- Home
- Entertainment
- TV Talk
- Lakshmi Nivasa: ವಿಶ್ವನ ಜೊತೆ ಚಿನ್ನುಮರಿಗೂ ಹಳ್ಳತೋಡಿದ ಜಯಂತ್: ಶ್ರದ್ಧಾಂಜಲಿ ಕಾರ್ಡ್ ಪ್ರಿಂಟ್!
Lakshmi Nivasa: ವಿಶ್ವನ ಜೊತೆ ಚಿನ್ನುಮರಿಗೂ ಹಳ್ಳತೋಡಿದ ಜಯಂತ್: ಶ್ರದ್ಧಾಂಜಲಿ ಕಾರ್ಡ್ ಪ್ರಿಂಟ್!
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ, ಜಾಹ್ನವಿ ಬದುಕಿರುವ ಸತ್ಯವನ್ನು ಅರಿತ ಸೈಕೋ ಜಯಂತ್, ಆಕೆಗೆ ಮತ್ತು ವಿಶ್ವನಿಗೆ ಹಳ್ಳ ತೋಡಲು ಭರ್ಜರಿ ಪ್ಲ್ಯಾನ್ ಮಾಡಿದ್ದಾನೆ. ಪತ್ನಿಯ ಶ್ರದ್ಧಾಂಜಲಿ ಕಾರ್ಡ್‌ನಲ್ಲಿ ಆಕೆಯ ಫೋಟೋ ಮುದ್ರಿಸಿ, ಎಲ್ಲರನ್ನೂ ಇಕ್ಕಟ್ಟಿಗೆ ಸಿಲುಕಿಸಿದ್ದಾನೆ.

ಕುತೂಹಲ ಘಟ್ಟದಲ್ಲಿ ಲಕ್ಷ್ಮೀ ನಿವಾಸ
ಲಕ್ಷ್ಮೀನಿವಾಸ (Lakshmi Nivasa) ಸೀರಿಯಲ್ ಇದೀಗ ಭಾರಿ ಕುತೂಹಲ ಘಟ್ಟವನ್ನು ತಲುಪಿದೆ. ಇದಾಗಲೇ ಜಯಂತ್ಗೆ ಜಾಹ್ನವಿ ಬದುಕಿದ್ದಾಳೆ ಎನ್ನುವ ಸತ್ಯ ತಿಳಿದಿದೆ. ಆಕೆಗೆ ವಿಶ್ವನೇ ಸಪೋರ್ಟ್ ಮಾಡ್ತಿದ್ದಾನೆ ಎನ್ನುವ ವಿಷಯವೂ ತಿಳಿದಿದೆ. ಜೊತೆಗೆ ತನ್ನ ಮನೆ ಕೆಲಸದಾಕೆ ಶಾಂತಮ್ಮ ಕೂಡ ಏನೋ ರಹಸ್ಯ ಮುಚ್ಚಿಡುತ್ತಾಳೆ ಎನ್ನುವುದು ತಿಳಿದಿದೆ.
ಜಯಂತ್ ಭಾರಿ ಪ್ಲ್ಯಾನ್
ಇದಕ್ಕಾಗಿಯೇ ಈಗ ಆತ ಭಾರಿ ಪ್ಲ್ಯಾನ್ ಮಾಡಿದ್ದಾನೆ. ಜಾಹ್ನವಿಯ ಬಳೆ ಸಿಗುತ್ತಿದ್ದಂತೆಯೇ ಆಕೆ ತನಗೆ ಮೋಸ ಮಾಡ್ತಿರೋ ವಿಷಯ ಜಯಂತ್ಗೆ ತಿಳಿದಿದೆ. ತನ್ನ ಮನೆಗೆ ಬಂದರೂ ಆಕೆ ತಪ್ಪಿಸಿಕೊಂಡು ತಿರುಗಾಡ್ತಿರೋದು ಕನ್ಫರ್ಮ್ ಆಗಿದೆ.
ಅಸಲಿಯತ್ತು ಬಯಲಿಗೆ
ತನಗೇ ಭ್ರಮೆಯಾಗುತ್ತಿದೆ ಎಂದು ಸಾಬೀತು ಮಾಡಲು ಎಲ್ಲರೂ ಸೇರಿ ನಾಟಕ ಮಾಡ್ತಿರೋ ಅಸಲಿಯತ್ತೂ ಜಯಂತ್ಗೆ ತಿಳಿದಿದೆ. ಹೇಳಿಕೇಳಿ ಆತ ಸೈಕೋ. ಇನ್ನು ಕೇಳಬೇಕೆ?
ಕಾರ್ಡ್‌ನಲ್ಲಿ ಪತ್ನಿ ಫೋಟೋ
ಮೊದಲಿಗೆ ಪತ್ನಿಯ ಶ್ರದ್ಧಾಂಜಲಿಯ ಕಾರ್ಡ್‌ನಲ್ಲಿ ಆಕೆಯ ಫೋಟೋ ಬೇಡ ಎಂದು ಹೇಳಿದ್ದ ಜಯಂತ್. ಆಗಿನ್ನೂ ಆಕೆ ಬದುಕಿದ್ದಾಳೆ ಎನ್ನುವ ಸತ್ಯ ಯಾವುದೋ ಮೂಲೆಯಲ್ಲಿ ಕಾಡುತ್ತಿತ್ತು.
ಹಳ್ಳ ತೋಡಿದ ಜಯಂತ್
ಆದರೆ ಈಗ ಆಕೆ ತನ್ನ ಕಣ್ಣಿಗೆ ಮಣ್ಣೆರಚುತ್ತಿದ್ದಾಳೆ ಎನ್ನುವ ಸತ್ಯದ ಅರಿವು ಆಗುತ್ತಿದ್ದಂತೆಯೇ ಕಾರ್ಟ್ನಲ್ಲಿ ಆಕೆಯ ಫೋಟೋ ಪ್ರಿಂಟ್ ಮಾಡಿಸಿದ್ದಾನೆ. ಈ ಮೂಲಕ ಚಿನ್ನುಮರಿ ಮತ್ತು ವಿಶ್ವ ಇಬ್ಬರಿಗೂ ಹಳ್ಳ ತೋಡಿದ್ದಾನೆ ಜಯಂತ್
ಕಾರ್ಡ್‌ನಲ್ಲಿ ಫೋಟೋ ನೋಡ್ತಾಳಾ ತನು?
ಅದೇ ಇನ್ನೊಂದೆಡೆ, ವಿಶ್ವ ಆ ಕಾರ್ಡ್ ಅನ್ನು ಅಲ್ಲಿಯೇ ಇಟ್ಟು ಹೋಗಿದ್ದಾನೆ. ವಿಶ್ವನನ್ನು ಕರೆಯುತ್ತಾ ತನು ಬಂದಾಗ ಆ ಕಾರ್ಡ್ ಕಣ್ಣಿಗೆ ಬಿದ್ದಿದೆ. ಅಲ್ಲಿಗೆ ವಿಶ್ವನಿಗೆ ನೆನಪಾಗಿ ಓಡಿ ಬಂದಿದ್ದಾನೆ. ಮುಂದೇನಾಗುತ್ತೆ ಎನ್ನುವ ಕುತೂಹಲ ಸದ್ಯಕ್ಕಿದೆ.