ದೆಹಲಿಯಲ್ಲಿರುವ ಹುಮಾಯುನ್ ಸಮಾಧಿ ಕಾಂಪ್ಲೆಕ್ಸ್‌ನ ಒಂದು ಬಾಗ ಕುಸಿತಗೊಂಡು ಐವರು ಮೃತಪಟ್ಟಿದ್ದಾರೆ. ಇತ್ತ ಹಲವರನ್ನು ಕಾರ್ಯಾಚರಣೆ ಮೂಲಕ ರಕ್ಷಿಸಲಾಗಿದೆ. ಇಷ್ಟೇ ಅಲ್ಲ 7ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ದೆಹಲಿ (ಆ.15) ಹುಮಾಯುನ್ ಕಾಂಪ್ಲೆಸ್ ಒಂದು ಭಾಗ ಕುಸಿತಗೊಂಡ ಪರಿಣಾಮ ಐವರು ಮೃತಪಟ್ಟ ಘಟನೆ ದೆಹಲಿಯ ನಿಜಾಮುದ್ದೀನ್ ವಲಯದಲ್ಲಿ ನಡೆದಿದೆ. ಹುಮಾಯುನ್ ಸಮಾಧಿ ಕಾಂಪ್ಲೆಕ್ಸ್‌ನಲ್ಲಿರುವ ದರ್ಗಾದ ಮೇಲ್ಚಾವಣಿ ಕುಸಿತಗೊಂಡ ಪರಿಣಾಮ ಸಾವು ನೋವಿನ ಪ್ರಮಾಣ ಹೆಚ್ಚಾಗಿದೆ. ಅವಶೇಷಗಳಡಿ ಸಿಲುಕಿದ 11 ಮಂದಿಯನ್ನು ಕಾರ್ಯಾಚರಣೆ ಮೂಲಕ ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ದೆಹಲಿ ಅಗ್ನಿಶಾಮಕ ದಳ, ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ .
NDRF ತಂಡದಿಂದ ಕಾರ್ಯಾಚರಣೆ
ದೆಹಲಿಯ ನಿಜಾಮುದ್ದೀನ್ ಪ್ರದೇಶದ ಹುಮಾಯೂನನ ಸಮಾಧಿ ಸಂಕೀರ್ಣದಲ್ಲಿರುವ ದರ್ಗಾ ಶರೀಫ್ ಪಟ್ಟೆ ಶಾ ಒಂದು ಭಾಗ ಶುಕ್ರವಾರ ಸಂಜೆ ಕುಸಿದು 3 ಮಹಿಳೆಯರು ಮತ್ತು 2 ಪುರುಷರು ಸೇರಿದಂತೆ 5 ಜನರು ಸಾವನ್ನಪ್ಪಿದ್ದಾರೆ. ಒಂಬತ್ತು-ಹತ್ತು ಜನರು ಸಿಕ್ಕಿಹಾಕಿಕೊಂಡಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.ಗುಮ್ಮಟದ ಒಂದು ಭಾಗ ಬಿದ್ದ ಬಗ್ಗೆ ಸಂಜೆ 4:30 ರ ಸುಮಾರಿಗೆ ಕರೆ ಬಂದಿದೆ ಎಂದು ದೆಹಲಿ ಅಗ್ನಿಶಾಮಕ ಸೇವೆ ತಿಳಿಸಿದೆ. ನಿಜಾಮುದ್ದೀನ್ ಪ್ರದೇಶದ ಹುಮಾಯೂನನ ಸಮಾಧಿಯ ಬಳಿ ಇರುವ ದರ್ಗಾ ಶರೀಫ್ ಪಟ್ಟೆ ಶಾದಲ್ಲಿ ಛಾವಣಿ ಕುಸಿದ ನಂತರ NDRF ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಹುಮಾಯುನ್ ಸಮಾಧಿ ಜನಪ್ರಿಯ ತಾಣ
ಪೊಲೀಸ್ ಮತ್ತು ಅಗ್ನಿಶಾಮಕ ದಳದ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸಲು ಸ್ಥಳಕ್ಕೆ ಧಾವಿಸಿದವು. ಅಧಿಕಾರಿಗಳು ಸಾವುನೋವುಗಳನ್ನು ಇನ್ನೂ ದೃಢಪಡಿಸಿಲ್ಲ, ಮತ್ತು ಅವಶೇಷಗಳನ್ನು ತೆರವುಗೊಳಿಸಲು ಮತ್ತು ಇತರ ಬದುಕುಳಿದವರನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ. ಹುಮಾಯುನ್ ಸಮಾಧಿ 16 ನೇ ಶತಮಾನದ ಮಧ್ಯಭಾಗದ UNESCO ವಿಶ್ವ ಪರಂಪರೆಯ ತಾಣವು ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿದೆ.
ದೆಹಲಿಯಲ್ಲಿ ಭಾರೀ ಮಳೆ
ಕಳೆದ ಕೆಲವು ದಿನಗಳಿಂದಿನ ದೆಹಲಿಯಲ್ಲಿ ಭಾರೀ ಮಳೆಯಾಗುತ್ತಿದೆ. ಭಾರಿ ಮಳೆ ಪರಿಣಾಮದಿಂದ ಹುಮಾಯುನ್ ಸಮಾಧಿ ಸಂಕೀರ್ಣದ ಒಂದು ಭಾಗ ಕುಸಿತಗೊಂಡಿದೆ ಎಂದು ವರದಿಯಾಗಿದೆ. ದೆಹಲಿಯ ಹಲವು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದೆ. ರಸ್ತೆಗಳು ಜಲಾವೃತಗೊಂಡಿದೆ. ಇದರಿಂದ ಟ್ರಾಫಿಕ್ ಸಮಸ್ಸೆಯೂ ಹೆಚ್ಚಾಗಿದೆ. ದೆಹಲಿಯ ಹನ್ಸರಾಜ್ ಸೇಠಿ ಮಾರ್ಗ್, ಕಲ್ಕಾಜಿಯಲ್ಲಿ ಭಾರೀ ಮಳೆಯ ನಡುವೆ ಮರವೊಂದು ಬಿದ್ದು ಇಬ್ಬರು ವ್ಯಕ್ತಿಗಳು ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದಾಗ, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ವ್ಯಕ್ತಿ ಜೊತೆಗಿದ್ದ ಮಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಗಳನ್ನು ಏಮ್ಸ್ ಟ್ರಾಮಾ ಸೆಂಟರ್‌ಗೆ ದಾಖಲಿಸಲಾಗಿದೆ.. ಭಾರತೀಯ ಹವಾಮಾನ ಇಲಾಖೆ (IMD) ಬುಧವಾರ ದೆಹಲಿ-NCR ಮೇಲೆ ತೀವ್ರ ಮಳೆ ಬೀಳುವ ಬಗ್ಗೆ ವರದಿ ಮಾಡಿದೆ, ಬೆಳಿಗ್ಗೆಯಿಂದ ನಗರದಾದ್ಯಂತ ಲಘುದಿಂದ ಮಧ್ಯಮ ಮಳೆಯಾಗಿದೆ. ಬೆಳಿಗ್ಗೆ 10 ಗಂಟೆಯಿಂದ ಮುಂದಿನ ಎರಡರಿಂದ ಮೂರು ಗಂಟೆಗಳಲ್ಲಿ ಭಾರೀ ಮಳೆ, ಗುಡುಗು ಮತ್ತು ಮಿಂಚು ಸಂಭವಿಸುವ ಸಾಧ್ಯತೆಯಿದೆ. IMD ದಿನವಿಡೀ ಮಳೆಯಾಗುವ ಮುನ್ಸೂಚನೆ ನೀಡಿದೆ, ಉಷ್ಣಾಂಶ 25°C ಮತ್ತು 34°C ನಡುವೆ ಇರುತ್ತದೆ. ಕಳೆದ ಕೆಲವು ದಿನಗಳಲ್ಲಿ, ದೆಹಲಿಯಲ್ಲಿ ಪದೇ ಪದೇ ಭಾರೀ ಮಳೆಯಾಗಿದ್ದು, ಮಿಂಟೊ ಸೇತುವೆ, ವಿಜಯ್ ಚೌಕ್ ಮತ್ತು ಬರಾಪುಲ್ಲ ಸೇತುವೆಯಂತಹ ಪ್ರದೇಶಗಳಲ್ಲಿ ನೀರು ನಿಂತಿದೆ. ಆಗಸ್ಟ್ 12 ರವರೆಗೆ ಈ ಪ್ರದೇಶದಲ್ಲಿ ಮಳೆ ಮತ್ತು ಗುಡುಗು ಮುಂದುವರಿಯುವ ನಿರೀಕ್ಷೆಯಿದೆ.
