Published : Sep 23, 2025, 06:13 AM ISTUpdated : Sep 23, 2025, 10:35 PM IST

karnataka news live: ಗಡೀಪಾರಾದ ತಿಮರೋಡಿ ರಾಯಚೂರಿಗೆ ಬೇಡ, ಕಾಡಿಗೆ ಕಳುಹಿಸಿ ಎಂದು ಪ್ರತಿಭಟನೆ

ಸಾರಾಂಶ

ವಿವಾದ, ಗೊಂದಲಗಳ ನಡುವೆಯೇ ಸೋಮವಾರದಿಂದ ಬೆಂಗಳೂರು ಹೊರತುಪಡಿಸಿ ರಾಜ್ಯಾದ್ಯಂತ ಆರಂಭಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನೀರಸ ಆರಂಭ ಕಂಡಿದೆ. ಮೊದಲ ದಿನದಾಂತ್ಯಕ್ಕೆ ನಿರೀಕ್ಷಿತ 20 ಲಕ್ಷ ಜನರ ಬದಲು 2765 ಕುಟುಂಬಗಳ ಕೇವಲ 10,642 ಮಂದಿಯ ಸಮೀಕ್ಷೆ ಮಾತ್ರ ನಡೆಸಲಾಗಿದೆ. ಇಂಟರ್ನೆಟ್‌ ಇಲ್ಲದ ಕಡೆ ಸಮೀಕ್ಷೆಗೆ ಬಳಸುವ ಆ್ಯಪ್‌ ಕೆಲಸ ಮಾಡದೇ ಇರುವುದು, ಮೊದಲ ದಿನ ಗಣತಿದಾರರಿಗೆ ಸೂಕ್ತ ರೀತಿಯಲ್ಲಿ ಕಿಟ್‌ ವಿತರಣೆ ಆಗದ್ದು, ಕೆಲವು ಕಡೆ ಕಿಟ್‌ಗಳು ಸಂಜೆ ವೇಳೆಗೆ ಕೈ ಸೇರಿದ್ದು, ಇನ್ನು ಕೆಲವರಿಗೆ ಕಿಟ್‌ಗಳು ದೊರೆತರೂ ಮೊಬೈಲ್ ನೆಟ್‌ವರ್ಕ್ ಕೈಕೊಟ್ಟಿದ್ದು, ಇವೆರಡೂ ಇದ್ದರೂ, ಗಣತಿದಾರರಿಗೇ ಆ ಆ್ಯಪ್ ಬಗ್ಗೆ ಅಪೂರ್ಣ ಮಾಹಿತಿ ಇರುವುದು ಸೇರಿದಂತೆ ಹಲವು ಕಾರಣಗಳಿಂದ ಗಣತಿಗೆ ಅಡ್ಡಿಯಾಗಿದೆ ಎನ್ನಲಾಗಿದೆ.

Mahesh Shetty Timarody

10:35 PM (IST) Sep 23

ಗಡೀಪಾರಾದ ತಿಮರೋಡಿ ರಾಯಚೂರಿಗೆ ಬೇಡ, ಕಾಡಿಗೆ ಕಳುಹಿಸಿ ಎಂದು ಪ್ರತಿಭಟನೆ

ಗಡೀಪಾರಾದ ತಿಮರೋಡಿ ರಾಯಚೂರಿಗೆ ಬೇಡ, ಕಾಡಿಗೆ ಕಳುಹಿಸಿ ಎಂದು ಪ್ರತಿಭಟನೆ ಶುರುವಾಗಿದೆ. ಧರ್ಮಸ್ಥಳ ವಿರುದ್ದ ಬುರುಡೆ ಷಡ್ಯಂತ್ರ ರೂಪಿಸಿದ ಆರೋಪ ಎದುರಿಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿಗೆ ಇದೀಗ ಹಲವೆಡೆಗಳಿಂದ ಪ್ರತಿಭಟನೆ ಬಿಸಿ ಹೆಚ್ಚಾಗತೊಡಗಿದೆ.

 

Read Full Story

09:48 PM (IST) Sep 23

ಕಾರಲ್ಲ, ಸ್ಕೂಟರ್ ಮೇಲೆ 6 ಮಂದಿ ಪ್ರಯಾಣ, ಬೆಂಗಳೂರಲ್ಲಿ ಯುವಕರ ಹುಚ್ಚಾಟ

ಕಾರಲ್ಲ, ಸ್ಕೂಟರ್ ಮೇಲೆ 6 ಮಂದಿ ಪ್ರಯಾಣ, ಬೆಂಗಳೂರಲ್ಲಿ ಯುವಕರ ಹುಚ್ಚಾಟ ವರದಿಯಾದಿದೆ. ಸ್ಥಳೀಯರ ಮೊಬೈಲ್‌ನಲ್ಲಿ ದೃಶ್ಯ ಸೆರೆಯಾಗಿದೆ. ಈ ರೀತಿ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ಸ್ಥಳೀಯರ ಆಕ್ರೋಶ ಹೊರಹಾಕಿದ್ದಾರೆ.

Read Full Story

09:34 PM (IST) Sep 23

ತುಂಗಭದ್ರಾ ಡ್ಯಾಂಗೂ ವಯಸ್ಸಾಯ್ತು, ನಮ್ಗೂ ವಯಸ್ಸಾಯ್ತು! ರೈತರು ಹೊಸ ಬೆಳೆಗೆ ಬದಲಾಗಬೇಕು ಶಾಸಕ ಹಂಪನಗೌಡ ಸಲಹೆ

ಸಿಂಧನೂರಿನಲ್ಲಿ 11 ದಿನಗಳ ದಸರಾ ಉತ್ಸವಕ್ಕೆ ಸಚಿವ ಶರಣಬಸಪ್ಪ ದರ್ಶನಾಪುರ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಶಾಸಕ ಹಂಪನಗೌಡ ಬಾದರ್ಲಿ, ರೈತರು ಕಾಲಕ್ಕೆ ತಕ್ಕಂತೆ ಹೊಸ ಬೆಳೆಗಳಿಗೆ ಬದಲಾಗಬೇಕು ಎಂದು ಸಲಹೆ ನೀಡಿದ್ದು, ಈ ಬಾರಿ ಗ್ರಾಮೀಣ, ರೈತ, ಆರೋಗ್ಯ, ಶಿಕ್ಷಣ  ಎಂದು ವಿನೂತನವಾಗಿ ಆಯೋಜಿಸಲಾಗಿದೆ.

Read Full Story

09:14 PM (IST) Sep 23

ವರ್ಷಪೂರ್ತಿ ಹಣ್ಣು ಬಿಡುವ ವಿದೇಶಿ ಮಾವು ಬೆಳೆದ ಬಿಸಿಲನಾಡು ವಿಜಯಪುರದ ಯುವ ರೈತ!

vijayapura mango farmer ವಿಜಯಪುರದ ಪದವೀಧರ ಯುವ ರೈತ ನವೀನ ಮಂಗಾನವರ, ಥೈಲ್ಯಾಂಡ್ ಮೂಲದ ಮಾವನ್ನು ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಬೆಳೆದು ಯಶಸ್ಸು ಕಂಡಿದ್ದಾರೆ. ವರ್ಷಪೂರ್ತಿ ಇಳುವರಿ ನೀಡುವ ಈ ಮಾವಿಗೆ ನೇರ ಮಾರುಕಟ್ಟೆ ಸೃಷ್ಟಿಸಿಕೊಂಡು, ಸಚಿವರಿಂದ ಹಾಗೂ ಥಾಯ್ ರೈತರಿಂದಲೂ ಮೆಚ್ಚುಗೆ ಗಳಿಸಿದ್ದಾರೆ.

Read Full Story

08:55 PM (IST) Sep 23

ಇದು ಜಾತಿ ಸಮೀಕ್ಷೆಯಲ್ಲ, ಬಿಜೆಪಿ ಅಧ್ಯಕ್ಷರು ಮೋದಿಗೆ ಪತ್ರ ಬರೆಯಲಿ - ಸಚಿವ ಗುಂಡೂರಾವ್ ತಿರುಗೇಟು

ಜಾತಿ ಜನಗಣತಿ ವಿಚಾರವಾಗಿ ಬಿಜೆಪಿಗೆ ತಿರುಗೇಟು ನೀಡಿರುವ ಸಚಿವ ದಿನೇಶ್ ಗುಂಡೂರಾವ್, ಜಾತಿ ಗಣತಿ ಮಾಡಬೇಡಿ ಎಂದು ಕೇಂದ್ರಕ್ಕೆ ಪತ್ರ ಬರೆಯಲು ವಿಜಯೇಂದ್ರ ಗೆ ಸವಾಲು ಹಾಕಿದ್ದಾರೆ. ಇದು ಜಾತಿ ಗಣತಿಯಲ್ಲ, ಬದಲಿಗೆ ವೈಜ್ಞಾನಿಕ ಅಂಕಿ-ಅಂಶ ಸಂಗ್ರಹಿಸಲು ನಡೆಸುತ್ತಿರುವ ಸಮೀಕ್ಷೆ ಎಂದು ಸ್ಪಷ್ಟಪಡಿಸಿದ್ದಾರೆ.

Read Full Story

08:33 PM (IST) Sep 23

ಬಹುನಿರೀಕ್ಷಿತ ಹೆಬ್ಬಾಳ-ಸರ್ಜಾಪುರ ಕೆಂಪು ಮಾರ್ಗ ಮೆಟ್ರೋ ಯೋಜನೆಗೆ, ಕೇಂದ್ರದಿಂದ ಅನಿರೀಕ್ಷಿತ ತಡೆಯಾಗುತ್ತಾ?

ಹೆಬ್ಬಾಳ-ಸರ್ಜಾಪುರ ನಮ್ಮ ಮೆಟ್ರೋ ಕೆಂಪು ಮಾರ್ಗದ ₹28,405 ಕೋಟಿ ವೆಚ್ಚದ ಅಂದಾಜನ್ನು ಮರುಪರಿಶೀಲಿಸುವಂತೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಸೂಚಿಸಿದೆ. 36.59 ಕಿ.ಮೀ ಉದ್ದದ ಈ ಮಾರ್ಗದಲ್ಲಿ 28 ನಿಲ್ದಾಣಗಳಿದ್ದು, ಭೂಸ್ವಾಧೀನ ಪ್ರಕ್ರಿಯೆ ಹಾಗೂ ಯೋಜನೆಯ ಮರುಮೌಲ್ಯಮಾಪನ ಈಗ ಆರಂಭವಾಗಿದೆ.
Read Full Story

08:30 PM (IST) Sep 23

ಮಹೇಶ್ ಶೆಟಿ ತಿಮರೋಡಿ ಗಡೀಪಾರಿಗೆ ಕಾರಣವಾದ 5 ಕೇಸ್ ಯಾವುದು, ನಿರೀಕ್ಷಣಾ ಜಾಮೀನಿಗೆ ಅರ್ಜಿ

ಮಹೇಶ್ ಶೆಟಿ ತಿಮರೋಡಿ ಗಡೀಪಾರಿಗೆ ಕಾರಣವಾದ 5 ಕೇಸ್ ಯಾವುದು, ನಿರೀಕ್ಷಣಾ ಜಾಮೀನಿಗೆ ಅರ್ಜಿ,  ಶಾಂತಿ ಕದಡುವ ಪ್ರಯತ್ನ ಹಿನ್ನಲೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿಯನ್ನು ಬೆಳಗಾವಿಗೆ ಗಡೀಪಾರು ಮಾಡಲು ಆದೇಶ ನೀಡಲಾಗಿದೆ. ತಿಮರೋಡಿ ಗಡೀಪಾರಿಗೆ ಕಾರಣವಾದ 5 ಕೇಸ್ ಯಾವುದು?

Read Full Story

07:58 PM (IST) Sep 23

ಚಾಮುಂಡಿ ತಾಯಿ ಕ್ಷೇತ್ರದಿಂದ ಗೃಹ'ಲಕ್ಷ್ಮೀ'ಯರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ ಸಚಿವೆ ಹೆಬ್ಬಾಳ್ಕರ್

ಮೈಸೂರಿನಲ್ಲಿ ನಡೆದ ಮಹಿಳಾ ದಸರಾ ಕಾರ್ಯಕ್ರಮದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದಾರೆ. ಈ ಮೂಲಕ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಸರ್ಕಾರ ಒತ್ತು ನೀಡಿದೆ.

Read Full Story

07:43 PM (IST) Sep 23

ಗ್ರಾಮೀಣ ಯುವತಿಯರಿಗೆ ಉಚಿತ ಬ್ಯೂಟಿ ಪಾರ್ಲರ್ ತರಬೇತಿಗೆ ಅರ್ಜಿ ಆಹ್ವಾನ

ರುಡ್ಸೆಟ್ ಸಂಸ್ಥೆಯು ಗ್ರಾಮೀಣ ನಿರುದ್ಯೋಗಿ ಯುವತಿಯರಿಗಾಗಿ 30 ದಿನಗಳ ಉಚಿತ ಬ್ಯೂಟಿ ಪಾರ್ಲರ್ ತರಬೇತಿಯನ್ನು ನವೆಂಬರ್ 5 ರಿಂದ ಆಯೋಜಿಸಿದೆ. ಇದು ವಸತಿಯುತವಾಗಿದ್ದು, ಊಟ ಮತ್ತು ವಸತಿ ಉಚಿತ. 18-45 ವರ್ಷ ವಯಸ್ಸಿನ, ಕನ್ನಡ ಬಲ್ಲ, ಬಿಪಿಎಲ್ ಕಾರ್ಡ್‌ ಹೊಂದಿರುವವರಿಗೆ ಆದ್ಯತೆ.

Read Full Story

07:25 PM (IST) Sep 23

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್; ಅ.1ರಿಂದ ನಗದುರಹಿತ ಚಿಕಿತ್ಸೆ ನೀಡುವ 'ಆರೋಗ್ಯ ಸಂಜೀವಿನಿ' ಜಾರಿ

ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದವರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ನೀಡುವ 'ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ' (KASS) ಅಕ್ಟೋಬರ್ 1, 2025 ರಿಂದ ಜಾರಿಗೆ ಬರಲಿದೆ. ಈ ಯೋಜನೆಗಾಗಿ ನೌಕರರ ವೇತನದಿಂದ ಗ್ರೂಪ್‌ಗೆ ಅನುಗುಣವಾಗಿ ಮಾಸಿಕ ವಂತಿಕೆ ಕಡಿತಗೊಳಿಸಲಾಗುವುದು.

Read Full Story

07:05 PM (IST) Sep 23

ರೋಡಲ್ಲಿ ರೀಲ್ಸ್ ಮಾಡ್ಕೊಂಡಿದ್ದ ಸುಂದರಿ ಈಗ ಟಾಪ್ ಹೀರೋಯಿನ್; ಕಾಲ್‌ಶೀಟ್‌ಗೆ ಡೈರೆಕ್ಟರ್ಸ್ ವೇಟಿಂಗ್!

ರೋಡ್, ರೋಡಲ್ಲಿ ರೀಲ್ಸ್ ಮಾಡುತ್ತಾ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡುತ್ತಿದ್ದ ಯುವತಿ ಇದೀಗ ಸ್ಟಾರ್ ನಟಿ. ಎಂಥಾ  ಗ್ಲಾಮರ್‌ಗೂ ಸೈ ಎಂದ ನಟಿ ಚಿತ್ರರಂಗದಲ್ಲಿ ಕಿಚ್ಚೆಬ್ಬಿಸಿದ್ದಾಳೆ. ಈ ನಟಿಗಾಗಿ ನಿರ್ದೇಶಕರು ಕಾಲ್‌ಶೀಟ್‌ಗೆ ವೇಟಿಂಗ್ ಮಾಡ್ತಿದ್ದಾರೆ. ಕನ್ನಡ ಡೈರೆಕ್ಟರ್ಸ್ ಕಾಯ್ತಿದ್ದಾರೆ.

Read Full Story

06:36 PM (IST) Sep 23

Sudeep ಮಡಿಲಿನಲ್ಲಿ ಮಗುವಾಗಿ ಅಮ್ಮ - ಅದ್ಭುತ ಕಲೆಗೆ ಕಿಚ್ಚ ಭಾವುಕ- ಚಪ್ಪಲಿ ಬಿಟ್ಟು ಕೃತಿ ಸ್ವೀಕಾರ...

ಕಲಾವಿದ ಭರತ್ ಭೂಪತಿ ಅವರು, ನಟ ಸುದೀಪ್ ಅವರ ನಿಧನರಾದ ತಾಯಿ ಸರೋಜಾ ಅವರ ಚಿತ್ರವನ್ನು ರಚಿಸಿದ್ದಾರೆ. ಈ ಚಿತ್ರದಲ್ಲಿ ತಾಯಿ ಮಗನ ಮಡಿಲಲ್ಲಿ ಮಲಗಿದ್ದು, ಇದನ್ನು ಸ್ವೀಕರಿಸಿದ ಸುದೀಪ್ ಅರೆಕ್ಷಣ ಭಾವುಕರಾದರು. ತಮ್ಮ ತಾಯಿಯ ಬಗ್ಗೆ ಸುದೀಪ್ ಹೊಂದಿದ್ದ ಪ್ರೀತಿ ಈ ಲೇಖನ ವಿವರಿಸುತ್ತದೆ.

Read Full Story

06:32 PM (IST) Sep 23

ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ವೇಷದಲ್ಲಿ ತಮಿಳುನಾಡು ಕಳ್ಳರು; ಶ್ರೀಗಂಧ ಸಮೇತ ಸಿಕ್ಕಿಬಿದ್ದರು!

ಮಹದೇಶ್ವರ ಬೆಟ್ಟಕ್ಕೆ ಭಕ್ತರ ಸೋಗಿನಲ್ಲಿ ಬಂದು ಶ್ರೀಗಂಧ ಕಳ್ಳಸಾಗಣೆ ಮಾಡುತ್ತಿದ್ದ ತಮಿಳುನಾಡು ಮೂಲದ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ, ಓರ್ವ ಬಾಲಕ ಸೇರಿದಂತೆ ಇಬ್ಬರು ಸಿಕ್ಕಿಬಿದ್ದಿದ್ದು, ಅವರಿಂದ ಅಪಾರ ಪ್ರಮಾಣದ ಶ್ರೀಗಂಧದ ತುಂಡುಗಳ ವಶ.

Read Full Story

06:21 PM (IST) Sep 23

ಬೆಂಗಳೂರಿನಲ್ಲಿ ಒಂದು ರಸ್ತೆ ಗುಂಡಿ ಮುಚ್ಚಲು 5 ಲಕ್ಷ ಖರ್ಚು ಮಾಡ್ತಿದ್ಯಾ ಸರ್ಕಾರ?

Govt Spending ₹5 Lakh Per Bengaluru Pothole ಬೆಂಗಳೂರಿನ ರಸ್ತೆಗುಂಡಿಗಳನ್ನು ಮುಚ್ಚಲು ಸರ್ಕಾರ ₹750 ಕೋಟಿ ಮೀಸಲಿಟ್ಟಿದೆ. ಆದರೆ, ಪ್ರತಿ ಗುಂಡಿಗೆ ₹5 ಲಕ್ಷ ಖರ್ಚು ಮಾಡಲಾಗುತ್ತಿದೆ ಎಂಬ ಲೆಕ್ಕಾಚಾರವು ಪಾರದರ್ಶಕತೆ ಮತ್ತು ಕಾಮಗಾರಿಯ ಗುಣಮಟ್ಟದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Read Full Story

05:59 PM (IST) Sep 23

ರಾಕೇಶ್ ಪೂಜಾರಿ ಕಾಂತಾರ ಚಾಪ್ಟರ್-1 ನಗುವಿನ ರಾಯಭಾರಿ; ನಗಿಸುವ ವ್ಯಕ್ತಿ ಜೊತೆಗಿಲ್ಲದಿರುವುದೇ ಬೇಸರ!

'ಕಾಂತಾರ: ಚಾಪ್ಟರ್ 1' ಟ್ರೇಲರ್, ದೈವದ ಮೂಲ, ಕಾಡಿನ ಜನರ ಹೋರಾಟ ಮತ್ತು ನಾಯಕ-ರಾಣಿಯ ಪ್ರೇಮಕಥೆಯ ಸುಳಿವು ನೀಡುತ್ತದೆ. ರಾಜ ಮತ್ತು ಕಾಡಿನ ಜನರ ನಡುವಿನ ಯುದ್ಧ, ದೈವದ ಪ್ರವೇಶ ಹಾಗೂ ಅದ್ಭುತ ದೃಶ್ಯ ವೈಭವವಿದೆ. ಇದರ ನಡುವೆ ಇತ್ತೀಚೆಗೆ ನಿಧನ ಹೊಂದಿದ ರಾಕೇಶ್ ಪೂಜಾರಿ ನಟನಾ ದೃಶ್ಯವೂ ಸದ್ದು ಮಾಡುತ್ತಿದೆ.

Read Full Story

05:54 PM (IST) Sep 23

ನಮ್ಮ ಮನೆಯಲ್ಲೂ ಕನ್ನಡಿ ಇದೇರಿ... Body Shaming ಬಗ್ಗೆ Laskhmi Nivasa ಚಿನ್ನುಮರಿ ಗರಂ....

'ಲಕ್ಷ್ಮೀ ನಿವಾಸ' ಧಾರಾವಾಹಿ ಖ್ಯಾತಿಯ ನಟಿ ಚಂದನಾ ಅನಂತಕೃಷ್ಣ ಅವರು ಬಾಡಿ ಷೇಮಿಂಗ್​ ಮಾಡುವವರಿಗೆ ಖಡಕ್ ಉತ್ತರ ನೀಡಿದ್ದಾರೆ. ದಪ್ಪ, ಸಣ್ಣ ಎಂದು ಟೀಕಿಸುವವರಿಗೆ, ನಮ್ಮ ದೇಹದ ಬಗ್ಗೆ ನಮಗೆ ಅರಿವಿದೆ ಮತ್ತು ನಮ್ಮ ಮನೆಯಲ್ಲೂ ಕನ್ನಡಿ ಇದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.  

Read Full Story

05:52 PM (IST) Sep 23

ಕಾಂತಾರ ಚಾಪ್ಟರ್ 1 - ರಿಷಬ್ ಶೆಟ್ಟಿ ಸೇರಿದಂತೆ ಪ್ರಮುಖ ಕಲಾವಿದರು ಪಡೆದ ಸಂಭಾವನೆ ಎಷ್ಟು?

ಕಾಂತಾರ ಚಾಪ್ಟರ್ 1 ಚಿತ್ರದ ಬಜೆಟ್ 135 ಕೋಟಿ ಎಂದು ಹೇಳಲಾಗುತ್ತಿದ್ದು, ಚಿತ್ರದ ಪ್ರಮುಖ ಕಲಾವಿದರ ಸಂಭಾವನೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ಪಡೆದ ಸಂಭಾವನೆ ಎಷ್ಟು?

Read Full Story

05:44 PM (IST) Sep 23

ಭಾರತ ತಂಡದಲ್ಲಿ ಕರುಣ್‌ ನಾಯರ್‌ಗೆ ಸಿಗುತ್ತಾ ಇನ್ನೊಂದು ಚಾನ್ಸ್? ಕರುಣ್‌ಗೆ ಹಾದಿಗೆ ಅಡ್ಡಗಾಲು ಹಾಕುತ್ತಿರೋರ್ಯಾರು?

ಇಂಗ್ಲೆಂಡ್ ಪ್ರವಾಸದಲ್ಲಿ ನಿರಾಸೆ ಮೂಡಿಸಿದ ಕರುಣ್ ನಾಯರ್ ಅವರ ವೆಸ್ಟ್ ಇಂಡೀಸ್ ಸರಣಿಯ ಸ್ಥಾನವು ಅನಿಶ್ಚಿತವಾಗಿದೆ. ನಾಲ್ಕು ಪಂದ್ಯಗಳಿಂದ ಕೇವಲ 205 ರನ್ ಗಳಿಸಿ ವಿಫಲರಾದ ಅವರ ಸ್ಥಾನಕ್ಕೆ ದೇವದತ್ ಪಡಿಕ್ಕಲ್, ಶ್ರೇಯಸ್ ಅಯ್ಯರ್, ಮತ್ತು ಸಾಯಿ ಸುದರ್ಶನ್ ಅವರಂತಹ ಆಟಗಾರರು ಪೈಪೋಟಿ ನಡೆಸುತ್ತಿದ್ದಾರೆ.
Read Full Story

05:38 PM (IST) Sep 23

ವಿಜಯಪುರ ವಿಮಾನ ನಿಲ್ದಾಣಕ್ಕೆ ಬಂದ ₹12 ಕೋಟಿಗೊಂದ್ ಫೈರ್ ಇಂಜಿನ್ ವಾಹನ!

ವಿಜಯಪುರ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಕ್ಕೆ ಆಸ್ಟ್ರಿಯಾದಿಂದ ₹24 ಕೋಟಿ ವೆಚ್ಚದ ಎರಡು ಅತ್ಯಾಧುನಿಕ, ಕಂಪ್ಯೂಟರೀಕೃತ ಅಗ್ನಿಶಾಮಕ ವಾಹನಗಳು ಬಂದಿವೆ. ಈ ವಾಹನಗಳ ಆಗಮನದಿಂದ ವಿಮಾನ ನಿಲ್ದಾಣದ ಸುರಕ್ಷತಾ ಮಾನದಂಡಗಳು ಪೂರ್ಣಗೊಂಡಿದ್ದು, ಪರಿಸರ ಅನುಮತಿ ದೊರೆತ ತಕ್ಷಣ ಉದ್ಘಾಟನೆಗೆ ಸಿದ್ಧವಾಗಲಿದೆ.

Read Full Story

05:37 PM (IST) Sep 23

ಕಾಂಗ್ರೆಸ್ ಸರ್ಕಾರಕ್ಕೆ ಸಮಸ್ಯೆ ತಂದಿಟ್ಟ ಬೆಂಗಳೂರು ಟ್ರಾಫಿಕ್, ಅಜೀಂ ಪ್ರೇಮ್‌ಜೀಗೆ ಪತ್ರ ಬರೆದು ಸಹಾಯ ಕೇಳಿದ ಸಿಎಂ

ಬೆಂಗಳೂರಿನ ತೀವ್ರ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ, ಸಿಎಂ ಸಿದ್ದರಾಮಯ್ಯ ಅವರು ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್‌ಜೀ ಗೆ ಪತ್ರ ಬರೆದಿದ್ದಾರೆ. ಇಬ್ಲೂರು ಜಂಕ್ಷನ್ ಬಳಿಯ ದಟ್ಟಣೆ ಕಡಿಮೆ ಮಾಡಲು, ಪೀಕ್ ಅವರ್  ನಲ್ಲಿ ವಿಪ್ರೋ ಕ್ಯಾಂಪಸ್ ಮೂಲಕ ಸಂಚಾರಕ್ಕೆ ಅವಕಾಶ ನೀಡುವಂತೆ ಕೇಳಿದ್ದಾರೆ 

Read Full Story

04:44 PM (IST) Sep 23

ಜಿಎಸ್‌ಟಿ ಕಡಿಮೆ ಆದರೂ ಇಳಿಯದ ನಂದಿನಿ ಹಾಲಿನ ದರ ಇಳಿಯಲಿಲ್ಲ ಏಕೆ? ಕೆಎಂಎಫ್ ನೀಡಿದ ಸ್ಪಷ್ಟನೆ

ಜಿಎಸ್‌ಟಿ ದರ ಕಡಿತದ ನಂತರವೂ ಹಳೆಯ ದರದಲ್ಲಿ ಉತ್ಪನ್ನ ಮಾರಾಟದ ಆರೋಪಕ್ಕೆ ಕೆಎಂಎಫ್ ಸ್ಪಷ್ಟನೆ ನೀಡಿದೆ. ಅಮೆರಿಕದಲ್ಲಿ ಉತ್ಪನ್ನಗಳನ್ನು ಯಶಸ್ವಿಯಾಗಿ ಬಿಡುಗಡೆ ಮಾಡಲಾಗಿದ್ದು, ತಿರುಪತಿಗೆ ತುಪ್ಪ ಸರಬರಾಜು ಮುಂದುವರಿಸಲು ಸಿದ್ಧ ಎಂದು ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
Read Full Story

04:31 PM (IST) Sep 23

32 ಕ್ರಿಮಿನಲ್ ಪ್ರಕರಣ, ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರಿಗೆ ಆದೇಶ

ಹಲವು ಪ್ರಕರಣಗಳಲ್ಲಿ ಭಾಗಿಯಾದ ಆರೋಪದ ಮೇಲೆ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಒಂದು ವರ್ಷದ ಅವಧಿಗೆ ಗಡಿಪಾರು ಮಾಡಲಾಗಿದೆ. ಸಾರ್ವಜನಿಕ ಶಾಂತಿ ಕದಡುವ ಚಟuvಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರಿಂದ, ಪುತ್ತೂರು ಸಹಾಯಕ ಆಯುಕ್ತರು ಈ ಆದೇಶ ಹೊರಡಿಸಿದ್ದಾರೆ.

Read Full Story

04:30 PM (IST) Sep 23

ನೀವು ಎಫ್‌ಡಿ ಇಡುವ ಹಣಕ್ಕೆ ಅತಿಹೆಚ್ಚು ಬಡ್ಡಿ ನೀಡುವ ಟಾಪ್-7 ಬ್ಯಾಂಕ್‌ಗಳು!

ಫಿಕ್ಸೆಡ್ ಡೆಪಾಸಿಟ್‌ಗಳ ಬಡ್ಡಿ ದರದಲ್ಲಿನ ಸಣ್ಣ ವ್ಯತ್ಯಾಸವೂ ದೀರ್ಘಾವಧಿಯಲ್ಲಿ ದೊಡ್ಡ ಲಾಭ ತರಬಲ್ಲದು. ಈ ಲೇಖನವು ಎಚ್‌ಡಿಎಫ್‌ಸಿ, ಎಸ್‌ಬಿಐ, ಯೂನಿಯನ್ ಬ್ಯಾಂಕ್ ಸೇರಿದಂತೆ ಪ್ರಮುಖ ಬ್ಯಾಂಕ್‌ಗಳು ಒಂದು ವರ್ಷದ FD ಮೇಲೆ ನೀಡುವ ಬಡ್ಡಿ ದರಗಳನ್ನು ಹೋಲಿಸುತ್ತದೆ, ಇದರಿಂದ ನೀವು ಉತ್ತಮ ಆಯ್ಕೆ ಮಾಡಬಹುದು.
Read Full Story

02:57 PM (IST) Sep 23

ಅಕ್ಕ, ಅಕ್ಕಾ ಅಂತಾ ಬೆಕ್ಕಿನಂಗ ಬಂದ ಮುಕಳೆಪ್ಪ, ರೀಲ್ಸ್ ಮಾಡ್ತಾ ಮೋಸದಿಂದ ಮದ್ವಿಯಾದ; ಶಿವಕ್ಕ ಜಾಲಿಹಾಳ!

ರೀಲ್ಸ್ ಮಾಡಲು 'ಅಕ್ಕ' ಎಂದು ಕರೆಯುತ್ತಿದ್ದ ಕ್ವಾಜಾ ಅಲಿಯಾಸ್ ಮುಕಳೆಪ್ಪ, ತನ್ನ ಮಗಳು ಗಾಯತ್ರಿಯ ಮನಸ್ಸು ಬದಲಿಸಿ ಮದುವೆಯಾಗಿದ್ದಾನೆ ಎಂದು ತಾಯಿ ಶಿವಕ್ಕ ಜಾಲಿಹಾಳ ಆರೋಪಿಸಿದ್ದಾರೆ. ಸಾಂತ್ವನ ಕೇಂದ್ರದಲ್ಲಿರುವ ಮಗಳು ತನ್ನೊಂದಿಗೆ ಮಾತನಾಡಲು ನಿರಾಕರಿಸುತ್ತಿದ್ದಾರೆ.

Read Full Story

02:46 PM (IST) Sep 23

ಎಂತಹದ್ದೇ ಕಷ್ಟ ಬರಲಿ ಸಿಗಂದೂರು ದೇವಸ್ಥಾನದ ರಕ್ಷಣೆ ಹೊಣೆ ನಮ್ಮದು - ಮಧು ಬಂಗಾರಪ್ಪ

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸಿಗಂದೂರು ದಸರಾ ವೈಭವಕ್ಕೆ ಚಾಲನೆ ನೀಡಿ, ದೇವಸ್ಥಾನದ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ, 'ಸಿಗಂದೂರಿನ ಚಿತ್ತ ಸರ್ಕಾರಿ ಶಾಲೆಗಳತ್ತ' ಕಾರ್ಯಕ್ರಮದಡಿ ಶಾಲೆಗಳಿಗೆ ಬಣ್ಣ ವಿತರಿಸಲಾಯಿತು

Read Full Story

02:28 PM (IST) Sep 23

ಕನ್ನಡಕ್ಕೆ ಧಕ್ಕೆ ಬಂದಾಗ ನಾವು ಕೆರಳಿದರೆ ಮಾತ್ರ ಅಸ್ಮಿತೆ ಉಳಿಯಲು ಸಾಧ್ಯ - ಬರಗೂರು ರಾಮಚಂದ್ರಪ್ಪ

ತುರುವೇಕೆರೆಯಲ್ಲಿ ನಡೆದ 6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, ಕನ್ನಡದ ಶೋಚನೀಯ ಸ್ಥಿತಿಯ ಬಗ್ಗೆ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಕಳವಳ ವ್ಯಕ್ತಪಡಿಸಿದರು. ಕನ್ನಡದ ಅಸ್ಮಿತೆ ಉಳಿಸಲು ಕನ್ನಡಿಗರು ಕೆರಳಬೇಕೆಂದು ಕರೆ ನೀಡಿದರು.

Read Full Story

02:07 PM (IST) Sep 23

ಭಾರತದ ಈ ಗ್ರಾಮದಲ್ಲಿ ಪ್ರತಿ ಮನೆಯಲ್ಲೂ ಅವಳಿ ಮಕ್ಕಳು!

ಕೇರಳದ ಮಲಪ್ಪುರಂ ಜಿಲ್ಲೆಯ ಕೊಡಿನ್ಹಿ ಗ್ರಾಮವು 'ಅವಳಿಗಳ ಗ್ರಾಮ' ಎಂದೇ ಪ್ರಸಿದ್ಧವಾಗಿದೆ. ಇಲ್ಲಿನ ಅತಿ ಹೆಚ್ಚಿನ ಅವಳಿ ಜನನ ದರಕ್ಕೆ ಕಾರಣವನ್ನು ಕಂಡುಹಿಡಿಯಲು ವಿಜ್ಞಾನಿಗಳಿಗೂ ಸಾಧ್ಯವಾಗಿಲ್ಲ, ಇದು ಜಾಗತಿಕವಾಗಿ ಕುತೂಹಲ ಕೆರಳಿಸಿದೆ. 

Read Full Story

01:47 PM (IST) Sep 23

ಫಸ್ಟ್‌ ನೈಟ್ ದಿನ ಮಂಚವೇರದ ಗಂಡನಿಂದ ₹2 ಕೋಟಿ ಹಣ ಕೇಳಿದ ಹೆಂಡತಿ!

Wife Demands Money from Husband After First Night ಬೆಂಗಳೂರಿನಲ್ಲಿ, ಮದುವೆಯಾದ ಮೊದಲ ರಾತ್ರಿ ಲೈಂಗಿಕ ಕ್ರಿಯೆ ನಡೆಸದ ಕಾರಣಕ್ಕೆ ಪತಿಯಿಂದ ಪತ್ನಿ ಹಾಗೂ ಆಕೆಯ ಕುಟುಂಬದವರು 2 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾರೆ.

Read Full Story

01:39 PM (IST) Sep 23

ಸಮೀಕ್ಷೆಯಿಂದ ಯಾವುದೇ ಜಾತಿ, ಧರ್ಮಕ್ಕೆ ತೊಂದರೆ ಇಲ್ಲ - ಬೋಸರಾಜು

ರಾಜ್ಯ ಸರ್ಕಾರದ ಸಮೀಕ್ಷೆಯಿಂದ ಯಾವುದೇ ಜಾತಿ, ಧರ್ಮಕ್ಕೆ ತೊಂದರೆಯಿಲ್ಲ, ಇದು ಜನರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ತಿಳಿಯಲು ನಡೆಸಲಾಗುತ್ತಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು ಸ್ಪಷ್ಟಪಡಿಸಿದ್ದಾರೆ. 

Read Full Story

01:25 PM (IST) Sep 23

ಕರ್ನಾಟಕದ ಈ ದೇವಸ್ಥಾನದಿಂದ ಕತ್ರಿನಾ ಕೈಫ್‌ಗೆ ಸಂತಾನ ಭಾಗ್ಯ; 42ನೇ ವರ್ಷಕ್ಕೆ ಗರ್ಭಿಣಿ, 6 ತಿಂಗಳಲ್ಲಿ ಫಲ

Katrina Kaif Pregnancy: ನಟಿ ಕತ್ರಿನಾ ಕೈಫ್‌ ಹಾಗೂ ವಿಕ್ಕಿ ಕೌಶಲ್‌ ಅವರು ಪಾಲಕರಾಗುತ್ತಿದ್ದಾರೆ ಎಂದು 2 ವರ್ಷಗಳಿಂದ ಒಂದಲ್ಲ ಒಂದು ಗಾಸಿಪ್‌ ಹರಡುತ್ತಲೇ ಇತ್ತು. ಈ ಬಗ್ಗೆ ಈ ಜೋಡಿ ಮೌನ ಮುರಿದಿರಲಿಲ್ಲ. ಈಗ ತಾಯಿ ಆಗುತ್ತಿರೋದು ಸತ್ಯ ಎಂದು ಹೇಳಿಕೊಂಡಿದ್ದಾರೆ. 

 

Read Full Story

01:25 PM (IST) Sep 23

ಮುಕಳೆಪ್ಪಗಿದೆ 8 ಹುಡುಗಿಯರೊಂದಿಗೆ ಸಂಬಂಧ; ಲವ್ ಜಿಹಾದ್‌ಗೆ ಗಾಯತ್ರಿ ಮೊದಲ ಬಲಿ ಎಂದ ಪ್ರಮೋದ್ ಮುತಾಲಿಕ್!

ಧಾರವಾಡದಲ್ಲಿ ಕ್ವಾಜಾ ಮತ್ತು ಗಾಯತ್ರಿ ನಡುವಿನ ಪ್ರೇಮ ಪ್ರಕರಣವನ್ನು 'ಲವ್ ಜಿಹಾದ್' ಎಂದು ಕರೆದಿರುವ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಇದು ಮೋಸದ ಮದುವೆ ಎಂದು ಆರೋಪಿಸಿದ್ದಾರೆ. ಕ್ವಾಜಾ ಇನ್ನೂ 8 ಯುವತಿಯರಿಗೆ ಸಂಬಂಧವಿದ್ದು, ಎಲ್ಲವನ್ನೂ ಬಹಿರಂಗ ಮಾಡೋದಾಗಿ ತಿಳಿಸಿದ್ದಾರೆ.

Read Full Story

01:02 PM (IST) Sep 23

ಕೂಡ್ಲಿಗಿ - ಗಾಳಿಯಂತ್ರಗಳ ಕಿರಿಕಿರಿಗೆ ಗ್ರಾಮಸ್ಥರ ಬದುಕು ಮೂರಾಬಟ್ಟೆ!

ಕೂಡ್ಲಿಗಿ ತಾಲೂಕಿನ ಕರ್ನಾರಹಟ್ಟಿ ಸುತ್ತಮುತ್ತಲಿನ ಗ್ರಾಮಗಳಲ್ಲಿ, ವಾಸಸ್ಥಳದ ಸಮೀಪದಲ್ಲೇ ಸ್ಥಾಪಿಸಲಾದ ಗಾಳಿಯಂತ್ರಗಳ ಕರ್ಕಶ ಶಬ್ದದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಸಂಜೆಯಾಗುತ್ತಿದ್ದಂತೆ ಹೆಚ್ಚಾಗುವ ಈ ಶಬ್ದದಿಂದ ಮಕ್ಕಳ ಓದಿಗೆ ಮತ್ತು ಜನರ ನಿದ್ದೆಗೆ ತೊಂದರೆಗೊಳಗಾಗಿದ್ದಾರೆ.

Read Full Story

12:48 PM (IST) Sep 23

'ಕಾಂತಾರ' ಸಿನಿಮಾಗಾಗಿ ಕನ್ನಡ ಚಿತ್ರರಂಗದ ಬಲಿ ಸಾಧ್ಯವಿಲ್ಲ - ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ - ಸಾ.ರಾ.ಗೋವಿಂದು

ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಟಿಕೆಟ್ ದರವನ್ನು ₹200ಕ್ಕೆ ಸೀಮಿತಗೊಳಿಸಿದ ಸರ್ಕಾರದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ. 'ಕಾಂತಾರ'ದಂತಹ ದೊಡ್ಡ ಬಜೆಟ್‌ನ ಚಿತ್ರಗಳಿಗಾಗಿ ಕನ್ನಡ ಚಿತ್ರರಂಗವನ್ನು ಬಲಿಗೊಡಲು ಸಾಧ್ಯವಿಲ್ಲ ಎಂದು ಸಾ.ರಾ. ಗೋವಿಂದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read Full Story

12:34 PM (IST) Sep 23

'Bigg Boss ಬಗ್ಗೆ ಎಲ್ಲಾ ಗೊತ್ತು ಅಂತೀರಾ?' ಎನ್ನುತ್ತಲೇ ಹೊಸ ಪ್ರೊಮೋದಲ್ಲಿ ತಲೆಗೆ ಹುಳ ಬಿಟ್ಟ ಕಿಚ್ಚ ಸುದೀಪ್!

ಕಿಚ್ಚ ಸುದೀಪ್ ನಿರೂಪಣೆಯ ಬಿಗ್​ಬಾಸ್​ ಕನ್ನಡ ಸೀಸನ್​ 12ಕ್ಕೆ ಕ್ಷಣಗಣನೆ ಆರಂಭವಾಗಿದೆ. ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಚರ್ಚೆಯಾಗುತ್ತಿದ್ದು, ವಜ್ರ ಖಚಿತವಾದ ಹೊಸ ಲೋಗೋ ಮತ್ತು ಕುತೂಹಲಕಾರಿ ಪ್ರೊಮೋಗಳು ವೀಕ್ಷಕರ ನಿರೀಕ್ಷೆಯನ್ನು ಹೆಚ್ಚಿಸಿವೆ.
Read Full Story

12:27 PM (IST) Sep 23

ಆಕ್ರಮ ಆಸ್ತಿ ಸಂಪಾದನೆ ಕೇಸ್ - ಲೋಕಾಯುಕ್ತ ಪೊಲೀಸರಿಂದ ಸಚಿವ ಜಮೀರ್ ವಿಚಾರಣೆ

ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್‌ ಅವರನ್ನು ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಚಾರಣೆಗೆ ಹಾಜರಾದ ಜಮೀರ್, ತಮ್ಮ ವ್ಯವಹಾರಗಳು ಕಾನೂನುಬದ್ಧವಾಗಿವೆ ಮತ್ತು ಅಕ್ರಮವಾಗಿ ಆಸ್ತಿ ಸಂಪಾದಿಸಿಲ್ಲ ಎಂದಿದ್ದಾರೆ.

Read Full Story

12:09 PM (IST) Sep 23

ದಸರಾ ಆರಂಭದ ಬೆನ್ನಲ್ಲೇ ಚಾಮುಂಡಿ ಬೆಟ್ಟದ ಶಿವಾರ್ಚಕ ನಿಧನ, ಇಂದು ದರ್ಶನಕ್ಕೆ ಕೆಲಕಾಲ ನಿರ್ಬಂಧ

Chamundi Betta Priest Dies Dasara Darshan Temporarily Suspended in Mysuru ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಆರಂಭವಾದ ಬೆನ್ನಲ್ಲೇ ಚಾಮುಂಡಿ ಬೆಟ್ಟದ ಶಿವಾರ್ಚಕರಾದ ವಿ. ರಾಜು ಅವರು ಹಠಾತ್ ನಿಧನರಾಗಿದ್ದಾರೆ.

 

Read Full Story

12:00 PM (IST) Sep 23

ನವರಾತ್ರಿಯಂದು ಹೊಸ ಅವತಾರ ಎತ್ತಿದ ಭಾರ್ಗವಿ LLB! ಏನಿದು ಹೊಸ ಅವತಾರ? ಏನಿದು ಟ್ವಿಸ್ಟ್​?

ಕಲರ್ಸ್ ಕನ್ನಡದ 'ಭಾರ್ಗವಿ ಎಲ್ಎಲ್​ಬಿ' ಧಾರಾವಾಹಿಯಲ್ಲಿ, ತನ್ನ ಶತ್ರುವಿನ ಮಗನನ್ನೇ ಮದುವೆಯಾಗಿ ಸಂಕಷ್ಟದಲ್ಲಿರುವ ಭಾರ್ಗವಿಯ ಕಥೆಯ ನಡುವೆ, ನವರಾತ್ರಿ ವಿಶೇಷ ಸಂಚಿಕೆಯಲ್ಲಿ ಬ್ರಹ್ಮಚಾರಿಣಿ ದೇವಿಯ ಅವತಾರವನ್ನು ನಟಿ ರಾಧಾ ಭಗವತಿ ನಿರೂಪಿಸಲಿದ್ದಾರೆ.  

Read Full Story

11:57 AM (IST) Sep 23

ಪ್ರಧಾನಿ ಮೋದಿ ರೀತಿ ಸಿದ್ದರಾಮಯ್ಯ ತೆರಿಗೆ ಇಳಿಸ್ತಾರಾ? ಬೊಮ್ಮಾಯಿ ಪ್ರಶ್ನೆ

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಪ್ರಧಾನಿ ಮೋದಿ ಜಿಎಸ್‌ಟಿ ಸರಳೀಕರಿಸಿ ತೆರಿಗೆ ಭಾರ ಕಡಿಮೆ ಮಾಡಿದ್ದನ್ನು ಶ್ಲಾಘಿಸಿದ್ದಾರೆ. ಆದರೆ, ಕರ್ನಾಟಕದ ಸಿದ್ದರಾಮಯ್ಯ ಸರ್ಕಾರ ಪೆಟ್ರೋಲ್, ಸ್ಟ್ಯಾಂಪ್ ಡ್ಯೂಟಿ ಸೇರಿದಂತೆ ಹಲವು ವಸ್ತುಗಳ ಮೇಲೆ ಹೊಸ ತೆರಿಗೆ ಹಾಕಿ ಜನವಿರೋಧಿ ನೀತಿ ಅನುಸರಿಸುತ್ತಿದೆ.

Read Full Story

11:44 AM (IST) Sep 23

ಮಲ್ಟಿಪ್ಲೆಕ್ಸ್, ಚಿತ್ರಮಂದಿರದಲ್ಲಿ ಏಕರೂಪದ ₹200 ಸಿನಿಮಾ ಟಿಕೆಟ್ ದರ ಆದೇಶಕ್ಕೆ ತಡೆ ಕೊಟ್ಟ ಹೈಕೋರ್ಟ್‌!

ಕರ್ನಾಟಕದಲ್ಲಿ ಸಿನಿಮಾ ಟಿಕೆಟ್ ದರವನ್ನು ₹200ಕ್ಕೆ ಸೀಮಿತಗೊಳಿಸಿದ್ದ ಸರ್ಕಾರದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ. ಹೊಂಬಾಳೆ ಫಿಲ್ಮ್ಸ್‌ ಸೇರಿದಂತೆ ಹಲವು ಚಿತ್ರಮಂದಿ ಮಾಲೀಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್,  ಆದೇಶ ಹೊರಡಿಸಿದ್ದು, ಮಾಲೀಕರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.

Read Full Story

11:42 AM (IST) Sep 23

ನೋ ಕಾಸ್ಟ್ ಇಎಂಐ ಕುರಿತು ಗಮನಿಸಬೇಕಾದ ವಿಚಾರಗಳು..

What You Must Know About Hidden Charges Before You Shop ಹಬ್ಬದ ಸೀಸನ್‌ನಲ್ಲಿ ನೀಡಲಾಗುವ 'ನೋ ಕಾಸ್ಟ್‌ ಇಎಂಐ' ಆಫರ್‌ಗಳು ಆಕರ್ಷಕವಾಗಿ ಕಂಡರೂ, ಅವುಗಳಲ್ಲಿ ಪ್ರೊಸೆಸಿಂಗ್ ಶುಲ್ಕ, ತೆರಿಗೆಗಳಂತಹ ಗುಪ್ತ ವೆಚ್ಚಗಳಿರುತ್ತವೆ.

Read Full Story

More Trending News