MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • Kalaburagi: ಮೂವರು ಹೆಂಡ್ತಿಯರಿದ್ರೂ 15ರ ಬಾಲಕಿಯನ್ನು ಗರ್ಭಿಣಿ ಮಾಡಿದ ಕಾಮುಕ ಮಾಲೀಕ

Kalaburagi: ಮೂವರು ಹೆಂಡ್ತಿಯರಿದ್ರೂ 15ರ ಬಾಲಕಿಯನ್ನು ಗರ್ಭಿಣಿ ಮಾಡಿದ ಕಾಮುಕ ಮಾಲೀಕ

ಚಿಂಚೊಳ್ಳಿ ತಾಲೂಕಿನಲ್ಲಿ, ತನ್ನ ಬಳಿ ಕೆಲಸ ಮಾಡುತ್ತಿದ್ದ ಕಾರ್ಮಿಕನ 15 ವರ್ಷದ ಅಪ್ರಾಪ್ತ ಮಗಳ ಮೇಲೆ ಅತ್ಯಾ*ಚಾರ ಎಸಗಿದ ಪಾಲಿಶಿಂಗ್ ಘಟಕದ ಮಾಲೀಕನನ್ನು ಬಂಧಿಸಲಾಗಿದೆ. ಈ ಕೃತ್ಯದಿಂದ ಬಾಲಕಿ ಗರ್ಭಿಣಿಯಾಗಿದ್ದಾಳೆ

1 Min read
Author : Kannadaprabha News
Published : Oct 27 2025, 02:48 PM IST
Share this Photo Gallery
  • FB
  • TW
  • Linkdin
  • Whatsapp
15
ಚಿಂಚೊಳ್ಳಿ
Image Credit : our own

ಚಿಂಚೊಳ್ಳಿ

ಕಲಬುರಗಿ: ಚಿಂಚೊಳ್ಳಿ ತಾಲೂಕಿನ ಮಿರಿಯಾಣ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಕಲ್ಲು ಪರಸಿಯ ಪಾಲಿಶಿಂಗ್ ಮಾಲೀಕನೊಬ್ಬ ತನ್ನ ಪಾಲಿಸಿಂಗ್‌ಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನ ಅಪ್ರಾಪ್ತ ಪುತ್ರಿಯ ಮೇಲೆ ಅತ್ಯಾ*ಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಚಿಂಚೋಳಿ ಸಿಪಿಐ ಕಪಿಲದೇವ ತಿಳಿಸಿದ್ದಾರೆ.

25
15 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾ*ಚಾರ
Image Credit : Getty

15 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾ*ಚಾರ

ಮಿರಿಯಾಣ ಗ್ರಾಮದಲ್ಲಿರುವ ಕಲ್ಲು ಪರಸಿ ಪಾಲಿಶಿಂಗ್‌ದಲ್ಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದ ತಂದೆ ತಾಯಿ ಜೊತೆ ಮಗಳಿದ್ದಳು. ಕಾಮುಕ ಮಾಲೀಕ ಸದ್ಧಾಂ ಅಬ್ದುಲ್ ಹಮೀದ್ ಅಲಿಯಾಸ್ ಇಮ್ರಾನ್ (33) ಎಂಬಾತ 15 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾ*ಚಾರ ನಡೆಸಿದ್ದರಿಂದ 6 ತಿಂಗಳು ಗರ್ಭಿಣಿ ಆಗಿದ್ದಾಳೆ. ಕಳೆದ ಏಪ್ರೀಲ್ 20ರಂದು ಅತ್ಯಾ*ಚಾರ ನಡೆಸಿದ್ದನು. ಆದರೆ ಮಿರಿಯಾಣ ಪೋಲಿಸ್ ಠಾಣೆ ಯಲ್ಲಿ ಅ.24ರಂದು ದಾಖಲಾಗಿದೆ.

Related Articles

Related image1
ಗಂಡನ ಆಲ್ಕೋಹಾಲ್‌ ಚಟಕ್ಕೆ ಬಿಟ್ಟುಹೋದ ಹೆಂಡತಿ, 14 ವರ್ಷದ ಮಗಳ ಮೇಲೆ ಹಲವು ದಿನ ರೇ*ಪ್‌ ಮಾಡಿದ ಗಂಡ!
Related image2
ಪ.ಬಂಗಾಳದಲ್ಲಿ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇ*P, ಕಾಲೇಜು ಎದುರಲ್ಲೇ ಘಟನೆ
35
ಮಾಲೀಕ ಸದ್ಧಾಂ ಅಬ್ದುಲ್ ಹಮೀದ್
Image Credit : others

ಮಾಲೀಕ ಸದ್ಧಾಂ ಅಬ್ದುಲ್ ಹಮೀದ್

ಮಾಲೀಕ ಸದ್ಧಾಂ ಅಬ್ದುಲ್ ಹಮೀದ್ ಮಿರಿಯಾಣ ಈತ ತನ್ನ ಪಾಲಿಸಿಂಗ್ ಮಶಿನ್‌ನಲ್ಲಿ ಕೆಲಸ ಮಾಡುವ ಮಹಿಳೆಯರನ್ನು ಪುಸಲಾಯಿಸಿ ದೈಹಿಕ ಸಂಪರ್ಕವನ್ನು ಮಾಡುತ್ತಿದ್ದನು ಭೋವಿ, ಕಬ್ಬಲಿಗ ಮತ್ತು ಮುಸ್ಲಿಂ ಸಮುದಾಯದ ಮಹಿಳೆಯರ ಮೇಲೆ ಲೈಂ*ಗಿಕವಾಗಿ ಬಳಸಿಕೊಂಡಿದ್ದರಿಂದ ಈತ ಮೂವರು ಮಹಿಳೆಯರನ್ನು ಮದುವೆ ಮಾಡಿಕೊಂಡಿದ್ದಾನೆ.

45
ಕಾಮುಕ ಮಾಲೀಕ
Image Credit : stockphoto

ಕಾಮುಕ ಮಾಲೀಕ

ತೆಲಂಗಾಣ ರಾಜ್ಯದ ತಾಂಡೂರಿನಲ್ಲಿ ಭೋವಿ ಮತ್ತು ಕಬ್ಬಲಿಗ ಮಹಿಳೆಯರಿಗೆ ಮನೆ ಮಾಡಿಟ್ಟಿದ್ದನು. ಮುಸ್ಲಿಂ ಸಮುದಾಯದ ಮಹಿಳೆಗೆ ಮಿರಿಯಾಣದಲ್ಲಿ ಮನೆ ಮಾಡಿದ್ದನು. ಆದರೆ ಕಾಮುಕ ತನ್ನ ಪಾಲಿಸಿಂಗ್ ಮಶಿನ್‌ನಲ್ಲಿ ಕಲ್ಲುಪರಸಿ ಕೆಲಸ ಮಾಡುವ ಮಹಿಳೆಯರನ್ನು ಲೈಂ*ಗಿಕವಾಗಿ ಬಳಸಿಕೊಳ್ಳುತ್ತಿದ್ದನು ಎಂಬ ಆರೋಪ ಕೇಳಿ ಬಂದಿದೆ.

55
ಪೋಕ್ಸೋ
Image Credit : our own

ಪೋಕ್ಸೋ

15 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾ*ಚಾರ ಮಾಡಿ ಗರ್ಭಿಣಿ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಮಿರಿಯಾಣದಲ್ಲಿ ಶನಿವಾರ ಬಂಧಿಸಲಾಗಿದೆ ಎಂದು ಸಿಪಿಐ ತಿಳಿಸಿದ್ದಾರೆ. ಅಪ್ರಾಪ್ತ ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಆರೋಪಿ ವಿರುದ್ದ ಪೋಕ್ಸೋ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಕಲಬುರಗಿ
ಅತ್ಯಾಚಾರ ಪ್ರಕರಣ
ಪೋಕ್ಸೋ
ಕ್ರೈಮ್ ನ್ಯೂಸ್

Latest Videos
Recommended Stories
Recommended image1
ದ್ವಿತೀಯ ಪಿಯುಸಿ ಪರೀಕ್ಷೆಗೂ ಮುನ್ನವೇ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ: ವಿಧಿಯಾಟಕ್ಕೆ ಬಲಿಯಾದ ಚಿಕ್ಕೋಡಿಯ ಭೂಮಿಕಾ!
Recommended image2
ಮದ್ವೆಗೆ ಕೆಲವೇ ದಿನ ಇರೋವಾಗ ಜ್ಯೋತಿಷಿ ಮಾತು ನಂಬಿ ನೇಣು ಬಿಗಿದುಕೊಂಡ ಬೆಂಗಳೂರು ಟೆಕ್ಕಿ
Recommended image3
ಮಂಡ್ಯ ಜಿಲ್ಲೆಯ ತಗ್ಗಹಳ್ಳಿ ಗ್ರಾಮ ಪಂಚಾಯ್ತಿ ಖಜಾನೆ ರಹಸ್ಯ: ₹53 ಲಕ್ಷ ವಾಪಸ್ ಬಂದ ಕಥೆ
Related Stories
Recommended image1
ಗಂಡನ ಆಲ್ಕೋಹಾಲ್‌ ಚಟಕ್ಕೆ ಬಿಟ್ಟುಹೋದ ಹೆಂಡತಿ, 14 ವರ್ಷದ ಮಗಳ ಮೇಲೆ ಹಲವು ದಿನ ರೇ*ಪ್‌ ಮಾಡಿದ ಗಂಡ!
Recommended image2
ಪ.ಬಂಗಾಳದಲ್ಲಿ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇ*P, ಕಾಲೇಜು ಎದುರಲ್ಲೇ ಘಟನೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved