Viral whatsapp chat with father: ಐಐಟಿ ಪದವೀಧರನೊಬ್ಬನಿಗೆ ಅಮೆಜಾನ್‌ನಲ್ಲಿ ಉದ್ಯೋಗ ಸಿಕ್ಕಾಗ, ಆತ ತನ್ನ ತಂದೆಗೆ ಈ ವಿಷಯ ತಿಳಿಸುತ್ತಾನೆ. ಆದರೆ ಆತನ ತಂದೆಯ ಪ್ರತಿಕ್ರಿಯೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಹಾಗಿದ್ರೆ ಅವರು ಹೇಳಿದ್ದೇನು?
ಮಗನ ಸಾಧನೆಯ ಬಗ್ಗೆ ಅಪ್ಪನ ರಿಯಾಕ್ಷನ್ ವೈರಲ್
ಮಕ್ಕಳ ಸಾಧನೆಯ ಬಗ್ಗೆ ಪೋಷಕರು ಖುಷಿ ಪಡುತ್ತಾರೆ. ಆದರೆ ಹೇಳಿಕೊಳ್ಳೋದು ತೀರಾ ಕಡಿಮೆ. ಬಹುಶಃ ಮನೆಯಲ್ಲಿ ಅಮ್ಮ ಬಂಧುಮಿತ್ರರ ಜೊತೆ ಆಕೆಯ ಅಕ್ಕತಂಗಿಯರ ಜೊತೆ ಮಕ್ಕಳ ಸಾಧನೆಯನ್ನು ಆಕೆ ಹೇಳಿಕೊಂಡು ಖುಷಿ ಪಡುತ್ತಾಳೆ. ಆದರೆ ತಂದೆ ಮಾತ್ರ ಇದಕ್ಕೆ ತದ್ವಿರುದ್ಧ ಅವರು ಒಳಗೊಳಗೆ ಖುಷಿಪಟ್ಟರು ಮಕ್ಕಳ ಮುಂದೆ ಈ ವಿಚಾರದ ಬಗ್ಗೆ ಏನನ್ನೂ ಹೇಳಿಕೊಳ್ಳುವುದಿಲ್ಲ. ಏನು ಮಾಡಿದರು ಅವರ ಉತ್ತರ ಹೌದಾ ಓಕೆ ಎಂದಷ್ಟೇ ನಿರ್ಭಾವುಕರಾಗಿ ಉತ್ತರಿಸುತ್ತಾರೆ.(ಎಲ್ಲರೂ ಅಲ್ಲ) ಕೆಲವು ಸುಶಿಕ್ಷಿತರು ಎಲೆಯಿಂದ ಹಿಡಿದು ಬೇರಿನವರೆಗೆ ಎಲ್ಲ ವಿಚಾರಗಳ ವಿವರ ಕೇಳಿ ಪಡೆಯುತ್ತಾರೆ. ಆದರೆ ಕೆಲವು ಪೋಷಕರು ವಿಶೇಷವಾಗಿ ಅಪ್ಪ ಮಕ್ಕಳ ಸಾಧನೆ ಬಗ್ಗೆ ಜಾಸ್ತಿ ವಿಚಾರಿಸಿಕೊಳ್ಳೋದು ಕಡಿಮೆ ಅದೇ ರೀತಿ ಐಐಟಿ ಗ್ರಾಜ್ಯುಯೇಟ್ ಒಬ್ಬರು ತನಗೆ ಉದ್ಯೋಗ ಸಿಕ್ಕಾಗ ಅಪ್ಪನ ರಿಯಾಕ್ಷನ್ ಹೇಗಿತ್ತು ಎಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಮೇಜಾನ್‌ನಲ್ಲಿ ಕೆಲಸ ಪಡೆದ ಮಗ
ಐಐಟಿ ಬಿಹೆಚ್‌ಯುವಿನಲ್ಲಿ ಪದವಿ ಪಡೆದಿರುವ ಶಿವಾಂಶು ರಂಜನ್ ಎಂಬುವವಿಗೆ ಇತ್ತೀಚೆಗೆ ಆಮೇಜಾನ್‌ನಲ್ಲಿ ಕೆಲಸ ಸಿಕ್ಕಿತ್ತು ಎಸ್‌ಟಿಇ-1 ಆಗಿ ಅವರಿಗೆ ಉದ್ಯೋಗ ಸಿಕ್ಕಿತ್ತು . ಇದೇ ವಿಚಾರವನ್ನು ಅವರು ತನ್ನ ತಂದೆಗೆ ಮೆಸೇಜ್ ಮಾಡಿ ತಿಳಿಸಿದಾಗ ಅವರು ನೀಡಿದ ರಿಯಾಕ್ಷನ್ ವೈರಲ್ ಆಗಿದೆ. ಅವರು ಕೇವಲ ಓಕೆ ಎಂದಷ್ಟೇ ಹೇಳಿದ್ದಾರೆ. ವೇತನ ಎಷ್ಟು ಎಂದಾಗಲಿ ಎಲ್ಲಿ ಉದ್ಯೋಗ ಎಂದಾಗಲಿ ಅವರು ಹೆಚ್ಚೇನು ಕೇಳಿಲ್ಲ. ಹೀಗಾಗಿ ಈ ಪೋಸ್ಟ್ ಸಾಕಷ್ಟು ವೈರಲ್ ಆಗಿದೆ. ತನ್ನ ತಂದೆ ತನ್ನ ಉದ್ಯೋಗದ ಬಗ್ಗೆ ಸಾಕಷ್ಟು ಉತ್ಸುಕರಾಗಿರ್ತಾರೆ ಎಂದು ಅವರು ಭಾವಿಸಿದ್ದರು. ಆದರೆ ಏನನ್ನೂ ಕೇಳದೇ ಇದ್ದಿದ್ದು, ಶಿವಾಂಶು ರಂಜನ್ ಅವರ ಬೇಸರಕ್ಕೆ ಕಾರಣವಾಗಿದೆ.
ಯುವಕನ ಪೋಸ್ಟ್ ಭಾರಿ ವೈರಲ್
ಸಾಮಾನ್ಯವಾಗಿ ಮಕ್ಕಳಿಗೆ ಉದ್ಯೋಗ ಸಿಕ್ಕರೆ ಪೋಷಕರು ಬಹಳ ಉತ್ಸುಕರಾಗಿರ್ತಾರೆ ಎಲ್ಲಿ ಹೇಗೆ ಏಕೆ ಎಂದು ಕೇಳ್ತಾರೆ. ಆದರೆ ಇಲ್ಲಿ ಅವರೇನು ಕೇಳೆ ಇಲ್ಲ ಹೀಗಾಗಿ ಪೋಸ್ಟ್ ಸಾಕಷ್ಟು ವೈರಲ್ ಆಗಿದೆ. ಅನೇಕರು ಇದು ಭಾರತೀಯ ಪೋಷಕರು ಸಾಮಾನ್ಯವಾಗಿ ಇರೋ ರೀತಿ ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಕೆಲವರು ತಮ್ಮ ಅನುಭವ ಹೇಳಿಕೊಂಡಿದ್ದಾರೆ.
ನನಗೆ ಉದ್ಯೋಗ ಸಿಕ್ಕ ಮೇಲೆ ಇದು ನನ್ನ ಟಿಪಿಕಲ್ ತಂದೆಯ ರಿಯಾಕ್ಷನ್ ಎಂದು ಅವರು ವಾಟ್ಸಾಪ್ ಚಾಟ್ ಸ್ಕ್ರೀನ್ಶಾಟ್ ಶೇರ್ ಮಾಡಿದ್ದಾರೆ. ಇದಕ್ಕೆ ಅನೇಕರು ಪ್ರತಿಕ್ರಿಯಿಸಿದ್ದಾರೆ. ನಿಮ್ಮ ತಂದೆ ಇದನ್ನೆಲ್ಲಾ ನೋಡಿದ್ದಾರೆ. ಬಹುಶಃ ಅದಕ್ಕಾಗಿಯೇ ಅದು ಅವರನ್ನು ಅಚ್ಚರಿಗೊಳಿಸಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ನೀವು ಅಮೇಜಾನ್ ಎಂದಾಗ ತಂದೆ ಡೆಲಿವರಿ ಬಾಯ್ ಅಂದ್ಕೊಂಡಿರಬಹುದು ಎಂದು ತಮಾಷೆ ಮಾಡಿದ್ದಾರೆ. ಅವರು ಪ್ರತಿಕ್ರಿಯಿಸದೇ ಇದ್ದರೂ ಅವರು ತುಂಬಾ ಖುಷಿ ಪಟ್ಟಿರ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನನ್ನ ತಂದೆ ನನಗೆ ಎಲ್ಲರ ಮುಂದೆ ಅವಮಾನಿಸುತ್ತಿದ್ದರು ಅದಕ್ಕೆ ಹೋಲಿಸಿದರೆ ನಿಮ್ಮ ತಂದೆ ಉತ್ತಮ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಮಾನಸಿಕ ಅಸ್ವಸ್ಥ ಭಿಕ್ಷುಕಿ ಬಳಿ ಲಕ್ಷಕ್ಕೂ ಅಧಿಕ ಹಣ ಪತ್ತೆ
ಇದನ್ನೂ ಓದಿ: ಕನ್ನಡಿಗರು ನಾಚುವಂತೆ ಕನ್ನಡ ಮಾತಾಡ್ತಿದ್ದಾರೆ ತೇಜಸ್ವಿ ಸೂರ್ಯ ಪತ್ನಿ: ಗಾಯಕಿ ಸಿವಶ್ರೀ ಕನ್ನಡ ಕಲಿತಿದ್ದು ಹೇಗೆ?
