ಧಾರವಾಡದಲ್ಲಿ ಕ್ವಾಜಾ ಮತ್ತು ಗಾಯತ್ರಿ ನಡುವಿನ ಪ್ರೇಮ ಪ್ರಕರಣವನ್ನು 'ಲವ್ ಜಿಹಾದ್' ಎಂದು ಕರೆದಿರುವ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಇದು ಮೋಸದ ಮದುವೆ ಎಂದು ಆರೋಪಿಸಿದ್ದಾರೆ. ಕ್ವಾಜಾ ಇನ್ನೂ 8 ಯುವತಿಯರಿಗೆ ಸಂಬಂಧವಿದ್ದು, ಎಲ್ಲವನ್ನೂ ಬಹಿರಂಗ ಮಾಡೋದಾಗಿ ತಿಳಿಸಿದ್ದಾರೆ.
ಧಾರವಾಡ (ಸೆ.23): ಉತ್ತರ ಕರ್ನಾಟಕದಲ್ಲಿ ನಗರದಲ್ಲಿ ಬೆಳಕಿಗೆ ಬಂದ ಕ್ವಾಜಾ ಅಲಿಯಾಸ್ ಮುಕಳೆಪ್ಪ (YouTuber Mukaleppa) ಮತ್ತು ಗಾಯತ್ರಿ (Gayatri Jalihal) ನಡುವಿನ ಪ್ರೇಮ ಪ್ರಕರಣವನ್ನು 'ಲವ್ ಜಿಹಾದ್' (Love Jihad) ಎಂದು ಹೇಳುತ್ತಿರುವ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಈ ಸಂಬಂಧ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಕ್ವಾಜಾ ಇತರೆ 8 ಯುವತಿಯರೊಂದಿಗೆ ಸಂಬಂಧ ಹೊಂದಿದ್ದು, ಅವರನ್ನು ಬ್ರೈನ್‌ವಾಶ್ ಮಾಡಿ ಮದುವೆಯಾಗಿದ್ದಾನೆ ಎಂದು ಮುತಾಲಿಕ್ ಆರೋಪಿಸಿದ್ದಾರೆ.
ಪ್ರಕರಣದ ವಿವರಗಳು:
ಧಾರವಾಡದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್, ಹುಡುಗಿಯನ್ನ ಬ್ರೆನ್ ವಾಷ್ ಮಾಡೋದು, ಬ್ಲ್ಯಾಕ್ ಮ್ಯಾಜಿಕ್ ಮಾಡೋದು ಮುಸ್ಲಿಮರಲ್ಲಿ ಇದೆಲ್ಲ ನಡೆದಿದೆ. ಇದೀಗ ಕ್ವಾಜಾ ಗಾಯತ್ರಿ ಜೊತೆ ಅಷ್ಟೆ ಅಲ್ಲ ಇನ್ನು 8 ಜನ ಹುಡುಗಿಯರ ಜೊತೆ ಸಂಬಂಧವಿದೆ. ಎಲ್ಲವನ್ನು ಶಿಘ್ರದಲ್ಲೆ ಹೊರಗೆ ಹಾಕುತ್ತೇವೆ. ಮೋಸದಿಂದ ಅವನು ಮದುವೆಯಾಗಿದ್ದಾನೆ. ಒಂದೇ ದಿನದಲ್ಲಿ ಮದುವೆ ರಿಜಿಸ್ಟರ್ ಹಾಗೂ ಒಂದೇ ದಿನದಲ್ಲಿ ಮನೆಯ ಬಾಡಿಗೆ ಪತ್ರವನ್ನು ಮಾಡಿಸಿದ್ದಾನೆ ಇದೆಲ್ಲ ಒಂದೆ ದಿನ ಹೆಂಗೆ ಆಗುತ್ತದೆ. ರಿಜಿಸ್ಟರ್ ಅಮಾನತು ಆಗಬೇಕು ಆತನಿಗೆ ಸಪೋರ್ಟ್ ಮಾಡಿದವರಿಗೂ ಶಿಕ್ಷೆ ಆಗಬೇಕು.
ಯಾವುದೆ ಪರಿಸ್ಥಿತಿಯಲ್ಲಿ ಗಾಯತ್ರಿಯನ್ನ ಅವಳ ಜೊತೆ ಹೋಗಲು ನಾವು ಬಿಡೋದಿಲ್ಲ. ಇಸ್ಲಾಂಮಿನ ಶಕ್ತಿಯ ವಿರುದ್ದ ನಾವು ಹೋರಾಟ ಮಾಡುತ್ತೇವೆ. ಸದ್ಯಕ್ಕೆ ಗಾಯತ್ರಿ ಸಾಂತ್ವಾನ ಕೇಂದ್ರದಲ್ಲಿದ್ದಾಳೆ. ಆದರೂ ಆಕೆ ಪೊಲೀಸರ ಮುಂದೆ ಸುಳ್ಳು ಹೇಳುತ್ತಿದ್ದಾಳೆ ಬ್ರೆನ್ ವಾಷ್ ಮಾಡಿ ಹೀಗೆ ಮಾತನಾಡಲು ಹೇಳಿದ್ದಾರೆ. ಮುಸ್ಲಿಮರ ಆಟ ನೋಡಿದ್ದೆವೆ, ಈ ಆಟವನ್ನು ಮುಂದೆ ನಡಿಯಲ್ಲ. ನೀನು ಅವಳನ್ನ ಬಿಟ್ಟುಕೊಡಬೇಕು, ಇಲ್ಲದಿದ್ದೆ ನಾವೂ ಕಾನೂನಿನ ಹೋರಾಟ ಮಾಡುತ್ತೆವೆ. ಅವನ ಯೂಟ‌್ಯೂಬ್ ಚಾನಲ್ ಬಂದ್ ಮಾಡೋದವರೆಗೂ ನಾವು ಹೋರಾಟವನ್ನು ಮಾಡುತ್ತೆವೆ ಎಂದು ಧಾರವಾಡದಲ್ಲಿ ಶ್ರಿರಾಮಸೇನಾ ಸಂಘಟನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದಾರೆ.
ಸುಳ್ಳು ದಾಖಲೆ ಸೃಷ್ಟಿಸಿದ್ದ ಆರೋಪ:
ಯೂಟ್ಯೂಬರ್ ಕ್ವಾಜಾ ಶಿರಹಟ್ಟಿ ಅಲಿಯಾಸ್ ಮುಕುಳೆಪ್ಪ ವಿವಾಹ ವಿವಾದ ದಿನಕ್ಕೊಂದು ಸ್ವರೂಪವನ್ನು ಪಡೆಯುತ್ತಿದೆ. ಇದೀಗ ಹಣ ಪಡೆದು ನಿಯಮ ಬಾಹಿರವಾಗಿ ಕ್ವಾಜಾ ಅಲಿಯಾಸ್ ಮುಕಳಪ್ಪ ಹಾಗೂ ಗಾಯತ್ರಿ ವಿವಾಹ ನೊಂದಣಿ ಮಾಡಿರುವ ಆರೋಪ ಹಿನ್ನೆಲೆಯಲ್ಲಿ ಮುಂಡಗೋಡ ಸಬ್ ರಿಜಿಸ್ಟರ್ ಕಚೇರಿಗೆ ಮುತ್ತಿಗೆ ಹಾಕಲಾಗಿದ್ದು, ಹಿಂದೂಪರ ಸಂಘಟನೆ ಹಾಗೂ ಯುವತಿಯ ತಾಯಿ ಶಿವಕ್ಕ ಸಬ್ ರಿಜಿಸ್ಟರ್ ಗೆ ತರಾಟೆ ತೆಗೆದುಕೊಂಡಿದ್ದಾರೆ. ಹುಬ್ಬಳ್ಳಿ–ಧಾರವಾಡ ನಿವಾಸಿಗಳಾದವರನ್ನು ಸುಳ್ಳು ದಾಖಲೆಗಳ ಮೂಲಕ ಮುಂಡಗೋಡ ನಿವಾಸಿಗಳೆಂದು ತೋರಿಸಲಾಗಿದೆ.
ಜೂನ್ 5ರಂದು ಒಂದೇ ದಿನದಲ್ಲಿ ದಾಖಲೆ ಪಡೆದು ತಕ್ಷಣವೇ ವಿವಾಹ ನೋಂದಣಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ವಿವಾಹ ನೋಂದಣಿ ಕಾಯ್ದೆಯ ಪ್ರಕಾರ, ಮದುವೆಯ ನೋಂದಣಿಗೆ ಕನಿಷ್ಠ ಒಬ್ಬರು ಸ್ಥಳೀಯ ನಿವಾಸಿಯಾಗಿರಬೇಕು. ಆದರೆ ಈ ನಿಯಮವನ್ನು ಗಾಳಿಗೆ ತೂರಲಾಗಿದೆ ಎಂಬುದು ಸಂಘಟನೆಗಳ ದೂರು ಆಗಿದೆ. ಇದರಿಂದಾಗಿ, ಸಬ್ ರಿಜಿಸ್ಟ್ರಾರ್ ವಿರುದ್ಧ ಮುಂಡಗೋಡು ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಲು ಗಾಯತ್ರಿಯ ತಾಯಿ ಶಿವಕ್ಕ ಮುಂದಾಗಿದ್ದಾರೆ.
