Published : Oct 23, 2025, 07:01 AM ISTUpdated : Oct 23, 2025, 10:58 PM IST

Karnataka News Live: ಬೆಂಗಳೂರು ಕಂಬಳದ ರೂವಾರಿ, ತುಳುಕೂಟದ ಅಧ್ಯಕ್ಷ ಸುಂದರ್ ರಾಜ್ ರೈ ಹೃದಯಾಘಾತದಿಂದ ನಿಧನ

ಸಾರಾಂಶ

ಬೆಂಗಳೂರು: ನವೆಂಬರ್‌ 15 ರಿಂದ 20 ಅವಧಿ ನಡುವೆ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುವ ಸಾಧ್ಯತೆಗಳಿವೆ. ನವೆಂಬರ್ 19ರಂದು ರಾಜ್ಯಕ್ಕೆ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಆಗಮಿಸುವ ಸಾಧ್ಯತೆಗಳಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಹೆಚ್ಚು ಆಸಕ್ತಿ ವಹಿಸಿಕೊಂಡು ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ. ರಾಹುಲ್ ಗಾಂಧಿ ಆಗಮಿಸಿದ ಸಂದರ್ಭದಲ್ಲಿ ಸಂಪುಟ ಪುನಾರಚನೆ ಕುರಿತು ಚರ್ಚೆ ನಡೆಯುವ ಸಾಧ್ಯತೆಗಳಿವೆ. ಹೀಗಾಗಿ ರಾಹುಲ್ ಗಾಂಧಿ ರಾಜ್ಯ ಪ್ರವಾಸದ ವೇಳೆ ಕೆಲ ಮಹತ್ವದ ಬೆಳವಣಿಗೆಗಳು ನಡೆಯುವ ಸಾಧ್ಯತೆಗಳಿವೆ ಎಂಬ ಚರ್ಚೆಗಳು ಕಾಂಗ್ರೆಸ್ ಪಡಸಾಲೆಯಲ್ಲಿ ನಡೆಯುತ್ತಿವೆ.

Sundar Raj Rai

10:58 PM (IST) Oct 23

ಬೆಂಗಳೂರು ಕಂಬಳದ ರೂವಾರಿ, ತುಳುಕೂಟದ ಅಧ್ಯಕ್ಷ ಸುಂದರ್ ರಾಜ್ ರೈ ಹೃದಯಾಘಾತದಿಂದ ನಿಧನ

ಬೆಂಗಳೂರು ಕಂಬಳದ ರೂವಾರಿ, ತುಳುಕೂಟದ ಅಧ್ಯಕ್ಷ ಸುಂದರ್ ರಾಜ್ ರೈ ಹೃದಯಾಘಾತದಿಂದ ನಿಧನ, ಪುತ್ತೂರು ಮೂಲದ 58 ವರ್ಷದ ಸುಂದರ್ ರಾಜ್ ರೈ ಮಲ್ಲೇಶ್ವರ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರೆ.

Read Full Story

10:52 PM (IST) Oct 23

ರಾಜ್ಯದ ಮುಧೋಳ ನಾಯಿಗಳಿಗೆ ಹೈರಿಸ್ಕ್‌ ಕಮಾಂಡೋ ತರಬೇತಿ - ಬಿಎಸ್‌ಎಫ್‌ನ ಹೊಸ ಪ್ರಯೋಗ

ದೇಸೀ ನಾಯಿ ತಳಿಗಳಾದ ಕರ್ನಾಟಕದ ಮುಧೋಳ ಮತ್ತು ಉತ್ತರ ಭಾರತದ ರಾಂಪುರ ಬೇಟೆನಾಯಿಗಳನ್ನು ಇದೀಗ ಹೈರಿಸ್ಕ್‌ ಕಮಾಂಡೋ ಕಾರ್ಯಾಚರಣೆಗಳಲ್ಲೂ ಬಳಸಲು ಭಾರತೀಯ ಗಡಿ ಭದ್ರತಾ ಪಡೆ ಮುಂದಾಗಿದೆ.

Read Full Story

10:34 PM (IST) Oct 23

ರೇಣುಕಾಸ್ವಾಮಿ ಕೊಲೆ ಆರೋಪಿ ತಂದೆ ನಿಧನ, ಅಂತ್ಯಕ್ರಿಯೆಗೆ ತೆರಳಲು ಕೋರ್ಟ್ ಅನುಮತಿ

ರೇಣುಕಾಸ್ವಾಮಿ ಕೊಲೆ ಆರೋಪಿ ತಂದೆ ನಿಧನ, ಅಂತ್ಯಕ್ರಿಯೆಗೆ ತೆರಳಲು ಕೋರ್ಟ್ ಅನುಮತಿ ನೀಡಿದೆ. ಕಾಮಾಕ್ಷಿಪಾಳ್ಯ ಪೊಲೀಸರಿಗೆ ಇಮೇಲ್ ಮೂಲಕ ಕೋರ್ಟ್ ಸೂಚನೆ ನೀಡಿದೆ. ನಾಳೆ ಜೈಲಿನಿಂದ ಕರೆತರಲು ಪೊಲೀಸ್ ಸಿದ್ದತೆ ಮಾಡಿಕೊಂಡಿದೆ.

Read Full Story

10:30 PM (IST) Oct 23

ಕಾಂಗ್ರೆಸ್ ಸಂವಿಧಾನವನ್ನೇ ಐಸಿಯುನಲ್ಲಿ ಇಟ್ಟ ಪಕ್ಷ - ವಿಪ ಸದಸ್ಯ ಸಿ.ಟಿ. ರವಿ ಟೀಕೆ

ಸಂವಿಧಾನವನ್ನೇ ಐಸಿಯುನಲ್ಲಿಟ್ಟ ಕಾಂಗ್ರೆಸ್ಸಿಗೆ ಕೆಲವು ಹಳೇ ಚಾಳಿಗಳಿವೆ. ಅವು ಆಗಾಗ ಮರುಕಳಿಸುತ್ತವೆ. ಹುಣ್ಣಿಮೆ, ಅಮಾವಾಸ್ಯೆ ಬಂದಾಗ ಕೆಲವರಿಗೆ ಕೆದರುತ್ತಂತೆ, ಹಾಗಾಗಿ ಆರೆಸ್ಸೆಸ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಸಿ.ಟಿ.ರವಿ ಕುಟುಕಿದರು.

Read Full Story

10:15 PM (IST) Oct 23

ಕೋಟಿ ಕೋಟಿ ಹಣ ಇದ್ದರೂ ಹೈಸ್ಕೂಲು ಓದುತ್ತಿರೋ ಸ್ವಂತ ತಂಗಿಗೆ ಬಿಡಿಗಾಸೂ ಕೊಡಲ್ವಂತೆ ರಶ್ಮಿಕಾ ಮಂದಣ್ಣ!

ಸ್ವಂತ ತಂಗಿಗೆ ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಹೀಗೆ ಮಾಡುತ್ತಾರೆ ಎಂದರೆ ಯಾರೇ ಅದರೂ ನಂಬುವುದು ಕಷ್ಟ. ಅದರೂ ಈ ಸಂಗತಿ ಸತ್ಯ. ಕಾರಣ, ಇದನ್ನು ಸ್ವತಃ ನಟಿ ರಶ್ಮಿಕಾ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ನಾನು ತೀರಾ ಸಾಮಾನ್ಯ ಮಧ್ಯಮ ಕುಟುಂಬದಿಂದ ಬಂದವಳು. ಮುಂದೆ ಓದಿ..

Read Full Story

10:02 PM (IST) Oct 23

ಹಿಂದುಳಿದ ವರ್ಗಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧ - ಸಚಿವ ಎಚ್.ಕೆ. ಪಾಟೀಲ

ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿ ಹಾಗೂ ಕಲ್ಯಾಣಕ್ಕೆ ಸಂಬಂಧಿಸಿದಂತೆ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.

Read Full Story

09:37 PM (IST) Oct 23

ಬಿಜೆಪಿಯಲ್ಲಿ ಇದ್ದಿದ್ರೆ ಲಕ್ಷ್ಮಣ ಸವದಿ ದೊಡ್ಡ ಲೀಡರ್‌ ಆಗ್ತಿದ್ದ - ಶಾಸಕ ರಮೇಶ್ ಜಾರಕಿಹೊಳಿ

ಬಿಜೆಪಿಯಲ್ಲಿ ಸವದಿ ಇದ್ದಿದ್ದರೆ ರಾಜ್ಯದಲ್ಲಿ ಅತಿ ದೊಡ್ಡ ಲೀಡರ್ ಆಗುತ್ತಿದ್ದ. ಕಾಂಗ್ರೆಸ್‌ನಲ್ಲಿ ಬರೀ 5 ವರ್ಷ ಶಾಸಕರಾಗಿ ಕೆಲಸ ಮಾಡಬಹುದು. ಬಿಜೆಪಿ ಬಿಟ್ಟು ತನ್ನ ವ್ಯಕ್ತಿತ್ವವನ್ನು ಹಾಳು ಮಾಡಿಕೊಂಡ ಎಂದು ಶಾಸಕ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.

Read Full Story

09:12 PM (IST) Oct 23

ಅದೃಷ್ಟ ಕೈಕೊಟ್ರೂ ಕ್ರೇಜ್ ಕಮ್ಮಿಯಾಗಿಲ್ಲ.. ಸಾಲು ಸಾಲು ಆಫರ್‌ಗಳಿಂದ ಸಖತ್ ಬ್ಯುಸಿಯಾದ ಕನ್ನಡತಿ ನಟಿ ಯಾರು?

ಬಾಲಿವುಡ್‌ನಲ್ಲಿ ಶ್ರೀಲೀಲಾಗೆ ಸಾಲು ಸಾಲು ಆಫರ್‌ಗಳು ಸಿಗುತ್ತಿವೆ. ಹಿಂದಿ ಚೊಚ್ಚಲ ಚಿತ್ರಕ್ಕೂ ಮುನ್ನವೇ ಎರಡನೇ ಸಿನಿಮಾ ಆಫರ್ ಪಡೆದಿದ್ದಾರೆ. ಸದ್ಯ ಆಶಿಕಿ 3ರಲ್ಲಿ ನಟಿಸುತ್ತಿರುವ ಶ್ರೀಲೀಲಾ, ದೋಸ್ತಾನಾ 2ರಲ್ಲೂ ನಾಯಕಿಯಾಗಿ ನಟಿಸುವ ಸಾಧ್ಯತೆ ಇದೆ. 

Read Full Story

09:02 PM (IST) Oct 23

ಇಷ್ಟೆಲ್ಲಾ ಆದ್ಮೇಲೆ ಕರ್ಣನಿಗೆ ಮತ್ತೊಂದು ಮಹತ್ವದ ಜವಾಬ್ದಾರಿ - ಮೊದಲ ರಾತ್ರಿಯಲ್ಲಿ ಬಯಲಾಗುವುದೇ ಸತ್ಯ?

ರಮೇಶ್‌ನ ಕುತಂತ್ರದಿಂದ ಕರ್ಣನು ನಿತ್ಯಾಳನ್ನು ಮದುವೆಯಾಗಿದ್ದಾನೆ. ತನ್ನ ಪ್ರೀತಿಯನ್ನು ಕಳೆದುಕೊಂಡ ನಿಧಿ ಕಣ್ಣೀರಲ್ಲಿ ಮುಳುಗಿದ್ದರೆ, ಕರ್ಣನು ನಿತ್ಯಾಳ ಗರ್ಭದ ಜವಾಬ್ದಾರಿ ಹೊತ್ತಿದ್ದಾನೆ. ಮೊದಲ ರಾತ್ರಿಯಲ್ಲಿ ಈ ಸತ್ಯಗಳ ಗಂಟು ಬಿಚ್ಚುವುದೇ ಎಂಬುದು ಕಥೆಯ ತಿರುವು.
Read Full Story

08:50 PM (IST) Oct 23

ಕಾಂಗ್ರೆಸ್ ಹೈಕಮಾಂಡ್ ಇರುವ ಪಕ್ಷ, ಮೈಸೂರು ಅರಮನೆಯಲ್ಲ - ಯತೀಂದ್ರ ವಿರುದ್ಧ ಶಿವಗಂಗಾ ಬಸವರಾಜ ವಾಗ್ದಾಳಿ

ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಬೆನ್ನಲ್ಲೇ ಡಿಕೆಶಿ ಬಣದ ಶಾಸಕರು ಆ್ಯಕ್ಟೀವ್ ಆಗಿದ್ದು, ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಪರಮಾಪ್ತ, ಚನ್ನಗಿರಿ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

Read Full Story

08:18 PM (IST) Oct 23

ಚಾಮರಾಜನಗರ ಗಡಿ ಗುಮಟಾಪುರ ಗ್ರಾಮದಲ್ಲಿ ಗೊರೆ ಹಬ್ಬದ ಸಂಭ್ರಮ - ಸಗಣಿಯಲ್ಲಿ ಮಿಂದೆದ್ದ ಜನ!

ಚಾಮರಾಜನಗರ ಜಿಲ್ಲೆಯ ಗಡಿಯಲ್ಲಿರುವ ಗುಮಟಾಪುರ ಗ್ರಾಮದಲ್ಲಿ ಪ್ರತಿ ವರ್ಷ ತಪ್ಪದೆ ಗೊರೆ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ. ಸಗಣಿ ರಾಶಿ ಹಾಕಿ ಅದರಲ್ಲಿ ಹೊರಳಾಡುವ ಗ್ರಾಮಸ್ಥರು ಸಗಣಿಯಲ್ಲೇ ಹೊಡೆದಾಡುವುದು ಈ ಹಬ್ಬದ ವಿಶೇಷ.

Read Full Story

08:04 PM (IST) Oct 23

Amruthadhaare - ಮಲ್ಲಿ ಕಿತಾಪತಿ- ಅಪ್ಪನ ಬಳಿ ಹೋಗಿ ಅಮ್ಮನ ಕೈಯಲ್ಲಿ ತಗ್ಲಾಕ್ಕೊಂಡ ಆಕಾಶ್​! ಮನೆ ಶಿಫ್ಟ್​​?

ಗೌತಮ್ ಮನೆಯ ಬಗ್ಗೆ ತಿಳಿಯುವ ಕುತೂಹಲದಿಂದ ಮಲ್ಲಿ, ಆಕಾಶ್‌ನನ್ನು ಅವರ ಮನೆಗೆ ಕಳುಹಿಸುತ್ತಾಳೆ. ಆದರೆ ಈ ವಿಷಯ ಭೂಮಿಕಾ ಮುಂದೆ ಬಾಯಿ ತಪ್ಪಿ ಹೇಳಿದಾಗ, ಗೌತಮ್ ಮತ್ತು ಭೂಮಿಕಾ ನಡುವಿನ ಸಂಬಂಧದಲ್ಲಿ ಹೊಸ ಬಿಕ್ಕಟ್ಟು ಶುರುವಾಗುತ್ತದೆ, ಇದರಿಂದ ಭೂಮಿಕಾ ಮುಂದಿನ ನಿರ್ಧಾರದ ಬಗ್ಗೆ ಕುತೂಹಲ ಮೂಡಿದೆ.
Read Full Story

07:54 PM (IST) Oct 23

ಹೌದು.. ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದು ನಿಜ, ಆದರೆ.. ಕೊನೆಗೂ ಬಾಯ್ಬಿಟ್ಟ ಜಾನ್ವಿ ಕಪೂರ್!

ಜಾನ್ವಿ ಕಪೂರ್ ತನ್ನ ಪ್ಲಾಸ್ಟಿಕ್ ಸರ್ಜರಿ ವಿಷಯವನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಆದರೆ ಪ್ಲಾಸ್ಟಿಕ್ ಸರ್ಜರಿ ವಿಷಯದಲ್ಲಿ ತಾನು ಎಷ್ಟು ಬುದ್ಧಿವಂತಿಕೆಯಿಂದ ನಡೆದುಕೊಂಡೆ ಅನ್ನೋದನ್ನು ಜಾನ್ವಿ ಹೇಳಿದ್ದಾರೆ.

Read Full Story

07:40 PM (IST) Oct 23

ಆಡಿಷನ್ ಹೆಸರಲ್ಲಿ ಮೋಸ ಹೋಗದಿರಿ.. ಸಾರ್ವಜನಿಕರಿಗೆ ಜೀ ಕನ್ನಡ ವಾಹಿನಿ ಎಚ್ಚರಿಕೆ

ತನ್ನ ಹೊಸತನದಿಂದ ಯಾವಾಗಲೂ ವೀಕ್ಷಕರಿಗೆ ಹೊಸತನವನ್ನು ಕೊಟ್ಟು ಮನರಂಜಿಸುವ ಜೀ ಕನ್ನಡ ವಾಹಿನಿ ಈಗ 'ಆಡಿಷನ್ ಹೆಸರಲ್ಲಿ ಮೋಸ ಹೋಗದಿರಿ' ಎಂದು ಸಾವರ್ಜನಿಕರಿಗೆ ಸೂಚನೆಯನ್ನು ಕೊಟ್ಟಿದೆ.

Read Full Story

07:24 PM (IST) Oct 23

ಕುಂಕುಮ, ಮಾಂಗಲ್ಯ ಹಾಕ್ತೀರಿ ತಾನೆ? 16 ವರ್ಷ ಲವ್ ಹೇಗೆ ಮೆಂಟೇನ್​ ಮಾಡಿದ್ರಿ​? Suhaana Syed ಉತ್ತರ ಕೇಳಿ

'ಸರಿಗಮಪ' ಖ್ಯಾತಿಯ ಗಾಯಕಿ ಸುಹಾನಾ ಸೈಯದ್, ತಮ್ಮ 16 ವರ್ಷಗಳ ಸ್ನೇಹಿತ ನಿತಿನ್ ಶಿವಾಂಶ್ ಅವರನ್ನು ಕುವೆಂಪು ಅವರ ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ವಿವಾಹವಾಗಿದ್ದಾರೆ. ಈ ಅಂತರ್‌ಧರ್ಮೀಯ ವಿವಾಹದ ಕುರಿತ ಚರ್ಚೆಗಳ ನಡುವೆ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. 

Read Full Story

06:40 PM (IST) Oct 23

BBK 12 ಕಾವ್ಯಾಳ ಮಾತು ಕಟ್ಟಿಕೊಂಡು ಕಾಮಿಡಿ ಪೀಸ್ ಆಗೋದ ಗಿಲ್ಲಿ ನಟ; ಗಡ್ಡ ತೆಗೆಸಲು ಹೋಗಿ ಭಾರೀ ಪರದಾಟ!

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಕಾವ್ಯಾ ಮತ್ತು ಗಿಲ್ಲಿ ನಟರ ಜೋಡಿ ಗಮನ ಸೆಳೆಯುತ್ತಿದೆ. ಕಾವ್ಯಾಳ ಮಾತಿನಂತೆ ಗಡ್ಡ ಟ್ರಿಮ್ ಮಾಡಿಸಿಕೊಳ್ಳಲು ಹೋದ ಗಿಲ್ಲಿ ನಟನಿಗೆ, ಚಂದ್ರ ಪ್ರಭ ಅವರು ಸುದೀಪ್ ಅವರ ಕೆಂಪೇಗೌಡ ಸಿನಿಮಾದ ಸ್ಟೈಲ್‌ನಲ್ಲಿ ಗಡ್ಡ ಟ್ರಿಮ್ ಮಾಡಿ, ಮನೆಯಲ್ಲಿ ನಗುವಿನ ಅಲೆ ಎಬ್ಬಿಸಿದ್ದಾರೆ.
Read Full Story

06:23 PM (IST) Oct 23

ರಾಜ ಎಲ್ಲಿದ್ದರೂ ರಾಜನೇ.. ಡಾರ್ಲಿಂಗ್ ಪ್ರಭಾಸ್ ಹೀರೋ ಆಗದಿದ್ರೆ ಏನಾಗ್ತಿದ್ರು?

ಪ್ರಭಾಸ್ ಸದ್ಯ ಭಾರತವೇ ಹೆಮ್ಮೆಪಡುವ ಹೀರೋ ಆಗಿ ಬೆಳೆದಿದ್ದಾರೆ. ಗ್ಲೋಬಲ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಹಾಗಾದ್ರೆ ಡಾರ್ಲಿಂಗ್ ಸಿನಿಮಾಗೆ ಬಂದಿಲ್ಲ ಅಂದಿದ್ರೆ, ಹೀರೋ ಆಗದಿದ್ರೆ ಏನ್ ಮಾಡ್ತಿದ್ರು ಗೊತ್ತಾ? ರಾಜ ಅಂದ್ರೆ ರಾಜನೇ.

 

Read Full Story

06:17 PM (IST) Oct 23

Lakshmi Nivasa - ವಿಶ್ವನ ಜೊತೆ ಚಿನ್ನುಮರಿಗೂ ಹಳ್ಳತೋಡಿದ ಜಯಂತ್​ - ಶ್ರದ್ಧಾಂಜಲಿ ಕಾರ್ಡ್​ ಪ್ರಿಂಟ್​!

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ, ಜಾಹ್ನವಿ ಬದುಕಿರುವ ಸತ್ಯವನ್ನು ಅರಿತ ಸೈಕೋ ಜಯಂತ್, ಆಕೆಗೆ ಮತ್ತು ವಿಶ್ವನಿಗೆ ಹಳ್ಳ ತೋಡಲು ಭರ್ಜರಿ ಪ್ಲ್ಯಾನ್ ಮಾಡಿದ್ದಾನೆ. ಪತ್ನಿಯ ಶ್ರದ್ಧಾಂಜಲಿ ಕಾರ್ಡ್‌ನಲ್ಲಿ ಆಕೆಯ ಫೋಟೋ ಮುದ್ರಿಸಿ, ಎಲ್ಲರನ್ನೂ ಇಕ್ಕಟ್ಟಿಗೆ ಸಿಲುಕಿಸಿದ್ದಾನೆ.  

Read Full Story

06:08 PM (IST) Oct 23

ಮಕ್ಕಳು ದೊಡ್ಡವರಾದ ಮೇಲೆ ಸನ್ಯಾಸಿಯಾಗುತ್ತೇನೆ - ಶಾಕಿಂಗ್ ಹೇಳಿಕೆ ಕೊಟ್ಟ ಪವನ್ ಮಾಜಿ ಪತ್ನಿ ರೇಣು ದೇಸಾಯಿ!

ದೀಪಾವಳಿ ಹಬ್ಬದ ಸಂದರ್ಭದಲ್ಲಿ ನೀಡಿದ ಸಂದರ್ಶನದಲ್ಲಿ ರೇಣು ದೇಸಾಯಿ ಹಲವು ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಾನು ಸನ್ಯಾಸಿಯಾಗುವುದಾಗಿ ಹೇಳಿ ಶಾಕ್ ನೀಡಿದ್ದಾರೆ.

 

Read Full Story

06:03 PM (IST) Oct 23

ಏಷ್ಯಾದಲ್ಲಿ ನಂಬರ್ 1 ತ್ಯಾಜ್ಯ ನೀರಿನ ಮರುಬಳಕೆ; ಬೆಂಗಳೂರಿನಲ್ಲಿ ನ.6ರಿಂದ ರಾಷ್ಟ್ರೀಯ ಕಾರ್ಯಾಗಾರ

ನೀತಿ ಆಯೋಗ, ಕರ್ನಾಟಕ ಸರ್ಕಾರ ಮತ್ತು BWSSB ಸಹಯೋಗದಲ್ಲಿ ಬೆಂಗಳೂರಿನಲ್ಲಿ 'ಶುದ್ಧೀಕರಿಸಿದ ತ್ಯಾಜ್ಯ ನೀರಿನ ಮರುಬಳಕೆ' ಕುರಿತು ರಾಷ್ಟ್ರೀಯ ಕಾರ್ಯಾಗಾರ ಆಯೋಜನೆ. ತ್ಯಾಜ್ಯ ನೀರು ನಿರ್ವಹಣೆಯಲ್ಲಿ ಏಷ್ಯಾಕ್ಕೆ ಮಾದರಿಯಾದ ಬೆಂಗಳೂರಿನ ಯಶಸ್ಸಿನ ಆಧಾರದ ಮೇಲೆ, ಜಲ-ಸುಭದ್ರ ಭಾರತಕ್ಕಾಗಿ ರಾಷ್ಟ್ರೀಯ ಯೋಜನೆ.

Read Full Story

05:29 PM (IST) Oct 23

ಆರ್‌ಎಸ್‌ಎಸ್‌ನವರು ಲಾಠಿ ಹಿಡಿದರೆ ತಪ್ಪೇನು? ಬಿ.ಕೆ.ಹರಿಪ್ರಸಾದ್‌ಗೆ ಟಾಂಗ್ ಕೊಟ್ಟ ಸಿ.ಟಿ.ರವಿ

ಲಾಠಿ ನಿಷೇಧಿತ ಅಸ್ತ್ರವಲ್ಲ. ಲಾಠಿ ದೇಶ ಭಕ್ತರಿಗೆ ಆತ್ಮವಿಶ್ವಾಸ ಮೂಡಿಸುತ್ತೆ. ಆರ್‌ಎಸ್‌ಎಸ್‌ನವರು ಲಾಠಿ ಹಿಡಿದರೆ ತಪ್ಪೇನು ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಪ್ರಶ್ನಿಸಿದರು.

Read Full Story

04:58 PM (IST) Oct 23

ನವೆಂಬರ್ ಕ್ರಾಂತಿ ಇಲ್ಲ, ವಾಂತಿ ಇಲ್ಲ, ಭ್ರಾಂತಿ ಇಲ್ಲ - ಬಿಜೆಪಿಗೆ ಸಚಿವ ಶಿವರಾಜ ತಂಗಡಗಿ ತಿರುಗೇಟು

ನವೆಂಬರ್ ಕ್ರಾಂತಿ ಇಲ್ಲ, ವಾಂತಿ ಇಲ್ಲ, ಭ್ರಾಂತಿ ಇಲ್ಲ. ನೀವೂ ಆರಾಮಾಗಿ ಇರಿ. ನಾವೂ ಆರಾಮಾಗಿ ಇದ್ದೇವೆ. ನೀವು ಅದರ ಬಗ್ಗೆ ಟೆನ್ಶನ್ ತಗೋಬೇಡಿ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು.

Read Full Story

04:31 PM (IST) Oct 23

ಸಿದ್ದು ಗಟ್ಟಿಮುಟ್ಟಾದ ನಾಯಕ.. ಸದ್ಯಕ್ಕೆ ಸಿಎಂ ಹುದ್ದೆ ಖಾಲಿ ಇಲ್ಲ - ಸಚಿವ ಈಶ್ವರ್ ಖಂಡ್ರೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೂಚನೆ ಕೊಟ್ಟಿದ್ದಾರೆ. ಸದ್ಯಕ್ಕೆ ಸಿಎಂ ಹುದ್ದೆ ಖಾಲಿ ಇಲ್ಲ. ಕೆಪಿಸಿಸಿ ಅಧ್ಯಕ್ಷರ ಹುದ್ದೆಯೂ ಖಾಲಿ ಇಲ್ಲ. ಇದು ಅಪ್ರಸ್ತುತವಾದ ವಿಚಾರ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದರು.

Read Full Story

04:25 PM (IST) Oct 23

ಕನ್ನಡ ಕಿರುತೆರೆ ಇತಿಹಾಸದಲ್ಲಿ ದಾಖಲೆ ಬರೆದ ಸಿಹಿ ಕಹಿ ಚಂದ್ರು 'ಬೊಂಬಾಟ್‌ ಭೋಜನ'

Bombat Bhojana Season 6: 500ಕ್ಕೂ ಹೆಚ್ಚು ಸಂಚಿಕೆಗಳನ್ನು ದಾಟಿ, ಕನ್ನಡ ಕಿರುತೆರೆ ಇತಿಹಾಸದಲ್ಲಿ ಸ್ಟಾರ್ ಸುವರ್ಣ ವಾಹಿನಿಯ 'ಬೊಂಬಾಟ್ ಭೋಜನ' ಶೋ ದಾಖಲೆ ಬರೆದಿದೆ. ಈಗ ಹೊಸ ಆವೃತ್ತಿ ಶುರುವಾಗಲಿದೆ. ಹಾಗಾದರೆ ಯಾವಾಗ ಪ್ರಸಾರ ಆಗಲಿದೆ?

 

Read Full Story

04:16 PM (IST) Oct 23

Bigg Bossನಿಂದ ಮಂಜು ಭಾಷಿಣಿಗೆ ಸಿಕ್ಕ ಸಂಭಾವನೆ ಎಷ್ಟು? ಖರ್ಚಾದದ್ದೆಷ್ಟು? ನಟಿ ರಿವೀಲ್

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ 'ಬಡ್ಡಿ ಬಂಗಾರಮ್ಮ' ಖ್ಯಾತಿಯ ನಟಿ ಮಂಜು ಭಾಷಿಣಿ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ತಮ್ಮ ಸಂಭಾವನೆಯ ಬಗ್ಗೆ  ಹಾಗೂ ಶೋಗೆ ಹೋಗಲು ಕಾಸ್ಟ್ಯೂಮ್ ಮತ್ತು ಮೇಕಪ್‌ಗಾಗಿ ಮಾಡಿರೋ ಖರ್ಚಿನ ಬಗ್ಗೆ ಅವರು ಹೇಳಿದ್ದೇನು? 

Read Full Story

03:58 PM (IST) Oct 23

ಭಾರತದಲ್ಲೇ ಪ್ರಥಮ ಪ್ರಯತ್ನ; 'ಬಿಳಿ ಚುಕ್ಕಿ ಹಳ್ಳಿ ಹಕ್ಕಿ' ಸಿನಿಮಾಕ್ಕೆ ಶ್ರೀಮುರಳಿ, ಪ್ರತಾಪ್‌ ಸಿಂಹ ಮೆಚ್ಚುಗೆ

ಭಾರತದಲ್ಲಿ ಮೊದಲ ಬಾರಿಗೆ ಒಂದು ವಿಶಿಷ್ಟ ಕಾನ್ಸೆಪ್ಟ್‌ ಇಟ್ಟುಕೊಂಡು ‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’ ಸಿನಿಮಾ ನಿರ್ಮಾಣ ಮಾಡಲಾಗಿದೆ. ಈ ಸಿನಿಮಾದ ಟ್ರೇಲರ್‌ಗೆ ಒಳ್ಳೆಯ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಸಿನಿಮಾ ಬಗ್ಗೆ ನಟ ಶ್ರೀಮುರಳಿ, ಪ್ರತಾಪ್‌ ಸಿಂಹ ಕೂಡ ಮೆಚ್ಚಿದ್ದಾರೆ.

 

Read Full Story

03:58 PM (IST) Oct 23

BBK 12 - ನಟಿ ಕಾವ್ಯಾಗೆ ಬಕೆಟ್ ಪೆಟ್ಟು ಕೊಟ್ಟೇಬಿಟ್ಟ ಅಶ್ವಿನಿ ಗೌಡ; ಜಗಳ ಬಿಡಿಸಲು ಹೋದ ಸ್ಪಂದನಾ ತಬ್ಬಿಬ್ಬು!

ಬಿಗ್ ಬಾಸ್ ಕನ್ನಡ ಸೀಸನ್ 12ರ ಮನೆಯಲ್ಲಿ ಅಶ್ವಿನಿ ಗೌಡ ಮತ್ತು ಕಾವ್ಯಾ ಶೈವ ನಡುವೆ ಜವಾಬ್ದಾರಿ ವಿಚಾರವಾಗಿ ತೀವ್ರ ಜಗಳ ನಡೆದಿದೆ. ಈ ಗಲಾಟೆಯು ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು, ಅಶ್ವಿನಿ ಅವರು ಕಾವ್ಯಾ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ ಎನ್ನುವಂತಹ ದೃಶ್ಯ ವೈರಲ್ ಆಗುತ್ತಿದೆ.

Read Full Story

03:27 PM (IST) Oct 23

Comedy Khiladigalu 5 ಪ್ರಸಾರ ಯಾವಾಗ? ಈ ಬಾರಿ ಭರ್ಜರಿ ಮನರಂಜನೆಯ ರಸದೌತಣ ಪಕ್ಕಾ!

Comedy Khiladigalu 5: ಈಗಾಗಲೇ ‘ಕಾಮಿಡಿ ಕಿಲಾಡಿಗಳು’ ಶೋನ ಕೆಲ ಸೀಸನ್‌ಗಳು ಯಶಸ್ವಿಯಾಗಿ ಪ್ರಸಾರ ಆಗಿವೆ. ಈಗ ಹೊಸ ಸೀಸನ್‌ ಪ್ರಾರಂಭ ಆಗಲಿದ್ದು, ವಾಹಿನಿಯು ಪ್ರೋಮೋವನ್ನು ಕೂಡ ರಿಲೀಸ್‌ ಮಾಡಿದೆ. ಹಾಗಾದರೆ ಯಾವಾಗ ಪ್ರಸಾರ ಆಗಲಿದೆ?

 

Read Full Story

03:17 PM (IST) Oct 23

ಬಿಗ್ ಬಾಸ್ ಮನೆಯಿರುವ 'ಜಾಲಿವುಡ್ ಸ್ಟುಡಿಯೋ' ಅಕ್ರಮ ಮರುಪ್ರಾರಂಭಕ್ಕೆ ಡಿಸಿ ಕುಮ್ಮಕ್ಕು? ಮತ್ತೆ ಬೀಗ ಜಡಿಯಲು ದೂರು!

ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಮುಚ್ಚಲ್ಪಟ್ಟಿದ್ದ 'ಬಿಗ್ ಬಾಸ್' ಖ್ಯಾತಿಯ ಜಾಲಿವುಡ್ ಸ್ಟುಡಿಯೋ, ಜಿಲ್ಲಾಧಿಕಾರಿಯವರ ಮೌಖಿಕ ಆದೇಶದ ಮೇಲೆ ಅಕ್ರಮವಾಗಿ ಪುನರಾರಂಭಗೊಂಡಿದೆ ಎಂದು ದಿನೇಶ್ ಕಲ್ಲಹಳ್ಳಿ ದೂರು ನೀಡಿದ್ದಾರೆ. ಈ ಕ್ರಮವು ಕಾನೂನುಬಾಹಿರವಾಗಿದ್ದು, ಪರಿಸರಕ್ಕೆ ಹಾನಿ ಮಾಡುತ್ತಿದೆ ಎಂದಿದ್ದಾರೆ.

Read Full Story

03:14 PM (IST) Oct 23

ಕರ್ಣ-ನಿತ್ಯಾ ಮದುವೆಯಾಯ್ತು, ನಿಂಗೇನ್‌ ಕೆಲಸ?, Karna Serial ಬಿಡು ಎಂದ್ರು - ನಟಿ ಭವ್ಯಾ ಗೌಡ

ಕರ್ಣ ಧಾರಾವಾಹಿಯಲ್ಲಿ ನಿಧಿ ಪಾತ್ರ ಕಂಡರೆ ಈಗ ಎಲ್ಲರಿಗೂ ಇಷ್ಟ ಆಗುವ ಹಾಗೆ ಆಗಿದೆ. ನಿಧಿ, ಕರ್ಣ ಒಂದಾಗಲಿ ಎಂದು ಎಲ್ಲರೂ ಬಯಸುತ್ತಿದ್ದಾರೆ, ಆದರೆ ಈಗ ನಿತ್ಯಾ, ಕರ್ಣನ ಹೆಂಡ್ತಿ ಎಂದು ನಾಟಕ ಮಾಡೋ ಹಾಗೆ ಆಗಿದೆ. ಈ ಬಗ್ಗೆ ನಟಿ ಭವ್ಯಾ ಗೌಡ ಅವರು ಮಾತನಾಡಿದ್ದಾರೆ.

Read Full Story

03:14 PM (IST) Oct 23

ಚಿಕ್ಕೋಡಿ - ಆಸ್ತಿ ವಿವಾದದಲ್ಲಿ ಗಂಡ-ಹೆಂಡತಿ ಮಾರಾಮಾರಿ, ವಿಡಿಯೋ ವೈರಲ್

ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ದಂಪತಿಗಳ ನಡುವೆ ಮಾರಾಮಾರಿ ನಡೆದಿದೆ. ಪತಿ-ಪತ್ನಿ ಇಬ್ಬರೂ ಪರಸ್ಪರ ಹಲ್ಲೆ ಮತ್ತು ಕಿರುಕುಳದ ಆರೋಪದ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಘಟನೆಯ ವಿಡಿಯೋ ವೈರಲ್ ಆಗಿದೆ.
Read Full Story

03:12 PM (IST) Oct 23

BBK 12 - ಗಳಗಳನೇ ಅಳ್ತಿದ್ದ ರಾಜಮಾತೆ ಅಶ್ವಿನಿ ಗೌಡಗೆ ಸತ್ಯ ದರ್ಶನ ಮಾಡಿಸಿದ ಜಾನ್ವಿ

 ವೈಲ್ಡ್ ಕಾರ್ಡ್ ಸ್ಪರ್ಧಿಗಳು ಅಶ್ವಿನಿ ಗೌಡ ಅವರನ್ನು ಬಲಿಷ್ಠ ಸ್ಪರ್ಧಿ ಎಂದು ಪರಿಗಣಿಸಿ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗಿಟ್ಟಿದ್ದಾರೆ. ಈ ಅನಿರೀಕ್ಷಿತ ನಿರ್ಧಾರದಿಂದ ತೀವ್ರ ನೋವುಂಡ ಅಶ್ವಿನಿ ಕಣ್ಣೀರು ಹಾಕಿದ್ದು, ಗೆಳತಿ ಜಾನ್ವಿ ಅವರಿಗೆ ಸಮಾಧಾನ ಹೇಳಿ ಆಟದ ತಂತ್ರಗಾರಿಕೆಯನ್ನು ವಿವರಿಸಿದ್ದಾರೆ.

Read Full Story

02:53 PM (IST) Oct 23

ಆ ಕಾರಣಕ್ಕೆ Karna Serial ಬಿಟ್ಟುಬಿಡು ಅಂತ ತುಂಬ ಜನ ಹೇಳಿದ್ರು - ನಟಿ ನಮ್ರತಾ ಗೌಡ

ಕರ್ಣ ಧಾರಾವಾಹಿಯಲ್ಲಿ ನಿತ್ಯಾಳನ್ನು ಮದುವೆಯಾಗದೆ, ತೇಜಸ್‌ ಓಡಿ ಹೋಗಿದ್ದಾನೆ. ಇನ್ನೊಂದು ಕಡೆ ನಿತ್ಯಾ ಪ್ರಗ್ನೆಂಟ್.‌ ಎರಡೂ ಮನೆಯ ಅಜ್ಜಿಯಂದಿರು ಬೇಸರ ಮಾಡಿಕೊಂಡಿದ್ದಾರೆ ಎಂದು ಕರ್ಣ ಹಾಗೂ ನಿತ್ಯಾ ಮದುವೆ ಆಗಿರುವ ನಾಟಕ ಮಾಡಿದ್ದಾರೆ. ಈಗ ಈ ಪಾತ್ರದ ಬಗ್ಗೆ ನಮ್ರತಾ ಗೌಡ ಮಾತನಾಡಿದ್ದಾರೆ.

 

Read Full Story

02:41 PM (IST) Oct 23

ಮಹಾಘಟಬಂಧನ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ ಚಿತ್ರ ಮಿಸ್ಸಿಂಗ್, 'ಇದ್ಯಾವ ಸೀಮೆ ಮೈತ್ರಿ' ಬಿಜೆಪಿ ವ್ಯಂಗ್ಯ

2025ರ ಬಿಹಾರ ಚುನಾವಣೆಗೆ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ ಬೆನ್ನಲ್ಲೇ, ಮಹಾಮೈತ್ರಿಕೂಟದ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ ಚಿತ್ರ ಇಲ್ಲದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಬೆಳವಣಿಗೆಯನ್ನು ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ವ್ಯಂಗ್ಯ ಮಾಡಿದ್ದಾರೆ.

Read Full Story

02:35 PM (IST) Oct 23

Bigg Boss Kannada 12ಕ್ಕೆ ಮತ್ತೊಂದು ವಿಘ್ನ - ರಕ್ಷಿತಾ ಶೆಟ್ಟಿಗೆ 'ಎಸ್ ಕೆಟಗರಿ' ಪದ ಬಳಕೆ ವಿರುದ್ಧ ದೂರು ದಾಖಲು!

ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಅಶ್ವಿನಿ ಗೌಡ, ಸಹ ಸ್ಪರ್ಧಿ ರಕ್ಷಿತಾ ಶೆಟ್ಟಿ ವಿರುದ್ಧ 'ಎಸ್ ಕೆಟಗರಿ' ಎಂಬ ಪದ ಬಳಸಿದ್ದಕ್ಕಾಗಿ ವಿವಾದಕ್ಕೆ ಸಿಲುಕಿದ್ದಾರೆ. ಈ ಪದಬಳಕೆ ವಿರುದ್ಧವಾಗಿ ವಕೀಲರೊಬ್ಬರು ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇದು ಕಾರ್ಯಕ್ರಮಕ್ಕೆ ಹೊಸ ಸಂಕಷ್ಟ ತಂದಿದೆ.

Read Full Story

02:18 PM (IST) Oct 23

ಸಿಎಂ ಸಿದ್ದರಾಮಯ್ಯ ಅವರೇ ಬೆಂಗಳೂರಿಗೆ ಒಂದೇ ಒಂದು ಪ್ರಾಜೆಕ್ಟ್ ತೋರಿಸಿ - ಸಂಸದ ತೇಜಸ್ವಿ ಸೂರ್ಯ ಸವಾಲು!

Tejasvi Surya on Siddaramaiah government: ಸಂಸದ ತೇಜಸ್ವಿ ಸೂರ್ಯ ಅವರು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ  ರಾಜ್ಯದ ಅಭಿವೃದ್ಧಿಯನ್ನು ಮರೆತು ಬಿಹಾರ ಚುನಾವಣೆಗೆ ಹಣ ನೀಡಲು ಸರ್ಕಾರ ನಿರತವಾಗಿದೆ ಎಂದು ಆರೋಪಿಸಿದ್ದಾರೆ. ಬೆಂಗಳೂರಿಗೆ ಒಂದು ಪ್ರಾಜೆಕ್ಟ್ ತೋರಿಸಲು ಸವಾಲು.

Read Full Story

01:58 PM (IST) Oct 23

ಹಬ್ಬದ ಟೈಮ್​ನಲ್ಲೇ Bigg Boss ಜಾನ್ವಿಯ ಹಳೆ ವಿಡಿಯೋ ವೈರಲ್​ - ಎಲ್ಲಾ ಗೊತ್ತಾಯ್ತಮ್ಮಾ ಎನ್ನೋದಾ ನೆಟ್ಟಿಗರು!

ಬಿಗ್ ಬಾಸ್ ಮನೆಯಲ್ಲಿ ಜಾನ್ವಿ ಅವರ ವರ್ತನೆಗೆ ಅಸಮಾಧಾನ ವ್ಯಕ್ತವಾಗುತ್ತಿರುವ ನಡುವೆಯೇ, ಅವರು ಬಿಗ್ ಬಾಸ್ ಅನ್ನು 'ಬೆಳಕು' ಎಂದು ಕರೆದಿರುವ ಹಳೆಯ ದೀಪಾವಳಿ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋಗೆ ನೆಟ್ಟಿಗರು ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದು, ಅವರನ್ನು ಟ್ರೋಲ್​ ಮಾಡುತ್ತಿದ್ದಾರೆ. 

Read Full Story

01:44 PM (IST) Oct 23

'ಪ್ರಿಯಾಂಕ್ ಖರ್ಗೆ ಮುಂದಿನ ಉ.ಮುಖ್ಯಮಂತ್ರಿ..' ಹುಬ್ಬಳ್ಳಿಯಲ್ಲಿ ಶ್ರೀರಾಮುಲು ಸ್ಫೋಟಕ ಹೇಳಿಕೆ!

ಮಾಜಿ ಸಚಿವ ಶ್ರೀರಾಮುಲು ಅವರು, ಪ್ರಿಯಾಂಕ ಖರ್ಗೆ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಲು ದೆಹಲಿಯಲ್ಲಿ ಪ್ಲ್ಯಾನ್ ನಡೆದಿದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರವು ಆಡಳಿತ ವೈಫಲ್ಯಗಳನ್ನು ಮರೆಮಾಚಲು ಆರ್‌ಎಸ್‌ಎಸ್ ವಿರುದ್ಧ ದ್ವೇಷದ ರಾಜಕೀಯ ಮಾಡುತ್ತಿದೆ ಎಂದು ಟೀಕಿಸಿದರು.

Read Full Story

01:32 PM (IST) Oct 23

Amruthadhaare Serial - ‌ ಮತ್ತೆ ಅಪಾಯದಲ್ಲಿರೋ ಭೂಮಿಕಾಗೆ ಮಹಾ ಸತ್ಯ ಗೊತ್ತಾಗೋ ಟೈಮ್‌ ಬಂದಾಯ್ತು! ಹಬ್ಬ ಮಾಡ್ರೋ

Amruthadhaare Tv Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್‌ಗೆ 600 ಕೋಟಿ ರೂಪಾಯಿ ಸಾಲವನ್ನು ತೀರಿಸಲು ಈಗ ಗೌತಮ್‌ ಸಹಾಯ ಬೇಕಾಗಿದೆ. ಈಗ ಅವನು ಭೂಮಿಕಾಳನ್ನು ಟಾರ್ಗೆಟ್‌ ಮಾಡಿದ್ದಾನೆ. ಹಾಗಾದರೆ ಮುಂದೆ ಏನಾಗುವುದು?

 

Read Full Story

01:12 PM (IST) Oct 23

ಡಿಕೆಶಿ ದಾರಿ ತಪ್ಪಿದ ಮಗ; ಟೆಂಪಲ್ ರನ್ ಬಿಟ್ಟು 'ಇಟಲಿ ಟೆಂಪಲ್' ಸುತ್ತಿದರೆ ಸಿಎಂ ಆಗ್ತಾರೆ - ಆರ್. ಅಶೋಕ್ ಲೇವಡಿ

ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಟೆಂಪಲ್ ರನ್ ಅನ್ನು ಲೇವಡಿ ಮಾಡಿದ್ದಾರೆ. ಸಿಎಂ ಆಗಲು ದೇವಸ್ಥಾನಗಳ ಬದಲು 'ಇಟಲಿ ಮಾತೆ'ಯ ಟೆಂಪಲ್ ಸುತ್ತಬೇಕು, ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಮತ್ತು ಆಡಳಿತ ವೈಫಲ್ಯದ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

Read Full Story

More Trending News