Body found in Dudhganga river: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಬಳಿ ದೂಧಗಂಗಾ ನದಿ ತೀರದಲ್ಲಿ ಅಪರಿಚಿತ ಯುವಕನ ಶವ ಪತ್ತೆಯಾಗಿದೆ. ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆಗೈದು ಶವವನ್ನು ಎಸೆಯಲಾಗಿದ್ದು, ಸದಲಗಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.
ಬೆಳಗಾವಿ, (ಅ.27): ರಾಜ್ಯದ ಗಡಿಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದ ಬಳಿ ದೂಧಗಂಗಾ ನದಿಯ ದಾನವಾಡ-ಯಕ್ಸಂಬಾ ಸೇತುವೆಯ ಕೆಳಭಾಗದಲ್ಲಿ ಅಪರಿಚಿತ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಂದು ಶವವನ್ನು ನದಿ ತೀರಕ್ಕೆ ಎಸೆದು ಆಗಂತುಕರು ಪರಾರಾಗಿದ್ದಾರೆ.
ಸುಮಾರು 35ರಿಂದ 38 ವರ್ಷ ವಯಸ್ಸಿನ ಈ ಯುವಕನ ಹಿನ್ನೆಲೆ ಇನ್ನೂ ತಿಳಿದುಬಂದಿಲ್ಲ. ಬೆಳ್ಳಂ ಬೆಳಗ್ಗೆ ಗ್ರಾಮಸ್ಥರು ಶವವನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ.ಘಟನೆಯ ಸ್ಥಳವು ದೂಧಗಂಗಾ ನದಿಯ ಗಡಿಯ ಭಾಗವಾಗಿದ್ದು, ಯಕ್ಸಂಬಾ ಗ್ರಾಮದಿಂದ ಕೆಲವೇ ಕಿ.ಮೀ. ದೂರದಲ್ಲಿದೆ.
ಇದನ್ನೂ ಓದಿ: ಬೆಂಗಳೂರು: ಅಕ್ರಮವಾಗಿ ಪಿಸ್ತೂಲ್ ಇಟ್ಟುಕೊಂಡಿದ್ದ ಕ್ರಿಮಿನಲ್ ರೋಷನ್ ಅಹಮದ್ ಬಂಧನ
ಶವ ಕಂಡು ಗ್ರಾಮಸ್ಥರು ಶಾಕ್
ಬೆಳಿಗ್ಗೆ ಸುಮಾರು 6 ಗಂಟೆಗೆ ಸ್ಥಳೀಯರು ಸೇತುವೆಯ ಕೆಳಗೆ ಮುಳುಗಿದ ಶವವನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಗ್ರಾಮಸ್ಥರು ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಸದಲಗಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಕೊಲೆಯ ಹಿನ್ನೆಲೆ ಏನಾದರೂ ರಾಜಕೀಯ ಅಥವಾ ಆರ್ಥಿಕ ಕಾರಣಗಳಿವೆಯೇ? ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ
