ್ಷಗಳ ಹಿಂದಿನ ಐತಿಹಾಸಿಕ ಸಿನಿಮಾವೊಂದರ ಸಿದ್ಧತೆಯಲ್ಲಿದ್ದೇನೆ. ಪಾತ್ರ ಬಹಳ ಪ್ರಾಜೆಕ್ಟ್ ಎಕ್ಸೈಟಿಂಗ್ ಆಗಿದೆ. ಕತೆ ಸೊಗಸಾಗಿದೆ. ಒಂದು ನಂಬಿಕೆ ಮೇಲೆ ಮುಂದಡಿ ಇಡುತ್ತಿದ್ದೇನೆ ಎಂದಿದ್ದಾರೆ ಶ್ರೀ ಮುರಳಿ.

ಕಟ್ಟುನಿಟ್ಟಿನ ವರ್ಕೌಟ್, ಡಯೆಟ್
500 ವರ್ಷಗಳ ಹಿಂದಿನ ಐತಿಹಾಸಿಕ ಸಿನಿಮಾವೊಂದರ ಸಿದ್ಧತೆಯಲ್ಲಿದ್ದೇನೆ. ಇದಕ್ಕಾಗಿ ಕಟ್ಟುನಿಟ್ಟಿನ ವರ್ಕೌಟ್, ಡಯೆಟ್ ಜೊತೆಗೆ ಪಾತ್ರದ ಮಾನಸಿಕ ತಯಾರಿಯಲ್ಲೂ ತೊಡಗಿಸಿಕೊಂಡಿದ್ದೇನೆ. ಇದು ಶ್ರೀಮುರಳಿ ಮಾತು.
ಪುನೀತ್ ರುದ್ರನಾಗ್ ನಿರ್ದೇಶನ
ಪ್ರಶಾಂತ್ ನೀಲ್ ಚಿತ್ರಗಳಲ್ಲಿ ಸಹ ನಿರ್ದೇಶನ ಮಾಡಿರುವ ಜೊತೆಗೆ ವಿವಿಧ ಚಿತ್ರಗಳಲ್ಲಿ ನಟನೆಯಲ್ಲೂ ತೊಡಗಿಸಿಕೊಂಡಿದ್ದ ಪುನೀತ್ ರುದ್ರನಾಗ್ ನಿರ್ದೇಶನದ ಚಿತ್ರದಲ್ಲಿ ಶ್ರೀಮುರಳಿ ಐತಿಹಾಸಿಕ ವೀರನಾಗಿ ಮಿಂಚಲಿದ್ದಾರೆ. ನವೆಂಬರ್‌ನಿಂದ ಈ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ. ಜಯರಾಮ್ ದೇವಸಮುದ್ರ ನಿರ್ಮಾಣ ಮಾಡುತ್ತಿದ್ದಾರೆ.
ಪ್ರಾಜೆಕ್ಟ್ ಎಕ್ಸೈಟಿಂಗ್ ಆಗಿದೆ
ಪಾತ್ರ ಬಹಳ ಪ್ರಾಜೆಕ್ಟ್ ಎಕ್ಸೈಟಿಂಗ್ ಆಗಿದೆ. ಕತೆ ಸೊಗಸಾಗಿದೆ. ಒಂದು ನಂಬಿಕೆ ಮೇಲೆ ಮುಂದಡಿ ಇಡುತ್ತಿದ್ದೇನೆ ಎಂದಿದ್ದಾರೆ ಶ್ರೀ ಮುರಳಿ. ಹೆಸರು ಮಾಡಿರುವ ನಿರ್ದೇಶಕರೆಲ್ಲ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರ ಪ್ರಾಜೆಕ್ಟ್ ಸಿಕ್ಕರೆ ನನಗೆ ಬಹಳ ಸಂತೋಷವೇ.
ಪ್ರಯೋಗಶೀಲತೆ ಇಷ್ಟವಾಗುತ್ತದೆ
ಹಾಗೆಂದು ಹೊಸಬರ ಸಿನಿಮಾದಲ್ಲಿ ಮಾಡುವಾಗ ಅವರ ಹೊಸ ಥಾಟ್, ಹುಮ್ಮಸ್ಸು, ಪ್ರಯೋಗಶೀಲತೆ ಇಷ್ಟವಾಗುತ್ತದೆ. ನಾನು ನಿರ್ದೇಶಕರ ಕಥೆ, ಅದನ್ನು ನರೇಟ್ ಮಾಡುವ ಕ್ರಿಯಾಶೀಲತೆಯನ್ನು ಗಮನಿಸುತ್ತೇನೆ ಎಂದೂ ಹೇಳಿದ್ದಾರೆ.
ನಿಮ್ಮೆಲ್ಲರ ಪ್ರೋತ್ಸಾಹವಿರಲಿ
ನಮ್ಮ ಸುರಮ್ ಮೂವೀಸ್‌ನಿಂದ ಒಂದು ಉತ್ತಮ ಕಂಟೆಂಟ್‌ವುಳ್ಳ ಚಿತ್ರವನ್ನು ಕನ್ನಡಿಗರಿಗೆ ನೀಡಲು ಹೊರಟಿದ್ದೇವೆ ನಮ್ಮ ಈ ಪ್ರಯತ್ನಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ನಿರ್ಮಾಪಕ ಜಯರಾಮ್ ದೇವಸಮುದ್ರ ತಿಳಿಸಿದರು.