Published : Jul 23, 2026, 05:10 AM ISTUpdated : Jul 23, 2026, 11:01 PM IST

Karnataka News Live: Cricket - ಟಿ20 ಕ್ರಿಕೆಟ್‌ನಲ್ಲಿ ಅಗ್ನಿಪರೀಕ್ಷೆ ಗೆದ್ದ 6 ಇಂಡಿಯನ್ ಕಿಂಗ್ಸ್! ಕೇವಲ 12 ಎಸೆತಗಳಲ್ಲಿ ಸೃಷ್ಟಿಸಿದ್ದ ಮಹಾ ದಾಖಲೆಗೆ ಭಾರತದಲ್ಲಿಲ್ಲ ಸಾಟಿ!

ಸಾರಾಂಶ

ಬೆಂಗಳೂರು: ನಾನು ಡಿಸಿಎಂ ಹುದ್ದೆಯನ್ನು ಕೇಳಿಲ್ಲ. ಆದರೆ ಆ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತೋ ನೋಡೋಣ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ದೆಹಲಿಯಲ್ಲಿ ಬುಧವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಇನ್ನೊಂದು ಡಿಸಿಎಂ ಹುದ್ದೆ ಸೃಷ್ಟಿಸುವುದು ಹೈಕಮಾಂಡ್‌ ತೀರ್ಮಾನಕ್ಕೆ ಬಿಟ್ಟ ವಿಚಾರ. ಆ ಬಗ್ಗೆ ಪಕ್ಷ ತೀರ್ಮಾನ ಕೈಗೊಳ್ಳಲಿದೆ. ಆ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ, ನಾನು ಡಿಸಿಎಂ ಹುದ್ದೆಗೆ ಬೇಡಿಕೆ ಇಟ್ಟಿಲ್ಲ ಎಂದರು. ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಹೈಕಮಾಂಡ್ ನಾಯಕರು ನೀಟ್​ ವಿರುದ್ಧದ ಪ್ರತಿಭಟನೆಯಲ್ಲಿದ್ದಾರೆ. ಆ ಪ್ರತಿಭಟನೆ ಕೂಡ ದೇಶಕ್ಕೆ ಮುಖ್ಯವಾಗಿದೆ. ಹಾಗಾಗಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲು ಸಾಧ್ಯವಾಗಿಲ್ಲ ಎಂದರು. ಶನಿವಾರ ಅಥವಾ ಭಾನುವಾರ ನಾಯಕರು ನಮ್ಮನ್ನು ಮಾತುಕತೆಗೆ ಕರೆಯಬಹುದು ಎಂದು ಹೇಳಿದರು.

Vaibhav Sooryavanshi

11:01 PM (IST) Jul 23

Cricket - ಟಿ20 ಕ್ರಿಕೆಟ್‌ನಲ್ಲಿ ಅಗ್ನಿಪರೀಕ್ಷೆ ಗೆದ್ದ 6 ಇಂಡಿಯನ್ ಕಿಂಗ್ಸ್! ಕೇವಲ 12 ಎಸೆತಗಳಲ್ಲಿ ಸೃಷ್ಟಿಸಿದ್ದ ಮಹಾ ದಾಖಲೆಗೆ ಭಾರತದಲ್ಲಿಲ್ಲ ಸಾಟಿ!

ಜಿಂಬಾಬ್ವೆ ವಿರುದ್ಧ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಇತಿಹಾಸ ಬರೆದ ಯುವ ತಾರೆ ವೈಭವ್ ಸೂರ್ಯವಂಶಿ, ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ಭಾರತೀಯರ ಎಲೈಟ್ ಕ್ಲಬ್‌ಗೆ ಸೇರಿದ್ದಾರೆ. ಆದರೆ 12 ಎಸೆತಗಳ ಅಜೇಯ ವಿಶ್ವ ದಾಖಲೆಯನ್ನು ಯಾರಿಂದಲೂ ಮುರಿಯಲಾಗಿಲ್ಲ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

Read Full Story

10:47 PM (IST) Jul 23

ಬಿಡುಗಡೆಗೂ ಮುನ್ನವೇ ಕಿಡಿ ಹಚ್ಚಿದ ಟೊಯೋಟಾ - ಹೈಲಕ್ಸ್ ಆಫ್-ರೋಡರ್ SUV ಮೊದಲ ಟೀಸರ್ ಔಟ್

ಟೊಯೋಟಾ ಸಂಸ್ಥೆಯು ಜುಲೈ 28 ರಂದು ತನ್ನ ಹೊಸ ಜಮಾನದ 'ಹೈಲಕ್ಸ್' ಪಿಕ್-ಅಪ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ನೂತನ ಮಾಡೆಲ್ ಕಟ್ಟುಮಸ್ತಾದ ಮುಂಭಾಗದ ವಿನ್ಯಾಸ, ಪ್ರೀಮಿಯಂ ಕ್ಯಾಬಿನ್, ದೊಡ್ಡ ಟಚ್‌ಸ್ಕ್ರೀನ್ ಮತ್ತು 48V ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಬರುವ ನಿರೀಕ್ಷೆಯಿದೆ.
Read Full Story

10:37 PM (IST) Jul 23

ರೊಚ್ಚಿಗೆದ್ದ ವಿದ್ಯಾರ್ಥಿಗಳ ಪರ ನಿಂತ ಸಚಿನ್! ಚೀಟಿಂಗ್' ವಿರುದ್ಧ ಮಾಸ್ಟರ್ ಬ್ಲಾಸ್ಟರ್ ಕೊಟ್ಟ ಖಡಕ್ ಎಚ್ಚರಿಕೆ ಏನು?

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಕುರಿತು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಕೊನೆಗೂ ಮೌನ ಮುರಿದಿದ್ದಾರೆ. ತಮ್ಮ ತಂದೆಯವರ ಪಾಠವನ್ನು ಸ್ಮರಿಸುತ್ತಾ, ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯ ಮಹತ್ವದ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ.

Read Full Story

07:41 PM (IST) Jul 23

ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ - ನಂದಿನಿ ಬೆಣ್ಣೆ, ತುಪ್ಪದ ದರ ದಿಢೀರ್ ಏರಿಕೆ!; ನಾಳೆಯಿಂದಲೇ ಪರಿಷ್ಕೃತ ದರ ಜಾರಿ!

ಕೆಎಂಎಫ್ ಅಂಗಸಂಸ್ಥೆಯಾದ ಬಮೂಲ್, ನಂದಿನಿ ತುಪ್ಪ ಮತ್ತು ಬೆಣ್ಣೆಯ ದರವನ್ನು ದಿಢೀರ್ ಏರಿಕೆ ಮಾಡಿದೆ. ಪ್ರತಿ ಕೆಜಿಗೆ ತುಪ್ಪದ ಮೇಲೆ ₹15 ಮತ್ತು ಬೆಣ್ಣೆಯ ಮೇಲೆ ₹25 ಹೆಚ್ಚಳವಾಗಿದ್ದು, ಈ ಹೊಸ ದರಗಳು ಜುಲೈ 24 ರಿಂದ ಜಾರಿಗೆ ಬರಲಿವೆ.

Read Full Story

07:04 PM (IST) Jul 23

BMTCಯಲ್ಲಿ ಹೀಗೊಬ್ಬ ದಾನಶೂರ ಕೃಷ್ಣ, ಸಹಾಯಕ್ಕೆ ದುಡ್ಡಲ್ಲ, ಮನಸ್ಸಿದ್ದರೆ ಸಾಕು ಎಂದ ಮೂರ್ತಿ!

ಬೆಂಗಳೂರಿನ ಬಿಎಂಟಿಸಿ ಚಾಲಕ ಕೃಷ್ಣಮೂರ್ತಿ ಅವರು ತಮ್ಮ ದೈನಂದಿನ ವೃತ್ತಿಯ ಜೊತೆಗೆ ಮಾನವೀಯ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರತಿದಿನ ತಮ್ಮ ಮಾರ್ಗದಲ್ಲಿ ಸಿಗುವ ಅಸಹಾಯಕರಿಗೆ ಮತ್ತು ಹಸಿದವರಿಗೆ ಆಹಾರದ ಪೊಟ್ಟಣಗಳನ್ನು ವಿತರಿಸುವ ಮೂಲಕ ಇವರು ನಿಜವಾದ ಒಳ್ಳೆಯತನಕ್ಕೆ ಮಾದರಿಯಾಗಿದ್ದಾರೆ.
Read Full Story

06:46 PM (IST) Jul 23

ಬೆಂಗಳೂರು ಪ್ರಯಾಣಿಕರಿಗೆ ಶುಭಸುದ್ದಿ - 5 ಹೊಸ ಬಸ್ ಸೇವೆ ಆರಂಭಿಸಿದ BMTC!; ಮಾರ್ಗ, ಸಮಯದ ಪೂರ್ಣ ವಿವರ ಇಲ್ಲಿದೆ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC) ನಗರದ ಸಾರ್ವಜನಿಕ ಸಾರಿಗೆಯನ್ನು ಬಲಪಡಿಸಲು ಹೊಸ ಬಸ್ ಸೇವೆಗಳನ್ನು ಆರಂಭಿಸಿದೆ. ಜುಲೈ 22 ಮತ್ತು 23 ರಿಂದ ಬನಶಂಕರಿ, ಮರಳವಾಡಿ, ಹಾರೋಹಳ್ಳಿ ಮತ್ತು ಪೀಣ್ಯ 2ನೇ ಹಂತದಂತಹ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ನೂತನ ಮಾರ್ಗಗಳು ಕಾರ್ಯಾರಂಭ ಮಾಡಿವೆ.
Read Full Story

06:28 PM (IST) Jul 23

ಕರ್ನಾಟಕ ಸೆಕ್ಷನ್‌ನ ಮೂರು ಹೆದ್ದಾರಿಗಳ ಟೋಲ್‌ ದರ ಭರ್ಜರಿಯಾಗಿ ಏರಿಸಿದ NHAI

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯ ಕರ್ನಾಟಕ ಭಾಗ, ಬೆಂಗಳೂರು-ನೆಲಮಂಗಲ ಹೆದ್ದಾರಿ ಮತ್ತು ಮುಳಬಾಗಿಲು-ಆಂಧ್ರ ಗಡಿ ವಿಭಾಗದ ಟೋಲ್ ದರಗಳನ್ನು ಹೆಚ್ಚಿಸಿದೆ.

Read Full Story

05:58 PM (IST) Jul 23

ಪ್ಲಾಸ್ಟಿಕ್‌ ವೇಸ್ಟ್‌ ಬಳಸಿ ಬೆಂಗಳೂರಿನ ರಸ್ತೆಯನ್ನು 3 ಕೋಟಿ ವೆಚ್ಚದಲ್ಲಿ ನಿರ್ಮಿಸಲಿರುವ ಪ್ರೆಸ್ಟೀಜ್‌ ಗ್ರೂಪ್‌

ಬೆಂಗಳೂರಿನ ಬ್ರಂಟನ್ ರಸ್ತೆಯನ್ನು ಪ್ರೆಸ್ಟೀಜ್ ಗ್ರೂಪ್ 3 ಕೋಟಿ ರೂ. ವೆಚ್ಚದಲ್ಲಿ ಪುನರಭಿವೃದ್ಧಿಪಡಿಸುತ್ತಿದೆ. ಈ ಯೋಜನೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ರಸ್ತೆ ನಿರ್ಮಿಸಲಾಗುತ್ತಿದ್ದು, ಪಾದಚಾರಿ ಮಾರ್ಗ ಮತ್ತು ಬೀದಿ ದೀಪಗಳನ್ನೂ ಮೇಲ್ದರ್ಜೆಗೇರಿಸಲಾಗುತ್ತಿದೆ.

Read Full Story

05:42 PM (IST) Jul 23

Food - ಸಂತೆಯಲ್ಲಿ ಇವನ್ನು ನೋಡಿದ್ರೂ ತರಬೇಡಿ! ಮಳೆಗಾಲದಲ್ಲಿ ಈ 5 ತರಕಾರಿಗಳು ನಿಮ್ಮ ಆರೋಗ್ಯಕ್ಕೆ ಸೈಲೆಂಟ್ ಪಾಯ್ಸನ್!

ಮಳೆಗಾಲದಲ್ಲಿ ಹೆಚ್ಚಾಗುವ ತೇವಾಂಶದಿಂದಾಗಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ತರಕಾರಿಗಳ ಮೇಲೆ ವೇಗವಾಗಿ ಬೆಳೆಯುತ್ತವೆ. ಈ ಸಮಯದಲ್ಲಿ ಕೆಲವು ತರಕಾರಿಗಳನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಹೊಟ್ಟೆಯ ಸೋಂಕಿನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಆ ತರಕಾರಿ ಯಾವವು ಎನ್ನುವುದನ್ನು ನೋಡೋಣ ಬನ್ನಿ.

Read Full Story

04:13 PM (IST) Jul 23

CJP - ಹೋರಾಟಕ್ಕೆ ಸಿಕ್ಕಿತು ಬಿಗ್ ಸಕ್ಸಸ್ - ಕಾಕ್ರೋಚ್ ಪಾರ್ಟಿಯ ಮೊದಲ ಗೆಲುವಿಗೆ ಖಾಕಿ ಪಡೆ ಶೇಕ್!

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಆ ವಿಡಿಯೋದಿಂದಾಗಿ ಎದ್ದ ಯುವಜನರ ಆಕ್ರೋಶಕ್ಕೆ ಮಣಿದು ಸರ್ಕಾರ ಈ ಕ್ರಮ ಕೈಗೊಂಡಿದ್ದು, ಇದು ಹೋರಾಟಗಾರರ ಮೊದಲ ಗೆಲುವು ಎಂದು ಬಣ್ಣಿಸಲಾಗಿದೆ. ಈ ಪ್ರಕರಣ ಇದೀಗ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

Read Full Story

03:46 PM (IST) Jul 23

ಇಂಗ್ಲೆಂಡ್ ಸರಣಿ ಹೊಡೆತ - ಈ ನಾಲ್ವರ ವೃತ್ತಿ ಬದುಕು ಅಪಾಯದಲ್ಲಿದೆ..!

ಟೀಂ ಇಂಡಿಯಾದ ನಾಲ್ವರು ಸ್ಟಾರ್ ಆಟಗಾರರ ಬದುಕು ಅತಂತ್ರ ಸ್ಥಿತಿಯಲ್ಲಿದೆ. ಇಂಗ್ಲೆಂಡ್ ಸೀರಿಸ್ ವಿರುದ್ಧ ಹೀನಾಯ ಸೋಲು ಬೆನ್ನಲ್ಲೆ ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿ ಇದ್ದಾರೆ. ಅವರು ಯಾರು ಎಂದು ತಿಳಿದುಕೊಳ್ಳಲು ಈ ಮೇಲಿನ ಲಿಂಕ್ ಕ್ಲಿಕ್ ಮಾಡಿ..

Read Full Story

03:15 PM (IST) Jul 23

ಮಹಾರಾಷ್ಟ್ರವನ್ನು ಹಿಂದಿಕ್ಕಿ ಕರ್ನಾಟಕ ನಂ.1 - ಎಫ್‌ಡಿಐಹೂಡಿಕೆ ಪ್ರಮಾಣ ಬರೋಬ್ಬರಿ 13 ಬಿಲಿಯನ್‌ ಡಾಲರ್‌ ಜಿಗಿತ!

ವಿದೇಶಿ ನೇರ ಹೂಡಿಕೆ (FDI) ಆಕರ್ಷಣೆಯಲ್ಲಿ ಕರ್ನಾಟಕವು ಮಹಾರಾಷ್ಟ್ರವನ್ನು ಹಿಂದಿಕ್ಕಿ ದೇಶದಲ್ಲೇ ಪ್ರಥಮ ಸ್ಥಾನಕ್ಕೇರಿದೆ. ಕಳೆದ ಹಣಕಾಸು ವರ್ಷದಲ್ಲಿ ರಾಜ್ಯವು ಸುಮಾರು $13 ಬಿಲಿಯನ್ ಬಂಡವಾಳವನ್ನು ಸೆಳೆದಿದ್ದು, ತಂತ್ರಜ್ಞಾನ ಮತ್ತು ಸೇವಾ ವಲಯಗಳು ಈ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಈ ಮೂಲಕ ಕರ್ನಾಟಕವು ಜಾಗತಿಕ ಹೂಡಿಕೆದಾರರ ಪ್ರಮುಖ ತಾಣವಾಗಿ ಹೊರಹೊಮ್ಮಿದೆ.
Read Full Story

03:07 PM (IST) Jul 23

ಜಾತ್ರೆಗೆ ಹೋಗುವ ವಿಚಾರಕ್ಕೆ ಪತಿ ಜೊತೆ ಜಗಳ; ಅದೇ ಸಿಟ್ಟಿನಲ್ಲಿ ದೂಧಗಂಗಾ ನದಿಗೆ ಹಾರಿದ ಪತ್ನಿ!

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ದಂಪತಿ ನಡುವಿನ ಸಣ್ಣ ಜಗಳವೊಂದು ದೊಡ್ಡ ದುರಂತಕ್ಕೆ ಕಾರಣವಾಗಿದೆ. ಜಾತ್ರೆಗೆ ಹೋಗುವ ವಿಚಾರವಾಗಿ ಗಂಡನೊಂದಿಗೆ ಜಗಳವಾಡಿದ ಪತ್ನಿಯೊಬ್ಬಳು ಮನನೊಂದು ನದಿಗೆ ಹಾರಿದ್ದಾಳೆ. ಅಷ್ಟಕ್ಕೂ ಆಗಿದ್ದೇನು? ಸ್ಟೋರಿ ಓದಿ..

Read Full Story

02:53 PM (IST) Jul 23

ಬೇಕಂತಲೇ ನೋ-ಬಾಲ್ ಎಸೆದರೆ ಇನ್ನು ಮ್ಯಾಚ್‌ನಿಂದಲೇ ಔಟ್! BCCI ಖಡಕ್ ತೀರ್ಮಾನ

2026-27ರ ದೇಶೀಯ ಕ್ರಿಕೆಟ್ ಸೀಸನ್‌ಗೆ ಬಿಸಿಸಿಐ ಮಹತ್ವದ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ದುಲೀಪ್ ಟ್ರೋಫಿಯಿಂದ ಅನ್ವಯವಾಗುವ ಈ ಬದಲಾವಣೆಗಳಲ್ಲಿ, ಉದ್ದೇಶಪೂರ್ವಕ ನೋ-ಬಾಲ್‌ಗೆ ಕಠಿಣ ಶಿಕ್ಷೆ, ದಿನದ ಕೊನೆಯ ಓವರ್ ಪೂರ್ಣಗೊಳಿಸುವುದು ಮತ್ತು ಅಂತಿಮ ಇನ್ನಿಂಗ್ಸ್ ಡಿಕ್ಲೇರ್‌ಗೆ ನಿಷೇಧದಂತಹ ಕಠಿಣ ಕ್ರಮಗಳು ಸೇರಿವೆ. ಈ ನಿಯಮಗಳು ಎಂಸಿಸಿ ಶಿಫಾರಸುಗಳನ್ನು ಆಧರಿಸಿವೆ.
Read Full Story

02:41 PM (IST) Jul 23

ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಅಮೆರಿಕ ಮುಂದೆ 10 ಬಿಲಿಯನ್ ಡಾಲರ್ ತುರ್ತು ನೆರವಿಗಾಗಿ ಬಿಕ್ಷೆ ಬೇಡಿದ ಪಾಕಿಸ್ತಾನ!

ದಶಕಗಳಲ್ಲೇ ಭೀಕರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಪಾಕಿಸ್ತಾನ, ತನ್ನ ಕುಸಿಯುತ್ತಿರುವ ವಿದೇಶಿ ವಿನಿಮಯ ಮೀಸಲು ರಕ್ಷಿಸಿಕೊಳ್ಳಲು ಅಮೆರಿಕದಿಂದ 10 ಬಿಲಿಯನ್ ಡಾಲರ್ ಆರ್ಥಿಕ ನೆರವು ಕೋರಿದೆ. ಈಗಾಗಲೇ ಐಎಂಎಫ್, ಚೀನಾ ಮತ್ತು ಸೌದಿ ಅರೇಬಿಯಾದಿಂದ ಶತಕೋಟಿ ಡಾಲರ್ ಸಾಲ ಪಡೆದಿದ್ದರೂ, ಹೆಚ್ಚಿನ ಹಣವನ್ನು ಹಳೆಯ ಸಾಲ ತೀರಿಸಲು ಬಳಸಲಾಗುತ್ತಿದೆಯೇ ಹೊರತು ದೇಶದ ಅಭಿವೃದ್ಧಿಗಲ್ಲ.
Read Full Story

02:32 PM (IST) Jul 23

'ಕಾಕ್ರೋಚ್' ಎನ್ನುವುದು ಉತ್ತರ ಭಾರತದ ಹಿಂದಿಯನ್ ಮನುವಾದಿಗಳ ಚಳವಳಿ -ಚೇತನ್ ಅಹಿಂಸಾ

ಕಾಕ್ರೋಚ್ ಎನ್ನುವುದು ಉತ್ತರ ಭಾರತದ, ಹಿಂದಿಯನ್ ಮನುವಾದಿಗಳ ಚಳವಳಿಯಾಗಿದೆ ಎಂದು ನಟ ಚೇತನ್ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಹಿಂದೆ ಹಿಂದಿ ಹೇರಿಕೆ ಮತ್ತು ಉತ್ತರ ಭಾರತದ ಮೇಲ್ವರ್ಗದ ಸಿದ್ಧಾಂತಗಳ ಪ್ರಭಾವವಿದೆ ಎಂಬರ್ಥದಲ್ಲಿ ಚೇತನ್ ಮಾತುಗಳನ್ನಾಡಿದ್ದಾರೆ.

Read Full Story

01:33 PM (IST) Jul 23

ಸಚಿವನಾಗೋ ಆಸೆ ವ್ಯಕ್ತಪಡಿಸಿದ ಪ್ರದೀಪ್ ಈಶ್ವರ್; 'ಕೊಡದಿದ್ರೆ..' ಏನು ಮಾಡ್ತಾರಂತೆ ಗೊತ್ತಾ?

ಸಚಿವ ಸಂಪುಟ ವಿಸ್ತರಣೆ ಆದಷ್ಟು ಬೇಗ ನಡೆಯಲಿದೆ. ನಮ್ಮ ಪಕ್ಷದಲ್ಲಿ ಸಾಕಷ್ಟು ಜನ ಸಮರ್ಥರಿದ್ದಾರೆ. ಅದರಲ್ಲೂ ಬಹಳಷ್ಟು ಮಂದಿ ಯುವಕರಿದ್ದು, ಅವರೆಲ್ಲರಿಗೂ ಸಚಿವರಾಗುವ ಅರ್ಹತೆ ಇದೆ. ಅದೇ ರೀತಿ ನನಗೂ ಕೂಡ ಸಚಿವನಾಗಬೇಕು ಎನ್ನುವ ಬಯಕೆ ಮತ್ತು ಆಸೆ ಎರಡೂ ಇದೆ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.

Read Full Story

01:11 PM (IST) Jul 23

ಇನ್​ಸ್ಟಾ ಫೋಟೋಗೆ 'ಸುಂದರಿ' ಎಂದು ಕಮೆಂಟ್​ - ಬೆಂಗಳೂರು ಯುವಕನ ವಿರುದ್ಧ ಕ್ರಿಮಿನಲ್​ ಕೇಸ್​! ಕೋರ್ಟ್​ ಹೇಳಿದ್ದೇನು

ಸಹಪಾಠಿಯ ಫೋಟೋಗೆ 'ಸುಂದರಿ' ಎಂದು ಕಮೆಂಟ್ ಮಾಡಿದ್ದಕ್ಕೆ ಯುವಕನೊಬ್ಬನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಇದು 'ಜೆನ್‌ಜಿ' ಶೈಲಿಯ ಖಾಸಗಿ ಸಂಭಾಷಣೆಯಷ್ಟೇ, ಅಪರಾಧವಲ್ಲ ಎಂದು ಹೇಳಿ ಎಫ್‌ಐಆರ್ ರದ್ದುಗೊಳಿಸಿ ಯುವಕನಿಗೆ ರಿಲೀಫ್ ನೀಡಿದೆ.
Read Full Story

12:17 PM (IST) Jul 23

ಇಟ್ಟ ವಸ್ತು ಇದ್ದಕ್ಕಿದ್ದಂತೆ ಮಾಯ ಆದ್ರೆ ಅದ್ರ ಹಿಂದಿದೆ ʼಚೌಡಿ ಕಾಟʼ; ಆ ಬಿಳಿ ಸೀರೆ ಚೌಡಿ ಚೇಷ್ಟೆಯ ಅಸಲಿ ಕಥೆ!

Goddess Chowdi: ಏನಾದರೂ ವಸ್ತು ಆಗ ಇತ್ತು, ಈಗ ಕಾಣಿಸಿಲ್ಲ ಅಂದ್ರೆ ಕೆಲವರು ಚೌಡಿ ಕಾಟ ಎನ್ನೋದುಂಟು. ಹಳ್ಳಿಗಳಲ್ಲಿ, ಜನಪದ ಸಂಸ್ಕೃತಿಯಲ್ಲಿ 'ಚೌಡಿ ಕಾಟ' ಅಥವಾ 'ಚೌಡಿ ಮುಚ್ಚಿದ್ದಾಳೆ' ಎಂಬ ಮಾತು ತುಂಬಾ ಕೇಳಿ ಬರುತ್ತಲಿರುತ್ತದೆ. ಯಾವುದಾದರೂ ವಸ್ತು ಕಣ್ಣೆದುರಲ್ಲೇ ಇದ್ದರೂ ತಕ್ಷಣಕ್ಕೆ ಕಾಣಿಸದೇ ಹೋದಾಗ ಈ ರೀತಿ ಹೇಳಲು ಕಾರಣ ಇದೆ.

Read Full Story

12:13 PM (IST) Jul 23

ಹೃದಯ ವಿದ್ರಾವಕ ಘಟನೆ.. ಮಗನ ಅಗಲಿಕೆ ನೋವು ತಾಳಲಾರದೇ ಕುಸಿದುಬಿದ್ದು ಪ್ರಾಣಬಿಟ್ಟ ಅಮ್ಮ

ಹೊಟ್ಟೆ ನೋವಿನಿಂದ ಮಗ ಹೋದರೆ, ಮಗನ ಅಗಲಿಕೆಯ ನೋವಿನಿಂದ ತಾಯಿ ಹೋದರು. ಸಾವಿನಲ್ಲೂ ಈ ಕರುಳ ಬಳ್ಳಿ ಬೇರ್ಪಡಲಿಲ್ಲ ಎಂಬುದು ಮಾತ್ರ ಈ ಘಟನೆಯ ಅತ್ಯಂತ ಕರುಣಾಜನಕ ಸತ್ಯ.

Read Full Story

11:57 AM (IST) Jul 23

ನಮ್ಮ ಮೆಟ್ರೋ ಕೆಂಪು ಮಾರ್ಗದಲ್ಲಿ ಸಾರಿಗೇತರ ಆದಾಯಕ್ಕೆ ಭಾರಿ ಕತ್ತರಿ - ವಾಣಿಜ್ಯ ವ್ಯಾಪ್ತಿ ಶೇ. 58ರಷ್ಟು ಕುಸಿತ!

ಹೆಬ್ಬಾಳ-ಸರ್ಜಾಪುರ 'ನಮ್ಮ ಮೆಟ್ರೋ' ಕೆಂಪು ಮಾರ್ಗದ ಪರಿಷ್ಕೃತ ಯೋಜನಾ ವರದಿಯಲ್ಲಿ, ಆಸ್ತಿ ಅಭಿವೃದ್ಧಿ ವಿಸ್ತೀರ್ಣವನ್ನು ಶೇ. 58 ರಷ್ಟು ಕಡಿತಗೊಳಿಸಲಾಗಿದೆ. ಇದರಿಂದಾಗಿ ಟಿಕೆಟ್ ದರ ಹೊರತಾದ ಆದಾಯದಲ್ಲಿ ₹3,528 ಕೋಟಿ ನಷ್ಟವಾಗುವ ಅಂದಾಜಿದ್ದು, ಇದು ಭವಿಷ್ಯದಲ್ಲಿ ಪ್ರಯಾಣ ದರ ಏರಿಕೆಗೆ ಕಾರಣವಾಗುವ ಆತಂಕ ಸೃಷ್ಟಿಸಿದೆ.
Read Full Story

11:40 AM (IST) Jul 23

Jana Nayagan Movie Review - ಕೊನೇ ಸಿನಿಮಾದಲ್ಲಿ ಸಖತ್ ಮಸಾಲೆ ಕೊಟ್ಟ ದಳಪತಿ ವಿಜಯ್!‌ ಥಿಯೇಟರ್‌ನಲ್ಲಿ ಕುಣಿತ

Thalapathy Vijay Jana Nayagan Movie Review: ನಟ ವಿಜಯ್ ಅವರ ಕೊನೆಯ ಸಿನಿಮಾ ಎನ್ನಲಾದ 'ಜನ ನಾಯಗನ್' ಇಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಟ್ವಿಟರ್‌ನಲ್ಲಿ ಏನಂತಿದ್ದಾರೆ? ಇಲ್ಲಿದೆ ನೋಡಿ ವಿಮರ್ಶೆ.

Read Full Story

11:22 AM (IST) Jul 23

ಬೆಂಗಳೂರು ಫುಟ್‌ಪಾತ್ ಮೇಲೆ ಬೈಕ್ ಚಲಾಯಿಸಿದರೆ ₹5,000 ದಂಡ; ಸಿಗ್ನಲ್‌, ಜಂಕ್ಷನ್‌ ಬಳಿ ಬಸ್ ನಿಲ್ದಾಣ ಇರುವಂತಿಲ್ಲ

ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗದಲ್ಲಿ ವಾಹನ ಚಲಾಯಿಸುವವರಿಗೆ ವಿಧಿಸುವ ದಂಡವನ್ನು ₹5,000ಕ್ಕೆ ಹೆಚ್ಚಿಸಲು ಸಚಿವ ಕೃಷ್ಣ ಬೈರೇಗೌಡ ಪ್ರಸ್ತಾಪಿಸಿದ್ದಾರೆ. ಪಾದಚಾರಿಗಳ ಸುರಕ್ಷತೆ ಮತ್ತು 'ನಡೆಯುವ ಹಕ್ಕನ್ನು' ರಕ್ಷಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದ್ದು, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬಸ್ ನಿಲ್ದಾಣಗಳ ಸ್ಥಳಾಂತರ ಮತ್ತು ಪರ್ಯಾಯ ಪಾರ್ಕಿಂಗ್ ನಿಯಮಗಳ ಕಟ್ಟುನಿಟ್ಟಿನ ಪಾಲನೆಗೂ ಸೂಚಿಸಲಾಗಿದೆ.
Read Full Story

11:12 AM (IST) Jul 23

IND vs ZIM - ಸೋಲಿನ ಸುಳಿಯಲ್ಲಿರುವ ಭಾರತಕ್ಕೆ ಇಂದು ಜಿಂಬಾಬ್ವೆ ಚಾಲೆಂಜ್; ಪಂದ್ಯ ಆರಂಭ ಎಷ್ಟು ಗಂಟೆಗೆ?

ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಸತತ ಸೋಲು ಕಂಡಿರುವ ಭಾರತ ಟಿ20 ತಂಡವು ಇದೀಗ ಜಿಂಬಾಬ್ವೆ ವಿರುದ್ಧ 3 ಪಂದ್ಯಗಳ ಸರಣಿಗೆ ಸಜ್ಜಾಗಿದೆ. ಯುವ ಆಟಗಾರರ ಪಡೆಯೊಂದಿಗೆ ಕಣಕ್ಕಿಳಿಯಲಿರುವ ಭಾರತಕ್ಕೆ, ತವರಿನ ಲಾಭದೊಂದಿಗೆ ಸಿಕಂದರ್‌ ರಝಾ ನೇತೃತ್ವದ ಜಿಂಬಾಬ್ವೆ ಪ್ರಬಲ ಪೈಪೋಟಿ ನೀಡುವ ವಿಶ್ವಾಸದಲ್ಲಿದೆ.
Read Full Story

10:14 AM (IST) Jul 23

ಕೊಂಕಣ ರೈಲ್ವೆಯಲ್ಲಿ ಕಳ್ಳರ ಕಾಟ - ಮತ್ಸ್ಯಗಂಧ, ಮಂಗಳೂರು ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಕರ ಜೀವಕ್ಕೆ ಆಪತ್ತು!

ಮಂಗಳೂರಿನಿಂದ ಗೋವಾ, ಮಹಾರಾಷ್ಟ್ರವನ್ನು ಸಂಪರ್ಕಿಸುವ ಕೊಂಕಣ ರೈಲು ಮಾರ್ಗದಲ್ಲಿ ಕಳ್ಳತನ ಮತ್ತು ದರೋಡೆ ಪ್ರಕರಣಗಳು ಹೆಚ್ಚಾಗಿದ್ದು, ಪ್ರಯಾಣಿಕರ ಸುರಕ್ಷತೆ ಸಂಪೂರ್ಣವಾಗಿ ಹದಗೆಟ್ಟಿದೆ. ಮತ್ಸ್ಯಗಂಧ ಮತ್ತು ಮಂಗಳೂರು ಎಕ್ಸ್‌ಪ್ರೆಸ್‌ಗಳಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳುವಾಗಿದ್ದು, ಟಿಟಿಇ ಮೇಲೆಯೂ ಹಲ್ಲೆ ನಡೆದಿದೆ. ಇದರಿಂದ ಆತಂಕಗೊಂಡ ಪ್ರಯಾಣಿಕರು ಸಿಸಿಟಿವಿ ಅಳವಡಿಕೆ ಮತ್ತು ಗಸ್ತು ಹೆಚ್ಚಳಕ್ಕೆ ಆಗ್ರಹಿಸುತ್ತಿದ್ದಾರೆ.

Read Full Story

08:58 AM (IST) Jul 23

ಬೆಳ್ಳಂಬೆಳಗ್ಗೆ ಬೆಂಗಳೂರಲ್ಲಿ ಭೀಕರ ಅನಾಹುತ.. ಪಿಜಿಯಲ್ಲಿ ಸಿಲಿಂಡರ್ ಸ್ಫೋಟ, 10 ಮಂದಿಗೆ ಗಂಭೀರ

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬೊಮ್ಮಸಂದ್ರದ ಪಿಜಿಯೊಂದರಲ್ಲಿ ಮುಂಜಾನೆ ಸಿಲಿಂಡರ್ ಸ್ಫೋಟಗೊಂಡು 10ಕ್ಕೂ ಹೆಚ್ಚು ಅನ್ಯರಾಜ್ಯದ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
Read Full Story

07:21 AM (IST) Jul 23

Chitradurga - ಮೃತ ASI ಮಂಜುನಾಥ್ ಕುಟುಂಬಕ್ಕೆ 82 ಲಕ್ಷ ರು ಪರಿಹಾರ; ಚೆಕ್ ಹಸ್ತಾಂತರ

ಅಕಾಲಿಕವಾಗಿ ನಿಧನರಾದ ಸಹಾಯಕ ಪೊಲೀಸ್ ಉಪನಿರೀಕ್ಷಕ (ಎಎಸ್ಐ) ಮಂಜುನಾಥ್ ಅವರ ಕುಟುಂಬಕ್ಕೆ ಬ್ಯಾಂಕ್ ಆಫ್ ಬರೋಡಾ 82 ಲಕ್ಷ ರೂಪಾಯಿ ವಿಮಾ ಪರಿಹಾರ ನೀಡಿದೆ. ಚಿತ್ರದುರ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಅವರ ವೇತನ ಖಾತೆಯ ಪ್ಯಾಕೇಜ್ ಅಡಿಯಲ್ಲಿ ಈ ಚೆಕ್ ಅನ್ನು ಅವರ ಪತ್ನಿ ವೃಂದಮ್ಮ ಅವರಿಗೆ ಹಸ್ತಾಂತರಿಸಲಾಯಿತು.

Read Full Story

07:08 AM (IST) Jul 23

ಶಿವಾಜಿ ನಗರದಲ್ಲಿ ಬೀದಿ ವ್ಯಾಪಾರ ಮಾಮೂಲು; ಅಧಿಕಾರಿಗಳ ಮೇಲೆ ಹಲ್ಲೆಗೈದ ಐವರು ಕಸ್ಟಡಿಗೆ

ಶಿವಾಜಿನಗರದಲ್ಲಿ ಫುಟ್‌ಪಾತ್‌ ಒತ್ತುವರಿ ತೆರವು ವೇಳೆ ನಡೆದ ಗಲಾಟೆಯ ನಂತರವೂ ಹೆಚ್ಚಿನ ಕಡೆಗಳಲ್ಲಿ ಬೀದಿ ವ್ಯಾಪಾರ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಈ ಹಲ್ಲೆ ಘಟನೆಯಿಂದಾಗಿ, ಸೂಕ್ತ ಪೊಲೀಸ್ ರಕ್ಷಣೆ ಇಲ್ಲದೆ ಇನ್ನು ಮುಂದೆ ತೆರವು ಕಾರ್ಯಾಚರಣೆ ನಡೆಸುವುದಿಲ್ಲವೆಂದು ಜಿಬಿಎ ನೌಕರರು ಪಟ್ಟುಹಿಡಿದು ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.

Read Full Story

06:52 AM (IST) Jul 23

ಆದಾಯ ಹೆಚ್ಚಳಕ್ಕೆ BMTC ಹೊಸ ಪ್ಲಾನ್; ಬಸ್‌ನಲ್ಲಿ ಪ್ರಯಾಣಿಕರಿಗೆ ಸಿಗಲಿದೆ ನ್ಯೂ QR ಕೋಡ್

ಬಿಎಂಟಿಸಿಯು ಟಿಕೆಟೇತರ ಆದಾಯ ಹೆಚ್ಚಿಸಲು ಹೊಸ ಪ್ಲಾನ್ ಮಾಡಿಕೊಂಡಿದೆ. ಇನ್ಮುಂದೆ ಪ್ರಯಾಣಿಕರಿಗೆ ಹೊಸ ಕ್ಯೂಆರ್ ಕೋಡ್ ಲಭ್ಯವಾಗಲಿದೆ. ಏನಿದು ಹೊಸ ಪ್ಲಾನ್? ಈ ಕೋಡ್‌ನಿಂದ ಆದಾಯ ಹೇಗೆ ಬರುತ್ತೆ ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.

Read Full Story

06:38 AM (IST) Jul 23

ಬೆಂಗಳೂರಿನಲ್ಲಿ AI ತಂತ್ರಜ್ಞಾನ ಬಳಸಿ 1600 ಕಿ.ಮೀ ಉದ್ದದ ರಸ್ತೆ ಸಮೀಕ್ಷೆ; ವರದಿಯಲ್ಲೇನಿದೆ?

ಬೆಂಗಳೂರಿನ ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೃತಕ ಬುದ್ದಿಮತೆ ತಂತ್ರಜ್ಞಾನ ಬಳಸಿ 1600 ಕಿ.ಮೀ ಉದ್ದದ ರಸ್ತೆಗಳ ಸಮೀಕ್ಷೆ ನಡೆಸಲಾಗಿದೆ. ಈ ಸಮೀಕ್ಷೆಯು ರಸ್ತೆ ಗುಂಡಿಗಳು, ಮೇಲ್ಮೈ ಹಾನಿ ಮತ್ತು ಇತರ ಮೂಲಸೌಕರ್ಯ ಸಮಸ್ಯೆಗಳ ಬಗ್ಗೆ ನಿಖರ ಮಾಹಿತಿ ನೀಡಿ, ಕಾಮಗಾರಿಗಳ ವೆಚ್ಚವನ್ನು ಅಂದಾಜಿಸಲು ಸಹಕಾರಿಯಾಗಿದೆ.
Read Full Story

06:30 AM (IST) Jul 23

ಮೊರಾರ್ಜಿ ಶಾಲೆಯಲ್ಲಿ ನಾನ್‌ವೆಜ್‌ ಊಟಕ್ಕೆ ತಾರತಮ್ಯ - ಮಕ್ಕಳ ಕಾದಾಟ, ಕಿರಿಯರ ಮೇಲೆ ದೌರ್ಜನ್ಯ

ಹೂವಿನಹಡಗಲಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಾನ್‌ವೆಜ್ ಊಟ ಬಡಿಸುವಲ್ಲಿ ತಾರತಮ್ಯ ನಡೆದಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಬಡಿದಾಡಿಕೊಂಡಿದ್ದಾರೆ. ಹಿರಿಯ ವಿದ್ಯಾರ್ಥಿಗಳು ಕಿರಿಯರ ಮೇಲೆ ದೌರ್ಜನ್ಯ ನಡೆಸುತ್ತಿದ್ದು, ಈ ಘರ್ಷಣೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

Read Full Story

06:20 AM (IST) Jul 23

ಬೆಂಗಳೂರು-ಮುಂಬೈ ಸ್ಲೀಪರ್ ವಂದೇ ಭಾರತ್‌ಗೆ ಹುಬ್ಬಳ್ಳಿ ಮಾರ್ಗದ ಕೂಗು - ಏನಿದು ಹೊಸ ತಿರುವು?

ಬೆಂಗಳೂರು-ಮುಂಬೈ ಮಧ್ಯೆ ಸಂಚರಿಸಲಿರುವ ಪ್ರಸ್ತಾವಿತ ಸ್ಲೀಪರ್ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲನ್ನು, ಕಲಬುರ್ಗಿ ಬದಲು ತುಮಕೂರು-ದಾವಣಗೆರೆ-ಹುಬ್ಬಳ್ಳಿ-ಬೆಳಗಾವಿ ಮಾರ್ಗದ ಮೂಲಕ ಓಡಿಸಲು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಮಾಡಿದೆ. ಉತ್ತರ ಕರ್ನಾಟಕದ ಆರ್ಥಿಕ ಬೆಳವಣಿಗೆಗೆ ಈ ಮಾರ್ಗವು ಅತ್ಯಗತ್ಯ ಎಂದು ಸಂಸ್ಥೆ ಪ್ರತಿಪಾದಿಸಿದೆ.
Read Full Story

06:05 AM (IST) Jul 23

ಬೆಳಗಾವಿ ಮಳೆ ಆರ್ಭಟ - ನದಿಗಳು ಉಕ್ಕಿ, 5 ಸೇತುವೆ ಜಲಾವೃತ, ಖಾನಾಪುರದಲ್ಲಿಯೂ ವರುಣನ ಅಬ್ಬರ

ಬೆಳಗಾವಿ ಜಿಲ್ಲೆ ಮತ್ತು ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಇದರಿಂದ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನ ಐದು ಕೆಳಹಂತದ ಸೇತುವೆಗಳು ಜಲಾವೃತಗೊಂಡು ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ, ಆದರೆ ಖಾನಾಪುರದಲ್ಲಿನ ಮಳೆ ಕೃಷಿ ಚಟುವಟಿಕೆಗಳಿಗೆ ಚುರುಕು ನೀಡಿದೆ.
Read Full Story

05:54 AM (IST) Jul 23

Loan - ₹16 ಲಕ್ಷ ಸಾಲಕ್ಕೆ ₹36 ಲಕ್ಷ ವಸೂಲಿ - ಸಂಕೇಶ್ವರದ ಚಕ್ರಬಡ್ಡಿ ದಂಧೆಕೋರನ ಬಂಧನ

₹16.16 ಲಕ್ಷ ಸಾಲಕ್ಕೆ ಪ್ರತಿಯಾಗಿ ₹36.77 ಲಕ್ಷ ವಸೂಲಿ ಮಾಡಿ, ಇನ್ನೂ ಹೆಚ್ಚಿನ ಹಣಕ್ಕಾಗಿ ಜೀವ ಬೆದರಿಕೆ ಹಾಕುತ್ತಿದ್ದ ಚಕ್ರಬಡ್ಡಿ ದಂಧೆಕೋರನನ್ನು ಪೊಲೀಸರು ಬಂಧಿಸಿದ್ದಾರೆ. ದೂರುದಾರರ ದೂರಿನ ಮೇರೆಗೆ, ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Read Full Story

05:44 AM (IST) Jul 23

ಜಿರಳೆ ಸದ್ದು ಕಡಿಮೆಯಾದರೆ 27/29ಕ್ಕೆ ಸಂಪುಟ ವಿಸ್ತರಣೆ? ದೆಹಲಿಗೆ ಬುಲಾವ್‌ ಸಾಧ್ಯತೆ

ಕಾಂಗ್ರೆಸ್ ಆಂತರಿಕ ಕಚ್ಚಾಟದಿಂದ ವಿಳಂಬವಾಗಿರುವ ರಾಜ್ಯ ಸಂಪುಟ ವಿಸ್ತರಣೆ ಚರ್ಚೆಗಾಗಿ ರಾಜ್ಯ ನಾಯಕರು ವಾರಾಂತ್ಯದಲ್ಲಿ ಮತ್ತೆ ದೆಹಲಿಗೆ ತೆರಳುವ ಸಾಧ್ಯತೆಯಿದೆ. ಹೈಕಮಾಂಡ್ ಒಪ್ಪಿಗೆ ಸಿಕ್ಕರೆ, ಜುಲೈ 27 ಅಥವಾ 29 ರಂದು ಸುಮಾರು 18 ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದು, ಕೆಲವು ಹೆಸರುಗಳ ಬಗ್ಗೆ ಇನ್ನೂ ಗೊಂದಲ ಮುಂದುವರೆದಿದೆ.
Read Full Story

05:38 AM (IST) Jul 23

ಸ್ಯಾಂಡಲ್‌ವುಡ್‌ನಲ್ಲಿರೋ ಸಮಸ್ಯೆಗಳನ್ನು ಬಹಿರಂಗಗೊಳಿಸಿದ ಹಿರಿಯ ನಟಿ ಜಯಮಾಲಾ

ಹಿರಿಯ ನಟಿ ಜಯಮಾಲಾ ಅವರು ಸ್ಯಾಂಡಲ್‌ವುಡ್‌ನ ಪ್ರಸ್ತುತ ಸಮಸ್ಯೆಗಳ ಬಗ್ಗೆ ಮಾತನಾಡಿದ್ದು, ಸ್ಟಾರ್‌ಗಳು ಸಂಭಾವನೆ ಕಡಿಮೆ ಮಾಡಬೇಕೆಂಬ ವಾದವನ್ನು ಒಪ್ಪಲಾಗದು ಎಂದಿದ್ದಾರೆ. ನಿರ್ಮಾಪಕರೇ ಹೊಸ ಸ್ಟಾರ್‌ಗಳನ್ನು ಸೃಷ್ಟಿಸಬೇಕು ಮತ್ತು ಬದಲಾದ ಕಾಲಕ್ಕೆ ತಕ್ಕಂತೆ, ಪ್ರೇಕ್ಷಕರನ್ನು ತಲುಪುವಂತಹ ಸಹಜ ಕಥೆಗಳನ್ನು ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
Read Full Story

More Trending News