ನನಗೆ ಸಣ್ಣ ವಯಸ್ಸಿನಿಂದಲ್ಲೂ ಸಿನಿಮಾ ಹುಚ್ಚು. ನಾನು ಮೊದಲಿಗೆ ನೋಡಿದ ಸಿನಿಮಾ ‘ಪುಟ್ನಂಜ’ ಅಲ್ಲಿಂದ ನನ್ನ ಮತ್ತು ಹಂಸಲೇಖಾ ಅವರ ನಂಟು ಬೆಳೆಯಿತು ಅಂತಾನೆ ನನ್ನ ನಂಬಿಕೆ.

ಡಾ ವಿಷ್ಣುವರ್ಧನ್‌ ಅವರ ಅಭಿಮಾನಿಯಾಗಿರುವ ಪಿ ವಿ ಶಂಕರ್‌ ನಿರ್ದೇಶಿಸಿ, ನಿರ್ಮಿಸಿರುವ ‘ಸೋಲ್‌ಮೇಟ್ಸ್‌’ ಚಿತ್ರದ ಆಡಿಯೋ ಬಿಡುಗಡೆ ಆಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ಹಾಗೂ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್‌ ಬಣಕಾರ್‌ ಅವರು ಆಗಮಿಸಿ ಚಿತ್ರದ ಹಾಡು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ನಾದಬ್ರಹ್ಮ ಹಂಸಲೇಖ ಸಂಗೀತ ಸಂಯೋಜಿಸಿ, ಸಾಹಿತ್ಯ ಹಾಗೂ ಅನಿರುದ್ಧ್‌ ಶಾಸ್ತ್ರಿ, ಅಂಕಿತಾ ಕುಂಡು ಹಾಡಿರುವ ಹಾಡಿದು. ಶ್ರೀಜಿತ್‌ ಸೂರ್ಯ ಹಾಗೂ ಪ್ರಸನ್ನ ಶೆಟ್ಟಿ, ಯಶ್ವಿಕಾ ನಿಷ್ಕಲ, ರಜನಿ, ಯಶ್‌ ಶೆಟ್ಟಿ, ಶರತ್‌ ಲೋಹಿತಾಶ್ವ, ನವೀನ್‌ ಡಿ ಪಡೀಲ್‌ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ನಿರ್ಮಾಣಕ್ಕೆ ಜಿ ಆರ್‌ ಅರ್ಚನಾ ಅವರು ಜೊತೆಗೂಡಿದ್ದಾರೆ.

ಪಿ ವಿ ಶಂಕರ್‌, ‘ನನಗೆ ಸಣ್ಣ ವಯಸ್ಸಿನಿಂದಲ್ಲೂ ಸಿನಿಮಾ ಹುಚ್ಚು. ನಾನು ಮೊದಲಿಗೆ ನೋಡಿದ ಸಿನಿಮಾ ‘ಪುಟ್ನಂಜ’ ಅಲ್ಲಿಂದ ನನ್ನ ಮತ್ತು ಹಂಸಲೇಖಾ ಅವರ ನಂಟು ಬೆಳೆಯಿತು ಅಂತಾನೆ ನನ್ನ ನಂಬಿಕೆ. ಹೀಗಾಗಿ ನನ್ನ ಮೊದಲ ಸಿನಿಮಾಕ್ಕೆ ಅವರಿಂದಲೇ ಸಂಗೀತ ಮಾಡಿಸಿದ್ದೇನೆ. ಒಂದು ಹುಡುಗ ಹಾಗೂ ಹುಡುಗಿ ಪರಿಸರವನ್ನು ಕಾಪಾಡಿಕೊಳ್ಳುವ ಕುರಿತಾಗಿ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ನೇಚರ್‌ ಲವ್‌ ಹಾಗೂ ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್‌ ಸಿನಿಮಾ’ ಎಂದರು. ತುಂಬ ಮೃದು ಮನಸಿನ ಹುಡುಗಿ ಭೂಮಿಯ ಪಾತ್ರವನ್ನು ಈ ಸಿನಿಮಾದಲ್ಲಿ ಮಾಡಿದ್ದೇನೆ. ಈ ಸಿನಿಮಾದ ಪ್ರತಿಯೊಂದು ಸಾಂಗ್ ಶೂಟಿಂಗ್‌ಗಳೂ ತುಂಬಾ ನೆನಪಿದೆ. ಹಂಸಲೇಖ ಅವರ ಜತೆಗೆ ಕೆಲಸ ಮಾಡಲು ಸಿಕ್ಕಿದ್ದು ತುಂಬ ಖುಷಿ ಇದೆ ಎಂದು ನಿಷ್ಕಲ ಶೆಟ್ಟಿ ಹೇಳಿದರು.

ಪ್ರಸನ್ನ ಶೆಟ್ಟಿ ಮಾತನಾಡಿ, ಇದು ಮೊದಲ ಸಿನಿಮಾ. ಆದ್ದರಿಂದ ನಾನು ಅವರಲ್ಲಿ ಆ ಪ್ರಶ್ನೆಯನ್ನು ಕೇಳಿದ್ದೇನೆ. ಅದಕ್ಕೆ ಅವರು ನಾನು ನನ್ನನ್ನು ತುಂಬಾ ನಂಬುತ್ತೇನೆ ಎಂಬ ಉತ್ತರವನ್ನು ಕೊಟ್ಟಿದ್ರು. ಅಲ್ಲದೆ ಇವರು ತುಂಬಾ ಒಳ್ಳೆ ವ್ಯಕ್ತಿ ಮತ್ತು ಪ್ರತಿಯೊಂದು ಕೆಲಸವನ್ನು ಕೂಡ ತುಂಬ ಗಮನಹರಿಸಿ ಮಾಡುತ್ತಾರೆ. ಹಾಗಾಗಿ ಎಲ್ಲರೂ ಅವರಿಗೆ ಸಹಕಾರ ನೀಡಲೇಬೇಕು. ನಾನು ಒಬ್ಬ ರಂಗಭೂಮಿ ಕಲಾವಿದ. ಇದು ನನ್ನ ಈ ವರ್ಷದ ಎರಡನೇ ಸಿನಿಮಾ. ಇದರಲ್ಲಿ ನಾನು ಗೋಪಿ ಎಂಬ ಮುಗ್ಧ ಹಳ್ಳಿ ಹುಡುಗನ ಪಾತ್ರವನ್ನು ಮಾಡುತ್ತಿದ್ದೇನೆʼʼ ಎಂದು ಹೇಳಿದರು.