ಧಾರವಾಡ: ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ದೂರಿನ ಅನ್ವಯ ಲೋಕಾಯುಕ್ತ ಅಧಿಕಾರಿಗಳ ತಂಡವು ಮಂಗಳವಾರ ಜಿಲ್ಲೆಯ 24 ಗ್ರಾಪಂಗಳ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲಿಸಿತು.
ಕಳಪೆ ಕಾಮಗಾರಿ, ಬಿಲ್ ಪಾವತಿಗೆ ಹಣಕ್ಕಾಗಿ ಬೇಡಿಕೆ, ಕಾಮಗಾರಿಗಳ ಹಿರಿತನ ಆಧರಿಸಿ ಬಾಕಿ ಬಿಲ್ ಪಾವತಿಸದಿರುವುದು, ದಾಖಲೆಗಳನ್ನು ನಿರ್ವಹಿಸದಿರುವುದು, ಫಲಾನುಭವಿಗಳಿಗೆ ಸೌಲಭ್ಯ ನೀಡಲು ವಿಳಂಬ ಸೇರಿ ಇನ್ನಿತರ ಲೋಪದೋಷಗಳ ಕುರಿತು ಲೋಕಾಯುಕ್ತರಿಗೆ ದೂರುಗಳು ಸಲ್ಲಿಕೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್ಪಿ ಎಸ್.ಟಿ.ಸಿದ್ದಲಿಂಗಪ್ಪ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಜಿಲ್ಲೆಯ 24 ಗ್ರಾಪಂಗಳ ದಾಖಲಾತಿ ಪರಿಶೀಲಿಸಿದ್ದು, ತಿಂಗಳಾಂತ್ಯಕ್ಕೆ ಕೇಂದ್ರ ಕಚೇರಿಗೆ ವರದಿ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
10:37 PM (IST) Jun 10
09:52 PM (IST) Jun 10
ರಾಜ್ಯ ಕಾಂಗ್ರೆಸ್ ನಲ್ಲಿ ಅಧಿಕಾರ ಹಸ್ತಾಂತರ ಮೇಲ್ನೋಟಕ್ಕೆ ಬಹಳ ಸುಗಮವಾಗಿ ಆಯಿತು ಎನ್ನುವಂತೆ ಕಾಣಿಸುತ್ತಿದೆ. ಆದರೆ, ಒಳಬೇಗುದಿ ಇನ್ನೂ ಕೆಂಡದಂತೆ ಜೀವಂತವಾಗಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.
09:49 PM (IST) Jun 10
ಜಸ್ಟ್ ಎರಡು ವರ್ಷಗಳ ಹಿಂದೆ ದರ್ಶನ್ ಅಂದ್ರೆ ಎಲ್ಲರೂ ಮುತ್ತಿಕ್ತಾ ಇದ್ರು. ಚಿತ್ರರಂಗ ದಾಸನನ್ನ ಹೊತ್ತು ಮೆರೆಸ್ತಾ ಇತ್ತು. ರಾಜಕಾರಣಿಗಳು, ಉದ್ಯಮಿಗಳು ದಾಸನ ಹಿಂದೆ ಮುಂದೆ ಸುತ್ತತಾ ಇದ್ರು. ಆಗ ದರ್ಶನ್ ಥೇಟ್ ಚಕ್ರವರ್ತಿಯಂತೆ ಮೆರೀತಾ ಇದ್ರು… ಆದ್ರೀಗ ಎಲ್ಲವೂ ಉಲ್ಟಾ ಆಗಿದೆ..
09:21 PM (IST) Jun 10
ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷದಲ್ಲಿ ಬಿರುಕು ಮೂಡಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ರಾಜ್ಯಸಭೆ ಟಿಕೆಟ್‌ಗೆ ದೇವೇಗೌಡರು ಅರ್ಜಿಯನ್ನೇ ಹಾಕಿರಲಿಲ್ಲ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.
08:10 PM (IST) Jun 10
07:20 PM (IST) Jun 10
ಸ್ಟಾರ್ ಏರ್ ಸಂಸ್ಥೆಯು ಬೆಂಗಳೂರು-ಬೀದರ್ ವಿಮಾನದ ಸಮಯವನ್ನು ಮುಂಜಾನೆಯಿಂದ ಮಧ್ಯಾಹ್ನಕ್ಕೆ ಬದಲಾಯಿಸಿದೆ. ಈ ಹೊಸ ವೇಳಾಪಟ್ಟಿಯು ಪ್ರಯಾಣಿಕರಿಗೆ ಅನಾನುಕೂಲಕರವಾಗಿದ್ದು, ಈ ಹಿನ್ನೆಲೆಯಲ್ಲಿ ಸಚಿವ ಈಶ್ವರ್ ಖಂಡ್ರೆ ಅವರು ಹಳೆಯ ವೇಳಾಪಟ್ಟಿಯನ್ನೇ ಮರುಸ್ಥಾಪಿಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
06:58 PM (IST) Jun 10
ಶಿವಮೊಗ್ಗದ ಹಿರೇಭಾಸ್ಕರ ಆಣೆಕಟ್ಟು ಬೇಸಿಗೆಯಲ್ಲಿ ಮಾತ್ರ ಕಾಣಸಿಗುವ ಐತಿಹಾಸಿಕ ವಿಸ್ಮಯ. ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ನಿರ್ಮಿತವಾದ ಇದು, 1964ರಲ್ಲಿ ಲಿಂಗನಮಕ್ಕಿ ಜಲಾಶಯ ನಿರ್ಮಾಣವಾದಾಗ ಅದರ ಹಿನ್ನೀರಿನಲ್ಲಿ ಮುಳುಗಡೆಯಾಯಿತು.
06:37 PM (IST) Jun 10
ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು, ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ಅಸಭ್ಯ ಹಾಗೂ ಆಕ್ಷೇಪಾರ್ಹ ಕಮೆಂಟ್‌ಗಳನ್ನು ಹಾಕಿದ ಕಿಡಿಗೇಡಿಗಳ ವಿರುದ್ಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. 'ಜಲಗಾರ ಯೂನಿವರ್ಸಿಟಿ' ಎಂಬ ನಕಲಿ ಖಾತೆಯ ವ್ಯಕ್ತಿ ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.
06:35 PM (IST) Jun 10
ಭಾರತೀಯ ರೈಲ್ವೆಯು ದಕ್ಷಿಣ ಭಾರತದ ಎರಡು ಪ್ರಮುಖ ರೈಲು ಮಾರ್ಗಗಳಾದ ಬೆಂಗಳೂರು-ತುಮಕೂರು ಮತ್ತು ಮಹಬೂಬ್‌ನಗರ-ಸಿಕಂದರಾಬಾದ್-ಮೇಡ್ಚಲ್ ವಿಭಾಗಗಳಲ್ಲಿ ವಿದ್ಯುತ್ ಎಳೆತ ವ್ಯವಸ್ಥೆಯನ್ನು ಆಧುನೀಕರಿಸಲು 448 ಕೋಟಿ ರೂಪಾಯಿಗಳ ಯೋಜನೆಗೆ ಅನುಮೋದನೆ ನೀಡಿದೆ.
06:19 PM (IST) Jun 10
ಬೆಂಗಳೂರಿನಲ್ಲಿ ಬಿಎಂಟಿಸಿ ಕಂಡಕ್ಟರ್‌ವೊಬ್ಬರು ಸತತವಾಗಿ ಟಿಕೆಟ್‌ಗಳನ್ನು ಪ್ರಿಂಟ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇದು 'ಶಕ್ತಿ ಯೋಜನೆ'ಯ ದುರ್ಬಳಕೆ ಎಂಬ ಆರೋಪಕ್ಕೆ ಕಾರಣವಾಗಿದ್ದು, ಸಾರ್ವಜನಿಕರು ಮತ್ತು ನೆಟ್ಟಿಗರ ನಡುವೆ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ.
06:10 PM (IST) Jun 10
ಉತ್ತರ ಪ್ರದೇಶದ ಮೀರತ್‌ನ ಯುವಕ ಖಾಲಿ ಜಾಗದಲ್ಲಿ ಸ್ವಿಮ್ಮಿಂಗ್ ಪೂಲ್ ನಿರ್ಮಿಸಿ ಬೇಸಿಗೆಯಲ್ಲಿ ತಿಂಗಳಿಗೆ ₹22.5 ಲಕ್ಷ ಹಾಗೂ ಉಳಿದ ತಿಂಗಳುಗಳಲ್ಲಿ ₹7.5 ಲಕ್ಷದವರೆಗೆ ಆದಾಯ ಗಳಿಸುತ್ತಿದ್ದಾರೆ. ಈ ಸ್ಮಾರ್ಟ್ ಬ್ಯುಸಿನೆಸ್ ಮಾದರಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
05:48 PM (IST) Jun 10
‘ಇಲ್ಲಿ ಭಕ್ತರಿಗೆ ಸರಿಯಾದ ವ್ಯವಸ್ಥೆ ಇಲ್ಲ, ಇಲ್ಲಿಗೆ ಬರಬೇಡಿ’ ಅಂತ ಅನೇಕರು ಸೋಷಿಯಲ್ ಮಿಡಿಯಾದಲ್ಲಿ ವಿಡಿಯೋ ಹರಿಬಿಡ್ತಾ ಇದ್ದಾರೆ. ಅಷ್ಟಕ್ಕೂ ನಿಮಗ್ಯಾರು ಅಲ್ಲಿಗೆ ಹೋಗ್ಲಿಕ್ಕೆ ಹೇಳಿದ್ರು ಅಂದ್ರೆ ಇವರು ರಿಷಬ್, ದರ್ಶನ್ ರನ್ನ ನೋಡಿ ಹೋದ್ವಿ ಅಂತಾರೆ. ಎನೆಲ್ಲಾ ಪರದಾಟ ಅನುಭವಿಸಿದ್ರು ನೋಡಿ..!
05:14 PM (IST) Jun 10
04:51 PM (IST) Jun 10
04:48 PM (IST) Jun 10
ಎಲೋನ್ ಮಸ್ಕ್ ಅವರ 'ಗ್ರಾಕ್' (Grok) ಎಐ ಇತ್ತೀಚೆಗೆ ಮಾಡಿದ ಒಂದು ದೊಡ್ಡ ಎಡವಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ತಮಿಳಿನಿಂದ ಸುದ್ದಿಯನ್ನು ಅನುವಾದಿಸುವಾಗ ಎಐ ತಂತ್ರಜ್ಞಾನವು, ನಟ ವಿಜಯ್ ಅವರನ್ನು 'ಮುಖ್ಯಮಂತ್ರಿ' ಎಂದು ಸಂಬೋಧಿಸಿದ್ದಲ್ಲದೆ, ಅವರ ಪಾರ್ಥಿವ ಶರೀರಕ್ಕೆ ನಿರ್ದೇಶಕ ಭಾರತಿರಾಜ ಅವರು ಅಂತಿಮ ನಮನ ಸಲ್ಲಿಸಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಹರಿಬಿಟ್ಟಿದೆ.
04:32 PM (IST) Jun 10
ಪ್ರಶಾಂತ್ ಹಿರೇಮಠ 1989ರಿಂದ 2022ರವರೆಗೆ ಮೈಸೂರಿನ ರಂಗಾಯಣದಲ್ಲಿ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದವರು. 180ಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿದ್ದಾರೆ. ನಿರ್ದೇಶನ ಮಾಡಿದ್ದಾರೆ. ಮಹತ್ವದ..
03:48 PM (IST) Jun 10
ಪ್ರಖ್ಯಾತ 'ಟೈಮ್ ಔಟ್' ನಿಯತಕಾಲಿಕೆಯು 2026ರ ವಿಶ್ವದ ಅತ್ಯುತ್ತಮ ಆಹಾರ ನಗರಗಳ ಪಟ್ಟಿಯನ್ನು ಪ್ರಕಟಿಸಿದ್ದು, ಬೆಂಗಳೂರು 13ನೇ ಸ್ಥಾನ ಪಡೆದಿದೆ. ಈ ಪ್ರತಿಷ್ಠಿತ ಟಾಪ್-20 ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ನಗರ ಇದಾಗಿದ್ದು, ಸಾಂಪ್ರದಾಯಿಕ ಪಾಕಪದ್ಧತಿಯ ಸಮ್ಮಿಶ್ರಣಕ್ಕಾಗಿ ಈ ಮನ್ನಣೆ ಲಭಿಸಿದೆ.
03:25 PM (IST) Jun 10
03:17 PM (IST) Jun 10
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಗ್ಯಾಂಗ್‌ನ ಪವನ್, ರಾಘವೇಂದ್ರ, ನಂದೀಶ್, ವಿನಯ್ ಹಾಗೂ ಧನರಾಜ್ ಜಾಮೀನು ರದ್ದು ಕೋರಿದ್ದ ಪ್ರಾಸಿಕ್ಯೂಷನ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
01:45 PM (IST) Jun 10
ಬಡವರ ರಕ್ತ ಹೀರಿ ಕಟ್ಟಿದ ಈ 2,400 ಕೋಟಿ ರೂಪಾಯಿಗಳ ಸಾಮ್ರಾಜ್ಯ ಈಗ ಬುಡಮೇಲಾಗುತ್ತಿದೆ. ಸಿಐಡಿ ಅಧಿಕಾರಿಗಳು ದಾಖಲೆಗಳ ಬೆನ್ನತ್ತಿದ್ದು, ಚಿತ್ರರಂಗದ ಗಣ್ಯರು ಈ ವಂಚನೆಯ ಜಾಲದಲ್ಲಿ ಎಷ್ಟು ಆಳಕ್ಕೆ ಸಿಲುಕಿದ್ದಾರೆ ಎಂಬುದು ಶೀಘ್ರದಲ್ಲೇ ಬಹಿರಂಗವಾಗಲಿದೆ.
01:32 PM (IST) Jun 10
01:19 PM (IST) Jun 10
ತಮಿಳುನಾಡು ನೂತನ ಮುಖ್ಯಮಂತ್ರಿ ಹಾಗೂ ನಟ ಜೋಸೆಫ್ ವಿಜಯ್, ಉಡುಪಿಯ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಆಗಮಿಸುತ್ತಿರುವ ಅವರು, ದವಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
01:07 PM (IST) Jun 10
01:01 PM (IST) Jun 10
Zee Kannada Jodi No 1 Show: ಜೋಡಿ ನಂ 1 ಶೋನಲ್ಲಿ ಈ ವಾರ ದಂಪತಿಗಳು ತಮ್ಮ ನಡುವಿನ ಸಮಸ್ಯೆ ಏನು ಎಂದು ಮನಬಿಚ್ಚಿ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ ನಿಜಕ್ಕೂ ಸಮಸ್ಯೆ ಏನು? ಆಮೇಲೆ ಏನು ಪರಿಹಾರ ಸಿಕ್ಕಿತು ಎಂದು ಕೂಡ ಅವರು ಹೇಳಿದ್ದಾರೆ.
12:39 PM (IST) Jun 10
12:06 PM (IST) Jun 10
ನಟಿ ಶುಭಾ ಪೂಂಜಾ ಡಿವೋರ್ಸ್ ವಿಷ್ಯ ಸದ್ಯ ಸುದ್ದಿಯಲ್ಲಿದೆ. ಶುಭಾ ಪೂಂಜಾ ಹಾಗೂ ಅವ ಪತಿ ಸುಮಂತ್ ಒಪ್ಪಿಗೆ ಮೇರೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ನಟಿ ಶುಭಾ ಪೂಂಜಾ ಈಗ ಸ್ಪಷ್ಟನೆ ನೀಡಿದ್ದಾರೆ.
12:02 PM (IST) Jun 10
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಪತಿಯೊಂದಿಗೆ ಜಗಳವಾಡಿ ಮನೆಬಿಟ್ಟ ಮಹಿಳೆಗೆ, ಯುವಕನೊಬ್ಬ ಪಾನೀಯ ನೀಡಿ ಬಳಿಕ ಸಾಮೂಹಿಕ ಅತ್ಯಾ೧ಚಾರ ಎಸಗಲಾಗಿದೆ. ಈ ಘಟನೆಯ ವಿಡಿಯೋಗಳು ಹರಿದಾಡಿದ ನಂತರ ಸಂತ್ರಸ್ತೆ ದೂರು ನೀಡಿದ್ದು, ಪೊಲೀಸರು 10 ಮಂದಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
12:00 PM (IST) Jun 10
Jodi No 1 Balu Belagundi: ಜೋಡಿ ನಂ 1 ಸೀಸನ್ 2 ಶೋ ಪ್ರಸಾರ ಆಗ್ತಿದೆ. ಈ ಶೋನಲ್ಲಿ ಈ ವಾರ ಸ್ಪರ್ಧಿಗಳು ತಮ್ಮ ದಾಂಪತ್ಯದಲ್ಲಿರುವ ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ. ಆ ವೇಳೆ ಗಾಯಕ ಬಾಳು ಬಾಳೆಗುಂದಿ ಪತ್ನಿ ಮಾಲಾಶ್ರೀ ಅವರು ಪತಿ ಬಗ್ಗೆ ದೂರು ನೀಡಿದ್ದಾರೆ.
11:22 AM (IST) Jun 10
11:12 AM (IST) Jun 10
ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಬಿ.ಕೆ.ಹರಿಪ್ರಸಾದ್ ಅವರು ಜೂ.21 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಸಿಎಂ ಡಿ.ಕೆ.ಶಿವಕುಮಾರ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನೇಮಕಗೊಂಡಿದ್ದು, ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಿರಿಯ ನಾಯಕರ ಸಮ್ಮುಖದಲ್ಲಿ ಪದಗ್ರಹಣ ಮಾಡಲಿದ್ದಾರೆ.
10:47 AM (IST) Jun 10
ಹುಣಸೂರಿನ ಸೋಮನಹಳ್ಳಿ ಮತ್ತು ಮರದೂರು ಭಾಗದ ಬತ್ತಿದ್ದ ಕೆರೆಗಳಿಗೆ ನೀರು ತುಂಬಿಸಲು ₹5.45 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಮೂರು ವರ್ಷಗಳಿಂದ ನೀರಿಲ್ಲದೆ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದವು, ಈ ಯೋಜನೆಯು ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.
10:16 AM (IST) Jun 10
ರಾಯಚೂರು ನಗರದಲ್ಲಿ ವ್ಯಕ್ತಿಯೊಬ್ಬ ಕಂಠಪೂರ್ತಿ ಕುಡಿದು ಯರ್ರಾಬಿರ್ರಿ ಕಾರು ಚಾಲಯಿಸಿ ಡಿವೈಡರ್‌ಗೆ ಡಿಕ್ಕಿ ಹೊಡೆದಿರುವ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪೊಲೀಸರ ವಿಚಾರಣೆ ವೇಳೆ ‘ಕಣ್ಣು ಮಂಜಾಗಿ’ ಹತ್ತಿಸಿದೆ ಸಾರ್ ಎಂದಿರುವ ಭೂಪನಿಗೆ ಏನು ಹೇಳಬೇಕು?
09:59 AM (IST) Jun 10
ತುಮಕೂರು ನಗರಕ್ಕೆ ಮೆಟ್ರೋ ರೈಲು ಬರುತ್ತೆ ಎಂಬ ಖುಷಿಯಲ್ಲಿದ್ದ ಈ ಭಾಗದ ಜನತೆಗೆ ಬೇಸರದ ಸಂಗತಿಯೊಂದು ಬಂದಿದೆ. ಈ ವಿಷಯ ತಿಳಿದ ಜನರು, ನಮಗ್ಯಾಕೆ ಬೇಕು ಮೆಟ್ರೋ ರೈಲು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
09:22 AM (IST) Jun 10
ಕೆಎಸ್‌ಆರ್‌ಟಿಸಿ ಬಸ್‌ನ ವೇಳಾಪಟ್ಟಿಯನ್ನು ಏಕಾಏಕಿ ಬದಲಿಸಿದ್ದಕ್ಕೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. 25 ವರ್ಷಗಳಿಂದ ವಿದ್ಯಾರ್ಥಿಗಳು ಹಾಗೂ ಕಾರ್ಮಿಕರಿಗೆ ಅನುಕೂಲಕರವಾಗಿದ್ದ ಹಳೆಯ ವೇಳಾಪಟ್ಟಿಯನ್ನೇ ಮುಂದುವರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
09:07 AM (IST) Jun 10
08:56 AM (IST) Jun 10
08:53 AM (IST) Jun 10
ಮಂತ್ರಾಲಯದ ರಾಘವೇಂದ್ರ ಸ್ವಾಮಿ ದರ್ಶನಕ್ಕೆ ತೆರಳಿದ್ದ ಹಿಂದೂಪರ ಹೋರಾಟಗಾರ ಪುನೀತ್ ಕೆರೆಹಳ್ಳಿಗೆ, ರಾಯಚೂರಿನ ಹಿಂದೂ ಮಹೋತ್ಸವಕ್ಕೆ ಆಗಮಿಸದಂತೆ ರಾಯಚೂರು ಪೊಲೀಸರು ನೋಟಿಸ್ ನೀಡಿದ್ದಾರೆ. ಇದು ಆಂಧ್ರಪ್ರದೇಶದ ವ್ಯಾಪ್ತಿಯಾಗಿದ್ದು, ಇಲ್ಲಿ ನೋಟಿಸ್ ನೀಡಿದ್ದಕ್ಕೆ ಕೆರೆಹಳ್ಳಿ ಪೊಲೀಸರ ನಡುವೆ ವಾಗ್ವಾದ.
08:41 AM (IST) Jun 10
08:08 AM (IST) Jun 10
07:40 AM (IST) Jun 10