ವಿಜಯಪುರದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣದ ವೇಳೆ ಶಾಸಕ ಯತ್ನಾಳ್, ಯೂಟ್ಯೂಬ್ ಪತ್ರಕರ್ತನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ನಡೆದಿದೆ. ಮುಸ್ಲಿಂ ಯುವತಿಯರ ಜೊತೆ ಮದುವೆ ವಿವಾದದ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಯತ್ನಾಳ್ ಕೋಪಗೊಂಡಿದ್ದಾರೆ.

ವಿಜಯಪುರ (ಆ.15) ಯೂಟ್ಯೂಬ್ ಪತ್ರಕರ್ತ ಎಂದ ವ್ಯಕ್ತಿಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಿಗ್ಗಾಮುಗ್ಗ ಜಾಡಿಸಿದ ಘಟನೆ ವಿಜಯಪುರ ಎಸ್‌ಆರ್ ಕಾಲೋನಿಯಲ್ಲಿ ನಡೆದಿದೆ.

ಸಂಗೊಳ್ಳಿ ರಾಯಣ್ಣನ ಮೂರ್ತಿ ಅನಾವರಣ ಕಾರ್ಯಕ್ರಮಕ್ಕೆ ಬಂದಿದ್ದ ಯತ್ನಾಳರು. ಮಾಧ್ಯಮಗಳಿಗೆ ಮುಸ್ಲಿಂ ಧರ್ಮದ ಹುಡುಗಿಯರ ಜೊತೆ ಮದುವೆ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡುತ್ತಿದ್ದರು ಈ ವೇಳೆ ಯೂಟ್ಯೂಬರ್ ಪತ್ರಕರ್ತ ಎಂದು ಹೇಳಿಕೊಂಡ ಮಹಮ್ಮದ್ ಎಂಬಾತ ಯತ್ನಾಳ್‌ಗೆ ಪ್ರಶ್ನೆ ಕೇಳಿದ್ದಾನೆ.

'ನೀನು ಯಾರು?' ಎಂದು ಪ್ರಶ್ನಿಸಿದ ಯತ್ನಾಳ್‌ಗೆ, 'ಮೈ ನೇಮ್ ಈಜ್ ಮೊಹಮ್ಮದ್' ಎಂದು ಉತ್ತರಿಸುತ್ತಿದ್ದಂತೆ, ಶಾಸಕರು ಕೋಪಗೊಂಡು, 'ಗೆಟ್ ಔಟ್ ರಾಸ್ಕಲ್! ಎಂದು ಗುಡುಗಿದ್ದಾರೆ.

ಇದನ್ನೂ ಓದಿ: 'ಮುಸ್ಲಿಂ ಯುವತಿಯರನ್ನ ಮದುವೆಯಾದ್ರೆ ₹'5 ಲಕ್ಷ ಘೋಷಣೆ; ಯತ್ನಾಳ್ ವಿರುದ್ಧ ಕಲಬುರಗಿಯಲ್ಲಿ ಎಫ್‌ಐಆರ್!

ಎಲ್ಲಿಂದಲೋ ಬರ್ತಾರೆ, ಯೂಟ್ಯೂಬ್ ಅಂತ ದಂಧೆ ಮಾಡಿಕೊಂಡಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದ ಯತ್ನಾಳರು.

) ಯೂಟ್ಯೂಬ್ ಪತ್ರಕರ್ತ ಎಂದ ವ್ಯಕ್ತಿಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಿಗ್ಗಾಮುಗ್ಗ ಜಾಡಿಸಿದ ಘಟನೆ ವಿಜಯಪುರ ಎಸ್‌ಆರ್ ಕಾಲೋನಿಯಲ್ಲಿ ನಡೆದಿದೆ.