ಬೆಂಗಳೂರು: ಸಂಪುಟದಿಂದ ಕೆ.ಎನ್.ರಾಜಣ್ಣ ವಜಾ ಬೆನ್ನಲ್ಲೇ ಅವರು ನಿರ್ವಹಿಸುತ್ತಿದ್ದ ಸಹಕಾರ ಖಾತೆಗೆ ಭರ್ಜರಿ ಲಾಬಿ ಆರಂಭಗೊಂಡಿದ್ದು, ಸಚಿವ ಡಿ.ಸುಧಾಕರ್ ಅವರು ಇದಕ್ಕೆ ಹೈಕಮಾಂಡ್ ಮಟ್ಟದಲ್ಲಿ ಪ್ರಯತ್ನ ಆರಂಭಿಸಿದ್ದಾರೆ. ಇದರಿಂದ ತಲ್ಲಣಗೊಂಡಿರುವ ನಾಯಕ (ಪಾಲ್ಮೀಕಿ) ಸಮುದಾಯದ ಶಾಸಕ ನಿಯೋಗ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಯಾವುದೇ ಕಾರಣಕ್ಕೂ ನಾಯಕ ಸಮು ದಾಯದಿಂದ ತೆರವಾಗಿರುವ ಖಾತೆಗಳನ್ನು ಬೇರೆ ಜಾತಿಯವರಿಗೆ ನೀಡಬಾರದು ಎಂದು ಪಟ್ಟುಹಿಡಿದಿದೆ. ಇಷ್ಟಕ್ಕೂ ಸಹಕಾರ ಖಾತೆ ಗಾಗಿ ದೊಡ್ಡ ಪ್ರಮಾಣದಲ್ಲಿ ಲಾಬಿ ಆರಂಭವಾಗಲೂ ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್ ಹಾಗೂ ಕೆಎಂಎಫ್ ಮೇಲೆ ಹಿಡಿತ ಪಡೆಯಲು ಕಾಂಗ್ರೆಸ್‌ನ ಬಣ ಬಡಿದಾಟ ಕಾರಣ ಎನ್ನಲಾಗುತ್ತಿದೆ.
10:58 PM (IST) Aug 15
ಗೂಗಲ್ ಕ್ರೋಮ್ ಖರೀದಿಸಲು ಭಾರತೀಯ ಯುವ ಉದ್ಯಮಿ ಬೃಹತ್ ಆಫರ್ ಕೊಟ್ಟಿದ್ದಾರೆ. ತಮ್ಮ ಕಂಪನಿಯ ಮೌಲ್ಯಕ್ಕಿಂತ ಹೆಚ್ಚಿನ ಹಣ ನೀಡಿ ಕ್ರೋಮ್ ಖರೀದಿಗೆ ಮುಂದಾಗಿದ್ದಾರೆ. ಕ್ರೋಮ್ ಮಾರಟಾವಾಗುತ್ತಾ?
10:24 PM (IST) Aug 15
ಮಹೀಂದ್ರಾ ತಮ್ಮ BE.6 ಎಲೆಕ್ಟ್ರಿಕ್ ಕಾರಿನ ಬ್ಯಾಟ್‌ಮ್ಯಾನ್ ಆವೃತ್ತಿಯನ್ನ ಬಿಡುಗಡೆ ಮಾಡಿದ್ದಾರೆ. ವಿಶೇಷ ಅಂದರೆ ಕೇವಲ 300 ಕಾರು ಮಾತ್ರ ಲಭ್ಯವಿದೆ. ಈ ಕಾರಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ.
09:05 PM (IST) Aug 15
ಆಂಧ್ರಪ್ರದೇಶ ಸರ್ಕಾರ 86 ಕೋಟಿ ರೂ. ವೆಚ್ಚದಲ್ಲಿ 5 ರಾಜ್ಯ ಮಟ್ಟದ ಆಹಾರ ಗುಣಮಟ್ಟ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸುತ್ತಿದೆ. ತಿರುಪತಿ ಲಡ್ಡು ವಿವಾದದ ಹಿನ್ನೆಲೆಯಲ್ಲಿ ತಿರುಮಲದಲ್ಲಿ ದೊಡ್ಡ ಫುಡ್ ಟೆಸ್ಟಿಂಗ್ ಲ್ಯಾಬ್ ಮುಂದಿನ ತಿಂಗಳು ಪ್ರಾರಂಭವಾಗಲಿದೆ.
09:02 PM (IST) Aug 15
ಧರ್ಮಸ್ಥಳ ಪ್ರಕರಣ ಭಾರಿ ಸದ್ದು ಮಾಡುತ್ತಿದೆ. ಸೋಶಿಯಲ್ ಮೀಡಿಯಾ,ಯೂಟ್ಯೂಬ್ ಮೂಲಕ ಹಲವರು ಪೋಸ್ಟ್ ಮಾಡುತ್ತಿದ್ದಾರೆ. ಹೀಗೆ ಯಾರದ್ದೋ ಪೋಸ್ಟ್‌ಗೆ ಯುವಕನೊಬ್ಬ ಅಶ್ಲೀಲವಾಗಿ ಕಮೆಂಟ್ ಮಾಡಿ ಇದೀಗ ಅರೆಸ್ಟ್ ಆಗಿದ್ದಾನೆ.
08:11 PM (IST) Aug 15
ವಾಹನ ಮಾಲೀಕರು ಹಾಗೂ ಡ್ರೈವಿಂಗ್ ಲೈಸೆನ್ಸ್ ಹೊಂದಿದವರು ತಮ್ಮ ಮೊಬೈಲ್ ನಂಬರ್ ಅಪ್‌ಡೇಟ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಆಧಾರ್ ಅಥೆಂಟಿಕೇಶನ್ ಮೂಲಕ ನಿಮ್ಮ ವಾಹನ ಹಾಗೂ ಡ್ರೈವಿಂಗ್ ಲೈಸೆನ್ಸ್ ಜೊತೆಗೆ ನಂಬರ್ ಲಿಂಕ್ ಮಾಡಿ. ಆನ್‌ಲೈನ್ ಪ್ರಕ್ರಿಯೆ ಹೇಗೆ?
07:14 PM (IST) Aug 15
ಮುಕೇಶ್ ಅಂಬಾನಿ ಜಿಯೋ, ಸುನಿಲ್ ಮಿತ್ತಲ್ ಏರ್‌ಟೆಲ್‌ಗೆ ಆತಂಕ ಎದುರಾಗಿದೆ. ಬಿಎಸ್‌ಎನ್‌ಎಲ್ ಇದೀಗ ಟೆಲಿಕಾಂ ಮಾರುಕಟ್ಟೆ ಆಕ್ರಮಿಸುತ್ತಿದೆ. ಬರೋಬ್ಬರಿ 47,000 ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಇಷ್ಟೇ ಅಲ್ಲ 1 ರೂಪಾಯಿ ರೀಚಾರ್ಜ್ ಪ್ಲಾನ್ ಕೂಡ ನೀಡುತ್ತಿದೆ.
06:46 PM (IST) Aug 15
06:41 PM (IST) Aug 15
ದೆಹಲಿಯಲ್ಲಿರುವ ಹುಮಾಯುನ್ ಸಮಾಧಿ ಕಾಂಪ್ಲೆಕ್ಸ್‌ನ ಒಂದು ಬಾಗ ಕುಸಿತಗೊಂಡು ಐವರು ಮೃತಪಟ್ಟಿದ್ದಾರೆ. ಇತ್ತ ಹಲವರನ್ನು ಕಾರ್ಯಾಚರಣೆ ಮೂಲಕ ರಕ್ಷಿಸಲಾಗಿದೆ. ಇಷ್ಟೇ ಅಲ್ಲ 7ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
06:23 PM (IST) Aug 15
05:54 PM (IST) Aug 15
ಜಾತಿ ಜನಗಣತಿ ವರದಿಯನ್ನು ಸಚಿವ ಸಂಪುಟದಲ್ಲಿ ಮಂಡಿಸಿ ಸರ್ಕಾರ ಎಲ್ಲರ ಅಭಿಪ್ರಾಯ ಪಡೆಯಲಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಎನ್.ಎಸ್.ಬೋಸರಾಜು ಹೇಳಿದ್ದಾರೆ.
05:47 PM (IST) Aug 15
ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಯಾವುದೇ ಅಧಿಕಾರಿ ಹಣ ಪಡೆಯುತ್ತಿರುವ ಬಗ್ಗೆ ರೈತರಿಂದ ದೂರು ಬರೆಸಿ ಕೊಟ್ಟರೆ ಅಂತಹ ಅಧಿಕಾರಿಯನ್ನು ಇಂದು ಸಂಜೆ ಸೂರ್ಯ ಮುಳುಗುವ ಹೊತ್ತಿಗೆ ಅಮಾನತು ಮಾಡುತ್ತೇನೆ.
05:37 PM (IST) Aug 15
ಶಿವಮೊಗ್ಗದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಸಚಿವ ಮಧು ಬಂಗಾರಪ್ಪ ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳನ್ನು ಘೋಷಿಸಿದರು. ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಮತ್ತು ಜನಕಲ್ಯಾಣ ಕ್ಷೇತ್ರಗಳಲ್ಲಿ ಹಲವಾರು ಯೋಜನೆಗಳನ್ನು ಜಾರಿಗೊಳಿಸುವುದಾಗಿ ತಿಳಿಸಿದರು. ನೀಡಲಾಗುವುದು ಎಂದು ಭರವಸೆ ನೀಡಿದರು.
05:36 PM (IST) Aug 15
ಮಧುಗಿರಿ ಏಕಶಿಲಾ ಬೆಟ್ಟಕ್ಕೆ ರೋಪ್‌ವೆ ಸೌಲಭ್ಯ ಕಲ್ಪಿಸುವ ಸಂಬಂಧ ಸಮೀಕ್ಷೆ ಮಾಡಲಾಗಿದ್ದು, ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಅಡಿ ಯೋಜನೆ ಜಾರಿಗೊಳಿಸಲಾಗುವುದು. ಈ ಸಂಬಂಧ ಟೆಂಡರ್ ಕರೆಯಲಾಗಿದೆ.
05:28 PM (IST) Aug 15
ಡಿಕೆಶಿ ಏನು ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ ಪ್ರಕರಣದಲ್ಲಿ ಈವರೆಗೆ ಏನೇನು ಆಗಿದೆ, ತನಿಖೆಯಲ್ಲಿ ಇತ್ತೀಚೆಗೆ ಏನು ಗೊತ್ತಾಗಿದೆ ಎಂಬುದನ್ನು ಬಹಿರಂಗ ಪಡಿಸಬೇಕು ಎಂದರು ಬಸವರಾಜ ಬೊಮ್ಮಾಯಿ.
05:26 PM (IST) Aug 15
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ ಸೇರಿ 7 ಜನರಿಗೆ ನೀಡಿದ್ದ ಜಾಮೀನು ಕ್ಯಾನ್ಸಲ್ ಆಗಿತ್ತು. ಈಗ ಕೇಸ್ ಸಾಬೀತಾದರೆ ಎಷ್ಟು ವರ್ಷಗಳ ಕಾಲ ಶಿಕ್ಷೆ ಆಗುವುದು? ಈ ಕೇಸ್ ಯಾವಾಗ ಬಗೆಹರಿಯುವುದು ಎಂಬ ಬಗ್ಗೆ ನಿವೃತ್ತ ಪೊಲೀಸ್ ಅಧಿಕಾರಿ ಎಸ್ ಕೆ ಉಮೇಶ್ ಮಾತನಾಡಿದ್ದಾರೆ.
05:18 PM (IST) Aug 15
ಬೆಂಗಳೂರು ಭಕ್ತ ತಿರುಪತಿಗೆ 1 ಕೋಟಿ ರೂಪಾಯಿ ನಗದು ಹಾಗೂ 25 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಾಣಿಕೆ ನೀಡಿದ್ದಾರೆ.
05:09 PM (IST) Aug 15
04:42 PM (IST) Aug 15
ದಮ್ಮಯ್ಯ ಬಿಟ್ಟು ಬಿಡು ಎಂದರೂ ಕ್ಯಾಬ್ ಚಾಲಕ ಕೇಳಿಲ್ಲ, ಒಂದೆಡೆ ಮಗು ಭಯಭೀತಗೊಂಡು ಅಳುತ್ತಿದೆ. ಇತ್ತ ಪತಿ ಹಾಗೂ ಪತ್ನಿ ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸದ ಘಟನೆ ವರದಿಯಾಗಿದೆ. ಈ ವಿಡಿಯೋವನ್ನು ಕುಟುಂಬ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ.
04:36 PM (IST) Aug 15
ನನಗೆ ಸಣ್ಣ ವಯಸ್ಸಿನಿಂದಲ್ಲೂ ಸಿನಿಮಾ ಹುಚ್ಚು. ನಾನು ಮೊದಲಿಗೆ ನೋಡಿದ ಸಿನಿಮಾ ‘ಪುಟ್ನಂಜ’ ಅಲ್ಲಿಂದ ನನ್ನ ಮತ್ತು ಹಂಸಲೇಖಾ ಅವರ ನಂಟು ಬೆಳೆಯಿತು ಅಂತಾನೆ ನನ್ನ ನಂಬಿಕೆ.
04:11 PM (IST) Aug 15
03:39 PM (IST) Aug 15
ಬೆಂಗಳೂರಿನ ವಿಲ್ಸನ್ ಗಾರ್ಡ್‌ನ್ ಬಳಿ ಸಂಭವಿಸಿದ ನಿಗೂಢ ಸ್ಫೋಟ ಪ್ರಕರಣ ಸಂಬಂಧ ಕಾರ್ಯಾಚರಣೆ ನಡಸುತ್ತಿದ್ದ ಎಸ್‌ಡಿಆರ್‌ಎಫ್ ತಂಡ ಮಹತ್ವದ ಅಂಶ ಬಯಲು ಮಾಡಿದೆ. ಸಿಲಿಂಡರ್‌ನಿಂದ ಸ್ಫೋಟ ಸಂಭವಿಸಿಲ್ಲ ಅನ್ನೋದು ಖಚಿತಗೊಂಡಿದೆ.
02:50 PM (IST) Aug 15
02:17 PM (IST) Aug 15
01:42 PM (IST) Aug 15
01:28 PM (IST) Aug 15
01:12 PM (IST) Aug 15
12:43 PM (IST) Aug 15
12:38 PM (IST) Aug 15
12:35 PM (IST) Aug 15
ಇದೇ ಮಾದಲ ಬಾರಿಗೆ ಮಾಧ್ಯಮಗಳ ಮುಂದೆ ಮಾತನಾಡಿರುವ ಧರ್ಮಸ್ಥಳದ ಮುಸುಕುಧಾರಿ "ಭೀಮಾ" ಸೌಜನ್ಯ ಶವ ಸೇರಿದಂತೆ ಇತರರ ಬಗ್ಗೆ ಹೇಳಿದ್ದೇನು?
12:31 PM (IST) Aug 15
12:06 PM (IST) Aug 15
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಮತ್ತೆ ದರ್ಶನ್ ತೂಗುದೀಪ ಅವರು ಜೈಲು ಸೇರಿದ್ದಾರೆ. ಜಾಮೀನು ರದ್ದಾಗಿದ್ದಕ್ಕೆ ದರ್ಶನ್ ಮತ್ತೆ ಶ್ರೀಕೃಷ್ಣನ ಜನ್ಮಸ್ಥಳಕ್ಕೆ ಎಂಟ್ರಿ ಕೊಟ್ಟಿದ್ದಾರೆ.
12:00 PM (IST) Aug 15
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು 79ನೇ ಸ್ವಾತಂತ್ರ್ಯೋತ್ಸವದಂದು ಧ್ವಜಾರೋಹಣ ನೆರವೇರಿಸಿ, ರಾಜ್ಯದ ಜನತೆಗೆ ಶುಭಾಶಯಗಳನ್ನು ತಿಳಿಸಿದರು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿಷ್ಠ ಭಾರತ ನಿರ್ಮಾಣದ ಪ್ರತಿಜ್ಞೆ, ರಾಜ್ಯ ಸರ್ಕಾರದ ಕಲ್ಯಾಣ ಯೋಜನೆಗಳು, ಕುರಿತು ಭಾಷಣ ಮಾಡಿದರು.
11:52 AM (IST) Aug 15
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ರದ್ದಾದ ನಂತರ ದರ್ಶನ್, ಪವಿತ್ರಾ ಗೌಡ ಮತ್ತು ಡಿ ಗ್ಯಾಂಗ್ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಮರಳಿದ್ದಾರೆ. ರಜಾ ದಿನಗಳಲ್ಲಿ ಕುಟುಂಬದ ಭೇಟಿಗೆ ಅವಕಾಶವಿಲ್ಲದ ಕಾರಣ, ಅವರು ಸೋಮವಾರದವರೆಗೆ ಕಾಯಬೇಕಾಗಿದೆ.
11:46 AM (IST) Aug 15
11:07 AM (IST) Aug 15
10:33 AM (IST) Aug 15
10:14 AM (IST) Aug 15
Bigg Boss Dhanushree: ಬಿಗ್ ಬಾಸ್ ಕನ್ನಡ ಸೀಸನ್ 8 ಸ್ಪರ್ಧಿ ಧನುಶ್ರೀ ಅವರು ಭರತ್ ಎನ್ನುವವರ ಜೊತೆ ವಿಡಿಯೋ ಮಾಡಿ ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದರು. ಈಗ ಇವರಿಬ್ಬರು ದೂರ ಆಗಿದ್ದಾರಂತೆ.
10:00 AM (IST) Aug 15
09:41 AM (IST) Aug 15
08:42 AM (IST) Aug 15