ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಕಾವ್ಯಾ ಮತ್ತು ಗಿಲ್ಲಿ ನಟರ ಜೋಡಿ ಗಮನ ಸೆಳೆಯುತ್ತಿದೆ. ಕಾವ್ಯಾಳ ಮಾತಿನಂತೆ ಗಡ್ಡ ಟ್ರಿಮ್ ಮಾಡಿಸಿಕೊಳ್ಳಲು ಹೋದ ಗಿಲ್ಲಿ ನಟನಿಗೆ, ಚಂದ್ರ ಪ್ರಭ ಅವರು ಸುದೀಪ್ ಅವರ ಕೆಂಪೇಗೌಡ ಸಿನಿಮಾದ ಸ್ಟೈಲ್‌ನಲ್ಲಿ ಗಡ್ಡ ಟ್ರಿಮ್ ಮಾಡಿ, ಮನೆಯಲ್ಲಿ ನಗುವಿನ ಅಲೆ ಎಬ್ಬಿಸಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಕಾವ್ಯಾ ಮತ್ತು ಗಿಲ್ಲಿ ನಟ ಜೋಡಿ ಟಾಸ್ಕ್‌ನಿಂದಲೂ ಒಟ್ಟಿಗಿದ್ದಾರೆ. ಆಗಿನಿಂದಲೂ ಇವರಿಬ್ಬರ ಬಾಂಡಿಂಗ್ ತುಂಬಾ ಚೆನ್ನಾಗಿ ಬೆಳೆದಿದ್ದು, ಬಹುತೇಕ ಸಮಯವನ್ನು ಒಟ್ಟಿಗೆ ಕಳೆಯುತ್ತಾರೆ. ಟಾಸ್ಕ್‌ನ ಹೊರತಾಗಿ ಇಬ್ಬರೂ ಕಾಮಿಡಿ ಮಾಡುವುದು, ಮಾತನಾಡುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಯಾರಾದರೂ ಕಾವ್ಯ ಅಥವಾ ಗಿಲ್ಲಿಯ ಬಗ್ಗೆ ಮಾತನಾಡಿದರೆ, ಅವರೊಂದಿಗೆ ಜಗಳ ಮಾಡಿದಾಗಲೂ ಒಬ್ಬರಿಗೊಬ್ಬರು ವಹಿಸಿಕೊಂಡು ಮಾತನಾಡುವುದಕ್ಕೆ ಬರುತ್ತಾರೆ.

ಇಬ್ಬರೂ ಸೇರಿ ಹಲವು ಕಾಮಿಡಿ ದೃಶ್ಯಗಳನ್ನು ಮಾಡಿದ್ದಾರೆ. ಲವ್ ಪ್ರಪೋಸ್ ದೃಶ್ಯ, ಸಿನಿಮಾದ ದೃಶ್ಯಗಳ ರಿ-ಕ್ರಿಯೇಟ್ ಮಾಡುವುದು ಸೇರಿದಂತೆ ಹಲವು ದೃಶ್ಯಗಳನ್ನು ಒಟ್ಟಿಗೆ ಮಾಡಿ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದ್ದಾರೆ. ಇಬ್ಬರ ಜೋಡಿಯನ್ನು ಕಲರ್ಸ್ ಕನ್ನಡ ವಾಹಿನಿಯ ಎಲ್ಲ ಬಿಗ್ ಬಾಸ್ ವೀಕ್ಷಕರೂ ಕೂಡ ಮೆಚ್ಚಿಕೊಂಡಿದ್ದಾರೆ.

ಇದೀಗ ಬಿಗ್ ಬಾಸ್ ಕಾರ್ಯಕ್ರಮದ ಹೊಸ ಪ್ರೋಮೋ ಬಿಡುಗಡೆಯಾಗಿದ್ದು, ಇದರಲ್ಲಿ ಕಾವ್ಯಾ, ಗಿಲ್ಲಿ ನಟನಿಗೆ ನೀನು ಕ್ಲೀನ್ ಶೇವ್ ಮಾಡಿಸಿಕೋ ಚೆನ್ನಾಗಿ ಕಾಣಿಸ್ತೀಯ ಎಂದು ಹೇಳುತ್ತಾರೆ. ಇದಕ್ಕೆ ಹೋಗೇ ಮೂದೇವಿ ಎಂದಿದ್ದ ಗಿಲ್ಲಿ ಇದೀಗ ಕಾವ್ಯಾಳ ಮಾತನ್ನು ನಿಜ ಮಾಡಲು ಮುಂದಾಗಿದ್ದಾನೆ. ಇದಕ್ಕೆ ಮತ್ತೊಬ್ಬ ಹಾಸ್ಯ ಕಲಾವಿದ ಚಂದ್ರ ಪ್ರಭ ಅವರು ತಮ್ಮ ಟ್ರಿಮ್ಮರ್ ತೆಗೆದುಕೊಂಡು ಗಿಲ್ಲಿಗೆ ಕ್ಲೀನ್ ಶೇವ್ ಮಾಡುವ ಬದಲು ಗಡ್ಡಕ್ಕೆ ಒಂದು ಶೇಪ್ ಕೊಡುತ್ತಾರೆ. ಇದು ಸುದೀಪ್ ಅವರು ಕೆಂಪೇಗೌಡ ಸಿನಿಮಾದಲ್ಲಿ ಬಿಟ್ಟಿರುವ ಗಡ್ಡದ ರೀತಿಯಲ್ಲಿ ಗಡ್ಡವನ್ನು ಬಿಡುತ್ತಾರೆ.

ನಾನು ಚೆನ್ನಾಗಿ ಕಾಣಿಸದಿದ್ದರೆ ನಿನ್ನ ಜುಟ್ಟು ಕತ್ತರಿಸುತ್ತೇನೆ:

ಈ ಟ್ರಿಮ್ಮರ್ ಮಾಡುವ ಪ್ರೋಮೋವನ್ನು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಗಿಲ್ಲಿ ನಟ ಮಾತನಾಡುತ್ತಾ 'ಕಾವ್ಯಾಳ ಮಾತು ಕಟ್ಟಿಕೊಂಡು ನಾನು ಟ್ರಿಮ್ ಮಾಡಿಸಿಕೊಳ್ತಿದ್ದೇನೆ. ನಾನೇನಾದರೂ ಚೆನ್ನಾಗಿ ಕಾಣದೇ ಇರಬೇಕು, ಆಗ ನಿನ್ನ ಜುಟ್ಟು ಕತ್ತರಿಸುತ್ತೇನೆ ಎಂದು ಹೇಳುತ್ತಾನೆ. ಆಗ ಪಕ್ಕದಲ್ಲಿಯೇ ನಿಂತುಕೊಂಡಿದ್ದ ನಟಿ ಕಾವ್ಯಾ ಶೈವ ಜೋರಾಗಿ ನಗಾಡುತ್ತಾಳೆ. ಚೆನ್ನಾಗಿ ಕಾಣಿಸ್ತೀಯ ಎಂದು ಹೇಳುತ್ತಾಳೆ.

ಇನ್ನು ಚಂದ್ರಪ್ರಭ ಅವರು ಗಿಲ್ಲಿ ನಟನಿಗೆ ಟ್ರಿಮ್ ಮಾಡುವಾಗ, ಮೀಸೆಯ ಬಳಿ ಟ್ರಿಮ್ ಮಾಡುತ್ತಾರೆ. ಆಗ ಗಿಲ್ಲಿ ಇದ್ಯಾಕಣ್ಣಾ ಪ್ರೊಫೆಷನಲ್ ಆಡಿದಂಗೆ ಆಡ್ತಿಯಲ್ಲಾ? ಮಾಡ್ತಿರೋದು ಎಕ್ಸ್‌ಪೀರಿಮೆಂಟ್, ಸುಮ್ಮನೆ ಮಾಡಣ್ಣಾ ಅಂತಾರೆ. ಇದಕ್ಕೆ ಸುಮ್ಮನಿರು ನೀಡು, ಅದಕ್ಕೆ ಪಾಯಿಂಟ್ ಕ್ಯಾಪ್ ಹಾಕಿದೆ ಎಂದು ಟ್ರಿಮ್ ಮಾಡುತ್ತಾರೆ. ಇದೇ ವೇಳೆ ಅರ್ಧ ಟ್ರಿಮ್ ಮಾಡಿದಾಗ ಟ್ರಿಮ್ಮರ್ ಚಾರ್ಜ್ ಖಾಲಿಯಾಗುತ್ತದೆ. ಆಗ ಗಿಲ್ಲಿ ಗೋಗರೆಯುತ್ತಾ, ದಯವಿಟ್ಟು ಚಾರ್ಜ್ ಹಾಕೊಂಡು ಬಾರಣ್ಣಾ ಎಂದು ಹೇಳುತ್ತಾನೆ.

ಕಾಮಿಡಿ ಕಲಾವಿದನಿಗೆ ಮಾಸ್ ಲುಕ್:

ಕೊನೆಗೆ ಟ್ರಿಮ್ ಮಾಡಿದ ನಂತರ ಮುಖ ತೊಳೆದುಕೊಂಡು ಬಂದು ಕನ್ನಡಿ ಮುಂದೆ ನಿಂತಾಗ, ಕೆಂಪೇಗೌಡ ಸ್ಟೈಲ್‌ನಲ್ಲಿ ಮೀಸೆ ಮತ್ತು ಗಡ್ಡವನ್ನು ಬಿಟ್ಟಿರುವುದನ್ನು ನೋಡುತ್ತಾರೆ. ಆಗ ಇದು ಸುದೀಪಣ್ಣ ಸ್ಟೈಲಾ, ಕೆಂಪೇಗೌಡ ಸುದೀಪಣ್ಣನಾ ಎಂದು ಕೇಳುತ್ತಾನೆ. ಎಲ್ಲರೂ ಗಿಲ್ಲಿಯ ಗಡ್ಡದ ಶೇಪ್ ಹಾಗೂ ಸ್ಟೈಲ್ ನೋಡಿ ನಗಾಡುತ್ತಾರೆ. ಕಾಮಿಡಿ ಮಾಡೋ ಗಿಲ್ಲಿಗೆ ಮಾಸ್ ಲುಕ್ ಕೆಂಪೇಗೌಡ ಸ್ಟೈಲ್ ಟ್ರಿಮ್ಮಿಂಗ್ ಮಾಡಿರುವುದು ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಕಾಮಿಡಿ ಆಗಿದೆ.