Published : Oct 27, 2025, 06:52 AM ISTUpdated : Oct 27, 2025, 10:48 PM IST

Karnataka News Live: ನಂದಿ ಗಿರಿಧಾಮದ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ ಮೇಲೆ ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್ ಹೆಸರು ಬರೆದ ಕಿಡಿಗೇಡಿಗಳು!

ಸಾರಾಂಶ

ಬೆಂಗಳೂರು: ನಮ್ಮ ಆದಾಯ ಮತ್ತು ನಿಮ್ಮ ಆರ್‌ಎಸ್‌ಎಸ್ ಆದಾಯಗಳ ಮೂಲಗಳ ಬಗ್ಗೆ ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯದಿಂದ ಆಡಿಟ್‌ ಹಾಗೂ ತನಿಖೆಯಾಗಲಿ. ಅದಕ್ಕೆ ನಾವು ಸಿದ್ಧ, ನಿಮ್ಮ ಆರ್‌ಎಸ್‌ಎಸ್‌ ಸಿದ್ಧವೇ ಎಂದು ಭಾನುವಾರ ಸಾಮಾಜಿಕ ಜಾಲತಾಣದ ಮೂಲಕ ಬಿಜೆಪಿ ನಾಯಕರನ್ನು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ಕಳೆದ 100 ವರ್ಷಗಳಲ್ಲಿ ನಿಮ್ಮ ಮಾತೃ ಸಂಸ್ಥೆಯಾದ ಆರೆಸ್ಸೆಸ್‌ ನೋಂದಾಯಿಸಿಕೊಂಡಿಲ್ಲ, ತೆರಿಗೆ ಪಾವತಿಸಿಲ್ಲ ಮತ್ತು ವಿಶ್ವದ ಅತ್ಯಂತ ಶ್ರೀಮಂತ ಎನ್‌ಜಿಒ ಎನಿಸಿಕೊಂಡಿದೆ? ಇದೆಲ್ಲ ಸಾಧ್ಯವಾಗಿದ್ದು ಹೇಗೆ? ಎಂದಿದ್ದಾರೆ.

Nandhi Hills lawrence bishnoi name

10:48 PM (IST) Oct 27

ನಂದಿ ಗಿರಿಧಾಮದ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ ಮೇಲೆ ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್ ಹೆಸರು ಬರೆದ ಕಿಡಿಗೇಡಿಗಳು!

Gangster Lawrence Bishnoi's Name Graffitied on Tipu Sultan Palace in Nandi Hills ಚಿಕ್ಕಬಳ್ಳಾಪುರದ ನಂದಿಗಿರಿಧಾಮದಲ್ಲಿರುವ ಐತಿಹಾಸಿಕ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆಯ ಮೇಲೆ, ಕುಖ್ಯಾತ ಅಂತರಾಷ್ಟ್ರೀಯ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೆಸರನ್ನು ಬರೆದು ವಿಕೃತಿ ಮೆರೆಯಲಾಗಿದೆ. 

Read Full Story

09:28 PM (IST) Oct 27

ಬಿಗ್ ಗ್ಯಾಪ್ ಬಳಿಕ ಮತ್ತೆ ಬಣ್ಣಹಚ್ಚಿದ ಸಮಂತಾ; ಕನ್ನಡದ 'ಕಾಂತಾರ' ನಟನ ಜೊತೆ ಸುತ್ತಾಟಕ್ಕೆ ಸಜ್ಜು!

ಅನಾರೋಗ್ಯದ ಮೂಲಕ ನಟಿ ಸಮಂತಾ ಅವರು ಸಾಕಷ್ಟು ಬಳಲಿದ್ದಾರೆ. ಆದರೆ, ಆತ್ಮಸ್ಥೈರ್ಯ, ಸಿನಿಮಾ ಮೇಲಿನ ಪ್ರೀತಿ ಬಿಡದ ನಟಿ ಸಮಂತಾ ಅವರು ಮತ್ತೆ ತೆರೆಯ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಸಖತ್ ಖುಷಿ ಕೊಟ್ಟ ಸಂಗತಿಯಾಗಿದೆ. ಅವರೀಗ ಮತ್ತೆ ಶೂಟಿಂಗ್‌ನಲ್ಲಿ ಭಾಗಿಯಾಗಲು ಸಜ್ಜಾಗಿದ್ದಾರೆ..

Read Full Story

08:47 PM (IST) Oct 27

ಬೆಳಗಾವಿ - ಪ್ರೇಯಸಿ ಜೊತೆ ಲಾಡ್ಜ್ ನಲ್ಲಿ ಗಂಡನ ಕುಚ್‌ ಕುಚ್‌, ಕತ್ತು ಹಿಡಿದು ಹೊರಗೆಳೆದು ಚಪ್ಪಲಿಯಲ್ಲಿ ಬಾರಿಸಿದ ಪತ್ನಿ!

ಬೆಳಗಾವಿಯ ಚಿಕ್ಕೋಡಿಯಲ್ಲಿ, ಪ್ರೇಯಸಿಯೊಂದಿಗೆ ಲಾಡ್ಜ್‌ನಲ್ಲಿದ್ದ ಪತಿಯನ್ನು ಪತ್ನಿ ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾಳೆ. ಕೋಪಗೊಂಡ ಆಕೆ, ಸಾರ್ವಜನಿಕವಾಗಿ ಬೀದಿಗೆಳೆದು ತಂದು ಚಪ್ಪಲಿಯಿಂದ ಥಳಿಸಿದ್ದು, ಈ ಘಟನೆಯ ವಿಡಿಯೋ ವೈರಲ್ ಆಗಿದೆ.
Read Full Story

08:02 PM (IST) Oct 27

ಸಿದ್ದರಾಮಯ್ಯ ಪೂರ್ಣಾವಧಿ ಅಧಿಕಾರ ಹೇಳಿಕೆ, ಸಿಎಂ ಹೇಳಿದ್ಮೇಲೆ ಮುಗೀತು ಎಂದು ದೆಹಲಿ ಭೇಟಿ ಉದ್ದೇಶ ತಿಳಿಸಿದ ಡಿಕೆಶಿ

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ದೆಹಲಿ ಭೇಟಿಯ ಕುರಿತಾದ ರಾಜಕೀಯ ಊಹಾಪೋಹಗಳಿಗೆ ತೆರೆ ಎಳೆದಿದ್ದು, ಇದು ಸಂಪೂರ್ಣವಾಗಿ ಖಾಸಗಿ ಭೇಟಿಯೆಂದು ಸ್ಪಷ್ಟಪಡಿಸಿದ್ದಾರೆ. ಹಿರಿಯ ನಾಯಕಿ ಅಂಬಿಕಾ ಸೋನಿ ಅವರಿಗೆ ಸಾಂತ್ವನ ಹೇಳಲು ಹೋಗಿದ್ದಾಗಿ ತಿಳಿಸಿದರು.

Read Full Story

07:41 PM (IST) Oct 27

ಬೆಂಗಳೂರು E-Bus ಕಳಪೆ ನಿರ್ವಹಣೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ!

Karnataka Minister Ramalinga Reddy Flags Poor E-Bus Performance ಕರ್ನಾಟಕ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಬೆಂಗಳೂರಿನಲ್ಲಿ ಖಾಸಗಿ ನಿರ್ವಾಹಕರು ನಡೆಸುವ ಎಲೆಕ್ಟ್ರಿಕ್ ಬಸ್‌ಗಳ ಕಳಪೆ ಸೇವೆ, ಪದೇ ಪದೇ ಆಗುವ ಬ್ರೇಕ್‌ಡೌನ್‌ ಮತ್ತು ಸುರಕ್ಷತಾ ಲೋಪಗಳ ಬಗ್ಗೆ ಕೇಂದ್ರದ ಗಮನ ಸೆಳೆದಿದ್ದಾರೆ. 

Read Full Story

07:02 PM (IST) Oct 27

ಐಐಟಿಯನ್‌ಗೆ ಸಿಕ್ತು ಅಮೇಜಾನ್‌ನಲ್ಲಿ ಉದ್ಯೋಗ - ಅಪ್ಪನ ಪ್ರತಿಕ್ರಿಯೆ ಭಾರಿ ವೈರಲ್

Viral whatsapp chat with father: ಐಐಟಿ ಪದವೀಧರನೊಬ್ಬನಿಗೆ ಅಮೆಜಾನ್‌ನಲ್ಲಿ ಉದ್ಯೋಗ ಸಿಕ್ಕಾಗ, ಆತ ತನ್ನ ತಂದೆಗೆ ಈ ವಿಷಯ ತಿಳಿಸುತ್ತಾನೆ. ಆದರೆ ಆತನ ತಂದೆಯ ಪ್ರತಿಕ್ರಿಯೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಹಾಗಿದ್ರೆ ಅವರು ಹೇಳಿದ್ದೇನು?

Read Full Story

06:57 PM (IST) Oct 27

Bigg Bossನ್ನ ವಿಶ್ವ ಮಟ್ಟದಲ್ಲಿ ಮಿಂಚಿಸೋ ತಾಕತ್​ ನಂಗಿದೆ, ಸುದೀಪ್​ ಕಂಡೆಮ್​ ಮಾಡಿದ್ರು- ​ ಡಾಗ್​ ಸತೀಶ್​ ಚಾಲೆಂಜ್​ ಹಾಕಿದ್ದೇನು?

ನೂರಾರು ಕೋಟಿ ಮೌಲ್ಯದ ನಾಯಿಗಳಿಂದ ಖ್ಯಾತರಾದ ಡಾಗ್ ಸತೀಶ್, ಬಿಗ್ ಬಾಸ್ ಮನೆಯಲ್ಲಿ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ನಿರೂಪಕ ಸುದೀಪ್ ಅವರೊಂದಿಗಿನ ಸಂಭಾಷಣೆಯಲ್ಲಿ ತಮ್ಮನ್ನು ತುಳಿಯಲಾಗುತ್ತಿದೆ ಎಂದು ಆರೋಪಿಸಿದ ಅವರು, ತಮ್ಮ 100 ಕೋಟಿಯ ನಾಯಿಯ ಪ್ರೊಮೋ ಕತ್ತರಿಸಲಾಗಿದೆ ಎಂದು ಬೇಸರಿಸಿದ್ದಾರೆ

Read Full Story

06:52 PM (IST) Oct 27

ಹೊನ್ನಾವರ ತೋಟದ ಬಾವಿಯಲ್ಲಿ ಯುವತಿ ಶವ ಪತ್ತೆ, ಸಾವಿನ ಸುತ್ತ ಅನುಮಾನದ ಹುತ್ತ!

ಹೊನ್ನಾವರದ ಚಿಕ್ಕನಕೋಡ ಗ್ರಾಮದಲ್ಲಿ ಗಾಯತ್ರಿ ಗೌಡ ಎಂಬ 25 ವರ್ಷದ ಯುವತಿ ಬಾವಿಗೆ ಹಾರಿ ಸಾವನ್ನಪ್ಪಿದ್ದಾಳೆ. ಇದು ಆತ್ಮಹತ್ಯೆ ಎಂದು ಮೇಲ್ನೋಟಕ್ಕೆ ಕಂಡುಬಂದರೂ, ಮಗಳ ಸಾವಿನ ಹಿಂದೆ ಬೇರೆ ಕಾರಣವಿರಬಹುದೆಂದು ತಾಯಿ ಅನುಮಾನ ವ್ಯಕ್ತಪಡಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
Read Full Story

06:51 PM (IST) Oct 27

ಕಲ್ಕಡ್ಕ ಪ್ರಭಾಕರ್ ಭಟ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಕೋರ್ಟ್ ಸೂಚನೆ

ಕಲ್ಕಡ್ಕ ಪ್ರಭಾಕರ್ ಭಟ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಕೋರ್ಟ್ ಸೂಚನೆ, ಪ್ರಚೋದನಕಾರಿ ಭಾಷಣ ಆರೋಪದಡಿ ಪ್ರಭಾಕರ್ ಭಟ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಇದರ ವಿರುದ್ಧ ಪ್ರಭಾಕರ್ ಭಟ್ ಕೋರ್ಟ್ ಮೆಟ್ಟಿಲೇರಿದ್ದರು.

Read Full Story

06:42 PM (IST) Oct 27

ಸಾಹಿತ್ಯಾಸಕ್ತರಿಗಾಗಿ ಮತ್ತೆ ಬಂದಿದೆ ಕನ್ನಡ ಪುಸ್ತಕ ಹಬ್ಬ, ರಾಷ್ಟ್ರೋತ್ಥಾನ ಸಾಹಿತ್ಯದ ಸಾಹಿತ್ಯ-ಸಂಸ್ಕೃತಿ ಉತ್ಸವ

ರಾಷ್ಟ್ರೋತ್ಥಾನ ಸಾಹಿತ್ಯವು ನವೆಂಬರ್ 1 ರಿಂದ ಡಿಸೆಂಬರ್ 7ರ ವರೆಗೆ ಬೆಂಗಳೂರಿನಲ್ಲಿ 37 ದಿನಗಳ 5ನೇ ಕನ್ನಡ ಪುಸ್ತಕ ಹಬ್ಬವನ್ನು ಆಯೋಜಿಸಿದೆ. ಈ ಹಬ್ಬದಲ್ಲಿ ಪುಸ್ತಕ ಪ್ರದರ್ಶನ, ಮಾರಾಟ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿದ್ಯಾರ್ಥಿಗಳಿಗೆ ಸ್ಪರ್ಧೆಗಳು ಹಾಗೂ ಅನಕೃ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
Read Full Story

06:31 PM (IST) Oct 27

'ಬಿಚ್ಕೊಂಡು ನಿಂತ್ರೂ ವಿಡಿಯೋ ಮಾಡ್ತೀರೇನ್ರಿ?' ಮಾಧ್ಯಮಗಳ ಮೇಲೆ ಸುಜಾತಾ ಭಟ್ ಕೆಂಡಾಮಂಡಲ!

ಧರ್ಮಸ್ಥಳ ಬುರುಡೆ ಕೇಸಿನಲ್ಲಿ ಸುಳ್ಳಿನ ಕಥೆ ಕಟ್ಟಿ ಸರ್ಕಾರಕ್ಕೆ ರೈಲು ಬಿಟ್ಟಿದ್ದ ಸುಜಾತಾ ಭಟ್ ಮಾಧ್ಯಮಗಳ ಕ್ಯಾಮೆರಾ ಕಂಡು ಕೆಂಡಾಮಂಡಲವಾಗಿದ್ದಾರೆ. ಮಾಧ್ಯಮದವರನ್ನು ನೋಡಿ ಎಲ್ಲಾ ಬಟ್ಟೆ ಬಿಚ್ಕೊಂಡು ನಿಂತರೂ ವಿಡಿಯೋ ಶೂಟ್ ಮಾಡ್ತೀರೇನ್ರಿ? ಥೂ ನಿಮ್ಮ ಜನ್ಮಕ್ಕೆ ಎಂದು ಆಕ್ರೋಶ ಹೊರಹಾಕಿದ್ದಾರೆ.

Read Full Story

06:07 PM (IST) Oct 27

Karna ವಿರುದ್ಧ ತಿರುಗಿ ಬಿದ್ದ ಜನರು - ಭಾವನೆಗಳ ಜೊತೆ ಆಡ್ತಿದ್ದೀರಾ? ಯಾವ ಖುಷಿಗೆ ಈ ನಗು? Too Much, Stop It!

'ಕರ್ಣ' ಸೀರಿಯಲ್‌ನಲ್ಲಿ ನಾಯಕ ಕರ್ಣನ ಪಾತ್ರದ ಇತ್ತೀಚಿನ ನಡೆಗೆ ಪ್ರೇಕ್ಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಧಿಯನ್ನು ನೋವಿನಲ್ಲಿಟ್ಟು ನಿತ್ಯಳ ಜೊತೆ ಕರ್ಣ ಸಂಭ್ರಮಿಸುವುದನ್ನು ಸಹಿಸದ ವೀಕ್ಷಕರು, ಇದು ಅತಿಯಾದ ಒಳ್ಳೆತನದ ಪ್ರದರ್ಶನ ಎಂದು  ಕಿಡಿಕಾರುತ್ತಿದ್ದಾರೆ.

Read Full Story

05:50 PM (IST) Oct 27

ಕಾಂತಾರ ಮೊದಲ ಅಧ್ಯಾಯ ಬಿಡುಗಡೆಯಾದ ಒಂದೇ ತಿಂಗಳಲ್ಲಿಒಟಿಟಿಗೆ! ಯಾವೆಲ್ಲ ಭಾಷೆಯಲ್ಲಿ ಲಭ್ಯ

ಭಾರತೀಯ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ 'ಕಾಂತಾರ ಎ ಲೆಜೆಂಡ್ ಚಾಪ್ಟರ್ 1' ಚಿತ್ರವು ಅಕ್ಟೋಬರ್ 31 ರಿಂದ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗಲಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಈ ಚಿತ್ರವು ಪಂಜುರ್ಲಿ ದೈವದ ದಂತಕಥೆಯ ಮೂಲವನ್ನು ಅನಾವರಣಗೊಳಿಸುತ್ತದೆ.  

Read Full Story

05:17 PM (IST) Oct 27

ಒಂದೊಳ್ಳೆ ಕಂಟೆಂಟ್‌ ಆಧಾರಿತ Bison Movie; ಸಿನಿಮಾ ನೋಡಿದ ವೀರೇಂದ್ರ ಮಲ್ಲಣ್ಣ ಹೇಳಿದ್ದೇನು?

Bison Movie: ತಮಿಳು ನಟ ವಿಕ್ರಮ್‌ ಅವರ ಮಗ ಧ್ರುವ ನಟನೆಯ ‘ಬೈಸನ್’‌ ಸಿನಿಮಾ ರಿಲೀಸ್‌ ಆಗಿದ್ದು, ಕಂಟೆಂಟ್‌ ವಿಚಾರವಾಗಿ ಅನೇಕರು ಈ ಸಿನಿಮಾವನ್ನು ಹೊಗಳಿದ್ದಾರೆ. ಈ ಸಿನಿಮಾ ನೋಡಿದ ವೀರೇಂದ್ರ ಮಲ್ಲಣ್ಣ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ.

 

Read Full Story

05:11 PM (IST) Oct 27

Breaking - ಹೈಕಮಾಂಡ್ ಒಪ್ಪಿದ್ರೆ 5 ವರ್ಷವೂ ನಾನೇ ಮುಖ್ಯಮಂತ್ರಿ - ಸಿಎಂ ಸಿದ್ದರಾಮಯ್ಯ!

ಪಕ್ಷದ ಹೈಕಮಾಂಡ್ ತೀರ್ಮಾನಿಸಿದರೆ ಐದು ವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ, ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ. ದ್ವೇಷ ಭಾಷಣ ಮಾಡುವ ಯಾರೇ ಆದರೂ ಅವರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಅವರು ತಿಳಿಸಿದರು.
Read Full Story

05:04 PM (IST) Oct 27

ದೆಹಲಿ ಅಂಗಳದಲ್ಲಿ ಸಿದ್ದು-ಡಿಕೆಶಿ - ಸಿಎಂ ಡಿಸಿಎಂ ಪತ್ಯೇಕ ಹೈಕಮಾಂಡ್‌ ಭೇಟಿ, ನವೆಂಬರ್ ಕ್ರಾಂತಿಯ ರಹಸ್ಯ?

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರತ್ಯೇಕವಾಗಿ ದೆಹಲಿಗೆ ಭೇಟಿ ನೀಡುತ್ತಿದ್ದು, ಹೈಕಮಾಂಡ್ ನಾಯಕರೊಂದಿಗೆ ಸಚಿವ ಸಂಪುಟ ಪುನರ್‌ರಚನೆ, ಅಧಿಕಾರ ಹಂಚಿಕೆ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನದಂತಹ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ.  

Read Full Story

04:55 PM (IST) Oct 27

ಕನ್ನಡಿಗರು ನಾಚುವಂತೆ ಕನ್ನಡ ಮಾತಾಡ್ತಿದ್ದಾರೆ ತೇಜಸ್ವಿ ಸೂರ್ಯ ಪತ್ನಿ - ಗಾಯಕಿ ಸಿವಶ್ರೀ ಕನ್ನಡ ಕಲಿತಿದ್ದು ಹೇಗೆ?

ಸಂಸದ ತೇಜಸ್ವಿ ಸೂರ್ಯ ಅವರ ತಮಿಳು ಮೂಲದ ಪತ್ನಿ ಸಿವಶ್ರೀ, ಕೆಲವೇ ತಿಂಗಳುಗಳಲ್ಲಿ ನಿರರ್ಗಳವಾಗಿ ಕನ್ನಡ ಕಲಿತು ಅಚ್ಚರಿ ಮೂಡಿಸಿದ್ದಾರೆ. ಪತಿಯಿಂದ ಅವರು ಕನ್ನಡ ಕಲಿತಿರಬಹುದು ಎಂಬುದು ಅನೇಕರ ನಂಬಿಕೆ ಅದರೆ ಅಲ್ಲ, ಹಾಗಿದ್ರೆ ಸಿವಶ್ರೀ ಕನ್ನಡ ಕಲಿತಿದ್ದು ಹೇಗೆ?

Read Full Story

04:30 PM (IST) Oct 27

ಕೊಪ್ಪಳದಲ್ಲಿ ಕದ್ದಿರುವ ನಾಡ ಬಂದೂಕಿನಿಂದ ಸೆಲ್ಫಿ ಫೈರಿಂಗ್ ಮಾಡಿಕೊಂಡ ಕುಡುಕ - ಮುಂದೇನಾಯ್ತು ನೀವೇ ನೋಡಿ!

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನಲ್ಲಿ, ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಅಕ್ರಮ ನಾಡ ಬಂದೂಕಿನಿಂದ ಸೆಲ್ಫಿ ಫೈರಿಂಗ್ ಮಾಡಿಕೊಳ್ಳಲು ಯತ್ನಿಸಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಐದು ವರ್ಷಗಳ ಹಿಂದೆ ಕದ್ದಿದ್ದ ಈ ಬಂದೂಕಿನಿಂದ ಫೈರಿಂಗ್ ಮಾಡಲು ಸೈಕಲ್ ಬೇರಿಂಗ್ ಬಳಸಿದ್ದಾನೆ

Read Full Story

04:19 PM (IST) Oct 27

ಅಯೋಧ್ಯೆ ಶ್ರೀರಾಮ ಮಂದಿರದ ಕೆಲಸ ಸಂಪೂರ್ಣ, ಘೋಷಣೆ ಮಾಡಿದ ಟ್ರಸ್ಟ್‌!

Ayodhya Ram Mandir Complete Announces Shri Ram Janmabhoomi Teerth Kshetra Trust ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಪ್ರಕಾರ, ಅಯೋಧ್ಯೆಯ ಪ್ರಭು ಶ್ರೀ ರಾಮಲಲ್ಲಾ ಮಂದಿರ ನಿರ್ಮಾಣದ ಎಲ್ಲಾ ಪ್ರಮುಖ ಕಾರ್ಯಗಳು ಪೂರ್ಣಗೊಂಡಿವೆ. 

 

Read Full Story

04:14 PM (IST) Oct 27

Amruthadhaare - ಪುಟಾಣಿ ಮಿಂಚು ನೋವಿಗೆ ಅಮ್ಮನಾಗಿ ಸಾಂತ್ವನ ನೀಡಿದ ಭೂಮಿಕಾ- ಏನೀ ಒಡಲ ರಹಸ್ಯ?

ಅಮೃತಧಾರೆ ಧಾರಾವಾಹಿಯು ರೋಚಕ ಹಂತ ತಲುಪಿದ್ದು, ಗೌತಮ್ ದತ್ತುಪುತ್ರಿ ಮಿಂಚು ಮತ್ತು ಭೂಮಿಕಾ ಭೇಟಿಯಾಗಿದ್ದಾರೆ. ಮಿಂಚುವಿನ ಡೈರಿ ಅಭ್ಯಾಸ ಹಾಗೂ ಕೈ ಮೇಲಿನ ಮಚ್ಚೆಯು ಭೂಮಿಕಾಗೆ ಹಳೆಯ ನೆನಪುಗಳನ್ನು ತರುತ್ತಿದ್ದು, ಈ ಬಾಲಕಿಯೇ ಗೌತಮ್-ಭೂಮಿಕಾರನ್ನು ಒಂದುಗೂಡಿಸುವ ಲಕ್ಷಣಗಳು ಕಾಣಿಸುತ್ತಿವೆ.

Read Full Story

03:57 PM (IST) Oct 27

ಐದು ಆರು ತಿಂಗಳ ಹಿಂದೆ ಹೈಕಮಾಂಡ್ ರೀಶಫಲ್ ಮಾಡಲು ಸಿಎಂಗೆ ಹೇಳಿತ್ತು - ಕೆ.ಎನ್. ರಾಜಣ್ಣ ಸ್ಫೋಟಕ ಹೇಳಿಕೆ

ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು, ಹೈಕಮಾಂಡ್ ಸೂಚನೆಯಂತೆ ಸಚಿವ ಸಂಪುಟ ಪುನರ್‌ರಚನೆ ನಡೆಯುವ ಸಾಧ್ಯತೆ ಬಗ್ಗೆ ಮಾತನಾಡಿದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಅನಿವಾರ್ಯ ನಾಯಕ ಎಂದಿರುವ ಅವರು, ಡಿಕೆಶಿ ದೆಹಲಿ ಭೇಟಿ ಮತ್ತು ದಲಿತ ಸಿಎಂ ಬೇಡಿಕೆಯಂತಹ ವಿಷಯಗಳ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದೆ.

Read Full Story

03:33 PM (IST) Oct 27

ಪ್ರದೀಪ್ ಈಶ್ವರ್ ಮತ್ತು ಪ್ರತಾಪ ಸಿಂಹ 'ಅಸಭ್ಯ' ಮಾತುಗಳಿಗೆ ಕಡಿವಾಣ ಹಾಕಿ - ಹೈಕೋರ್ಟ್‌ ವಕೀಲರಿಂದ ಪತ್ರ

ರಾಜ್ಯ ರಾಜಕೀಯದಲ್ಲಿ ಹೆಚ್ಚುತ್ತಿರುವ ವೈಯಕ್ತಿಕ ನಿಂದನೆ ಮತ್ತು ಅಸಭ್ಯ ಭಾಷಾ ಬಳಕೆಯಿಂದ ಬೇಸತ್ತ ಹೈಕೋರ್ಟ್ ವಕೀಲ ಪ್ರಶಾಂತ್ ಮೆತಲ್ ಅವರು, ಪ್ರದೀಪ್ ಈಶ್ವರ್ ಮತ್ತು ಪ್ರತಾಪ ಸಿಂಹ ಅವರ ಮಾತುಗಳಿಗೆ ಕಡಿವಾಣ ಹಾಕುವಂತೆ ಪತ್ರದ ಮೂಲಕ ಆಗ್ರಹಿಸಿದ್ದಾರೆ.

Read Full Story

03:25 PM (IST) Oct 27

Kannada Serial TRP - ಭರ್ಜರಿ ಫೈಟ್‌ ಕೊಟ್ಟು, NO 1 ಪಟ್ಟ ಏರಿದ ಸೀರಿಯಲ್! ಉಳಿದವುಗಳ ಕಥೆ ಏನು?

Kannada Serial TRP List: ಕನ್ನಡ ಕಿರುತೆರೆಯಲ್ಲಿ ಪ್ರತಿ ವಾರ ಹೊಸ ಟ್ವಿಸ್ಟ್‌ ಜೊತೆಯಲ್ಲಿ ಸೀರಿಯಲ್‌ಗಳು, ಶೋಗಳು ಪ್ರಸಾರ ಆಗುತ್ತಿವೆ. ಇನ್ನೊಂದು ಕಡೆ ಟ್ವಿಸ್ಟ್‌ಗಳಿಂದ ಸೀರಿಯಲ್‌ ಟಿಆರ್‌ಪಿ ಕೂಡ ಬದಲಾಗುವುದು. ಈ ವಾರ ರಿಲೀಸ್‌ ಟಿಆರ್‌ಪಿ ರಿಪೋರ್ಟ್‌ನಲ್ಲಿ ಯಾವ ಧಾರಾವಾಹಿಗೆ ಎಷ್ಟು TRP ಸಿಕ್ಕಿದೆ?

Read Full Story

03:25 PM (IST) Oct 27

ಕಪ್ಪೆ ಕರ ಕರ ತುಪ್ಪ ಜಲಿ ಜಲಿ ಹಾಡಿಗೆ ಎನಿಮೇಷನ್ ಟಚ್ - ಬಾಲ್ಯ ನೆನಪಿಸಿದ ವೀಡಿಯೋ

Kappe Kara Kara animated song: 'ಕಪ್ಪೆ ಕರ ಕರ' ಎಂಬ ಜನಪ್ರಿಯ ಜಾನಪದ ಹಾಡಿಗೆ 3D ಅನಿಮೇಷನ್ ಸ್ಪರ್ಶ ನೀಡಲಾಗಿದ್ದು,ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು 90ರ ದಶಕದ ಮಕ್ಕಳ ಬಾಲ್ಯದ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ.

Read Full Story

02:59 PM (IST) Oct 27

ಬೆಳಗಾವಿ - ದೂಧಗಂಗಾ ನದಿಯ ಬಳಿ ಅಪರಿಚಿತ ವ್ಯಕ್ತಿಯ ಕಗ್ಗೊಲೆ!

Body found in Dudhganga river: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಬಳಿ ದೂಧಗಂಗಾ ನದಿ ತೀರದಲ್ಲಿ ಅಪರಿಚಿತ ಯುವಕನ ಶವ ಪತ್ತೆಯಾಗಿದೆ. ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆಗೈದು ಶವವನ್ನು ಎಸೆಯಲಾಗಿದ್ದು, ಸದಲಗಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.

Read Full Story

02:48 PM (IST) Oct 27

Kalaburagi - ಮೂವರು ಹೆಂಡ್ತಿಯರಿದ್ರೂ 15ರ ಬಾಲಕಿಯನ್ನು ಗರ್ಭಿಣಿ ಮಾಡಿದ ಕಾಮುಕ ಮಾಲೀಕ

ಚಿಂಚೊಳ್ಳಿ ತಾಲೂಕಿನಲ್ಲಿ, ತನ್ನ ಬಳಿ ಕೆಲಸ ಮಾಡುತ್ತಿದ್ದ ಕಾರ್ಮಿಕನ 15 ವರ್ಷದ ಅಪ್ರಾಪ್ತ ಮಗಳ ಮೇಲೆ ಅತ್ಯಾ*ಚಾರ ಎಸಗಿದ ಪಾಲಿಶಿಂಗ್ ಘಟಕದ ಮಾಲೀಕನನ್ನು ಬಂಧಿಸಲಾಗಿದೆ. ಈ ಕೃತ್ಯದಿಂದ ಬಾಲಕಿ ಗರ್ಭಿಣಿಯಾಗಿದ್ದಾಳೆ

Read Full Story

02:45 PM (IST) Oct 27

Karna Serial - ನಿತ್ಯಾಳಿಗೆ ಕರ್ಣನ ಮೇಲೆ ಲವ್​ ಹುಟ್ಟತ್ತಾ? ಮನೆಯಲ್ಲೇ ಇರೋ ನಿಧಿ ಕಥೆಯೇನು- ಏನಿದು ಟ್ವಿಸ್ಟ್​?

ಪ್ರೀತಿಸಿದ ನಿಧಿ ಮನೆಯಲ್ಲಿದ್ದರೂ, ಪತ್ನಿ ನಿತ್ಯಾಳೊಂದಿಗೆ ಹೊಂದಿಕೊಳ್ಳಲು ಕರ್ಣ ಪ್ರಯತ್ನಿಸುತ್ತಿದ್ದಾನೆ. ನಿತ್ಯಾಗೆ ಅಡುಗೆಯಲ್ಲಿ ಸಹಾಯ ಮಾಡುವ ಕರ್ಣನ ನಡೆ ಮನೆಯವರಿಗೆ ಸಂತಸ ತಂದರೂ, ನಿಧಿಗೆ ನೋವು ನೀಡಿದೆ. ಈ ನಡುವೆ, ಕರ್ಣನ ಕಾಳಜಿಗೆ ನಿತ್ಯಾ ಮನಸೋತರೆ ಕಥೆ ಏನಾಗಬಹುದು ಎಂಬ ಆತಂಕ ಶುರುವಾಗಿದೆ.
Read Full Story

02:43 PM (IST) Oct 27

BBK 12 - ಅಯ್ಯಯ್ಯೋ..ಟಾಸ್ಕ್‌ನಲ್ಲಿ ಇಲ್ದಿರೋದನ್ನು ಮಾಡ್ತಾವ್ರೇ...ರಾಶಿಕಾ ಶೆಟ್ಟಿ, ಸೂರಜ್‌ ಪ್ರೇಮಗೀತೆ ಶುರು

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಈ ವಾರ ಹೊಸ ರೀತಿಯ ಟಾಸ್ಕ್‌ ನೀಡಲಾಗಿತ್ತು. ಕಾಲೇಜು ಮಕ್ಕಳ ಜೊತೆ ಸ್ಪರ್ಧಿಗಳು ನಟಿಸಬೇಕಿತ್ತು. ಕಾಲೇಜಿನಲ್ಲಿರುವ ವಿಷಯಗಳು ದೊಡ್ಮನೆಯಲ್ಲಿ ಇರಬೇಕಿತ್ತು. ರೋಗಿ ಬಯಸಿದ್ದು ಹಾಲು ಅನ್ನ, ಬಿಗ್‌ ಬಾಸ್‌ ಕೊಟ್ಟಿದ್ದು ಹಾಲು ಎನ್ನ ಎನ್ನೋ ಥರ ಆಯ್ತು ಇದು.

Read Full Story

02:39 PM (IST) Oct 27

ಕಾರಟಗಿ - ಕಂದಾಯ ಅಧಿಕಾರಿಗಳಿಂದಲೇ ರೈತರ ಮೂಲ ತಿದ್ದುಪಡಿ! ಶಿರಸ್ತೇದಾರ ಅಮಾನತು

ಕಾರಟಗಿ ತಹಸೀಲ್ದಾರ್ ಕಚೇರಿಯಲ್ಲಿ ರೈತರ ಭೂ ದಾಖಲೆಗಳನ್ನು ಅಕ್ರಮವಾಗಿ ತಿದ್ದುಪಡಿ ಮಾಡಿ, ವ್ಯಾಜ್ಯ ಸೃಷ್ಟಿಸಿದ ಆರೋಪ ಮೇಲೆ ಹಿಂದಿನ ಶಿರಸ್ತೇದಾರ್ ಪ್ರಕಾಶ್  ಅಮಾನತು. ಕಲಬುರಗಿ ಪ್ರಾದೇಶಿಕ ಆಯುಕ್ತಾಲಯದ ತನಿಖೆಯ ನಂತರ, 123 ಪ್ರಕರಣದ ದಾಖಲೆ ತಿದ್ದುಪಡಿ  97 ಕಡತ ಮಾಯ ಆಗಿರುವುದು ಬಯಲಾಗಿದೆ.

Read Full Story

02:19 PM (IST) Oct 27

ಬೀದರ್ - ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಕರ್ಮಕಾಂಡ - 8-9 ತಿಂಗಳ ಸಂಬಳ ಬಾಕಿ, 40ಕ್ಕೂ ಹೆಚ್ಚು ವೈದ್ಯರು ಏಕಾಏಕಿ ವಜಾ!

ಬೀದರ್‌ನ ಬ್ರಿಮ್ಸ್ ಆಸ್ಪತ್ರೆಯಲ್ಲಿ, ಸುಮಾರು 40ಕ್ಕೂ ಹೆಚ್ಚು ಸ್ಪೆಷಲಿಸ್ಟ್ ವೈದ್ಯರನ್ನು ಯಾವುದೇ ನೋಟಿಸ್ ನೀಡದೆ ಮತ್ತು 8-9 ತಿಂಗಳ ಸಂಬಳ ಬಾಕಿ ಉಳಿಸಿಕೊಂಡು ಏಕಾಏಕಿ ವಜಾ.. ಈ ಅನ್ಯಾಯದ ವಿರುದ್ಧ ವೈದ್ಯರು ಆಡಳಿತ ಮಂಡಳಿ ಕಚೇರಿ ಬಳಿ ಧರಣಿ ನಡೆಸುತ್ತಿದ್ದು, ಅವರ ಜೀವನ ಸಂಕಷ್ಟಕ್ಕೆ ಸಿಲುಕಿದೆ.

Read Full Story

01:58 PM (IST) Oct 27

ದಕ್ಷಿಣ ಕನ್ನಡದಲ್ಲಿ ದಲಿತ ದೌರ್ಜನ್ಯ ಶಿಕ್ಷೆ ಪ್ರಮಾಣ ಶೋಚನೀಯ, 295 ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು 14 ಮಾತ್ರ!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2015 ರಿಂದ 2025 ರ ನಡುವೆ ದಾಖಲಾದ 295 ದಲಿತ ದೌರ್ಜನ್ಯ ಪ್ರಕರಣಗಳಲ್ಲಿ ಕೇವಲ 14 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಕಳವಳ ವ್ಯಕ್ತಪಡಿಸಿದೆ. ಎಸ್‌ಸಿ ಎಸ್‌ಟಿ ಕುಂದುಕೊರತೆ ಸಭೆಯಲ್ಲಿ ಈ ಅಂಕಿಅಂಶಗಳನ್ನು ಬಹಿರಂಗಪಡಿಸಲಾಗಿದೆ.

Read Full Story

01:37 PM (IST) Oct 27

ರಾಜ್ಯಕ್ಕೆ ಮೋಂಥಾ ಚಂಡಮಾರುತ ಭೀತಿ - ಬೆಂಗಳೂರು ಸೇರಿ 30 ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ!

ಬಂಗಾಳಕೊಲ್ಲಿಯ 'ಮೋಂಥಾ' ಚಂಡಮಾರುತ ಮತ್ತು ಅರಬ್ಬೀ ಸಮುದ್ರದ ವಾಯುಭಾರ ಕುಸಿತದಿಂದಾಗಿ ಕರ್ನಾಟಕದಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯಾಗಲಿದೆ. ಹವಾಮಾನ ಇಲಾಖೆಯು ವಿಶೇಷವಾಗಿ ಕರಾವಳಿ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಿಗೆ ಮಳೆ ಎಚ್ಚರಿಕೆ ನೀಡಿದ್ದು, ಅ.29ರ ನಂತರ ಮಳೆ ಇಳಿಮುಖವಾಗಲಿದೆ.
Read Full Story

01:17 PM (IST) Oct 27

Annayya Serial - ಪಾರು ಕೊಟ್ಟ ಶಾಕ್ ಟ್ರೀಟ್‌ಮೆಂಟ್‌ಗೆ ಪತರಗುಟ್ಟಿ ಹೋಗ್ಬಿಟ್ಟ ವೀರಭದ್ರ!

ಪಾರ್ಶ್ವವಾಯುಗೆ ಒಳಗಾದಂತೆ ನಟಿಸುತ್ತಿದ್ದ ವೀರಭದ್ರನ ನಾಟಕವನ್ನು ಪಾರು ಬಯಲು ಮಾಡಿದ್ದಾಳೆ. ವೈದ್ಯೆಯಾದ ಪಾರು, ಕರೆಂಟ್ ಶಾಕ್ ಟ್ರೀಟ್ಮೆಂಟ್‌ ನೀಡುವುದಾಗಿ ಹೆದರಿಸಿದಾಗ, ವೀರಭದ್ರ ತನ್ನ ನಾಟಕವನ್ನು ನಿಲ್ಲಿಸಿ ಎದ್ದು ಕುಳಿತುಕೊಳ್ಳುತ್ತಾನೆ. 

Read Full Story

12:56 PM (IST) Oct 27

Bigg Boss ಡಾಗ್​ ಸತೀಶ್ ಮಗನಿಗೆ ಭಾರತದ 2ನೇ ಹೀರೋ ಪಟ್ಟ? ಖುದ್ದು ಪುತ್ರ ಹರ್ಷ ಹೇಳಿದ್ದೇನು?

ಬಿಗ್ ಬಾಸ್ ಖ್ಯಾತಿಯ ಡಾಗ್ ಸತೀಶ್ ತಮ್ಮ ಮಗ ಹರ್ಷನನ್ನು ಇಂಡಿಯಾದ ನಂಬರ್ 2 ಹೀರೋ ಮಾಡುವ ಕನಸಿನ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ, ಅಪ್ಪನ ದೊಡ್ಡ ಮಾತುಗಳಿಗೆ ನಾಚಿಕೆ ಸ್ವಭಾವದ ಹರ್ಷ ಪ್ರತಿಕ್ರಿಯಿಸಿದ್ದು, ಅಪ್ಪನಿಗೆ ಒಳ್ಳೆಯ ಹೆಸರು ತರಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ.
Read Full Story

12:49 PM (IST) Oct 27

ರಮೇಶ್ ಕತ್ತಿ ಅಣುಕು ಶವಯಾತ್ರೆ ನಡೆಸಿ ರಸ್ತೆಯಲ್ಲೇ ಅಂತ್ಯಕ್ರಿಯೆ ನೆರವೇರಿಸಿದ ವಾಲ್ಮೀಕಿ ಸಮುದಾಯ!

ರಮೇಶ್ ಕತ್ತಿ ಅವರ ಅವಹೇಳನಕಾರಿ ಹೇಳಿಕೆ ಖಂಡಿಸಿ ಬಾಗಲಕೋಟೆಯಲ್ಲಿ ವಾಲ್ಮೀಕಿ ಸಮುದಾಯದಿಂದ ಅಣುಕು ಶವಯಾತ್ರೆ ನಡೆಸಿ, ರಸ್ತೆಯಲ್ಲೇ ಅಂತ್ಯಕ್ರಿಯೆ ನಡೆಸಿದರು. ನಂತರ ರಮೇಶ್ ಕತ್ತಿ ಬಂಧನಕ್ಕೆ ಆಗ್ರಹಿಸಿ ನಡೆಸಿದ ಪ್ರತಿಭಟನೆಯ ಸಂಪೂರ್ಣ ವರದಿ ಇಲ್ಲಿದೆ.

Read Full Story

12:45 PM (IST) Oct 27

ಬೆಂಗಳೂರು - ಅಕ್ರಮವಾಗಿ ಪಿಸ್ತೂಲ್ ಇಟ್ಟುಕೊಂಡಿದ್ದ ಕ್ರಿಮಿನಲ್ ರೋಷನ್ ಅಹಮದ್ ಬಂಧನ

ಬೆಂಗಳೂರಿನಲ್ಲಿ ಅಕ್ರಮವಾಗಿ ಪಿಸ್ತൂಲ್ ಇಟ್ಟುಕೊಂಡಿದ್ದ ರೌಡಿ ರೋಷನ್ ಅಹಮದ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಒಂದು ಪಿಸ್ತೂಲ್ ಮತ್ತು ನಾಲ್ಕು ಸಜೀವ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈತ ಈ ಹಿಂದೆ ಡ್ರಗ್ ಪೆಡ್ಲಿಂಗ್ ಪ್ರಕರಣದಲ್ಲೂ ಭಾಗಿಯಾಗಿದ್ದ.
Read Full Story

12:44 PM (IST) Oct 27

ಮನೆ ಬಾಗಿಲು ಹಾಕಲ್ಲ, ಸಾಲ ಮಾಡಲ್ಲ, ಏರ್‌ಪೋರ್ಟ್‌ ಇಲ್ಲದ ವಿಶ್ವದ ಶ್ರೀಮಂತ ದೇಶ ಯಾವುದು? ಇದು ಸತ್ಯ!

Low crime rate country: ಭಾರತದಲ್ಲಿ ಮನೆಯ ಹೊರಗಡೆ ಶೂ, ಗಿಡ ಇಟ್ಟರೂ ಕಳ್ಳತನ ಮಾಡ್ತಾರೆ. ಅಷ್ಟೇ ಅಲ್ಲದೆ, 100 ರೂಪಾಯಿ ಕೊಟ್ಟಿಲ್ಲ ಅಂದ್ರೂ ಕೊಲೆ ಮಾಡುವವರಿದ್ದಾರೆ. ಇದೊಂದು ದೇಶದಲ್ಲಿ ಕ್ರೈಮ್‌ ರೇಟ್‌ ತುಂಬ ತುಂಬ ಕಡಿಮೆ ಇದೆ, ಮನೆಗೆ ಬೀಗ ಹಾಕಲ್ಲ, ವಿಮಾನ ನಿಲ್ದಾಣ ಕೂಡ ಇಲ್ಲ, ಕಳ್ಳತನ ಆಗಿಲ್ಲ. 

Read Full Story

12:14 PM (IST) Oct 27

ನ್ಯಾಯ ಕೇಳಿಬಂದ ಮಹಿಳೆಯನ್ನು, ಲೈಂಗಿಕವಾಗಿ ಬಳಸಿಕೊಂಡ ಡಿ.ಜೆ.ಹಳ್ಳಿ ಇನ್ಸ್‌ಪೆಕ್ಟರ್ ಸುನೀಲ್ ಸಸ್ಪೆಂಡ್!

ಬೆಂಗಳೂರಿನ ಡಿ.ಜೆ.ಹಳ್ಳಿ ಠಾಣೆಯ ಇನ್‌ಸ್ಪೆಕ್ಟರ್ ಸುನಿಲ್, ಮದುವೆಯಾಗುವುದಾಗಿ ನಂಬಿಸಿ ಮಹಿಳೆಯೊಬ್ಬರ ಮೇಲೆ ಅತ್ಯಾ*ಚಾರ ಎಸಗಿದ ಗಂಭೀರ ಆರೋಪಕ್ಕೆ ಗುರಿಯಾಗಿದ್ದಾರೆ. ಈ ಪ್ರಕರಣದ ಹಿನ್ನೆಲೆಯಲ್ಲಿ, ಗೋವಿಂದಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿ ಇನ್‌ಸ್ಪೆಕ್ಟರ್ ಅನ್ನು ಅಮಾನತುಗೊಳಿಸಲಾಗಿದೆ.

Read Full Story

11:44 AM (IST) Oct 27

ರಿಪೋರ್ಟರ್ಸ್ ಡೈರಿ | ಬಂದರೋ ಬಂದರೋ ಗಣತಿದಾರರು ಕಾರಲ್ಲಿ ಬಂದರು!

15-20 ನಿಮಿಷದಲ್ಲಿ ಪಟ ಪಟನೆ ಮಾಹಿತಿ ಪಡೆದ ಮಹಿಳೆ ಥ್ಯಾಂಕ್ಸ್ ಎಂದು ಬುರ್ರೆಂದು ಕಾರಿನಲ್ಲಿ ಹೊರಟು ಹೋಗುವುದನ್ನು ನೋಡುತ್ತಾ ನಿಂತ ಸ್ನೇಹಿತ ಬೆಂಗಳೂರಿನಲ್ಲಿ ಮಾತ್ರ ಇದೆಲ್ಲ ಸಾಧ್ಯ ಎಂದು ಮನಸ್ಸಿನಲ್ಲಿ ಅಂದುಕೊಂಡಿದ್ದು ನಿಜ.

Read Full Story

11:24 AM (IST) Oct 27

ಕೋಲಾರ ಬಾರ್‌ನಲ್ಲಿ ಸೈಡ್ಸ್ ಕೊಡದ ಕ್ಯಾಷಿಯರ್‌ಗೆ ಹೆಂಡತಿ-ಮಕ್ಕಳೆದುರೇ ಕೊಲೆಗೈದ ಮದ್ಯವ್ಯಸನಿ!

ಕೋಲಾರದ ಮಾಲೂರು ತಾಲೂಕಿನಲ್ಲಿ, ಬಾರ್‌ನಲ್ಲಿ ಸೈಡ್ಸ್ ನೀಡಲು ನಿರಾಕರಿಸಿದ ಕಾರಣಕ್ಕೆ ಕ್ಯಾಷಿಯರ್ ಕುಮಾರಸ್ವಾಮಿ ಎಂಬುವವರನ್ನು ಸುಭಾಷ್ ಎಂಬಾತ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಕೆಲಸ ಮುಗಿಸಿ ಮನೆಗೆ ತೆರಳಿದಾಗ, ಹೆಂಡತಿ-ಮಕ್ಕಳ ಮುಂದೆಯೇ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ.

Read Full Story

More Trending News