ಬೆಂಗಳೂರು (ನ.11): ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿಗಳಿಗೆ ರಾಜಾತಿಥ್ಯ ನೀಡಿದ ವಿಡಿಯೋ ಬಹಿರಂಗವಾದ ಬೆನ್ನಲ್ಲಿಯೇ ಸರ್ಕಾರ ಜೈಲು ಅಧಿಕಾರಿಗಳಾದ ಮ್ಯಾಗೇರಿ ಹಾಗೂ ಭಜಂತ್ರಿಯ ತಲೆದಂಡ ಪಡೆದಿದೆ. ಅದರೊಂದಿಗೆ ಜೈಲಿನ ಮುಖ್ಯ ಅಧೀಕ್ಷಕ ಸುರೇಶ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಗೃಹಸಚಿವ ಡಾ.ಜಿ.ಪರಮೇಶ್ವರ್ ನೇತತ್ವದ ಸಭೆಯಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಐಪಿಎಸ್ ಅಧಿಕಾರಿಯನ್ನು ನೇಮಕ ಮಾಡುವ ನಿರ್ಧಾರ ಮಾಡಲಾಗಿದೆ. ಜೈಲು ಆಡಳಿತದ ಸುಧಾರಣೆಗೆ ಎಡಿಜಿಪಿ ತಂಡವನ್ನು ರಚಿಸಲಾಗಿದೆ. ಇನ್ನು ವಿಡಿಯೋ ಸೋರಿಕೆ ಹಿಂದೆ ನಟ ಧನ್ವೀರ್ ಕೈವಾಡ ಇರುವ ಕಾರಣಕ್ಕೆ ಆತನನ್ನು ತೀವ್ರ ವಿಚಾರಣೆ ಮಾಡಲಾಗಿದೆ. ಅದರೊಂದಿಗೆ ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್ ಬ್ಲಾಗ್
10:23 PM (IST) Nov 11
'ಭಾಗ್ಯಲಕ್ಷ್ಮಿ' ಸೀರಿಯಲ್‌ನಲ್ಲಿ ಪೂಜಾ ಪಾತ್ರಕ್ಕೆ ಬಣ್ಣ ಹಚ್ಚಿದ್ದ ನಟಿ ಆಶಾ ನಯ್ಯರ್, ಇದೀಗ 'ಆದಿಲಕ್ಷ್ಮಿ ಪುರಾಣ' ಸೀರಿಯಲ್ ಮೂಲಕ ಜೀ ಕನ್ನಡದಲ್ಲಿ ಲಕ್ಷ್ಮಿಯಾಗಿ ಕಾಣಿಸಿಕೊಂಡಿದ್ದಾರೆ. ಲಕ್ಷ್ಮಿ ತನ್ನ ಪತಿ ಆದಿಯಿಂದ ತಿರಸ್ಕರಿಸಲ್ಪಟ್ಟಿದ್ದು, ಗಂಡನ ಮನವೊಲಿಸುವ ಸವಾಲನ್ನು ಎದುರಿಸಲಿದ್ದಾಳೆ.
09:44 PM (IST) Nov 11
09:36 PM (IST) Nov 11
ಮಾಲೂರು ಮರು ಎಣಿಕೆ ಕೇಂದ್ರದಿಂದ ಬಂದು ಕಣ್ಣೀರಿಟ್ಟ ಶಾಸಕ ನಂಜೇಗೌಡ, ಉಲ್ಟಾ ಆಗುತ್ತಾ ಫಲಿತಾಂಶ? ಮರು ಎಣಿಕೆ ಕಾರ್ಯ ಸಂಪೂರ್ಣಗೊಂಡಿದೆ. ಇದೀಗ ಕಾಂಗ್ರೆಸ್ ಶಾಸಕ ನಂಜೇಗೌಡ ಕುಟುಂಬದ ಜೊತೆ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.
07:22 PM (IST) Nov 11
ಬೆಂಗಳೂರು ಫ್ಲ್ಯಾಟ್‌ನಲ್ಲಿ ಇಬ್ಬರು ಯುವತಿಯರ ಜೊತೆ ವಾಸವಾಗಿದ್ದ ಯುವಕ ಶವವಾಗಿ ಪತ್ತೆ, ಇಬ್ಬರು ಯುವತಿಯರ ವಿರುದ್ದ ಪ್ರಕರಣ ದಾಖಲಾಗಿದೆ. ಒಬ್ಬಳ ಪ್ರೀತಿಯಲ್ಲಿ ಬಿದ್ದಿದ್ದೆ, ಮೂವರ ಜಗಳಕ್ಕೆ ಕಾರಣವಾಗಿದೆ. ಯುವತಿಯರ ಕಿರುಕುಳಕ್ಕೆ ಯುವಕ ಬದುಕು ಅಂತ್ಯಗೊಳಿಸಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
07:12 PM (IST) Nov 11
Bihar election viral video: ರಾಜಕಾರಣಿಯೊಬ್ಬರು ತಮ್ಮ ಪೈಜಾಮದ ಟಾಪನ್ನು ಎತ್ತಿ ಮತ ಕೇಳಲು ಮುಂದಾಗಿದ್ದಾರೆ. ಈ ರಾಜಕಾರಣಿ ಹೀಗೆ ಪೈಜಾಮ ಎತ್ತಿ ಮತ ಕೇಳುವುದನ್ನು ನೋಡಿದ ಅಲ್ಲೇ ಇದ್ದ ವೃದ್ಧರೊಬ್ಬರು ಅವರ ಪೈಜಾಮದ ಮೇಲೆ ಒಂದು ರೂ ನಾಣ್ಯ ಹಾಕಿದ್ದು, ಇದಕ್ಕೆ ರಾಜಕಾರಣಿ ರಿಯಾಕ್ಷನ್ ಹೇಗಿತ್ತು ನೋಡಿ
06:37 PM (IST) Nov 11
18ಕ್ಕೂ ಹೆಚ್ಚು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿ, ಕೊಲೆಗೈದ ವಿಕೃತಕಾಮಿ ಉಮೇಶ್ ರೆಡ್ಡಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಈತನ ರಾಜಾತಿಥ್ಯಕ್ಕೆ ಹಣ ಎಲ್ಲಿಂದ ಪೂರೈಕೆಯಾಗುತ್ತಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ.
06:18 PM (IST) Nov 11
Termination notice to entire company: ಹೊಸ ಸಿಸ್ಟಮ್ ಪರೀಕ್ಷಿಸುವಾಗ, ಹೆಚ್‌ಆರ್ ಅಧಿಕಾರಿಯೊಬ್ಬರು ಆಕಸ್ಮಿಕವಾಗಿ ಸಿಇಒ ಸೇರಿದಂತೆ ಎಲ್ಲಾ ಉದ್ಯೋಗಿಗಳಿಗೆ ಟರ್ಮಿನೇಷನ್ ಇಮೇಲ್ ಕಳುಹಿಸಿದ ಘಟನೆ ಸಂಸ್ಥೆಯೊಂದರಲ್ಲಿ ನಡೆದಿದೆ. ಆಮೇಲಾಗಿದ್ದೇನು?
06:05 PM (IST) Nov 11
ಬಿಗ್ ಬಾಸ್ ಮನೆಯಿಂದ 6 ವಾರಗಳ ಬಳಿಕ ಚಂದ್ರಪ್ರಭ ಎಲಿಮಿನೇಟ್ ಆಗಿದ್ದಾರೆ. ಈ ಎಲಿಮಿನೇಷನ್ ಬಗ್ಗೆ ಅಸಮಾಧಾನ ಹೊರಹಾಕಿರುವ ಅವರು, ಮನೆಯಿಂದ ಹೊರಬರಲು ನಾನೇ ನಿರ್ಧರಿಸಿದ್ದೆ, ಅದರ ಕಾರಣ ಮುಂದೆ ಹೇಳುತ್ತೇನೆ ಎಂದಿದ್ದಾರೆ. ಇನ್ನು ಮುಂದೆ ಬಿಗ್ ಬಾಸ್ ನೋಡುವುದಿಲ್ಲ, ಅದು ನನ್ನಂತವರಿಗೆ ಅಲ್ಲ ಎಂದಿದ್ದಾರೆ.
05:28 PM (IST) Nov 11
ಬೆಂಗಳೂರಿನಲ್ಲಿ ವೈರಲ್ ಆಗಿರುವ ಫಲಕವೊಂದರಲ್ಲಿ, ಕನ್ನಡದಲ್ಲಿ ಉಗುಳಿದರೆ ₹500 ಮತ್ತು ಇಂಗ್ಲಿಷ್‌ನಲ್ಲಿ ಉಗುಳಿದರೆ ₹100 ದಂಡ ಎಂದು ಬರೆಯಲಾಗಿದೆ. ಈ ದ್ವಂದ್ವ ನೀತಿಯುಳ್ಳ ಬೋರ್ಡ್ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ..
04:46 PM (IST) Nov 11
04:26 PM (IST) Nov 11
ಮಾಸ್ಟರ್ ಆನಂದ್ ಅವರು ಆಧ್ಯಾತ್ಮಿಕ ವಿಷಯದ ಬಗ್ಗೆ ಮಾಹಿತಿ ಕೊಡಲು ಒಂದು ಯುಟ್ಯೂಬ್ ಚಾನೆಲ್ ಮಾಡಿದ್ದಾರೆ. ಅಲ್ಲಿ ಈ ಬಗ್ಗೆ ಅವರು ಮಾತನಾಡುತ್ತಿರುತ್ತಾರೆ. ಆ ವೇಳೆ ಗೋಕರ್ಣದಲ್ಲಿ ನಡೆದ ಘಟನೆಯನ್ನು, ಅನುಭವವನ್ನು ಅವರು ಹಂಚಿಕೊಂಡಿದ್ದಾರೆ. ಹಾಗಾದರೆ ಏನಾಯ್ತು?
03:50 PM (IST) Nov 11
BBK 12 Updates: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ನಿತ್ಯವೂ ಹೊಸ ಹೊಸ ಟಾಸ್ಕ್‌ಗಳನ್ನು ನೀಡಲಾಗುತ್ತಿದೆ. ಅದರಂತೆ ಈ ಬಾರಿ ಸ್ಪರ್ಧಿಗಳು ಸೂಕ್ತವಾದ ಕಾರಣ ನೀಡಿ, ಅವರು ಸಗಣಿ, ಕಸ ಎಂದು ಟೈಟಲ್ ಕೊಟ್ಟು ಮೈಮೇಲೆ ಸಗಣಿ ಸುರಿಯಬೇಕು, ಮೈಮೇಲೆ ಕಸ ಹಾಕಬೇಕಿತ್ತು.
03:42 PM (IST) Nov 11
Doctor Muzamil Shakeel Jaish link: ಹರ್ಯಾಣದ ಆಲ್ ಫಲಾಹ್ ವಿಶ್ವವಿದ್ಯಾಲಯದ ವೈದ್ಯ ಮುಜಾಮಿಲ್ ಶಕೀಲ್‌ನನ್ನು ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಸಂಪರ್ಕದ ಮೇಲೆ ಬಂಧಿಸಲಾಗಿದೆ. ಈತ ಕಾಲೇಜಿನ ಪ್ರಯೋಗಾಲಯವನ್ನೇ ಆರ್‌ಡಿಎಕ್ಸ್ ತಯಾರಿಸಲು ಬಳಸುತ್ತಿದ್ದನೇ ಎಂಬ ಶಂಕೆ ವ್ಯಕ್ತವಾಗಿದೆ.
03:26 PM (IST) Nov 11
ದೆಹಲಿ ಸ್ಫೋಟ ಪ್ರಕರಣ, ವಿಮಾನ ಪ್ರಯಾಣಿಕರಿಗೆ ಬೆಂಗಳೂರು ಏರ್‌ಪೋರ್ಟ್‌ನಿಂದ ವಿಶೇಷ ಸೂಚನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ ಎಲ್ಲಾ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಇದರ ಬೆನ್ನಲ್ಲೇ ಬೆಂಗಳೂರು ವಿಮಾನ ನಿಲ್ದಾಣ ಮಹತ್ವದ ಸೂಚನೆ ನೀಡಿದೆ.
02:36 PM (IST) Nov 11
ದೆಹಲಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಸಚಿವ ಸಂತೋಷ್ ಲಾಡ್ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಳೆದ 10 ವರ್ಷಗಳಲ್ಲಿ ನಡೆದ ಸ್ಫೋಟಗಳಿಗೆ ಯಾರು ಹೊಣೆ ಎಂದು ಪ್ರಶ್ನೆ ಮಾಡಿದ್ದಾರೆ.
02:32 PM (IST) Nov 11
ನವೆಂಬರ್ 28 ರಂದು, 30 ವರ್ಷಗಳ ಬಳಿಕ ಶನಿಯು ತನ್ನ ನೇರ ಸಂಚಾರವನ್ನು ಆರಂಭಿಸಲಿದ್ದಾನೆ. ಈ ಜ್ಯೋತಿಷ್ಯ ಬದಲಾವಣೆಯು 5 ರಾಶಿಯವರಿಗೆ ಆರ್ಥಿಕ ಸಮೃದ್ಧಿ, ವೃತ್ತಿ ಪ್ರಗತಿ ಮತ್ತು ಖ್ಯಾತಿಯನ್ನು ತರಲಿದೆ. ಈ ರಾಶಿಗಳ ಜೀವನದಲ್ಲಿ ಆಗಲಿರುವ ಸಕಾರಾತ್ಮಕ ಬದಲಾವಣೆಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
01:35 PM (IST) Nov 11
Bigg Boss Kannada Season 12 Updates: ಬಿಗ್ ಬಾಸ್ ಮನೆಯಲ್ಲಿ ಯಾವ ಸ್ಪರ್ಧಿ ವಿಷಕಾರಿ ಎಂದು ಹೇಳಿ ಮೆಣಸಿನಕಾಯಿ ತಿನ್ನಲು ಕೊಡಬೇಕಿತ್ತು. ಆಗ ಧ್ರುವಂತ್ ಅವರು ಗಿಲ್ಲಿ ನಟನಿಗೆ, ಗಿಲ್ಲಿ ನಟ ಅವರು ಧ್ರುವಂತ್ ವಿರುದ್ಧ ಆರೋಪ ಮಾಡಿದ್ದಾರೆ. ಹಾಗಾದರೆ ಏನಾಯ್ತು?
01:23 PM (IST) Nov 11
01:07 PM (IST) Nov 11
ಸೀನಿಯರ್ ಎನ್‌ಟಿಆರ್ ತಮ್ಮ ಸಿನಿಮಾ ಕೆರಿಯರ್‌ನಲ್ಲಿ ಮಾಡದ ಪ್ರಯೋಗಗಳಿಲ್ಲ. ಅವರು ಅನೇಕ ರೀತಿಯ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಎನ್‌ಟಿಆರ್ ಎಂದರೆ ಎಲ್ಲರಿಗೂ ಪೌರಾಣಿಕ ಪಾತ್ರಗಳೇ ನೆನಪಾಗುತ್ತವೆ. ಆದರೆ ಸರ್ದಾರ್ ಪಾಪಾರಾಯುಡು ರೀತಿಯ ಅದ್ಭುತ ಸಾಮಾಜಿಕ ಚಿತ್ರಗಳೂ ಅವರ ಖಾತೆಯಲ್ಲಿವೆ.
01:07 PM (IST) Nov 11
12:37 PM (IST) Nov 11
ಬಿಡದಿ ಟೌನ್‌ಶಿಪ್ ಹೆಸರಿನಲ್ಲಿ ಈ ಸರ್ಕಾರ ರೈತರ ಫಲವತ್ತಾದ ಭೂಮಿಯನ್ನು ಲೂಟಿ ಹೊಡೆಯಲು ಹೊರಟಿದೆ. ಯಾರೂ ಕೂಡ ಒಂದು ಇಂಚು ಭೂಮಿ ಕೊಡಬೇಡಿ. ಯಾರೂ ಹೆದರುವ ಅಗತ್ಯ ಇಲ್ಲ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅಭಯ ನೀಡಿದರು.
12:29 PM (IST) Nov 11
ಭೂತಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ದೆಹಲಿಯ ಕೆಂಪುಕೋಟೆ ಬಳಿ ನಡೆದ ಕಾರ್ ಬಾಂಬ್ ಬ್ಲಾಸ್ಟ್ ಕುರಿತು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಈ ಪಿತೂರಿಯ ಹಿಂದಿರುವವರನ್ನು ಸುಮ್ಮನೆ ಬಿಡುವುದಿಲ್ಲ ಮತ್ತು ನ್ಯಾಯದ ಕಟಕಟೆಗೆ ತರಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
12:23 PM (IST) Nov 11
ಬೆಂಗಳೂರಿನ ಜಯನಗರದಲ್ಲಿರುವ ಪರಮ್ ಸೈನ್ಸ್ ಎಕ್ಸ್‌ಪೀರಿಯನ್ಸ್ ಸೆಂಟರ್‌ನಲ್ಲಿ (ParSEC) ಈ ತಿಂಗಳು ಪೂರ್ತಿ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡುವ ವಿನೂತನ ಯೋಜನೆಯನ್ನು ಹಮ್ಮಿಕೊಂಡಿದೆ.
12:20 PM (IST) Nov 11
12:16 PM (IST) Nov 11
Ariyalur truck explosion: ತಮಿಳುನಾಡಿನ ಅರಿಯಲೂರು ಬಳಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ ಟ್ರಕ್ ಪಲ್ಟಿಯಾಗಿ, ಸಿಲಿಂಡರ್‌ಗಳು ಸ್ಫೋಟಗೊಂಡು ಭಾರಿ ಅಗ್ನಿ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದ್ದಾರೆ.
11:56 AM (IST) Nov 11
ನೋಂದಣಿ ಮಾಡಿಕೊಂಡರೆ ಆದಾಯದ ಮೂಲ ಹೇಳಬೇಕಾಗುತ್ತದೆ. ಅನೇಕ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ ಎಂಬ ಕಾರಣದಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘ ನೋಂದಣಿ ಆಗುತ್ತಿಲ್ಲ ಎಂದು ಅವರು ಬಯಸಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
11:48 AM (IST) Nov 11
ಎಚ್.ಡಿ.ಕುಮಾರಸ್ವಾಮಿಯವರು ಆರೋಗ್ಯ ಸರಿ ಮಾಡಿಕೊಂಡು ಜೆಡಿಎಸ್ ಕಟ್ಟಲು ಮುಂದಾಗಿದ್ದಾರೆ. ಸಿಎಂ ಆಗುವ ಕನಸಿನೊಂದಿಗೆ ಪಕ್ಷ ಕಟ್ಟಲು ಹೊರಟ್ಟಿದ್ದಾರೆ. ಅವರಿಗೆ ಶುಭವಾಗಲಿ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
11:45 AM (IST) Nov 11
Bhopal Model Khushboo Ahirwar Found Dead Outside Hospital ಆಸ್ಪತ್ರೆಯ ಹೊರಗೆ ಸಂತ್ರಸ್ತೆಯ ತಾಯಿ ಲಕ್ಷ್ಮಿ ಅಹಿರ್ವಾರ್ ತಮ್ಮ ಮಗಳನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಗೋಳಾಡಿದ್ದಾರೆ.
11:30 AM (IST) Nov 11
Car fire after tire burst: ಮಹಾರಾಷ್ಟ್ರದ ಜಲಗಾಂವ್-ಛತ್ರಪತಿ ಸಂಭಾಜಿ ನಗರ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿನ ಟೈರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡ ಪರಿಣಾಮ ಕಾರಿನಲ್ಲಿ ಮಹಿಳೆಯೊಬ್ಬರು ಸಜೀವ ದಹನಗೊಂಡ ಘಟನೆ ನಡೆದಿದೆ.
11:20 AM (IST) Nov 11
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಿರುವುದನ್ನು ಖಂಡಿಸಿ ಬಿಜೆಪಿಯ ಯುವ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.
10:51 AM (IST) Nov 11
ಸಂಪುಟ ಪುನಾರಚನೆ ವೇಳೆ ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಜಾತಿ ಸಮೀಕ್ಷೆಯ ಆಧಾರದ ಮೇಲೆ ಲಿಂಗಾಯತ ಕೋಟಾದಡಿಯಲ್ಲಿ ನನ್ನನ್ನು ಮಂತ್ರಿ ಮಾಡಬೇಕೆಂದು ಒತ್ತಾಯಿಸುತ್ತೇನೆ ಎಂದು ಸಿ.ಎಸ್.ನಾಡಗೌಡ ಹೇಳಿದ್ದಾರೆ.
10:27 AM (IST) Nov 11
ಭವಿಷ್ಯದಲ್ಲಿ ಅನೇಕ ಸವಾಲುಗಳು ಎದುರಾಗಲಿವೆ. ಅವು ಅಸ್ಥಿರತೆ, ಅನಿಶ್ಚಿತತೆ, ಸಂಕೀರ್ಣತೆ ಮತ್ತು ಅಸ್ಪಷ್ಟತೆ ಎಂಬ ಸವಾಲುಗಳು. ಭವಿಷ್ಯ ತನ್ನೊಳಗೆ ಏನೆಲ್ಲವನ್ನು ಹಿಡಿದಿಟ್ಟುಕೊಂಡಿದೆ ಎಂಬುದರ ಬಗ್ಗೆ ನನಗೆ ಮತ್ತು ನಿಮಗೆ ಯಾವುದೇ ಸುಳಿವಿಲ್ಲ.
09:58 AM (IST) Nov 11
ಹಾವು ಹಿಡಿಯಲು ಹೋದ ಹುಡುಗನನ್ನು ಅದೇ ಹಾವು ಕಡಿದ ಘಟನೆ ಹೊಸಪೇಟೆ ನಗರದ ಮುದ್ಲಾಪುರ ಗ್ರಾಮದಲ್ಲಿ ನಡೆದಿದೆ. ಅಬ್ದುಲ್ ರಜಾಕ್ (17) ಮೃತಪಟ್ಟ ಹುಡುಗ. ಹಾವು ಕಚ್ಚಿರೋ ವಿಡಿಯೋ ಮೊಬೈಲ್‌ನಲ್ಲಿ ಸೆರೆಯಾಗಿದೆ.
09:36 AM (IST) Nov 11
ಯಾವುದೇ ನಟನ ಯಶಸ್ಸು ಮತ್ತು ವೈಫಲ್ಯದ ಆಧಾರದ ಮೇಲೆ ಅವರಿಗೆ ಬೆಲೆ ಕಟ್ಟಲಾಗುತ್ತದೆ. 1300 ಕೋಟಿಗೂ ಹೆಚ್ಚು ಬಜೆಟ್‌ನಲ್ಲಿ ನಿರ್ಮಾಣವಾದ ಚಿತ್ರವೊಂದು ಹೀನಾಯವಾಗಿ ಸೋತು 1083 ಕೋಟಿ ನಷ್ಟ ಅನುಭವಿಸಿದೆ. ಆ ಚಿತ್ರದ ಬಗ್ಗೆ ಈ ಲೇಖನದಲ್ಲಿ ನೋಡೋಣ.
09:16 AM (IST) Nov 11
ನಾಯಕಿಯಾಗಿ ಸುಮಾರು 15 ವರ್ಷಗಳ ಕಾಲ ಸಿನಿರಂಗವನ್ನು ಆಳಿದವರು ಭಾನುಪ್ರಿಯ. ಮೆಗಾಸ್ಟಾರ್ ಚಿರಂಜೀವಿಗೆ ಡ್ಯಾನ್ಸ್‌ನಲ್ಲಿ ಪೈಪೋಟಿ ನೀಡಿದ್ದ ಈ ನಟಿ, ನಂತರದ ದಿನಗಳಲ್ಲಿ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದರು. ತನ್ನ ಆಸ್ತಿಯನ್ನೆಲ್ಲಾ ಅವರು ಯಾರಿಗೆ ಕೊಟ್ಟರು ಗೊತ್ತಾ?
08:52 AM (IST) Nov 11
ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಮತ್ತು ಅತಿವೃಷ್ಟಿಯಿಂದ ಪೋಡಿ ದುರಸ್ತಿ ಕಾರ್ಯ ತಡವಾಗಿದೆ, ಹೀಗಾಗಿ ಎರಡೂ ಕಾರ್ಯಗಳಿಗೆ ವೇಗ ನೀಡಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಹಶೀಲ್ದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
08:05 AM (IST) Nov 11
ಖಾತಾ ದಾಖಲೆ ಪಡೆಯಲು ಕಂದಾಯ ಕಚೇರಿ, ಪಾಲಿಕೆ ಕಚೇರಿಗಳಿಗೆ ಅಲೆಯುವುದು, ಮಧ್ಯವರ್ತಿಗಳ ಹಾವಳಿ, ವ್ಯಾಪಕ ಭ್ರಷ್ಟಾಚಾರ ತಪ್ಪಿಸಲು ಆನ್‌ಲೈನ್ ಅಥವಾ ಬೆಂಗಳೂರು ಒನ್ ಸೆಂಟರ್ ಮೂಲಕ ‘ಇ-ಖಾತಾ’ಗೆ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಬೆಂಗಳೂರು ನಗರದಲ್ಲಿ ಜಾರಿಗೊಳಿಸಲಾಗಿದೆ
07:58 AM (IST) Nov 11
ಕಳೆದ ಹತ್ತು ವರ್ಷಗಳಲ್ಲಿ ರಾಜ್ಯದ ಬಂದೀಖಾನೆಗಳ ಸುಧಾರಣೆಗೆ ಉನ್ನತ ಮಟ್ಟದ ಸಮಿತಿಗಳಿಂದ ಸಲ್ಲಿಕೆಯಾದ ನಾಲ್ಕು ವರದಿಗಳು ಸರ್ಕಾರದ ಕಪಾಟಿನಲ್ಲಿ ಧೂಳು ತಿನ್ನುತ್ತಿವೆ. ಈಗ ಎಡಿಜಿಪಿ ಆರ್.ಹಿತೇಂದ್ರ ನೇತೃತ್ವದಲ್ಲಿ ಮತ್ತೊಂದು ಸುಧಾರಣೆಗೆ ಉನ್ನತ ಮಟ್ಟದ ಸಮಿತಿ ರಚನೆಯಾಗಿದೆ.
07:37 AM (IST) Nov 11
ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಒಟ್ಟು 10 ದಾಖಲೆಗಳನ್ನು ಒಪ್ಪುವಂತೆ ಕೋರಿ ತನಿಖಾಧಿಕಾರಿಗಳ ಪರ ಸರ್ಕಾರಿ ಅಭಿಯೋಜಕರು ಸೋಮವಾರ ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ಗೆ ಮನವಿ ಮಾಡಿದರು.
07:35 AM (IST) Nov 11
ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಕೈದಿಗಳಿಗೆ ವಿಶೇಷ ಸೌಲಭ್ಯ ನೀಡಿದ ಪ್ರಕರಣ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರವು, ಕಾರಾಗೃಹಗಳ ಆಡಳಿತ ವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆ ತರುವ ಸಂಬಂಧ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್.ಹಿತೇಂದ್ರ ನೇತೃತ್ವದ ಉನ್ನತ ಮಟ್ಟದ ಸಮಿತಿ ರಚಿಸಿದೆ.