ಅಂಬಾನಿ, ಮಿತ್ತಲ್ ನಿದ್ದೆಗೆಡಿಸಿದ BSNL, 47,000 ಕೋಟಿ ರೂ ಹೂಡಿಕೆ, 1 ರೂ ರಿಚಾರ್ಜ್ ಪ್ಲಾನ್
ಮುಕೇಶ್ ಅಂಬಾನಿ ಜಿಯೋ, ಸುನಿಲ್ ಮಿತ್ತಲ್ ಏರ್‌ಟೆಲ್‌ಗೆ ಆತಂಕ ಎದುರಾಗಿದೆ. ಬಿಎಸ್‌ಎನ್‌ಎಲ್ ಇದೀಗ ಟೆಲಿಕಾಂ ಮಾರುಕಟ್ಟೆ ಆಕ್ರಮಿಸುತ್ತಿದೆ. ಬರೋಬ್ಬರಿ 47,000 ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಇಷ್ಟೇ ಅಲ್ಲ 1 ರೂಪಾಯಿ ರೀಚಾರ್ಜ್ ಪ್ಲಾನ್ ಕೂಡ ನೀಡುತ್ತಿದೆ.

ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ತೀವ್ರ ಸ್ಪರ್ಧೆ ಇದೆ. ಜಿಯೋ, ಏರ್‌ಟೆಲ್ ನಡುವಿನ ಸ್ಪರ್ಧೆ ತೀವ್ರಗೊಳ್ಳುತ್ತಿದ್ದಂತೆ ಬಿಎಸ್‌ಎನ್ಎಲ್ ಮತ್ತೆ ಈ ಎರಡೂ ಸಂಸ್ಥೆಗಳಿಗೆ ಠಕ್ಕರ್ ನೀಡಿದೆ. ದೇಶದ ಟೆಲಿಕಾಂ ಮಾರುಕಟ್ಟೆ ಮರು ಆಕ್ರಮಿಸಿಕೊಳ್ಳಲು ಬಿಎಸ್‌ಎನ್ಎಲ್ ಹಂತ ಹಂತವಾಗಿ ಪ್ರಯತ್ನಿಸುತ್ತಿದೆ. ಇದರಲ್ಲಿ ಸಫಲತೆ ಕಾಣುತ್ತಿದೆ. ಇದೀಗ ಬಿಎಸ್‌ಎನ್ಎಲ್ ನಡೆ, ಮುಕೇಶ್ ಅಂಬಾನಿ ಜಿಯೋ, ಸುನಿಲ್ ಮಿತ್ತಲ್ ಏರ್‌ಟೆಲ್ ಕಂಪನಿಗಳ ತಲೆನೋವಿಗೆ ಕಾರಣವಾಗಿದೆ.
ಬಿಎಸ್‌ಎನ್ಎಲ್ ಇದೀಗ ಬರೋಬ್ಬರಿ 47,000 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ. ತನ್ನ 4ಜಿ ಸೇವೆ ವಿಸ್ತರಣೆ, ಗ್ರಾಹಕರಿಗೆ ಅತ್ಯುತ್ತಮ ನೆಟ್‌ವರ್ಕ್ ಹಾಗೂ ಡೇಟಾ ಒದಗಿಸಲು ಬಿಎಸ್‌ಎನ್ಎಲ್ ಮಹತ್ವದ ಹೂಡಿಕೆ ಮಾಡಿದೆ. ಈಗಾಗಲೇ ಬಿಎಸ್‌ಎನ್ಎಲ್ 1 ರೂಪಾಯಿ ರೀಚಾರ್ಜ್ ಪ್ಲಾನ್ ಕೂಡ ಘೋಷಿಸಿದ್ದು, ಖಾಸಗಿ ಟೆಲಿಕಾಂ ಕಂಪನಿಗಳ ತಲೆನೋವಿಗೆ ಕಾರಣವಾಗಿದೆ.
ಆತ್ಮನಿರ್ಭರ್ ಭಾರತ್ ಯೋಜನೆಯಡಿ ಬಿಎಸ್‌ಎನ್ಎಲ್ 47,000 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ. ಈ ಮೂಲಕ 4ಜಿ ನೆಟ್‌ವರ್ಕ್ ದೇಶದ ಎಲ್ಲಾ ಭಾಗದಲ್ಲಿ ಸಿಗುವಂತೆ ಹಾಗೂ ಬಿಎಸ್‌ಎನ್ಎಲ್ ಗ್ರಾಹಕರು ಅಡೆ ತಡೆ ಇಲ್ಲದೆ ಡೇಟಾ ಸೇವೆ ಬಳಕೆ ಮಾಡುವಂತೆ ಮಾಡಲು ಮುಂದಾಗಿದೆ ಎಂದು ಟೆಲಿಕಾಂ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಹೇಳಿದ್ದಾರೆ.
ದೇಶಾದ್ಯಂತ ಒಟ್ಟು 1 ಲಕ್ಷ 4ಜಿ ಬಿಎಸ್‌ಎನ್ಎಲ್ ಟವರ್ ಹಾಕಲಾಗುತ್ತಿದೆ. ನೆಟ್‌ವರ್ಕ್ ಬಲಪಡಿಸುವ ಕೆಲಸ ನಡೆಯುತ್ತಿದೆ. 4ಜಿ ಸೇವೆ ವಿಸ್ತರಣೆ ಜೊತೆಗೆ ಬಿಎಸ್‌ಎನ್ಎಲ್ 5ಜಿ ಸೇವೆ ಕುರಿತು ಮಹತ್ವದ ಬೆಳವಣಿಗೆ ಆಗಿದೆ. ಶೀಘ್ರದಲ್ಲೇ ಬಿಎಸ್‌ಎನ್ಎಲ್ ಗ್ರಾಹಕರಿಗೆ ಅಡೆ ತಡೆ ರಹಿತ 4ಜಿ ಸೇವೆ ಲಭ್ಯವಾಗಲಿದೆ. ಇದರ ಬೆನ್ನಲ್ಲೇ ಬಿಎಸ್‌ಎನ್ಎಲ್ 5ಜಿ ಸೇವೆಗೆ ಅಪ್‌ಗ್ರೇಡ್ ಆಗಲಿದೆ ಎಂದು ಜ್ಯೋತಿರಾಧಿತ್ಯ ಸಿಂಧಿಯಾ ಹೇಳಿದ್ದಾರೆ.
ಬಿಎಸ್‌ಎನ್ಎಲ್ ಈಗಾಗಲೇ ಸೀಮಿತ ಅವಧಿಯ ಫ್ರೀಡಂ ಆಫರ್ ಘೋಷಿಸಿದೆ. ಕೇವಲ 1 ರೂಪಾಯಿ ರೀಚಾರ್ಜ್ ಮಾಡಿದರೆ ಸಾಕು, ಪ್ರತಿ ದಿನ 2ಜಿಬಿ ಡೇಟಾ (4ಜಿ), 100 ಎಸ್ಎಂಎಸ್, ಅನ್‌ಲಿಮಿಟೆಡ್ ಲೋಕಲ್ ಕಾಲ್ ಸೇರಿದಂತೆ ಹಲವು ಸೌಲಭ್ಯ ನೀಡುತ್ತಿದೆ. ಬಿಎಸ್‌ಎನ್ಎಲ್ ಈ ಎಲ್ಲಾ ನಡೆ ಜಿಯೋ, ಏರ್‌ಟೆಲ್ ಸಂಸ್ಥೆಗಳಿಗೆ ತೀವ್ರ ಹೊಡೆತ ನೀಡಿದೆ.