Chamundi Betta Priest Dies Dasara Darshan Temporarily Suspended in Mysuru ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಆರಂಭವಾದ ಬೆನ್ನಲ್ಲೇ ಚಾಮುಂಡಿ ಬೆಟ್ಟದ ಶಿವಾರ್ಚಕರಾದ ವಿ. ರಾಜು ಅವರು ಹಠಾತ್ ನಿಧನರಾಗಿದ್ದಾರೆ. 

ಮೈಸೂರು (ಸೆ.23): ದಸರಾ ಆರಂಭದ ಬೆನ್ನಲ್ಲಿಯೇ ಚಾಮುಂಡಿ ಬೆಟ್ಟದ ಶಿವಾರ್ಚಕ ಮಂಗಳವಾರ ನಿಧರಾಗಿದ್ದಾರೆ. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸೋಮವಾರ ಅದ್ದೂರಿ ಚಾಲನೆ ಸಿಕ್ಕಿತ್ತು. ಇದರ ನಡುವೆಯೇ ಈ ಅವಗಢ ಸಂಭವಿಸಿದೆ. ಚಾಮುಂಡಿ ಬೆಟ್ಟದ ಶಿವಾರ್ಚಕರಾಗಿದ್ದ ವಿ. ರಾಜು ಹಠಾತ್‌ ನಿಧನರಾಗಿದ್ದಾರೆ. ಶಿವಾರ್ಚಕ ವಿ.ರಾಜು ಮೃತಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಮಂಗಳವಾರ ತಾಯಿ ಚಾಮುಂಡಿ ದೇವಿ ದರ್ಶನ ಕೆಲ ಕಾಲ ನಿರ್ಬಂಧ ಮಾಡಲಾಗಿದೆ. ಸೋಮವಾರ ತಡರಾತ್ರಿ ಚಾಮುಂಡಿ ಬೆಟ್ಟದ ಶಿವಾರ್ಚಕ ವಿ,ರಾಜು ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಈ ಕಾರಣದಿಂದಾಗಿ ಇಂದು ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ತಾಯಿ ಚಾಮುಂಡಿ ದೇವಿ ದರ್ಶನ ಇರೋದಿಲ್ಲ. ಮಧ್ಯಾಹ್ನದವರೆಗೂ ದೇವರ ದರ್ಶನಕ್ಕೆ ಅವಕಾಶವಿರುವುದಿಲ್ಲ. ಮಧ್ಯಾಹ್ನ ಸಂಸ್ಕಾರ ಮುಗಿದ ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ವರದಿಯಾಗಿದೆ.

Add Asianetnews Kannada as a Preferred SourcegooglePreferred

ಇದರಿಂದಾಗಿ ಮೈಸೂರು ದಸರಾ ಸಂಭ್ರಮದ ನಡುವೆಯೇ ಚಾಮುಂಡಿ ಬೆಟ್ಟದಲ್ಲಿ ಸೂತಕದ ಛಾಯೆ ಆವರಿಸಿದೆ. ಚಾಮುಂಡೇಶ್ವರಿ ದೇವಾಲಯದ ಶಿವಾರ್ಚಕರು ನಿಧನರಾದ ಹಿನ್ನೆಲೆಯಲ್ಲಿ ಭಕ್ತರಿಗೆ ದೇವಿ ದರ್ಶನವನ್ನು ತಾತ್ಕಾಲಿಕವಾಗಿ ನಿರ್ಬಂಧ ಮಾಡಲಾಗಿದೆ.

ಆಗಿದ್ದೇನು: ಹಲವು ದಿನಗಳಿಂದ ರಾಜು ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಹೇಳಲಾಗಿದ್ದು, ಈ ಹಿಂದೆ ಅಪಘಾತವಾಗಿ ಆರೋಗ್ಯ ಸಮಸ್ಯೆ ಎದುರಾಗಿತ್ತು. ರಾತ್ರಿ ಆಸ್ಪತ್ರೆಯಲ್ಲಿ ಅವರು ನಿಧನರಾಗಿದ್ದಾರೆ.

ದಸರಾ ಎರಡನೇ ದಿನದ ಆಕರ್ಷಣೆಗಳು

ಬ್ರಹ್ಮಚಾರಿಣಿ ಅಲಂಕಾರ: ನವರಾತ್ರಿ ಎರಡನೇ ದಿನವಾದ ಇಂದು ತಾಯಿ ಚಾಮುಂಡೇಶ್ವರಿಯನ್ನು 'ಬ್ರಹ್ಮಚಾರಿಣಿ' ಅವತಾರದಲ್ಲಿ ಅಲಂಕರಿಸಲಾಗಿದೆ.

ಖಾಸಗಿ ದರ್ಬಾರ್: ಅರಮನೆಯಲ್ಲಿ ಎರಡನೇ ದಿನದ ಖಾಸಗಿ ದರ್ಬಾರ್ ನಡೆಯುತ್ತಿದ್ದು, ಪಟ್ಟದ ಆನೆ, ಕುದುರೆ ಮತ್ತು ಹಸುಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು.

ಇಂದಿನ ಕಾರ್ಯಕ್ರಮಗಳು: ಬೆಳಿಗ್ಗೆ 8 ಗಂಟೆಗೆ ರಂಗೋಲಿ ಸ್ಪರ್ಧೆ, 10:30ಕ್ಕೆ ಪ್ರಭಾತ ಕವಿಗೋಷ್ಠಿ ಮತ್ತು 11 ಗಂಟೆಗೆ ಮಹಿಳಾ ದಸರಾ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಸಂಜೆ 7 ಗಂಟೆಗೆ ಯುವ ದಸರಾದಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಲೈವ್ ಕಾನ್ಸರ್ಟ್ ಇರಲಿದೆ.