LIVE NOW
Published : Dec 17, 2025, 06:52 AM ISTUpdated : Dec 17, 2025, 12:23 PM IST

Karnataka News Live: ಬಿಪಿಎಲ್ ಕಾರ್ಡ್‌ನ 2.95 ಲಕ್ಷ ಅರ್ಜಿ ವಿಲೇವಾರಿ - ಮುನಿಯಪ್ಪ

ಸಾರಾಂಶ

 

ಬೆಂಗಳೂರು: ಬಿಜೆಪಿಗೆ ಹೊಸ ಸಾರಥಿ ನೇಮಕ ಬೆನ್ನಲ್ಲೇ ರಾಜ್ಯದ ಕೇಸರಿ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದ್ದು, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಬೆಳಗಾವಿ ಅಧಿವೇಶನ ಬಿಟ್ಟು ದೆಹಲಿಗೆ ತೆರಳಿದ್ದಾರೆ. ಬಿಜೆಪಿ ರಾಷ್ಟ್ರೀಯ ನೂತನ ಕಾರ್ಯಾಧ್ಯಕ್ಷ ನಿತಿನ್ ನವೀನ್ ಅವರನ್ನು ಮಂಗಳವಾರ ಭೇಟಿ ಮಾಡಿ ಶುಭ ಕೋರಿದ್ದಾರೆ. ಅಲ್ಲದೆ, ರಾಜ್ಯದ ಪ್ರಸಕ್ತ ರಾಜಕೀಯ ಸ್ಥಿತಿಗತಿ, ಪಕ್ಷ ಸಂಘಟನೆ, ರಾಜ್ಯದಲ್ಲಿನ ಸಿಎಂ ಬದಲಾವಣೆ ಕುರಿತ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಬಿಜೆಪಿಗೆ ರಾಷ್ಟ್ರೀಯ ನೂತನ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ನಿತಿನ್ ನವೀನ್ ಅವರು, ರಾಜ್ಯದ ಬಗ್ಗೆಯೂ ಗಮನ ಹರಿಸುವ ಸಾಧ್ಯತೆಗಳಿದ್ದು, ಈ ಹಿನ್ನೆಲೆಯಲ್ಲಿ ಅವರ ಭೇಟಿ ಮಹತ್ವ ಪಡೆದಿದೆ.

12:23 PM (IST) Dec 17

ಬಿಪಿಎಲ್ ಕಾರ್ಡ್‌ನ 2.95 ಲಕ್ಷ ಅರ್ಜಿ ವಿಲೇವಾರಿ - ಮುನಿಯಪ್ಪ

2 95 Lakh BPL Card Applications Cleared says Minister KH Muniyappa: ರಾಜ್ಯದಲ್ಲಿ ಹೊಸದಾಗಿ ಬಿಪಿಎಲ್‌ ಕಾರ್ಡ್‌ ಕೋರಿ ಬಂದ 3.96 ಲಕ್ಷ ಅರ್ಜಿಗಳ ಪೈಕಿ 2.95 ಲಕ್ಷ ವಿಲೇವಾರಿಯಾಗಿದ್ದು, ಉಳಿದವುಗಳನ್ನು ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ

Read Full Story

12:10 PM (IST) Dec 17

'ಒಂದು-ಎರಡು ಬಣಗಳೆರಡು..' ಹಾಡಿನ ಮೂಲಕ ಸರ್ಕಾರದ ಕಾಲೆಳೆದ ಅಭಯ್ ಪಾಟೀಲ್

ಸುವರ್ಣ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತ ಚರ್ಚೆ ವೇಳೆ, ಬಿಜೆಪಿ ಶಾಸಕ ಅಭಯ್ ಪಾಟೀಲ್ 'ಒಂದು-ಎರಡು ಬಾಳೆಲೆ ಹರಡು' ಹಾಡನ್ನು ಕಾಂಗ್ರೆಸ್ ಸರ್ಕಾರಕ್ಕೆ ಅನ್ವಯಿಸಿ ಹಾಡಿನ ಮೂಲಕ ರಾಜ್ಯ ಕಾಂಗ್ರೆಸ್‌ನಲ್ಲಿನ ಆಂತರಿಕ ಭಿನ್ನಮತ ಮತ್ತು ಬಣ ರಾಜಕೀಯವನ್ನು ವ್ಯಂಗ್ಯವಾಡಿ ಸರ್ಕಾರದ ಕಾಲೆಳೆದರು.

Read Full Story

11:57 AM (IST) Dec 17

ಜನಪದ ಗಾಯಕ ಮ್ಯೂಸಿಕ್ ಮೈಲಾರಿ ಅರೆಸ್ಟ್; ಡ್ಯಾನ್ಸ್ ಮಾಡೋ ಬಾಲಕಿಯನ್ನು ಲಾಡ್ಜ್‌ನಲ್ಲಿ ಕೂಡಿಹಾಕಿ ಲೈಂಗಿಕವಾಗಿ ಬಳಕೆ!

ಉತ್ತರ ಕರ್ನಾಟಕದ ಖ್ಯಾತ ಜನಪದ ಗಾಯಕ 'ಮ್ಯೂಸಿಕ್ ಮೈಲಾರಿ'ಯನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಆರ್ಕೆಸ್ಟ್ರಾ ಕಾರ್ಯಕ್ರಮದ ನಂತರ ಲಾಡ್ಜ್‌ನಲ್ಲಿ ದೌರ್ಜನ್ಯ ಎಸಗಿದ್ದರು ಎಂಬ ಆರೋಪ ಕೇಳಿಬಂದಿತ್ತು.

Read Full Story

11:42 AM (IST) Dec 17

ಆದಾಯ ಕಡಿಮೆ ಆಗಿದ್ದೋ, ಖರ್ಚು ಜಾಸ್ತಿಯಾಗಿದ್ದೋ! ಯೋಚಿಸಬೇಕಾದ ಕೆಲವು ಆರ್ಥಿಕ ಸಂಗತಿಗಳು

ಸಂಬಳ ಕಡಿಮೆಯಾದ್ದರಿಂದ ಉಲಿತಾಯ ಮಾಡೋದಕ್ಕಾಗ್ತಿಲ್ಲ ಅಂತ ಎಷ್ಟೋ ಜನ ಹೇಳುತ್ತಿರುತ್ತಾರೆ. ಆದರೆ ಹಣಕಾಸು ತಜ್ಞರ ಪ್ರಕಾರ ಹಣ ಉಳಿತಾಯಕ್ಕೆ ದೊಡ್ಡ ತಡೆ ನಮ್ಮ ಜೀವನಶೈಲಿ. ಈ ಕುರಿತ ಚಿಂತನಾತ್ಮಕ ಲೇಖನ.

Read Full Story

11:39 AM (IST) Dec 17

ಬೆಳಗಾವಿ - ಗೃಹಸಚಿವರ ಕಾಲಿಗೆ ಬಿದ್ದು ದಿವ್ಯಾಂಗ ದಂಪತಿ ಕಣ್ಣೀರು; ಪೊಲೀಸರ ತಪಾಸಣೆ ವೇಳೆ ಕೀಟನಾಶಕ ಪತ್ತೆ!

ನಿವೇಶನ ಕೊಡಿಸುವುದಾಗಿ ನಂಬಿಸಿ ವಂಚನೆಗೊಳಗಾದ ದಿವ್ಯಾಂಗ ದಂಪತಿಯೊಂದು ನ್ಯಾಯಕ್ಕಾಗಿ ಗೃಹಸಚಿವ ಡಾ. ಜಿ ಪರಮೇಶ್ವರ ಅವರನ್ನು ಭೇಟಿಯಾಗಿದ್ದಾರೆ. ಪೊಲೀಸರ бездействияದಿಂದ ಮನನೊಂದು, ಅವರು ಕೀಟನಾಶಕದ ಬಾಟಲಿಯೊಂದಿಗೆ ಬಂದಿದ್ದು, ಸಚಿವರು ತನಿಖೆಗೆ ಭರವಸೆ ನೀಡಿದ್ದಾರೆ.
Read Full Story

11:15 AM (IST) Dec 17

Bengaluru - ಲವ್ ಮಾಡು, ಇಲ್ಲಾಂದ್ರೆ ಸಾಯ್ತೀನಿ - ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಕಿರುಕುಳ ಕೊಟ್ಟ ಖತರ್ನಾಕ್ ಲೇಡಿ

ರಾಮಮೂರ್ತಿನಗರ ಠಾಣಾಧಿಕಾರಿ ಸತೀಶ್ ಅವರಿಗೆ ಸಂಜನಾ ಎಂಬ ಮಹಿಳೆ ಪ್ರೀತಿಸುವಂತೆ ನಿರಂತರವಾಗಿ ಪೀಡಿಸುತ್ತಿದ್ದಳು. ರಾಜಕೀಯ ನಾಯಕರ ಹೆಸರು ಬಳಸಿ, ಆತ್ಮ*ಹತ್ಯೆ ಬೆದರಿಕೆ ಹಾಕಿ ಕಿರುಕುಳ ನೀಡಿದ ಆಕೆಯನ್ನು ಪೊಲೀಸರು ಬಂಧಿಸಿದ್ದು, ಈ ಹಿಂದೆಯೂ ಆಕೆ ಇದೇ ರೀತಿ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ.

Read Full Story

11:07 AM (IST) Dec 17

ಸರ್ಕಾರಿ ನೇಮಕಾತಿ ವಿಳಂಬ - ಮನನೊಂದು ಧಾರವಾಡ ರೈಲು ಹಳಿಗೆ ಸಿಲುಕಿ ಯುವತಿ ದಾರುಣ ಸಾವು!

ಸರ್ಕಾರಿ ನೇಮಕಾತಿ ವಿಳಂಬ ಮತ್ತು ಪರೀಕ್ಷೆಯಲ್ಲಿನ ವೈಫಲ್ಯದಿಂದ ಮನನೊಂದು, 25 ವರ್ಷದ ಯುವತಿಯೊಬ್ಬಳು ಧಾರವಾಡದಲ್ಲಿ ರೈಲಿಗೆ ಸಿಲುಕಿ ಆತ್ಮ೧ಹತ್ಯೆ ಮಾಡಿಕೊಂಡಿದ್ದಾಳೆ. ಕಳೆದ ನಾಲ್ಕು ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ ಯುವತಿ.

Read Full Story

10:39 AM (IST) Dec 17

HD Kumaraswamy birthday - ಎಚ್‌ಡಿಕೆಗೆ  ₹3.50 ಲಕ್ಷದ 25 ಗ್ರಾಂನ ಚಿನ್ನದ ಸರ ಕೊಟ್ಟ ಅಭಿಮಾನಿ!

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಜನ್ಮದಿನವನ್ನು ಮಂಡ್ಯದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ, ಜೆಡಿಎಸ್ ಕಾರ್ಯಕರ್ತರಾದ ಶಂಕರೇಗೌಡ ಅವರು ತಮ್ಮ ನೆಚ್ಚಿನ ನಾಯಕನಿಗೆ ₹3.50 ಲಕ್ಷ ಮೌಲ್ಯದ 25 ಗ್ರಾಂ ತೂಕದ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿ ಅಭಿಮಾನ ಮೆರೆದರು.
Read Full Story

10:06 AM (IST) Dec 17

ಆಜಾನ್‌ ಚರ್ಚೆ ವೇಳೆ ದೀಪಾವಳಿ ಪಟಾಕಿ ವಿಚಾರ ಎತ್ತಿದ ಖಂಡ್ರೆ ಕೈ-ಬಿಜೆಪಿ ನಡುವೆ ಗದ್ದಲ

ಅಜಾನ್‌ ಲೌಡ್‌ ಸ್ಪೀಕರ್‌ಗಳ ಡೆಸಿಬಲ್ ಮಿತಿ ಕುರಿತ ಪ್ರಶ್ನೆಗೆ, ಪರಿಸರ ಸಚಿವ ಈಶ್ವರ್‌ ಖಂಡ್ರೆ ಅವರು ದೀಪಾವಳಿ ಪಟಾಕಿ ಮತ್ತು ಹಬ್ಬಗಳ ವಿಷಯ ಪ್ರಸ್ತಾಪಿಸಿದ್ದು, ಸದನದಲ್ಲಿ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. 

Read Full Story

09:54 AM (IST) Dec 17

ಶಿವಾನಂದ ಮಠದ ಸರಸ್ವತಿ ಸ್ವಾಮಿಯ ಕಾಮ ಪುರಾಣ; ಬೆತ್ತಲೆಯಾಗಿ ಎಣ್ಣೆ ಮಸಾಜ್ ಮಾಡಿಸ್ಕೊಂಡ!

ಸರಸ್ವತಿ ಸ್ವಾಮೀಜಿ ಮಹಿಳೆಯಿಂದ ಬೆತ್ತಲೆಯಾಗಿ ಎಣ್ಣೆ ಮಸಾಜ್ ಮಾಡಿಸಿಕೊಳ್ಳುವ ವಿಡಿಯೋ ವೈರಲ್ ಆಗಿದೆ. ಈ ಘಟನೆಯಿಂದ ಗ್ರಾಮಸ್ಥರು ಆಕ್ರೋಶಗೊಂಡಿದ್ದು, ಸ್ವಾಮೀಜಿ ತನ್ನನ್ನು ಬ್ಲಾಕ್‌ಮೇಲ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

Read Full Story

09:44 AM (IST) Dec 17

ನಮ್ಮ ಹೊಲ ನಮ್ಮ ದಾರಿ - ರೈತರಿಗೆ ಶುಭ ಸುದ್ದಿ, ನಿಮ್ಮ ಜಮೀನಿಗೆ ರಸ್ತೆ ಸಂಪರ್ಕ ಈಗ ಸುಲಭ!

ಕರ್ನಾಟಕ ಸರ್ಕಾರದ 'ನಮ್ಮ ಹೊಲ ನಮ್ಮ ದಾರಿ' ಯೋಜನೆಯು ಗ್ರಾಮೀಣ ರೈತರ ಕೃಷಿ ಭೂಮಿಗಳಿಗೆ ನೇರ ರಸ್ತೆ ಸಂಪರ್ಕ ಕಲ್ಪಿಸುವ ಗುರಿ ಹೊಂದಿದೆ. ಈ ಮೂಲಕ ದೊಡ್ಡ ವಾಹನಗಳಲ್ಲಿ ಕೃಷಿ ಉತ್ಪನ್ನಗಳನ್ನು ಸುಲಭವಾಗಿ ಸಾಗಿಸಬಹುದು, ಸಾರಿಗೆ ವೆಚ್ಚ ಕಡಿಮೆ ಮಾಡಬಹುದು ಮತ್ತು ಸ್ಥಳೀಯ ಜಗಳಗಳನ್ನು ತಪ್ಪಿಸಬಹುದು.

Read Full Story

08:07 AM (IST) Dec 17

ಗರ್ಭಧರಿಸಿ 9 ತಿಂಗಳು ಪೂರೈಸಿದ ಹಸುವಿಗೆ ಸೀಮಂತ ಮಾಡಿದ ಮಂಡ್ಯ ರೈತ

ಪಾಂಡವಪುರದ ನಿವೃತ್ತ ಶಿಕ್ಷಕ ರಾಮೇಗೌಡ ಅವರು, ತಾವು ಸಾಕುತ್ತಿದ್ದ ವರಲಕ್ಷ್ಮಿ ಎಂಬ ಗರ್ಭಿಣಿ ಹಸುವಿಗೆ ಸೀಮಂತ ಕಾರ್ಯಕ್ರಮವನ್ನು ನೆರವೇರಿಸಿದ್ದಾರೆ. ಮನುಷ್ಯರಿಗೆ ಮಾಡುವಂತೆಯೇ ಶಾಸ್ತ್ರೋಕ್ತವಾಗಿ ಸೀಮಂತ ಮಾಡಿ ನೂರಾರು ಜನರಿಗೆ ಭೋಜನ ವ್ಯವಸ್ಥೆ ಮಾಡುವ ಮೂಲಕ ತಮ್ಮ ಅಪಾರ ಗೋ ಪ್ರೀತಿಯನ್ನು ಮೆರೆದಿದ್ದಾರೆ.

Read Full Story

08:04 AM (IST) Dec 17

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌

ಈ ವರ್ಷ ದಕ್ಷಿಣ ಭಾರತದಲ್ಲೇ ಒಂದು ಲಕ್ಷದ ಆರು ಸಾವಿರ ಟೊಯೋಟಾ ಕಾರುಗಳು ಮಾರಾಟವಾಗಿದ್ದು, ಅದರಲ್ಲಿ ಬೆಂಗಳೂರಿನ ಪಾಲು ಶೇ.31ರಷ್ಟಿದೆ ಎಂದು ಟೊಯೋಟಾ ಕಂಪನಿಯ ದಕ್ಷಿಣ ಭಾರತದ ಉಪಾಧ್ಯಕ್ಷ ವೈಸ್‌ಲೈನ್ ಸಿಗಮಣಿ ತಿಳಿಸಿದರು.

Read Full Story

08:00 AM (IST) Dec 17

BBK 12 - ನ್ಯಾಯವಾಗಿಯೇ ಆಡಲ್ಲ, ನಾಯಿ ಬಾಲ ಡೊಂಕೆ; ಏನಿದು ಹೊಸ ಕಿರಿಕ್?

ಬಿಗ್‌ಬಾಸ್ ಮನೆಯಲ್ಲಿ ಆಟದ ವಿಚಾರವಾಗಿ ಅಶ್ವಿನಿ ಗೌಡ ಮತ್ತು ಕಾವ್ಯಾ ಶೈವ ನಡುವೆ ತೀವ್ರ ಜಗಳ ನಡೆದಿದೆ. ಏಕವಚನ ಬಳಕೆಯಿಂದ ಶುರುವಾದ ಮಾತಿನ ಚಕಮಕಿ, ವೈಯಕ್ತಿಕ ನಿಂದನೆಗೆ ತಿರುಗಿದೆ. ಇದೇ ವೇಳೆ, ಸೀಕ್ರೆಟ್ ರೂಮ್‌ನಿಂದ ರಕ್ಷಿತಾ ಮತ್ತು ಧ್ರುವಂತ್ ಆಟದ ಮೇಲೆ ಪ್ರಭಾವ ಬೀರುತ್ತಿದ್ದಾರೆ.
Read Full Story

07:46 AM (IST) Dec 17

Bengaluru New Year Rules - ಬೆಂಗಳೂರಿನಲ್ಲಿ ನ್ಯೂ ಇಯರ್ ಪಾರ್ಟಿಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿ! ಏನೇನು ನಿರ್ಬಂಧ ತಿಳ್ಕೊಳ್ಳಿ

ಗೋವಾ ದುರಂತದ ಹಿನ್ನೆಲೆಯಲ್ಲಿ, ಬೆಂಗಳೂರು ಪೊಲೀಸರು ಹೊಸ ವರ್ಷಾಚರಣೆಗೆ 19 ಅಂಶಗಳ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೊಳಿಸಿದ್ದಾರೆ. ಪಟಾಕಿ ನಿಷೇಧ, ಸ್ಥಳಾವಕಾಶದ ನಿರ್ಬಂಧ, ಸಿಸಿಟಿವಿ ಅಳವಡಿಕೆ ಮತ್ತು ಮಾದಕ ವಸ್ತುಗಳ ಬಳಕೆಗೆ ಆಯೋಜಕರನ್ನೇ ಹೊಣೆಗಾರರನ್ನಾಗಿ ಮಾಡುವುದು ಈ ನಿಯಮಗಳಲ್ಲಿ ಸೇರಿದೆ.
Read Full Story

07:12 AM (IST) Dec 17

ಉತ್ತರ ಕರ್ನಾಟಕಕ್ಕೆ ಸಿಎಂ ಸಿದ್ದರಾಮಯ್ಯರಿಂದ ₹15,000 ಕೋಟಿ ವಿಶೇಷ ಅನುದಾನ - ಅಜಯ್‌ ಧರಂಸಿಂಗ್

North Karnataka special grant:  ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಉತ್ತರ ಕರ್ನಾಟಕಕ್ಕೆ ₹15,000 ಕೋಟಿ ವಿಶೇಷ ಅನುದಾನ ನೀಡಿದ್ದು, ಎಲ್ಲ ಕ್ಷೇತ್ರಗಳ ಸಮಸ್ಯೆಗಳನ್ನು ಕಡಿಮೆ ಮಾಡಲು ಸಾಕಷ್ಟು ಕೊಡುಗೆ ನೀಡಿದೆ ಎಂದು ಕಾಂಗ್ರೆಸ್‌ ಸದಸ್ಯ ಅಜಯ್‌ ಧರಂಸಿಂಗ್ ಹೇಳಿದ್ದಾರೆ.

Read Full Story

07:03 AM (IST) Dec 17

ಕೇಂದ್ರದ ಗಾಂಧೀಜಿ ದ್ವೇಷ ಬಯಲಾಗುತ್ತಿದೆ

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ(ಎಂ-ನರೇಗಾ) ಹೆಸರು ಮತ್ತು ಸ್ವರೂಪವನ್ನು ಬದಲಾಯಿಸಲು ಹೊರಟಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಡವರು ಮತ್ತು ಮಹಾತ್ಮ ಗಾಂಧೀಜಿ ಬಗೆಗಿನ ತಮ್ಮ ದ್ವೇಷವನ್ನು ತಾನೇ ಬಯಲು ಮಾಡಿಕೊಂಡಿದ್ದಾರೆ.

Read Full Story

More Trending News