MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಏಕಾಏಕಿ ಪತ್ನಿ ಫೋಟೋ ಡಿಲೀಟ್​ ಮಾಡಿದ್ಯಾಕೆ Vijay Suriya? ವೈಷ್ಣವಿ ಗೌಡ ಮದ್ವೆಯಲ್ಲಿ ಏನಾಯ್ತು?

ಏಕಾಏಕಿ ಪತ್ನಿ ಫೋಟೋ ಡಿಲೀಟ್​ ಮಾಡಿದ್ಯಾಕೆ Vijay Suriya? ವೈಷ್ಣವಿ ಗೌಡ ಮದ್ವೆಯಲ್ಲಿ ಏನಾಯ್ತು?

ನಟ ವಿಜಯ್ ಸೂರ್ಯ ಅವರು ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಸ್ಪರ್ಧಿಯಾಗಿ ಹೋಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಇದೇ ವೇಳೆ, ತಮ್ಮ ಡಿವೋರ್ಸ್​ ಸುದ್ದಿಯ ಬಗ್ಗೆಯೂ ಸ್ಪಷ್ಟನೆ ನೀಡಿರುವ ಅವರು, ಸೋಷಿಯಲ್ ಮೀಡಿಯಾದಿಂದ ಪತ್ನಿ ಫೋಟೋ ಡಿಲೀಟ್​ ಮಾಡಿದ್ಯಾಕೆ ಎನ್ನುವ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. 

3 Min read
Suchethana D
Published : Sep 27 2025, 01:30 PM IST| Updated : Sep 27 2025, 03:26 PM IST
Share this Photo Gallery
  • FB
  • TW
  • Linkdin
  • Whatsapp
110
ಬಿಗ್​ಬಾಸ್​ನಲ್ಲಿ ವಿಜಯ್​ ಸೂರ್ಯ
Image Credit : Instagram

ಬಿಗ್​ಬಾಸ್​ನಲ್ಲಿ ವಿಜಯ್​ ಸೂರ್ಯ

ನಾಳೆ ಅರ್ಥಾತ್​ ಸೆಪ್ಟೆಂಬರ್​ 28ರಿಂದ Bigg Boss Kannada Seaon 12 ಷೋ ಆರಂಭವಾಗಲಿದೆ. ಈ ಷೋಗೆ ದೃಷ್ಟಿಬೊಟ್ಟು ದತ್ತಾಭಾಯ್​ ವಿಜಯ್​ ಸೂರ್ಯ ಕೂಡ ಹೋಗಲಿದ್ದಾರೆ ಎನ್ನುವ ಸುದ್ದಿ ಇದೆ. ಸೀರಿಯಲ್​ನ ಎಂಡಿಂಗ್​ನಲ್ಲಿ ಅವರು ಕಾಣಿಸಿಕೊಳ್ಳದೇ ಇರುವುದಕ್ಕೆ ಇವರು ಹೋಗುವುದು ಕನ್​ಫರ್ಮ್​ ಆಗಿದೆ. ಅಂದಹಾಗೆ ವಿಜಯ್ ಸೂರ್ಯ ಅವರಿಗೆ ಮದುವೆಯಾಗಿ ಎರಡು ಮಕ್ಕಳಿದ್ದರೂ ಹುಡುಗಿಯರಿಗೆ ಅವರ ಮೇಲಿನ ಕ್ರೇಜ್ ಏನೂ ಕಮ್ಮಿಯಾಗಿಲ್ಲ ಅನ್ನಿ. ಚಾಕಲೇಟ್‌ ಬಾಯ್‌ ಎಂದೇ ಫೇಮಸ್‌ ಆಗಿರೋ ನಟ, ದೃಷ್ಟಿಬೊಟ್ಟು ಸೀರಿಯಲ್‌ನಲ್ಲಿ ರೌಡಿ ಪಾತ್ರದಲ್ಲಿ ಮಿಂಚಿದ್ದರು.

210
ವಿಜಯ್​ ಸೂರ್ಯ ಹಿನ್ನೆಲೆ...
Image Credit : our own

ವಿಜಯ್​ ಸೂರ್ಯ ಹಿನ್ನೆಲೆ...

ವಿಜಯ್‌ಸೂರ್ಯ ಅವರಿಗೆ ಸಕತ್‌ ಹಿಟ್‌ ಕೊಟ್ಟಿದ್ದು ‘ಅಗ್ನಿಸಾಕ್ಷಿ’ ಸೀರಿಯಲ್‌. ಆರು ವರ್ಷಗಳಿಗೂ ಅಧಿಕ ಕಾಲ ಈ ಸೀರಿಯಲ್‌ ಪ್ರಸಾರ ಆಗಿತ್ತು. ಬಳಿಕ ನಟ ದಿನ ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಅತಿಥಿ ಪಾತ್ರ ಮಾಡಿದ್ದರು. ಆಮೇಲೆ ‘ಪ್ರೇಮಲೋಕ’ ಧಾರಾವಾಹಿಯಲ್ಲಿಯೂ ನಟಿಸಿದ್ದರು. ಧಾರಾವಾಹಿಗಳ ಜೊತೆಗೆ ಅವರು ಸಿನಿಮಾ ಕೂಡ ಮಾಡುತ್ತಿದ್ದಾರೆ. ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟ ಹಲವಾರು ನಟ-ನಟಿಯರು ಸ್ಟಾರ್‌ಗಳಾಗಿ ಮೆರೆಯುತ್ತಿದ್ದಾರೆ. ಕೆಲವರಿಗೆ ಅದೃಷ್ಟ ಒಲಿಯುವುದಿಲ್ಲ. ಹಾಗೆಯೇ ವಿಜಯ್ ಅವರು ಬೆಳ್ಳಿತೆರೆಗೆ ಕಾಲಿಟ್ಟರೂ ಮತ್ತೆ ಕಿರುತೆರೆಯತ್ತ ಮುಖ ಮಾಡಿದ್ದಾರೆ.

Related Articles

Related image1
10 ನಟಿಯರನ್ನು ತರಲು ವಿಜಯ್​ ಸೂರ್ಯಗೆ Bigg Boss Offer! ನಟ ಆಯ್ಕೆ ಮಾಡಿದ್ದು ಯಾರನ್ನು ನೋಡಿ
Related image2
Bigg Bossಗೆ 2 ಕೋಟಿ ರೂ. ಭಾರಿ ದಂಡ! ರಿಯಾಲಿಟಿ ಷೋಗೆ ಕಾನೂನು ಸಂಕಷ್ಟ- ಅಷ್ಟಕ್ಕೂ ಆಗಿದ್ದೇನು ನೋಡಿ
310
ಇಬ್ಬರು ಮಕ್ಕಳ ಹ್ಯಾಪ್ಪಿ ಫ್ಯಾಮಿಲಿ
Image Credit : Instagram

ಇಬ್ಬರು ಮಕ್ಕಳ ಹ್ಯಾಪ್ಪಿ ಫ್ಯಾಮಿಲಿ

ಇನ್ನು ಮೊದಲೇ ಹೇಳಿದಂತೆ ವಿಜಯ್​​ ಸೂರ್ಯ ಅವರಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಪತ್ನಿ ಚೈತ್ರಾ, ಹಾಗೂ ಮಕ್ಕಳ ಹೆಸರು ಸೋಹನ್ ಸೂರ್ಯ ಮತ್ತು ಕಾರ್ತಿಕೇಯ ಸೂರ್ಯ. ಗುಳಿಕೆನ್ನೆ ಚೆಲುವ ಎನ್ನಿಸಿಕೊಂಡಿರುವ ವಿಜಯ್​ ಸೂರ್ಯ, ತಮ್ಮ ನಟನೆಯಿಂದ ಎಷ್ಟು ಫೇಮಸೋ, ಅಷ್ಟೇ ಅವರೊಬ್ಬ ಪರ್ಫೆಕ್ಟ್ ಫ್ಯಾಮಿಲಿ ಮ್ಯಾನ್ (family man) ಆಗಿಯೂ ಜನಪ್ರಿಯತೆ ಪಡೆದಿದ್ದಾರೆ. ತಮ್ಮ ತಾಯಿ ತೋರಿಸಿದ ಹುಡುಗಿಯನ್ನೇ ಮದುವೆಯಾಗಿರುವ ವಿಜಯ್ ಇಬ್ಬರು ಮುದ್ದಾದ ಗಂಡು ಮಕ್ಕಳ ತಂದೆ ಕೂಡ ಹೌದು. ಒಟ್ಟಲ್ಲಿ ಇವರದ್ದು ಹ್ಯಾಪಿ ಫ್ಯಾಮಿಲಿ.

410
ಡಿವೋರ್ಸ್​ ಬಗ್ಗೆ ಸುದ್ದಿ
Image Credit : our own

ಡಿವೋರ್ಸ್​ ಬಗ್ಗೆ ಸುದ್ದಿ

ಆದರೆ ಕೆಲ ತಿಂಗಳ ಹಿಂದೆ ವಿಜಯ್​ ಸೂರ್ಯ ಅವರು ಡಿವೋರ್ಸ್​ ಆಗುತ್ತಿದ್ದಾರೆ, ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂದೆಲ್ಲಾ ಸುದ್ದಿಯಾಗಿತ್ತು. ಅದಕ್ಕೆ ಇದೀಗ ಬಾಸ್​​ ಟಿವಿಗೆ ನೀಡಿರುವ ಸಂದರ್ಶನದಲ್ಲಿ ವಿಜಯ್​ ಸೂರ್ಯ ಅವರು, ಈ ಬಗ್ಗೆ ಮಾತನಾಡಿದ್ದಾರೆ. ಈ ಸುದ್ದಿ ಹುಟ್ಟಲು ಕಾರಣ, ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಅವರು ಎಲ್ಲರ ಫೋಟೋ ತೆಗೆದುಹಾಕಿದ್ದು. ಇದಕ್ಕೆ ಕಾರಣವೂ ಇದೆ. ಎಐ ಹಾವಳಿ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ, ಅದರ ದುರುಪಯೋಗ ಆಗಬಾರದು ಎನ್ನುವ ಕಾರಣಕ್ಕೆ ಫ್ಯಾಮಿಲಿ ಫೋಟೋಗಳನ್ನು ಡಿಲೀಟ್ ಮಾಡಿದ್ದರು. ಅದರಲ್ಲಿ ಪತ್ನಿ ಫೋಟೋ ಕೂಡ ಡಿಲೀಟ್​ ಆಗಿತ್ತು.

510
ವಿಜಯ್​ ಸೂರ್ಯ ಬಾಳಲ್ಲಿ ಬಿರುಗಾಳಿ
Image Credit : our own

ವಿಜಯ್​ ಸೂರ್ಯ ಬಾಳಲ್ಲಿ ಬಿರುಗಾಳಿ

ಇದೇ ಕಾರಣಕ್ಕೆ ಇವರ ಬಾಳಲ್ಲಿ ಬಿರುಗಾಳಿ ಮೂಡಿದೆ ಎಂದು ಕೆಲವು ಯುಟ್ಯೂಬರ್​ಗಳು ವಿಡಿಯೋ ಹರಿಬಿಟ್ಟರು. ಅದಕ್ಕೆ ಉತ್ತರ ನೀಡಿರುವ ನಟ, ನಾನು ಎಐ ಕಾರಣದಿಂದ ಡಿಲೀಟ್​ ಮಾಡಿದ್ದೆ. ಅದರಲ್ಲಿ ನನ್ನ ಮಕ್ಕಳು, ಅಪ್ಪ- ಅಮ್ಮನ ಫೋಟೋ ಕೂಡ ಡಿಲೀಟ್​ ಮಾಡಿದ್ದೆ. ಆದರೆ ಇವರ ಕಣ್ಣಿಗೆ ಪತ್ನಿಯ ಫೋಟೋ ಮಾತ್ರ ಕಾಣಿಸಿರಬೇಕು. ಏನೇನೋ ವಿಡಿಯೋ ಮಾಡಿ ಹರಿಬಿಟ್ಟರು. ಮೊದಲಿಗೆ ಒಂದು ಇದ್ದ ವಿಡಿಯೋ ಕೊನೆಗೆ ಹತ್ತಾರು, ನೂರಾರು ಆಯಿತು ಎಂದಿದ್ದಾರೆ.

610
ವಿಡಿಯೋ ನೋಡಿ ನಗು ಬಂತು
Image Credit : our own

ವಿಡಿಯೋ ನೋಡಿ ನಗು ಬಂತು

ಇದನ್ನೆಲ್ಲಾ ನೋಡಿ ನಾನು ಮತ್ತು ಚೈತ್ರಾ ನಗುತ್ತಿದ್ದೆವು ಎಂದಿರೋ ನಟ, ನಿಮಗೂ ಒಂದು ಫ್ಯಾಮಿಲಿ ಇರತ್ತೆ. ಬೇರೆಯವರ ಫ್ಯಾಮಿಲಿ ಬಗ್ಗೆ ಬರೆಯುವಾಗ ನಿಮ್ಮ ಕುಟುಂಬದ ಬಗ್ಗೆಯೂ ಸ್ವಲ್ಪ ಯೋಚನೆ ಮಾಡಿದ್ರೆ ಚೆನ್ನಾಗಿರತ್ತೆ. ಸುಮ್ಮನೇ ಲೈಕ್ಸ್​, ಶೇರ್​ಗಾಗಿ ಹಾಗೆ ಮಾಡುವುದು ಸರಿಯಲ್ಲ ಎಂದೂ ನಟ ಹೇಳಿದ್ದಾರೆ.

710
ವೈಷ್ಣವಿ ಗೌಡ ಮದುವೆಯಲ್ಲಿ...
Image Credit : Instagram

ವೈಷ್ಣವಿ ಗೌಡ ಮದುವೆಯಲ್ಲಿ...

ಅದೇ ವೇಳೆ, ನಟಿ ವೈಷ್ಣವಿ ಗೌಡ (Vaishnavi Gowda) ಅವರ ಮದುವೆಯ ದಿನ ನಾನು ಮತ್ತು ಚೈತ್ರಾ ಹೋದಾಗ ಬಹುತೇಕ ಎಲ್ಲರಿಗೂ ವಿಷಯ ಗೊತ್ತಾಗಿತ್ತು. ಸುಳ್ಳು ಸುದ್ದಿ ಹರಡಿದ್ದು ತಿಳಿಯಿತೋ ಏನೊ. ಆಗ ಎಲ್ಲರೂ ಸುಮ್ಮನಾದರು ಎಂದಿರೋ ನಟ, ಸುಖಾಸುಮ್ಮನೆ ಇಂಥ ಸುದ್ದಿ ಹರಡುವ ಬಗ್ಗೆ ನೋವನ್ನೂ ತೋಡಿಕೊಂಡಿದ್ದಾರೆ.

810
 Bigg Boss ಆಫರ್​ ಬಗ್ಗೆ ನಟ ಹೇಳಿದ್ದೇನು?
Image Credit : our own

Bigg Boss ಆಫರ್​ ಬಗ್ಗೆ ನಟ ಹೇಳಿದ್ದೇನು?

ಈ ಹಿಂದೆ ನೀಡಿದ್ದ ಸಂದರ್ಶನದಲ್ಲಿ ವಿಜಯ್​ ಸೂರ್ಯ ಅವರು ತಮಗೆ ಬಿಗ್​ಬಾಸ್​ನಿಂದ ಆಫರ್​ ಬಂದಾಗಲೆಲ್ಲಾ ಬೇರೆ ಕಡೆ ಬಿಜಿ ಇರ್ತಿದ್ದೆ. ಅದಕ್ಕೇ ಹೋಗಲು ಆಗ್ತಿರಲಿಲ್ಲ ಎಂದಿದ್ದರು. ಕೊನೆಗೆ, ಒಂದೊಮ್ಮೆ ಬಿಗ್​ಬಾಸ್​ನಿಂದ ಆಫರ್​ ಬಂದು, ನಿಮಗೆ ಹತ್ತು ಕನ್ನಡದ ನಟಿಯರನ್ನು ಆಯ್ಕೆ ಮಾಡಲು ಅವಕಾಶ ಕೊಟ್ಟರೆ ಯಾರನ್ನು ಮಾಡುತ್ತೀರಿ ಎಂದು ಪ್ರಶ್ನೆ ಎದುರಾಗಿತ್ತು.

910
ಆಸೆ, ಫ್ಯಾಂಟಸಿ ಹೊರಟೋಗಿದೆ ಎಂದ ನಟ
Image Credit : our own

ಆಸೆ, ಫ್ಯಾಂಟಸಿ ಹೊರಟೋಗಿದೆ ಎಂದ ನಟ

ಅದಕ್ಕೆ ವಿಜಯ ಸೂರ್ಯ ಅವರು, ಅಂಥದ್ದೊಂದು ಆಸೆ, ಫ್ಯಾಂಟಸಿ ಎಲ್ಲಾ ತುಂಬಾ ಹಿಂದೆ ಹೊರಟು ಹೋಗಿದೆ ಎಂದರು. ಆದರೆ ಬಿಗ್​ಬಾಸ್​ ಟಾಸ್ಕ್​ ಕೊಟ್ಟ ಮೇಲೆ ಮಾಡಲೇಬೇಕು ಎಂದಾಗ ನಗುತ್ತಲೇ, 9 ಜನ ಹೆಣ್ಣುಮಕ್ಕಳ ಮಧ್ಯೆ ನಾನೇನು ಮಾಡಲಿ ಎಂದು ಪ್ರಶ್ನಿಸಿದರು. ಕೊನೆಗೆ ಬಿಗ್​ಬಾಸ್​ ಅಂದ್ಮೇಲೆ ಟಾಸ್ಕ್​ ಪೂರ್ತಿ ಮಾಡಲೇಬೇಕಲ್ವಾ ಎಂಬ ಪ್ರಶ್ನೆ ಬಂತು.

1010
ಜಾಣ್ಮೆಯಿಂದ ನುಣುಚಿಕೊಂಡ ನಟ
Image Credit : our own

ಜಾಣ್ಮೆಯಿಂದ ನುಣುಚಿಕೊಂಡ ನಟ

ಆಗ ವಿಜಯ ಸೂರ್ಯ ಅವರು, ಒಂದು ಕ್ಷಣ ಯೋಚಿಸಿ, ನನಗೆ ಎಲ್ಲಾ ತುಂಬಾ ಹಳೆಯ ಹೀರೋಯಿನ್​ಗಳನ್ನು ಕರೆಸುವ ಆಸೆ ತುಂಬಾ ಇದೆ. ಅವರಿಂದ ನಾಲೆಜ್ಡ್​ ಪಡೆದುಕೊಳ್ಳಬಹುದು ಎಂದಿದ್ದರು. ಹೀಗೆ ಹೇಳಿ ಪತ್ನಿಗೂ ಹರ್ಟ್​ ಆಗದ ಹಾಗೆ, ಈಗಿನ ಹಿರೋಯಿನ್​ಗಳ ಹೆಸರನ್ನೂ ಹೇಳದೇ ಜಾಣ್ಮೆಯಿಂದ ನುಣುಚಿಕೊಂಡಿದ್ದರು.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ದೃಷ್ಟಿ ಬೊಟ್ಟು ಧಾರಾವಾಹಿ
ಕಲರ್ಸ್ ಕನ್ನಡ
ಬಿಗ್ ಬಾಸ್ ಕನ್ನಡ
ವಿಜಯ್ ಸೂರ್ಯ
ಕನ್ನಡ ಧಾರಾವಾಹಿ
ಸಂಬಂಧಗಳು
ವಿಚ್ಛೇದನ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved