- Home
- Entertainment
- TV Talk
- ಹಬ್ಬದ ಟೈಮ್ನಲ್ಲೇ Bigg Boss ಜಾನ್ವಿಯ ಹಳೆ ವಿಡಿಯೋ ವೈರಲ್: ಎಲ್ಲಾ ಗೊತ್ತಾಯ್ತಮ್ಮಾ ಎನ್ನೋದಾ ನೆಟ್ಟಿಗರು!
ಹಬ್ಬದ ಟೈಮ್ನಲ್ಲೇ Bigg Boss ಜಾನ್ವಿಯ ಹಳೆ ವಿಡಿಯೋ ವೈರಲ್: ಎಲ್ಲಾ ಗೊತ್ತಾಯ್ತಮ್ಮಾ ಎನ್ನೋದಾ ನೆಟ್ಟಿಗರು!
ಬಿಗ್ ಬಾಸ್ ಮನೆಯಲ್ಲಿ ಜಾನ್ವಿ ಅವರ ವರ್ತನೆಗೆ ಅಸಮಾಧಾನ ವ್ಯಕ್ತವಾಗುತ್ತಿರುವ ನಡುವೆಯೇ, ಅವರು ಬಿಗ್ ಬಾಸ್ ಅನ್ನು 'ಬೆಳಕು' ಎಂದು ಕರೆದಿರುವ ಹಳೆಯ ದೀಪಾವಳಿ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋಗೆ ನೆಟ್ಟಿಗರು ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದು, ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

ಬಿಗ್ಬಾಸ್ನಲ್ಲಿ ಜಾನ್ವಿ ಹವಾ
ಬಿಗ್ ಬಾಸ್ ಕನ್ನಡ 12 (Bigg Boss Kannada 12) ನಲ್ಲಿ ಆ್ಯಂಕರ್ ಜಾನ್ವಿ ಮತ್ತು ಅಶ್ವಿನಿ ಗೌಡ ಅವರ ವರ್ತನೆ ವೀಕ್ಷಕರಲ್ಲಿ ಅಸಮಾಧಾನ ತರುತ್ತಿದೆ. ಅದರಲ್ಲಿಯೂ ರಕ್ಷಿತಾ ಶೆಟ್ಟಿ ಅವರಿಗೆ ತೀರಾ ವೈಯಕ್ತಿಕವಾಗಿ ಇಬ್ಬರೂ ನಿಂದಿಸಿದ್ದು, ಅದಕ್ಕೆ ಸುದೀಪ್ ಅವರು ಕ್ಲಾಸ್ ತೆಗೆದುಕೊಂಡ ಬಳಿಕವಂತೂ ಇವರಿಬ್ಬರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ತೀರಾ ವೈಯಕ್ತಿಕ ಎನ್ನುವಂಥ ಕಮೆಂಟ್ಸ್ ಬರುತ್ತಿವೆ.
ಸುದೀಪ್ ಬುದ್ಧಿಮಾತು
ಇದರ ನಡುವೆಯೇ, ಸುದೀಪ್ ಅವರು ಬುದ್ಧಿವಾದ ಹೇಳಿದ ಮೇಲೂ ಜಾನ್ವಿ ಅವರು, ಬಿಗ್ಬಾಸ್ ವೀಕ್ಷಕರ ಅಸಮಾಧಾನಕ್ಕೆ ಗುರಿಯಾಗುತ್ತಲೇ ಇದ್ದಾರೆ. ರಘು-ಅಶ್ವಿನಿ ಜಗಳದಲ್ಲೂ ಮೂಗು ತೂರಿಸಿ ಟ್ರೋಲ್ ಆಗುತ್ತಿದ್ದಾರೆ. ‘ಅಶ್ವಿನಿ ಅವರನ್ನು ಜಾಸ್ತಿ ಪುಶ್ ಮಾಡುತ್ತಾ ಹೋದರೆ, ಪುಶ್ ಆಗಿ ಈಕಡೆ ಬರ್ತೀರಾ’ ಎಂದು ಸುದೀಪ್ ಬುದ್ಧಿಮಾತು ಹೇಳಿದ್ದರೂ ಜಾನ್ವಿ ಅದನ್ನು ಸೀರಿಯಲ್ ಆಗಿ ತೆಗೆದುಕೊಳ್ತಿಲ್ಲ ಎಂದು ಚರ್ಚೆ ಆಗ್ತಿದೆ.
ಬಿಗ್ಬಾಸ್ಗೂ ಇದೇ ಬೇಕೆನ್ನಿ
ಇಂಥ ಗಲಾಟೆ, ಗದ್ದಲ ಇದ್ದರೇನೇ ಬಿಗ್ಬಾಸ್ಗೆ ಒಂದು ಕಳೆ, ಅದರ ವೀಕ್ಷಕರೂ ಹೆಚ್ಚಾಗುತ್ತಾರೆ ಎನ್ನುವ ಮಾತು ಸುಳ್ಳಲ್ಲ. ಇದೇ ಕಾರಣಕ್ಕೆ ಸ್ಪರ್ಧಿಗಳ ನಡುವೆ ಜಗಳ ಹಚ್ಚುವ ವಾತಾವರಣ ಸೃಷ್ಟಿ ಮಾಡುವ ಕಿತಾಪತಿ ಬಿಗ್ಬಾಸ್ ಮಾಡುತ್ತಲೇ ಇರುತ್ತದೆ ಅನ್ನಿ.
ದೀಪಾವಳಿಗೆ ವಿಷ್
ಆ ವಿಷಯ ಅಲ್ಲಿರಲಿ. ಆದರೆ ಸದ್ಯಕ್ಕೆ ಜಾನ್ವಿ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಹಳೆಯ ವಿಡಿಯೋ ಎಂದರೆ, ಬಿಗ್ಬಾಸ್ಗೆ ಅವರು ಸೆಲೆಕ್ಟ್ ಆದ ಮೇಲೆ ದೀಪಾವಳಿಯ ವಿಷ್ ಮಾಡಿ ಮೊದಲೇ ವಿಡಿಯೋ ಮಾಡಿಟ್ಟು ಹೋಗಿದ್ದು, ಅದನ್ನು ಅವರ ಸೋಷಿಯಲ್ಮೀಡಿಯಾ ಹ್ಯಾಂಡಲ್ ಮಾಡ್ತಿರೋರು ಈಗ ಶೇರ್ ಮಾಡಿದ್ದಾರೆ.
ಜೀವನದಲ್ಲಿ ಬೆಳಕು ಬಂತು
ಅದರಲ್ಲಿ ಜಾನ್ವಿ ಅವರು, ನನ್ನ ಬದುಕಿನಲ್ಲಿ ಒಂದಿಷ್ಟು ಸಮಯ ಕತ್ತಲು ಕವಿದಿತ್ತು. ಕತ್ತಲಿನಲ್ಲಿಯೇ ಹೋಗುವಾಗ ದೂರದಲ್ಲಿ ಪ್ರಕಾಶಮಾನವಾದ ಬೆಳಕು ಹೊಳೆಯಿತು. ಆ ಬೆಳಕೇ ಬಿಗ್ಬಾಸ್ ಎಂದಿರೋ ಜಾನ್ವಿ. ಬಿಗ್ಬಾಸ್ಗೆ ಹೋಗಿ ಬಂದ ಮೇಲೆ ನನ್ನ ಜೀವನ ಇನ್ನಷ್ಟು ಉಜ್ವಲ ಆಗಿರುತ್ತೆ ಎಂದಿದ್ದಾರೆ.
ಜನರಲ್ಲಿ ಆಶಾ ಭಾವನೆ
ಇದೇ ವೇಳೆ ಜನರಲ್ಲಿ ಆಶಾ ಭಾವನೆ ಬಿತ್ತಿರುವ ಅವರು, ಅನೇಕ ಜೀವನದಲ್ಲಿ ಕತ್ತಲೆ ಇರುತ್ತೆ. ಯಾರೂ ಆಶಾ ಭಾವನೆ ಬಿಡಬೇಡ ಎನ್ನುತ್ತಲೇ ನಿಮ್ಮ ಜೀವನದಲ್ಲಿಯೂ ಸದಾ ಬೆಳಕು ಬರಲಿ ಎಂದು ದೀಪಾವಳಿಗೆ ವಿಷ್ ಮಾಡಿದ್ದಾರೆ. 15 ವರ್ಷಗಳಿಂದ ಇಷ್ಟದೇವಿ ಮಂಗಳಗೌರಿಯನ್ನು ಪ್ರಾರ್ಥಿಸುತ್ತಿದ್ದೇನೆ. ಆಕೆ ಎಲ್ಲರಿಗೂ ಶುಭ ಮಾಡಲಿ ಎಂದಿದ್ದಾರೆ.
ಟ್ರೋಲ್ ಮಾಡ್ತಿರೋ ನೆಟ್ಟಿಗರು
ಆದರೆ, ಬಿಗ್ಬಾಸ್ ವೀಕ್ಷಕರು ಮಾತ್ರ ವಿಷ್ ಮಾಡುವ ಬದಲು, ಹೌದಮ್ಮಾ ತಾಯೆ, ನಿಮ್ಮ ಮುಖವಾಡ ಎಲ್ಲಾ ಬಿಗ್ಬಾಸ್ನಲ್ಲಿ ಬಯಲಾಗ್ತಿದೆ ಎನ್ನುತ್ತಿದ್ದಾರೆ. ಹೋಗಿ ಬಂದ ಮೇಲೆ ಎಷ್ಟು ಉಜ್ವಲ ಆಗುತ್ತಿ ಎನ್ನುವುದು ಈಗಲೇ ತಿಳಿಯುತ್ತಿದೆ, ನಿಮ್ಮದೆಲ್ಲಾ ಗೊತ್ತಾಗಿದೆ ಎಂದು ಟ್ರೋಲ್ ಮಾಡುತ್ತಿದ್ದಾರೆ. ಕೆಲವರು ಮಾತ್ರ ನಟಿಗೆ ವಿಷ್ ಮಾಡಿದ್ದಾರೆ.