- Home
- Entertainment
- Sandalwood
- ಕಾಂತಾರ ಚಾಪ್ಟರ್ 1: ರಿಷಬ್ ಶೆಟ್ಟಿ ಸೇರಿದಂತೆ ಪ್ರಮುಖ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಕಾಂತಾರ ಚಾಪ್ಟರ್ 1: ರಿಷಬ್ ಶೆಟ್ಟಿ ಸೇರಿದಂತೆ ಪ್ರಮುಖ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಕಾಂತಾರ ಚಾಪ್ಟರ್ 1 ಚಿತ್ರದ ಬಜೆಟ್ 135 ಕೋಟಿ ಎಂದು ಹೇಳಲಾಗುತ್ತಿದ್ದು, ಚಿತ್ರದ ಪ್ರಮುಖ ಕಲಾವಿದರ ಸಂಭಾವನೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ಪಡೆದ ಸಂಭಾವನೆ ಎಷ್ಟು?

ಕಾಂತಾರ ಚಾಪ್ಟರ್ 1
ಚಂದನವನದಲ್ಲಿ ಅರಳಿರುವ ಕಾಂತಾರ ಚಾಪ್ಟರ್ 1 ಇಡೀ ವಿಶ್ವ ಸಿನಿಲೋಕದ ಗಮನ ಸೆಳೆದಿದೆ. ಚಿತ್ರದ ಟ್ರೈಲರ್ ಕಂಡು ಇನ್ನುಳಿದ ಭಾಷೆಯ ಸಿನಿಮಾ ಉದ್ಯಮ ಅಚ್ಚರಿ ವ್ಯಕ್ತಪಡಿಸುತ್ತಿದೆ. ಟ್ರೈಲರ್ ನಿಂದ ಸಾವಿರಾರುಪಟ್ಟು ನಿರೀಕ್ಷೆ ಹುಟ್ಟಿಸಿರುವ ಕಾಂತಾರ ಚಾಪ್ಟರ್ 1 ಇದೇ ಅಕ್ಟೋಬರ್ 2 ರಂದು ಬಿಡುಗಡೆಯಾಗುತ್ತಿದೆ. ಹೊಂಬಾಳೆ ಫಿಲಂಸ್ ಚಿತ್ರಕ್ಕೆ ನೂರಾರು ಕೋಟಿ ಬಂಡವಾಳವನ್ನು ಹೂಡಿಕೆ ಮಾಡಿದೆ.
ರುಕ್ಮಿಣಿ ವಸಂತ್ ಲುಕ್
ಕಾಂತಾರ ಚಾಪ್ಟರ್ 1ರ ನಿರ್ದೇಶನದ ಜೊತೆ ನಾಯಕ ನಟರಾಗಿಯೂ ರಿಷಬ್ ಶೆಟ್ಟಿ ನಟಿಸಿದ್ದಾರೆ. ರುಕ್ಮಿಣಿ ವಸಂತ್ ಲುಕ್‌ಗೆ ಅಭಿಮಾನಿಗಳು ಐಸ್ ನಂತೆ ಕರಗಿದ್ದಾರೆ. ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೂ ದೇವಕನ್ಯೆಯಾಗಿಯೇ ರುಕ್ಮಿಣಿ ವಸಂತ ಆಗಮಿಸಿದ್ದರು. ನಟಿಯ ಅಂದಕ್ಕೆ ಮನಸೋತ ಅಭಿಮಾನಿಗಳು, ನೀವು ನ್ಯಾಷನಲ್ ಅಲ್ಲ. ಇಂಟರ್‌ನ್ಯಾಷನಲ್ ಕ್ರಶ್ ಎಂದು ನಟಿಯ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Kantara Chapter 1 ಸೆಟ್ನಲ್ಲಿ ನಾಲ್ಕೈದು ಸಲ ನಾನು ಸತ್ತೇ ಹೋಗ್ವೇಕಿತ್ತು... ನಟ ರಿಷಬ್ ಶೆಟ್ಟಿ ಭಾವುಕ
135 ಕೋಟಿ ರೂಪಾಯಿ ಹೂಡಿಕೆ
ಕಾಂತಾರ ಚಾಪ್ಟರ್ 1ರಲ್ಲಿ ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ, ಜಯರಾಮ್, ಗುಲ್ಶನ್ ದೇವಯ್ಯ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಚಿತ್ರದ ಕಲಾವಿದರ ಸಂಭಾವನೆ ಎಷ್ಟಿರಬಹುದು ಎಂಬುದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ಶುರುವಾಗಿದೆ. ಕೆಲವು ವರದಿಗಳ ಪ್ರಕಾರ, ಚಿತ್ರಕ್ಕಾಗಿ ಹೊಂಬಾಳೆ ಫಿಲಂಸ್ 135 ಕೋಟಿ ರೂಪಾಯಿ ಹೂಡಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ. ಮೊದಲ ಭಾಗ ಕೇವಲ 15 ಕೋಟಿ ರೂ. ಬಜೆಟ್‌ನಲ್ಲಿ ಸೆಟ್ಟೇರಿತ್ತು. ಚಿತ್ರದ ಬಜೆಟ್ ಬಗ್ಗೆ ಸಿನಿತಂಡದಿಂದ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲ.
ಕಾಂತಾರ ಚಾಪ್ಟರ್ 1 ಕಲಾವಿದರ ಸಂಭಾವನೆ
ಕೆಲವು ಸಿನಿಮಾ ವೆಬ್‌ಸೈಟ್‌ಗಳು ಕಾಂತಾರ ಚಾಪ್ಟರ್ 1 ಕಲಾವಿದರ ಸಂಭಾವನೆ ಎಷ್ಟು ಎಂದು ವರದಿ ಮಾಡಿವೆ. ಆದ್ರೆ ಈ ಅಂಕಿಅಂಶಗಳನ್ನು ಚಿತ್ರತಂಡ ದೃಢಪಡಿಸಿಲ್ಲ. ಸೋಶಿಯಲ್ ಮೀಡಿಯಾದಲ್ಲಿಯೂ ಸಂಭಾವನೆ ಕುರಿತ ಪೋಸ್ಟ್‌ಗಳು ವೈರಲ್ ಆಗುತ್ತಿದೆ. ಹಾಗಾದ್ರೆ ಪ್ರಮುಖ ಕಲಾವಿದರ ಸಂಭಾವನೆ ಎಷ್ಟು ಎಂದು ನೋಡೋಣ ಬನ್ನಿ.
- ರಿಷಬ್ ಶೆಟ್ಟಿ: 100 ಕೋಟಿ ರೂಪಾಯಿ
- ಗುಲ್‌ಶನ್ ದೇವಯ್ಯ: 1 ಕೋಟಿ ರೂಪಾಯಿ
- ಜಯರಾಮ್: 1 ಕೋಟಿ ರೂಪಾಯಿ
- ರುಕ್ಮಿಣಿ ವಸಂತ: 1 ಕೋಟಿ ರೂಪಾಯಿ
ನಿರ್ದೇಶನದೊಂದಿಗೆ ನಟನೆಯೂ ಮಾಡಿರುವ ಹಿನ್ನೆಲೆ ರಿಷಬ್ ಶೆಟ್ಟಿ ಸಂಭಾವನೆ ಅಧಿಕವಾಗಿದೆ ಎನ್ನಲಾಗಿದೆ. ರಿಷಬ್ ಮಡದಿ ಪ್ರಗತಿ ಶೆಟ್ಟಿ ಚಿತ್ರಕ್ಕೆ ವಸ್ತ್ರ ವಿನ್ಯಾಸಕಿಯಾಗಿ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: 'ಕಾಂತಾರ' ಸಿನಿಮಾಗಾಗಿ ಕನ್ನಡ ಚಿತ್ರರಂಗದ ಬಲಿ ಸಾಧ್ಯವಿಲ್ಲ: ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ - ಸಾ.ರಾ.ಗೋವಿಂದು
ರಾಕೇಶ್ ಶೆಟ್ಟಿ ಸಾವು
ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರಕ್ಕಾಗಿ ತಾವು ಎದುರಿಸಿದ ಕಷ್ಟಗಳ ಬಗ್ಗೆ ಮಾತನಾಡಿದರು. ಚಿತ್ರೀಕರಣ ಆರಂಭವಾದಾಗಿನಿಂದ ಕಾಂತಾರ ಚಿತ್ರತಂಡ ಹಲವು ಅಡೆತಡೆಗಳನ್ನು ಎದುರಿಸಿತ್ತು. ಚಿತ್ರ ಕಲಾವಿದರ ಸಾವು ಸಿನಿಮಾಗೆ ಅತಿದೊಡ್ಡ ಸಂಕಷ್ಟವನ್ನುಂಟು ಮಾಡಿತ್ತು. ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಶೆಟ್ಟಿ ಸಹ ಸಿನಿಮಾ ಬಿಡುಗಡೆಗೂ ಮುನ್ನವೇ ನಿಧನರಾಗಿದ್ದಾರೆ.
ಇದನ್ನೂ ಓದಿ: ರೀಲ್ ಪ್ರೇಯಸಿಯ ಪಕ್ಕ ರಿಯಲ್ ಪ್ರೇಯಸಿ; ರಿಷಬ್ ಶೆಟ್ಟಿ ಈ ವಿಡಿಯೋ ವೈರಲ್ ಆಗ್ತಿರೋದು ಯಾಕೆ?