- Home
- Entertainment
- TV Talk
- Annayya Serial: ಪಾರು ಕೊಟ್ಟ ಶಾಕ್ ಟ್ರೀಟ್‌ಮೆಂಟ್‌ಗೆ ಪತರಗುಟ್ಟಿ ಹೋಗ್ಬಿಟ್ಟ ವೀರಭದ್ರ!
Annayya Serial: ಪಾರು ಕೊಟ್ಟ ಶಾಕ್ ಟ್ರೀಟ್‌ಮೆಂಟ್‌ಗೆ ಪತರಗುಟ್ಟಿ ಹೋಗ್ಬಿಟ್ಟ ವೀರಭದ್ರ!
ಪಾರ್ಶ್ವವಾಯುಗೆ ಒಳಗಾದಂತೆ ನಟಿಸುತ್ತಿದ್ದ ವೀರಭದ್ರನ ನಾಟಕವನ್ನು ಪಾರು ಬಯಲು ಮಾಡಿದ್ದಾಳೆ. ವೈದ್ಯೆಯಾದ ಪಾರು, ಕರೆಂಟ್ ಶಾಕ್ ಟ್ರೀಟ್ಮೆಂಟ್ ನೀಡುವುದಾಗಿ ಹೆದರಿಸಿದಾಗ, ವೀರಭದ್ರ ತನ್ನ ನಾಟಕವನ್ನು ನಿಲ್ಲಿಸಿ ಎದ್ದು ಕುಳಿತುಕೊಳ್ಳುತ್ತಾನೆ.

ಶಾಕ್ ಟ್ರೀಟ್ಮೆಂಟ್
ತನ್ನ ಹಿಡಿತದಲ್ಲಿದ್ದ ಶಿವು ತಾಯಿ ಶಾರದಮ್ಮಾ ಕೈ ತಪ್ಪಿದ್ದರಿಂದ ಭಯಗೊಂಡ ವೀರಭದ್ರ ಪಾರ್ಶ್ವವಾಯುಗೆ ಒಳಗಾದವನಂತೆ ನಾಟಕ ಮಾಡುತ್ತಿದ್ದಾನೆ. ವೈದ್ಯೆಯಾಗಿರುವ ಪಾರು ಸಹ ವೀರಭದ್ರನ ನಾಟಕ ನಂಬಿದ್ದಳು. ಇದೀಗ ಪಾರು ಕೊಟ್ಟ ಶಾಕ್ ಟ್ರೀಟ್ಮೆಂಟ್‌ಗೆ ಮಾರಿಗುಡಿ ದೇವರು ವೀರಭದ್ರ ಪತರಗುಟ್ಟಿದ್ದಾನೆ.
ಸತ್ಯ ಪಾರುಗೆ ಗೊತ್ತಿಲ್ಲ
ವೀರಭದ್ರನಿಂದ ಬಂಧನಕ್ಕೊಳಗಾಗಿದ್ದ ಶಾರದಮ್ಮ ಸದ್ಯ ಮಗಳು ರಶ್ಮಿ ಮನೆಯಲ್ಲಿ ಶಾಂತಮ್ಮಳಾಗಿ ಆಶ್ರಯ ಪಡೆದುಕೊಂಡಿದ್ದಾಳೆ. ಸೊಸೆ ಪಾರುಳನ್ನು ಭೇಟಿಯಾದ್ರೂ ವೀರಭದ್ರನ ಯಾವ ಸತ್ಯವನ್ನು ಸಹ ಶಾರದಮ್ಮ ಹೇಳಿಲ್ಲ. ನನಗೆ ಯಾವುದು ನೆನಪಿಲ್ಲ ಎಂದು ಪಾರು ಮುಂದೆ ಸುಳ್ಳು ಹೇಳಿದ್ದಾಳೆ. ಶಾರದಮ್ಮಳೇ ತಾನು ಹುಡುಕುತ್ತಿರುವ ಅತ್ತೆ ಎಂಬ ಸತ್ಯ ಪಾರುಗೆ ಗೊತ್ತಿಲ್ಲ.
ಕರೆಂಟ್ ಶಾಕ್
ಪಾರ್ಶ್ವವಾಯು ಅಂತ ಮನೆಯಲ್ಲಿರೋ ವೀರಭದ್ರನ ಭೇಟಿಗೆ ಶಿವು ಜೊತೆ ಪಾರು ಬಂದಿದ್ದಾಳೆ. ಈ ಹಿಂದೆ ಬಿಸಿ ಕಾಫಿ ಎಸೆಯಲು ಹೋದರೂ ವೀರಭದ್ರ ಹಾಸಿಗೆಯಿಂದ ಮಿಸುಕಾಡಿರಲಿಲ್ಲ. ಇದೀಗ ನೀಚ ದುಷ್ಟ ವೀರಭದ್ರನಿಗೆ ಕರೆಂಟ್ ಶಾಕ್ ನೀಡಲು ಪಾರು ಮುಂದಾಗಿದ್ದಾಳೆ. ಕರೆಂಟ್ ಶಾಕ್ ಅಂತ ಹೇಳುತ್ತಲೇ ಮಲಗಿದ್ದ ವೀರಭದ್ರ ನನಗೇನೂ ಆಗಿಲ್ಲ ಅಂತ ಎದ್ದು ಕುಳಿತಿದ್ದಾನೆ.
ನನಗೇನು ಆಗಿಲ್ಲ
ನಿನ್ನಂತ ನೀಚ ಇಲ್ಲ. ಅದೆಷ್ಟು ಅಂತ ನಾಟಕ ಆಡ್ತೀಯಾ ಅಪ್ಪ. ಶಾಕ್ ಟ್ರೀಟ್ಮೆಂಟ್ ಕೊಟ್ರೆ ಬೇಗ ಎದ್ದು ಜಿಂಕೆ ಮರಿ ರೀತಿ ಓಡಾಡ್ತಿಯಾ ಎಂದು ಅಪ್ಪನಿಗೆ ಪಾರು ಹೇಳುತ್ತಾಳೆ. ವೀರಭದ್ರನ ಬೆರಳಿಗೆ ವಯರ್ ಸುತ್ತಿ, ಮತ್ತೊಂದು ತುದಿಯನ್ನು ಎಲೆಕ್ಟ್ರಿಕ್ ಸ್ವಿಚ್ ಬೋರ್ಡ್‌ಗೆ ಹಾಕಿದ್ದಾಳೆ. ಇನ್ನೇನು ಬಟನ್ ಆನ್ ಮಾಡುವಷ್ಟರಲ್ಲಿ ವೀರಭದ್ರ ಎದ್ದು ನನಗೇನು ಆಗಿಲ್ಲ ಅಂತ ಹೇಳಿದ್ದಾನೆ.
ಇದನ್ನೂ ಓದಿ: ಕೊನೆಗೂ ಪ್ರೇಕ್ಷಕರ ಆಸೆ ಈಡೇರಿಸಿದ ಶ್ರಾವಣಿ ಸುಬ್ರಮಣ್ಯ; ಇದಕ್ಕೆ ಇಷ್ಟು ವರ್ಷ ಬೇಕಾಯ್ತಾ?
ಸೂಪರ್ ಪ್ಲಾನ್
ಅಪ್ಪ ವೀರಭದ್ರ ಎದ್ದು ಕುಳಿತುಕೊಳ್ಳುತ್ತಿದ್ದಂತೆ ಪಾರು, ಮನೆ ಮಂದಿಯೆಲ್ಲರನ್ನು ಕರೆದುಕೊಂಡು ಬಂದಿದ್ದಾಳೆ. ವೀರಭದ್ರನನ್ನು ನೋಡಿ ಶಿವು ಸೇರಿದಂತೆ ಮನೆ ಮಂದಿಯೆಲ್ಲಾ ಆಶ್ಚರ್ಯಚಕಿತರಾಗಿದ್ದಾರೆ. ಈ ಪ್ರೋಮೋ ನೋಡಿದ ನೆಟ್ಟಿಗರು, ಸೂಪರ್ ಪ್ಲಾನ್. ಪಾರು ಅಕ್ಕ ಸೂಪರ್ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: Annayya ಬಂದ್ಬಿಡು, ಹೊಸ ಜೀವನ ಶುರು ಮಾಡೋಣ; ಲೀಲಾಳಿಗಾಗಿ ಮಾದಪ್ಪನ ಕಣ್ಣೀರಿನ ಮೊರೆ!