LIVE NOW
Published : Feb 24, 2026, 06:37 AM ISTUpdated : Feb 24, 2026, 11:58 PM IST

Karnataka News Live: 'ನಮ್ಮ ಹನುಮ ಕನ್ನಡಿಗ' - ರಿಷಬ್ ಮಾತಿಗೆ ಜಗ್ಗೇಶ್ ರೋಮಾಂಚನ, ಏನು ಹೇಳಿದ್ರು ನೋಡಿ!

ಸಾರಾಂಶ

ಕಾರವಾರ: ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರದ ಬೈಲೂರಿನಲ್ಲಿ ಹಿಂದೂಗಳ ಐದಾರು ಮನೆಗಳ ಮೇಲೆ ಅಪ್ರಾಪ್ತ ಅನ್ಯಧರ್ಮೀಯ ಯುವಕರು ಸೋಮವಾರ ರಾತ್ರಿ ಕಲ್ಲು ತೂರಾಟ ನಡೆಸಿದ್ದು, ಇಬ್ಬರು ಆರೋಪಿಗಳನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದರಿಂದ ಆ ಪ್ರದೇಶದಲ್ಲಿ ದ್ವೇಷಮಯ ವಾತಾವರಣ ನಿರ್ಮಾಣವಾಗಿದೆ. ಸೋಮವಾರ ರಾತ್ರಿ 10 ಗಂಟೆ ನಂತರ 3 ಬೈಕ್‌ನಲ್ಲಿ ಬಂದ 6 ಜನ ಅನ್ಯ ಧರ್ಮೀಯ ಅಪ್ರಾಪ್ತರು ಬೈಲೂರಿನ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದರು. ಬೈಲೂರಿನ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಂತಹ ಘಟನೆ ನಡೆದಿದ್ದು ಸ್ಥಳೀಯರು ಇಬ್ಬರು ಅಪ್ರಾಪ್ತರನ್ನು ಹಿಡಿದು ಮುರ್ಡೇಶ್ವರ ಪೊಲೀಸರಿಗೆ ಒಪ್ಪಿಸಿದರು. 

ಉಳಿದ ನಾಲ್ವರು ಅಲ್ಲಿಂದ ಪರಾರಿಯಾಗಿದ್ದರು. ಬಳಿಕ ಪೊಲೀಸರು ಉಳಿದ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಪೊಲೀಸ್‌ ವರಿಷ್ಠಾಧಿಕಾರಿ ಸಹ ಸ್ಥಳಕ್ಕೆ ತೆರಳಿದ್ದಾರೆ. ಸದ್ಯ ಮರುಡೇಶ್ವರ, ಬೈಲೂರು ತೆಂಗಾರು ಪ್ರದೇಶದಲ್ಲಿ ಬೂದಿ ಮುಚ್ಚಿದ ಕೆಂಡದ ವಾತಾವರಣ ನಿರ್ಮಾಣವಾಗಿದ್ದು ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ.

11:58 PM (IST) Feb 24

'ನಮ್ಮ ಹನುಮ ಕನ್ನಡಿಗ' - ರಿಷಬ್ ಮಾತಿಗೆ ಜಗ್ಗೇಶ್ ರೋಮಾಂಚನ, ಏನು ಹೇಳಿದ್ರು ನೋಡಿ!

ಮಂತ್ರಾಲಯದ ಗುರು ವೈಭವೋತ್ಸವದಲ್ಲಿ ಭಾಗವಹಿಸಿದ್ದ ನಟ ಜಗ್ಗೇಶ್, ರಿಷಬ್ ಶೆಟ್ಟಿ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ರಿಷಬ್ ಅವರ ಸಾಧನೆಯ ಹಿಂದೆ ದೈವ ಪ್ರೇರಣೆ ಇದೆ ಎಂದ ಅವರು, 'ನಮ್ಮ ಹನುಮ ಕನ್ನಡಿಗ' ಎಂಬ ರಿಷಬ್ ಮಾತಿನಿಂದ ತಮಗೆ ರೋಮಾಂಚನವಾಯಿತು ಎಂದು ಭಾವುಕರಾಗಿ ನುಡಿದರು.
Read Full Story

11:21 PM (IST) Feb 24

Bengaluru Crime - ಕೈಮುಗಿದ್ರೂ ಬಿಡಲಿಲ್ಲ.. ತಲೆಗೆ ಹೊಡೆದು ಮದ್ಯ ಸುರಿದು ವಿಕೃತಿ! ಏನಾಗ್ತಿದೆ ರಾಜ್ಯದಲ್ಲಿ?

ರಾಮನಗರದ ತಟ್ಟಗುಪ್ಪೆ ಗ್ರಾಮದ ಬಳಿ ರೌಡಿ ಶೀಟರ್ ನಿಮಾನ್ಸ್ ರಾಜ ಮತ್ತು ಆತನ ಸಹಚರರು ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಅಮಾನವೀಯ ಕೃತ್ಯವನ್ನು ವಿಡಿಯೋ ಮಾಡಿ ವೈರಲ್ ಮಾಡಿದ್ದು, ಇದೀಗ ಕಗ್ಗಲೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read Full Story

11:04 PM (IST) Feb 24

ವಯಸ್ಸು 90 ಆದ್ರೂ ತರುಣರ ನಾಚಿಸುವಂತೆ ಬಿಂದಾಸ್ ಆಗಿ ಕಾರು ಡ್ರೈವ್ ಮಾಡ್ತಾರೆ ಈ ಅಜ್ಜಿ

ಜಮ್ಮು ಕಾಶ್ಮೀರದಲ್ಲಿ 90 ವರ್ಷದ ಅಜ್ಜಿಯೊಬ್ಬರು ಆತ್ಮವಿಶ್ವಾಸದಿಂದ ಕಾರು ಚಲಾಯಿಸುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಈ ದೃಶ್ಯವನ್ನು ನೋಡಿದ ವ್ಲಾಗರ್ ಒಬ್ಬರು ವಿಡಿಯೋ ಮಾಡಿ ಹಂಚಿಕೊಂಡಿದ್ದು, ಅಜ್ಜಿಯ ಜೀವನೋತ್ಸಾಹಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
Read Full Story

10:28 PM (IST) Feb 24

ರಾಯರ ಸನ್ನಿಧಿಯಲ್ಲಿ ಕಾಂಗ್ರೆಸ್ ವಿರುದ್ಧ ಅಶ್ವತ್ಥ್ ನಾರಾಯಣ ಕಿಡಿ - ದೇಶದಲ್ಲೇ ನಂಬರ್ 1 ಭ್ರಷ್ಟ ಸರ್ಕಾರ ಎಂದು ವಾಗ್ದಾಳಿ!

ಮಂತ್ರಾಲಯದ ಗುರು ವೈಭವೋತ್ಸವದಲ್ಲಿ ಭಾಗವಹಿಸಿದ ಮಾಜಿ ಸಚಿವ ಅಶ್ವತ್ಥ್ ನಾರಾಯಣ, ರಾಯರ ದರ್ಶನ ಪಡೆದರು. ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕರ್ನಾಟಕವನ್ನು ದೇಶದಲ್ಲೇ ನಂಬರ್ ಒನ್ ಭ್ರಷ್ಟ ರಾಜ್ಯವನ್ನಾಗಿ ಮಾಡಿದ್ದಾರೆ ಎಂದು ಆರೋಪಿಸಿದರು.

Read Full Story

09:47 PM (IST) Feb 24

ಜೈ ಹನುಮಾನ್ ಮುಹೂರ್ತ ಬೆನ್ನಲ್ಲೇ ಮಂತ್ರಾಲಯಕ್ಕೆ ರಿಷಭ್ ಭೇಟಿ, ರಾಯರ ಕುರಿತು ಸಿನಿಮಾ ಮಾಡ್ತಾರಾ ಡಿವೈನ್ ಸ್ಟಾರ್, ಹೇಳಿದ್ದೇನು?

Rishab Shetty Visits Mantralayam ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಡೆಯುತ್ತಿರುವ ಗುರು ವೈಭವೋತ್ಸವದ ಸಂಭ್ರಮಕ್ಕೆ ಸ್ಯಾಂಡಲ್‌ವುಡ್ ಸ್ಟಾರ್ ರಿಷಭ್ ಶೆಟ್ಟಿ ಭೇಟಿ ನೀಡಿದ್ದು, ಈ ಸುಂದರ ಕ್ಷಣಗಳ ಫೋಟೋ ಗ್ಯಾಲರಿ ಮತ್ತು ವರದಿ ಇಲ್ಲಿದೆ ನೋಡಿ!

Read Full Story

08:57 PM (IST) Feb 24

ಬೆಂಗಳೂರಲ್ಲಿ ಅಮೆಜಾನ್ ಬೆನ್ನಲ್ಲೇ, ಆಪಲ್ ಕಚೇರಿ ವಿಸ್ತರಣೆ - ವಾರ್ಷಿಕ ₹108 Cr ಬಾಡಿಗೆ, ದಶಕಕ್ಕೆ 1,333 ಕೋಟಿ ಡೀಲ್!

ಟೆಕ್ ದೈತ್ಯ ಆಪಲ್ ಸಂಸ್ಥೆಯು ಬೆಂಗಳೂರಿನ 'ಎಂಬಸಿ ಜೆನಿತ್' ಕಚೇರಿ ಸಂಕೀರ್ಣದಲ್ಲಿ ಹೆಚ್ಚುವರಿಯಾಗಿ 1.21 ಲಕ್ಷ ಚದರ ಅಡಿ ಜಾಗವನ್ನು ಬಾಡಿಗೆಗೆ ಪಡೆದುಕೊಂಡಿದೆ. ಈ 10 ವರ್ಷಗಳ ಬೃಹತ್ ಒಪ್ಪಂದದ ಅಡಿಯಲ್ಲಿ ಆಪಲ್ ಒಟ್ಟು 1,333 ಕೋಟಿ ರೂಪಾಯಿ ಬಾಡಿಗೆ ಪಾವತಿಸಲಿದೆ.

Read Full Story

08:43 PM (IST) Feb 24

Karnataka Rains - ಬಂಗಾಳಕೊಲ್ಲಿ ವಾಯುಭಾರ ಕುಸಿತ; ಉತ್ತರಕನ್ನಡದಲ್ಲಿ ಗುಡುಗು ಸಹಿತ ಮಳೆ, ಕಾಫಿನಾಡಲ್ಲೂ ವರ್ಷಧಾರೆ!

ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದಿಂದಾಗಿ ಉತ್ತರಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅಕಾಲಿಕ ಮಳೆ ಸುರಿದಿದೆ. ಈ ಮಳೆಯು ಕಾಫಿನಾಡಿನ ಬೆಳೆಗಾರರಿಗೆ, ವಿಶೇಷವಾಗಿ ಹೂ ಬಿಡುವ ಹಂತದಲ್ಲಿರುವ ಕಾಫಿ ಗಿಡಗಳಿಗೆ ವರದಾನವಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
Read Full Story

08:34 PM (IST) Feb 24

ಪ್ರೀತಮ್‌ನಲ್ಲಿ 'ಕಾಳಿದಾಸ'ನನ್ನು ಕಂಡ ಶಿವಣ್ಣ - ಅಪ್ಪಾಜಿನೇ ಅಂದ್ಕೊಂಡು 7 ವರ್ಷದ ಬಾಲಕನ ಕಾಲಿಗೆ ಮುತ್ತಿಟ್ಟ ಹ್ಯಾಟ್ರಿಕ್ ಹೀರೋ!

ಡಾನ್ಸ್‌ ಕರ್ನಾಟಕ ಡಾನ್ಸ್‌ ವೇದಿಕೆಯಲ್ಲಿ ಗದಗಿನ 7 ವರ್ಷದ ಪ್ರೀತಮ್, ಕವಿರತ್ನ ಕಾಳಿದಾಸನ ಪಾತ್ರದಲ್ಲಿ ಮಿಂಚಿದ್ದಾನೆ. ಡಾ.ರಾಜ್‌ಕುಮಾರ್‌ ಅವರ ಪಡಿಯಚ್ಚಿನಂತಿದ್ದ ಈ ಬಾಲಕನ ಅಭಿನಯಕ್ಕೆ ನಟ ಶಿವರಾಜ್‌ಕುಮಾರ್‌ ಭಾವುಕರಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

Read Full Story

07:24 PM (IST) Feb 24

ರೈಲ್ವೆ ರಕ್ಷಣೆ ತರಬೇತಿ ಕಲಿಯಲು ಬೆಂಗಳೂರಿನ ಭಾರತೀಯ ರೈಲ್ವೆ ವಿಭಾಗಕ್ಕೆ ಬಂದ ತಾಂಜೇನಿಯಾ ಸಿಬ್ಬಂದಿಗಳು

ಬೆಂಗಳೂರಿನಲ್ಲಿರುವ ಭಾರತೀಯ ರೈಲ್ವೆ ವಿಪತ್ತು ನಿರ್ವಹಣಾ ಸಂಸ್ಥೆಯು, ತಾಂಜೇನಿಯಾದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿಗೆ ರೈಲ್ವೆ ಅಪಘಾತದ ತುರ್ತು ಪರಿಸ್ಥಿತಿ ನಿರ್ವಹಣೆ ಕುರಿತು ಎರಡು ವಾರಗಳ ತರಬೇತಿ ನೀಡುತ್ತಿದೆ. ಈ ಶಿಬಿರದಲ್ಲಿ ಪ್ರಾಯೋಗಿಕ ಕೌಶಲ್ಯಗಳನ್ನು ಕಲಿಸಲಾಗುತ್ತಿದೆ.

Read Full Story

07:09 PM (IST) Feb 24

ಗುಲ್ಬರ್ಗ ವಿವಿ ಘಟಿಕೋತ್ಸವ - ರೈತನ ಮಗಳು ಚೆನ್ನಮ್ಮಗೆ 11, ಕೂಲಿಕಾರನ ಮಗ ರಾಹುಲ್‌ಗೆ 9 ಗೋಲ್ಡ್ ಮೆಡಲ್!

ಗುಲಬರ್ಗಾ ವಿಶ್ವವಿದ್ಯಾಲಯದ 43ನೇ ಘಟಿಕೋತ್ಸವದಲ್ಲಿ, ರೈತನ ಮಗಳು ಚೆನ್ನಮ್ಮ ಕನ್ನಡದಲ್ಲಿ 11 ಚಿನ್ನದ ಪದಕಗಳನ್ನು ಮತ್ತು ಕೂಲಿಕಾರನ ಮಗ ರಾಹುಲ್ ಪ್ರಾಣಿಶಾಸ್ತ್ರದಲ್ಲಿ 9 ಚಿನ್ನದ ಪದಕಗಳನ್ನು ಗೆದ್ದು ಸಾಧನೆ ಮೆರೆದಿದ್ದಾರೆ. ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.

Read Full Story

07:07 PM (IST) Feb 24

ಪರಿಹಾರ ಪಾವತಿಸದ ನೈಋತ್ಯ ರೈಲ್ವೆ ಕಚೇರಿ ಪೀಠೋಪಕರಣ ಹೊತ್ತೊಯ್ದ ಹುಬ್ಬಳ್ಳಿ ರೈತರು!

ರೈತರಿಗೆ ಭೂಸ್ವಾಧೀನ ಪರಿಹಾರ ನೀಡದ ಕಾರಣ, ನ್ಯಾಯಾಲಯದ ಆದೇಶದ ಮೇರೆಗೆ ರೈತರು ಹುಬ್ಬಳ್ಳಿಯಲ್ಲಿರುವ ನೈಋತ್ಯ ರೈಲ್ವೆ ಕನಸ್ಟ್ರಕ್ಷನ್ ವಿಭಾಗದ ಕಚೇರಿಯ ಪೀಠೋಪಕರಣಗಳನ್ನು ಜಪ್ತಿ ಮಾಡಿದ್ದಾರೆ. 2017ರಲ್ಲಿ ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರ ನೀಡಲು ಕೋರ್ಟ್ ಆದೇಶಿಸಿದ್ದರೂ ರೈಲ್ವೆ ಇಲಾಖೆ ಪಾಲಿಸಿರಲಿಲ್ಲ.

Read Full Story

06:50 PM (IST) Feb 24

ಪ್ರಯಾಣಿಕರ ಗಮನಕ್ಕೆ - ಯಶವಂತಪುರ-ಗೋರಖ್ಪುರ ರೈಲು ಸಂಚಾರದಲ್ಲಿ ಈ ಎರಡು ದಿನ ಅನಿರೀಕ್ಷಿತ ಮಾರ್ಗ ಬದಲಾವಣೆ!

ಗೊಂಡಾ–ಗೋರಖ್ಪುರ ವಿಭಾಗದಲ್ಲಿ ನಡೆಯುತ್ತಿರುವ ಎಂಜಿನಿಯರಿಂಗ್ ಕಾಮಗಾರಿಯಿಂದಾಗಿ, ಯಶವಂತಪುರ–ಗೋರಖ್ಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ (12592) ರೈಲಿನ ಮಾರ್ಗವನ್ನು ಮಾರ್ಚ್ 2 ಮತ್ತು 9 ರಂದು ತಾತ್ಕಾಲಿಕವಾಗಿ ಬದಲಾಯಿಸಲಾಗಿದೆ. 

Read Full Story

06:33 PM (IST) Feb 24

Bagalkote Dalit Social Boycott Row - ತಮದಡ್ಡಿ ಗ್ರಾಮದಲ್ಲಿ ದಲಿತರಿಗೆ ಸಾಮಾಜಿಕ‌ ಬಹಿಷ್ಕಾರ ವಿವಾದ ಸುಖಾಂತ್ಯ

ಬಾಗಲಕೋಟೆ ಜಿಲ್ಲೆಯ ತಮದಡ್ಡಿ ಗ್ರಾಮದಲ್ಲಿ ದಲಿತರ ಮೇಲೆ ಹೇರಲಾಗಿದ್ದ ಸಾಮಾಜಿಕ ಬಹಿಷ್ಕಾರದ ಆರೋಪವು ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಸುಖಾಂತ್ಯಗೊಂಡಿದೆ. ಜಮಖಂಡಿ ಎಸಿ ಶ್ವೇತಾ ಬಿಡಿಕರ್ ಮತ್ತು ಪೊಲೀಸರ ಸಮ್ಮುಖದಲ್ಲಿ ನಡೆದ ಸಭೆಯ ನಂತರ, ದಲಿತರಿಗೆ ಊರಿನಲ್ಲೇ ಕ್ಷೌರ ಮಾಡುವ ಮೂಲಕ ವಿವಾದ ಬಗೆಹರಿಸಲಾಯಿತು.

Read Full Story

06:13 PM (IST) Feb 24

ಶಾಲಾ ಮಕ್ಕಳಿಗೆ ಫ್ರೀ ನೋಟ್‌ಬುಕ್‌ ಪ್ರಸ್ತಾವ ಜೀವಂತ, 50 ಲಕ್ಷ ಮಕ್ಕಳಿಗೆ ನೋಟ್‌ಬುಕ್‌ ನೀಡಲು ಬೇಕು 75 ಕೋಟಿ ರು.

ರಾಜ್ಯದ ಸರ್ಕಾರಿ, ಅನುದಾನಿತ ಶಾಲಾ ಮಕ್ಕಳಿಗೆ ಉಚಿತ ನೋಟ್‌ಬುಕ್‌ ನೀಡುವ ಯೋಜನೆಗೆ ಹಣಕಾಸು ಇಲಾಖೆ ಇನ್ನೂ ಸಮ್ಮತಿಸಿಲ್ಲ. ಆದರೂ, ಶಿಕ್ಷಣ ಇಲಾಖೆಯು ಬಜೆಟ್‌ನಲ್ಲಿ ಈ ಯೋಜನೆ ಘೋಷಣೆಗಾಗಿ  CM ಮನವೊಲಿಸಲು ಪ್ರಯತ್ನಿಸುತ್ತಿದ್ದು, ಇಲಾಖೆಯಲ್ಲಿನ ಹಣ ಸೋರಿಕೆ ತಡೆದು ಅನುದಾನ ಒದಗಿಸುವ ಪ್ರಸ್ತಾವನೆ ಇಟ್ಟಿದೆ.

Read Full Story

05:53 PM (IST) Feb 24

Bangalore - ಆನೇಕಲ್‌ನಲ್ಲಿ ಹದಗೆಟ್ಟ ರಸ್ತೆ, ಸ್ಕೂಟರ್ ಪಲ್ಟಿ, ಜಸ್ಟ್ ಮಿಸ್ ಆದ ಶಾಲಾ ಮಕ್ಕಳು! ಇದೇನಾ ಬ್ರ್ಯಾಂಡ್ ಬೆಂಗಳೂರು?

Bangalore pothole accident ಆನೇಕಲ್‌ನ ಚಂದಾಪುರದಲ್ಲಿ, ತಂದೆಯೊಬ್ಬರು ತಮ್ಮ ಇಬ್ಬರು ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿದ್ದಾಗ ರಸ್ತೆಗುಂಡಿಯಿಂದಾಗಿ ಸ್ಕೂಟರ್ ಸಮೇತ ಬಿದ್ದಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹಿಂಬದಿಯ ವಾಹನ ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ದುರಂತ ತಪ್ಪಿದೆ. 

Read Full Story

05:45 PM (IST) Feb 24

ಸಚಿನ್ ತೆಂಡೂಲ್ಕರ್‌ಗೆ ಮಾಡಿದ್ದ ಅನ್ಯಾಯ ಒಪ್ಪಿಕೊಂಡ ಅಂಪೈರ್ ಸ್ಟೀವ್ ಬಕ್ನರ್; 22 ವರ್ಷಗಳ ಬಳಿಕ ರಹಸ್ಯ ಬಹಿರಂಗ!

ಮಾಜಿ ಅಂಪೈರ್ ಸ್ಟೀವ್ ಬಕ್ನರ್, 2003-04ರ ಗಬ್ಬಾ ಟೆಸ್ಟ್‌ನಲ್ಲಿ ಸಚಿನ್ ತೆಂಡೂಲ್ಕರ್‌ಗೆ ತಾವು ನೀಡಿದ್ದ LBW ತೀರ್ಪು ತಪ್ಪಾಗಿತ್ತು ಎಂದು ಎರಡು ದಶಕಗಳ ನಂತರ ಒಪ್ಪಿಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ನೀಡಿದ ಆ ತೀರ್ಪಿನ ಬಗ್ಗೆ ತಮಗೆ ಈಗಲೂ ಪಶ್ಚಾತ್ತಾಪವಿದೆ ಎಂದರು.

Read Full Story

05:33 PM (IST) Feb 24

ನಮ್ಮ ಮೆಟ್ರೋ ನೇರಳೆ, ಹಸಿರು ಮಾರ್ಗದ ಪ್ರಯಾಣಿಕರ ದಟ್ಟಣೆಗೆ ಕೊನೆಗೂ ಮುಕ್ತಿ ಭಾಗ್ಯ, ಶೀಘ್ರವೇ 3 ಹೊಸ ರೈಲು ಸೇರ್ಪಡೆ

ಬೆಂಗಳೂರಿನ ನಮ್ಮ ಮೆಟ್ರೋದ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿನ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು, ಮೇ-ಜೂನ್ ಅಂತ್ಯದೊಳಗೆ ಮೂರು ಹೊಸ ರೈಲುಗಳು ಸೇರ್ಪಡೆಯಾಗಲಿವೆ. ಟಿಟಾಗರ್ ಕಂಪನಿಯಿಂದ ನಿರ್ಮಿತವಾದ ಈ ರೈಲುಗಳು, ಪರೀಕ್ಷಾರ್ಥ ಓಡಾಟದ ನಂತರ ಸೇವೆಗೆ ಲಭ್ಯವಾಗಲಿದೆ.

Read Full Story

05:17 PM (IST) Feb 24

ಹೆಣ್ಣು ಮಾಯೆ ಹುಷಾರು - ಗರ್ಲ್‌ಫ್ರೆಂಡ್ ನೀಡಿದ ಸುಳಿವಿನಿಂದಲೇ ಮೆಕ್ಸಿಕೋದ ಡ್ರಗ್ ಲಾರ್ಡ್ ಹತ್ಯೆ

ಮೆಕ್ಸಿಕೋದ ಕುಖ್ಯಾತ ಡ್ರಗ್ ಲಾರ್ಡ್ ಎಲ್ ಮೆಂಚೋನನ್ನು ಸಶಸ್ತ್ರ ಪಡೆಗಳು ಹತ್ಯೆ ಮಾಡಿವೆ. ಆತನ ಗೆಳತಿಯೊಬ್ಬಳು ನೀಡಿದ ಸುಳಿವಿನ ಆಧಾರದ ಮೇಲೆ ಯುಎಸ್ ಮತ್ತು ಮೆಕ್ಸಿಕನ್ ಗುಪ್ತಚರ ಇಲಾಖೆಗಳು ಆತನನ್ನು ಪತ್ತೆಹಚ್ಚಿ, ವಿಶೇಷ ಕಾರ್ಯಾಚರಣೆಯ ಮೂಲಕ ಅಂತ್ಯಗೊಳಿಸಿದವು ಎಂದು ತಿಳಿದು ಬಂದಿದೆ.

Read Full Story

04:54 PM (IST) Feb 24

Karna Serial ನಟ ಕಿರಣ್​ ರಾಜ್ ​ಬಂಪರ್​ ಆಫರ್​ - ಸುಲಭದ ರೆಸಿಪಿ ಹೇಳಿ ಸರ್​ಪ್ರೈಸ್​ ಪಡೆಯಿರಿ- ಡಿಟೇಲ್ಸ್​ ಇಲ್ಲಿದೆ

ಕರ್ಣ ಸೀರಿಯಲ್ ಖ್ಯಾತಿಯ ನಟ ಕಿರಣ್ ರಾಜ್, ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ 'Passport and Pan with Kiran Raj' ಎಂಬ ಹೊಸ ಕಾರ್ಯಕ್ರಮ ಆರಂಭಿಸಿದ್ದಾರೆ. ಇದಕ್ಕಾಗಿ ಅಭಿಮಾನಿಗಳಿಂದ ಸುಲಭವಾದ ಅಡುಗೆ ರೆಸಿಪಿಗಳನ್ನು ಕೇಳಿದ್ದು, ಅತಿ ಹೆಚ್ಚು ಲೈಕ್ಸ್ ಪಡೆದ ರೆಸಿಪಿಗೆ ಸರ್‌ಪ್ರೈಸ್ ನೀಡಲಿದ್ದಾರೆ.

Read Full Story

04:42 PM (IST) Feb 24

ಹಿಗ್ಗಿದ ಧಾರವಾಡ ಉದ್ಯೋಗಾಂಕ್ಷಿಗಳ ಹೋರಾಟ, ಬಗ್ಗಿದ ಸಿದ್ದರಾಮಯ್ಯ; ನೇಮಕಾತಿ ವಯೋಮಿತಿ 5 ವರ್ಷ ಸಡಿಲಿಕೆ ಮಾಡಿ ಘೋಷಣೆ!

ಧಾರವಾಡದಲ್ಲಿ ಪ್ರತಿಭಟಿಸುತ್ತಿರುವ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಹಿ ಸುದ್ದಿ ನೀಡಿದ್ದಾರೆ. ನೇಮಕಾತಿ ವಿಳಂಬದಿಂದ ವಯೋಮಿತಿ ಮೀರುತ್ತಿರುವ ಅಭ್ಯರ್ಥಿಗಳಿಗಾಗಿ, ಮುಂಬರುವ ನೇಮಕಾತಿಗಳಲ್ಲಿ ಗರಿಷ್ಠ ವಯೋಮಿತಿಯನ್ನು 5 ವರ್ಷಗಳವರೆಗೆ ಸಡಿಲಿಸುವುದಾಗಿ ಘೋಷಿಸಿದ್ದಾರೆ.

Read Full Story

04:39 PM (IST) Feb 24

ಬೆಡ್‌ರೂಮ್‌ನಲ್ಲಿ ನಾಚಿಕೆ ಹೋಗುವ ಕೆಲಸ ಮಾಡಿದ ಪತ್ನಿ; ಕಣ್ಣಾರೆ ಕಂಡು ಪ್ರಜ್ಞೆ ತಪ್ಪಿದ ಗಂಡ! Viral Video

illicit relationship: ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಪ್ರಜ್ಞೆ ತಪ್ಪಿ ಬಿದ್ದಿರೋ ಗಂಡನಿಗೆ ಕೆಲವರು ಎಚ್ಚರ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಈ ವಿಡಿಯೋ ಹಿಂದೆ ಒಂದು ಕಥೆ ಕೂಡ ಇದೆ, ಹಾಗಾದರೆ ಏನದು?

Read Full Story

04:30 PM (IST) Feb 24

Toxic - ವರ್ಷಗಳ ಗಡ್ಡಕ್ಕೆ ಯಶ್​ ಗುಡ್​ಬೈ ಹೇಳೋ ಮುನ್ನ ಪತ್ನಿ ರಾಧಿಕಾ ಪಂಡಿತ್​ ಏನ್​ ಹೇಳಿದ್ರು ನೋಡಿ!

ಯಶ್ ಅಭಿನಯದ 'ಟಾಕ್ಸಿಕ್' ಚಿತ್ರಕ್ಕಾಗಿ ತಮ್ಮ ಬಹುಕಾಲದ ಗಡ್ಡಕ್ಕೆ ವಿದಾಯ ಹೇಳಿದ್ದಾರೆ. ವೈರಲ್ ಆಗಿರುವ ಮೇಕಿಂಗ್ ವಿಡಿಯೋದಲ್ಲಿ ಅವರ ಹೊಸ ಲುಕ್ ಅನಾವರಣಗೊಂಡಿದ್ದು, ಇದು ಚಿತ್ರದಲ್ಲಿ ಅವರ ದ್ವಿಪಾತ್ರದ ಬಗ್ಗೆ ಕುತೂಹಲ ಮೂಡಿಸಿದೆ.  

Read Full Story

04:25 PM (IST) Feb 24

ತುಮಕೂರು - ನವದಂಪತಿ ದೇವಾಲಯ ಪ್ರವೇಶಿಸಿದ್ದಕ್ಕೆ ಮೈ ಮೇಲೆ ದೇವರು ಬಂದಂತೆ ನಟಿಸಿ ಜಾತಿ ನಿಂದನೆ, ನ್ಯಾಯಕೊಡಿಸಿದ ತಹಶೀಲ್ದಾರ್ ಅಹಮದ್

ತುಮಕೂರಿನ ಗೋಣಿತುಮಕೂರಿನಲ್ಲಿ ದೇವಾಲಯ ಪ್ರವೇಶಿಸಿದ ದಲಿತ ನವದಂಪತಿಗಳ ವಿರುದ್ಧ ಜಾತಿ ನಿಂದನೆ ಆರೋಪ ಕೇಳಿಬಂದಿತ್ತು. ಈ ಘಟನೆಯಿಂದ ಉಂಟಾದ ಉದ್ವಿಗ್ನತೆಯನ್ನು ತಹಶೀಲ್ದಾರ್ ನೇತೃತ್ವದಲ್ಲಿ ನಡೆದ ಶಾಂತಿ ಸಭೆಯ ಮೂಲಕ ಬಗೆಹರಿಸಲಾಯಿತು.

Read Full Story

04:20 PM (IST) Feb 24

ಪ್ಯಾನ್‌ ಇಂಡಿಯಾ ನಟಿಯಾದ್ರೂ ಸ್ನೇಹ ಮರೆತಿಲ್ಲ; ಕನ್ನಡ ಸೀರಿಯಲ್‌ ನಟಿಯನ್ನು ಫಾಲೋ ಮಾಡ್ತಿರೋ Rashmika Mandanna

ನಟಿ ರಶ್ಮಿಕಾ ಮಂದಣ್ಣ ಇಂದು ಪ್ಯಾನ್‌ ಇಂಡಿಯಾ ನಟಿ. ಭಾರೀ ಡಿಮ್ಯಾಂಡ್‌ನಲ್ಲಿರುವ ಅವರು ಮದುವೆ ಆಗುತ್ತಿದ್ದಾರೆ. ನಟ ವಿಜಯ್‌ ದೇವರಕೊಂಡ ಅವರನ್ನು ಪ್ರೀತಿಸಿ ಮದುವೆ ಆಗುತ್ತಿದ್ದಾರೆ. 

 

Read Full Story

03:51 PM (IST) Feb 24

ಬೆಂಗಳೂರು - ವಂಚಕರಿಗೆ ಸ್ನೇಹಿತನ ಖಾತೆ ಮಾರಾಟ, ವಿದ್ಯಾರ್ಥಿಯ ಬ್ಯಾಂಕ್ ಖಾತೆಯಿಂದ ₹7 ಕೋಟಿ ವರ್ಗಾಹಿಸಿ ಮೋಸ! ಕೋಟಿಗಟ್ಟಲೇ ಹಣ ಎಲ್ಲಿಂದ?

ಬೆಂಗಳೂರಿನಲ್ಲಿ, ಸ್ನೇಹಿತನ ಬ್ಯಾಂಕ್ ಖಾತೆಯನ್ನು ಸೈಬರ್ ವಂಚಕರಿಗೆ ಮಾರಾಟ ಮಾಡಿ ₹7 ಕೋಟಿ ಅಕ್ರಮ ಹಣ ವರ್ಗಾವಣೆಗೆ ಸಹಕರಿಸಿದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಸೈಬರ್ ಪೊಲೀಸರು ಬಂಧಿಸಿದ್ದಾರೆ. ಟೆಲಿಗ್ರಾಂ ಮೂಲಕ ವಂಚಕರ ಜಾಲಕ್ಕೆ ಖಾತೆಯ ವಿವರಗಳನ್ನು ನೀಡಿ ಕಮಿಷನ್ ಪಡೆದಿರುವುದು ತಿಳಿದುಬಂದಿದೆ.

Read Full Story

03:45 PM (IST) Feb 24

Photo - ದೀಪಿಕಾ ದಾಸ್‌ ಜನ್ಮದಿನ; ಮುತ್ತಿನಂಥ ಪತ್ನಿಗೆ ಬಂಗಾರ, ವಜ್ರದ ಗಿಫ್ಟ್‌ ಕೊಟ್ಟ ಪತಿ ದೀಪಕ್‌ ಗೌಡ

ಬಿಗ್‌ ಬಾಸ್‌ ಕನ್ನಡ ಸೀಸನ್‌ 7 ಸ್ಪರ್ಧಿ, ನಟಿ ದೀಪಿಕಾ ದಾಸ್‌ ಅವರು ಜನ್ಮದಿನ ಆಚರಿಸಿಕೊಂಡಿದ್ದಾರೆ. 30ನೇ ವಯಸ್ಸಿಗೆ ಕಾಲಿಟ್ಟ ದೀಪಿಕಾ ದಾಸ್‌ಗೆ ಪತಿ ದೀಪಕ್‌ ಗೌಡ ಅವರು ಸರ್ಪ್ರೈಸ್‌ ನೀಡಿದ್ದಾರೆ. ಈ ಬಗ್ಗೆ ಅವರು ಪೋಸ್ಟ್‌ ಹಂಚಿಕೊಂಡಿದ್ದಾರೆ. 

Read Full Story

03:10 PM (IST) Feb 24

ಮೇಕಪ್‌, ಫೋಟೋಶೂಟ್‌ ಅಬ್ಬರ; ಇತ್ತೀಚೆಗೆ ಮದುವೆಯಲ್ಲಿ ಆಗುತ್ತಿರುವ ಬಹುದೊಡ್ಡ ತಪ್ಪುಗಳಿವು

ಮೊದಲೆಲ್ಲ ಮದುವೆಯಲ್ಲಿ ಶಾಸ್ತ್ರಗಳಿಗೆ ಆದ್ಯತೆ ಕೊಡಲಾಗುತ್ತಿತ್ತು. ಈಗ ಫೋಟೋಶೂಟ್‌, ಮೇಕಪ್‌ಗೆ ಗೌರವ ಜಾಸ್ತಿ. ಶಾಸ್ತ್ರಗಳಿಗಿಂತ ಹೆಚ್ಚಾಗಿ ಸಂಭ್ರಮವೇ ಜೋರಾಗಿದೆ ಎಂಬ ದೂರಿದೆ. ಈಗಿನ ಮದುವೆಯಲ್ಲಿ ಏನೇನು ದೋಷಗಳು ಆಗುತ್ತಿವೆ ಎಂದು ಓರ್ವರು ಬರೆದಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.

 

Read Full Story

03:04 PM (IST) Feb 24

ನಟನ ಪತ್ನಿ ದೀಪಿಕಾ ಇಲ್ಲಿಯವರು, ಕನ್ನಡದ ಬಗ್ಗೆ ತಿಳಿದು ಮಾತನಾಡಬೇಕು 'ಕಾಂತಾರ' ವಿವಾದಕ್ಕೆ ರಿಲೀಫ್ ಕೊಟ್ಟ ಹೈಕೋರ್ಟ್

'ಕಾಂತಾರ ಚಾಪ್ಟರ್‌-1' ಚಿತ್ರದ ದೈವಪಾತ್ರದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ದಾಖಲಾಗಿದ್ದ ಎಫ್‌ಐಆರ್ ರದ್ದು ಕೋರಿ ನಟ ರಣವೀರ್ ಸಿಂಗ್ ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಮುಂದಿನ ವಿಚಾರಣೆವರೆಗೂ ಬಲವಂತದ ಕ್ರಮ ಕೈಗೊಳ್ಳದಂತೆ ಸೂಚಿಸಿದೆ.

Read Full Story

02:55 PM (IST) Feb 24

ರಣಜಿಯಲ್ಲಿ ಅಮೋಘ ಪ್ರದರ್ಶನ, ಕನ್ನಡಿಗರಿಗೆ ಕದ ತೆರೆಯುತ್ತಾ ಟೀಮ್‌ ಇಂಡಿಯಾ?

Ranji Trophy Final: Karnataka vs J&K in Hubballi; Batters Shine ಹುಬ್ಬಳ್ಳಿಯಲ್ಲಿ ನಡೆಯಲಿರುವ ರಣಜಿ ಟ್ರೋಫಿ ಫೈನಲ್‌ನಲ್ಲಿ ಕರ್ನಾಟಕವು ಜಮ್ಮು ಮತ್ತು ಕಾಶ್ಮೀರವನ್ನು ಎದುರಿಸಲಿದೆ. ಪಡಿಕ್ಕಲ್, ರಾಹುಲ್ ಮತ್ತು ರವಿ ಸ್ಮರಣ್ ಅವರಂತಹ ಬಲಿಷ್ಠ ಬ್ಯಾಟ್ಸ್‌ಮನ್‌ಗಳ ಬಲ ರಾಜ್ಯ ತಂಡಕ್ಕಿದೆ.

Read Full Story

02:53 PM (IST) Feb 24

ರಶ್ಮಿಕಾ ಮಂದಣ್ಣ ಮದುವೆಗೆ ಸ್ಯಾಂಡಲ್‌ವುಡ್ ನಟ ನಟಿಯರಿಗಿದೆಯಾ ಆಮಂತ್ರಣ?

ರಶ್ಮಿಕಾ ಮಂದಣ್ಣ ಮದುವೆಗೆ ಸ್ಯಾಂಡಲ್‌ವುಡ್ ನಟ ನಟಿಯರಿಗಿದೆಯಾ ಆಮಂತ್ರಣ?, ಉದಯಪುರದಲ್ಲಿ ಫೆ.26ರಂದು ನಡೆಯಲಿರುವ ವಿವಾಹ ಮಹೋತ್ಸವಕ್ಕೆ ಯಾರೆಲ್ಲಾ ಪಾಲ್ಗೊಳ್ಳುತ್ತಿದ್ದಾರೆ, ಯಾವ ಸೆಲೆಬ್ರೆಟಿಗೆ ಆಮಂತ್ರಣ ನೀಡಲಾಗಿದೆ.

 

Read Full Story

02:18 PM (IST) Feb 24

Krishnavamshi Serial - ಹೀರೋ ಆದ ಯುಟ್ಯೂಬರ್‌ ರೋಹನ್;‌ ಭಾವನಾತ್ಮಕ ಪ್ರಪಂಚಕ್ಕೆ ಹೋಗೋದು ಗ್ಯಾರಂಟಿ

Krishnavamshi Kannada Serial: ಉದಯ ಟಿವಿಯಲ್ಲಿ ‘ಕೃಷ್ಣವಂಶಿ’ ಧಾರಾವಾಹಿ ಪ್ರಸಾರ ಆಗಲಿದೆ. ರೋಹನ್ ಎ ಹಾಗೂ ಶಾರದಾ ಪುಂಡಿ ಈ ಧಾರಾವಾಹಿಯಲ್ಲಿ ಲೀಡ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

 

Read Full Story

02:09 PM (IST) Feb 24

ಶಾಸಕ ಚಂದ್ರ ಲಮಾಣಿ 5 ಲಕ್ಷ ರೂ. ಪ್ರಕರಣದಲ್ಲಿ ಮುಜುಗರದಿಂದ ಪಾರಾಗಲು ಬಿಜೆಪಿ ಪ್ಲಾನ್

ಐದು ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದು ಜೈಲು ಪಾಲಾಗಿರುವ ಶಿರಹಟ್ಟಿ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ಪ್ರಕರಣದಿಂದ ಉಂಟಾದ ಮುಜುಗರವನ್ನು ತಪ್ಪಿಸಿಕೊಳ್ಳಲು ಮತ್ತು ಮುಂಬರುವ ಬಜೆಟ್ ಅಧಿವೇಶನದಲ್ಲಿ ಇಕ್ಕಟ್ಟಿಗೆ ಸಿಲುಕುವುದನ್ನು ತಪ್ಪಿಸಲು ಪಕ್ಷ ಈ ಕ್ರಮಕ್ಕೆ ಮುಂದಾಗಿದೆ.

Read Full Story

01:55 PM (IST) Feb 24

ಪ್ರತ್ಯೇಕ ಪ್ರಕರಣ - ಕೆರೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿನಿ ಶವ ಪತ್ತೆ; ಅಪಘಾತದಲ್ಲಿ ಬೈಕ್ ಸವಾರ ಸಾವು

ದಕ್ಷಿಣ ಕನ್ನಡದ ವಿಟ್ಲದಲ್ಲಿ ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಉಡುಪಿಯಲ್ಲಿ ಯುವಕನೊಬ್ಬ ಮೈಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಹೈಡ್ರಾಮಾ ಸೃಷ್ಟಿಸಿದರೆ, ಬಂಟ್ವಾಳದಲ್ಲಿ ಪಿಕಪ್ ವಾಹನಕ್ಕೆ ಬೈಕ್ ಡಿಕ್ಕಿಯಾಗಿ ಸವಾರ ಸಾವನ್ನಪ್ಪಿದ್ದಾರೆ.
Read Full Story

01:34 PM (IST) Feb 24

ಮನೆಗಳ ಪ್ರತಿ ಗೋಡೆಗಳ ಮೇಲೆ ಹಸಿರು ಚಿತ್ತಾರ - ಇಲ್ಲಿದೆ ಮನೆ, ಮನ ಮತ್ತು ಕಣ್ಣಿಗೂ ತಂಪು ನೀಡುವ ಪ್ಲ್ಯಾಂಟ್‌ಗಳು!

ಮನೆಯಲ್ಲಿ ಕಡಿಮೆ ಜಾಗವಿದ್ದರೂ ವರ್ಟಿಕಲ್ ಗಾರ್ಡನಿಂಗ್ ಮೂಲಕ ಹಸಿರು ತುಂಬಬಹುದು. ಮನಿ ಪ್ಲಾಂಟ್, ಫರ್ನ್, ಮತ್ತು ಸ್ಪೈಡರ್ ಪ್ಲಾಂಟ್‌ನಂತಹ ಗಿಡಗಳು ಮನೆಗೆ ಅಂದ ನೀಡುವುದಲ್ಲದೆ, ಗಾಳಿಯನ್ನು ಶುದ್ಧೀಕರಿಸಿ ಉತ್ತಮ ವಾತಾವರಣ ಸೃಷ್ಟಿಸುತ್ತವೆ.
Read Full Story

01:26 PM (IST) Feb 24

ಚನ್ನಪಟ್ಟಣ ತಾಲೂಕಿನಲ್ಲಿ ಸಂಜೆ ಆದ್ರೆ ಸಾಕು ವಿದ್ಯಾರ್ಥಿಗಳ ಮನೆ ಬಾಗಿಲು ತಟ್ಟೋ ತಹಶೀಲ್ದಾರ್!

ಚನ್ನಪಟ್ಟಣ ತಾಲೂಕಿನಲ್ಲಿ ಶೇ.100ರಷ್ಟು ಎಸ್ಎಸ್ಎಲ್‌ಸಿ ಫಲಿತಾಂಶ ತರುವ ಗುರಿಯೊಂದಿಗೆ, ತಹಶೀಲ್ದಾರ್ ಗಿರೀಶ್ ಅವರು ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ಪರೀಕ್ಷಾ ಒತ್ತಡ ಕಡಿಮೆ ಮಾಡಿ, ಮೊಬೈಲ್ ಬಳಕೆಯಿಂದ ದೂರವಿರಿಸಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುತ್ತಿದ್ದಾರೆ

Read Full Story

01:25 PM (IST) Feb 24

ಪ್ರತಿ ಮಂಗಳವಾರ ಇಡೀ ಊರಿಗೆ ಊರೇ ಖಾಲಿ ಖಾಲಿ; ಮನೆ, ಅಂಗಡಿ-ಮುಗ್ಗಟ್ಟುಗಳಿಗೆ ಬೀಗ!

ಎರಡು ಗ್ರಾಮಗಳಲ್ಲಿ ಒಂದು ವಿಶಿಷ್ಟ ಸಂಪ್ರದಾಯವಿದೆ. ದ್ಯಾಮವ್ವ ಮತ್ತು ದುರ್ಗವ್ವ ದೇವಿಯರ ಜಾತ್ರೆಯ ಅಂಗವಾಗಿ, ಜಾತ್ರೆಗೆ ಮುಂಚಿನ ಐದು ಮಂಗಳವಾರಗಳಂದು ಗ್ರಾಮಸ್ಥರು ಊರನ್ನೇ ಖಾಲಿ ಮಾಡುತ್ತಾರೆ. ಸೂರ್ಯಾಸ್ತದ ನಂತರವೇ ಮನೆಗೆ ಮರಳುವ ಈ ಪದ್ಧತಿಯು 300 ವರ್ಷಗಳ ಇತಿಹಾಸವನ್ನು ಹೊಂದಿದೆ.

Read Full Story

01:07 PM (IST) Feb 24

ಸಂಕೇತ್ ಕೊ-ಲೆಗೆ ಕಾರಣ ಏನು? ಎರಡು ದಿನದ ಹಿಂದೆ ನಡೆದಿತ್ತಾ ಜಗಳ? ಎಸ್‌ಪಿ ಹೇಳಿದ್ದೇನು? 15 ಲಕ್ಷ ಪರಿಹಾರ ಘೋಷಣೆ

ಶಿವಮೊಗ್ಗದಲ್ಲಿ ನಡೆದ 10ನೇ ತರಗತಿ ವಿದ್ಯಾರ್ಥಿ ಸಂಕೇತ್ ಕೊಲೆಗೆ ಕ್ರಿಕೆಟ್ ಪಂದ್ಯದ ಗಲಾಟೆಯೇ ಕಾರಣ ಎಂದು ಎಸ್‌ಪಿ ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರನ್ನು ವಶಕ್ಕೆ ಪಡೆಯಲಾಗಿದ್ದು, ಮೃತನ ಕುಟುಂಬಕ್ಕೆ ಸರ್ಕಾರ 15 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.
Read Full Story

01:04 PM (IST) Feb 24

ಗಂಡಾಗಿ ಹುಟ್ಟಿ ಅಪ್ಸರೆಯಾಗಿ ಬದಲಾದ - ಮೊದಲು ಹಾಗೂ ನಂತರದ ಫೊಟೋಗೆ ಶಾಕ್ ಆದ ನೆಟ್ಟಿಗರು

ಗಂಡಾಗಿ ಹುಟ್ಟಿ ಶಸ್ತ್ರಚಿಕಿತ್ಸೆಯ ಮೂಲಕ ಸುಂದರ ಯುವತಿಯಾಗಿ ಬದಲಾದ ವ್ಯಕ್ತಿಯೊಬ್ಬರು ತಮ್ಮ ಹಿಂದಿನ ಮತ್ತು ಇಂದಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. nakshathra_speaks ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಈ ಫೋಟೋಗಳು ವೈರಲ್ ಆಗಿದ್ದು, ಅವರ ಸೌಂದರ್ಯಕ್ಕೆ ನೆಟ್ಟಿಗರು ಬೆರಗಾಗಿದ್ದಾರೆ.
Read Full Story

01:00 PM (IST) Feb 24

ನಿಧಿಯನ್ನು ಈಸಿಯಾಗಿ ಎತ್ತಿ ಮುದ್ದಾಡಿದ ಕರ್ಣ - ದಂಗಾದ ಶೂಟಿಂಗ್​ ಟೀಮ್​- ವಿಡಿಯೋ ವೈರಲ್

'ಕರ್ಣ' ಸೀರಿಯಲ್‌ನ ಮೇಕಿಂಗ್ ವಿಡಿಯೋವೊಂದು ವೈರಲ್ ಆಗಿದ್ದು, ಇದರಲ್ಲಿ ನಾಯಕ ಕಿರಣ್ ರಾಜ್ ಯಾವುದೇ ಸಹಾಯವಿಲ್ಲದೆ ನಾಯಕಿ ಭವ್ಯಾ ಗೌಡ ಅವರನ್ನು ಸಲೀಸಾಗಿ ಎತ್ತಿಕೊಳ್ಳುತ್ತಾರೆ. ಈ ದೃಶ್ಯವು ಚಿತ್ರತಂಡವನ್ನೇ ಅಚ್ಚರಿಗೊಳಿಸಿದೆ.

Read Full Story

12:35 PM (IST) Feb 24

ಟ್ರ್ಯಾಪ್ ಆಗಿರೋ ಚಂದ್ರು ಲಮಾಣಿಗೆ ಏಕೆ ಬೇಲ್‌ ಕೊಡಬೇಕು? ತುರ್ತು ವಿಚಾರಣೆ ಕೇಳಿದ್ದಕ್ಕೆ ಜಡ್ಜ್ ಗರಂ

5 ಲಕ್ಷ ರು. ಲಂಚ ಪಡೆದ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರಿಂದ ಬಂಧಿತರಾಗಿರುವ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ಹಾಗೂ ಇಬ್ಬರು ಜಾಮೀನಿಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ತುರ್ತು ವಿಚಾರಣೆಗೆ ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ದು, ವಿಚಾರಣೆಯನ್ನು ಫೆ.27ಕ್ಕೆ ಮುಂದೂಡಿದ್ದಾರೆ.

Read Full Story

More Trending News