ಲಾಠಿ ನಿಷೇಧಿತ ಅಸ್ತ್ರವಲ್ಲ. ಲಾಠಿ ದೇಶ ಭಕ್ತರಿಗೆ ಆತ್ಮವಿಶ್ವಾಸ ಮೂಡಿಸುತ್ತೆ. ಆರ್‌ಎಸ್‌ಎಸ್‌ನವರು ಲಾಠಿ ಹಿಡಿದರೆ ತಪ್ಪೇನು ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಪ್ರಶ್ನಿಸಿದರು.

ಹುಬ್ಬಳ್ಳಿ (ಅ.23): ಲಾಠಿ ನಿಷೇಧಿತ ಅಸ್ತ್ರವಲ್ಲ. ಲಾಠಿ ದೇಶ ಭಕ್ತರಿಗೆ ಆತ್ಮವಿಶ್ವಾಸ ಮೂಡಿಸುತ್ತೆ. ಆರ್‌ಎಸ್‌ಎಸ್‌ನವರು ಲಾಠಿ ಹಿಡಿದರೆ ತಪ್ಪೇನು ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಪ್ರಶ್ನಿಸಿದರು. ನಂತರ ಮಾತನಾಡಿದ ಅವರು, ಲಾಠಿ ನಿಷೇಧಿತ ಅಸ್ತ್ರವಲ್ಲ. ದೇಶದ್ರೋಹಿಗಳ ಸಂಘರ್ಷಕ್ಕೆ ಲಾಠಿ ಹಿಡಿಯಲಾಗುತ್ತೆ ಎಂದು ದನ ಕಾಯೋರ ರೀತಿ ಲಾಠಿ ಹಿಡಿಯಲಾಗುತ್ತೆ ಎಂಬ ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

ದನ ಕಾಯೋದು ಕೆಟ್ಟ ಕೆಲಸ ಅಲ್ಲ. ಶ್ರೀಕೃಷ್ಣನೇ ದನ ಕಾದಿದ್ದಾನೆ. ದನ ಕಾಯೋದು ಅಪರಾಧವಾ..?. ನಾವು ದನ ಕಾಯ್ದೇ ಬಂದಿದ್ದೇನೆ. ಅವರಿಗೆ ‌ಕಾಯಕ ಸಂಸ್ಕೃತಿ ಗೊತ್ತಿಲ್ಲ. ಅವರಿಗೆ ಮೋಸ, ವಂಚನೆ, ಜಗಳ ಹಚ್ಚೋದಷ್ಟೇ ಗೊತ್ತು. ಅರಿವಿಲ್ಲದೆ ಇರೋರಿಗೆ ಅರಿವು ಮೂಡಿಸಬಹುದು. ಜಾಣ ಕುರುಡರಿಗೆ ಮೂಡಿಸೋದು ಕಷ್ಟ. ಶಾಖೆಗೆ ಬಂದ್ರೆ ಶಾಖೆ ಏನು ಅಂತ ಅರ್ಥವಾಗುತ್ತದೆ. ಅಲ್ಲಿ ಯಾರು ಬೇಕಾದ್ರು ಬರಬಹುದು. ಗುತ್ತಿಗೆದಾರರು ಪತ್ರದ ಮೇಲೆ ಪತ್ರ ಬರೆಯುತ್ತಿದ್ದಾರೆ.

ಪತ್ರ ಬರೆದೋರಿಗೆ ಬೆದರಿಕೆ ಹಾಕ್ತಿದ್ದಾರೆ. ಗುಂಡಿಗಳ ಬಗ್ಗೆ ಕೇಳಿದ್ರೆ ಅವರಿಗೆ ಬೆದರಿಕೆ ಹಾಕ್ತಿದ್ದಾರೆ. ಮಾಡೋ ಕೆಲಸ ಬಿಟ್ಟು ಉಳಿದೆಲ್ಲವನ್ನು ಮಾಡ್ತಿದ್ದಾರೆ. ಹೀಗಾಗಿ ಗೂಗಲ್ ಎಐ ಹಬ್ ಬೇರೆ ರಾಜ್ಯಕ್ಕೆ ಹೋಯ್ತು. ಬಿಹಾರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬರುತ್ತದೆ. ಈಗಾಗಲೇ ಯುಪಿಎ ಸೋಲಿಗೆ ಕಾರಣ ಸಿದ್ದಮಾಡಿಟ್ಟುಕೊಂಡಿದೆ. ಪ್ರಶಾಂತ್ ಕಿಶೋರ್ ಯಾರ ಮತ ಕಿತ್ತುಕೊಳ್ತಾರೆ ಅನ್ನೋದು ಮುಂದೆ ಗೊತ್ತಾಗುತ್ತೆ ಎಂದು ಸಿ.ಟಿ.ರವಿ ತಿಳಿಸಿದರು.

ಗೋ ಹತ್ಯೆ ತಡೆಯುವ ತಾಕತ್ತು ಹಿಂದೂ ಸಮಾಜಕ್ಕೆ ಇದೆ

ಸಂಪೂರ್ಣ ಗೋಹತ್ಯೆ ಕಾಯ್ದೆ ಜಾರಿಯಲ್ಲಿದೆ. ಗೋ ಹಂತಕರನ್ನು ಪೊಲೀಸರು ಹದ್ದುಬಸ್ತಿನಲ್ಲಿಡುವ ಕೆಲಸ ಮಾಡದೇ ಇದ್ದರೆ ನಾವೇ ಆ ಕೆಲಸವನ್ನು ಮಾಡುತ್ತೇವೆ. ಹಿಂದೂ ಸಮಾಜಕ್ಕೆ ಆ ತಾಕತ್ತು ಇದೆ ಎಂದು ಹೇಳಿದರು. ಪೊಲೀಸ್ ಇಲಾಖೆ ತನ್ನ ಕರ್ತವ್ಯವನ್ನು ನಿಷ್ಠೆಯಿಂದ ನಿಭಾಯಿಸಿದರೆ ಗೋರಕ್ಷಣೆಯಂತಹ ಕಾರ್ಯಕ್ಕೆ ಬಜರಂಗದಳದ ಕಾರ್ಯಕರ್ತರು ಮುಂದಾಗುವುದಿಲ್ಲ. ಗೋಹಂತಕರಿಂದ ಹಫ್ತಾ ವಸೂಲಿ ಮಾಡಿ ಸುಮ್ಮನಾದರೆ ನಿಮ್ಮ ಹೆಂಡತಿ, ಮಕ್ಕಳು ಸುಖವಾಗಿರಲು ಸಾಧ್ಯವಿಲ್ಲ ಎಂದರು.ಉಪ್ಪಳ್ಳಿ ಬಳಿ ಅಕ್ರಮವಾಗಿ ಮಸೀದಿ ನಿರ್ಮಾಣವಾಗುತ್ತಿದೆ.

ಇಂದಿಗೂ ನ್ಯಾಯಬದ್ಧ ಅನುಮತಿ ಪಡೆದಿಲ್ಲ. ಜಿಲ್ಲಾಡಳಿತ ನಿಲ್ಲಿಸದೇ ಇದಲ್ಲಿ ನಾವೇ ನಿಲ್ಲಿಸಬೇಕಾಗಬಹುದು. ಜಿಲ್ಲಾಡಳಿತ ಕಾನೂನು ಪಾಲಿಸುವಂತೆ ನೋಡಿಕೊಂಡರೆ ಕೋಮು ಗಲಭೆ ಆಗುವುದಿಲ್ಲ ಎಂದು ಹೇಳಿದರು.ಅಂಬೇಡ್ಕರ್ ಕೊಟ್ಟ ಸಂವಿಧಾನ ಗೋಹತ್ಯೆ ನಿಷೇಧ ಮಾಡಿದ್ದರೂ, ಅಕ್ರಮ ಕಸಾಯಿ ಖಾನೆಗಳು ನಡೆಯುತ್ತಿವೆ ಎಂದರೆ ಅದು ಸಂವಿಧಾನ ವಿರೋಧಿ ಕೃತ್ಯ. ಅದನ್ನು ಮಾಡುತ್ತಿರುವವರಿಗೆ ಬುದ್ಧಿ ಕಲಿಸಬೇಕು ಎಂದು ಒತ್ತಾಯಿಸುತ್ತಿರುವುದು ಅಪರಾಧವೇ ಎಂದು ಪ್ರಶ್ನಿಸಿದರು.