- Home
- Life
- Relationship
- ಕುಂಕುಮ, ಮಾಂಗಲ್ಯ ಹಾಕ್ತೀರಿ ತಾನೆ? 16 ವರ್ಷ ಲವ್ ಹೇಗೆ ಮೆಂಟೇನ್ ಮಾಡಿದ್ರಿ? Suhaana Syed ಉತ್ತರ ಕೇಳಿ
ಕುಂಕುಮ, ಮಾಂಗಲ್ಯ ಹಾಕ್ತೀರಿ ತಾನೆ? 16 ವರ್ಷ ಲವ್ ಹೇಗೆ ಮೆಂಟೇನ್ ಮಾಡಿದ್ರಿ? Suhaana Syed ಉತ್ತರ ಕೇಳಿ
'ಸರಿಗಮಪ' ಖ್ಯಾತಿಯ ಗಾಯಕಿ ಸುಹಾನಾ ಸೈಯದ್, ತಮ್ಮ 16 ವರ್ಷಗಳ ಸ್ನೇಹಿತ ನಿತಿನ್ ಶಿವಾಂಶ್ ಅವರನ್ನು ಕುವೆಂಪು ಅವರ ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ವಿವಾಹವಾಗಿದ್ದಾರೆ. ಈ ಅಂತರ್‌ಧರ್ಮೀಯ ವಿವಾಹದ ಕುರಿತ ಚರ್ಚೆಗಳ ನಡುವೆ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ದಾಂಪತ್ಯ ಜೀವನಕ್ಕೆ ಸುಹಾನಾ ಸೈಯದ್
ಸರಿಗಮಪ ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದ ಗಾಯಕಿ ಸುಹಾನಾ ಸೈಯದ್ ಸ್ನೇಹಿತ, ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ಅವರನ್ನು ಈಚೆಗಷ್ಟೇ ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಮದುವೆಯಾಗಿದ್ದಾರೆ. 16 ವರ್ಷಗಳ ಕಾಲ ಪ್ರೀತಿಸಿದ ಸುಹಾನಾ ಸೈಯದ್ ಮತ್ತು ನಿತಿನ್ ಶಿವಾಂಶ್, ಕುಟುಂಬದವರು, ಗಣ್ಯರ ಸಮ್ಮುಖದಲ್ಲಿ ಕುವೆಂಪು ಅವರ ಮಂತ್ರ ಮಾಂಗಲ್ಯದ ಆಶಯದಂತೆ ಪ್ರತಿಜ್ಞಾವಿಧಿ ಸ್ವೀಕರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಚರ್ಚೆಗೆ ಗ್ರಾಸ
ಇದು ಅಂತರ್ ಧರ್ಮೀಯ ಮದುವೆಯಾಗಿರುವುದರಿಂದ ಸಹಜವಾಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. ಇದರ ನಡುವೆಯೇ ಇನ್ಸ್ಟಾಗ್ರಾಮ್ನಲ್ಲಿ ಸುಹಾನಾ (Suhaana Syed) ಅವರು ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಇವರಿಗೆ ಎದುರಾಗಿದ್ದು, 16 ವರ್ಷ ಪ್ರೀತಿಯನ್ನು ಹೇಗೆ ಮೆಂಟೇನ್ ಮಾಡಿದ್ದೀರಿ, ಜಗಳ ಎಲ್ಲಾ ಬರಲಿಲ್ವಾ ಅಂತ. ಅದಕ್ಕೆ ಸುಹಾನಾ ಅವೆಲ್ಲಾ ಕಾಮನ್ ಆಗಿತ್ತು. ಅದರ ಜೊತೆಗೇನೇ ಪ್ರೀತಿಯೂ ನಡೆಯಿತು ಎಂದಿದ್ದಾರೆ.
ಕುಂಕುಮ, ಬಳೆ ಕುರಿತು ಪ್ರಶ್ನೆ
ನಂತರ ಕುಂಕುಮ, ಬಳೆ ಮತ್ತು ಮಾಂಗಲ್ಯವನ್ನು ಧರಿಸುತ್ತೀರಿ ಅಲ್ವಾ ಎನ್ನುವ ಪ್ರಶ್ನೆಗೆ ಸುಹಾನಾ, ಅದನ್ನು ಪ್ರತಿನಿತ್ಯ ಧರಿಸುವವರ ಬಗ್ಗೆ ನಾನೇನೂ ಹೇಳುವುದಿಲ್ಲ. ಆದರೆ, ಅದು ಇವೆಲ್ಲವೂ ಬರೀ ಸಂಕೇತ ಅಷ್ಟೆ. ಅದಕ್ಕಿಂತಲೂ ಮುಖ್ಯವಾಗಿ ಬೇಕಾಗಿರುವುದು ನಮ್ಮ ನಡುವೆ ಎಷ್ಟು ಪ್ರೀತಿ ಇದೆ. ಒಬ್ಬರನ್ನೊಬ್ಬರು ಎಷ್ಟು ಗೌರವಿಸುತ್ತೀವಿ. ಸಂಬಂಧವನ್ನು ಉಳಿಸಿಕೊಳ್ಳಲು ಎಷ್ಟು ಕಷ್ಟಪಡ್ತೀವಿ ಅನ್ನೋದು ಮುಖ್ಯ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದ್ದಾರೆ.
ಲವ್ ಸ್ಟೋರಿ ಬಗ್ಗೆ ಹೇಳಿದ್ದೇನು?
ಲವ್ ಸ್ಟೋರಿ ಹಾಗೂ ಮನೆಯವರನ್ನು ಒಪ್ಪಿಸಿರೋ ಬಗ್ಗೆ ಕೇಳಿದ ಪ್ರಶ್ನೆಗೆ, ಇದರ ಬಗ್ಗೆ ತುಂಬಾ ಜನ ಕೇಳ್ತಾ ಇದ್ದಾರೆ. ಆದ್ದರಿಂದ ಚಿಕ್ಕದಾಗಿ ಹೇಳುವುದು ಕಷ್ಟ. ಯೂಟ್ಯೂಬ್‌ನಲ್ಲಿ ವಿಡಿಯೋ ಮಾಡಿ ಹೇಳಬೇಕು ಎಂದುಕೊಂಡಿದ್ದೇನೆ ಎಂದಿದ್ದಾರೆ.
ನನಗಿಂತ ಬೇರೆ ಬೇಕಾ?
ಭಾರತೀಯ ಸಂಸ್ಕೃತಿಯಲ್ಲಿ ಮೊದಲ ದೀಪಾವಳಿಗೆ ವಧು ವರನಿಗೆ ಉಡುಗೊರೆ ನೀಡುವ ಸಂಪ್ರದಾಯವಿದೆ, ನೀವು ಏನು ಕೊಟ್ರಿ ಎಂದು ಕೇಳೀದಾಗ, ಹೌದಾ ಎಂದು ಕೇಳಿರೋ ಸುಹಾನಾ, ಹಾಗಿದ್ದರೆ ನನಗಿಂತ ದೊಡ್ಡ ಉಡುಗೊರೆ ಅವನಿಗೆ ಬೇಕಾ ಎಂದಿದ್ದಾರೆ.
ಸುಹಾನಾ ಸೈಯದ್ ಕುರಿತು
ಸುಹಾನಾ ಅವರು ಭಾರಿ ಸದ್ದು ಮಾಡಿದ್ದು, ಸರಿಗಮಪ ಕನ್ನಡ ಸೀಸನ್ 13ರಲ್ಲಿ. ಆಗ ಅವರು ಆಡಿಷನ್ ವೇಳೆಯೇ 'ಗಜ' ಚಿತ್ರದ 'ಶ್ರೀಕಾರನೇ ಶ್ರೀನಿವಾಸನೇ' ಹಾಡನ್ನು ಹಾಡಿದ್ದರು. ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಹಿಂದೂ ದೇವರ ಹಾಡನ್ನು ಹಾಡಿದ್ದಕ್ಕೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ಆಕೆ ಹಾಡಿದ್ದ ಹಾಡಿಗಿಂತ ಧರ್ಮದ ಬಗ್ಗೆ ಹೆಚ್ಚು ಚರ್ಚೆ ಹುಟ್ಟು ಹಾಕಿತ್ತು. ಇದು ಭಾರಿ ವಿವಾದವನ್ನೂ ಸೃಷ್ಟಿಸಿತ್ತು. ಕೊನೆಗೆ ಅವರು, 'ಮುಕುಂದ ಮುರಾರಿ' ಚಿತ್ರದ 'ನೀನೆ ರಾಮ ನೀನೇ ಶ್ಯಾಮ ನೀನೆ ಅಲ್ಲಾ' ಹಾಡು ಹಾಡಿ ಗಲಾಟೆ ಮಾಡುವವರ ಬಾಯಿ ಮುಚ್ಚಿಸಿದ್ದರು.
ಹೀಗಿತ್ತು ಆಮಂತ್ರಣ ಪತ್ರಿಕೆ
ಈ ಅಂತರ್‌ಧರ್ಮೀಯ ಮದುವೆ ಬಹಳ ವಿಶೇಷವಾಗಿದ್ದು, ಅನೇಕ ಕಲಾವಿದರು ಗಾಯಕರು ಸಾಕ್ಷಿಯಾಗಿದ್ದರು. ಆಮಂತ್ರಣ ಪತ್ರಿಕೆಯಲ್ಲಿ, ಪ್ರೀತಿ ವಿಶ್ವದ ಭಾಷೆ, ಹೃದಯದಿಂದ ಹೊರಹೊಮ್ಮಿದ ಈ ಪ್ರೇಮ ಕಾವ್ಯ ದೇವ ವಿರಚಿತ. ಶ್ರೀ ಕುವೆಂಪುರವರ ಮಂತ್ರ ಮಾಂಗಲ್ಯದ ಆಶಯದಂತೆ ಸುಹಾನಾ ಹಾಗೂ ನಿತಿನ್ ಮದುವೆಯಾಗುತ್ತಿದ್ದೇವೆ. ನಮ್ಮ ನಡೆ ವಿಶ್ವಮಾನವತ್ವದೆಡೆಗೆ ಎಂದು ಬರೆಯಲಾಗಿತ್ತು.