Published : Sep 12, 2026, 05:22 AM ISTUpdated : Sep 12, 2026, 10:55 PM IST

Karnataka News Live: ಗಣಪತಿ ಕಾರ್ಯಕ್ರಮದಲ್ಲಿ ಮಂಡ್ಯ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್‌ಗೆ ಗಾಯ, ಆಸ್ಪತ್ರೆ ದಾಖಲು

ಸಾರಾಂಶ

ಮಂಡ್ಯ:  ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ನಿತ್ಯ 8500 ಕ್ಯುಸೆಕ್‌ಗೂ ಅಧಿಕ ನೀರನ್ನು ಹರಿಸುತ್ತಿದ್ದಾರೆ ಎಂದು ಆರೋಪಿಸಿ ಭೂಮಿತಾಯಿ ಹೋರಾಟ ಸಮಿತಿ ಸದಸ್ಯರು ಕಾವೇರಿ ನದಿಗಿಳಿದು ಪ್ರತಿಭಟಿಸಿದರು. ಪಟ್ಟಣದ ಸ್ನಾನ ಘಟ್ಟದ ಬಳಿ ಸಮಿತಿ ರೈತ ಮುಖಂಡ ಕೆ.ಎಸ್.ನಂಜುಡೇಗೌಡ, ಸಮಿತಿ ಅಧ್ಯಕ್ಷ ಬಿಲ್ಲೇನಹಳ್ಳಿ ಕೃಷ್ಣೇಗೌಡ ನೇತೃತ್ವದಲ್ಲಿ ರೈತರು ನದಿಗಿಳಿದು ಪ್ರಾಧಿಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ನಂಜುಂಡೇಗೌಡ ಮಾತನಾಡಿ, ಸರ್ಕಾರ ಸ್ಥಳೀಯ ನಾಲೆಗಳಿಗೆ ನೀರು ಹರಿಸಿ ರೈತರ ಬೆಳೆ ಉಳಿಸಲು ಮುಂದಾಗುತ್ತಿಲ್ಲ. ಬದಲಿಗೆ ಕಾವೇರಿ ನೀರು ಪ್ರಾಧಿಕಾರ ಹೇಳಿದಂತೆ ಪ್ರತಿ ಬಾರಿ ತಮಿಳುನಾಡಿಗೆ ನೀರು ಹರಿಸುತ್ತಾ ಬಂದಿದೆ. 2 ತಿಂಗಳ ಹಿಂದೆ ಕಟಾವಿಗೆ ಬಂದ ಬೆಳೆ ಬಾಡುತ್ತಿರುವ ಬಗ್ಗೆ ರೈತರು ಸಿಎಂ ಬಳಿ ನೀರು ಕೇಳಿ ಮನವಿ ಮಾಡಿದರೂ ಮುಖ್ಯಮಂತ್ರಿ ನೀರು ಕೇಳಬೇಡಿ, ಬೆಳೆ ಬೆಳೆಯಬೇಡಿ ಎಂದು ರೈತರಿಗೆ ಉಡಾಫೆ ಉತ್ತರ ನೀಡಿ ತಮಿಳುನಾಡಿಗೆ ನೀರು ಹರಿಸುತ್ತಿದ್ದಾರೆ ಎಂದರು.

10:55 PM (IST) Sep 12

ಗಣಪತಿ ಕಾರ್ಯಕ್ರಮದಲ್ಲಿ ಮಂಡ್ಯ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್‌ಗೆ ಗಾಯ, ಆಸ್ಪತ್ರೆ ದಾಖಲು

ಗಣಪತಿ ಮೂರ್ತಿ ರಿವೀಲ್ ಕಾರ್ಯಕ್ರಮದಲ್ಲಿ ಮಂಡ್ಯ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ತಲೆಗೆ ಗಾಯವಾಗಿದೆ. ತಕ್ಷಣವೇ ಶಾಸಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಸಕರು ಗಾಯಗೊಂಡಿದ್ದು ಹೇಗೆ?

Read Full Story

10:54 PM (IST) Sep 12

10 ಲಕ್ಷದ FD ಅಥವಾ 10 ಸಾವಿರದ RD? ಯಾವುದು ಹೆಚ್ಚು ಆದಾಯ ನೀಡುತ್ತದೆ? ಲೆಕ್ಕಾಚಾರ ಇಲ್ಲಿದೆ!

₹10 ಲಕ್ಷವನ್ನು ಎಫ್‌ಡಿಯಲ್ಲಿ ಹೂಡಿಕೆ ಮಾಡುವುದು ಮತ್ತು ತಿಂಗಳಿಗೆ ₹10,000 ಆರ್‌ಡಿಯಲ್ಲಿ ತೊಡಗಿಸುವುದರ ನಡುವಿನ ವ್ಯತ್ಯಾಸವನ್ನು ಈ ಲೇಖನ ವಿಶ್ಲೇಷಿಸುತ್ತದೆ. 10 ವರ್ಷಗಳ ಅವಧಿಯಲ್ಲಿ, ಒಂದೇ ಬಡ್ಡಿದರವಿದ್ದರೂ, ಆರಂಭಿಕ ದೊಡ್ಡ ಮೊತ್ತದ ಹೂಡಿಕೆಯಿಂದಾಗಿ ಎಫ್‌ಡಿ ಹೆಚ್ಚು ಆದಾಯ ನೀಡುತ್ತದೆ. ನಿಮ್ಮ ಬಳಿ ಇರುವ ಹಣ ಮತ್ತು ಉಳಿತಾಯದ ಸಾಮರ್ಥ್ಯದ ಆಧಾರದ ಮೇಲೆ ಯಾವುದು ಉತ್ತಮ ಆಯ್ಕೆ ಎಂಬುದನ್ನು ನಿರ್ಧರಿಸಬೇಕು.
Read Full Story

10:14 PM (IST) Sep 12

Loneliness - ಸಾವಿರಾರೂ ಜನರ ನಡುವಿದ್ದರೂ ಏಕಾಂಗಿ ಭಾವನೆ! ನಿಮ್ಮನ್ನೂ ಕಾಡುತ್ತಿದೆಯಾ ಈ ಸೈಲೆಂಟ್ ಮಹಾಮಾರಿ? ಪರಿಹಾರವೇನು?

ಇತ್ತೀಚೆಗೆ ಒಂಟಿತನವು ಕೇವಲ ಭಾವನಾತ್ಮಕ ಕೊರತೆಯಾಗಿ ಉಳಿದಿಲ್ಲ, ಬದಲಿಗೆ ಅದೊಂದು ಗಂಭೀರ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಿದೆ. ವೈದ್ಯರ ಪ್ರಕಾರ, ಈ ಏಕಾಂಗಿತನವು ದೈಹಿಕ ಕಾಯಿಲೆಗಳಿಗೆ ಕಾರಣವಾಗುತ್ತಿದೆ. ಈ ಬಿಕ್ಕಟ್ಟಿಗೆ ಪರಿಹಾರವು ಕುಟುಂಬದ ಪ್ರೀತಿ, ಗೌರವ ಮತ್ತು ಅರ್ಥಪೂರ್ಣ ಸಂವಾದದಲ್ಲಿದೆ.

Read Full Story

09:45 PM (IST) Sep 12

ಮಡಿಯಾಲದಲ್ಲಿ ಶೀಘ್ರ ಶೀಘ್ರದಲ್ಲೇ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಉನ್ನತ ಶಿಕ್ಷಣ ಕೇಂದ್ರ ಕಾರ್ಯಾರಂಭ

ಕೃತಕ ಬುದ್ಧಿಮತ್ತೆ ಉನ್ನತ ಶಿಕ್ಷಣ ಕೇಂದ್ರ ಶೀಘ್ರದಲ್ಲೇ ಮಡಿಯಾಲದಲ್ಲಿ ಕಾರ್ಯಾರಂಭಗೊಳ್ಳಲಿದೆ. ಜೂನ್ 2027ರಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ನಡೆಯಲಿದೆ. ಈ ಕುರಿತು ಸದ್ಗುರು ಮಧುಸೂದನ ಸಾಯಿ ಮಹತ್ವದ ಘೋಷಣೆ ಮಾಡಿದ್ದಾರೆ.

Read Full Story

09:06 PM (IST) Sep 12

ಮೀನು ಪ್ರಿಯರಿಗೆ ಬಾಯಲ್ಲಿ ನೀರೂರಿಸುವ ಸುದ್ದಿ, ಭಾರೀ ಬೇಡಿಕೆಯ ಹಿಲ್ಸಾ ಮೀನು ಸವಿಯಲು ರೆಡಿಯಾಗಿ

ದುರ್ಗಾ ಪೂಜೆಗೂ ಮುನ್ನ ಹಿಲ್ಸಾ ಮೀನು ರಫ್ತಿಗೆ ಅವಕಾಶ ನೀಡುವಂತೆ ಭಾರತೀಯ ಆಮದುಗಾರರು ಬಾಂಗ್ಲಾದೇಶಕ್ಕೆ ಮನವಿ ಮಾಡಿದ್ದಾರೆ. ಈ ಮನವಿಗೆ ಬಾಂಗ್ಲಾದೇಶ ಸಕಾರಾತ್ಮಕವಾಗಿ ಸ್ಪಂದಿಸಿದ್ದು, 'ಮೀನುಗಳ ರಾಣಿ' ಎಂದೇ ಖ್ಯಾತವಾದ ಈ ಮೀನಿಗೆ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತ್ರಿಪುರಾದಲ್ಲಿ ಭಾರಿ ಬೇಡಿಕೆಯಿದೆ.
Read Full Story

08:44 PM (IST) Sep 12

ಸಮುದ್ರದ ನೀರು ಶುದ್ಧೀಕರಿಸಿ ಕುಡಿಯಲು ಮುಂಬೈ ಮಾಸ್ಟರ್ ಪ್ಲಾನ್ - 4,007 ಕೋಟಿ ವೆಚ್ಚದ ಬೃಹತ್ ಯೋಜನೆಗೆ ಚಾಲನೆ!

ಮುಂಬೈನಲ್ಲಿನ ತೀವ್ರ ನೀರಿನ ಕೊರತೆ ನೀಗಿಸಲು, ಬೃಹನ್‌ಮುಂಬೈ ಮಹಾನಗರ ಪಾಲಿಕೆಯು ₹4,007 ಕೋಟಿ ವೆಚ್ಚದಲ್ಲಿ ಸಮುದ್ರದ ಉಪ್ಪು ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸುವ ಬೃಹತ್ ಘಟಕವನ್ನು ಸ್ಥಾಪಿಸುತ್ತಿದೆ. ಮನೋರಿಯಲ್ಲಿ ನಿರ್ಮಾಣವಾಗಲಿರುವ ಈ ಘಟಕವು ಇಸ್ರೇಲ್ ತಂತ್ರಜ್ಞಾನ ಬಳಸಿ ದಿನಕ್ಕೆ 40 ಕೋಟಿ ಲೀಟರ್ ನೀರನ್ನು ಶುದ್ಧೀಕರಿಸುವ ಗುರಿ ಹೊಂದಿದೆ.
Read Full Story

08:41 PM (IST) Sep 12

ಗಂಡನ ಗೊರಕೆ ಹೆಂಡತಿಯ ಆರೋಗ್ಯಕ್ಕೆ ನಿಧಾನವಾಗಿ ಕಾಡುವ ಅಪಾಯವೇ? ಇಲ್ಲಿದೆ ಅಸಲಿ ಸತ್ಯ!

ಗಂಡನ ಗೊರಕೆ ಕೇವಲ ಕಿರಿಕಿರಿ ಉಂಟುಮಾಡುವ ಶಬ್ದವಲ್ಲ. ನಿರಂತರವಾಗಿ ಗೊರಕೆಯಿಂದ ಪಕ್ಕದಲ್ಲಿ ಮಲಗುವವರ ನಿದ್ರೆ ಕದಡಿದರೆ, ಬೆಳಗ್ಗೆ ಆಯಾಸ, ತಲೆನೋವು, ಗಮನ ಕೇಂದ್ರೀಕರಿಸಲು ಕಷ್ಟ, ಕಿರಿಕಿರಿ ಹಾಗೂ ಮಾನಸಿಕ ಒತ್ತಡದಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

Read Full Story

08:37 PM (IST) Sep 12

Belagavi - ಕಾರ್ ಓಡಿಸಿದ ವ್ಯಕ್ತಿಗೆ ಹೆಲ್ಮೆಟ್ ಫೈನ್! ಪೊಲೀಸರ ಯಡವಟ್ಟಿಗೆ ಹೆಲ್ಮೆಟ್ ಧರಿಸಿ ಪ್ರತಿಭಟಿಸಿದ ಮಾಲೀಕ!

ಬೆಳಗಾವಿಯ ಅಥಣಿಯಲ್ಲಿ, ಎಐ ಕ್ಯಾಮೆರಾದ ತಾಂತ್ರಿಕ ದೋಷದಿಂದಾಗಿ ಕಾರು ಚಾಲಕನಿಗೆ 'ಹೆಲ್ಮೆಟ್ ಇಲ್ಲ' ಎಂದು ದಂಡ ವಿಧಿಸಲಾಗಿದೆ. ಈ ವಿಚಿತ್ರ ದಂಡವನ್ನು ವಿರೋಧಿಸಿ, ಮಾಲೀಕರು ಕಾರಿನೊಳಗೆ ಹೆಲ್ಮೆಟ್ ಧರಿಸಿ ಚಾಲನೆ ಮಾಡಿ ಪ್ರತಿಭಟಿಸಿದ್ದು, ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story

08:01 PM (IST) Sep 12

Cricket - ಪಾಸ್‌ಪೋರ್ಟ್ ಇಲ್ಲ, ವೀಸಾನೂ ಇಲ್ಲ! ತರಕಾರಿ ಮಾರುತ್ತಿದ್ದ ಹುಡುಗನಿಗೆ ಅವಕಾಶ ಕೊಟ್ಟ ಪಾಕ್‌! ಇಂಗ್ಲೆಂಡ್‌ನಲ್ಲಿ ದಾಖಲೆ ಉಡೀಸ್!

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಬಾಡಿಗೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ 21 ವರ್ಷದ ರಜೌಲ್ಲಾ ಮಶ್ವಾನಿ, ರಾತ್ರೋರಾತ್ರಿ ಇಂಗ್ಲೆಂಡ್‌ಗೆ ಹಾರಿ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ವಿಶ್ವದಾಖಲೆ ನಿರ್ಮಿಸಿದ್ದಾರೆ. ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ 9 ಸಿಕ್ಸರ್‌ಗಳನ್ನು ಸಿಡಿಸಿ, 4 ವಿಕೆಟ್ ಪಡೆದು ಇಡೀ ಕ್ರಿಕೆಟ್ ಜಗತ್ತನ್ನು ಬೆರಗುಗೊಳಿಸಿದ್ದಾರೆ.

Read Full Story

07:25 PM (IST) Sep 12

BRICS - ಇರಾನ್ ಅಧ್ಯಕ್ಷರ ಪುತ್ರಿ ಬ್ರಿಕ್ಸ್ ಮಾರುಕಟ್ಟೆಯಲ್ಲಿ ಶಾಪಿಂಗ್! ಅವರ ಖರೀದಿ ಲಿಸ್ಟ್‌ನಲ್ಲಿ ಏನೇನಿದೆ? ಫೋಟೋಗಳು ವೈರಲ್!

18ನೇ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ, ಇರಾನ್ ಅಧ್ಯಕ್ಷರ ಪುತ್ರಿ ಜಹ್ರಾ ಪೆಜೆಶ್ಕಿಯಾನ್ ಅವರು ನವದೆಹಲಿಯ 'ಬ್ರಿಕ್ಸ್ ಬಜಾರ್'ಗೆ ಭೇಟಿ ನೀಡಿದರು. ಕೇಂದ್ರ ಸಚಿವೆ ಅನ್ನಪೂರ್ಣ ದೇವಿ ಅವರೊಂದಿಗೆ ಭಾರತೀಯ ಕೈಮಗ್ಗ, ಕರಕುಶಲ ವಸ್ತುಗಳನ್ನು ವೀಕ್ಷಿಸಿದ ಅವರು, ಸ್ಥಳೀಯ ಕುಶಲಕರ್ಮಿಗಳ ಕೌಶಲ್ಯವನ್ನು ಮುಕ್ತಕಂಠದಿಂದ ಶ್ಲಾಘನೆ ಮಾಡಿದ್ದಾರೆ.

Read Full Story

06:27 PM (IST) Sep 12

'ಇಡಿ ದಾಳಿ ಸುಮ್ಮನೆ ನಡೆಯಲ್ಲ' - ಸತೀಶ್ ಜಾರಕಿಹೊಳಿ ಪ್ರಕರಣದಲ್ಲಿ ಶಾಸಕ ಜನಾರ್ದನ ರೆಡ್ಡಿ ಸ್ಫೋಟಕ ಹೇಳಿಕೆ?

ಗಂಗಾವತಿಯಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಸತೀಶ್ ಜಾರಕಿಹೊಳಿ ಅವರ ಮನೆ ಮೇಲಿನ ಇಡಿ ದಾಳಿ ಸಮಂಜಸವಾಗಿದ್ದು, ಅದು ರಾಜಕೀಯ ಪ್ರೇರಿತವಲ್ಲ ಎಂದು ಹೇಳಿದ್ದಾರೆ. ಸೂಕ್ತ ದಾಖಲೆಗಳು ಮತ್ತು ಆಧಾರಗಳಿದ್ದರೆ ಮಾತ್ರ ಇಡಿ ದಾಳಿ ನಡೆಯುತ್ತದೆ ಎಂದು ತಿಳಿಸಿದ್ದಾರೆ.

Read Full Story

05:59 PM (IST) Sep 12

Brics - ಭಾರತಕ್ಕೆ ಬಂದ ಆಗಾ ಖಾನ್ ಯಾರು? ಸ್ವಂತ ದೇಶವಿಲ್ಲ, ಸೈಭನ್ಯವಿಲ್ಲ; ಆದರೂ ಕೋಟ್ಯಂತರ ಮುಸ್ಲಿಮರಿಗೆ ಅತ್ಯುನ್ನತ ಧರ್ಮಗುರು ಆಗಿದ್ದೇಗೆ?

ಶಿಯಾ ಇಸ್ಮಾಲಿ ಮುಸ್ಲಿಂ ಸಮುದಾಯದ 50ನೇ ಇಮಾಮ್ ಪ್ರಿನ್ಸ್ ರಹೀಮ್ ಅಗಾ ಖಾನ್ ಭಾರತಕ್ಕೆ ಭೇಟಿ ನೀಡಿದ್ದಾರೆ. ತಮ್ಮ 'ಅಗಾ ಖಾನ್ ಅಭಿವೃದ್ಧಿ ಜಾಲ' (AKDN) ಮೂಲಕ ಜಗತ್ತಿನಾದ್ಯಂತ ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ಇವರು, ಭಾರತದಲ್ಲಿನ ತಮ್ಮ ಯೋಜನೆಗಳನ್ನು ಪರಿಶೀಲಿಸಲು ಮತ್ತು ಪ್ರಮುಖ ನಾಯಕರೊಂದಿಗೆ ಚರ್ಚಿಸಲು ಆಗಮಿಸಿದ್ದಾರೆ.

Read Full Story

05:34 PM (IST) Sep 12

ಸೌಂದರ್ಯ ಸಿನಿಮಾ ಬಂದರೆ ಟಿವಿ ಆಫ್ ಮಾಡುತ್ತಿದ್ದೆ.. ರಮ್ಯಾ ಕೃಷ್ಣನ್ ಕಣ್ಣೀರಿಟ್ಟ ಘಟನೆಯನ್ನೂ ಬಿಚ್ಚಿಟ್ಟ ಕೃಷ್ಣಾರೆಡ್ಡಿ

ಎಸ್‌ವಿ ಕೃಷ್ಣಾರೆಡ್ಡಿ ತಮ್ಮ ಇತ್ತೀಚಿನ ಸಂದರ್ಶನದಲ್ಲಿ ನಟಿಯರಾದ ರಮ್ಯಾ ಕೃಷ್ಣನ್ ಹಾಗೂ ದಿವಂಗತ ಸೌಂದರ್ಯ ಅವರೊಂದಿಗಿನ ಅಪರೂಪದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ಸೌಂದರ್ಯ ಅವರ ಅಕಾಲಿಕ ನಿಧನ ತಮ್ಮ ಮೇಲೆ ಬೀರಿದ ಆಘಾತದ ಬಗ್ಗೆಯೂ ನಿರ್ದೇಶಕರು ಭಾವುಕರಾಗಿ ಮಾತನಾಡಿದ್ದಾರೆ.

Read Full Story

05:25 PM (IST) Sep 12

Cricket - ದಿಗ್ಗಜನ ಹೆಸರಿನಲ್ಲಿದ್ದ ಬಹುದೊಡ್ಡ ದಾಖಲೆ ಉಡೀಸ್‌ ಮಾಡಲ ಕೇವಲ 3 ಹೆಜ್ಜೆ ದೂರದಲ್ಲಿ ವೈಭವ್ ಸೂರ್ಯವಂಶಿ!

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಟಿ20 ಪಂದ್ಯದಲ್ಲಿ ಆರಂಭಿಕ ಆಟಗಾರನ ಆಯ್ಕೆ ಕುತೂಹಲ ಕೆರಳಿಸಿದೆ. 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಕಣಕ್ಕಿಳಿದರೆ, ಕೇವಲ 3 ಸಿಕ್ಸರ್ ಬಾರಿಸುವ ಮೂಲಕ ವೀರೇಂದ್ರ ಸೆಹ್ವಾಗ್ ಅವರ ದಾಖಲೆಯನ್ನು ಮುರಿಯುವ ಸುವರ್ಣಾವಕಾಶವನ್ನು ಹೊಂದಿದ್ದಾರೆ.
Read Full Story

05:09 PM (IST) Sep 12

ED Raid - ಪ್ರಧಾನಿ ಮೋದಿ ಹೇಳಿದ್ದನ್ನೇ ಸತೀಶ್ ಜಾರಕಿಹೊಳಿ ಮಾಡುತ್ತಿದ್ದಾರೆ; ಸಚಿವ ಪ್ರಿಯಾಂಕ್ ಖರ್ಗೆ ಅಚ್ಚರಿ ಹೇಳಿಕೆ!

ಸಚಿವ ಸತೀಶ್ ಜಾರಕಿಹೊಳಿ ಮೇಲಿನ ಇಡಿ ದಾಳಿಯನ್ನು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡಿದ್ದು, ವಿದೇಶಿ ಹೂಡಿಕೆ ಕಾನೂನುಬಾಹಿರವಲ್ಲ ಎಂದು ಹೇಳಿದ್ದಾರೆ. ಇತ್ತ, ಸಹೋದರ ಬಾಲಚಂದ್ರ ಜಾರಕಿಹೊಳಿ ಅವರು 770 ಕೋಟಿ ಹೂಡಿಕೆ ಆರೋಪವನ್ನು ನಿರಾಕರಿಸಿದ್ದು, ವಶಪಡಿಸಿಕೊಂಡ ಹಣಕ್ಕೆ ಲೆಕ್ಕವಿದೆ ಮತ್ತು ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.
Read Full Story

04:57 PM (IST) Sep 12

ಬೆಂಗಳೂರು ಪ್ಯಾಲೇಸ್ ರಸ್ತೆಯಿಂದ ಹೆಬ್ಬಾಳದವರೆಗೂ ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ

ಬೆಂಗಳೂರು ಏರ್‌ಪೋರ್ಟ್ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದೆ. ಗಣೇಶ ಹಬ್ಬ ಹಿನ್ನಲೆಯಲ್ಲಿ ಬೆಂಗಳೂರಿನ ಪ್ರಮುಖ ರಸ್ತೆಗಳು ಸಂಚಾರ ದಟ್ಟಣೆಯಿಂದ ತುಂಬಿದೆ. ಪರಿಣಾಮ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದೆ.

Read Full Story

04:50 PM (IST) Sep 12

ತಾಳಿ, ಬೊಟ್ಟು, ವ್ರತ.. ಪುರುಷರಿಗೆ ಇಲ್ಲದ ಈ ನಿಯಮಗಳೆಲ್ಲ ಮಹಿಳೆಯರಿಗೆ ಮಾತ್ರ ಏಕೆ? - ನಟಿ ನಮಿತಾ ಪ್ರಶ್ನೆ!

ನಟಿ ನಮಿತಾ ಅವರ ತಾಳಿ, ಬೊಟ್ಟು ಮತ್ತು ಮಹಿಳೆಯರ ಮೇಲಿನ ಸಂಪ್ರದಾಯಗಳ ಕುರಿತ ಹೇಳಿಕೆಗಳು ವೈರಲ್ ಆಗಿವೆ. ‘ಮಹಿಳೆಯರಿಗೇ ಏಕೆ ಎಲ್ಲಾ ನಿಯಮಗಳು?’ ಎಂದು ಪ್ರಶ್ನಿಸಿರುವ ಅವರು, ಪತ್ನಿಯ ಕ್ಷೇಮಕ್ಕಾಗಿ ಗಂಡಂದಿರು ಉಪವಾಸ ಮಾಡುವುದಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.

Read Full Story

04:50 PM (IST) Sep 12

ಮುಂಗಾರು ವಿದಾಯ ಹೇಳ್ತಿದೆ .. ಮಾನ್ಸೂನ್‌ ಹಿಂತಿರುಗುವ ಪ್ರಕ್ರಿಯೆ ಹೇಗೆ ನಡೆಯುತ್ತೆ?

ಮುಂಗಾರು ದುರ್ಬಲಗೊಂಡಿದೆ. ರಾಜ್ಯದಲ್ಲಿ ಮಳೆಯ ಕೊರತೆ ಶುರುವಾಗಿದೆ. ಈ ನಡುವೆ ಮಾನ್ಸೂನ್‌ ಹಿಮ್ಮೆಟ್ಟುವಿಕೆ ಪ್ರಕ್ರಿಯೆ ಶುರುವಾಗಿದೆ. ಈ ಕುರಿತ ಒಂದು ವರದಿ ಇಲ್ಲಿದೆ.

Read Full Story

04:46 PM (IST) Sep 12

'ನಿಮ್ಮ ಪೌರುಷ ಇಲ್ಲಿ ತೋರಿಸಿ', ಗಣೇಶ ಮೆರವಣಿಗೆ ಮಸೀದಿ ಮುಂದೆ ಹೋಗಬಾರ್ದು ಎಂದ ಇನ್ಸ್‌ಪೆಕ್ಟರ್‌ಗೆ ಪ್ರತಾಪ್ ಸಿಂಹ ಕಿಡಿ

ಟಿ.ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಯು ಮಸೀದಿ ಮುಂಭಾಗ ಸಾಗಬಾರದು ಮತ್ತು ಪಟಾಕಿ ಸಿಡಿಸಬಾರದು ಎಂದು ಪೊಲೀಸ್ ಇನ್‌ಸ್ಪೆಕ್ಟರ್ ನೀಡಿದ ಎಚ್ಚರಿಕೆಯು ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆಯನ್ನು ಖಂಡಿಸಿರುವ ಸಂಸದ ಯದುವೀರ್ ಒಡೆಯರ್ ಮತ್ತು ಮಾಜಿ ಸಂಸದ ಪ್ರತಾಪ್ ಸಿಂಹ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಇದು ದೊಡ್ಡ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.
Read Full Story

04:27 PM (IST) Sep 12

Bengaluru ಪರಪ್ಪನ ಅಗ್ರಹಾರದಲ್ಲಿ ಭಾರಿ ಸ್ಕ್ಯಾಮ್ - ಸುಪ್ರೀಂ ಆದೇಶವೇ ನಕಲಿ, ಬಿಡುಗಡೆಯಾಗಿದ್ದ ಅಪರಾಧಿ ಮತ್ತೆ ಲಾಕ್!

ಸುಪ್ರೀಂ ಕೋರ್ಟ್‌ನ ನಕಲಿ ಆದೇಶವನ್ನು ಸೃಷ್ಟಿಸಿ, ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಪಾಯಕಾರಿ ಕೈದಿಯನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಅಕ್ರಮವಾಗಿ ಬಿಡುಗಡೆಗೊಳಿಸಿದ ಬೃಹತ್ ಜಾಲವೊಂದು ಬಯಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಜೈಲಿನ ಪ್ರಥಮ ದರ್ಜೆ ಸಹಾಯಕ ಮತ್ತು ಬಿಡುಗಡೆಯಾಗಿದ್ದ ಕೈದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

Read Full Story

04:23 PM (IST) Sep 12

ಮಾಸ್‌ ಹಾಡುಗಳು, ಜಾನಪದ ಸೊಗಡು.. ಸಿನಿಮಾ ಪ್ರಿಯರಿಗೆ ಕಿಕ್‌ ಎಂದಿದ್ಯಾಕೆ ದುನಿಯಾ ವಿಜಯ್‌!

ಸಿಟಿ ಲೈಟ್ಸ್‌ ಸಿನಿಮಾ ಸೆ.18ಕ್ಕೆ ರಿಲೀಸ್‌ ಆಗಲಿದೆ. ದುನಿಯಾ ವಿಜಯ್‌ ನಿರ್ದೇಶನದ ಈ ಚಿತ್ರದಲ್ಲಿ ವಿನಯ್ ರಾಜ್‌ಕುಮಾರ್‌ ಹಾಗೂ ಮೋನಿಷಾ ವಿಜಯ್‌ಕುಮಾರ್‌ ನಟಿಸಿದ್ದಾರೆ. ಈಗಾಗಲೇ ಐದು ಹಾಡುಗಳು ಮೆಚ್ಚುಗೆ ಗಳಿಸಿದೆ.

Read Full Story

04:01 PM (IST) Sep 12

Video Review - ತಾಂತ್ರಿಕ ಶ್ರೀಮಂತ ಕುತೂಹಲಕರ ರುದ್ರ ಭಯಾನಕ ಜಾಗದಲ್ಲಿ ವ್ಲಾಗರ್‌ಗಳು!

ವಿಡಿಯೋ Review: ಐವರು ವ್ಲಾಗರ್‌ಗಳು ಭಯಾನಕ ಜಾಗವೊಂದಕ್ಕೆ ತೆರಳಿದಾಗ ನಡೆದ ಘಟನೆಗಳನ್ನು ಫೌಂಡ್ ಫೂಟೇಜ್ ಶೈಲಿಯಲ್ಲಿ ಹೇಳುವ ಸಿನಿಮಾ ‘ವಿಡಿಯೋ’. ಹೊಸ ನಿರೂಪಣೆ, ರಿಯಲಿಸ್ಟಿಕ್ ಮೇಕಿಂಗ್ ಮತ್ತು ನಿರಂತರ ಕುತೂಹಲ ಚಿತ್ರದ ಪ್ರಮುಖ ಆಕರ್ಷಣೆಗಳು.

Read Full Story

04:00 PM (IST) Sep 12

ಬೆಂಗಳೂರು - ಬಾಲಕಾರ್ಮಿಕರ ವಿರುದ್ಧ ಖಾಕಿ ಅಟ್ಯಾಕ್ - ಸಿಸಿಬಿ ಪೊಲೀಸರ ಬಿಗ್ ಆಪರೇಷನ್, 100ಕ್ಕೂ ಹೆಚ್ಚು ಮಕ್ಕಳ ರಕ್ಷಣೆ!

ಬೆಂಗಳೂರು ನಗರ ಪೊಲೀಸರು ಮತ್ತು ಸಿಸಿಬಿ ಜಂಟಿಯಾಗಿ ಬೃಹತ್ ಕಾರ್ಯಾಚರಣೆ ನಡೆಸಿ, ನಗರದಾದ್ಯಂತ ನೂರಾರು ಸ್ಥಳಗಳಲ್ಲಿ ತಪಾಸಣೆ ನಡೆಸಿದ್ದಾರೆ. ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ನಡೆದ ಈ ಕಾರ್ಯಾಚರಣೆಯಲ್ಲಿ ಹಲವು ಬಾಲಕಾರ್ಮಿಕರನ್ನು ರಕ್ಷಿಸಲಾಗಿದ್ದು, ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.
Read Full Story

03:43 PM (IST) Sep 12

ಕೋಟಿ ಕೋಟಿ ಹಣದ ಕನಸು, ಸಾಲದ ಬೆಟ್ಟ - ಹೇಗಿದೆ ನಗಿಸುವ 'ಸಾಲಗಾರರ ಸಹಕಾರ ಸಂಘ' ಸಿನಿಮಾ?

ಸಾಲಗಾರರ ಸಹಕಾರ ಸಂಘ Review: ಕೋಟಿ ಕೋಟಿ ಹಣದ ಕನಸು ಹೊತ್ತು ರಾಜಧಾನಿಗೆ ಬರುವ ಮೂವರು ಹಳ್ಳಿ ಯುವಕರು ಸಾಲದ ಸುಳಿಯಲ್ಲಿ ಸಿಲುಕುವ ಕಥೆಯಿದು. ಹಾಸ್ಯ, ಹಳ್ಳಿ ಸಂಭಾಷಣೆ ಮತ್ತು ಅನಿರೀಕ್ಷಿತ ತಿರುವುಗಳ ಮೂಲಕ ‘ಆಸೆ ಇರಲಿ, ದುರಾಸೆ ಬೇಡ’ ಎಂಬ ಸಂದೇಶವನ್ನು ಸಿನಿಮಾ ನೀಡುತ್ತದೆ.

Read Full Story

03:30 PM (IST) Sep 12

America America 2 Review - ಪತ್ನಿ ಮತ್ತು ಮಾಜಿ ಪ್ರಿಯಕರನನ್ನು ಬಿಟ್ಟು ಗಂಡ ಎಲ್ಲಿಗೆ ಹೋದ? ಸಖತ್ ಟ್ವಿಸ್ಟ್

ಅಮೆರಿಕಾ ಅಮೆರಿಕಾ 2 Review: ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ಈ ಸಿನಿಮಾ ನಗಿಸುತ್ತಾ, ಯೋಚಿಸುವಂತೆ ಮಾಡುತ್ತದೆ. ಪ್ರೀತಿ, ದಾಂಪತ್ಯ ಮತ್ತು ಕುಟುಂಬದ ತಾಕಲಾಟಗಳನ್ನು ಪೃಥ್ವಿ ಅಂಬಾರ್‌, ನಿರೂಪ್‌ ಭಂಡಾರಿ ಹಾಗೂ ಶಾನ್ವಿ ಶ್ರೀವಾಸ್ತವ ಪಾತ್ರಗಳ ಮೂಲಕ ಕಟ್ಟಿಕೊಡಲಾಗಿದೆ.

Read Full Story

03:28 PM (IST) Sep 12

ಅನಂತ್ ಅಂಬಾನಿ ವಂತಾರಾದಲ್ಲಿ ಮಾಧುರಿಗೆ ಸಿಕ್ತು ಪುನರ್ಜನ್ಮ, ಚೇತರಿಸಿಕೊಂಡು ನಂದನಿ ಮಠಕ್ಕೆ ಮರಳಿದ ಮಹಾದೇವಿ!

ತೀವ್ರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ 'ಮಾಧುರಿ' ಆನೆಯು, ಗುಜರಾತ್‌ನ ವಂತಾರಾ ಪುನರ್ವಸತಿ ಕೇಂದ್ರದಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ವಿಶೇಷ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದೆ. ಉನ್ನತಾಧಿಕಾರ ಸಮಿತಿಯ ಅನುಮೋದನೆಯೊಂದಿಗೆ, ಕಟ್ಟುನಿಟ್ಟಾದ ಷರತ್ತುಗಳ ಅಡಿಯಲ್ಲಿ ಆನೆಯು ತನ್ನ ಮೂಲ ನಿವಾಸವಾದ ಕೊಲ್ಹಾಪುರಕ್ಕೆ ಮರಳುತ್ತಿದೆ.

Read Full Story

03:16 PM (IST) Sep 12

1980s AI photo trend - 1980ರ ಟ್ರೆಂಡ್‌, ಸಾರ್ವಜನಿಕರಿಗೆ ಎಚ್ಚರಿಕೆ ಕೊಟ್ಟ ಕರ್ನಾಟಕ ಪೊಲೀಸ್!

ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯವಾಗಿರುವ 1980ರ ದಶಕದ ಫೋಟೋ ಎಡಿಟಿಂಗ್ ಟ್ರೆಂಡ್ ಅನ್ನು ಸೈಬರ್ ವಂಚಕರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಕಲಿ ಆ್ಯಪ್‌ಗಳ ಮೂಲಕ ವೈಯಕ್ತಿಕ ಮಾಹಿತಿ, ಫೋಟೋಗಳನ್ನು ಕದ್ದು, ಡೀಪ್‌ಫೇಕ್ ತಂತ್ರಜ್ಞಾನ ಬಳಸಿ ಬ್ಲಾಕ್‌ಮೇಲ್ ಮಾಡುವ ಅಪಾಯದ ಬಗ್ಗೆ ಕರ್ನಾಟಕ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
Read Full Story

02:16 PM (IST) Sep 12

ದುಡ್ಡು ದುಡ್ಡು, ದೇಶದ ಟಾಪ್‌ 5 ಶ್ರೀಮಂತ ನಗರಗಳಲ್ಲಿ ನಮ್ಮ ಬೆಂಗಳೂರಿಗೆ ಎಷ್ಟನೇ ಸ್ಥಾನ?

ದೇಶದ ಶ್ರೀಮಂತ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಸಿಟಿ ಯಾವುದು? ನಿಮಗೆ ಗೊತ್ತಾ ಬೆಂಗಳೂರು ಎಷ್ಟನೇ ಸ್ಥಾನದಲ್ಲಿದೆ ಎಂದು? ಈ ಕುರಿತ ಕಂಪ್ಲೀಟ್‌ ಮಾಹಿತಿ ಇಲ್ಲಿದೆ.

Read Full Story

01:43 PM (IST) Sep 12

BBK 13 - ವೀಕೆಂಡ್ ಪಂಚಾಯ್ತಿಯಲ್ಲಿ ಬಯಲಾಗುತ್ತಾ ಗಗನ್ ಡಬಲ್ ಗೇಮ್; ಸುದೀಪ್ ಕ್ಲಾಸ್?

ಬಿಗ್‌ಬಾಸ್ ಸೀಸನ್ 13ರ ಮೊದಲ ವೀಕೆಂಡ್ ಪಂಚಾಯ್ತಿಯಲ್ಲಿ, ಗಗನ್ ಚಿನ್ನಪ್ಪ ಅವರ ಪಕ್ಷಪಾತದ ನಿರ್ಧಾರಗಳು ಮತ್ತು ನಿಯಮ ಉಲ್ಲಂಘನೆಗಳು ಚರ್ಚೆಗೆ ಬರಲಿವೆ. ತಾಂಡವ್ ರಾಮ್ ಜೊತೆ ಸೇರಿ ನಾಮಿನೇಷನ್ ಬಗ್ಗೆ ಚರ್ಚೆ ನಡೆಸಿ, ಡಬಲ್ ಗೇಮ್ ಆಡಿರುವ ಗಗನ್ ಆಟ ಬಯಲಾಗುವ ಸಾಧ್ಯತೆ ಇದೆ.
Read Full Story

01:23 PM (IST) Sep 12

ಶ್ರೀಶಾಂತ್‌ ಅವರ ತಂದೆ ನಿಧನ, ತೀವ್ರ ದುಃಖದಲ್ಲಿ ಮಾಜಿ ಕ್ರಿಕೆಟಿಗ

ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಎಸ್‌.ಶ್ರೀಶಾಂತ್‌ ಅವರ ತಂದೆ ವಿ.ಶಾಂತಕುಮಾರನ್‌ ನಿಧನರಾಗಿದ್ದು, ಗಣ್ಯರು ಸಂತಾಪ ಸೂಚಿಸಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

Read Full Story

01:03 PM (IST) Sep 12

ಮಸೀದಿ ಮುಂದೆ ಪಟಾಕಿ ಹೊಡೆದ್ರೆ, ಮೆರವಣಿಗೆ ಮಾಡಿದ್ರೆ, ಗ್ರಹಚಾರ ಬಿಡಿಸ್ತೀನಿ! - ಟಿ.ನರಸೀಪುರ ಇನ್ಸ್‌ಪೆಕ್ಟರ್

ಟಿ. ನರಸೀಪುರದಲ್ಲಿ ಗಣೇಶ ಮೆರವಣಿಗೆಯನ್ನು ಮಸೀದಿ ಮುಂದೆ ನಡೆಸದಂತೆ ಪೊಲೀಸ್ ಅಧಿಕಾರಿಯೊಬ್ಬರು ಎಚ್ಚರಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ಈ ನಿರ್ಬಂಧಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಂಸದ ಯದುವೀರ್ ಒಡೆಯರ್ ಅವರು ಸರ್ಕಾರದ ನೀತಿಯನ್ನು ಖಂಡಿಸಿ, ಇದು ಹಿಂದೂ ಹಬ್ಬಗಳ ಆಚರಣೆಯ ಹಕ್ಕನ್ನು ಕಸಿದುಕೊಳ್ಳುವ ಯತ್ನ ಎಂದು ಆರೋಪಿಸಿದ್ದಾರೆ.
Read Full Story

01:03 PM (IST) Sep 12

Yettinahole Water Project - 11 ವರ್ಷ ಬಳಿಕ ಎತ್ತಿನಹೊಳೆ ಯೋಜನೆಗೆ ಟ್ರಯಲ್ ರನ್! ಅಕ್ಟೋಬರ್‌ನಲ್ಲಿ ತುಮಕೂರಿಗೆ ನೀರು

ಸುಮಾರು 11 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಯಲುಸೀಮೆಯ ಎತ್ತಿನಹೊಳೆ ಯೋಜನೆ ಅಂತಿಮವಾಗಿ ಪರೀಕ್ಷಾರ್ಥ ಸಂಚಾರ ಹಂತಕ್ಕೆ ತಲುಪಿದೆ. ಅಕ್ಟೋಬರ್ ಅಂತ್ಯದ ವೇಳೆಗೆ ತುಮಕೂರಿಗೆ ನೀರು ಹರಿಸಿ ಟ್ರಯಲ್ ರನ್ ನಡೆಸಲು ಸಿದ್ಧತೆ ನಡೆದಿದ್ದು, ಇದು ಯೋಜನೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಈ ಯೋಜನೆಯಿಂದಾಗಿ ಈಗಾಗಲೇ ಚಿಕ್ಕಮಗಳೂರಿನ ಹಲವು ಕೆರೆಗಳು ತುಂಬಿ, ರೈತರಲ್ಲಿ ಆಶಾಭಾವನೆ ಮೂಡಿಸಿದೆ.
Read Full Story

12:20 PM (IST) Sep 12

ನಮ್ಮ ಫ್ಯಾನ್ಸ್ ಕ್ಲಬ್‌ಗೆ ಸೇರಿದ್ದಾರೆ - ವಿಜಯ್ ಮಲ್ಯ ಬೆಂಬಲಕ್ಕೆ ಜಾರಕಿಹೊಳಿ ಫಸ್ಟ್ ರಿಯಾಕ್ಷನ್

ತಮ್ಮ ನಿವಾಸದ ಮೇಲಿನ ಇಡಿ ದಾಳಿಗೆ ಪ್ರತಿಕ್ರಿಯಿಸಿರುವ ಸಚಿವ ಸತೀಶ್ ಜಾರಕಿಹೊಳಿ, 40% ಷೇರು ದಾಖಲೆ ತೋರಿಸಲು ಸವಾಲು ಹಾಕಿದ್ದಾರೆ. ಇದೇ ವೇಳೆ, ಇಡಿ ಕಾರ್ಯವೈಖರಿ ಟೀಕಿಸಿದ್ದ ಉದ್ಯಮಿ ವಿಜಯ್ ಮಲ್ಯ ತಮ್ಮ ಫ್ಯಾನ್ಸ್ ಕ್ಲಬ್‌ಗೆ ಸೇರಿದ್ದಾರೆ ಎಂದು ಅವರು ಹಾಸ್ಯಮಯವಾಗಿ ಹೇಳಿದ್ದಾರೆ.
Read Full Story

12:18 PM (IST) Sep 12

ಕೆಪಿಎಸ್‌ಸಿ ಮತ್ತೊಂದು ಹಗರಣ ಬಯಲಿಗೆ - ಶಿವಶಂಕರಪ್ಪ ಸಾಹುಕಾರ್, ಜ್ಞಾನೇಂದ್ರಕುಮಾರ್‌ಗೆ ಮತ್ತೊಂದು ಸಂಕಷ್ಟ!

ಕರ್ನಾಟಕ ಲೋಕಸೇವಾ ಆಯೋಗದ (KPSC) ಸಹಾಯಕ ನಿಯಂತ್ರಕರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ. ಫಲಿತಾಂಶ ವಿಳಂಬ, ಅಪೂರ್ಣ ಅಂಕಗಳ ವಿವರ ಮತ್ತು ಶಂಕಾಸ್ಪದ ರ‍್ಯಾಂಕಿಂಗ್ ಸರಣಿಯ ಹಿನ್ನೆಲೆಯಲ್ಲಿ ಸಮಗ್ರ ತನಿಖೆಗೆ ಆಗ್ರಹಿಸಲಾಗಿದೆ. ಇದೇ ವೇಳೆ, ಮತ್ತೊಂದು ಕೆಪಿಎಸ್‌ಸಿ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.
Read Full Story

11:56 AM (IST) Sep 12

BJPಗೆ ಬಿಗ್ ಶಾಕ್! ಮಾಜಿ ಶಾಸಕ ನರೇಂದ್ರ ಬಾಬು ರಾಜೀನಾಮೆ, 10 ವರ್ಷಗಳ ಬಳಿಕ ಕಾಂಗ್ರೆಸ್‌ಗೆ ವಾಪಸ್

ಮಾಜಿ ಶಾಸಕ ನೆ.ಲ.ನರೇಂದ್ರಬಾಬು ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದಲ್ಲಿ ಅಲ್ಪಸಂಖ್ಯಾತರು, ಒಬಿಸಿಗಳಿಗೆ ನೆಲೆಯಿಲ್ಲ ಮತ್ತು ತಮ್ಮನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿರುವ ಅವರು, ಭಾನುವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವುದಾಗಿ ಘೋಷಿಸಿದ್ದಾರೆ.
Read Full Story

11:28 AM (IST) Sep 12

ಪಾಕ್‌ ಕ್ರಿಕೆಟ್‌ಗೆ ಮತ್ತೆ ಮುಖಭಂಗ - ಸೈಬರ್‌ ಕ್ರೈಮ್‌ನಿಂದ ರಿಜ್ವಾನ್‌, ಇಮಾಮ್‌ 4 ಗಂಟೆ ವಿಚಾರಣೆ!

ಇಂಗ್ಲೆಂಡ್‌ ಟೆಸ್ಟ್‌ ಸರಣಿಯ ವೇಳೆ ಡ್ರೆಸ್ಸಿಂಗ್‌ ಕೋಣೆಯ ಮಾಹಿತಿ ಸೋರಿಕೆ ಮಾಡಿದ ಆರೋಪದ ಮೇಲೆ ಪಾಕಿಸ್ತಾನದ ಕ್ರಿಕೆಟಿಗರಾದ ಮೊಹಮ್ಮದ್‌ ರಿಜ್ವಾನ್‌ ಮತ್ತು ಇಮಾಮ್‌ ಉಲ್‌ ಹಕ್‌ ಅವರನ್ನು ಸೈಬರ್‌ ಕ್ರೈಮ್ ಏಜೆನ್ಸಿ ವಿಚಾರಣೆಗೊಳಪಡಿಸಿದೆ. ಏಜೆನ್ಸಿಯು ಆಟಗಾರರ ಮೊಬೈಲ್ ಫೋನ್‌ಗಳ ಫಾರೆನ್ಸಿಕ್ ವಿಶ್ಲೇಷಣೆ ನಡೆಸುತ್ತಿದ್ದು, ಅವರ ಹಣಕಾಸು ವಹಿವಾಟುಗಳ ಮೇಲೂ ತೀವ್ರ ನಿಗಾ ಇರಿಸಿದೆ.
Read Full Story

11:03 AM (IST) Sep 12

Bengaluru - ಸಾಯುವ ರೋಗಿಗಳನ್ನೇ ಬಂಡವಾಳ ಮಾಡಿಕೊಂಡ ಖದೀರರು - ಎಸ್‌ಐಟಿಯಿಂದ ಕೃಪಾ ಹೆಲ್ತ್ ಕೇರ್ ಕಿಂಗ್‌ಪಿನ್ ಬಂಧನ!

ಬೆಂಗಳೂರಿನ ತಾವರೆಕೆರೆಯಲ್ಲಿ ಬೆಳಕಿಗೆ ಬಂದ 'ಕೃಪಾ ಹೆಲ್ತ್ ಕೇರ್' ಸಂಸ್ಥೆಯ ನಕಲಿ ಔಷಧಿ ಜಾಲದ ತನಿಖೆಯನ್ನು ಎಸ್‌ಐಟಿ ಚುರುಕುಗೊಳಿಸಿದೆ. ಸಂಸ್ಥೆಯ ಮಾಲೀಕ ವೀರೇಶ್, ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದ ರೋಗಿಗಳನ್ನು ಗುರಿಯಾಗಿಸಿ ನಕಲಿ ಕ್ಯಾನ್ಸರ್ ಹಾಗೂ ಜೀವ ರಕ್ಷಕ ಔಷಧಿಗಳನ್ನು ಮಾರಾಟ ಮಾಡುತ್ತಿದ್ದ. ಪ್ರಸ್ತುತ ಮುಖ್ಯ ಆರೋಪಿ ವೀರೇಶ್‌ನನ್ನು ಬಂಧಿಸಿ, ಜಾಲದ ಹಿಂದಿರುವ ಇತರರ ಪತ್ತೆಗಾಗಿ ತನಿಖೆ ಮುಂದುವರೆಸಲಾಗಿದೆ.
Read Full Story

10:56 AM (IST) Sep 12

ಬೆಳಗಾವಿ, ಬಾಗಲಕೋಟೆಯ ಖೋವಾ, ಪನೀರ್ ಮಹಾರಾಷ್ಟ್ರದಲ್ಲಿ ವಶ; 600 KG ಖೋವಾ, 12,500 KG ಪನೀರ್ ಜಪ್ತಿ

ಗಣಪತಿ ಹಬ್ಬದ ಮುನ್ನ ಮಹಾರಾಷ್ಟ್ರದ ಎಫ್‌ಡಿಎ, ಕರ್ನಾಟಕದ ಬೆಳಗಾವಿ ಮತ್ತು ಬಾಗಲಕೋಟೆಯಿಂದ ಸಾಗಿಸುತ್ತಿದ್ದ 4600 ಕೆ.ಜಿ. ಕಳಪೆ ಖೋವಾ ಮತ್ತು 12,500 ಕೆ.ಜಿ. ಪನೀರ್ ಅನ್ನು ವಶಪಡಿಸಿಕೊಂಡಿದೆ. ಈ ಕಾರ್ಯಾಚರಣೆಯಲ್ಲಿ ಸುಮಾರು 39 ಲಕ್ಷ ಮೌಲ್ಯದ ಆಹಾರೋತ್ಪನ್ನಗಳನ್ನು ಜಪ್ತಿ ಮಾಡಲಾಗಿದ್ದು, ನಕಲಿ ಪನೀರ್ ಮತ್ತು ಖೋವಾವನ್ನು ಪತ್ತೆ ಹಚ್ಚುವ ವಿಧಾನಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ.
Read Full Story

10:37 AM (IST) Sep 12

BBK 13 - ಬಿಗ್‌ಬಾಸ್ ಕನ್ನಡ ಮೊದಲ ಎಲಿಮಿನೇಷನ್ - ಮನೆಯಿಂದ ಹೊರಹೋಗುವ ಸ್ಪರ್ಧಿ ಯಾರು?

ಬಿಗ್‌ಬಾಸ್ ಕನ್ನಡ ಸೀಸನ್ 13ರ ಮೊದಲ ವೀಕೆಂಡ್ ಪಂಚಾಯ್ತಿ! ವಿಮಾನದಲ್ಲಿರುವ ನಾಮಿನೇಟ್ ಆದ ಸದಸ್ಯರಲ್ಲಿ ಯಾರು ಹೊರಹೋಗಲಿದ್ದಾರೆ? ಸೌಂದರ್ಯಾ ಶೆಟ್ಟಿ ಸೇಫ್! ಪೂರ್ತಿ ವಿವರ ತಿಳಿಯಲು ಕ್ಲಿಕ್ ಮಾಡಿ.

Read Full Story

10:19 AM (IST) Sep 12

ಸಚಿವ ಜಾರಕಿಹೊಳೆ ಮನೆ ಮೇಲೆ ಇಡಿ ದಾಳಿಗೆ ವಿಜಯ್ ಮಲ್ಯ ಕೆಂಡಾಮಂಡಲ, ತನ್ನಿಷ್ಟದ ದೇಗುಲ ನೆನೆದು ಬೇಸರ!

ಸಚಿವ ಸತೀಶ್ ಜಾರಕಿಹೊಳೆ ಆಪ್ತರ ಮೇಲಿನ ಇಡಿ ದಾಳಿಯನ್ನು ಉದ್ಯಮಿ ವಿಜಯ್ ಮಲ್ಯ 'ಎಕ್ಸ್'ನಲ್ಲಿ ಖಂಡಿಸಿದ್ದಾರೆ. ಇಡಿ ಕಾರ್ಯವೈಖರಿಯನ್ನು ಕಡುಭ್ರಷ್ಟ ಎಂದಿರುವ ಅವರು, ಇದು ಸಾರ್ವಜನಿಕ ಚಾರಿತ್ರ್ಯ ವಧೆ ಎಂದು ಟೀಕಿಸಿದ್ದಾರೆ. ಅಲ್ಲದೆ, ಭಾರತದ ದೇವಾಲಯಗಳಿಗೆ ಭೇಟಿ ನೀಡಲು ಸಾಧ್ಯವಾಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
Read Full Story

More Trending News