ಮಧುಗಿರಿ ಏಕಶಿಲಾ ಬೆಟ್ಟಕ್ಕೆ ರೋಪ್‌ವೆ ಸೌಲಭ್ಯ ಕಲ್ಪಿಸುವ ಸಂಬಂಧ ಸಮೀಕ್ಷೆ ಮಾಡಲಾಗಿದ್ದು, ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಅಡಿ ಯೋಜನೆ ಜಾರಿಗೊಳಿಸಲಾಗುವುದು. ಈ ಸಂಬಂಧ ಟೆಂಡರ್‌ ಕರೆಯಲಾಗಿದೆ.

ವಿಧಾನ ಪರಿಷತ್‌ (ಆ.15): ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ವಾಣಿವಿಲಾಸ ಸಾಗರದಲ್ಲಿ ನವೆಂಬರ್‌ 1ರಿಂದ ಪ್ರವಾಸಿಗರಿಗೆ ಬೋಟಿಂಗ್‌ ಸೌಲಭ್ಯ ಕಲ್ಪಿಸಲಾಗುವುದು ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ್‌ ತಿಳಿಸಿದ್ದಾರೆ. ಕಾಂಗ್ರೆಸ್ಸಿನ ಡಿ.ಟಿ. ಶ್ರೀನಿವಾಸ್‌ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿವಿ ಸಾಗರ ಬಳಿ ಪ್ರವಾಸೋದ್ಯಮ ಇಲಾಖೆಯ ಜಾಗವಿದ್ದು, ಅಲ್ಲಿ ಕೆಎಸ್‌ಟಿಡಿಸಿಯಿಂದ ಹೋಟೆಲ್‌ ಆರಂಭಿಸಲಾಗುವುದು. ಜೊತೆಗೆ ಕಯಾಕಿಂಗ್‌, ಜೆಟ್‌ ಸ್ಕೀ, ಬನಾನ ರೈಡ್‌ ಮುಂತಾದ ಚಟುವಟಿಕೆ ನಡೆಸಲು ಜಲಸಂಪನ್ಮೂಲ ಇಲಾಖೆಯಿಂದ ನಿರಾಕ್ಷೇಪಣ ಪತ್ರ ನಿರೀಕ್ಷಿಸಲಾಗುತ್ತಿದ್ದು, ಪತ್ರ ಬಂದ ನಂತರ ಸೂಕ್ತ ಹೂಡಿಕೆದಾರರನ್ನು ಆಯ್ಕೆ ಮಾಡಿ ಜಲಸಾಹಸ ಚಟುವಟಿಕೆ ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಮಧುಗಿರಿ ಬೆಟ್ಟಕ್ಕೆ ರೋಪ್‌ ವೇ: ಮಧುಗಿರಿ ಏಕಶಿಲಾ ಬೆಟ್ಟಕ್ಕೆ ರೋಪ್‌ವೆ ಸೌಲಭ್ಯ ಕಲ್ಪಿಸುವ ಸಂಬಂಧ ಸಮೀಕ್ಷೆ ಮಾಡಲಾಗಿದ್ದು, ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಅಡಿ ಯೋಜನೆ ಜಾರಿಗೊಳಿಸಲಾಗುವುದು. ಈ ಸಂಬಂಧ ಟೆಂಡರ್‌ ಕರೆಯಲಾಗಿದೆ. ಇದಲ್ಲದೇ 11 ಪ್ರವಾಸಿ ತಾಣಗಳಲ್ಲಿ ರೋಪ್‌ ವೇ ಸೌಲಭ್ಯ ಕಲ್ಪಿಸಲು ಕಾರ್ಯಾಸಾಧ್ಯತಾ ವರದಿಯನ್ನು ಪಡೆದಿದ್ದು, ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿ ಮುಂದೆ ಸಲ್ಲಿಸಿ ಅನುಮೋದನೆ ಪಡೆದು ಮುಂದಿನ ಕ್ರಮ ವಹಿಸಲಾಗುವುದು ಎಂದರು.

ಸಂಗ್ರಹಿಸಿದ ಶುಲ್ಕ ಬೀದಿ ಬದಿ ವ್ಯಾಪಾರಸ್ಥರಿಗೆ ಸದ್ಬಳಕೆಯಾಗಲಿ: ಸರ್ಕಾರದ ಕಾನೂನು ಹಾಗೂ ಮಾರ್ಗಸೂಚಿಯನ್ವಯ ಬೀದಿ ಬದಿ ವ್ಯಾಪಾರಸ್ಥರಿಂದ ಸಂಗ್ರಹಿಸುವ ಶುಲ್ಕ ನಿಗದಿತವಾಗಿರಲಿ. ಸಂಗ್ರಹಿಸಿದ ಶುಲ್ಕ ಪುನಃ ಬೀದಿ ಬದಿ ವ್ಯಾಪಾರಸ್ಥರಿಗೆ ಸದ್ಬಳಕೆಯಾಗಲಿ ಎಂದು ಹೇಳಿದರು. ಬೀದಿ ಬದಿ ವ್ಯಾಪಾರಸ್ಥರಿಂದ ಸಂಗ್ರಹಿಸಿದ ಶುಲ್ಕ ಮತ್ತು ಹಣದ ಕ್ರೋಢೀಕರಣ ಸರಿಯಾಗಿ ಸದ್ಬಳಕೆಯಾಗುತ್ತಿಲ್ಲವೆಂದು ದೂರುಗಳು ಬರುತ್ತಿವೆ. ಸರ್ಕಾರದ ಮಾರ್ಗಸೂಚಿಗಳನ್ವಯ ಸಂಗ್ರಹಿಸಿದ ಶುಲ್ಕದ ಮೊತ್ತ ಸರಿಯಾಗಿ ಅರ್ಹರಿಗೆ ಸದ್ಬಳಕೆಯಾಗಬೇಕು ಎಂದರು.

ಸಭೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು ತಮ್ಮ ಹಲವಾರು ಸಮಸ್ಯೆಗಳ ಕುರಿತು ಹಾಗೂ ಶುಲ್ಕ ಸಂಗ್ರಹಣೆ ಕುರಿತು ಸಮಿತಿ ರಚಿಸುವ ಕುರಿತು ಸಚಿವ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಪಾಟೀಲ ಜಿಲ್ಲಾಧಿಕಾರಿಗಳ ಮೂಲಕ ಬೀದಿಬದಿ ವ್ಯಾಪಾರಸ್ಥರ ಶುಲ್ಕ ಸಂಗ್ರಹಣೆ ಹಾಗೂ ಸಂಗ್ರಹಿಸಿದ ಶುಲ್ಕ ಸದ್ಬಳಕೆ ಮಾಡುವ ಕುರಿತಂತೆ ಸರ್ಕಾರದ ಸಂಪೂರ್ಣ ಮಾರ್ಗಸೂಚಿಗಳೊಂದಿಗೆ ಜಿಲ್ಲೆಯ ನಗರಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ತಿಳಿಸುವ ಸೂಚನೆ ನೀಡಿದರು.