Published : May 11, 2026, 04:57 AM ISTUpdated : May 11, 2026, 11:58 PM IST

Karnataka News Live: ವಿಜಯಪುರ - ತಿಕೋಟಾದಲ್ಲಿ ಕ್ಯಾಲಿಫೋರ್ನಿಯಾದ ಪ್ರಸಿದ್ಧ ದ್ರಾಕ್ಷಿ ತಳಿ ಔರಾ-36 ಯಶಸ್ವಿ ಕೃಷಿ!

ಸಾರಾಂಶ

ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ರಾಜ್ಯದ ಮುಜರಾಯಿ ಇಲಾಖೆ ಆಧೀನದ ಪ್ರಸಿದ್ಧ ನಾಗಾರಾಧನೆಯ ಪುಣ್ಯ ಕ್ಷೇತ್ರ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯವು 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ₹167 ಕೋಟಿ ಆದಾಯ ಗಳಿಸಿದೆ. 2025ರ ಏ.1ರಿಂದ 2026ರ ಮಾ.31ರ ತನಕದ ಆರ್ಥಿಕ ವರ್ಷದಲ್ಲಿ ದೇವಳಕ್ಕೆ ಈ ಆದಾಯ ಲಭಿಸಿದೆ. ಇದರಲ್ಲಿ ಒಟ್ಟು ₹85.20 ಕೋಟಿ ಖರ್ಚಾಗಿದೆ. 2024-2025ನೇ ಸಾಲಿನಲ್ಲಿ ₹155 ಕೋಟಿ ಆದಾಯ ಗಳಿಸಿತ್ತು. ಈ ಬಾರಿ ₹167 ಕೋಟಿ ಆದಾಯ ಗಳಿಸುವ ಮೂಲಕ ಈ ಆರ್ಥಿಕ ವರ್ಷದಲ್ಲಿ ಕಳೆದ ಆರ್ಥಿಕ ವರ್ಷದಿಂದ ಸುಮಾರು ₹12 ಕೋಟಿ ಅಧಿಕ ಆದಾಯ ಗಳಿಸಿದೆ. ಈ ಮೂಲಕ ಸತತ 15ನೇ ವರ್ಷ ಆದಾಯ ಗಳಿಕೆಯಲ್ಲಿ ನಂ.1 ಮುಜರಾಯಿ ದೇವಸ್ಥಾನವಾಗಿ ಹೊರಹೊಮ್ಮಿದೆ.

California grapes in Karnataka

11:58 PM (IST) May 11

ವಿಜಯಪುರ - ತಿಕೋಟಾದಲ್ಲಿ ಕ್ಯಾಲಿಫೋರ್ನಿಯಾದ ಪ್ರಸಿದ್ಧ ದ್ರಾಕ್ಷಿ ತಳಿ ಔರಾ-36 ಯಶಸ್ವಿ ಕೃಷಿ!

ವರದಿ: ಶಶಿಕಾಂತ ಮೆಂಡೆಗಾರ

ವಿಜಯಪುರದ ತಿಕೋಟಾದಲ್ಲಿ ರೈತರು, ಕ್ಯಾಲಿಫೋರ್ನಿಯಾದ ಪ್ರಸಿದ್ಧ ಔರಾ-36 ದ್ರಾಕ್ಷಿ ತಳಿಯನ್ನು ಯಶಸ್ವಿಯಾಗಿ ಬೆಳೆಯುತ್ತಿದ್ದಾರೆ. ಕಡಿಮೆ ರಾಸಾಯನಿಕ ಬಳಸಿ ಅಧಿಕ ಇಳುವರಿ ಹಾಗೂ ಲಾಭ ನೀಡುವ ಈ ತಳಿಯು, ಸಿದ್ದೇಶ್ವರ ಶ್ರೀಗಳ ಆಶಯ ಮತ್ತು ಸಚಿವ ಎಂ.ಬಿ. ಪಾಟೀಲರ ಬೆಂಬಲದ ಫಲವಾಗಿದೆ.

Read Full Story

11:15 PM (IST) May 11

ಮತ್ತೆ ಗರಿಗೆದರಿದ ಕಲಬುರಗಿ-ಬೆಂಗಳೂರು ವಿಮಾನಯಾನ ಕನಸು, ಕೆಕೆಆರ್‌ಡಿಬಿಯಿಂದ 80% ಸರ್ಕಾರದಿಂದ 20% ನೆರವು

ವಾಣಿಜ್ಯ ಕಾರಣಗಳಿಂದ ಸ್ಥಗಿತಗೊಂಡಿದ್ದ ಕಲಬುರಗಿ-ಬೆಂಗಳೂರು ವಿಮಾನಯಾನ ಸೇವೆಯನ್ನು ಪುನರಾರಂಭಿಸಲು ರಾಜ್ಯ ಸರ್ಕಾರವು 'ವೈಯಬಿಲಿಟಿ ಗ್ಯಾಪ್ ಫಂಡಿಂಗ್' ಯೋಜನೆಯಡಿ ಆರ್ಥಿಕ ನೆರವು ನೀಡಲು ನಿರ್ಧರಿಸಿದೆ. ಈ ಯೋಜನೆಯಲ್ಲಿ ಕೆಕೆಆರ್‌ಡಿಬಿ ಶೇ. 80 ರಷ್ಟು ಮತ್ತು ರಾಜ್ಯ ಸರ್ಕಾರ ಶೇ. 20 ರಷ್ಟು ವೆಚ್ಚವನ್ನು ಭರಿಸಲಿದ್ದು, ಶೀಘ್ರದಲ್ಲೇ ಸೇವೆ ಪುನಾರಂಭಗೊಳ್ಳುವ ನಿರೀಕ್ಷೆಯಿದೆ.
Read Full Story

10:25 PM (IST) May 11

ಬೆಂಗಳೂರಿನಲ್ಲಿ ಆರಾಮವಾಗಿ ಹೇಗೆ ವಾಸಿಸಬೇಕು? ಅಮೆಜಾನ್ ಉದ್ಯೋಗಿಯ ತಿಂಗಳ ವೆಚ್ಚ ₹51000, ವೈರಲ್ ಆಯ್ತು ವಿಡಿಯೋ!

ಬೆಂಗಳೂರಿನಲ್ಲಿ ವಾಸಿಸುವ 26 ವರ್ಷದ ಅಮೆಜಾನ್ ಉದ್ಯೋಗಿಯೊಬ್ಬರು ತಮ್ಮ ₹51,000 ಮಾಸಿಕ ಖರ್ಚಿನ ವಿವರಗಳನ್ನು ಹಂಚಿಕೊಂಡಿದ್ದಾರೆ. ಅವರ ವಸತಿ, ಆಹಾರ, ಮತ್ತು ಜೀವನಶೈಲಿಯ ವೆಚ್ಚಗಳು ನಗರದಲ್ಲಿ ಯೋಗ್ಯ ಜೀವನ ನಡೆಸಲು ಬೇಕಾದ ಹಣದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿವೆ.
Read Full Story

09:15 PM (IST) May 11

ಬೀದರ್‌ನಲ್ಲೊಂದು ಮನುಕುಲವೇ ತಲೆತಗ್ಗಿಸುವ ಘಟನೆ ಚರಂಡಿಯಲ್ಲಿ ಆಗಷ್ಟೇ ಹುಟ್ಟಿದ ಶಿಶುವಿನ ಶವ ಪತ್ತೆ!

ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ಗಡಿಗೌಡಗಾಂವ್ ಗ್ರಾಮದಲ್ಲಿ, ಕಿರಾಣಿ ಅಂಗಡಿಯ ಪಕ್ಕದ ಚರಂಡಿಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ. ಆಗಷ್ಟೇ ಹುಟ್ಟಿದ ಮಗುವನ್ನು ರಾತ್ರೋರಾತ್ರಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಈ ಅಮಾನವೀಯ ಕೃತ್ಯದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

08:44 PM (IST) May 11

ಕಾಶ್ಮೀರ ವಿವಾದ, ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಹಿಂಸಾಚಾರ 2 ವರ್ಷಗಳ ಕಾಲ ವಿದ್ಯಾರ್ಥಿ ಅಮಾನತು

ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ, ಓರ್ವ ವಿದ್ಯಾರ್ಥಿಯನ್ನು ಎರಡು ವರ್ಷಗಳ ಕಾಲ ಅಮಾನತುಗೊಳಿಸಲಾಗಿದೆ. ಈ ಕ್ರಮವನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ವಿಶ್ವವಿದ್ಯಾಲಯದ ನಿರ್ಧಾರವನ್ನು ಏಕಪಕ್ಷೀಯ ಮತ್ತು ಅನ್ಯಾಯ ಎಂದು ಟೀಕಿಸಿದ್ದಾರೆ.

Read Full Story

08:20 PM (IST) May 11

Bathing Products - ದಿನವಿಡೀ ನೀವು ಘಮಘಮ ಅಂತ ಇರಬೇಕಾ? ಈ 6 ಬಾತಿಂಗ್ ಪ್ರಾಡಕ್ಟ್‌ ಬಳಸಿ ನೋಡಿ!

ಸ್ನಾನ ಮಾಡಿದ ಮೇಲೂ ನಿಮ್ಮ ದೇಹದಿಂದ ಒಳ್ಳೆ ಸುವಾಸನೆ ಬರಬೇಕು ಅಂತ ಆಸೆ ಇದ್ಯಾ? ಬೆವರಿನ ವಾಸನೆ ದೂರ ಮಾಡಿ, ಚರ್ಮಕ್ಕೆ ಹೊಳಪು ಮತ್ತು ಫ್ರೆಶ್‌ನೆಸ್ ನೀಡುವ ಬೆಸ್ಟ್ ಬಾತಿಂಗ್ ಪ್ರಾಡಕ್ಟ್‌ಗಳ ಬಗ್ಗೆ ಇಲ್ಲಿ ತಿಳಿಯಿರಿ.

Read Full Story

08:00 PM (IST) May 11

ಮಂಗಳೂರು-ಸುಬ್ರಹ್ಮಣ್ಯ ರೈಲು ಮಾರ್ಗ - ಪ್ರಯಾಣಿಕರಿಗೆ ಮಹತ್ವದ ಸುದ್ದಿ, ರೈಲು ಸೇವೆಗಳ ಪರಿಷ್ಕರಣೆ

ಮಂಗಳೂರು–ಸುಬ್ರಹ್ಮಣ್ಯ ರಸ್ತೆ ರೈಲು ಮಾರ್ಗದಲ್ಲಿ ಹಳಿ ನಿರ್ವಹಣಾ ಕಾಮಗಾರಿಯಿಂದಾಗಿ ಈ ಹಿಂದೆ ಘೋಷಿಸಲಾಗಿದ್ದ ರೈಲು ಸೇವೆಗಳ ವಿಳಂಬವನ್ನು ಪರಿಷ್ಕರಿಸಲಾಗಿದೆ. ರೈಲು ಸಂಖ್ಯೆ 56629 ಮತ್ತು 56630 ಈಗ ನಿಗದಿತ ದಿನಾಂಕಗಳಿಂದ ತಮ್ಮ ನಿಯಮಿತ ವೇಳಾಪಟ್ಟಿಯಂತೆ ಸಂಚರಿಸಲಿವೆ, ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗಿದೆ.
Read Full Story

07:39 PM (IST) May 11

ವಿಪತ್ತಿನಿಂದ ಪಾರಾಗಲು ಪ್ರಧಾನಿ ಮೋದಿ ಕರೆ ನೀಡಿದ್ದು, ಒಂದು ವರ್ಷ ಪಾಲಿಸಿ - ಸಿ.ಟಿ.ರವಿ

ಮತ್ತೊಮ್ಮೆ ಮನೆಯಿಂದಲೇ ಕೆಲಸ ಮಾಡಿ ಎಂದು ಪ್ರಧಾನಿ ಮೋದಿ ಹೇಳಿರುವುದು ನಮ್ಮ ದೇಶವನ್ನು ವಿಪತ್ತಿನಿಂದ ಪಾರಾಗಲು ಪ್ರಧಾನಿ ಮೋದಿಯವರು ಈ ಕರೆ ನೀಡಿದ್ದಾರೆ ಎಂದು ಸಿ.ಟಿ.ರವಿ ಹೇಳಿದ್ದಾರೆ.

Read Full Story

06:41 PM (IST) May 11

ಪ್ರೈವೇಟ್‌ ಜೆಟ್‌ನಲ್ಲಿ ಓಡಾಟ, ಕೋಟಿ ಕೋಟಿ ಆಸ್ತಿ.. ಶ್ರೀಮಂತ ನಟಿ ರಚಿತಾ ರಾಮ್‌ ಸಂಪಾದನೆ ಸೀಕ್ರೆಟ್ ಇದು!

'ಅದೃಷ್ಟದ ದೇವತೆ' ಎಂದೇ ಕರೆಯಿಸಿಕೊಳ್ಳುವ ನಟಿ ರಚಿತಾ ರಾಮ್, ಇಂದು ಸ್ಯಾಂಡಲ್‌ವುಡ್‌ನ ಅತ್ಯಂತ ಯಶಸ್ವಿ ಮತ್ತು ಶ್ರೀಮಂತ ನಟಿ. 2013ರಲ್ಲಿ 'ಬುಲ್ ಬುಲ್' ಚಿತ್ರದ ಮೂಲಕ ಬಂದ ಈ ಗುಳಿ ಕೆನ್ನೆಯ ಚೆಲುವೆ, ಇಂದು ಕೋಟ್ಯಾಂತರ ರೂ.ಗಳ ಆಸ್ತಿಗೆ ಒಡತಿ. ಈ ನಟಿಯ ಸಂಪಾದನೆಯ ಸೀಕ್ರೆಟ್ ಇಲ್ಲಿದೆ ನೋಡಿ!

Read Full Story

05:46 PM (IST) May 11

ಕುಕ್ಕೆ ಸುಬ್ರಹ್ಮಣ್ಯ ದೇಗುಲದ ದಾಖಲೆ, ವಾರ್ಷಿಕ ಆದಾಯ ₹167 ಕೋಟಿ ಮುಜರಾಯಿಯಲ್ಲೇ ನಂ.1 ಸ್ಥಾನ!

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯವು 2025-26ನೇ ಹಣಕಾಸು ವರ್ಷದಲ್ಲಿ ₹167.89 ಕೋಟಿ ದಾಖಲೆಯ ಆದಾಯ ಗಳಿಸಿದೆ. ಈ ಮೂಲಕ ಸತತ 15ನೇ ವರ್ಷವೂ ರಾಜ್ಯದ ನಂ.1 ಮುಜರಾಯಿ ದೇವಾಲಯವಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಹರಕೆ, ಕಾಣಿಕೆ ಹುಂಡಿ,  ಹೂಡಿಕೆಗಳಿಂದ ಬರುವ ಬಡ್ಡಿ ಆದಾಯದ ಪ್ರಮುಖ ಮೂಲಗಳಾಗಿವೆ.

Read Full Story

05:39 PM (IST) May 11

ಮೈ ಮೇಲೆ ಕತ್ತಿಯಿಂದ ಹೊಡೆದುಕೊಂಡು ರಕ್ತತರ್ಪಣೆ - ಅಷ್ಟಕ್ಕೂ ಅದು ಯಾವ ಹಬ್ಬ? ಎಲ್ಲಿ ನಡೀತು?

ಅದೊಂದು ವಿಶಿಷ್ಟ ಹಬ್ಬ. ಮೈ ಮೇಲೆ ಹರಿತವಾದ ಕತ್ತಿಗಳಿಂದ ಹೊಡೆದುಕೊಂಡು ರಕ್ತತರ್ಪಣೆ ಮಾಡುವ ಆ ಹಬ್ಬದಲ್ಲಿನ ಆಚರಣೆ ನೋಡಿದರೆ ಮೈ ಜುಂ ಎನ್ನುತ್ತದೆ. ಅಷ್ಟಕ್ಕೂ ಅದು ಯಾವ ಹಬ್ಬ? ಎಲ್ಲಿ ನಡೀತು?

Read Full Story

05:34 PM (IST) May 11

'ಡಿಂಪಲ್' ಜಾದೂ ಅಂತಿಂಥದ್ದಲ್ಲ! ರಚಿತಾ ರಾಮ್‌ ಬಿಟ್ರೆ ಬೇರೆ ಯಾರಿಗಾದ್ರೂ ಇಂಥಾ ಭಾಗ್ಯ ಸಿಕ್ಕಿದ್ಯಾ?

ರಚಿತಾ ರಾಮ್ ಕೇವಲ ಪರದೆಯ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಸರಳ, ಸೊಗಸಾದ ಜೀವನಶೈಲಿಯಿಂದ ಗಮನ ಸೆಳೆದಿದ್ದಾರೆ. ಅವರು ಧರಿಸುವ ಸಾಂಪ್ರದಾಯಿಕ ಸೀರೆಗಳಿರಲಿ ಅಥವಾ ಮಾಡರ್ನ್ ಉಡುಪುಗಳಿರಲಿ, ಪ್ರತಿಯೊಂದರಲ್ಲೂ ಅವರದೇ ಆದ ವಿಶಿಷ್ಟ ಶೈಲಿ ಇರುತ್ತದೆ. ಯುವತಿಯರಿಗೆ ಅವರ ಫ್ಯಾಷನ್ ಸೆನ್ಸ್ ಸದಾ ಸ್ಫೂರ್ತಿ.

Read Full Story

04:55 PM (IST) May 11

ಅರೆರೆ ನಟ ವಿಜಯ್ ರಾಘವೇಂದ್ರಗೆ ಇದೇನಾಯ್ತು.. ಈ ಪಾತ್ರ ಮಾಡೋದು ಸವಾಲು ಎಂದಿದ್ಯಾಕೆ?

ವೀರಗಾಸೆ ಇತಿಹಾಸದ ಹಿನ್ನೆಲೆಯುಳ್ಳ 'ರುದ್ರಾಭಿಷೇಕಂ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ವಿಜಯ್ ರಾಘವೇಂದ್ರ ಈ ಚಿತ್ರದಲ್ಲಿ ಮೊದಲ ಬಾರಿಗೆ ತಂದೆ-ಮಗನ ದ್ವಿಪಾತ್ರದಲ್ಲಿ ನಟಿಸಿದ್ದು, ವೀರಗಾಸೆ ಕಲಾವಿದನ ಸವಾಲಿನ ಪಾತ್ರ ನಿರ್ವಹಿಸಿದ್ದಾರೆ.

Read Full Story

04:33 PM (IST) May 11

ಆ ಬಹಳಷ್ಟು ಸಿಡಿಗಳು ಇನ್ನೂ ನನ್ನ ಬಳಿ ಇವೆ - ಗೋಲ್ಡನ್‌ ಸ್ಟಾರ್‌ ಗಣೇಶ್‌ ಪತ್ನಿ ಮಾತಿನ ಮರ್ಮವೇನು?

ನನಗೆ ಚಿಕ್ಕಂದಿನಿಂದಲೂ ಗಾಯನ ಅಂದ್ರೆ ಬಹಳ ಇಷ್ಟ. ಶಾಸ್ತ್ರೀಯವಾಗಿ ಕಲಿತಿಲ್ಲವಾದರೂ ಬಾಲ್ಯದಿಂದಲೇ ನನಗಿಷ್ಟ ಬಂದ ಹಾಡುಗಳನ್ನು ಪ್ರಾಕ್ಟೀಸ್ ಮಾಡುತ್ತಲೇ ಇದ್ದೆ ಎನ್ನುತ್ತಾರೆ ಗೋಲ್ಡನ್‌ ಸ್ಟಾರ್‌ ಗಣೇಶ್‌ ಪತ್ನಿ.

Read Full Story

04:28 PM (IST) May 11

Thalapathy Vijay - ‌ ತಪ್ಪಾದ ಮುಹೂರ್ತದಲ್ಲಿ ದಳಪತಿ ವಿಜಯ್‌ ಸಿಎಂ; ಜ್ಯೋತಿಷಿ ಪ್ರಕಾಶ್‌ ಅಮ್ಮಣ್ಣಾಯ ಭವಿಷ್ಯ

Thalapathy Vijay News: ಚೆನ್ನೈನ ನೆಹರು ಸ್ಟೇಡಿಯಂನಲ್ಲಿ ದಳಪತಿ ವಿಜಯ್‌ ಅವರು ಮೇ 10ರಂದು ಬೆಳಿಗ್ಗೆ 10 ಗಂಟೆಗೆ ತಮಿಳುನಾಡಿನ ಹೊಸ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ನಿಜಕ್ಕೂ ಈ ಸಮಯ ಹೇಗಿದೆ? ಐದು ವರ್ಷಗಳ ಕಾಲ ಇವರು ಅಧಿಕಾರ ನಡೆಸುತ್ತಾರಾ? ಎಂಬ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

 

Read Full Story

02:52 PM (IST) May 11

Thalapathy Vijay ಸಿಎಂ; ಫಸ್ಟ್‌ಟೈಮ್‌ ರಿಯಾಕ್ಷನ್‌ ಕೊಟ್ಟ ತ್ರಿಶಾ ಕೃಷ್ಣನ್;‌ ಈ ಧೈರ್ಯಕ್ಕೆ ಮೆಚ್ಚಬೇಕು!

Actress Trisha Krishnan: ನಟ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭದಲ್ಲಿ ನಟಿ ತ್ರಿಶಾ ಭಾಗವಹಿಸಿದ್ದರು. ಇದೀಗ ಅವರು ಇನ್‌ಸ್ಟಾಗ್ರಾಂನಲ್ಲಿ ಹಾಕಿರುವ ಒಂದು ಪೋಸ್ಟ್ ಸಖತ್ ವೈರಲ್ ಆಗಿದ್ದು, ಅದರ ಹಿಂದಿನ ಅರ್ಥವೇನು ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ.

 

Read Full Story

12:14 PM (IST) May 11

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯ ಹತ್ಯೆ ಕೇಸ್, ಪತ್ನಿ ಹಾಗೂ ಪ್ರಿಯಕರನಿಗೆ ಗಲ್ಲು ಶಿಕ್ಷೆ

ಮದುವೆಯಾದ ಕೆಲ ವರ್ಷಗಳಲ್ಲೇ ಪತ್ನಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಇದಕ್ಕೆ ಅಡ್ಡಿಯಾದ ಪತಿಯನ್ನು ಪ್ರಿಯಕರ ಜೊತೆ ಸೇರಿದ ಹತ್ಯೆ ಮಾಡಿದ್ದಳು. ಈ ಪ್ರಕರಣದ ತೀರ್ಪು ಇದೀಗ ಹೊರಬಿದ್ದಿದೆ.ಇಬ್ಬರಿಗೂ ಗಲ್ಲು ಶಿಕ್ಷೆ ವಿಧಿಸಲಾಗಿದೆ.

Read Full Story

10:54 AM (IST) May 11

ಚಿರತೆ ದಾಳಿಗೆ ಬಲಿಯಾದ ಬಾಲಕನ ಕುಟುಂಬಕ್ಕೆ 20 ಲಕ್ಷ ರೂ ಪರಿಹಾರ ಘೋಷಿಸಿ ಅರಣ್ಯ ಇಲಾಖೆ

ಮಲೆ ಮಹದೇಶ್ವರ ಬೆಟ್ಟದಲ್ಲಿ ದರ್ಶನಕ್ಕೆ ತೆರಳಿದ್ದ ಬಾಲಕನ ಮೇಲೆ ಚಿರತೆ ದಾಳಿ ನಡೆದ ಘಟನೆ ಭಕ್ತರನ್ನು ಬೆಚ್ಚಿ ಬೀಳಿಸಿದೆ. ಮೃತ ಬಾಲಕನ ಅಂತ್ಯಸಂಸ್ಕಾರ ಇಂದು ನಡದಿದೆ. ಇತ್ತ ಅರಣ್ಯ ಇಲಾಖೆ ಪರಿಹಾರ ಘೋಷಿಸಿದೆ.

Read Full Story

10:28 AM (IST) May 11

ಮೋದಿ ಕರೆ ಕೊಟ್ಟ ಬೆನ್ನಲ್ಲೇ ಇಂಧನ ಕೊರತೆ ಆತಂಕ, ಲಗ್ಗೆರೆ ಬಂಕ್‌ನಲ್ಲಿ ಪೆಟ್ರೋಲ್, ಡೀಸೆಲ್ ಖಾಲಿ

ಪ್ರಧಾನಿ ಮೋದಿ ಪೆಟ್ರೋಲ್ ಡೀಸೆಲ್ ಮಿತ ಬಳಕೆಗೆ ಕರೆ ನೀಡಿದ್ದಾರೆ. ಅನಗತ್ಯ ಪ್ರಯಾಣ ತಪ್ಪಿಸಲು ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಕೆಲ ಪೆಟ್ರೋಲ್ ಬಂಕ್‌ಗಳಿಗೆ ಇಂಧನ ಸರಬರಾಜು ಕೊರತೆ ಎದುರಾಗಿದೆ.

 

Read Full Story

09:37 AM (IST) May 11

Ex Interview - ಇದೇನು ಪೋಸ್‌ ಅಲ್ಲ, ರಿಯಲ್‌ ಆಗಿ ರೈತನನ್ನು ಮದುವೆ ಆಗ್ತಿರೋ Amruthadhaare Serial ದಿಯಾ!

Amruthadhaare Serial Diya Real Name: ಅಮೃತಧಾರೆ ಧಾರಾವಾಹಿ ದಿಯಾ ಪಾತ್ರಧಾರಿ ಶ್ವೇತಾ ಗೌಡ ಅವರಿಗೆ ಈಗ 26 ವರ್ಷ ವಯಸ್ಸು. ಕೆಲವೇ ದಿನಗಳಲ್ಲಿ ಇವರು ಮದುವೆ ಆಗಲಿದ್ದಾರೆ. ಹಾಗಾದರೆ ಹುಡುಗ ಯಾರು? ಎಲ್ಲಿಯವರು? ಯಾವಾಗ ಮದುವೆ ಆಗಲಿದೆ? ಇದು ಅರೇಂಜ್?‌ ಲವ್?‌ 

 

Read Full Story

07:48 AM (IST) May 11

ರಕ್ಷಿತ್ ಶೆಟ್ಟಿ ಮತ್ತು ನನ್ನ ನಡುವೆ ಮ್ಯೂಸಿಕ್ ಸೀಕ್ರೆಟ್‌ಗಳಿವೆ - ಅಜನೀಶ್‌ ಲೋಕನಾಥ್

ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌ ಅವರು ನಟ ರಕ್ಷಿತ್‌ ಶೆಟ್ಟಿ ಜೊತೆಗಿನ ತಮ್ಮ ವಿಶಿಷ್ಟ ಸಂಗೀತ ಶೈಲಿಯ ರಹಸ್ಯವನ್ನು ಹಂಚಿಕೊಂಡಿದ್ದಾರೆ. 'ಉಳಿದವರು ಕಂಡಂತೆ' ಸಿನಿಮಾದಲ್ಲಿ ತಾವು ಕೆಲಸ ಮಾಡಿದ ವಿಶಿಷ್ಟ ರೀತಿಯನ್ನು ಅವರು ನೆನಪಿಸಿಕೊಂಡಿದ್ದಾರೆ.

Read Full Story

07:26 AM (IST) May 11

ನಮ್ಮ ಸಾವು ಯಾವಾಗ ಗೊತ್ತಿಲ್ಲ, ಕೊನೆ ಕಾರ್ಯಕ್ರಮದಲ್ಲಿ ಮೃತ್ಯು ಬಗ್ಗೆ ಮಾತನಾಡಿದ್ದ ಸಚಿವ ಡಿ ಸುಧಾಕರ್

ಅನಾರೋಗ್ಯದಿಂದ ವಿಧಿವಶರಾದ ಸಚಿವ ಡಿ ಸುಧಾಕರ್ ಅಂತ್ಯಕ್ರಿಯೆ ಇಂದು ನಡೆಯಲಿದೆ. ಆದೆರೆ ಸಚಿವ ಭಾಗವಹಿಸಿದ್ದ ಕೊನೆಯ ಕಾರ್ಯಕ್ರಮದಲ್ಲಿ ಸಾವಿನ ಕುರಿತು ಮಾರ್ಮಿಕವಾಗಿ ಮಾತನಾಡಿದ್ದರು. ಈ ವಿಡಿಯೋ ವೈರಲ್ ಆಗಿದೆ.

 

Read Full Story

06:43 AM (IST) May 11

ಡಿ. ಸುಧಾಕರ್ ಕುಟುಂಬ ರಾಜಕಾರಣ ಕೊನೆ?

ಚಳ್ಳಕೆರೆ ಮಾಜಿ ಶಾಸಕ ಡಿ.ಸುಧಾಕರ್ ಅವರ ನಿಧನದಿಂದ ಅವರ ಕುಟುಂಬದ ರಾಜಕೀಯ ಭವಿಷ್ಯದ ಬಗ್ಗೆ ಪ್ರಶ್ನೆ ಎದ್ದಿದೆ. ದಾನ-ಧರ್ಮಕ್ಕೆ ಹೆಸರಾದ ಜೈನ್ ಕುಟುಂಬದ ಕುಡಿಯಾದ ಇವರು, ಚಿಕ್ಕಪ್ಪ ಎನ್.ಜಯಣ್ಣರ ಹಾದಿಯಲ್ಲಿ ರಾಜಕೀಯ ಪ್ರವೇಶಿಸಿ, 2004-2008ರವರೆಗೆ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಅವರ ರಾಜಕೀಯ ಮತ್ತು ವೈಯಕ್ತಿಕ ಬದುಕಿನ ಚಿತ್ರಣ ಇಲ್ಲಿದೆ.
Read Full Story

06:35 AM (IST) May 11

ಒಪನ್ ಮ್ಯೂಸಿಯಂ ವಾರಂಗಲ್ ಹಿಂದಿಕ್ಕಿ, ಐತಿಹಾಸಿಕ ದಾಖಲೆ ಬರೆಯುತ್ತ ಹೆಜ್ಜೆಯಿಟ್ಟ ಲಕ್ಕುಂಡಿ

ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ 3000ಕ್ಕೂ ಅಧಿಕ ಪುರಾತನ ಕುರುಹುಗಳು ಪತ್ತೆಯಾಗಿದ್ದು, ಇದು ದೇಶದಲ್ಲೇ ಅತಿ ಹೆಚ್ಚು ಪ್ರಾಚ್ಯಾವಶೇಷಗಳನ್ನು ಹೊಂದಿದ ಗ್ರಾಮವಾಗುವತ್ತ ಸಾಗಿದೆ. ಇತ್ತೀಚಿನ ಉತ್ಖನನದಲ್ಲಿ 9-10ನೇ ಶತಮಾನದ ರಾಷ್ಟ್ರಕೂಟರ ಕಾಲದ ಅಪರೂಪದ ವೀರಗಲ್ಲು ಕೂಡ ಪತ್ತೆಯಾಗಿದೆ

Read Full Story

06:12 AM (IST) May 11

ಸರ್ಕಾರಿ ಗೌರವದ ಜತೆ ಚಳ್ಳಕೆರೆಯಲ್ಲಿ ಇಂದು ಸಚಿವ ಸುಧಾಕರ್‌ ಅಂತ್ಯಕ್ರಿಯೆ

ಭಾನುವಾರ ನಿಧನರಾದ ಸಚಿವ ಡಿ.ಸುಧಾಕರ್ ಅವರ ಅಂತ್ಯ ಸಂಸ್ಕಾರವು ಸೋಮವಾರ ಮಧ್ಯಾಹ್ನ 4 ಗಂಟೆಗೆ ಚಳ್ಳಕೆರೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ. ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮುಖ್ಯಮಂತ್ರಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಎಐಸಿಸಿ ಮುಖಂಡ ರಾಹುಲ್ ಗಾಂಧಿ ಅವರು ಸಚಿವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
Read Full Story

05:51 AM (IST) May 11

ಹೈದರಾಬಾದ್ ಉದ್ಯಮಿ ಅಂಜನಾದ್ರಿಗೆ ಅರ್ಪಿಸಿದ ಚಿನ್ನದ ಕಿರೀಟ, ಗದೆ ಅಸಲಿಯತ್ತು ಬಯಲು

ಗಂಗಾವತಿಯ ಕಿಷ್ಕಿಂದಾ ಅಂಜನಾದ್ರಿಗೆ ಹೈದರಾಬಾದ್ ಉದ್ಯಮಿಯೊಬ್ಬರು ಸಮರ್ಪಿಸಿದ್ದ ಆಭರಣಗಳು ಚಿನ್ನದ್ದಲ್ಲ, ಬದಲಿಗೆ ಚಿನ್ನಲೇಪಿತ ತಾಮ್ರ ಎಂದು ದೃಢಪಟ್ಟಿದೆ. ಲೋಹ ತಜ್ಞರ ಪರೀಕ್ಷೆ ನಂತರ, ದೇವಾಲಯದ ಆಡಳಿತಾಧಿಕಾರಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದು, ದಾನಿಗಳಿಂದ ಸಾಮಗ್ರಿಗಳ ಮೌಲ್ಯದ ರಸೀದಿ ಕೇಳಲಾಗಿದೆ.
Read Full Story

05:41 AM (IST) May 11

ಮಳೆ ನಿಂತು 10 ದಿನ ಕಳೆದ್ರೂ ಬಿದ್ದ ಮರಗಳ ಸಂಗ್ರಹಕ್ಕೆ ಜಿಬಿಎ ಪರದಾಟ; ಅಗತ್ಯ ಜಾಗವೇ ಇಲ್ಲ

ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ನೂರಾರು ಮರಗಳು ಧರೆಗುರುಳಿವೆ. ಆದರೆ, ಬಿದ್ದ ಮರಗಳನ್ನು ಸಂಗ್ರಹಿಸಲು ಪಾಲಿಕೆಗೆ ಅಧಿಕೃತ ಡಿಪೋ ಇಲ್ಲದಿರುವುದರಿಂದ, ಸ್ಮಶಾನ ಮತ್ತು ಕೆರೆ ಅಂಗಳಗಳಂತಹ ತಾತ್ಕಾಲಿಕ ಸ್ಥಳಗಳಲ್ಲಿ ಸಂಗ್ರಹಿಸಲಾಗುತ್ತಿದ್ದು, ಇದು ತೆರವು ಕಾರ್ಯ ವಿಳಂಬಕ್ಕೆ ಕಾರಣವಾಗಿದೆ.
Read Full Story

05:34 AM (IST) May 11

ಬೈಕ್‌ ಸವಾರನ ಸಾವಿಗೆ ಕಾರಣನಾಗಿದ್ದ ವ್ಯಕ್ತಿಗೆ 1 ವರ್ಷದ ಬದಲು 1 ದಿನ ಜೈಲು - ಹೈಕೋರ್ಟ್

14 ವರ್ಷಗಳ ಹಿಂದೆ ಕಾರು ಟೆಸ್ಟ್ ಡ್ರೈವ್ ವೇಳೆ ಬೈಕ್ ಸವಾರನ ಸಾವಿಗೆ ಕಾರಣರಾದ 78 ವರ್ಷದ ವೃದ್ಧನಿಗೆ ಹೈಕೋರ್ಟ್ ಮಾನವೀಯತೆ ತೋರಿದೆ. ಗಾಲಿ ಕುರ್ಚಿಯಲ್ಲಿರುವ ಆರೋಪಿಯ ಒಂದು ವರ್ಷದ ಜೈಲು ಶಿಕ್ಷೆಯನ್ನು ಒಂದು ದಿನಕ್ಕೆ ಇಳಿಸಿ, ಮೃತನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಲು ಆದೇಶಿಸಿದೆ.
Read Full Story

05:29 AM (IST) May 11

Bengaluru - ಪ್ರೇಯಸಿ ಜತೆ ಪರಾರಿ ಆಗಿದ್ದ ಯುವಕನ ಅಣ್ಣನ ಕಿಡ್ನಾಪ್‌ ನಾಟಕ ಕೊನೆಗೂ ಬಯಲು

ತನ್ನ ಪ್ರೇಯಸಿಯೊಂದಿಗೆ ಪರಾರಿಯಾದ ಯುವಕನನ್ನು ಮರಳಿ ಕರೆತರಲು, ಯುವತಿಯ ಪೋಷಕರು ಯುವಕನ ಸಹೋದರನನ್ನೇ ಅಪಹರಿಸಿ ಹಲ್ಲೆ ನಡೆಸಿದಂತೆ ನಾಟಕವಾಡಿದ್ದಾರೆ. ಈ ಅಪಹರಣದ ವಿಡಿಯೋ ವೈರಲ್ ಆಗಿದ್ದು, ಪೊಲೀಸ್ ತನಿಖೆಯ ವೇಳೆ ಇದು ಪೂರ್ವನಿಯೋಜಿತ ನಾಟಕ ಎಂಬುದು ಬೆಳಕಿಗೆ ಬಂದಿದೆ.
Read Full Story

05:21 AM (IST) May 11

ಪ್ರಧಾನಿ ಮೋದಿ ಮಾರ್ಗದಲ್ಲಿ ಪತ್ತೆಯಾದ ಜಿಲೆಟಿನ್‌ ಕಡ್ಡಿಗಳು ಪತ್ತೆ; ಓರ್ವ ಶಂಕಿತನ ಬಂಧನ

ಪ್ರಧಾನಿ ನರೇಂದ್ರ ಮೋದಿ ಅವರು ಆರ್ಟ್‌ ಆಫ್‌ ಲಿವಿಂಗ್‌ ಕಾರ್ಯಕ್ರಮಕ್ಕೆ ತೆರಳುವ ಮಾರ್ಗದಲ್ಲಿ ಎರಡು ಜಿಲೆಟಿನ್‌ ಕಡ್ಡಿಗಳು ಪತ್ತೆಯಾಗಿ ಆತಂಕ ಸೃಷ್ಟಿಸಿವೆ. ಈ ಸಂಬಂಧ ಸ್ಫೋಟದ ಬೆದರಿಕೆ ಕರೆ ಮಾಡಿದ್ದ ಶಂಕಿತನನ್ನು ವಶಕ್ಕೆ ಪಡೆಯಲಾಗಿದ್ದು, ಭದ್ರತಾ ಲೋಪದ ಕುರಿತು ತನಿಖೆಗಾಗಿ ನಾಲ್ಕು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ.
Read Full Story

More Trending News