MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Business
  • ನೋ ಕಾಸ್ಟ್ ಇಎಂಐ ಕುರಿತು ಗಮನಿಸಬೇಕಾದ ವಿಚಾರಗಳು..

ನೋ ಕಾಸ್ಟ್ ಇಎಂಐ ಕುರಿತು ಗಮನಿಸಬೇಕಾದ ವಿಚಾರಗಳು..

What You Must Know About Hidden Charges Before You Shop ಹಬ್ಬದ ಸೀಸನ್‌ನಲ್ಲಿ ನೀಡಲಾಗುವ 'ನೋ ಕಾಸ್ಟ್‌ ಇಎಂಐ' ಆಫರ್‌ಗಳು ಆಕರ್ಷಕವಾಗಿ ಕಂಡರೂ, ಅವುಗಳಲ್ಲಿ ಪ್ರೊಸೆಸಿಂಗ್ ಶುಲ್ಕ, ತೆರಿಗೆಗಳಂತಹ ಗುಪ್ತ ವೆಚ್ಚಗಳಿರುತ್ತವೆ.

2 Min read
Santosh Naik, Kannadaprabha News
Published : Sep 23 2025, 11:42 AM IST
Share this Photo Gallery
  • FB
  • TW
  • Linkdin
  • Whatsapp
18
ನೋ ಕಾಸ್ಟ್‌ ಇಎಂಐ
Image Credit : Google

ನೋ ಕಾಸ್ಟ್‌ ಇಎಂಐ

ಹಬ್ಬದ ಸೀಸನ್‌ನಲ್ಲಿ ಕಂಪನಿಗಳು ನೋ ಕಾಸ್ಟ್ ಇಎಂಐ, ರಿಯಾಯಿತಿ, ಅರ್ಧಕ್ಕರ್ಧ ಕಡಿಮೆ ಬೆಲೆ ಇತ್ಯಾದಿ ಆಫರ್‌ಗಳನ್ನು ನೀಡುತ್ತವೆ. ಈ ಸಂದರ್ಭದಲ್ಲಿ ಗ್ರಾಹಕರು ಗಮನ ನೀಡಬೇಕಾದ ಕೆಲವು ವಿಚಾರಗಳನ್ನು ಇಲ್ಲಿ ನೀಡಲಾಗಿದೆ.

28
ಖರೀದಿಯಿಂದ ಲಾಭ ಇದೆಯಾ?
Image Credit : Google

ಖರೀದಿಯಿಂದ ಲಾಭ ಇದೆಯಾ?

ಹೊಸ ಫೋನ್, 4ಕೆ ಟಿವಿ, ಸೋಫಾ ಸೆಟ್ಟು, ಫ್ರಿಡ್ಜ್.. ಹೀಗೆ ಹಬ್ಬ ಬಂತೆಂದರೆ ಮನೆಗೆ ಬರುವ ವಸ್ತುಗಳೆಷ್ಟೋ. ಕಡಿಮೆ ಬೆಲೆಯಲ್ಲಿ ಇಷ್ಟೆಲ್ಲ ಖರೀದಿಯಾಯ್ತು ಅಂತ ನಿಟ್ಟುಸಿರು ಬಿಡುವ ಮೊದಲು ನಿಜಕ್ಕೂ ಈ ಖರೀದಿಯಿಂದ ಲಾಭವಾಗಿದೆಯಾ ಅಂತ ಆಲೋಚಿಸಬೇಕಿದೆ.

Related Articles

Related image1
ಮೊಬೈಲ್‌ನ ಇಎಂಐ ಕಟ್ಟಿಲ್ವಾ? ನಿಮ್ಮಫೋನ್‌ ಶೀಘ್ರವೇ ಲಾಕ್‌ ಆಗಬಹುದು!
Related image2
ಛೀ ಇವನೆಂಥಾ ಗಂಡ: ಹೆಂಡ್ತಿ ಸ್ನಾನದ ವೀಡಿಯೋ ಮಾಡಿ ಕಾರಿನ ಇಎಂಐ ಕಟ್ಟುವಂತೆ ಬ್ಲಾಕ್‌ಮೇಲ್
38
ಅರಿವಿಗೆ ಬರದ ಗುಪ್ತ ಶುಲ್ಕಗಳು
Image Credit : Google

ಅರಿವಿಗೆ ಬರದ ಗುಪ್ತ ಶುಲ್ಕಗಳು

ಹಬ್ಬದ ಸಂದರ್ಭಗಳ ಬಹಳ ಜನರನ್ನು ಆಕರ್ಷಿಸುವುದು ಕಂಪನಿಗಳ ನೋ ಕಾಸ್ಟ್ ಇಎಂಐ ಆಫರ್, ಆದರೆ ನೆನಪಿಟ್ಟುಕೊಳ್ಳಬೇಕಾದ ಅಂಶ ಅಂದರೆ ನೋ ಕಾಸ್ಟ್‌ ಇಎಂಐ ಅಂದಾಕ್ಷಣ 30,000 ರು. ಬೆಲೆಯ ಫೋನ್ ನಿಮ್ಮ ಕೈಗೆ ಅಷ್ಟೇ ಬೆಲೆಗೆ ಬರುವುದಿಲ್ಲ. ಅದರಲ್ಲಿ ಪ್ರೊಸೆಸಿಂಗ್ ಫೀಸ್ ಇರುತ್ತದೆ, ಕೆಲವೊಂದು ಟ್ಯಾಕ್ಸ್ ಗಳಿರುತ್ತವೆ. ಇಎಂಐ ಕಾರಣಕ್ಕೆ ಕ್ಯಾಶ್ ಡಿಸೌಂಟ್ ಗಳು ಕಟ್ ಆಗುತ್ತವೆ. ಇವೆಲ್ಲಾ ಆಗಿ ಫೋನ್ ನಿಮ್ಮ ಕೈಗೆ ಬರುವಾಗ ನೈಜ ಬೆಲೆಗಿಂತ ಎಷ್ಟೋ ಹೆಚ್ಚಿನ ಮೊತ್ತ ಕೈಜಾರಿರುತ್ತದೆ.

48
ದಂಡದ ಭೀತಿ
Image Credit : Google

ದಂಡದ ಭೀತಿ

ನೋ ಕಾಸ್ಟ್ ಇಎಂಐ ಇದೆ ಅಂದರೂ ಒಂದು ತಿಂಗಳು ಇಎಂಐ ಮೊತ್ತ ಕಟ್ಟದಿದ್ದರೆ ಅದಕ್ಕೆ ದಂಡ ಬೀಳುತ್ತದೆ. ಇದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೂ ಪರಿಣಾಮ ಬೀರುತ್ತದೆ. ಅಲ್ಲಿಗೆ ಮತ್ತೊಂದಷ್ಟು ಹಣ ಕೈಜಾರಿದಂತೆ. ಇದು ಅನೇಕ ಹಣಕಾಸು ವ್ಯವಹಾರಗಳಿಗೆ ತಡೆಯಾಗಲೂಬಹುದು.

58
ಅನಾವಶ್ಯಕ ಪೋಲು
Image Credit : Google

ಅನಾವಶ್ಯಕ ಪೋಲು

ನಿಮಗೆ 20,000 ರು. ಬೆಲೆಯ ಫೋನ್ ಬೇಕಿರುತ್ತದೆ. ಹೇಗಿದ್ದರೂ ನೋ ಕಾಸ್ಟ್ ಇಎಂಐ ಇದೆಯಲ್ಲ ತಿಂಗಳಿಗೆ ಒಂದೂವರೆಯೋ ಎರಡು ಸಾವಿರವೋ ಕಟ್ಟುವುದು ಕಷ್ಟವಲ್ಲ ಎನಿಸಿ 35,000 ರು.ನ ಮೊಬೈಲ್ ಕೊಳ್ಳುತ್ತೀರಿ. ಇದರಿಂದ ಇಎಂಐ ಮೂಲಕ ಜೇಬಿಗೆ ಕತ್ತರಿ ಬೀಳುವ ಜೊತೆ ಹಣ ಪೋಲು ಮಾಡಿದಂತೆಯೂ ಆಗುತ್ತದೆ.

68
ಹೆಚ್ಚುವ ಒತ್ತಡ
Image Credit : Google

ಹೆಚ್ಚುವ ಒತ್ತಡ

ಹಬ್ಬದ ಆಫರ್ ನೆವದಲ್ಲಿ ಅಗತ್ಯ ಇದೆಯೋ ಇಲ್ಲವೋ ರಿಯಾಯಿತಿಗೆ ಮಾರುಹೋಗಿ ಖರೀದಿಸುವ ಮನಸ್ಥಿತಿ ಹಲವರಲ್ಲಿದೆ. ಇದು ಆ ಕ್ಷಣಕ್ಕೆ ಖುಷಿ ಕೊಡಬಹುದು. ಆದರೆ ಹಬ್ಬದ ಖರೀದಿಗೆಂದು ತೆಗೆದಿಟ್ಟ ಬಜೆಟ್ ಇದರಿಂದ ಮೀರಿ ಹೋಗುತ್ತದೆ. ಖರ್ಚು ಮಾಡಿದ ಹಣ ಮತ್ತೆ ಸಂಗ್ರಹಿಸಲು ಒದ್ದಾಡಬೇಕಿರುತ್ತದೆ. ಜೀವನ ನಿರ್ವಹಣೆಯ ಮೇಲೂ ಇದು ಪರಿಣಾಮ ಬೀರಬಹುದು.

78
ಅಗತ್ಯವಿಲ್ಲದೇ ಖರೀದಿಸಿದ ಹತಾಶೆ
Image Credit : Google

ಅಗತ್ಯವಿಲ್ಲದೇ ಖರೀದಿಸಿದ ಹತಾಶೆ

ಹೆಚ್ಚಿನವರ ಬದುಕು ಅವರ ಔದ್ಯೋಗಿಕತೆ ಮೇಲೆ ನಿಂತಿದೆ. ಅನಿರೀಕ್ಷಿತ ಕ್ಷಣದಲ್ಲಿ ಕೆಲಸ ಕೈತಪ್ಪಬಹುದು, ಆರೋಗ್ಯ ಸಮಸ್ಯೆಗಳಾಗಿ ಹಣಕ್ಕೆ ಪರದಾಡಬೇಕಾದ ಸ್ಥಿತಿ ಬರಬಹುದು. ಇಂಥಾ ಸನ್ನಿವೇಶಗಳಲ್ಲಿ ದುಂದುವೆಚ್ಚ ಮಾಡಿದ್ದಕ್ಕೆ ಹತಾಶೆ ಆವರಿಸಬಹುದು. ಖುಷಿಗೆಂದು ಖರೀದಿಸಿದ್ದು ನಿರಾಸೆ ಹೆಚ್ಚಿಸುವಂತಾದರೆ ಆ ಖರೀದಿಯೇ ನೋವು ಕೊಡಬಹುದು.

88
ನಿಮಗೆ ಗೊತ್ತಾಗದೇ ಇರುವಂಥ ನಿಯಮಗಳಿರುತ್ತವೆ
Image Credit : Google

ನಿಮಗೆ ಗೊತ್ತಾಗದೇ ಇರುವಂಥ ನಿಯಮಗಳಿರುತ್ತವೆ

ಒಟ್ಟಿನಲ್ಲಿ ಹಬ್ಬ ಅಥವಾ ಇನ್ನಿತರ ನೆವದಲ್ಲಿ ಕಂಪನಿಗಳು ನೀಡುವ ಆಕರ್ಷಕ ಆಫರ್‌ಗಳು, ನೋ ಕಾಸ್ಟ್ ಇಎಂಐ ಹಿಂದೆ ಹಲವಾರು ಅಗೋಚರ ನಿಯಮಗಳಿರುತ್ತವೆ. ಯಾವುದಕ್ಕೂ ಖರೀದಿಗೆ ಮೊದಲು ಹತ್ತು ಸಲ ಯೋಚಿಸಿ, ಎರಡು ದಿನ ಕಾದು ಮತ್ತೂ ಅವಶ್ಯಕತೆ ಇದೆ ಅಂತನಿಸಿದರೆ ಖರೀದಿಸುವುದು ಜಾಣತನ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ವ್ಯವಹಾರ
ವ್ಯಾಪಾರ ಸುದ್ದಿ
ವೈಯಕ್ತಿಕ ಹಣಕಾಸು
ಹಣ (Hana)
ಇಎಂಐ (ಸಮಾನ ಮಾಸಿಕ ಕಂತುಗಳು)
ಆನ್‌ಲೈನ್ ಶಾಪಿಂಗ್

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved