ಬೆಂಗಳೂರು: ಮುಂದಿನ ನಾಲ್ಕು ದಿನಗಳವರೆಗೆ ಉತ್ತರ ಒಳನಾಡು, ದಕ್ಷಿಣ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮೋಡ ಮುಸುಕಿದ ವಾತಾವರಣ ಇರಲಿದ್ದು, ಚದುರಿದಂತೆ ಮಳೆಯಾಗಲಿದೆ. ಕೆಲ ಪ್ರದೇಶಗಳಲ್ಲಿ ಜೋರಾದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಯುಗಾದಿ ಹಬ್ಬದ ಮುನ್ನ ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಸುರಿದು ಧರೆಯನ್ನು ಸ್ವಲ್ಪ ತಂಪು ಮಾಡಿದೆ. ಧಾರವಾಡದ ಕಲಘಟಗಿ ಸೇರಿ ಕೆಲವೆಡೆ ಆಲಿಕಲ್ಲು ಮಳೆಯಾಗಿದೆ.
ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಹಾಸನ, ರಾಮನಗರ, ಕೊಡಗು, ತುಮಕೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದೆ.
ಮಳೆ ವಿವರ:
ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಾಸನ ಮತ್ತು ಮಾಗಡಿಯಲ್ಲಿ ತಲಾ 5 ಸೆಂ.ಮೀ. ಮಳೆಯಾಗಿದೆ. ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ 4 ಸೆಂ.ಮೀ, ಧರ್ಮಸ್ಥಳದಲ್ಲಿ 3 ಸೆಂ.ಮೀ, ದಾವಣಗೆರೆ ನಗರದಲ್ಲಿ 3 ಸೆಂ.ಮೀ ಮತ್ತು ಚನ್ನಗಿರಿಯಲ್ಲಿ 2 ಸೆಂ.ಮೀ ಮಳೆಯಾದ ವರದಿಯಾಗಿದೆ.
ಕುಣಿಗಲ್ ಮತ್ತು ಬೆಂಗಳೂರು ನಗರದ ಟಿ.ಜಿ. ಹಳ್ಳಿ ಎಚ್‌ಎಂಎಸ್ ಕೇಂದ್ರಗಳಲ್ಲಿ ತಲಾ 2 ಸೆಂ.ಮೀ. ಮಳೆ ಸುರಿದಿದೆ. ಚಿತ್ರದುರ್ಗ ನಗರ, ನಾಯಕನಹಟ್ಟಿ, ಕೊಡಗು ಜಿಲ್ಲೆಯ ಪೊನ್ನಂಪೇಟೆ ಹಾಗೂ ಬೀದರ್ ಜಿಲ್ಲೆಯ ಮಂತಾಳದಲ್ಲಿ ತಲಾ 1 ಸೆಂ.ಮೀ. ಮಳೆ ಸುರಿದಿದೆ.
11:44 PM (IST) Mar 18
11:24 PM (IST) Mar 18
10:56 PM (IST) Mar 18
10:34 PM (IST) Mar 18
ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಏಕಾಏಕಿ ಸುರಿದ ಆಲಿಕಲ್ಲು ಮಳೆ ಜನರನ್ನು ಬೆಚ್ಚಿಬೀಳುವಂತೆ ಮಾಡಿತು. ಮಧ್ಯಾಹ್ನದಿಂದಲೇ ಆಕಾಶದಲ್ಲಿ ದಟ್ಟ ಮೋಡಗಳು ಕವಿದು ಮಳೆಯ ಸುಳಿವು ನೀಡುತ್ತಿದ್ದವು.
10:34 PM (IST) Mar 18
10:20 PM (IST) Mar 18
09:56 PM (IST) Mar 18
09:36 PM (IST) Mar 18
ಕನ್ನಡದ ಪ್ರಖ್ಯಾತ ಚಾನೆಲ್ ಉದಯ ಟಿವಿಯು ಸನ್ ನೆಟ್‌ವರ್ಕ್‌ನಿಂದ ಮರು ಬ್ರ್ಯಾಂಡಿಂಗ್‌ಗೆ ಒಳಗಾಗುತ್ತಿದೆ. ಯುಗಾದಿಯ ವೇಳೆಗೆ 'ಸನ್ ಉದಯ ಟಿವಿ' ಎಂದು ಹೊಸ ಹೆಸರು ಮತ್ತು ಲೋಗೋದೊಂದಿಗೆ ಬದಲಾಗುವ ನಿರೀಕ್ಷೆಯಿದೆ.
09:11 PM (IST) Mar 18
ಖ್ಯಾತ ನಿರ್ದೇಶಕ ರಾಜಮೌಳಿ ಸದ್ಯ ಮಹೇಶ್ ಬಾಬು ಜೊತೆ 'ವಾರಣಾಸಿ' ಎಂಬ ಸಿನಿಮಾ ಮಾಡುತ್ತಿದ್ದಾರೆ. ರಾಜಮೌಳಿ ಒಂದು ಸಂದರ್ಶನದಲ್ಲಿ ತಮಗೆ ಇಷ್ಟವಾದ ನಿರ್ದೇಶಕರ ಬಗ್ಗೆ ಮಾತನಾಡಿದ್ದಾರೆ.
09:10 PM (IST) Mar 18
08:42 PM (IST) Mar 18
ಇ-ಸ್ವತ್ತು ನೀಡುವ ತಂತ್ರಾಂಶದಲ್ಲಿ ನ್ಯೂನ್ಯತೆ ಆಗಿರುವುದು ಸತ್ಯ. ಪ್ರಸ್ತುತ ಸಾಕಷ್ಟು ಸಮಸ್ಯೆ ಬಗೆಹರಿಸಿದ್ದು, 15 ದಿನಗಳಲ್ಲಿ ವ್ಯವಸ್ಥೆ ಸಂಪೂರ್ಣ ಸುಧಾರಿಸಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
08:19 PM (IST) Mar 18
07:18 PM (IST) Mar 18
07:05 PM (IST) Mar 18
07:02 PM (IST) Mar 18
06:47 PM (IST) Mar 18
'ಕಾಂತಾರ'ದಿಂದ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ ರಿಷಬ್ ಶೆಟ್ಟಿ, ನಟನಿಗಿಂತ ನಿರ್ದೇಶಕನಾಗಿ ಹೆಚ್ಚು ಬೇಡಿಕೆ ಗಳಿಸಿದ್ದಾರೆ. ಹಲವು ಸ್ಟಾರ್ ನಟರು ರಿಷಬ್ ಜೊತೆ ಸಿನಿಮಾ ಮಾಡಲು ಆಸಕ್ತಿ ತೋರಿದ್ದಾರೆ. ಆ ಇಬ್ಬರು ಟಾಲಿವುಡ್ ಸ್ಟಾರ್‌ಗಳು ಯಾರು ಗೊತ್ತಾ?
06:31 PM (IST) Mar 18
ರಾಜ್ಯದ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳ ಕೊರತೆ ಇಲ್ಲ. 868 ಕೋಟಿ ರು. ಮೌಲ್ಯದ ಔಷಧಿ ಖರೀದಿಗೆ ಟೆಂಡರ್ ಕರೆಯಲಾಗಿದೆ. ಔಷಧಿಗಳ ಗುಣಮಟ್ಟ ಪರೀಕ್ಷೆಗೆ ಒತ್ತು ನೀಡಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
06:10 PM (IST) Mar 18
ಮಾಜಿ ಬಿಗ್‌ಬಾಸ್ ಸ್ಪರ್ಧಿ ಆರ್ಯವರ್ಧನ್ ಗುರೂಜಿ ಅವರ ಹಳೆಯ ವಿಡಿಯೋವೊಂದು ವೈರಲ್ ಆಗಿದ್ದು, ಇದರಲ್ಲಿ ಅವರು ಯುವಕನೊಬ್ಬನಿಗೆ ಎರಡು ಮದುವೆ ಹಾಗೂ ಸೊಸೆಯಿಂದ ತಾಯಿಗೆ ಅಪಾಯ ಎಂದು ಭವಿಷ್ಯ ನುಡಿದಿದ್ದಾರೆ.
05:57 PM (IST) Mar 18
Actress Divyanka Tripathi: ನಟಿ ದಿವ್ಯಾಂಕಾ ತ್ರಿಪಾಠಿ, ವಿವೇಕ್ ದಹಿಯಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಶೀಘ್ರದಲ್ಲೇ ಸೀಮಂತ ಕಾರ್ಯಕ್ರಮ ನಡೆಯಲಿದೆ ಎಂದೂ ವರದಿಗಳು ಹೇಳುತ್ತಿವೆ. ಆದರೆ, ಈ ಜೋಡಿ ಈ ಬಗ್ಗೆ ಇನ್ನೂ ಅಧಿಕೃತವಾಗಿ ಏನನ್ನೂ ಖಚಿತಪಡಿಸಿಲ್ಲ.
05:42 PM (IST) Mar 18
05:25 PM (IST) Mar 18
ಕನ್ನಡದ 'ಕೆಡಿ' ಚಿತ್ರದ ವಿವಾದಾತ್ಮಕ ಹಾಡಿನ ಕುರಿತು ನಟಿ ನೋರಾ ಫತೇಹಿ ಮೌನ ಮುರಿದಿದ್ದಾರೆ. ತಮಗೆ ಕನ್ನಡ ಬಾರದ ಕಾರಣ ನಿರ್ದೇಶಕರನ್ನು ನಂಬಿದ್ದೆ ಎಂದಿರುವ ಅವರು, ಹಾಡಿನ ಹಿಂದಿ ಅವತರಣಿಕೆಯ ಅಶ್ಲೀಲ ಸಾಹಿತ್ಯದ ಬಗ್ಗೆ ತಮಗೆ ತಿಳಿದಿರಲಿಲ್ಲ ಎಂದಿದ್ದಾರೆ.
05:16 PM (IST) Mar 18
ಪಾನ್ ಅಥವಾ ಪಾನ್ ಮಸಾಲದಂತಹ ಪದಾರ್ಥಗಳಲ್ಲಿ ಅಡಕೆಯನ್ನು ಒಂದು ಅಂಶವಾಗಿ ಅಲ್ಪ ಪ್ರಮಾಣದಲ್ಲಿ ಸೇವಿಸಿದರೆ ಹಾಗೂ ತಂಬಾಕು ಸೇರಿಸದೇ ಇದ್ದರೆ ಹಾನಿಕಾರಕವಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದರು.
05:01 PM (IST) Mar 18
Actor Ranveer Singh: ಬಾಲಿವುಡ್ ನಟ ರಣವೀರ್ ಸಿಂಗ್ ಅವರ ಮನೆಗಳು ಕೇವಲ ಐಷಾರಾಮಿ ಕಟ್ಟಡಗಳಲ್ಲ, ಅವು ಅವರ ಯಶಸ್ಸು, ಮಹತ್ವಾಕಾಂಕ್ಷೆ ಮತ್ತು ಪಯಣದ ಪ್ರತಿಬಿಂಬ. ಬಾಂದ್ರಾದ ಬಂಗಲೆಯಾಗಿರಲಿ ಅಥವಾ ಅಲಿಬಾಗ್‌ನ ರೆಸಾರ್ಟ್ ಆಗಿರಲಿ, ಪ್ರತಿಯೊಂದು ಆಸ್ತಿಯೂ ಈ ನಟ ಸಾಗಿ ಬಂದ ಹಾದಿಯ ಕಥೆಯನ್ನು ಹೇಳುತ್ತದೆ.
04:57 PM (IST) Mar 18
ರಣ್‌ವೀರ್ ಸಿಂಗ್ ನಟನೆಯ 'ಧುರಂಧರ್ 2' ಸಿನಿಮಾ ಮಾರ್ಚ್ 19 ರಂದು ಬಿಡುಗಡೆಯಾಗಲಿದೆ. ಸೆನ್ಸಾರ್ ಬೋರ್ಡ್ ಈ ಚಿತ್ರಕ್ಕೆ 'A' ಸರ್ಟಿಫಿಕೇಟ್ ನೀಡಿದೆ. ಸಿನಿಮಾದಲ್ಲಿನ ಹಿಂಸಾಚಾರದ ದೃಶ್ಯಗಳಿಂದಾಗಿ ಬರೋಬ್ಬರಿ 21 ಕಟ್‌ಗಳನ್ನು ಸೂಚಿಸಿದ್ದು, ಒಂದು ನಿಮಿಷಕ್ಕೂ ಹೆಚ್ಚು ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ.
04:39 PM (IST) Mar 18
ಮಲೆನಾಡಿನ ಜನತೆ ಆತಂಕ ಪಡುವ ಅವಶ್ಯಕತೆ ಇಲ್ಲ. ಇದುವರೆಗೂ ನದಿ ಜೋಡಣೆ ಎಲ್ಲೂ ಸಂಪೂರ್ಣ ಯಶಸ್ವಿಯಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ತಮ್ಮನ್ನು ಭೇಟಿಯಾದ ಬೇಡ್ತಿ-ಅಘನಾಶಿನಿ ಸಮಿತಿ ನಿಯೋಗಕ್ಕೆ ಭರವಸೆ ನೀಡಿದರು.
04:35 PM (IST) Mar 18
04:24 PM (IST) Mar 18
ಮುಂದಿನ ಕಬ್ಬು ನುರಿಸುವ ಹಂಗಾಮಿನಿಂದ ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿಗೆ ಒಪ್ಪಂದ ಮಾಡಿಕೊಳ್ಳಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
04:23 PM (IST) Mar 18
ಮೆಡಿಕಲ್ ಸ್ಟೋರ್ ಲೈಸೆನ್ಸ್ ನವೀಕರಣಕ್ಕೆ 35,000 ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕೋಲಾರ ಸಹಾಯಕ ಡ್ರಗ್ಸ್ ಕಂಟ್ರೋಲರ್ ಲೋಕಾ ಬಲೆಗೆ ಬಿದ್ದಿದ್ದಾರೆ. ಮಾಲೂರು ತಾಲೂಕಿನ ಟೇಕಲ್ ಬಳಿ ಲಂಚ ಸ್ವೀಕಾರ ಮಾಡುತ್ತಿದ್ದ ಮೂವರು ಬಲೆಗೆ ಬಿದ್ದಿದ್ದಾರೆ.
03:15 PM (IST) Mar 18
03:10 PM (IST) Mar 18
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ, ಮದುವೆಗೆ ನಿರಾಕರಿಸಿದರೆಂಬ ಕಾರಣಕ್ಕೆ ಯುವಕನೋರ್ವ ಯುವತಿ ಮತ್ತು ಆಕೆಯ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಹತ್ತು ಜನರೊಂದಿಗೆ ಮನೆಗೆ ನುಗ್ಗಿದ ಆರೋಪಿಯು, ಖಾರದ ಪುಡಿ ಎರಚಿ ರಾಡ್‌ನಿಂದ ಹಲ್ಲೆ ಮಾಡಿದ್ದಾನೆ.
02:11 PM (IST) Mar 18
ಆತ್ಮ*ಹತ್ಯೆ ಮಾಡಿಕೊಂಡ ಮಗಳ ಅಂತ್ಯಸಂಸ್ಕಾರವನ್ನು, ಆಕೆಯ ಗಂಡ ಪಾವಗಡ ತಾಲೂಕಿನಲ್ಲಿ ಕಟ್ಟಿಸುತ್ತಿದ್ದ ನಿರ್ಮಾಣ ಹಂತದ ಮನೆಯಲ್ಲೇ ತಂದೆ ನೆರವೇರಿಸಿದ್ದಾರೆ. ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ತಂದೆ, ಇದು ಕೊಲೆ ಎಂದು ಆರೋಪಿಸಿದ್ದಾರೆ.
01:38 PM (IST) Mar 18
ನವದೆಹಲಿ: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇದರ ಬೆನ್ನಲ್ಲೇ ಆರ್‌ಸಿಬಿ ಸೇಲ್ ಪ್ರಕ್ರಿಯೆ ಕೂಡಾ ನಿರ್ಣಾಯಕ ಹಂತದಲ್ಲಿದೆ. ಇದೀಗ ಕನ್ನಡಿಗ ಸೇರಿ ಎರಡು ಸಂಸ್ಥೆಗಳು ಆರ್‌ಸಿಬಿ ಖರೀದಿಸುವ ರೇಸ್‌ನಲ್ಲಿ ಉಳಿದುಕೊಂಡಿವೆ.
01:18 PM (IST) Mar 18
ಬೆಂಗಳೂರಿನ 'ನಮ್ಮ ಮೆಟ್ರೋ'ದಲ್ಲಿ ಯುವತಿಯರ ಗುಂಪೊಂದು ನೆಲದ ಮೇಲೆ ಕುಳಿತು ಜೋರಾಗಿ ಹಾಡು ಹಾಡಿ ನಿಯಮ ಉಲ್ಲಂಘಿಸಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರು ದೆಹಲಿ ಮೆಟ್ರೋದಂತಹ ಸಂಸ್ಕೃತಿ ಬೆಂಗಳೂರಿಗೆ ಬೇಡವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
01:03 PM (IST) Mar 18
"ನನ್ನ ಧ್ವನಿ ಇರುವವರೆಗೂ ಮತ್ತು ನನ್ನ ರಿಯಾಜ್ (ಅಭ್ಯಾಸ) ನಡೆಯುವವರೆಗೂ ನಾನು ವೇದಿಕೆಯ ಮೇಲೆ ನೇರವಾಗಿಯೇ ಹಾಡಲು ಇಷ್ಟಪಡುತ್ತೇನೆ. ಪ್ರೇಕ್ಷಕರು ನಮಗಾಗಿ ಬರುತ್ತಾರೆ, ಅವರಿಗೆ ಮೋಸ ಮಾಡುವುದು ನನಗೆ ಇಷ್ಟವಿಲ್ಲ," ಎಂದು ಶ್ರೇಯಾ ಘೋಷಾಲ್ ಹೇಳಿದ್ದಾರೆ. ಮುಂದೇನು?
12:30 PM (IST) Mar 18
ಶಾಸಕ ಜಿ.ಟಿ.ದೇವೇಗೌಡರ ಜೆಡಿಎಸ್ ಸ್ಪರ್ಧೆ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಸಾರಾ ಮಹೇಶ್, ಕುಮಾರಸ್ವಾಮಿ ಅವರೇ ಜಿಟಿಡಿ ನಮ್ಮ ಜೊತೆ ಇಲ್ಲ ಎಂದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿಗಳ ಜಿಲ್ಲೆಯಲ್ಲೇ ಹೀಗಾದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
12:06 PM (IST) Mar 18
11:34 AM (IST) Mar 18
Bhagyalakshmi Serial Episode: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್ ಬದಲಾಗಿದ್ದಾನೆ ಎಂದು ಮಗಳು ತನ್ವಿ ನಂಬಿದ್ದಾಳೆ. ಆದರೆ ತಾಂಡವ್ ಬದಲಾಗಿಲ್ಲ, ಕಲರ್ಸ್ ಕನ್ನಡ ವಾಹಿನಿಯು ಹೊಸದಾಗಿ ಪ್ರೋಮೋ ರಿಲೀಸ್ ಮಾಡಿದ್ದು, ತಾಂಡವ್ ಬದಲಾಗಿಲ್ಲ ಎನ್ನೋದು ಸಾಬೀತಾಗಿದೆ.
11:26 AM (IST) Mar 18
11:20 AM (IST) Mar 18
ಸಂಖ್ಯಾಶಾಸ್ತ್ರದ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯ ಜನ್ಮ ದಿನಾಂಕಕ್ಕೂ ಒಂದು ವಿಶೇಷ ಅರ್ಥವಿದೆ. ಆ ದಿನಾಂಕದಿಂದ ಸಿಗುವ ಮೂಲ ಸಂಖ್ಯೆ ನಮ್ಮ ವ್ಯಕ್ತಿತ್ವವನ್ನು ಹೇಳುತ್ತದೆ ಎಂದು ನಂಬಲಾಗಿದೆ. ಅದರಂತೆ, ಕೆಲವು ಸಂಖ್ಯೆಗಳನ್ನು ಹೊಂದಿರುವ ಮಹಿಳೆಯರು ಪ್ರತಿಯೊಂದು ವಿಷಯದ ಬಗ್ಗೆಯೂ ಹೆಚ್ಚು ಯೋಚಿಸುತ್ತಾರೆ.
10:45 AM (IST) Mar 18
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕುರಿತ ಸಭೆಯಲ್ಲಿ ತೀವ್ರ ಹೈಡ್ರಾಮಾ ನಡೆದಿದೆ. ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹಾಗೂ ಎಂಎಲ್ಸಿ ಅಬ್ದುಲ್ ಜಬ್ಬಾರ್ ಬೆಂಬಲಿಗರ ನಡುವೆ ಟಿಕೆಟ್‌ಗಾಗಿ ವಾಗ್ವಾದ ನಡೆದು, ಗದ್ದಲದ ವಾತಾವರಣ ನಿರ್ಮಾಣವಾಯಿತು.