Kappe Kara Kara animated song: 'ಕಪ್ಪೆ ಕರ ಕರ' ಎಂಬ ಜನಪ್ರಿಯ ಜಾನಪದ ಹಾಡಿಗೆ 3D ಅನಿಮೇಷನ್ ಸ್ಪರ್ಶ ನೀಡಲಾಗಿದ್ದು,ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು 90ರ ದಶಕದ ಮಕ್ಕಳ ಬಾಲ್ಯದ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ.

ಕಪ್ಪೆ ಕರ ಕರ ತುಪ್ಪ ಜಲಿ ಜಲಿ ಹಾಡಿಗೆ ಎನಿಮೇಷನ್ ಟಚ್

ಕಪ್ಪೆ ಕರ ಕರ ತುಪ್ಪ ಜಾಲಿ ಜಾಲಿ ಮಾವಿನ ವಾಟೆ ಮರದಲಿ ಕೋಟೆ ಹದ್ದಿನ ಕೈಯಲ್ಲಿ ಸುದ್ದಿ ಕಳಿಸಿ ಕಾಗೆಯ ಕೈಯಲ್ಲಿ ಕಂಕಣ ಕಟ್ಟಿಸಿ ನಳ್ಳಿ ಕೈಯಲಿ ನಗಾರಿ ಹೊಡಿಸಿ ಸೊಳ್ಳೆಯ ಕೈಯಲ್ಲಿ ಸೋಬಾನೆ ಹೇಳಿಸಿ ಸಣ್ಣಿ ಮದುವೆ ಶನಿವಾರ ಊಟಕ್ಕೆ ಬನ್ನಿ ಬುಧವಾರ. ಈ ಹಾಡು ಯಾರಿಗೆ ಗೊತ್ತಿಲ್ಲ ಹೇಳಿ ಈ ಹಾಡು ಕೇಳಿದಾಗಲೆಲ್ಲಾ ಅನೇಕರಿಗೆ ಅನೇಕರಿಗೆ ಬಾಲ್ಯ ನೆನಪಾಗುವುದು. ಈ ಜಾನಪದ ಹಾಡನ್ನು ಬಹುತೇಕ 90ರ ದಶಕದ ಹಾಗೂ ಅದಕ್ಕೂ ಹಿಂದಿನ ಹಾಗೂ ಮುಂದಿನ ಮಕ್ಕಳು ತಮ್ಮ ಶಾಲಾ ದಿನಗಳಲ್ಲಿ ಕೇಳಿರ್ತಾರೆ ಹಾಡಿರುತ್ತಾರೆ. ಆದರೆ ಪದ್ಯ ರೂಪದಲ್ಲಿದ್ದ ಇದ್ದ ಈ ಹಾಡಿಗೆ ಅನಿಮೇಷನ್ ಟಚ್‌ ನೀಡಲಾಗಿದ್ದು, ವೀಡಿಯೋ ಭಾರಿ ವೈರಲ್ ಆಗ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಭಾರಿ ವೈರಲ್ ಆಗುತ್ತಿದ್ದು, ಅನೇಕರು ಈ ಹಾಡು ಕೇಳಿ ತಮ್ಮ ಬಾಲ್ಯವನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ.

90ರ ದಶಕದ ಮಕ್ಕಳ ಬಾಲ್ಯದ ಮೆಚ್ಚಿನ ಹಾಡಿಗೆ ಅನಿಮೇಷನ್ ಟಚ್

jmrchithravan ಎಂಬ ಇನ್ಸ್ಟಾಗ್ರಾಮ್‌ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದೆ. ವೀಡಿಯೋದಲ್ಲಿ ಈ ಹಾಡಿನಲ್ಲಿ ಬರುವ ಎಲ್ಲಾ ಪ್ರಾಣಿಗಳಿಗೆ ಆ ಹಾಡಿಗೆ ತಕ್ಕಂತೆ ವೇಷ ಭೂಷಣ ತೊಡಿಸಿ ಅವುಗಳನ್ನು ಸಿಂಗಾರಗೊಳಿಸಿ ಹಾಡಿಗೆ ತಕ್ಕಂತೆ ನರ್ತಿಸುವಂತೆ ಮಾಡಲಾಗಿದೆ. ಇವರು ಮಕ್ಕಳಿಗೆ ಇಷ್ಟವಾಗುವ ಅನೇಕ ಕನ್ನಡದ ಇದೇ ರೀತಿಯ ಜಾನಪದ ಹಾಡುಗಳಿಗೆ ಹೀಗೆ ಅನಿಮೇಷನ್ ಮೂಲಕ ಜೀವ ಕೊಟ್ಟಿದ್ದು, ಪ್ರತಿಯೊಂದು ಹಾಡನ್ನು ಕೇಳುವುದಕ್ಕೆ ಖುಷಿಯಾಗುತ್ತಿದೆ. 90 ದಶಕದ ಕನ್ನಡ ಮಾಧ್ಯಮ ಶಾಲೆಯ ಮಕ್ಕಳಿಗೆ ಈ ಹಾಡು ಅವರನ್ನು ಮತ್ತೆ ಬಾಲ್ಯಕ್ಕೆ ಕೊಂಡೊಯ್ಯುವಂತೆ ಮಾಡಿದೆ.

ಕಪ್ಪೆ ಕರ ಕರ, ಕನ್ನಡ ಮಕ್ಕಳ ರೈಮ್ಸ್ ಹಾಡು, ಇದರಲ್ಲಿ ಪ್ರಾಣಿಗಳ ಮದುವೆಗೆ ಕಾಡಿನ ಪ್ರಾಣಿಗಳೆಲ್ಲ ಬಂದು ಸೇರಿ ಸಂಭ್ರಮಿಸಿ ಭೋಜನಕ್ಕೆ ತಯಾರಿಯೂ ಸೇರಿದಂತೆ ಮದುವೆಯ ಸಕಲ ಸಿದ್ಧತೆಗೆ ಶ್ರಮಿಸುವುದನ್ನು ಕಾಣಬಹುದು. ಮೋಜು, ಸಂಗೀತ ಮತ್ತು ಸಂತೋಷದಿಂದ ತುಂಬಿರುವ ವರ್ಣರಂಜಿತ ಕನ್ನಡ ಪ್ರಾಸಕ್ಕೆ ಸುಸ್ವಾಗತ!

ಕರ ಕರ ಎಂದು ಹೇಳುವ ಕಪ್ಪೆಗಳಿಂದ ಹಿಡಿದು, ಮೊಲಗಳು ತುಪ್ಪ ಜಲಿ ಜಲಿ ಬೇಯಿಸುವುದು ಮತ್ತು ಅಳಿಲುಗಳು ಮಾವಿನ ಹಣ್ಣುಗಳನ್ನು ಕತ್ತರಿಸುವುದು ಮಾವಿನ ಓಟೆ ಹೀಗೆ ಹಾಡಿನ ಪ್ರತಿ ಸಾಲು ನಗು ಮತ್ತು ಲಯವನ್ನು ತರುತ್ತದೆ ಎಂದು ಈ ವೀಡಿಯೋ ಪೋಸ್ಟ್ ಮಾಡಿ ಬರೆಯಲಾಗಿದೆ.

ಅದ್ಧೂರಿ ಹಳ್ಳಿಯ ಮದುವೆಯನ್ನು ವೀಕ್ಷಿಸಿ , ಮರದಲ್ಲಿ ಕೋಟೆ, ಹದ್ದಿನ ಕೈಯಲ್ಲಿ ಸುದ್ದಿ ಕಳ್ಸಿ, ಕಾಗೆ ಕೈಯಲ್ಲಿ ಕಂಕಣ ಕಟ್ಸಿ, ಮತ್ತು ಸೊಳ್ಳೆ ಕೈಯಲ್ಲಿ ಸೊಬಾನ ಹೇಳಿ!

finally meet our shy bride ಸಣ್ಣಿ ಮದುವೆ ಶನಿವಾರ! ಈ ವೀಡಿಯೊ ಸಾಂಪ್ರದಾಯಿಕ ಹಳ್ಳಿ ಜೀವನ, ಮುದ್ದಾಗಿ ಮಾತನಾಡುವ ಪ್ರಾಣಿಗಳು ಮತ್ತು ಮದುವೆಯ ಮೋಜನ್ನು ಮಿಶ್ರಣ ಮಾಡುವ 3D ಅನಿಮೇಟೆಡ್ ಕನ್ನಡ ಪ್ರಾಸವಾಗಿದ್ದು ಶಾಲಾಪೂರ್ವ ಮಕ್ಕಳು ಮತ್ತು ಸಾಂಸ್ಕೃತಿಕ ಕಲಿಕೆಗೆ ಸೂಕ್ತವಾಗಿದೆ ಎಂದು ಬರೆಯಲಾಗಿದೆ. ಈ ಹಾಡಿನ ಪ್ರತಿ ಸಾಲನ್ನು ಕಣ್ಣಿಗೆ ಕಟ್ಟಿದ್ದಂತೆ ಸಿನಿಮಾ ರೂಪಕ್ಕೆ ಇಳಿಸಿರುವುದನ್ನು ನೀವು ನೋಡಬಹುದಾಗಿದೆ. 2ರಿಂದ 7 ವರ್ಷ ಪ್ರಾಯದ ಮಕ್ಕಳಿಗೆ ಇದು ಸೂಕ್ತವಾಗಿದೆ.

View post on Instagram

ಈ ಕಪ್ಪೆಕರಕರ ಹಾಡನ್ನು ವೀಡಿಯೋ ರೂಪದಲ್ಲಿ ನೋಡಿದ ಅನೇಕರು ಬಹಳ ಖುಷಿ ಪಟ್ಟಿದ್ದಾರೆ. ಬಾಲ್ಯದಲ್ಲಿ ಈ ಹಾಡನ್ನು ಕೇಳಿದವರೆಲ್ಲರೂ ಒಂದು ಲೈಕ್ ಮಾಡಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅನೇಕರು ಊಟ ಬುಧವಾರ ಯಾಕೆ ಎಂದು ಒಬ್ಬರು ಕೇಳಿದ್ದು, ಬಾಲ್ಯದಲ್ಲಿ ಈ ಬಗ್ಗೆ ಯೋಚನೆನೆ ಮಾಡಿರಲಿಲ್ಲ ಎಂದಿದ್ದಾರೆ. ಅದಕ್ಕೆ ಕೆಲವರು ಬೀಗರ ಊಟಕ್ಕೆ ಎಂದು ಕಾಮೆಂಟ್ ಮಾಡಿದ್ರೆ ಮತ್ತೊಬ್ಬರು ಬುಧವಾರ ಕಲರ್ ಡ್ರೆಸ್ ಅದ್ಕೆ ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಎಲ್ಲರಿಗೂ ಖುಷಿ ಕೊಟ್ಟಿದ್ದಂತು ನಿಜ. ಈ ವೀಡಿಯೋವನ್ನು ನೀವು ಒಮ್ಮೆ ನೋಡಿ.

ಇದನ್ನೂ ಓದಿ: ತಂದೆಯ ಸ್ಥಾನದಲ್ಲಿ ನಿಂತು ವಿಧವೆ ಸೊಸೆಯ ಮದ್ವೆ ಮಾಡಿದ ಮಾವ

ಇದನ್ನೂ ಓದಿ: ತಲೆಗೆ ಬೀಗ ಹೆಂಡ್ತಿ ಕೈಲಿ ಕೀ: ಕೊನೆಗೂ ಸಿಗರೇಟ್ ಚಟದಿಂದ ಹೊರಬಂದ ವ್ಯಕ್ತಿ