ಧರ್ಮಸ್ಥಳ ಬುರುಡೆ ಕೇಸಿನಲ್ಲಿ ಸುಳ್ಳಿನ ಕಥೆ ಕಟ್ಟಿ ಸರ್ಕಾರಕ್ಕೆ ರೈಲು ಬಿಟ್ಟಿದ್ದ ಸುಜಾತಾ ಭಟ್ ಮಾಧ್ಯಮಗಳ ಕ್ಯಾಮೆರಾ ಕಂಡು ಕೆಂಡಾಮಂಡಲವಾಗಿದ್ದಾರೆ. ಮಾಧ್ಯಮದವರನ್ನು ನೋಡಿ ಎಲ್ಲಾ ಬಟ್ಟೆ ಬಿಚ್ಕೊಂಡು ನಿಂತರೂ ವಿಡಿಯೋ ಶೂಟ್ ಮಾಡ್ತೀರೇನ್ರಿ? ಥೂ ನಿಮ್ಮ ಜನ್ಮಕ್ಕೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ದಕ್ಷಿಣ ಕನ್ನಡ (ಅ.27): ಧರ್ಮಸ್ಥಳದ ಬುರುಡೆ ಕೇಸಿನಲ್ಲಿ ಇಲ್ಲದ ಮಗಳು ಕಳೆದು ಹೋಗಿದ್ದಾಳೆಂದು ಕಥೆ ಕಟ್ಟಿದ್ದ ಸುಜಾತಾ ಭಟ್ ಇಂದು ಬೆಳಗ್ಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಮಾಧ್ಯಗಳು ಅವರನ್ನು ವಿಡಿಯೋ ಮಾಡುವುದನ್ನು ನೋಡಿ ಕೋಪಗೊಂಡು 'ನೀವೇನು ದೊಡ್ಡ ಇಸ್ಯೂ ಮಾಡೋಕೆ ಬಂದಿದ್ದೀರಾ? ನಿಮಗೆ ಬೇರೇನು ಕೆಲಸ ಇಲ್ವಾ? ಥೂ ನಿಮ್ಮ ಜನ್ಮಕ್ಕೆ..., ನಾನು ನಡುರಸ್ತೇಲಿ ಬಟ್ಟೆ ಬಿಚ್ಚಿ ನಿತ್ಕೋತೀನಿ ಹಾಕ್ತೀರಾ? ಹಾಕ್ತಿರೇನ್ರಿ? ಎಂದು ಗರಂ ಆಗಿ ಪ್ರಶ್ನೆ ಮಾಡಿದ್ದಾರೆ.

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂಬ ಸುಳ್ಳು ಕಥೆ ಕಟ್ಟಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯ ಕಥೆ ಕಟ್ಟಿದ್ದನು. ಈತನಿಗೆ ಸಾಥ್ ಕೊಡುವ ನಿಟ್ಟಿನಲ್ಲಿ, ತಿಮರೋಡಿ ಮಾತಿನಂತೆ ಸುಜಾತಾ ಭಟ್ ಕೂಡ ನನ್ನ ಮಗಳು ವೈದ್ಯಕೀಯ ವಿದ್ಯಾರ್ಥಿನಿ ಆಗಿದ್ದ ಅನನ್ಯಾ ಭಟ್ ಧರ್ಮಸ್ಥಳದಲ್ಲಿ ಕಳೆದು ಹೋಗಿದ್ದಾಳೆಂದು ಮತ್ತೊಂದು ಸುಳ್ಳಿನ ಕಥೆಯನ್ನು ಕಟ್ಟಿ ರಾಜ್ಯ ಸರ್ಕಾರದ ಕಾನೂನಿಗೆ ಸವಾಲೊಡ್ಡಿದ್ದರು. ಸರ್ಕಾರ ಕೂಡ ಸುಳ್ಳಿತ ಕಥೆಯನ್ನೇ ನಂಬಿಕೊಂಡು ದೇಶದ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಐಪಿಎಸ್ ಪಾಸಾಗಿ ಸರ್ಕಾರಿ ಸೇವೆಯಲ್ಲಿದ್ದ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನೂ (ಎಸ್‌ಐಟಿ) ರಚಿಸಿತ್ತು.

ಸುವರ್ಣ ನ್ಯೂಸ್‌ನಿಂದ ಸುಳ್ಳಿತ ಕಥೆ ಬಹಿರಂಗ:

ಇನ್ನು ಈ ಎಸ್‌ಐಟಿ ತಂಡವು ಕಣ್ಣು ಕಟ್ಟಿದ ಕುದಿರೆಯಂತೆ ತನಿಖೆ ಮಾಡುತ್ತಲೇ ಹೋಗುತ್ತಿರುವಾಗ, ತಿಮರೋಡಿ ಗ್ಯಾಂಗ್‌ ಸುಜಾತಾ ಭಟ್ ಹಾಗೂ ಚಿನ್ನಯ್ಯನ ಮೂಲಕ ಸುಳ್ಳಿನ ರೈಲು ಬಿಟ್ಟಿರುವುದನ್ನು ಸುವರ್ಣ ನ್ಯೂಸ್ ಬಹಿರಂಗ ಮಾಡಿತ್ತು. ಆಗ ತನಿಖಾ ದಿಕ್ಕು ಬದಲಾಗಿ, ದೂರು ಕೊಟ್ಟವರನ್ನೇ ಆರೋಪಿಗಳಾಗಿ ಮಾಡಿ ವಿಚಾರಣೆ ಮಾಡಲಾಗುತ್ತಿದೆ. ಅದರಲ್ಲಿ ಸುಜಾತಾ ಭಟ್ ಸೇರಿ ತಿಮರೋಡಿ ಗ್ಯಾಂಗ್‌ 6 ಜನರಿಗೆ ಆಗಾಗ್ಗೆ ವಿಚಾರಣೆಗೆ ಕರೆದು ಕಾನೂನಿನ ದಿಕ್ಕು ತಪ್ಪಿಸಿದವರಿಗೆ ನ್ಯಾಯದ ದಿಕ್ಕು ತೋರಿಸುವ ಕೆಲಸ ಮಾಡುತ್ತಿದೆ.

ಮನೆಗೆ ಹೋಗುವಾಗ ಮಾಧ್ಯಮಗಳ ಮೇಲೆ ಆಕ್ರೋಶ

ಸುಜಾತಾ ಭಟ್ ಅವರು ಬೆಳಗ್ಗೆ 10.30ಕ್ಕೆ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಹಾಜರಾಗಿದ್ದರು. ಅವರನ್ನು ಮಧ್ಯಾಹ್ನದವರೆಗೆ ವಿಚಾರಣೆ ಮಾಡಲಾಗಿದೆ. ಈ ವೇಳೆ ಮಧ್ಯಾಹ್ನದವರೆಗೂ ಕಾದರೂ ಉಳಿದ ಆರೋಪಿಗಳು ಎಸ್‌ಐಟಿ ವಿಚಾರಣೆಗೆ ಹಾಜರಾಗಲಿಲ್ಲ. ಇದಾದ ನಂತರ ಮಧ್ಯಾಹ್ನ ಊಟಕ್ಕೆಂದು ಹೊರಗೆ ಬಂದಿದ್ದ ಸುಜಾತಾ ಭಟ್ ಊಟ ಮಾಡಿಕೊಂಡು ಪುನಃ ವಿಚಾರಣೆಗೆ ಹಾಜರಾದರು. ಸಂಜೆ ವಾಪಸ್ ಮನೆಗೆ ಹೋಗುವಾಗ ಮಧ್ಯಮಗಳು ತಮ್ಮನ್ನು ವಿಡಿಯೋ ಮಾಡುವುದನ್ನು ನೋಡಿ ಹೀಗೆ ಬಾಯಿಗೆ ಬಂದಂತೆ ಬೈದು ಆಕ್ರೋಶ ಹೊರಹಾಕಿದರು.

ಒಂದು ವಾರ ಕಾಲಾವಕಾಶ ಕೇಳಿದ ತಿಮರೋಡಿ ಗ್ಯಾಂಗ್:

ಎಸ್ಐಟಿ ತನಿಖಾಧಿಕಾರಿ‌ ಜಿತೇಂದ್ರ ದಯಾಮಾ ಅವರು, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟೆಣ್ಣನವರ್, ಜಯಂತ್ ಟಿ. ಹಾಗೂ ವಿಠಲ ಗೌಡಗೆ ವಿಚಾರಣೆಗೆ ಬರುವಂತೆ ನೋಟೀಸ್ ಜಾರಿ ಮಾಡಿದ್ದರೂ, ಬಂದಿರಲಿಲ್ಲ. ಮಧ್ಯಾಹ್ನ 2 ಗಂಟೆಯೊಳಗೆ ಬರುವಂತೆ ಡೆಡ್‌ಲೈನ್ ಕೂಡ ಕೊಡಲಾಗಿತ್ತು. ಆದರೂ, ಹಾಜರಾಗದ ಆರೋಪಿಗಳ ವಿರುದ್ಧ ಕಾನೂನು ಮೂಲಕ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ಮಾಡುತ್ತಿರುವಾಗಲೇ ಈ ನಾಲ್ಕು ಜನರು ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೊಡುವಂತೆ ಆರೋಪಿಗಳ ಪರ ವಕೀಲರು ಮನವಿ ಸಲ್ಲಿಕೆ ಮಾಡಿದ್ದಾರೆ.

ವಕೀಲ ಅಂಬಿಕಾ ಪ್ರಭು ತಂಡವು ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟೆಣ್ಣನವರ್, ಜಯಂತ್ ಟಿ. ಹಾಗೂ ವಿಠಲ ಗೌಡ ಸೇರಿ ನಾಲ್ಕು ಮಂದಿಗೆ 7 ದಿನಗಳ ಕಾಲ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೇಳಿ ಮನವಿ ಸಲ್ಲಿಸಿದರು.