Published : Jun 20, 2025, 06:55 AM ISTUpdated : Jun 20, 2025, 10:42 PM IST

Karnataka News Live 20th June 2025: ಟೆಸ್ಟ್‌ ನಾಯಕನಾಗಿ ಮೊದಲ ಪಂದ್ಯದಲ್ಲೇ ಶತಕ, ದಿಗ್ಗಜರ ಸಾಲಿಗೆ ಸೇರಿದ ಶುಭ್‌ಮನ್‌ ಗಿಲ್, ದಾಖಲೆ ಬರೆದ ಜೈಸ್ವಾಲ್‌!

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಂಗಳೂರು: ರಾಜ್ಯದ ಅಲ್ಪಸಂಖ್ಯಾತರಿಗೆ ಗುತ್ತಿಗೆಗಳಲ್ಲಿ ಹಾಗೂ ಖರೀದಿಯಲ್ಲಿ ಮೀಸಲಾತಿ ಜಾರಿಗೆ ತಂದಿರುವ ರಾಜ್ಯ ಸರ್ಕಾರ ಇದೀಗ ರಾಜ್ಯದ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ವಸತಿ ಇಲಾಖೆಯಡಿ ಜಾರಿಗೊಳಿಸಿರುವ ವಿವಿಧ ವಸತಿ ಯೋಜನೆಗಳಲ್ಲಿ ವಸತಿ ಹಂಚಿಕೆಗೆ ನಿಗದಿಪಡಿಸಿರುವ ಅಲ್ಪಸಂಖ್ಯಾತರ ಮೀಸಲು ಪ್ರಮಾಣವನ್ನು ಶೇ.10 ರಿಂದ ಶೇ.15ಕ್ಕೆ ಹೆಚ್ಚಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ.

ಈ ಬಗ್ಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಹೀಗಾಗಿ ಇನ್ನು ಮುಂದೆ ವಸತಿ ಹಂಚಿಕೆ ವೇಳೆ ಮುಸ್ಲಿಮರು, ಕ್ರೈಸ್ತರು, ಜೈನ ಅಲ್ಪಸಂಖ್ಯಾತರಿಗೆ ಇದ್ದ ಮೀಸಲಾತಿ ಶೇ.5 ರಷ್ಟು ಹೆಚ್ಚಳ ಆಗಲಿದೆ. ಸಂಪುಟ ಸಭೆ ಬಳಿಕ ಈ ಬಗ್ಗೆ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಪರಿಶಿಷ್ಟ ಜಾತಿ, ಪಂಗಡದವರಿಗೆ ಸೀಮಿತವಾದ ವಸತಿ ಯೋಜನೆ ಹೊರತುಪಡಿಸಿ ಉಳಿದ ಯೋಜನೆಗಳಿಗೆ ಇದು ಅನ್ವಯವಾಗಲಿದೆ ಎಂದಿದ್ದಾರೆ.

 

10:42 PM (IST) Jun 20

ಟೆಸ್ಟ್‌ ನಾಯಕನಾಗಿ ಮೊದಲ ಪಂದ್ಯದಲ್ಲೇ ಶತಕ, ದಿಗ್ಗಜರ ಸಾಲಿಗೆ ಸೇರಿದ ಶುಭ್‌ಮನ್‌ ಗಿಲ್, ದಾಖಲೆ ಬರೆದ ಜೈಸ್ವಾಲ್‌!

ಭಾರತ ಟೆಸ್ಟ್ ತಂಡದ ನಾಯಕ ಶುಭ್‌ಮನ್ ಗಿಲ್, ಇಂಗ್ಲೆಂಡ್ ವಿರುದ್ಧದ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ. ಇಂಗ್ಲೆಂಡ್ ನೆಲದಲ್ಲಿ ನಾಯಕನಾಗಿ ಆಡಿದ ಮೊದಲ ಪಂದ್ಯದಲ್ಲೇ ಶತಕ ಬಾರಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

 

Read Full Story

10:37 PM (IST) Jun 20

ಇಸ್ರೇಲ್‌ಗೆ ದುಬಾರಿಯಾಗ್ತಿದೆ ಇರಾನ್ ಜೊತೆ ಯುದ್ಧ, ಪ್ರತಿದಿನ ಎಷ್ಟು ಮಿಲಿಯನ್ ಖರ್ಚು ಆಗ್ತಿದೆ ಗೊತ್ತಾ?

8 ದಿನಗಳಿಂದ ನಡೆಯುತ್ತಿರುವ ಇರಾನ್-ಇಸ್ರೇಲ್ ಯುದ್ಧದಲ್ಲಿ ಇಸ್ರೇಲ್ 50,000 ಕೋಟಿಗೂ ಹೆಚ್ಚು ಖರ್ಚು ಮಾಡಿದೆ. ಪರಮಾಣು ಕೇಂದ್ರಗಳ ಮೇಲಿನ ದಾಳಿ ಮತ್ತು ಕ್ಷಿಪಣಿ ದಾಳಿಯಿಂದ ಉದ್ವಿಗ್ನತೆ ಉತ್ತುಂಗಕ್ಕೇರಿದೆ. ಕಚ್ಚಾ ತೈಲದ ಬೆಲೆಯೂ ಏರಿಕೆಯಾಗಿದೆ.
Read Full Story

10:09 PM (IST) Jun 20

'ನಾನು ತಪ್ಪು ಮಾಡಿದ್ರೆ, ಕಾಲಿಗೆ ಬಿದ್ದು ಕ್ಷಮೆ ಕೇಳೋಕು ರೆಡಿ..' ಸಂಜುಗೆ ಕೈಕೊಟ್ಟ ಗೀತಾ 'ರಚಿತಾ ರಾಮ್‌' ರಿಯಾಕ್ಷನ್‌!

ಸಂಜು ವೆಡ್ಸ್‌ ಗೀತಾ-2 ಸಿನಿಮಾ ಪ್ರಚಾರದಲ್ಲಿ ಭಾಗಿಯಾಗದಿರುವುದು ಮತ್ತು ಉಪ್ಪಿ ರುಪೀ ಸಿನಿಮಾಕ್ಕೆ ಹಣ ಪಡೆದು ದಿನಾಂಕ ನೀಡದಿರುವ ಆರೋಪಗಳಿಗೆ ರಚಿತಾ ರಾಮ್‌ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಮೇಲಿನ ಆರೋಪಗಳನ್ನು ರಚಿತಾ ರಾಮ್‌ ಖಂಡಿಸಿದ್ದಾರೆ.
Read Full Story

10:05 PM (IST) Jun 20

ಇರಾನ್ ಮಹತ್ವದ ಸುದ್ದಿಗೋಷ್ಠಿ - ಜಾಗತಿಕ ಶಾಂತಿಗೆ ಭಾರತ ಮುಂದೆ ಬರಬೇಕು, ಇಸ್ರೇಲ್ ವಿರುದ್ಧ ಕಿಡಿ, ಅಮೆರಿಕ-ಪಾಕಿಸ್ತಾನಕ್ಕೆ ಎಚ್ಚರಿಕೆ!

ಇಸ್ರೇಲ್ ದಾಳಿಯನ್ನು ಖಂಡಿಸಲು ಇರಾನ್ ಭಾರತಕ್ಕೆ ಮನವಿ ಮಾಡಿದೆ. ಜಾಗತಿಕ ಶಾಂತಿಗಾಗಿ ಭಾರತ ಮಧ್ಯಪ್ರವೇಶಿಸಬೇಕೆಂದು ಇರಾನ್ ಒತ್ತಾಯಿಸಿದೆ. ಅಮೆರಿಕ ಮತ್ತು ಪಾಕಿಸ್ತಾನದ ಹಸ್ತಕ್ಷೇಪದ ವಿರುದ್ಧ ಇರಾನ್ ಎಚ್ಚರಿಕೆ ನೀಡಿದೆ.
Read Full Story

09:42 PM (IST) Jun 20

ಯಾದಗಿರಿ - ಕಾನೂನು ವಿದ್ಯಾರ್ಥಿಗೆ ಅಡ್ಡಗಟ್ಟಿ ಜಾತಿ ನಿಂದನೆ, ಕೊನೆ ಬೆದರಿಕೆ!

ಯಾದಗಿರಿ ಜಿಲ್ಲೆಯ ನಾಗರಾಳದಲ್ಲಿ ಎಲ್‌ಎಲ್‌ಬಿ ವಿದ್ಯಾರ್ಥಿ ದುರ್ಗಪ್ಪನಿಗೆ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
Read Full Story

08:59 PM (IST) Jun 20

ಪ್ರಖ್ಯಾತ ನಟಿ ಆಯೇಷಾ ಖಾನ್‌ ನಿಧನ, ಮನೆಯಲ್ಲೇ ಕೊಳೆತು ಹೋಗಿದ್ದ ಮೃತದೇಹ!

ನಟಿ ಆಯೇಷಾ ಖಾನ್ ತಮ್ಮ ಅಪಾರ್ಟ್ಮೆಂಟ್ನಲ್ಲಿ ಮೃತರಾಗಿ ಪತ್ತೆಯಾಗಿದ್ದಾರೆ. ಸಾವಿನ ಕಾರಣ ಇನ್ನೂ ತಿಳಿದುಬಂದಿಲ್ಲ, ಮತ್ತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅವರ ಸಾವು ಮನರಂಜನಾ ಉದ್ಯಮದಲ್ಲಿ ದುಃಖವನ್ನುಂಟುಮಾಡಿದೆ.

Read Full Story

08:36 PM (IST) Jun 20

ಚಾಮರಾಜನಗರ - ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯ್ತು ಮಹಿಳೆಯ ಮೃತ ದೇಹ, ವಾಮಾಚಾರಕ್ಕೆ ಬಲಿ ನಾ? ಇಲ್ಲ ಕೊಲೆನಾ?

ಚಾಮರಾಜನಗರದ ಹೊಳೆ ದಂಡೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ. ವಾಮಾಚಾರದ ಸಾಮಗ್ರಿಗಳು ಪತ್ತೆಯಾಗಿವೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
Read Full Story

08:28 PM (IST) Jun 20

ಮೇಡ್‌ ಇನ್‌ ಚೀನಾ ಇವಿಗಳ ಮೂಲಕ ಜುಲೈನಲ್ಲಿ ಭಾರತದ ಶೋ ರೂಮ್‌ ತೆರೆಯಲಿರುವ ಟೆಸ್ಲಾ!

ಟೆಸ್ಲಾ ತನ್ನ ಮೊದಲ ಶೋ ರೂಂ ಅನ್ನು ಜುಲೈ ಮಧ್ಯಭಾಗದಲ್ಲಿ ಮುಂಬೈನಲ್ಲಿ ತೆರೆಯಲು ಸಜ್ಜಾಗಿದ್ದು, ನಂತರ ನವದೆಹಲಿಯಲ್ಲಿ ಒಂದು ಶೋ ರೂಂ ತೆರೆಯಲಿದೆ.

 

Read Full Story

08:02 PM (IST) Jun 20

Housing quota row - ಮೀಸಲಾತಿ ಸಚಿವ ಸಂಪುಟದಲ್ಲಿ ನಿರ್ಧಾರವಾಗುತ್ತೆ ಮಂತ್ರಿ ಮಟ್ಟದಲ್ಲಿ ಅಲ್ಲ - ಶಾಸಕ ಪೊನ್ನಣ್ಣ

ವಸತಿ ಯೋಜನೆಯಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಹೆಚ್ಚಳದ ಬಗ್ಗೆ ಶಾಸಕ ಪೊನ್ನಣ್ಣ ಅನುಮಾನ ವ್ಯಕ್ತಪಡಿಸಿದ್ದಾರೆ. ಸಚಿವ ಸಂಪುಟದ ನಿರ್ಧಾರವಿಲ್ಲದೆ ಮೀಸಲಾತಿ ಹೆಚ್ಚಳ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಮಳೆಗಾಲದ ಸಿದ್ಧತೆಗಳ ಬಗ್ಗೆಯೂ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
Read Full Story

07:57 PM (IST) Jun 20

ಭಾರತದಲ್ಲಿ ದಾಖಲೆ ಬರೆದ ಮಾರುತಿ ಸ್ವಿಫ್ಟ್, 20 ವರ್ಷ ಪೂರೈಸಿ ಹೊಸ ಮೈಲಿಗಲ್ಲು

2005ರಲ್ಲಿ ಭಾರತಕ್ಕೆ ಎಂಟ್ರಿಕೊಟ್ಟ ಮಾರುತಿ ಸುಜುಕಿ ಸ್ವಿಫ್ಟ್ ಕಾರು ಇದೀಗ ಭರ್ಜರಿ ದಾಖಲೆ ಬರೆದಿದೆ. ಬರೋಬ್ಬರಿ 20 ವರ್ಷದಿಂದ ಬೇಡಿಕೆಯ ಕಾರಾಗಿರುವ ಸ್ವಿಫ್ಟ್ ಭಾರತದಲ್ಲಿ ಮಾರಾಟವಾಗಿದ್ದೆಷ್ಟು?  

Read Full Story

07:57 PM (IST) Jun 20

ರಿಪೇರಿ ಮಾಡುವ ಸಹಾಯ ತಿರಸ್ಕರಿಸಿದ ಬ್ರಿಟನ್‌ ರಾಯಲ್‌ ನೇವಿ, 6 ದಿನದಿಂದ ಕೇರಳದಲ್ಲಿ ನಿಂತ F-35B ಫೈಟರ್‌ ಜೆಟ್‌!

ತುರ್ತು ಲ್ಯಾಂಡಿಂಗ್ ನಂತರ, ಹಾನಿಯನ್ನು ನಿರ್ಣಯಿಸಲು ಬ್ರಿಟಿಷ್ ತಾಂತ್ರಿಕ ತಂಡವು ಮೂರನೇ ದಿನ ಆಗಮಿಸಿತು.

 

Read Full Story

07:41 PM (IST) Jun 20

ಪ್ರವಾಸಿಗರಿಗಾಗಿ ತನ್ನ ಐಷಾರಾಮಿ ಊಟಿ ವಿಲ್ಲಾದಲ್ಲಿ ಅವಕಾಶ ಕೊಟ್ಟ ನಟ ಮೋಹನ್‌ಲಾಲ್‌, ಒಂದು ರಾತ್ರಿಗೆ ಎಷ್ಟು?

ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಊಟಿಯಲ್ಲಿರುವ ತಮ್ಮ ಐಷಾರಾಮಿ ವಿಲ್ಲಾ ‘ಹೈಡ್‌ಅವೇ’ ಅನ್ನು ಸಾರ್ವಜನಿಕರಿಗೆ ತೆರೆದಿದ್ದಾರೆ. ಈ ವಿಲ್ಲಾ ಪ್ರತಿ ರಾತ್ರಿಗೆ ₹37,000 ದರದಲ್ಲಿ ಲಭ್ಯವಿದ್ದು, ಅವರ ಕುಟುಂಬದ ವೈಯಕ್ತಿಕ ಸ್ಪರ್ಶ, ಸಿನಿಮಾ ಸ್ಮರಣಿಕೆಗಳು ಮತ್ತು ನಾಟಿ ಶೈಲಿಯ ಕೇರಳ ಊಟವನ್ನು ಒಳಗೊಂಡಿದೆ.
Read Full Story

07:39 PM (IST) Jun 20

ಅಮೆರಿಕ ಅಧ್ಯಕ್ಷ ಟ್ರಂಪ್ ಆಹ್ವಾನ ತಿರಸ್ಕರಿಸಿದ ಕಾರಣ ಬಹಿರಂಗಪಡಿಸಿದ ಪ್ರಧಾನಿ ಮೋದಿ

ಅಮೆರಿಕ ಭೇಟಿ ಮಾಡುವಂತೆ ಟ್ರಂಪ್ ನೀಡಿದ ಆಹ್ವಾನವನ್ನು ಮೋದಿ ತಿರಸ್ಕರಿಸಿದ್ದರು. ಈ ನಡೆ ಭಾರಿ ಚರ್ಚೆಯಾಗಿತ್ತು. ಇದೀಗ ಪ್ರಧಾನಿ ಮೋದಿ ಅಮೆರಿಕ ಅಧ್ಯಕ್ಷರ ಆಹ್ವಾನ ತಿರಸ್ಕರಿಸಲು ಅಸಲಿ ಕಾರಣವೇನು ಅನ್ನೋದು ಬಹಿರಂಗಪಡಿಸಿದ್ದಾರೆ.

 

Read Full Story

07:14 PM (IST) Jun 20

ವಿಮಾನ ದುರಂತದಲ್ಲಿ ಮಡಿದ ಕುಟುಂಬದ ಜೊತೆ ನಾವಿದ್ದೇವೆ, ಟಾಟಾ ಸನ್ಸ್ ಭರವಸೆ

ಏರ್ ಇಂಡಿಯಾ ವಿಮಾನ ದುರಂತ ಭಾರತದ ಇತಿಹಾಸದಲ್ಲೇ ಅತೀ ದೊಡ್ಡ ದುರಂತವಾಗಿದೆ. ಮಡಿದ ಕುಟುಂಬಸ್ಥರ ಕಣ್ಣೀರು ನಿಲ್ಲುತ್ತಿಲ್ಲ. ಇದರ ನಡುವೆ ಏರ್ ಇಂಡಿಯಾ ಮಾಲೀಕತ್ವದ ಟಾಟಾ ಸನ್ಸ್ ಚೇರ್ಮೆನ್ ಮಹತ್ವದ ಭರವಸೆ ನೀಡಿದ್ದಾರೆ.

 

Read Full Story

06:49 PM (IST) Jun 20

ಟಿಸಿಎಸ್‌ ಬಳಿಕ ಆಂಧ್ರದಲ್ಲಿ ಕಾಗ್ನಿಜೆಂಟ್‌ ಕಂಪನಿಗೆ ಕೇವಲ 99 ಪೈಸೆಗೆ 21.31 ಎಕರೆ ಜಾಗ ನೀಡಿದ ಚಂದ್ರಬಾಬು ನಾಯ್ದು!

ನ್ಯೂಜೆರ್ಸಿಯ ಟೀನೆಕ್ ಮೂಲದ ಸಾಫ್ಟ್‌ವೇರ್ ದೈತ್ಯ ವಿಶಾಖಪಟ್ಟಣಂನಲ್ಲಿ ₹1,582 ಕೋಟಿ ಮೌಲ್ಯದ ಐಟಿ ಕ್ಯಾಂಪಸ್ ನಿರ್ಮಿಸಲಿದ್ದು, 8000 ಉದ್ಯೋಗಗಳ ಭರವಸೆ ನೀಡಿದೆ.

 

Read Full Story

06:28 PM (IST) Jun 20

ಮೋಹನ್‌ಲಾಲ್‌ಗೆ ಶ್ರೀಲಂಕಾ ಸಂಸತ್ತಿನಲ್ಲಿ ಅದ್ಧೂರಿ ಸ್ವಾಗತ, ಸ್ಟಾರ್‌ ನಟ ಅಲ್ಲಿ ಹೋಗಿದ್ಯಾಕೆ?

ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರಿ ಶ್ರೀಲಂಕಾ ಸಂಸತ್ ಭೇಟಿ. ಪ್ರಧಾನಿ ಸೇರಿದಂತೆ ಗಣ್ಯರ ಉಪಸ್ಥಿತಿಯಲ್ಲಿ ಅದ್ಧೂರಿ ಸ್ವಾಗತ. ಈ ಅನುಭವವನ್ನು 'ಮರೆಯಲಾಗದ' ಎಂದು ಬಣ್ಣಿಸಿದ ನಟ.
Read Full Story

06:28 PM (IST) Jun 20

ಉತ್ತರ ಕರ್ನಾಟಕದಲ್ಲಿ ಮಳೆಯ ಅಬ್ಬರಕ್ಕೆ ಹೆಸ್ಕಾಂಗೆ ನಷ್ಟದ ಹೊಡೆತ - ಕಂಬ, ಪರಿವರ್ತಕಗಳಿಂದ 5.65 ಕೋಟಿ ನಷ್ಟ!

ಉತ್ತರ ಕರ್ನಾಟಕದಲ್ಲಿ ಬಿರುಗಾಳಿ ಸಹಿತ ಮಳೆಯಿಂದಾಗಿ ಹೆಸ್ಕಾಂಗೆ 5.65 ಕೋಟಿ ರೂ. ನಷ್ಟವಾಗಿದೆ. ಧಾರವಾಡ, ಗದಗ, ಹಾವೇರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿ, ಪರಿವರ್ತಕಗಳು ಹಾನಿಗೊಳಗಾಗಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಹಾನಿ ಸಂಭವಿಸಿದೆ.
Read Full Story

06:26 PM (IST) Jun 20

ಕಾಂಗ್ರೆಸ್ ನಾಯಕಿ ವಸಂತ ಕರ್ಮಕಾಂಡ ಬಯಲು; ಸರ್ಕಾರಿ ಕೆಲಸ ಕೊಡಿಸೋದಾಗಿ ₹20 ಲಕ್ಷದವರೆಗೆ ಹಣ ಪೀಕಿದ್ದ ಆರೋಪ!

ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘದ ರಾಜ್ಯಾಧ್ಯಕ್ಷೆ ವಸಂತ ಮುರುಳಿ ಸರ್ಕಾರಿ ಕೆಲಸ ಕೊಡಿಸುವುದಾಗಿ ಹಲವು ಜನರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ ಆರೋಪ ಎದುರಿಸುತ್ತಿದ್ದಾರೆ. ವಿಶ್ವಕರ್ಮ ಸಮಾಜದ ಕಾರ್ಯಕ್ರಮದಲ್ಲಿ ವಂಚಿತರು ಪ್ರತಿಭಟನೆ ನಡೆಸಿ, ಕೈ ಕೈ ಮಿಲಾಯಿಸಿಕೊಂಡ ಘಟನೆಯೂ ನಡೆಯಿತು.
Read Full Story

06:24 PM (IST) Jun 20

ಮೆಟ್ರೋ ಲೇಡಿಸ್ ಕೋಚ್‌ನಲ್ಲಿ ಕಾಣಿಸಿಕೊಂಡ ಹಾವು, ಕಕ್ಕಾಬಿಕ್ಕಿಯಾದ ಮಹಿಳಾ ಪ್ರಯಾಣಿಕರು

ಮೆಟ್ರೋ ರೈಲಿನ ಮಹಿಳಾ ಕೋಚ್‌ನಲ್ಲಿ ಮಹಿಳೆಯರು ಕಕ್ಕಾಬಿಕ್ಕಿಯಾದ ಘಟನೆ ನಡೆದಿದೆ. ಎಲ್ಲರೂ ಹಾವು ಹಾವು ಎಂದು ಕೂಗಿಕೊಂಡು ಸೀಟ್ ಮೇಲೆ ಹತ್ತಿದರೆ, ಕೂಗಾಟ ಚೀರಾಟದಿಂದ ರೈಲು ತುರ್ತು ನಿಲುಗಡೆ ಮಾಡಿದ ಘಟನೆ ನಡೆದಿದೆ.

 

Read Full Story

06:20 PM (IST) Jun 20

ಆ ಸ್ಟಾರ್ ನಟಿಯನ್ನು ನೋಡೊದಕ್ಕಾಗಿಯೇ ಸಮನ್ಸ್ ನೀಡಿ ಕೋರ್ಟ್ ಗೆ ಕರೆಸುತ್ತಿದ್ದ ಜಡ್ಜ್!

ಈಕೆ ಅಂದಿನ ಕಾಲದ ಜನಪ್ರಿಯ ನಟಿ, ಆಕೆಯನ್ನು ನೋಡೊದಕ್ಕೆ ಜನ ತುದಿಗಾಲಲ್ಲಿ ನಿಲ್ಲುತ್ತಿದ್ದ ದಿನಗಳವು. ಜನ ಆ ನಟಿಯ ಬಗ್ಗೆ ಎಷ್ಟು ಹುಚ್ಚರಾಗಿದ್ದರು ಎಂದರೆ ಉನ್ನತ ಸ್ಥಾನದಲ್ಲಿರುವ ನ್ಯಾಯಾಧೀಶರು ಒಬ್ಬರು ಆಕೆಯನ್ನು ಒಮ್ಮೆ ನೋಡೋದಕ್ಕಾಗಿಯೇ ಆಕೆಗೆ ಸಮನ್ಸ್ ಕಳುಹಿಸಿದ್ದರು.

 

Read Full Story

06:02 PM (IST) Jun 20

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಬಳಿ ಇದ್ದ ಕಂಪನಿಯ ಎಲ್ಲಾ ಪಾಲು ಖರೀದಿ ಮಾಡಿದ ಮುಕೇಶ್‌ ಅಂಬಾನಿ!

ಇತ್ತೀಚಿನ ಸ್ವಾಧೀನದ ನಂತರ, ಕಂಪನಿಯು ರಿಲಯನ್ಸ್ ಸಂಸ್ಥೆಯ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ.

 

Read Full Story

06:00 PM (IST) Jun 20

ಗಮನಿಸಿ, ಜೂನ್ 22 ರಂದು ಈ ಮಾರ್ಗದಲ್ಲಿ ಸಂಚರಿಸುವ ಮೆಟ್ರೋ ಸೇವೆ ವ್ಯತ್ಯಯ!

ಜೂನ್ 22 ರಂದು ಬೆಂಗಳೂರು ಮೆಟ್ರೋದ ನೇರಳೆ ಮಾರ್ಗದಲ್ಲಿ ನಿರ್ವಹಣಾ ಕಾರ್ಯಗಳಿಂದಾಗಿ ಬೆಳಿಗ್ಗೆ 7 ರಿಂದ 9 ರವರೆಗೆ ಎಂಜಿ ರಸ್ತೆ ಮತ್ತು ಬೈಯಪ್ಪನಹಳ್ಳಿ ನಡುವೆ ಸೇವೆ ಸ್ಥಗಿತಗೊಳ್ಳಲಿದೆ. ಉಳಿದ ಮಾರ್ಗಗಳಲ್ಲಿ ಮತ್ತು ಸಮಯದಲ್ಲಿ ಸೇವೆ ಎಂದಿನಂತೆ ಇರುತ್ತದೆ.
Read Full Story

05:48 PM (IST) Jun 20

ಮಲಗಿದ್ದ ಮೊಸಳೆ ಬಾಲ ಹಿಡಿದೆಳೆದ ಯುವಕ; ಆಕ್ರಮಣಕಾರಿ ದಾಳಿಯ ವಿಡಿಯೋ ವೈರಲ್

ಮೊಸಳೆಯ ಬಾಲವನ್ನು ಹಿಡಿದು ಕೀಟಲೆ ಮಾಡಿದ ಯುವಕನೊಬ್ಬನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೊಸಳೆ ಅನಿರೀಕ್ಷಿತವಾಗಿ ಪ್ರತಿಕ್ರಿಯಿಸಿದ್ದು, ಯುವಕನಿಗೆ ಆಘಾತವನ್ನುಂಟು ಮಾಡಿದೆ. ಈ ಘಟನೆ ವಿಡಿಯೋ ಭಾರೂ ವೈರಲ್ ಆಗಿದೆ.

Read Full Story

05:40 PM (IST) Jun 20

ಜನವರಿಯಿಂದ ದೇಶದ ಎಲ್ಲಾ ದ್ವಿಚಕ್ರ ವಾಹನಗಳಿಗೂ ಇದನ್ನು ಕಡ್ಡಾಯ ಮಾಡಿದ ಕೇಂದ್ರ ಸರ್ಕಾರ!

ಜನವರಿ 2026 ರಿಂದ ಎಲ್ಲಾ ಹೊಸ ದ್ವಿಚಕ್ರ ವಾಹನಗಳಲ್ಲಿ ABS ಕಡ್ಡಾಯಗೊಳಿಸಲು ಸರ್ಕಾರ ಸಜ್ಜಾಗಿದೆ. ಪ್ರತಿ ವಾಹನಕ್ಕೆ ಎರಡು BIS ಪ್ರಮಾಣೀಕೃತ ಹೆಲ್ಮೆಟ್‌ಗಳನ್ನು ಒದಗಿಸುವ ನಿಯಮವನ್ನೂ ಪರಿಗಣಿಸಲಾಗುತ್ತಿದೆ. ರಸ್ತೆ ಸುರಕ್ಷತೆ ಹೆಚ್ಚಿಸುವುದು ಇದರ ಉದ್ದೇಶ.
Read Full Story

05:30 PM (IST) Jun 20

ಶಾರುಖ್ ಖಾನ್‌ನನ್ನು ಹಿಂದಿಕ್ಕಿದ ಸೌಥ್ ಸ್ಟಾರ್; 10ನೇ ಸ್ಥಾನಕ್ಕೆ ಕುಸಿದ ಸಲ್ಮಾನ್ ಖಾನ್

ಪ್ರಭಾಸ್‌ನಿಂದ ಸಲ್ಮಾನ್‌ವರೆಗೆ, ಭಾರತದ ಟಾಪ್ 10 ಅತ್ಯಂತ ಜನಪ್ರಿಯ ಪುರುಷ ನಟರು ಇಲ್ಲಿದ್ದಾರೆ. ಯಾರು ಮುಂದಿದ್ದಾರೆ ಮತ್ತು ಯಾರು ಹಿಂದಿದ್ದಾರೆ ಎಂದು ತಿಳಿಯಿರಿ.

 

Read Full Story

05:11 PM (IST) Jun 20

ಹುಬ್ಬಳ್ಳಿ - ಮದುವೆ ಮನೆಯಲ್ಲಿ ಸುಡುವ ಸಾಂಬಾರು ಬಿದ್ದು ಎರಡೂವರೆ ವರ್ಷದ ಮಗು ದುರಂತ ಸಾವು

ಶಿಗ್ಗಾಂವ ತಾಲೂಕಿನ ಕುಣ್ಣೂರು ಗ್ರಾಮದ ಮದುವೆ ಮನೆಯೊಂದರಲ್ಲಿ ಸುಟ್ಟ ಗಾಯಗಳಿಂದಾಗಿ ಎರಡೂವರೆ ವರ್ಷದ ಬಾಲಕಿ ರುಕ್ಸಾನಾಬಾನು ಸಾವನ್ನಪ್ಪಿದ್ದಾಳೆ.

Read Full Story

05:08 PM (IST) Jun 20

ಈ ಕಾರಣಕ್ಕಾಗಿ ಲೀಡ್ಸ್ ಟೆಸ್ಟ್‌ನಲ್ಲಿ ಕಪ್ಪು ಪಟ್ಟಿ ತೊಟ್ಟು ಕಣಕ್ಕಿಳಿದ ಭಾರತ-ಇಂಗ್ಲೆಂಡ್ ಆಟಗಾರರು!

ಲೀಡ್ಸ್‌ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಟೆಸ್ಟ್ ಪಂದ್ಯದಲ್ಲಿ ಆಟಗಾರರು ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದಿದ್ದಾರೆ. ಇತ್ತೀಚೆಗೆ ನಡೆದ ವಿಮಾನ ದುರಂತದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಸಾಯಿ ಸುದರ್ಶನ್ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ.
Read Full Story

05:01 PM (IST) Jun 20

ಬೆಂಗಳೂರಿನಲ್ಲಿ ನಾಳೆ ವಿದ್ಯುತ್ ಕಡಿತ - ನಿಮ್ಮ ಏರಿಯಾ ಇದೆನಾ ಚೆಕ್ ಮಾಡಿಕೊಳ್ಳಿ

ಜೂನ್ 21 ರಂದು ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ಸ್ಥಗಿತಗೊಳ್ಳಲಿದೆ. ನಿರ್ವಹಣಾ ಕಾರ್ಯಗಳಿಂದಾಗಿ ಈ ಕಡಿತ ಉಂಟಾಗಲಿದ್ದು, ಚಿಕ್ಕಜಾಜೂರು ಸುತ್ತಮುತ್ತಲಿನ ಪ್ರದೇಶಗಳು ಹೆಚ್ಚು ಪ್ರಭಾವಿತವಾಗಿರುತ್ತವೆ. ಮುಂಜಾಗ್ರತಾ ಕ್ರಮ ಕೈಗೊಳ್ಳಲು ಬೆಸ್ಕಾಂ ಸೂಚಿಸಿದೆ.

Read Full Story

04:58 PM (IST) Jun 20

16 ಬಿಲಿಯನ್‌ ಮಂದಿ ಪಾಸ್​ವರ್ಡ್​ ಸೋರಿಕೆ - ನಿಮ್ಮ ಜುಟ್ಟು ಹ್ಯಾಕರ್ಸ್​ ಕೈಯಲ್ಲಿ! ಮಾಡಬೇಕಿರುವುದು ಏನು?

ತಂತ್ರಜ್ಞಾನದ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಡೇಟಾ ಸೋರಿಕೆ ಆಗಿರುವುದು ವರದಿಯಾಗಿದೆ. ಬಿಲಿಯನ್‌ಗಿಂತಲೂ ಹೆಚ್ಚು ಲಾಗಿನ್ ವಿವರಗಳು ಹ್ಯಾಕರ್ಸ್​ ಕೈಗೆ ಸಿಗುವ ಸಾಧ್ಯತೆ ಇದ್ದು, ನಿಮ್ಮ ಸುರಕ್ಷತೆಗೆ ಮಾಡಬೇಕಿರುವುದು ಏನು?

 

Read Full Story

04:48 PM (IST) Jun 20

ಸೆ*ಕ್ಸ್‌ ಮಾಡುವಾಗ 5 ಸ್ಟಾರ್‌ ಹೋಟೆಲ್‌ನ ಕಿಟಕಿ ಪರದೆ ಹಾಕೋದನ್ನೇ ಮರೆತ ಜೋಡಿ, ಫ್ರೀ ಶೋಗೆ ಫುಲ್‌ ಟ್ರಾಫಿಕ್‌ ಜಾಮ್‌!

Jaipur 5-Star Hotel Viral Video: ಹೋಟೆಲ್‌ನಲ್ಲಿ ಲೈಂಗಿಕ ಕ್ರಿಯೆ ನಡೆಸುವಾಗ ಬೃಹತ್‌ ಕಿಟಕಿಗಳಿಗೆ ಪರದೆ ಹಾಕಲು ಮರೆತಿದ್ದರು. ಇದರ ಪರಿಣಾಮ ಎನ್ನುವಂತೆ ಹೋಟೆಲ್‌ನ ಮುಂಭಾಗದಲ್ಲಿ ಇದ್ದ ಫ್ಲೈ ಓವರ್‌ನಲ್ಲಿ ಫ್ರೀ ಶೋ ನೋಡಲು ಫುಲ್‌ ಟ್ರಾಫಿಕ್‌ ಜಾಮ್‌ ಆಗಿತ್ತು.

 

Read Full Story

04:45 PM (IST) Jun 20

Gen Z ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಹೆಚ್‌ಆರ್‌ ನೀತಿಯಲ್ಲಿ ಬದಲಾವಣೆ ತಂದ ಕಂಪೆನಿಗಳು!

ಜೆನ್ Z ಉದ್ಯೋಗಿಗಳ ಬದಲಾಗುತ್ತಿರುವ ನಿರೀಕ್ಷೆಗಳಿಗೆ ತಕ್ಕಂತೆ ಭಾರತೀಯ ಕಂಪನಿಗಳು ತಮ್ಮ HR ನೀತಿಗಳನ್ನು ಪರಿಷ್ಕರಿಸುತ್ತಿವೆ. ತಕ್ಷಣದ ಮನ್ನಣೆ, ವೃತ್ತಿಪರ ಬೆಳವಣಿಗೆ ಮತ್ತು ಕೆಲಸ-ಜೀವನದ ಸಮತೋಲನಕ್ಕೆ ಒತ್ತು ನೀಡಲಾಗುತ್ತಿದೆ.
Read Full Story

04:42 PM (IST) Jun 20

ರೆಟ್ರೋ ಸ್ಟೈಲಲ್ಲಿ ಜೋಡಿಯಾದ ಕಿಶನ್ - ನಮೃತಾ… Old School Love ಹೀಗೆ ಇತ್ತೆ?

ಡ್ಯಾನ್ಸರ್ ಕಿಶನ್ ಬಿಳಗಲಿ ಹಾಗೂ ನಟೀ ನಮ್ರತಾ ಗೌಡ ಮತ್ತೆ ಜೊತೆಯಾಗಿ ಫೋಟೊ ಶೂಟ್ ಮಾಡಿಸಿದ್ದು ಸಖತ್ ಮುದ್ದಾಗಿ ಕಾಣಿಸ್ತಿದ್ದಾರೆ.

 

Read Full Story

04:31 PM (IST) Jun 20

ಬದಲಾದ ಜಾಗತೀಕ ರಾಜಕೀಯ ವಿದ್ಯಮಾನ - ಇಸ್ರೇಲ್‌ಗಿಂತಲೂ ಇರಾನ್ ಗೆಲುವು ಉಳಿವು ಭಾರತಕ್ಕೆ ಏಕೆ ಮುಖ್ಯ?

ಇಸ್ರೇಲ್‌ಗಿಂತಲೂ ಈಗ ಭಾರತಕ್ಕೆ ಇರಾನ್ ಏಕೆ ಮುಖ್ಯ ಎಂಬ ವಿಚಾರಗಳ ಬಗ್ಗೆ ರಾಜಕೀಯ ವಿಶ್ಲೇಷಕರು ಆಗಿರುವ ಡಾ ಸೈಯದ್ ರಿಜ್ವಾನ್ ಅಹ್ಮದ್ ಎಂಬುವವರು ಟ್ವಿಟ್ಟರ್‌ನಲ್ಲಿ ಸರಣಿ ಟ್ವಿಟ್ ಮಾಡಿದ್ದು, ಅದರ ಸಾರಾಂಶ ಇಲ್ಲಿದೆ ನೋಡಿ..

Read Full Story

04:27 PM (IST) Jun 20

ಸಿಇಒ ಕಿರುಕುಳಕ್ಕೆ ಮೀಟಿಂಗ್‌ನಲ್ಲೇ ಕುಸಿದು ಬಿದ್ದ ಬೆಂಗಳೂರು ಟೆಕ್ಕಿ ಆಸ್ಪತ್ರೆ ದಾಖಲು

ಪ್ರತಿ ದಿನ 12 ರಿಂದ 14 ಗಂಟೆ ಕೆಲಸ. ವೀಕೆಂಡ್‌ನಲ್ಲೂ ಕೆಲಸ. ತಕ್ಷಣವೇ ಕೆಲಸ ಮುಗಿಸಿಕೊಡುವಂತೆ ಕಿರುಕುಳ. ಮೀಟಿಂಗ್‌ನಲ್ಲಿ ಎಲ್ಲರ ಮುಂದೆ ಕಿರುಚಾಟ. ಪ್ರತಿ ದಿನ ಸಿಇಒ ನೀಡುತ್ತಿದ್ದ ಕಿರುಕುಳಕ್ಕೆ ಬೆಂಗಳೂರು ಟೆಕ್ಕಿ ಆನ್‌ಲೈನ್ ಮೀಟಿಂಗ್‌ನಲ್ಲೇ ಕುಸಿದು ಬಿದ್ದ ಘಟನೆ ನಡೆದಿದೆ.

 

Read Full Story

04:24 PM (IST) Jun 20

RAC, ವೇಟಿಂಗ್​ ಲಿಸ್ಟ್​ ಪ್ರಯಾಣಿಕರಿಗೆ ಗುಡ್​ನ್ಯೂಸ್​ - ರೈಲ್ವೆ ಇಲಾಖೆಯಿಂದ ಭಾರಿ ಬದಲಾವಣೆ

ಜುಲೈ 1ರಿಂದ ತತ್ಕಾಲ್​ ಬುಕಿಂಗ್​ಗೆ ಆಧಾರ್​ ಕಾರ್ಡ್​ ಕಡ್ಡಾಯದ ಜೊತೆಜೊತೆಗೇ ಆರ್​ಎಸಿ ಮತ್ತು ವೇಟಿಂಗ್​ ಲಿಸ್ಟ್​ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಗುಡ್​ ನ್ಯೂಸ್​ ಕೊಟ್ಟಿದೆ. ಏನದು ನೋಡಿ...

 

Read Full Story

04:18 PM (IST) Jun 20

ಪೊಲೀಸರಿಂದ ತಪ್ಪಿಸಿಕೊಳ್ಳಲು ಸೀರೆ, ಬ್ಲೌಸ್ ಧರಿಸಿದ್ದ ಆರೋಪಿ; ಮಹಿಳಾ ವೇಷಧಾರಿ ಯುವಕನ ವಿಡಿಯೋ ವೈರಲ್

ಪೊಲೀಸರಿಂದ ತಪ್ಪಿಸಿಕೊಳ್ಳಲು ಆರೋಪಿಯೊಬ್ಬ ಮಹಿಳೆಯರ ಸೀರೆ ಮತ್ತು ಬ್ಲೌಸ್ ಧರಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಕೊನೆಗೂ ಆತನನ್ನು ಬಂಧಿಸಿದ್ದಾರೆ. ಕಳ್ಳತನ, ಹಲ್ಲೆ, ಬೆದರಿಕೆ ಸೇರಿದಂತೆ ಹಲವು ಅಪರಾಧಗಳಲ್ಲಿ ಈತ ಭಾಗಿಯಾಗಿದ್ದನು.

Read Full Story

04:08 PM (IST) Jun 20

ಮನೇಲಿ ಬೋರ್ ಆದಾಗ ಬೆಂಗಳೂರು ಮೂಲದ ಸ್ಟಾರ್ಟ್‌ ಅಪ್‌ ಸಿಇಒ Gen-Z ಕಿಡ್ಸ್‌ ಜೊತೆ ಸೋಷಿಯಲೈಸ್ ಆಗಿದ್ದು ಹೀಗೆ!

ಓಕ್‌ಕ್ರೆಡಿಟ್‌ನ ಸಿಇಒ ಹರ್ಷ್ ಪೋಖರ್ಣ, ಜೈಪುರದಲ್ಲಿ ಒಂದೂವರೆ ತಿಂಗಳ ವಿಶ್ರಾಂತಿಯ ನಂತರ, ಸಾಮಾಜಿಕ ಪ್ರಯೋಗವೊಂದರಲ್ಲಿ ತೊಡಗಿಕೊಂಡರು. ಇನ್ಸ್ಟಾಗ್ರಾಮ್ ಮೂಲಕ ಅಪರಿಚಿತರೊಂದಿಗೆ ಸಂಪರ್ಕ ಸಾಧಿಸಿ ಅನಿರೀಕ್ಷಿತ ಸಂಬಂಧಗಳನ್ನು ಬೆಳೆಸಿಕೊಂಡರು.
Read Full Story

04:08 PM (IST) Jun 20

ಭಾರತದಲ್ಲಿ ಪ್ರೀತಿಸಲು, ಡೇಟಿಂಗ್ ಮಾಡಲು ಬೆಸ್ಟ್‌, ಕೆಟ್ಟ ನಗರ ಯಾವುದು; ಸರ್ವೇ ಏನು ಹೇಳುತ್ತದೆ?

ಎಷ್ಟೋ ಜನರು ಪ್ರೀತಿ ಸಿಗ್ತಿಲ್ಲ ಅಂತ ಕನವರಿಸುತ್ತಾರೆ. ಭಾರತದಲ್ಲಿ ಯಾವ ನಗರ ಡೇಟ್‌ ಮಾಡಲು ಬೆಸ್ಟ್?‌ ಯಾವ ನಗರ ಡೇಟ್‌ ಮಾಡಲು ಚೆನ್ನಾಗಿಲ್ಲ ಎಂದು ಚರ್ಚೆ ನಡೆಯುತ್ತಿದೆ. ಹೀಗೊಂದು ಪೋಸ್ಟ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.

 

Read Full Story

03:58 PM (IST) Jun 20

ಮತ್ತೆ ಮತ್ತೆ ನೋಡುವಂತೆ ಮಾಡುವ ಮನಸಿಗೆ‌ ಹಿತ ನೀಡುವ ಸಿನಿಮಾಗಳು

ಮನಸಿಗೆ ಹಿತ ನೀಡುವ ಅದೆಷ್ಟೋ ಸಿನಿಮಾಗಳಿವೆ. ಅವುಗಳಲ್ಲಿ ನಿಮ್ಮ ಕುತೂಹಲವನ್ನು ಕೆರಳಿಸಿ, ಕಥೆಯ ಜೊತೆಗೆ ನೀವು ಸಾಗುವಂತಹ ಸುಂದರ ಸಿನಿಮಾಗಳಿವು.

Read Full Story

03:51 PM (IST) Jun 20

ಕ್ಯಾಬ್ ಕಂಪೆನಿಗಳ ಮೋಸದ ಜೊತೆಗೆ ಆಟೋ ಮೀಟರ್‌ ನಲ್ಲೂ ಗೋಲ್‌ ಮಾಲ್‌ - ಬೇಸತ್ತ ಸವಾರರು!

ಬೆಂಗಳೂರಿನಲ್ಲಿ ಆಟೋರಿಕ್ಷಾ ಮೀಟರ್ ಮೋಸದಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಅತಿಯಾದ ದರ, ಮೀಟರ್‌ ತಂತ್ರಗಳು, ಮತ್ತು ಅಸಮರ್ಪಕ ನಿಯಂತ್ರಣಗಳು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿವೆ. ಇದಕ್ಕೆ ಪರಿಹಾರವೇನು?
Read Full Story

More Trending News