ಬಾಗಲಕೋಟೆ: ಮುಂಗಾರು ಮಳೆ ಆರಂಭವಾಗುವ ಮುನ್ಸೂಚನೆಗಳನ್ನು ಕಂಡ ಈ ಭಾಗದ ರೈತಾಪಿ ಜನತೆ ತಮ್ಮ ಸಂಭಾವ್ಯ ಬೆಳೆಗಳಿಗೆ ತಕ್ಕಂತೆ ಭೂಮಿಯನ್ನು ಹದ ಮಾಡುತ್ತಿರುವುದು ಸರ್ವೇ ಸಾಮಾನ್ಯವಾಗಿದೆ.
ಕಳೆದೆರಡು 3 ದಿನಗಳಿಂದ ರಬಕವಿ ಬನಹಟ್ಟಿ ತಾಲೂಕು ವ್ಯಾಪ್ತಿಯಲ್ಲಿ ಸಂಜೆ ಹಾಗೂ ರಾತ್ರಿ ಸಮಯ ಅಲ್ಪ ಪ್ರಮಾಣದಲ್ಲಿ ಆಗಾಗ ಮಳೆಯ ಸಿಂಚನಗಳು ಬೀಳುತ್ತಿವೆ. ಆದ್ದರಿಂದ ಈ ಭಾಗದ ರೈತರು ಮುಂಗಾರು ಬೆಳೆಗಳಾದ ಶೇಂಗಾ, ಮೆಕ್ಕೆಜೋಳ, ಅರಿಶಿಣ ಸೇರಿದಂತೆ ಇನ್ನಿತರ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಭೂಮಿಯನ್ನು ಹದ ಮಾಡುತ್ತಿದ್ದಾರೆ.
ತಾಲೂಕು ವ್ಯಾಪ್ತಿ ಸಂಪೂರ್ಣ ನೀರಾವರಿ ಜಮೀನುಗಳೇ ಹೆಚ್ಚಾಗಿರುರುವುದರಿಂದ ಈ ಭಾಗದಲ್ಲಿ ಪ್ರಮುಖ ಬೆಳೆಯಾಗಿ ಕಬ್ಬು ಬೆಳೆಯುತ್ತಿದ್ದು, ವರ್ಷವಿಡಿ ಭೂಮಿಗೆ ಬಿಸಿಲಿನ ಸ್ಪರ್ಶವಾಗುವುದಿಲ್ಲ ಮತ್ತು ವಿಪರೀತ ರಾಸಾಯನಿಕೆ ಗೊಬ್ಬರಗಳನ್ನು ಬಳಸುವುದರಿಂದ ಭೂಮಿಯ ಫಲವತ್ತತೆ ಕಡಿಮೆಯಾಗಿದೆ. ಆದ್ದರಿಂದ ಕೆಲವೇ ಕೆಲವು ರೈತ ಬಾಂಧವರು ಮಾತ್ರ ಪ್ರತಿ ವರ್ಷ ಅಲ್ಪಪ್ರಮಾಣದಲ್ಲಿಯಾದರೂ ತಿಪ್ಪೆಗೊಬ್ಬರವನ್ನು ಭೂಮಿಗೆ ಬಳಸಿ ಹೆಚ್ಚಿನ ಪ್ರಮಾಣದಲ್ಲಿ ಇಳುವರಿ ಪಡೆಯುತ್ತಿದ್ದಾರೆ
08:57 PM (IST) May 21
ಕಾವ್ಯಾ ಮಾರನ್‌ಗೆ ಈಗ 33 ವರ್ಷ ಮತ್ತು ಅನಿರುದ್ಧ್‌ಗೆ 35 ವರ್ಷ. ವಯಸ್ಸು ಮತ್ತು ಸ್ಟೇಟಸ್‌ಗೆ ಈ ಜೋಡಿ ಸಖತ್ ಮ್ಯಾಚ್ ಆಗುತ್ತದೆ ಎಂಬುದು ಅಭಿಮಾನಿಗಳ ಅಭಿಪ್ರಾಯ. ಒಟ್ಟಿನಲ್ಲಿ, ಐಪಿಎಲ್ ಮೈದಾನದಲ್ಲಿ ಟೆನ್ಶನ್‌ನಲ್ಲಿ ಕಾಣಿಸಿಕೊಳ್ಳುವ ಕಾವ್ಯಾ ಮತ್ತು ಸ್ಟೇಜ್ ಮೇಲೆ ಬೆಂಕಿ ಹಚ್ಚುವ ಅನಿರುದ್ಧ್ ಆಗಸ್ಟ್‌ನಲ್ಲಿ ಒಂದಾಗ್ತಾರಾ?
06:25 PM (IST) May 21
ಅಲ್ಲಿಗೆ ಕುಟುಂಬದ ಭೇಟಿ ದರ್ಶನ್ಗೆ ಖುಷಿ ತರೋದಕ್ಕಿಂತ ಹೆಚ್ಚಾಗಿ ದುಃಖವನ್ನ ತಂದಿದೆ. ಜೊತೆಗೆ ಸುಪ್ರೀಂ ಕೋರ್ಟ್ ತೀರ್ಪು ಬೇರೆ ದರ್ಶನ್ಭವಿಷ್ಯದ ಬಗ್ಗೆ ಅನಿಶ್ಚಿತತೆ ಮೂಡುವಂತೆ ಮಾಡಿದೆ. ಸೋ ಇದೇ ಆತಂಕದಲ್ಲೇ ಜೈಲಿನಲ್ಲಿ ದಾಸನ ಮೌನವೃತ ಶುರುವಾಗಿದೆ. ಜೈಲಿಂದು ಬಿಡುಗಡೆ ಎಂದು?
06:22 PM (IST) May 21
06:00 PM (IST) May 21
05:56 PM (IST) May 21
05:21 PM (IST) May 21
04:36 PM (IST) May 21
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 'ಚಾಲೆಂಜರ್ 2026' ಎಂಬ ಬೃಹತ್ ತುರ್ತು ಪರಿಸ್ಥಿತಿ ಅಭ್ಯಾಸವನ್ನು ಯಶಸ್ವಿಯಾಗಿ ನಡೆಸಲಾಯಿತು. 3,000ಕ್ಕೂ ಹೆಚ್ಚು ಸಿಬ್ಬಂದಿ ಭಾಗವಹಿಸಿದ್ದ ಈ ತಾಲೀಮಿನಲ್ಲಿ, ವಿಮಾನ ಅಪಘಾತದ ಸನ್ನಿವೇಶವನ್ನು ಸೃಷ್ಟಿಸಲಾಯಿತು.
04:05 PM (IST) May 21
ಗಂಗಾವತಿ ನಗರ ಸೇರಿದಂತೆ ವಿಧಾನಸಭಾ ಕ್ಷೇತ್ರದಲ್ಲಿರುವ ಕಾಂಗ್ರೆಸ್ ಪಕ್ಷ ನಾವಿಕ ಇಲ್ಲದ ಹಡಗಿನಂತಾಗಿದೆ. ಈಗಾಗಲೇ ಕಾಂಗ್ರೆಸ್ ಮೂರು ಗುಂಪುಗಳಿದ್ದು, ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದೆ.
03:56 PM (IST) May 21
ಐತಿಹಾಸಿಕ ಲಕ್ಕುಂಡಿಯಲ್ಲಿರುವ ನೂರೊಂದು ಬಾವಿ ಮತ್ತು ನೂರೊಂದು ದೇವಾಲಯಗಳನ್ನು ಪತ್ತೆಹಚ್ಚಲು ಎನ್‌ಐಎಎಸ್ ಸಂಸ್ಥೆಯ ಸಹಕಾರದೊಂದಿಗೆ ಸ್ಯಾಟಲೈಟ್ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಈ ಸ್ಥಳವನ್ನು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸುವ ಪ್ರಯತ್ನಗಳು ನಡೆಯುತ್ತಿದೆ.
03:18 PM (IST) May 21
ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯೊಬ್ಬಳು ತನ್ನ ಪತಿಯನ್ನು ಕಬ್ಬಿಣದ ಸಲಾಕೆಯಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿದ್ದಾಳೆ. ಪ್ರೀತಿಸಿ ಮದುವೆಯಾಗಿದ್ದ ಈ ದಂಪತಿ ನಡುವೆ ನಿರಂತರ ಜಗಳ ನಡೆಯುತ್ತಿದ್ದು, ಇದೇ ಕಾರಣಕ್ಕೆ ಈ ಘೋರ ಕೃತ್ಯ ನಡೆದಿದೆ.
02:10 PM (IST) May 21
ಉದ್ಯೋಗಿಗಳಿಗೆ ಅನುಕೂಲವಾಗಲು ತುಮಕೂರು-ಯಶವಂತಪುರ ಮೆಮು ರೈಲಿನ ಸಮಯವನ್ನು ಬದಲಾಯಿಸುವಂತೆ ಮಾಡಿದ ಮನವಿಗೆ ನೈಋತ್ಯ ರೈಲ್ವೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಸಮಯ ಬದಲಾವಣೆ, ಹೊಸ ನಿಲುಗಡೆ ಹಾಗೂ ಮತ್ತೊಂದು ರೈಲಿನ ವೇಳಾಪಟ್ಟಿ ಪರಿಶೀಲಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ.
01:21 PM (IST) May 21
ಮೈಸೂರಿನಲ್ಲಿ 50:50 ನಿವೇಶನದ ಹಣ ವಾಪಸ್ ಕೇಳಿದ ವಿಚಾರಕ್ಕೆ ಆರ್‌ಟಿಐ ಕಾರ್ಯಕರ್ತ ಗಂಗರಾಜು ಮತ್ತು ಧನಂಜಯ ನಡುವೆ ಜಗಳ ನಡೆದಿದೆ. ಹಣ ವಾಪಸ್ ಕೇಳಿದ ಧನಂಜಯ ಕಾರಿನ ಬಾನೆಟ್ ಮೇಲೆ ಹತ್ತಿದ್ದು, ಗಂಗರಾಜು ಆತನನ್ನು ಹೊತ್ತೊಯ್ದ ಘಟನೆ ನಡೆದಿದೆ.
01:00 PM (IST) May 21
ತಮ್ಮೂರಿನ ಸರ್ಕಾರಿ ಶಾಲೆಯನ್ನು ಜಾವಗಲ್ ಕೆಪಿಎಸ್ ಶಾಲೆಯೊಂದಿಗೆ ವಿಲೀನಗೊಳಿಸುವುದನ್ನು ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸಿದರು. ಸಾರಿಗೆ ವ್ಯವಸ್ಥೆಯ ಕೊರತೆ ಮತ್ತು ಮಕ್ಕಳ ಸುರಕ್ಷತೆಯ ಕಾರಣ ನೀಡಿ, "ನಮ್ಮೂರ ಶಾಲೆ ನಮ್ಮೂರಲ್ಲೇ ಉಳಿಯಲಿ" ಎಂದು ಆಗ್ರಹಿಸಿ, ಶಾಲೆಯನ್ನು ಮುಚ್ಚುವ ಬದಲು ಮೂಲಸೌಕರ್ಯ ಒದಗಿಸಲು ಸರ್ಕಾರವನ್ನು ಒತ್ತಾಯಿಸಿದರು.
12:31 PM (IST) May 21
ಇಟಲಿ ಪ್ರಧಾನಿಗೆ ಮೋದಿ ಚಾಕ್ಲೆಟ್ ನೀಡಿದ ವಿಚಾರವಾಗಿ, ಸಚಿವ ಪ್ರಿಯಾಂಕ್ ಖರ್ಗೆ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಳೆದ 13 ವರ್ಷಗಳಿಂದ ಮೋದಿ ಅವರು 'ಅಚ್ಚೇ ದಿನ್', 'ವಿಕಸಿತ್ ಭಾರತ್' ನಂತಹ ಘೋಷಣೆಗಳೆಂಬ ಚಾಕ್ಲೆಟ್ ನೀಡಿ ಜನರನ್ನು ಸಮಾಧಾನಿಸುತ್ತಿದ್ದಾರೆ ಎಂದು ವಾಗ್ದಾಳಿ.
12:12 PM (IST) May 21
ನಟನಾಗಿ ಯಶಸ್ವಿಯಾದರೂ ರಾಜಕೀಯದಲ್ಲಿ ನಿರೀಕ್ಷಿತ ಯಶಸ್ಸು ಕಾಣದ ರಿಯಲ್ ಸ್ಟಾರ್ ಉಪೇಂದ್ರ, ತಮ್ಮ ಛಲವನ್ನು ಬಿಟ್ಟಿಲ್ಲ. ಇತ್ತೀಚೆಗೆ ತಾವು ಮುಖ್ಯಮಂತ್ರಿಯಾದರೆ ತಂತ್ರಜ್ಞಾನ ಬಳಸಿ ಪಾರದರ್ಶಕ ಆಡಳಿತ ನೀಡುವುದಾಗಿ ಮತ್ತು ಅಭಿವೃದ್ಧಿ ಕಾರ್ಯಗಳ ಉದ್ಘಾಟನಾ ಶೈಲಿಯನ್ನೇ ಬದಲಾಯಿಸುವುದಾಗಿ ಹಂಚಿಕೊಂಡಿದ್ದಾರೆ.
11:18 AM (IST) May 21
ರಾಕೇಶ್ ಬೇಡಿ ಕ್ಯಾಮೆರಾವನ್ನು ಸುಖ್ಬೀರ್ ಕಡೆಗೆ ತಿರುಗಿಸುತ್ತಿದ್ದಂತೆಯೇ, ಸುಖ್ಬೀರ್ ತಮ್ಮದೇ ಸ್ಟೈಲ್‌ನಲ್ಲಿ ಹಿಟ್ ಸಾಂಗ್ "ದಿಲ್ ದೇನಾ ದಿಲ್ ಲೇನಾ... ಸೌದಾ ಖರಾ ಖರಾ..." ಎಂದು ಹಾಡಲು ಆರಂಭಿಸಿದರು. ಅಷ್ಟಕ್ಕೆ ಸುಮ್ಮನಾಗದ ಸುಖ್ಬೀರ್, ರಾಕೇಶ್ ಬೇಡಿ ಅವರ ಮುಖ ನೋಡುತ್ತಾ, ಹಾಗೆ ಹೇಳ್ಬಿಟ್ರು..!
10:56 AM (IST) May 21
10:42 AM (IST) May 21
ಬೆಂಗಳೂರಿನ ಮಡಿವಾಳದ ಲಾಡ್ಜ್‌ನಲ್ಲಿ ತಮಿಳುನಾಡು ಮೂಲದ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಬೇರೆಯವರ ಹೆಸರಲ್ಲಿ ಬುಕ್ ಆಗಿದ್ದ ರೂಂನಲ್ಲಿದ್ದ ಈತನ ಜೊತೆಗಿದ್ದ ವ್ಯಕ್ತಿ ಪರಾರಿಯಾಗಿದ್ದು, ಬಾಯಲ್ಲಿ ರಕ್ತ ಕಂಡುಬಂದಿರುವುದು ಸಾವಿನ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
10:33 AM (IST) May 21
ಚೆನ್ನೈನ ಗಲ್ಲಿ ಗಲ್ಲಿಯಲ್ಲೂ ನಟ ಕಮಲ್ ಹಾಸನ್ ಸಿನಿಮಾ ಪೋಸ್ಟರ್‌ಗಳು, ಜನಜಂಗುಳಿ. ಅಲ್ಲಿ ಶ್ರುತಿಗೆ ಸ್ವತಂತ್ರವಾಗಿ ಬದುಕಲು ಸಾಧ್ಯವೇ ಆಗುತ್ತಿರಲಿಲ್ಲ. ಸಾರಿಕಾ ಮತ್ತು ಕಮಲ್ ಹಾಸನ್ ಬೇರೆಯಾದಾಗ ಶ್ರುತಿ ಮುಂಬೈಗೆ ಶಿಫ್ಟ್ ಆದರು. ಅಲ್ಲಿ ಆಗಿದ್ದೇನು? ಅಪ್ಪನ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ ಶ್ರುತಿ ನೋಡಿ..
10:09 AM (IST) May 21
10:08 AM (IST) May 21
09:58 AM (IST) May 21
2026-27ನೇ ಶೈಕ್ಷಣಿಕ ಸಾಲಿಗೆ ಒಂದನೇ ತರಗತಿ ದಾಖಲಾತಿಗೆ ನಿಗದಿಪಡಿಸಿರುವ ವಯೋಮಿತಿ ಮರುಪರಿಶೀಲಿಸುವಂತೆ ರಾಜ್ಯ ಶಾಲಾ ಶಿಕ್ಷಣ ಇಲಾಖೆಗೆ ಹೈಕೋರ್ಟ್ ಒಂದು ವಾರದ ಗಡುವು. ವಯೋಮಿತಿ ಆದೇಶದಿಂದ ಲಕ್ಷಾಂತರ ವಿದ್ಯಾರ್ಥಿಗಳು ಒಂದು ಶೈಕ್ಷಣಿಕ ವರ್ಷ ಕಳೆದುಕೊಳ್ಳುವ ಆತಂಕ ಅರ್ಜಿದಾರರು ವ್ಯಕ್ತಪಡಿಸಿದ್ದಾರೆ.
09:34 AM (IST) May 21
08:54 AM (IST) May 21
08:37 AM (IST) May 21
ಡಾ.ಪರಮೇಶ್ವರ್ ಅವರನ್ನು ಸಿಎಂ ಮಾಡಬೇಕು ಎಂಬ ರಾಜಣ್ಣ ಹೇಳಿಕೆಯ ಅರ್ಥ ಸಿದ್ದರಾಮಯ್ಯ ಅಧಿಕಾರದಿಂದ ಇಳಿಯಬೇಕೆಂದೇ ಎಂದು ಡಿಸಿಎಂ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ. ತಾನು ಎಲ್ಲೂ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡಿಲ್ಲ, ಆದರೆ ರಾಜಣ್ಣ ಅವರೇ ಬದಲಾವಣೆಗೆ ಮುಂದಾಗಿದ್ದಾರೆ ಎಂದು ಸ್ಪಷ್ಟನೆ.
08:21 AM (IST) May 21
08:11 AM (IST) May 21
ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್.ಎಂ. ಪಾಟೀಲ ಅವರು ಶಾಲಾ ದಾಖಲಾತಿ ಹೆಚ್ಚಿಸಲು ವಿನೂತನ ಯೋಜನೆ ಆರಂಭಿಸಿದ್ದಾರೆ. ಒಂದನೇ ತರಗತಿಗೆ ದಾಖಲಾಗುವ ಪ್ರತಿ ಮಗುವಿನ ಹೆಸರಿನಲ್ಲಿ ₹1000 ಫಿಕ್ಸೆಡ್ ಡೆಪಾಸಿಟ್ ಇಡುವ ಮೂಲಕ ಅವರು ಮಾದರಿಯಾಗಿದ್ದಾರೆ.
07:59 AM (IST) May 21
ಮುಸ್ಲಿಂ ಪ್ರೇಮಿಯೊಂದಿಗೆ ವಾಸಿಸಲು ಬಯಸಿದ 21 ವರ್ಷದ ಸಿಖ್ ಯುವತಿಯ ಮಾನಸಿಕ ಆರೋಗ್ಯ ಮೌಲ್ಯಮಾಪನಕ್ಕೆ ಕೋರಿ ತಾಯಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಏನಿದು ಪ್ರಕರಣ, ಹೈಕೋರ್ಟ್ ಹೇಳಿದ್ದೇನು ಪೂರ್ತಿ ಓದಿ.
07:57 AM (IST) May 21
ಗದಗಿನಲ್ಲಿ ಕನ್ಹೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿರುವ ಹಿಂದೂ ಸಮಾವೇಶಕ್ಕೆ ಸಮಾನ ಮನಸ್ಕರು ಮತ್ತು ಬಸವಾದಿ ಶರಣರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಶರಣ ಪರಂಪರೆಯನ್ನು ನಾಶಮಾಡುವ ಮತ್ತು ಕೋಮುದ್ವೇಷ ಬಿತ್ತುವ RSS ಪ್ರೇರಿತ ಹುನ್ನಾರ ಎಂದು ಅವರು ಆರೋಪಿಸಿದ್ದಾರೆ.
07:39 AM (IST) May 21
07:34 AM (IST) May 21
2026-27ನೇ ಶೈಕ್ಷಣಿಕ ಸಾಲಿನ ಪಠ್ಯಪುಸ್ತಕಗಳ ಮುದ್ರಣ ಕಾರ್ಯವು ಅಂತಿಮ ಹಂತದಲ್ಲಿದ್ದು, ಶೇ. 85ಕ್ಕೂ ಹೆಚ್ಚು ಮುದ್ರಣ ಪೂರ್ಣಗೊಂಡಿದೆ. ಈಗಾಗಲೇ ಶಾಲೆಗಳಿಗೆ ಪುಸ್ತಕಗಳ ಸರಬರಾಜು ಪ್ರಕ್ರಿಯೆ ಆರಂಭವಾಗಿದ್ದು, ಈ ಬಾರಿ ಶಾಲಾರಂಭದ ವೇಳೆಗೆ ಮಕ್ಕಳಿಗೆ ಪುಸ್ತಕಗಳು ದೊರೆಯುವ ಭರವಸೆ ಮೂಡಿದೆ.
07:27 AM (IST) May 21
ಹಂಪಿಯ ಹಜಾರರಾಮ ದೇಗುಲದ ಬಳಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ನಡೆಸಿದ ಉತ್ಖನನದಲ್ಲಿ, ಭಗ್ನಗೊಂಡ ಪುರಾತನ ಆಳ್ವರ್ ವಿಗ್ರಹಗಳು ಮತ್ತು ಪೀಠಗಳು ಪತ್ತೆಯಾಗಿವೆ. 1565ರ ತಾಳಿಕೋಟೆ ಕದನದ ನಂತರ ನಡೆದ ದಾಳಿಗೆ ಸಾಕ್ಷಿಯಾಗಿವೆ.