Bigg Bossನಿಂದ ಮಂಜು ಭಾಷಿಣಿಗೆ ಸಿಕ್ಕ ಸಂಭಾವನೆ ಎಷ್ಟು? ಖರ್ಚಾದದ್ದೆಷ್ಟು? ನಟಿ ರಿವೀಲ್
'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ 'ಬಡ್ಡಿ ಬಂಗಾರಮ್ಮ' ಖ್ಯಾತಿಯ ನಟಿ ಮಂಜು ಭಾಷಿಣಿ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ತಮ್ಮ ಸಂಭಾವನೆಯ ಬಗ್ಗೆ ಹಾಗೂ ಶೋಗೆ ಹೋಗಲು ಕಾಸ್ಟ್ಯೂಮ್ ಮತ್ತು ಮೇಕಪ್‌ಗಾಗಿ ಮಾಡಿರೋ ಖರ್ಚಿನ ಬಗ್ಗೆ ಅವರು ಹೇಳಿದ್ದೇನು?

ಬಡ್ಡಿ ಬಂಗಾರಮ್ಮ
ಪುಟ್ಟಕ್ಕನ ಮಕ್ಕಳು ಸೀರಿಯಲ್ನಲ್ಲಿ ʻಬಡ್ಡಿ ಬಂಗಾರಮ್ಮʼ ಪಾತ್ರದ ಮೂಲಕ ಆ ಪಾತ್ರಕ್ಕೆ ಹೋಲುವ ಅಭಿನಯ ಮಾಡಿ ಕನ್ನಡಿಗರ ಮನ ಗೆದ್ದವರು ಮಂಜು ಭಾಷಿಣಿ (Manju Bhashini). ಬಂಗಾರಮ್ಮ ಎಂದೇ ಫೇಮಸ್ ಆಗಿದ್ದ ನಟಿ, ʻಬಿಗ್ ಬಾಸ್ʼಗೆ ಎಂಟ್ರಿ ಕೊಡುವ ಮೂಲಕ ಅಸಲಿ ಹೆಸರಿನಿಂದ ಗುರುತಿಸಿಕೊಳ್ಳುತ್ತಿದ್ದಾರೆ.
ಮೂರನೇ ವಾರಕ್ಕೆ ಎಲಿಮಿನೇಷನ್
ಮೂರನೇ ವಾರಕ್ಕೆ Bigg Boss 12 ಮನೆಯಿಂದ ಹೊರಬಂದಿರುವ ನಟಿ ಈಗ ಮಾಧ್ಯಮಗಳಲ್ಲಿ ಇಂಟರ್ವ್ಯೂ ಕೊಡುವುದರಲ್ಲಿ ಬಿಜಿ. ಅಷ್ಟಕ್ಕೂ, ಮಂಜು ಭಾಷಿಣಿ ಇದಾಗಲೇ ಸಿನಿಮಾಗಳಲ್ಲಿಯೂ ಫೇಮಸ್. 1997 ರಲ್ಲಿ ತೆರೆಕಂಡ ಪ್ರಶಸ್ತಿ ವಿಜೇತ ಚಿತ್ರ `ಭೂಮಿ ತಾಯಿ' ಮೂಲಕ ಜನಪ್ರಿಯರಾದರು. ಇವರು ಈ ಟಿವಿ ಕನ್ನಡದಲ್ಲಿ ಪ್ರಸಾರವಾದ `ಸಿಲ್ಲಿ ಲಲ್ಲಿ' ಧಾರವಾಹಿಯ ಸಮಾಜಸೇವಕಿ ಲಲಿತಾಂಬ ಪಾತ್ರದ ಮೂಲಕ ತುಂಬಾ ಪ್ರಸಿದ್ಧಿ ಪಡೆದರು. ಇವರು `ಲೈಮ್ ಲೈಟ್ ಆಕ್ಟಿಂಗ್ ಅಕಾಡೆಮಿ'ಯನ್ನು ಮುನ್ನಡೆಸುತ್ತಿದ್ದಾರೆ.
ಸಂಭಾವನೆ ಬಗ್ಗೆ ಪ್ರಶ್ನೆ
ಬಿಗ್ಬಾಸ್ನಲ್ಲಿ ಹೋಗಿ ಬಂದ ಮೇಲೆ ಸಾಮಾನ್ಯವಾಗಿ ಅಲ್ಲಿ ಸಿಕ್ಕ ಸಂಭಾವನೆ ಎಷ್ಟು ಎನ್ನುವುದು ವೀಕ್ಷಕರಿಗೆ ಹೊಳೆಯುವ ಮೊದಲ ಪ್ರಶ್ನೆ. ಅಷ್ಟಕ್ಕೂ ಸ್ಪರ್ಧಿಗಳ ಅರ್ಹತೆಗೆ, ಅವರು ಗಳಿಸ್ತಿರೋ ಸಂಬಳ, ಅವರಿಗೆ ಇರುವ ಜನಪ್ರಿಯತೆ ಇತ್ಯಾದಿಗಳನ್ನು ನೋಡಿ ಬಿಗ್ಬಾಸ್ನಲ್ಲಿ ವಿಭಿನ್ನ ರೀತಿಯಲ್ಲಿ ಸಂಬಳ ನೀಡಲಾಗುತ್ತದೆ.
ನಟಿ ಹೇಳಿದ್ದೇನು?
ಅದೇ ರೀತಿ ನಟಿ ಮಂಜು ಭಾಷಿಣಿ ಅವರಿಗೆ ಎಷ್ಟು ಸಂಬಳ ಸಿಕ್ಕಿದೆ ಎನ್ನುವ ಪ್ರಶ್ನೆಗೆ, ಇತರ ಬಹುತೇಕ ಸ್ಪರ್ಧಿಗಳಂತೆ ನಟಿ ಯಾವುದೇ ಮಾಹಿತಿ ನೀಡಲಿಲ್ಲ. ಆದರೆ, ಸಂಭಾವನೆ ಎನ್ನುವುದು ಇಲ್ಲಿ ಮುಖ್ಯವಲ್ಲ. ಅದಕ್ಕಿಂತ ಹೆಚ್ಚಿಗೆ ಸಿಗುವ ಅನುಭವ ಮುಖ್ಯ ಎಂದಿದ್ದಾರೆ.
ಕಾಸ್ಟ್ಯೂಮ್ಗೆ ಖರ್ಚು
ಕಡಿಮೆ ಅಂತನೂ ಹೇಳಲ್ಲ, ಒಂದಿಷ್ಟು ಸಿಕ್ಕಿದೆ ಎಂದು ನಟಿ ಹೇಳಿದ್ದಾರೆ. ಇದೇ ವೇಳೆ ತಾವು ಖರ್ಚು ಮಾಡಿರುವ ಬಗ್ಗೆಯೂ ಅವರು ಮಾತನಾಡಿದ್ದಾರೆ. ಬಿಗ್ಬಾಸ್ಗೆ ಅಂತ ಕಾಸ್ಟ್ಯೂಮ್ ಮತ್ತು ಮೇಕಪ್ಗೆ ಸುಮಾರು ಎರಡೂವರೆಯಿಂದ ಮೂರು ಲಕ್ಷ ರೂಪಾಯಿ ಖರ್ಚು ಮಾಡಿದ್ದೇನೆ ಎಂದಿದ್ದಾರೆ.
2-3 ಆಗುವಷ್ಟು ಖರೀದಿ
2-3 ವಾರಕ್ಕೆ ಆಗುವಷ್ಟು ಖರೀದಿ ಮಾಡಿದ್ದೆ. ವೀಕೆಂಡ್ನಲ್ಲಿ ಮನೆಯಿಂದ ತರಿಸಿಕೊಳ್ಳಬಹುದು. ಸೋ ಒಂದಷ್ಟನ್ನು ತೆಗೆದುಕೊಂಡು ಹೋಗಿದ್ದೆ ಎಂದು ಖರ್ಚಿನ ವಿವರವನ್ನೂ ನೀಡಿದ್ದಾರೆ.