Published : Dec 02, 2025, 06:47 AM ISTUpdated : Dec 02, 2025, 11:37 PM IST

Karnataka News Live: Karna Serial - ಮುಚ್ಚಿಟ್ಟ ಪ್ರೀತಿಯ ಸತ್ಯ ನಿತ್ಯಾ ಮುಂದೆ ರಿವೀಲ್​ ಮಾಡುವಷ್ಟರಲ್ಲಿಯೇ ಆಗಬಾರದ್ದು ಆಗೋಯ್ತು!

ಸಾರಾಂಶ

ಬೆಂಗಳೂರು: ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಪ್ರಸಿದ್ಧ ಸುಕ್ಷೇತ್ರವಾದ ಹಾರನಹಳ್ಳಿ ಕೋಡಿ ಮಠಕ್ಕೆ ಗೃಹ ಸಚಿವ ಡಾ। ಜಿ.ಪರಮೇಶ್ವರ್ ಅವರು ಸೋಮವಾರ ಮುಂಜಾನೆ ಅಚಾನಕ್ ಭೇಟಿ ನೀಡಿ ಪೀಠಾಧ್ಯಕ್ಷ ಡಾ। ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಅವರೊಂದಿಗೆ ಸುಮಾರು 1 ಗಂಟೆಗೂ ಹೆಚ್ಚು ಸಮಯ ಮಾತುಕತೆ ನಡೆಸಿದ್ದಾರೆ.

ಸಚಿವರು ಸ್ಥಳೀಯ ಶಾಸಕ ಕೆ.ಎಂ.ಶಿವಲಿಂಗೇಗೌಡ ಸೇರಿದಂತೆ ಯಾವುದೇ ಕಾಂಗ್ರೆಸ್ ಮುಖಂಡರಿಗೂ, ಹಾಗೆಯೇ ತಮ್ಮದೇ ಇಲಾಖೆಯ ಪೊಲೀಸರಿಗೂ ಮಾಹಿತಿ ನೀಡದೆ, ಏಕಾಂಗಿಯಾಗಿ, ಗೌಪ್ಯವಾಗಿ ಮಠಕ್ಕೆ ಭೇಟಿ ನೀಡಿದ್ದಾರೆ. ಇದು ಕುತೂಹಲಕ್ಕೆ ಕಾರಣವಾಗಿದೆ. ‘ಸಚಿವರು ಮಠದ ಭಕ್ತರು, ಹಾಗಾಗಿ ಭೇಟಿ ನೀಡಿದ್ದಾರೆ. ಯಾವುದೇ ರಾಜಕೀಯ ಚರ್ಚೆ ಆಗಿಲ್ಲ’ ಎಂದು ಕೋಡಿಮಠದ ಶ್ರೀಗಳು ಮಾಧ್ಯಮದವರಿಗೆ ಸ್ಪಷ್ಟನೆ ನೀಡಿದ್ದಾರೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಗಟ್ಟಿಯಾಗಿಯೇ ಕುರ್ಚಿ ಮೇಲೆ ಕುಳಿತು, ಅಧಿಕಾರ ಮಾಡುತ್ತಿದ್ದಾರೆ. ಮುಂದೆಯೂ ಸಿಎಂ ಆಗಿಯೇ ಸಿದ್ದರಾಮಯ್ಯ ಇರುತ್ತಾರೆ ಎಂದು ಸಮಾಜ ಕಲ್ಯಾಣ ಸಚಿವ ಡಾ। ಎಚ್.ಸಿ.ಮಹದೇವಪ್ಪ ಸ್ಪಷ್ಟಪಡಿಸಿದರು. ಸರ್ಕಾರ, ಪಕ್ಷದ ಮುಂದೆ ಯಾವುದೇ ಆಲೋಚನೆಗಳೂ ಇಲ್ಲ. ಬದಲಾವಣೆ ಬಗ್ಗೆ ಪಕ್ಷದಲ್ಲಿ ಚರ್ಚೆಯೇ ಇಲ್ಲದಿದ್ದಾಗ ಅಂತೆ ಕಂತೆಗಳ ಬಗ್ಗೆ ಮಾತಾದರೂ ಯಾಕೆ ಎಂದು ಪ್ರಶ್ನಿಸಿದರು.

11:37 PM (IST) Dec 02

Karna Serial - ಮುಚ್ಚಿಟ್ಟ ಪ್ರೀತಿಯ ಸತ್ಯ ನಿತ್ಯಾ ಮುಂದೆ ರಿವೀಲ್​ ಮಾಡುವಷ್ಟರಲ್ಲಿಯೇ ಆಗಬಾರದ್ದು ಆಗೋಯ್ತು!

ನಿತ್ಯಾ ಗರ್ಭಿಣಿ ಎಂಬ ಸತ್ಯವನ್ನು ವೈದ್ಯೆಯಾದ ನಿಧಿ ಪತ್ತೆಹಚ್ಚಲು ಯತ್ನಿಸುತ್ತಾಳೆ. ಇವರಿಬ್ಬರ ನಡುವೆ ಸಿಲುಕಿರುವ ಕರ್ಣ, ನಿತ್ಯಾಳಿಗೆ ತನ್ನ ಜೀವನದ ಸತ್ಯವನ್ನು ಹೇಳಲು ನಿರ್ಧರಿಸುತ್ತಾನೆ, ಆದರೆ ಅವನು ಸತ್ಯ ಹೇಳುವಷ್ಟರಲ್ಲಿ ನಿತ್ಯಾ ಮಲಗಿರುವುದರಿಂದ ಅವನ ಪ್ರಯತ್ನ ವಿಫಲವಾಗುತ್ತದೆ.
Read Full Story

10:49 PM (IST) Dec 02

ಬೆಳೆದ ಬೆಳೆಗಳ ಕಾವಲಿಗೆ ನಿಂತ ಸನ್ನಿ ಸುಂದರಿ, ಯಾದಗಿರಿ ರೈತರ ಪ್ರಯೋಗ ಫುಲ್‌ ಸಕ್ಸಸ್‌!

ಆಂಧ್ರಪ್ರದೇಶ ಮತ್ತು ಕರ್ನಾಟಕದ ರೈತರು ತಮ್ಮ ಉತ್ತಮ ಫಸಲನ್ನು ಕೆಟ್ಟ ದೃಷ್ಟಿಯಿಂದ ರಕ್ಷಿಸಲು ಒಂದು ವಿಶಿಷ್ಟ ಉಪಾಯ ಕಂಡುಕೊಂಡಿದ್ದಾರೆ. ಅವರು ತಮ್ಮ ಹೊಲಗಳಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರ ಪೋಸ್ಟರ್‌ಗಳನ್ನು ಹಾಕುತ್ತಿದ್ದಾರೆ.

Read Full Story

10:32 PM (IST) Dec 02

Lakshmi Nivasa - ಮನೆಬಿಟ್ಟ ಜಾಹ್ನವಿ- ಉಲ್ಟಾ ಹೊಡೆದ ವೀಕ್ಷಕರು; ಅಯ್ಯೋ ಪಾಪ ಅಂತಿದ್ದೋರೇ ಡಿವೋರ್ಸ್​ ಕೊಡಿಸಲು ಮುಂದಾದ್ರು!

'ಲಕ್ಷ್ಮೀ ನಿವಾಸ'ದಲ್ಲಿ ವಿಶ್ವನ ಮನೆಯಿಂದ ಹೊರಬಿದ್ದ ಜಾಹ್ನವಿಗೆ ಸಂಕಷ್ಟ ಎದುರಾಗಿದೆ. ಮಾರುವೇಷದಲ್ಲಿ ಬಂದ ಸೈಕೋ ಪತಿ ಜಯಂತ್ ಆಕೆಯನ್ನು ಹುಡುಕಿದ್ದು, ಅಚ್ಚರಿಯ ಬೆಳವಣಿಗೆಯಲ್ಲಿ, ಇಷ್ಟು ದಿನ ಜಾಹ್ನವಿಯ ಪರ ಇದ್ದ ವೀಕ್ಷಕರು ಇದೀಗ ಆಕೆಯ ವಿರುದ್ಧ ತಿರುಗಿಬಿದ್ದು ಜಯಂತ್ ಪರ ಮಾತನಾಡುತ್ತಿದ್ದಾರೆ.
Read Full Story

09:35 PM (IST) Dec 02

Bigg Boss 12ರ ವಿನ್ನರ್​ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ಜಾಹ್ನವಿ - ಯಾರೂ ಊಹಿಸದ ಟ್ವಿಸ್ಟ್​ ಇದು!

'ಬಿಗ್ ಬಾಸ್ ಕನ್ನಡ ಸೀಸನ್ 12' ರಿಂದ ಎಲಿಮಿನೇಟ್ ಆದ ಜಾಹ್ನವಿ, ಟಾಪ್ 5 ಸ್ಪರ್ಧಿಗಳ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಅಶ್ವಿನಿ ಗೌಡ ಗೆಲ್ಲಬೇಕೆಂಬುದು ತಮ್ಮ ಆಸೆಯಾದರೂ, ಗೆಲ್ಲುವುದೇ ಬೇರೆಯವರು ಎನ್ನುವ ಮೂಲಕ ಅವರ ಹೆಸರು ರಿವೀಲ್​  ಮಾಡಿದ್ದಾರೆ! 

Read Full Story

09:12 PM (IST) Dec 02

Amruthadhaare - ಆಗಬಾರದ್ದೇ ಆಗೋಯ್ತು! ದೇವಾಲಯದಲ್ಲಿ ಜೈದೇವನ ಎದುರೇ ಭೂಮಿ-ಮಲ್ಲಿ - ಮುಂದೇನಾಯ್ತು?

ದೇವಸ್ಥಾನದಲ್ಲಿ ಭೂಮಿಕಾಳ ಸೀರೆಗೆ ಬೆಂಕಿ ಹೊತ್ತಿಕೊಂಡಾಗ ಆಘಾತದಿಂದ ಭಾಗ್ಯಮ್ಮನಿಗೆ ದನಿ ಮರಳಿ ಬರುತ್ತದೆ. ಮತ್ತೊಂದೆಡೆ, ಮಲ್ಲಿಯನ್ನು ಹುಡುಕುತ್ತಿರುವ ಜೈದೇವನು, ಆಕೆ ತನ್ನ ಕಣ್ಣೆದುರೇ ಹಾದು ಹೋದರೂ ಕುಡಿದ ನಶೆಯಲ್ಲಿದ್ದ ರಿಂದ ಕಾಣಿಸಿಲ್ಲ, ಆದರೆ ಭಾಗ್ಯಮ್ಮ ಕಣ್ಣಿಗೆ ಬೀಳ್ತಾಳೆ. ಮುಂದೇನು?

Read Full Story

09:06 PM (IST) Dec 02

ಅಣ್ಣ ಸಂತೋಷ್‌ನ ದುರಾಸೆಗೆ ಕ್ಯಾಕರಿಸಿ ಉಗಿದ ಭಾವನಾ - ಇದಪ್ಪಾ ಸ್ವಾಭಿಮಾನದ ತಿರುಗೇಟು?

ದುರಾಸೆಯ ಅಣ್ಣ ಸಂತೋಷ್‌ನಿಂದಾಗಿ ಭಾವನಾ ಸಂಸಾರದಲ್ಲಿ ಬಿರುಕು ಮೂಡಿದೆ. ಅಣ್ಣನ ಮನೆಯಲ್ಲಿ ಆಶ್ರಯ ಪಡೆದಿದ್ದ ಭಾವನಾಗೆ, ಸಂತೋಷ್ ಬಾಡಿಗೆ ಕೇಳುವ ಮೂಲಕ ಮತ್ತಷ್ಟು ಆಘಾತ ನೀಡಿದ್ದಾನೆ. ಇದರಿಂದ ನೊಂದ ಭಾವನಾ ಅಣ್ಣನ ಮನೆ ಬಿಟ್ಟು ಹೋಗಲು ನಿರ್ಧರಿಸಿದ್ದಾಳೆ.
Read Full Story

08:43 PM (IST) Dec 02

Devil ಚಿತ್ರದಿಂದ ದರ್ಶನ್‌ ಅಕ್ಕನ ಮಗನನ್ನು ಉದ್ದೇಶಪೂರ್ವಕವಾಗಿ ಹೊರಕ್ಕೆ ಇಟ್ವಿ - ಆ ಸತ್ಯದ ಬಗ್ಗೆ ನಿರ್ದೇಶಕ ರಿವೀಲ್​

ರೇಣುಕಾಸ್ವಾಮಿ ಕೇಸ್‌ನಲ್ಲಿ ನಟ ದರ್ಶನ್ ಜೈಲಿನಲ್ಲಿರುವಾಗಲೇ ಅವರ 'ಡೆವಿಲ್' ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಈ ಚಿತ್ರದಿಂದ ದರ್ಶನ್ ಅಕ್ಕನ ಮಗ ಚಂದು ಅವರನ್ನು ಹೊರಗಿಟ್ಟಿರುವ ಕಾರಣವನ್ನು ನಿರ್ದೇಶಕ ಪ್ರಕಾಶ್ ಸ್ಪಷ್ಟಪಡಿಸಿದ್ದಾರೆ. ಅವರು ಹೇಳಿದ್ದೇನು? 

Read Full Story

08:40 PM (IST) Dec 02

ಬೆಂಗಳೂರು ಕೆಂಪೇಗೌಡ ಏರ್ಪೋರ್ಟ್‌ನಿಂದ ತೆರಳಬೇಕಿದ್ದ 22 ವಿಮಾನ ಹಾರಾಟ ಸ್ಥಗಿತ

ಬೆಂಗಳೂರು ಕೆಂಪೇಗೌಡ ಏರ್ಪೋರ್ಟ್‌ನಿಂದ ತೆರಳಬೇಕಿದ್ದ 22 ವಿಮಾನ ಹಾರಾಟ ಸ್ಥಗಿತ, ಏರ್ ಬಸ್ ವಿಮಾನಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ವಿವಿದೆಡೆ ತೆರಳಬೇಕಿದ್ದ ಪ್ರಯಾಣಿಕರು ಪರದಾಡುವಂತಾಗಿದೆ.

Read Full Story

08:12 PM (IST) Dec 02

ರಸ್ತೆ ಗುಂಡಿ ಸಮಸ್ಯೆಗೆ ಡ್ರೈನೆಜ್‌ ಲೇಯರ್‌ ತಂತ್ರಜ್ಞಾನ ಬಳಕೆ, ಹೊಸ ತಂತ್ರಜ್ಞಾನದ ಉಪಯೋಗವೇನು?

ಅತಿಯಾದ ಮಳೆಯಿಂದಾಗಿ ಕಾರ್ಕಳ ತಾಲೂಕಿನಲ್ಲಿ ಹದಗೆಟ್ಟ ರಸ್ತೆಗಳನ್ನು ದುರಸ್ತಿಗೊಳಿಸಲು ಲೋಕೋಪಯೋಗಿ ಇಲಾಖೆಯು 'ಡ್ರೈನೆಜ್ ಲೇಯರ್' ಎಂಬ ಹೊಸ ತಂತ್ರಜ್ಞಾನ ಅಳವಡಿಸಿಕೊಂಡಿದೆ. ಈ ವಿಧಾನವು ರಸ್ತೆಯ ಕೆಳಗೆ ನೀರು ನಿಲ್ಲುವುದನ್ನು ತಡೆದು, ಡಾಂಬರು ಪದರದ ಬಾಳಿಕೆಯನ್ನು ಹೆಚ್ಚಿಸುತ್ತದೆ.

Read Full Story

08:07 PM (IST) Dec 02

ಹೋಟೆಲ್‌ ರಾಜ್‌ಕಮಲ್‌ ಕೆಡವಿ ಕೊಳಗೇರಿ ನಿವಾಸಿಗೆ ವಸತಿ ಕಲ್ಪಿಸಿ, ಸಿದ್ದರಾಮಯ್ಯಗೆ ಶಾಂತಿ ಕಾರ್ಯಕರ್ತ ಇಪಿ ಮೆನನ್‌ ಮನವಿ

ಶಾಂತಿ ಕಾರ್ಯಕರ್ತ ಇಪಿ ಮೆನನ್‌, ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿಯ ಪಾಳುಬಿದ್ದ ಹೋಟೆಲ್‌ ರಾಜ್‌ಕಮಲ್‌ ಜಾಗವನ್ನು ನಿರಾಶ್ರಿತರಿಗೆ ವಸತಿ ಕಲ್ಪಿಸಲು ಬಳಸುವಂತೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ. ಈ ಮೂಲಕ ಬೆಂಗಳೂರನ್ನು ಕೊಳಚೆ ಮುಕ್ತ ನಗರವನ್ನಾಗಿ ಮಾಡುವಂತೆ ಅವರು ಮನವಿ ಮಾಡಿದ್ದಾರೆ.
Read Full Story

07:58 PM (IST) Dec 02

ಪುತ್ತೂರಿಗೆ ಮೆಡಿಕಲ್ ಕಾಲೇಜು ಅಧಿಕೃತ ಆದೇಶ, ದೇವಸ್ಥಾನ, ಮಸೀದಿ, ಚರ್ಚ್‌ಗಳಲ್ಲಿ ಶಾಸಕ ಅಶೋಕ್ ರೈ ವಿಶೇಷ ಪ್ರಾರ್ಥನೆ

ಶಾಸಕ ಅಶೋಕ್ ಕುಮಾರ್ ರೈ ಅವರ ಪ್ರಯತ್ನದ ಫಲವಾಗಿ, ಪುತ್ತೂರಿನಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯಡಿ 300 ಹಾಸಿಗೆಗಳ ಹೊಸ ಆಸ್ಪತ್ರೆ ನಿರ್ಮಾಣಕ್ಕೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ. ಬನ್ನೂರಿನಲ್ಲಿ ನಿರ್ಮಾಣವಾಗಲಿರುವ ಈ ಬೃಹತ್ ಮೆಡಿಕಲ್ ಕಾಲೇಜು ಯೋಜನೆಯು ಸಾವಿರಾರು ಉದ್ಯೋಗ ಸೃಷ್ಟಿಸುವ ನಿರೀಕ್ಷೆಯಿದೆ.
Read Full Story

07:17 PM (IST) Dec 02

ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ

ಏಷ್ಯನ್‌ ಅಭಿವೃದ್ಧಿ ಬ್ಯಾಂಕ್ ಮತ್ತು ಕೆಕೆಆರ್‌ಡಿಬಿ ನೆರವಿನೊಂದಿಗೆ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆಗಳನ್ನು ಆರಂಭಿಸಲಿದೆ. ಈ ಮೂಲಕ, ಸರ್ಕಾರಿ ಶಾಲೆಗಳಲ್ಲಿ ಕುಸಿಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು  ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಆಂಗ್ಲ ಮಾಧ್ಯಮ ಶಿಕ್ಷಣ ನೀಡಲು ಉದ್ದೇಶಿಸಲಾಗಿದೆ.

Read Full Story

06:46 PM (IST) Dec 02

ಬೆಳಗಾವಿ ಎಟಿಎಂ ಯಂತ್ರ ಕದ್ದೊಯ್ದರೂ ಕಳ್ಳರ ಕೈಗೆ ಸಿಗಲಿಲ್ಲ ಹಣ! ಲಾಕರ್ ತೆಗೆಲಾಗದೇ ಬೀಸಾಡಿ ಹೋದ ಗ್ಯಾಂಗ್!

ಬೆಳಗಾವಿಯಲ್ಲಿ, ಕಳ್ಳರು ತಳ್ಳುಗಾಡಿ ಬಳಸಿ ಇಂಡಿಕ್ಯಾಶ್ ಎಟಿಎಂ ಯಂತ್ರವನ್ನೇ ಕದ್ದೊಯ್ದಿದ್ದಾರೆ. ಆದರೆ, ಗ್ಯಾಸ್ ಕಟ್ಟರ್‌ನಿಂದಲೂ ಅದನ್ನು ತೆರೆಯಲು ವಿಫಲರಾಗಿ, ಹಣ ದೋಚಲಾಗದೆ ಯಂತ್ರವನ್ನು ರಸ್ತೆಬದಿ ಎಸೆದು ಪರಾರಿಯಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Read Full Story

06:43 PM (IST) Dec 02

ಕ್ಯಾನ್ಸರ್ ಶಸ್ತ್ರಚಿಕಿತ್ಸೆಯಲ್ಲಿ ಹೊಸ ಮೈಲಿಗಲ್ಲಿನತ್ತ ಮಿಮ್ಸ್ ಹೆಜ್ಜೆ, ನೈಜ ಸಮಯದಲ್ಲಿ ಗುರುತಿಸುವ ಸಂಶೋಧನೆ ಆರಂಭ!

ಮಂಡ್ಯ ಮಿಮ್ಸ್  ಕ್ಯಾನ್ಸರ್ ಶಸ್ತ್ರಚಿಕಿತ್ಸೆಯ ವೇಳೆ ಉಳಿಯುವ ಕ್ಯಾನ್ಸರ್ ಅವಶೇಷವನ್ನು ನೈಜ ಸಮಯದಲ್ಲಿ ಗುರುತಿಸುವ ಸಂಶೋಧನೆ ಆರಂಭಿಸಿವೆ. ಈ ತಂತ್ರಜ್ಞಾನವು ಎಐ ಮತ್ತು ಫ್ಲೊರೆಸನ್ಸ್ ಇಮೇಜಿಂಗ್ ಬಳಸಿ ಶಸ್ತ್ರಚಿಕಿತ್ಸೆಯ ನಿಖರತೆಯನ್ನು ಹೆಚ್ಚಿಸಿ, ಚಿಕಿತ್ಸಾ ವೆಚ್ಚವನ್ನು ಕಡಿಮೆ ಮಾಡುವ ಗುರಿ ಹೊಂದಿದೆ.

Read Full Story

06:17 PM (IST) Dec 02

ಬೆಂಗಳೂರು ಏರ್‌ಪೋರ್ಟ್, ಶಾಪಿಂಗ್ ಮಾಲ್‌ಗಳಿಗೆ 'ಜೈಷ್-ಇ-ಮೊಹಮ್ಮದ್' ಹೆಸರಲ್ಲಿ ಬಾಂಬ್ ಬೆದರಿಕೆ ಇ-ಮೇಲ್

ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ 'ಜೈಷ್-ಇ-ಮೊಹಮ್ಮದ್' ಹೆಸರಿನಲ್ಲಿ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ಈ ಸಂದೇಶದಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣ ಮತ್ತು ಪ್ರಮುಖ ಮಾಲ್‌ಗಳನ್ನು ಗುರಿಯಾಗಿಸಲಾಗಿತ್ತು. 

Read Full Story

06:06 PM (IST) Dec 02

ಪುತ್ತೂರಿನಲ್ಲಿ ಮತ್ತೆ ಬಿಜೆಪಿ vs ಪುತ್ತಿಲ ಪರಿವಾರದ ಜಟಾಪಟಿ! ಮಹಾಲಿಂಗೇಶ್ವರನ ಮೊರೆ ಹೋದ ಬಿಜೆಪಿ ಉಪಾಧ್ಯಕ್ಷ!

ಪುತ್ತೂರಿನಲ್ಲಿ ಬಿಜೆಪಿ ಮತ್ತು ಪುತ್ತಿಲ ಪರಿವಾರದ ನಡುವಿನ ಸಂಘರ್ಷ ತಾರಕಕ್ಕೇರಿದೆ. ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಅವರನ್ನು ಪುತ್ತಿಲ ಪರಿವಾರದ ಕಾರ್ಯಕರ್ತರು ತಡೆದು ಅವಮಾನಿಸಿದ್ದಾರೆ ಎಂದು ಆರೋಪಿಸಲಾಗಿದೆ. 

Read Full Story

05:11 PM (IST) Dec 02

Clove tea Benefits - ಟೀಗೆ ಲವಂಗ ಬೆರೆಸಿ ಕುಡಿದ್ರೆ ಪ್ರಯೋಜನ ನೂರಾರು, ಅಷ್ಟಕ್ಕೂ ಇದನ್ನು ತಯಾರಿಸೋದು ಹೇಗೆ?

ಲವಂಗ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅದು ಸಾಕಷ್ಟು ಔಷಧಿ ಗುಣವನ್ನು ಹೊಂದಿದೆ. ಚಳಿಗಾಲದಲ್ಲಿ ಲವಂಗದ ಟೀ ಕುಡಿದ್ರೆ ರೋಗನಿರೋಧಕ ಶಕ್ತಿ ಹೆಚ್ಚಾಗೋದಲ್ದೆ ಮತ್ತೇನೆಲ್ಲ ಲಾಭವಿದೆ, ಅದನ್ನು ತಯಾರಿಸೋದು ಹೇಗೆ ಎಂಬ ಮಾಹಿತಿ ಇಲ್ಲಿದೆ.

 

Read Full Story

04:48 PM (IST) Dec 02

ಮಲೆನಾಡಲ್ಲಿ ಮತ್ತೆ ಆತಂಕ - ಸಮಯಕ್ಕೂ ಮೊದಲೇ ಕಾಣಿಸಿಕೊಂಡ ಕೆಎಫ್‌ಡಿ ಸೋಂಕು, 50 ವರ್ಷದ ಮಹಿಳೆಯಲ್ಲಿ ದೃಢ!

ಶಿವಮೊಗ್ಗ ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ಮಂಗನ ಕಾಯಿಲೆ (ಕೆಎಫ್‌ಡಿ) ಅಸಾಮಾನ್ಯವಾಗಿ ನವೆಂಬರ್ ತಿಂಗಳಲ್ಲೇ ಕಾಣಿಸಿಕೊಂಡಿದೆ. ಹೊಸನಗರ ತಾಲೂಕಿನ ಮಹಿಳೆಯೊಬ್ಬರಲ್ಲಿ ಸೋಂಕು ದೃಢಪಟ್ಟಿದ್ದು, ಆರೋಗ್ಯ ಇಲಾಖೆಯು ಮುನ್ನೆಚ್ಚರಿಕಾ ಕ್ರಮಗಳನ್ನು ತೀವ್ರಗೊಳಿಸಿ, ಗ್ರಾಮಗಳಲ್ಲಿ ಜಾಗೃತಿ ಮೂಡಿಸುತ್ತಿದೆ.
Read Full Story

04:29 PM (IST) Dec 02

ದರ್ಶನ್‌ನನ್ನು ಲಾಕಪ್ ಡೆತ್ ಮಾಡಿ, ಹಣ ಕೊಡಲುಬಂದ ಪೊಲೀಸರು; ನ್ಯಾಯಾಂಗ ತನಿಖೆಗೆ ಪತ್ನಿ ಅಶ್ವಿನಿ ಆಗ್ರಹ!

ಬೆಂಗಳೂರಿನ ರೌಡಿಶೀಟರ್ ದರ್ಶನ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ತಮ್ಮ ಪತಿಯ ಸಾವಿಗೆ ವಿವೇಕನಗರ ಪೊಲೀಸರ ಅನಧಿಕೃತ ಕಸ್ಟಡಿ ಮತ್ತು ಹಲ್ಲೆಯೇ ಕಾರಣ ಎಂದು ಪತ್ನಿ ಅಶ್ವಿನಿ ಆರೋಪಿಸಿದ್ದಾರೆ. ಸಿಐಡಿ ತನಿಖೆಯ ಮೇಲೆ ನಂಬಿಕೆಯಿಲ್ಲದ ಅವರು, ಪ್ರಕರಣದ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದಾರೆ.
Read Full Story

04:14 PM (IST) Dec 02

ಫೇಕ್‌ ಬೆಸ್ಕಾಂ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿ 14.60 ಲಕ್ಷ ಕಳೆದುಕೊಂಡ ಬೆಂಗಳೂರು ಮಹಿಳೆ!

ಬೆಂಗಳೂರಿನ ವಿದ್ಯಾರಣ್ಯಪುರದ 60 ವರ್ಷದ ಮಹಿಳೆಯೊಬ್ಬರು, ಬೆಸ್ಕಾಮ್ ಅಧಿಕಾರಿ ಎಂದು ಹೇಳಿಕೊಂಡ ಸೈಬರ್ ವಂಚಕನ ಮಾತನ್ನು ನಂಬಿ ನಕಲಿ ಆ್ಯಪ್ ಡೌನ್‌ಲೋಡ್ ಮಾಡಿದ್ದಾರೆ. ಬಿಲ್ ಅಪ್‌ಡೇಟ್‌ಗಾಗಿ 12 ರೂ. ಪಾವತಿಸಲು ಹೋಗಿ,14.60 ಲಕ್ಷ ರೂ. ಕಳೆದುಕೊಂಡಿದ್ದಾರೆ.

Read Full Story

03:43 PM (IST) Dec 02

ಆಕೆಗೆ ಗಂಡನಿಲ್ಲ, ಈತನಿಗೆ ಹೆಂಡತಿ ಬೇಕಿಲ್ಲ; ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ನಡೆದೇ ಹೋಯ್ತು ದುರಂತ!

ಬೆಂಗಳೂರಿನಲ್ಲಿ ದಾರುಣ ಘಟನೆ! ನಡತೆಯ ಮೇಲಿನ ಅನುಮಾನದಿಂದ ಲಿವ್-ಇನ್ ಸಂಗಾತಿಯನ್ನು ಕೊಲೆಗೈದು, ಪ್ರಿಯಕರ ಆತ್ಮಹ*ತ್ಯೆಗೆ ಶರಣಾಗಿದ್ದಾನೆ. ಘಟನೆಯ ಸಂಪೂರ್ಣ ವಿವರ ತಿಳಿಯಲು ಓದಿ.

Read Full Story

03:16 PM (IST) Dec 02

ಮಂಗಳೂರಲ್ಲಿ ಸಿಎಂ ಸಿದ್ದರಾಮಯ್ಯ-ಕೆಸಿ ವೇಣುಗೋಪಾಲ್ ಭೇಟಿ, ತೀವ್ರ ಕುತೂಹಲ ಕೆರಳಿಸಿದ ದಿಗ್ಗಜರ ಭೇಟಿ!

 ಸಿಎಂ ಸಿದ್ದರಾಮಯ್ಯ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮಂಗಳೂರಿನಲ್ಲಿ ಭೇಟಿಯಾಗಲಿದ್ದಾರೆ. ರಾಜ್ಯದಲ್ಲಿ ಪವರ್ ಶೇರಿಂಗ್ ಮತ್ತು ಸಿಎಂ ಬದಲಾವಣೆಯ ಚರ್ಚೆಗಳು ತೀವ್ರಗೊಂಡಿರುವಾಗ, ಈ ಮುಖಾಮುಖಿಯು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

Read Full Story

03:09 PM (IST) Dec 02

ಹಿಟ್ಟಿನ ಗಿರಣಿಗೆ ಹೋದ 13 ವರ್ಷದ ಬಾಲಕಿಯನ್ನ ಕಬ್ಬಿನ ಗದ್ದೆಗೆ ಎಳೆದೊಯ್ದು ಸಾಮೂಹಿಕ ಅತ್ಯಾ*ಚಾರ!

ಬೆಳಗಾವಿ ಜಿಲ್ಲೆಯ ಮುರಗೋಡ ಠಾಣಾ ವ್ಯಾಪ್ತಿಯಲ್ಲಿ, 13 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಇಬ್ಬರು ಕಾಮುಕರು ಸಾಮೂಹಿಕ ಅತ್ಯಾ*ಚಾರ ಎಸಗಿದ್ದಾರೆ. ಆರೋಪಿಗಳ ಜೀವ ಬೆದರಿಕೆಯಿಂದಾಗಿ 9 ದಿನಗಳ ನಂತರ ದೂರು ದಾಖಲಾಗಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು.

Read Full Story

02:46 PM (IST) Dec 02

ಬೆಂಗಳೂರು ಏರ್ಪೋರ್ಟಲ್ಲಿ ಡಿ.8ರಿಂದ ಹೊಸ ಪಿಕಪ್‌ ನಿಯಮ - ಕೇವಲ 8 ನಿಮಿಷ ಉಚಿತ, ಅವಧಿ ಮೀರಿದರೆ ದಂಡ ಖಚಿತ!

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಡಿಸೆಂಬರ್ 8, 2025 ರಿಂದ ಹೊಸ ಪಿಕಪ್ ನಿಯಮ ಜಾರಿಯಾಗಲಿದೆ. ಈ ನಿಯಮದ ಪ್ರಕಾರ, ಖಾಸಗಿ ವಾಹನಗಳಿಗೆ ಪಿಕಪ್ ವಲಯದಲ್ಲಿ ಕೇವಲ 8 ನಿಮಿಷಗಳ ಉಚಿತ ಕಾಯುವ ಅವಧಿ ನೀಡಲಾಗಿದೆ.

Read Full Story

02:10 PM (IST) Dec 02

Ind vs SA 2nd ODI - ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಹೀಗಿದೆ!

ರಾಯ್‌ಪುರದಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳಲು ಟೀಂ ಇಂಡಿಯಾ ಸಜ್ಜಾಗಿದೆ. ತಂಡದ ಬ್ಯಾಟಿಂಗ್ ರೋಹಿತ್ ಮತ್ತು ಕೊಹ್ಲಿ ಮೇಲೆ ಹೆಚ್ಚು ಅವಲಂಬಿತವಾಗಿದ್ದು, ಬೌಲಿಂಗ್ ವಿಭಾಗದ ಕಳಪೆ ಪ್ರದರ್ಶನವು ತಂಡಕ್ಕೆ ದೊಡ್ಡ ಚಿಂತೆಯಾಗಿದೆ.
Read Full Story

01:05 PM (IST) Dec 02

ಬೆಳಗಾವಿಯಲ್ಲಿ ಎಟಿಎಂ ಬೂತ್ ಉಂಟು, ಬಾಕ್ಸ್ ಇಲ್ಲ; ಕಳ್ಳರ ರಾಬರಿ ಐಡಿಯಾ ನೋಡಿ, ಪೊಲೀಸರೇ ಗಾಬರಿ!

ಬೆಳಗಾವಿಯ ಹೊಸ ವಂಟಮೂರಿ ಗ್ರಾಮದಲ್ಲಿ ನಡೆದ ವಿಚಿತ್ರ ಎಟಿಎಂ ಕಳ್ಳತನ! ಖದೀಮರು ತಳ್ಳು ಗಾಡಿಯಲ್ಲಿ ಸಂಪೂರ್ಣ ಮಷಿನ್ ಹೊತ್ತೊಯ್ದರು. ಪೊಲೀಸರನ್ನೇ ದಂಗಾಗಿಸಿದ ಈ ಘಟನೆಯ ವಿವರ ತಿಳಿಯಲು ಕ್ಲಿಕ್ ಮಾಡಿ.

Read Full Story

12:56 PM (IST) Dec 02

ಬಸ್ ಹತ್ತೋ ನೆಪದಲ್ಲಿ ಮೊಬೈಲ್ ಎಗರಿಸುತ್ತಿದ್ದ ಕಳ್ಳ ಸಹೋದರರರು ಅರೆಸ್ಟ್, ಒಂದೇ ತಾಯಿ ಮಕ್ಕಳು, ಒಟ್ಟಿಗೆ ಕಳ್ಳತನ, ಜೊತೆಗೇ ಜೈಲು!

Kengeri police arrest brothers: ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಪ್ರಯಾಣಿಕರ ಮೊಬೈಲ್ ಕದಿಯುತ್ತಿದ್ದ ಅಣ್ಣತಮ್ಮಂದಿರನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಬಸ್ ಹತ್ತುವ ವೇಳೆ ನೂಕುನುಗ್ಗಲು ಸೃಷ್ಟಿಸಿ ಮೊಬೈಲ್ ಕದ್ದು, ನಂತರ ಮಾಲೀಕರ ದಿಕ್ಕು ತಪ್ಪಿಸಿ ಪರಾರಿಯಾಗುತ್ತಿದ್ದರು.

Read Full Story

12:48 PM (IST) Dec 02

Cartier ವಾಚ್ ಕಟ್ಟಿ ಒಗ್ಗಟ್ಟು ಪ್ರದರ್ಶಿಸಿದ್ರಾ ಸಿಎಂ-ಡಿಸಿಎಂ? ಕಂಪನಿ ಪ್ರಕಾರ ಇದ್ರ ಬೆಲೆ 43 ಲಕ್ಷ ರೂ

Cartier ವಾಚ್ ಕಟ್ಟಿ ಒಗ್ಗಟ್ಟು ಪ್ರದರ್ಶಿಸಿದ್ರಾ ಸಿಎಂ-ಡಿಸಿಎಂ? ಕಂಪನಿ ಪ್ರಕಾರ ಇದ್ರ ಬೆಲೆ 43 ಲಕ್ಷ ರೂ, ಬ್ರೇಕ್ ಫಾಸ್ಟ್ ಮೀಟಿಂಗ್ ವೇಳೆ ಉಭಯ ನಾಯಕರು ಒಂದೇ ರೀತಿ ವಾಚ್ ಕಟ್ಟಿ ಮಾಧ್ಯಮ ಮುಂದೆ ಪ್ರತ್ಯಕ್ಷರಾಗಿದ್ದಾರೆ. ಆದರೆ ಇದೀಗ ಇದರ ಬೆಲೆ ಭಾರಿ ಚರ್ಚೆಗೆ ಗ್ರಾಸವಾಗಿದೆ.

Read Full Story

12:47 PM (IST) Dec 02

ನಟ ದರ್ಶನ್ ಇಲ್ಲದೆ 'ಡೆವಿಲ್' ತೆರೆಗೆ ಬರಲು ಕ್ಷಣಗಣನೆ, ಪ್ರೆಸ್‌ಮೀಟ್‌ನಲ್ಲಿ ಕಲಾವಿದರ ಕಣ್ಣೀರು!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ದಿ ಡೆವಿಲ್' ಚಿತ್ರವು ಡಿಸೆಂಬರ್ 11 ರಂದು ಬಿಡುಗಡೆಯಾಗಲಿದೆ. ದರ್ಶನ್ ಅನುಪಸ್ಥಿತಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಸಹನಟರೊಬ್ಬರು ಕಣ್ಣೀರಿಟ್ಟಿದ್ದು, ಚಿತ್ರತಂಡವು ಬಿಡುಗಡೆಗೆ ಭರ್ಜರಿ ಸಿದ್ಧತೆ ನಡೆಸಿದೆ. ಚಿತ್ರದ ಟ್ರೈಲರ್ ಡಿ.5 ರಂದು ಬಿಡುಗಡೆಯಾಗಲಿದೆ.

Read Full Story

12:41 PM (IST) Dec 02

ದೈವಕ್ಕೆ ಅವಮಾನ ಆರೋಪ - ಹುಚ್ಚು ವರ್ತನೆಗೆ ಕ್ಷಮೆ ಕೇಳಿದ ರಣ್‌ವೀರ್ ಸಿಂಗ್

ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ 'ಕಾಂತಾರ' ಚಿತ್ರದ ದೈವವನ್ನು 'ದೆವ್ವ' ಎಂದು ಕರೆದು ನಟ ರಣ್‌ವೀರ್ ಸಿಂಗ್ ವಿವಾದ ಸೃಷ್ಟಿಸಿದ್ದರು. ರಣ್‌ವೀರ್ ಸೋಶಿಯಲ್ ಮೀಡಿಯಾ ಮೂಲಕ ಸ್ಪಷ್ಟನೆ ನೀಡಿ, ಭಾವನೆಗಳಿಗೆ ನೋವಾಗಿದ್ದರೆ ಕ್ಷಮೆಯಾಚಿಸಿದ್ದಾರೆ.

Read Full Story

12:24 PM (IST) Dec 02

ಮಾಜಿ ಸಿಎಂ ಯಡಿಯೂರಪ್ಪಗೆ ರಿಲೀಫ್; ಪೋಕ್ಸೋ ಫಾಸ್ಟ್‌ ಕೋರ್ಟ್‌ ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್‌ ತಡೆ

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಂಗಳೂರಿನ ಫಾಸ್ಟ್‌ ಟ್ರ್ಯಾಕ್ ಕೋರ್ಟ್ ವಿಚಾರಣೆಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಯಡಿಯೂರಪ್ಪ ಪರ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.

Read Full Story

12:09 PM (IST) Dec 02

ಪವರ್ ಪಾಯಿಂಟ್ - 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್

ಈ ಲೇಖನವು ಎಚ್‌1ಬಿ ವೀಸಾ, ಮುಕ್ತ ವ್ಯಾಪಾರ ಮತ್ತು ಕೃತಕ ಬುದ್ಧಿಮತ್ತೆಯ (ಎಐ) ಪ್ರಭಾವವ ಚರ್ಚಿಸುತ್ತದೆ. ಎಐ ಮತ್ತು ರೊಬೊಟಿಕ್ಸ್‌ನಿಂದಾಗಿ ಮುಂದಿನ 20 ವರ್ಷಗಳಲ್ಲಿ ಕೆಲಸ ಮಾಡುವುದು ಐಚ್ಛಿಕವಾಗಬಹುದು ಎಂದು ವಿಶ್ಲೇಷಿಸಲಾಗಿದ್ದು, ಯುವ ಉದ್ಯಮಿಗಳು ಸಮಾಜಕ್ಕೆ ಹೆಚ್ಚು ಕೊಡುಗೆ ನೀಡಬೇಕೆಂಬ ಸಂದೇಶವಿದೆ..

Read Full Story

12:05 PM (IST) Dec 02

Bigg Boss Kannada 12 - ಗಿಲ್ಲಿ ನಟನ ಆಟದ ವೈಖರಿ ಅಸಲಿಯೋ? ನಕಲಿಯೋ? ಗೌರವ್ ಶೆಟ್ಟಿ ಮಾತು

ಬಿಗ್‌ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಗಿಲ್ಲಿ ನಟ ಅವರ ಆಟದ ಬಗ್ಗೆ ನಟ ಗೌರವ್ ಶೆಟ್ಟಿ ಮತ್ತು ಶಿಶಿರ್ ಮಾತನಾಡಿದ್ದಾರೆ  ಗಿಲ್ಲಿ ಆಟವನ್ನು 'ಒನ್‌ಮ್ಯಾನ್ ಶೋ' ಎಂದು ಬಣ್ಣಿಸಿದ್ದು, ಅವರ ವಿಶೇಷ ಗುಣವನ್ನು ಶ್ಲಾಘಿಸಿದ್ದಾರೆ.

Read Full Story

11:58 AM (IST) Dec 02

ರಸ್ತೆಗುಂಡಿ ಭಾಗ್ಯಕ್ಕೆ 558 ಬಲಿ - ಬ್ರೇಕ್ ಫಾಸ್ಟ್ ಮೀಟಿಂಗ್‌ನಲ್ಲೇ ಮುಳುಗಿದ ಸರ್ಕಾರಕ್ಕೆ ಆರ್. ಅಶೋಕ್ ಛೀಮಾರಿ!

ವಿಪಕ್ಷದ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದ 5 ಮಹಾನಗರಗಳಲ್ಲಿ ರಸ್ತೆಗುಂಡಿಗಳಿಂದ 558 ಸಾವುಗಳು ಸಂಭವಿಸಿರುವುದನ್ನು ಮತ್ತು ರೈತರಿಗಾಗಿ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆಯುವಲ್ಲಿ ವಿಫಲತೆಯನ್ನು ಖಂಡಿಸಿದ್ದಾರೆ.

Read Full Story

11:46 AM (IST) Dec 02

ಶ್ರೀರಂಗಪಟ್ಟಣ - ನಾಳೆ ಹನುಮ ಮಾಲಾಧಾರಿಗಳ ಬೃಹತ್ ಸಂಕೀರ್ತನಾ ಯಾತ್ರೆ, ಟಿಪ್ಪು ಮಸೀದಿ ಸುತ್ತ ಬಿಗಿ ಭದ್ರತೆ, 100 ಕ್ಕೂ ಹೆಚ್ಚು ಸಿಸಿ ಕ್ಯಾಮರಾ ಕಣ್ಗಾವಲು!

ಶ್ರೀರಂಗಪಟ್ಟಣದಲ್ಲಿ ನಡೆಯಲಿರುವ ಹನುಮ ಮಾಲಾ ಸಂಕೀರ್ತನಾ ಯಾತ್ರೆಗೆ ಪಟ್ಟಣ ಸಜ್ಜಾಗಿದೆ. ಮೂಡಲಬಾಗಿಲು ಆಂಜನೇಯ ದೇಗುಲ ಪುನರ್ ಪ್ರತಿಷ್ಠಾಪನೆಗಾಗಿ ನಡೆಯುತ್ತಿರುವ ಈ ಯಾತ್ರೆಯ ಹಿನ್ನೆಲೆ, ಯಾವುದೇ ಅಹಿತಕರ ಘಟನೆ ನಡೆಯದಂತೆ ಪಟ್ಟಣದಾದ್ಯಂತ, ವಿಶೇಷವಾಗಿ ಜಾಮೀಯಾ ಮಸೀದಿ ಸುತ್ತಲೂ ಬಿಗಿ ಪೊಲೀಸ್ ಭದ್ರತೆ.

Read Full Story

11:38 AM (IST) Dec 02

ಗಗನಕ್ಕೇರಿದ ಟೊಮೆಟೊ ದರ, ಕೋಲಾರದ ಗೂದೆ ಹಣ್ಣಿಗೆ ದೇಶದಾದ್ಯಂತ ಇನ್ನಿಲ್ಲದ ಬೇಡಿಕೆ!

ರಾಜ್ಯದಲ್ಲಿ ಟೊಮೆಟೊ ಬೆಲೆ ಕಳೆದ 15 ದಿನಗಳಲ್ಲಿ ಕೆಜಿಗೆ ₹60-₹80ಕ್ಕೆ ಏರಿಕೆಯಾಗಿದೆ. ಹವಾಮಾನ ವೈಪರೀತ್ಯ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದ್ದು, ಕೋಲಾರ ಟೊಮೆಟೊಗೆ ದೇಶಾದ್ಯಂತ ಬೇಡಿಕೆ ಹೆಚ್ಚಾಗಿದೆ. ಈ ಪರಿಸ್ಥಿತಿ ಇನ್ನೂ ಒಂದೂವರೆ ತಿಂಗಳು ಮುಂದುವರಿಯುವ ಸಾಧ್ಯತೆಯಿದೆ.

Read Full Story

11:11 AM (IST) Dec 02

ಅನುಮಾನಾಸ್ಪದ ಸಾವು - ಕರ್ತವ್ಯಕ್ಕೆ ಗೈರು ಹಾಜರಾಗಿದ್ದ ಹೆಡ್ ಕಾನ್ಸ್‌ಟೇಬಲ್ ಶವ ಕೆರೆಯಲ್ಲಿ ಪತ್ತೆ!

ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಲಕ್ಷ್ಮಣ್ ಅವರ ಮೃತದೇಹ ಕೆರೆಯಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿದೆ. ಕರ್ತವ್ಯಕ್ಕೆ ಗೈರಾಗಿದ್ದ ಅವರ ಬೈಕ್ ಕೆರೆಯ ಬಳಿ ಪತ್ತೆಯಾಗಿದ್ದು, ಪೊಲೀಸರು ಸಾವಿನ ಕಾರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
Read Full Story

10:47 AM (IST) Dec 02

ಎಂಟರ್‌ಪ್ರೆನಾರಿ ಮೇಳ 2.0 - ಬೆಂಗಳೂರಲ್ಲಿ 70+ ಮಹಿಳಾ ಉದ್ಯಮಿಗಳ ಕನಸುಗಳ ಅನಾವರಣ, 2 ದಿನ ನಾರಿಶಕ್ತಿಯ ಸಂಭ್ರಮ!

ಬೆಂಗಳೂರು ಮೊದಲ ಬಾರಿಗೆ ಎಂಟರ್‌ಪ್ರೆನಾರಿ ಮೇಳ 2.0  ಆಯೋಜಿಸುತ್ತಿದೆ. ಆಸ್ಪೈರ್ ಫಾರ್ ಹರ್ ಮತ್ತು ಪ್ರಾಜೆಕ್ಟ್ ನವೇಲಿ ಸಹಭಾಗಿತ್ವದಲ್ಲಿ ನಡೆಯುವ ಈ ಕಾರ್ಯಕ್ರಮ, 70ಕ್ಕೂ ಹೆಚ್ಚು ಮಹಿಳa ನೇತೃತ್ವದ ಬ್ರ್ಯಾಂಡ್‌ಗಳಿಗೆ ವೇದಿಕೆ ಕಲ್ಪಿಸಲಿದ್ದು, ಮಹಿಳಾ ಉದ್ಯಮಶೀಲತೆ ಆರ್ಥಿಕ ಸಬಲೀಕರಣ ಸಂಭ್ರಮಿಸಲಿದೆ..

Read Full Story

10:27 AM (IST) Dec 02

ಚಾಮರಾಜನಗರ - ಕೊವಿಡ್ ವೇಳೆ ಆಕ್ಷಿಜನ್ ದುರಂತ; ಸಿಎಂಗೆ ಅಂತಿಮ ವರದಿ ಸಲ್ಲಿಕೆ, ಸುಧಾಕರ್‌ಗೆ ಕಾದಿದ್ಯಾ ಸಂಕಷ್ಟ?

ಕೋವಿಡ್ ಅವಧಿಯಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತದ ಅಂತಿಮ ತನಿಖಾ ವರದಿಯನ್ನು ನ್ಯಾ. ಮೈಕಲ್ ಡಿ. ಕುನ್ಹಾ ಸಮಿತಿಯು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲಿಸಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಈ ದುರಂತದಲ್ಲಿ 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.

Read Full Story

09:51 AM (IST) Dec 02

ವಕೀಲರ ಗುಮಾಸ್ತರ ಕಲ್ಯಾಣ ನಿಧಿ - ಕಾನೂನು ಕಾರ್‍ಯದರ್ಶಿಗೆ ಹೈಕೋರ್ಟ್ ಚಾಟಿ!

ವಕೀಲರ ಗುಮಾಸ್ತರ ಕ್ಷೇಮಾಭಿವೃದ್ಧಿ ನಿಧಿ ವಿಚಾರದಲ್ಲಿ ಸರ್ಕಾರದ ನಿಷ್ಕ್ರಿಯತೆಗೆ ಹೈಕೋರ್ಟ್ ತೀವ್ರ ಅಸಮಾಧಾನ. ವಕೀಲರ ಕಲ್ಯಾಣ ನಿಧಿ ಕಾಯ್ದೆಗೆ ಅಗತ್ಯ ತಿದ್ದುಪಡಿ ತಂದು ಗುಮಾಸ್ತರಿಗೆ ಅನುಕೂಲ ಮಾಡಿಕೊಡಲು ವಿಫಲವಾದರೆ, ರಾಜ್ಯ ಕಾನೂನು ಇಲಾಖೆಯ ಕಾರ್ಯದರ್ಶಿ ಖುದ್ದು ಹಾಜರಾಗಬೇಕೆಂದು ಎಚ್ಚರಿಕೆ ನೀಡಿದೆ.

Read Full Story

More Trending News