LIVE NOW
Published : Jul 01, 2026, 06:39 AM ISTUpdated : Jul 01, 2026, 10:00 PM IST

Karnataka News Live: ಶಿವಣ್ಣ ಫ್ಯಾನ್ಸ್‌ಗೆ ಸಿಕ್ತು ಬಿಗ್ ಅಪ್‌ಡೇಟ್ - 'ಡ್ಯಾಡ್' ಸಿನಿಮಾದಿಂದ ಬಂತು ಭರ್ಜರಿ ಗುಡ್ ನ್ಯೂಸ್!

ಸಾರಾಂಶ

ಧಾರವಾಡ: ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಜಾಮೀನು ನೀಡಲು ಮೂರನೇ ಬಾರಿಗೆ ಇಲ್ಲಿಯ ಹೈಕೋರ್ಟ್ ಪೀಠವು ನಿರಾಕರಿಸಿದೆ. ಆರೋಪಿ ಫಯಾಜ್‌ ಪರವಾಗಿ ವಾದ ಮಂಡಿಸಿದ ನ್ಯಾಯವಾದಿ ಎಂ.ಹತ್ತರಕಿ, ಜಾಮೀನು ನೀಡುವಂತೆ ನ್ಯಾಯಪೀಠದ ಎದುರು ಮನವಿ ಮಾಡಿದರು.

ನೇಹಾ ಪರವಾಗಿ ವಾದಿಸಿದ ವಕೀಲ ರಾಘವೇಂದ್ರ ಮುತ್ತಗೀಕರ, ಆರೋಪಿ ಮಾಡಿರುವ ಕೊಲೆಯು ಗಂಭೀರ ಸ್ವರೂಪದ್ದಾಗಿದ್ದು, ಆರೋಪಿಗೆ ಶಿಕ್ಷೆ ಪ್ರಕಟವಾಗುವ ವರೆಗೂ ಜಾಮೀನು ನೀಡದಿರುವಂತೆ ಪ್ರತಿವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ಏಕಸದಸ್ಯ ಪೀಠದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರು ಜಾಮೀನು ಅರ್ಜಿಯನ್ನು ವಜಾಗೊಳಿಸಿದರು.

10:00 PM (IST) Jul 01

ಶಿವಣ್ಣ ಫ್ಯಾನ್ಸ್‌ಗೆ ಸಿಕ್ತು ಬಿಗ್ ಅಪ್‌ಡೇಟ್ - 'ಡ್ಯಾಡ್' ಸಿನಿಮಾದಿಂದ ಬಂತು ಭರ್ಜರಿ ಗುಡ್ ನ್ಯೂಸ್!

ಡಾ. ಶಿವರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ 'ಡ್ಯಾಡ್' ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಹಲವು ವರ್ಷಗಳ ಬಳಿಕ ವೈದ್ಯನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಶಿವಣ್ಣ ಚಿತ್ರದ ಬಗ್ಗೆ ನಿರ್ದೇಶಕ ಅನಿಲ್ ಕನ್ನೆಗಂಟಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

Read Full Story

08:57 PM (IST) Jul 01

Toxic Star Cast Fees - ಯಶ್‌ನಿಂದ ರುಕ್ಮಿಣಿ ವಸಂತ್‌ವರೆಗೆ, ಯಾರು ಎಷ್ಟು ಕೋಟಿ ಸಂಭಾವನೆ ಪಡೆದ್ರು?

'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದ ಹೊಸ ಪ್ರೋಮೋ ಬಿಡುಗಡೆಯಾದ ಬೆನ್ನಲ್ಲೇ ಯಶ್, ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್ ಸೇರಿದಂತೆ ತಾರಾಗಣದ ಸಂಭಾವನೆ ಕುರಿತು ವರದಿಗಳು ವೈರಲ್ ಆಗಿವೆ.

Read Full Story

08:39 PM (IST) Jul 01

ಮೊದಲ ಬಾರಿಗೆ ಕಿರುತೆರೆಗೆ ಬಿ.ಸಿ ಪಾಟೀಲ್ ಎಂಟ್ರಿ - ಇದು 'ಶ್ರೀ ರಾಘವೇಂದ್ರ ಮಹಾತ್ಮೆ'ಯ ಪವಾಡ!

ಜೀ ಕನ್ನಡದ 'ಶ್ರೀ ರಾಘವೇಂದ್ರ ಮಹಾತ್ಮೆ' ಧಾರಾವಾಹಿಯಲ್ಲಿ ರಾಘವೇಂದ್ರ ಸ್ವಾಮಿಗಳ ಮತ್ತೊಂದು ಪವಾಡ ಅನಾವರಣಗೊಳ್ಳಲಿದೆ. ಸತ್ತ ಮಗುವಿಗೆ ಪುನರ್ಜೀವ ನೀಡುವ ರೋಚಕ ಪ್ರಸಂಗದ ಜೊತೆಗೆ ಹಿರಿಯ ನಟ ಬಿ.ಸಿ ಪಾಟೀಲ್ ಮೊದಲ ಬಾರಿಗೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ.

Read Full Story

08:31 PM (IST) Jul 01

ಆಘಾತಕಾರಿ ಸುದ್ದಿ ಬಿಚ್ಟಿಟ್ಟ ಸ್ನೇಹಿತೆ; 'ಲೈಫ್‌ಲಾಂಗ್ ಅದನ್ನೆಲ್ಲಾ ಮಾಡೋ ಹಾಗಿಲ್ಲ ಸಮಂತಾ'..!

'ಮಾ ಇಂಟಿ ಬಂಗಾರಂ' ಚಿತ್ರದ ಶೂಟಿಂಗ್ ವೇಳೆ ಸಮಂತಾರ ವೃತ್ತಿಪರತೆ, ಬದ್ಧತೆ ಕಂಡು ಇಡೀ ಚಿತ್ರತಂಡವೇ ದಂಗಾಗಿತ್ತು. ಸಾಮಾನ್ಯವಾಗಿ ಸಾಹಸ ದೃಶ್ಯಗಳಿಗೆ ಸ್ಟಂಟ್ ಡ್ಯೂಪ್‌ಗಳನ್ನು ಬಳಸಲಾಗುತ್ತದೆ. ಆದರೆ, ಕ್ಲೈಮ್ಯಾಕ್ಸ್‌ನ ಕಠಿಣ ಆಕ್ಷನ್ ದೃಶ್ಯಗಳಲ್ಲಿ ಸಮಂತಾ ‘ನನಗೆ ಡ್ಯೂಪ್ ಬೇಡ, ನಾನೇ ಸ್ವತಃ ಮಾಡುತ್ತೇನೆ’ ಎಂದು ಪಟ್ಟು ಹಿಡಿದು ಆಕ್ಷನ್ ಸನ್ನಿವೇಶಗಳನ್ನು ಮಾಡಿದ್ದಾರಂತೆ

Read Full Story

07:40 PM (IST) Jul 01

’BOSS’ ಚಿತ್ರ ನಮ್ಮ ಮೇಲೆ ಪ್ರಭಾವ ಬೀರುತ್ತೆ ಅಂದುಕೊಂಡ್ರಾ? ದರ್ಶನ್‌ ವಕೀಲರನ್ನು ಪ್ರಶ್ನಿಸಿದ ಹೈಕೋರ್ಟ್

ನಟ ದರ್ಶನ್ ಪ್ರಕರಣವನ್ನು ಹೋಲುವ 'ಬಾಸ್' ಚಿತ್ರದ ಬಿಡುಗಡೆಗೆ ತಡೆ ಕೋರಿ ವಿಜಯಲಕ್ಷ್ಮಿ ದರ್ಶನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಚಿತ್ರವು ನ್ಯಾಯಯುತ ವಿಚಾರಣೆಯ ಮೇಲೆ ಪರಿಣಾಮ ಬೀರಬಹುದು ಎಂಬ ವಕೀಲರ ವಾದಕ್ಕೆ, ಸಿನಿಮಾ ನ್ಯಾಯಾಧೀಶರ ಮೇಲೆ ಪ್ರಭಾವ ಬೀರಲು ಸಾಧ್ಯವೇ ಎಂದು ನ್ಯಾಯಾಲಯ ಪ್ರಶ್ನಿಸಿದೆ.
Read Full Story

07:18 PM (IST) Jul 01

ಯಶ್ 'ಟಾಕ್ಸಿಕ್'ನಲ್ಲಿ ಬೋಲ್ಡ್ ದೃಶ್ಯಗಳು - ಹೊಸ ಟೀಸರ್ ನೋಡಿದ ಅಭಿಮಾನಿಗಳ ಆತಂಕವೇನು?

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಹೊಸ ಟೀಸರ್ ಬಿಡುಗಡೆಯಾಗಿ ಭಾರೀ ಚರ್ಚೆಗೆ ಕಾರಣವಾಗಿದೆ. ಬೋಲ್ಡ್ ದೃಶ್ಯಗಳು ಮತ್ತು ಆಕ್ಷನ್ ಸನ್ನಿವೇಶಗಳ ನಡುವೆಯೇ CBFC ಪ್ರಮಾಣಪತ್ರ ಕುರಿತು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ.

Read Full Story

06:30 PM (IST) Jul 01

ಕನ್ನಡ ಚಿತ್ರರಂಗದ ಸಂಕಷ್ಟಕ್ಕೆ ಸರ್ಕಾರದ ಪರಿಹಾರ ಸಿಗುತ್ತಾ? ಎಲ್ಲರ ಕಣ್ಣು ಸಿಎಂ ಡಿಕೆಶಿ ಕಡೆ!

ಕನ್ನಡ ಚಿತ್ರರಂಗ ಉಳಿವಿಗಾಗಿ ಹೊಸ ಚಲನಚಿತ್ರ ನೀತಿ, ಸರ್ಕಾರಿ OTT ವೇದಿಕೆ, ಚಿತ್ರಮಂದಿರಗಳ ಅಭಿವೃದ್ಧಿ, ಆರ್ಕೈವ್, ಚಿತ್ರನಗರಿಗೆ 500 ಕೋಟಿ ಅನುದಾನ ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಲ್ಲಿಸಿದೆ.

Read Full Story

05:40 PM (IST) Jul 01

ಬಡ್ತಿಯ ಸಿಹಿ ಸವಿಯುವ ಮುನ್ನವೇ ಪೊಲೀಸ್ ಅಧಿಕಾರಿಗೆ ಎದುರಾಯ್ತು ಕಂಟಕ! ಮಾರ್ಗ ಮಧ್ಯಯೇ ಕೊನೆಯುಸಿರೆಳೆದ ಎಎಸ್‌ಐ

ಬಾಗಲಕೋಟೆ ಜಿಲ್ಲೆಯ ಪೊಲೀಸ್ ಅಧಿಕಾರಿಯೊಬ್ಬರು ಬಡ್ತಿ ಪಡೆದ ಕೆಲವೇ ಗಂಟೆಗಳಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಹಾಯಕ ಪೊಲೀಸ್ ಉಪನಿರೀಕ್ಷಕರಾಗಿ ಕರ್ತವ್ಯಕ್ಕೆ ಹಾಜರಾಗಲು ತೆರಳುತ್ತಿದ್ದಾಗ ಮಾರ್ಗಮಧ್ಯೆಯೇ ಈ ದುರಂತ ಸಂಭವಿಸಿದೆ.

Read Full Story

05:40 PM (IST) Jul 01

'ಕ್ಷಮೆ' ಕಾದಂಬರಿ ಹೇಗೆ 'ಅಮೆರಿಕಾ ಅಮೆರಿಕಾ 2' ಆಯಿತು? ಮತ್ತೆ ಅದೇ ಮ್ಯಾಜಿಕ್ ಮಾಡ್ತಾರಾ ನಾಗತಿಹಳ್ಳಿ ಚಂದ್ರಶೇಖರ್!

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಅಮೆರಿಕಾ ಅಮೆರಿಕಾ 2' ಚಿತ್ರದ ಟೈಟಲ್ ಅಧಿಕೃತವಾಗಿ ಅನಾವರಣಗೊಂಡಿದೆ. ನಿರೂಪ್ ಭಂಡಾರಿ, ಪೃಥ್ವಿ ಅಂಬಾರ್ ಮತ್ತು ಶಾನ್ವಿ ನಟಿಸಿರುವ ಈ ಸಿನಿಮಾ 'ಕ್ಷಮೆ' ಕಾದಂಬರಿ ಆಧಾರಿತವಾಗಿದೆ.

Read Full Story

05:18 PM (IST) Jul 01

ಅರೆರೆ.. 'ಗಿಚ್ಚಿ ಗಿಲಿಗಿಲಿ' ಪ್ರಶಾಂತ್‌ ಮದುವೆ ಕಾರ್ಡ್ ನೋಡಿ ಅಚ್ಚರಿಗೊಂಡ ಮೇಘನಾ ರಾಜ್‌!

'Gichchi Giligili' ಖ್ಯಾತಿಯ ಪ್ರಶಾಂತ್ ಗೌಡ ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯನ್ನು ನಟಿ ಮೇಘನಾ ರಾಜ್‌ಗೆ ನೀಡಿ ಆಹ್ವಾನಿಸಿದರು. ವಿಶಿಷ್ಟ ವಿನ್ಯಾಸದ ವೆಡ್ಡಿಂಗ್ ಕಾರ್ಡ್ ನೋಡಿ ಮೇಘನಾ ರಾಜ್ ಅಚ್ಚರಿಗೊಂಡು ಶುಭ ಹಾರೈಸಿದರು.

Read Full Story

04:56 PM (IST) Jul 01

Chitradurga - ಕುಸಿದುಬಿದ್ದು ಹಠಾತ್‌ ಸಾವನ್ನಪ್ಪಿದ ಚಿತ್ರದುರ್ಗದ ಡಿಆರ್‌ಎಫ್ಒ ವೆಂಕಟೇಶ್

ಹಿರಿಯೂರು ತಾಲೂಕಿನ ಡಿಆರ್‌ಎಫ್‌ಒ ಆಗಿದ್ದ ವೆಂಕಟೇಶ್ (40) ಚಿತ್ರದುರ್ಗದ ತಮ್ಮ ಮನೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲವಾದ್ದರಿಂದ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Read Full Story

04:39 PM (IST) Jul 01

ನಟ ಅಜೇಯ್ ರಾವ್‌ಗೆ 'ಪಾರ್ಟ್‌ನರ್' ಸಿಕ್ಕರು - ಏನಿದು ಲವ್, ಬ್ರೇಕಪ್, ಲಿವ್-ಇನ್ ನಂತರದ ನಿಜವಾದ ಸಂಬಂಧ!

Partner Kannada Movie: 'ಮಳೆ', 'ಧೈರ್ಯಂ', 'ದಿಲ್ ಪಸಂದ್' ಬಳಿಕ ನಿರ್ದೇಶಕ ಶಿವತೇಜಸ್ ನಿರ್ದೇಶಿಸಿರುವ 'ಪಾರ್ಟ್‌ನರ್' ಚಿತ್ರದಲ್ಲಿ ಅಜೇಯ್ ರಾವ್, ಬೃಂದಾ ಆಚಾರ್ಯ ಹಾಗೂ ರಂಗಾಯಣ ರಘು ಅಭಿನಯಿಸಿದ್ದಾರೆ. 

Read Full Story

04:38 PM (IST) Jul 01

ಡೇಟ್‌ಗೆ ಹೋದ ಬೆಂಗಳೂರು ಯುವತಿಗೆ ಈಗ ಸಮಸ್ಯೆ, 4 ವರ್ಷ ಬಳಿಕ ಆನ್‌ಲೈನ್‌ನಲ್ಲಿ ಇಂಟಿಮೇಟ್ ವಿಡಿಯೋ ಪತ್ತೆ

ಆ್ಯಪ್ ಮೂಲಕ ಪರಿಚಯವಾದ ವ್ಯಕ್ತಿ ಜೊತೆ ಬೆಂಗಳೂರು ಯುವತಿ ಡೇಟಿಂಗ್ ಮಾಡಿದ್ದಾಳೆ. ಇವರಿಬ್ಬರ ಡೇಟಿಂಗ್ ಕೆಲವೇ ದಿನ ಮಾತ್ರ ಇತ್ತು. ಅದರಲ್ಲೇ ಉತ್ತುಂಗಕ್ಕೆ ತಲುಪಿತ್ತು. ಬಳಿಕ ಎಲ್ಲಾ ರಿಲೇಶನ್‌ಶಿಪ್, ಕಾಂಟಾಕ್ಟ್ ಕಟ್ ಆಗಿತ್ತು. ಆದರೆ ನಾಲ್ಕು ವರ್ಷ ಬಳಿಕ ಆತನ ಜೊತೆಗಿನ ಇಂಟಿಮೇಟ್ ವಿಡಿಯೋ ಆನ್‌ಲೈನ್‌ನಲ್ಲಿ ಪತ್ತೆಯಾಗಿದೆ.

Read Full Story

04:35 PM (IST) Jul 01

Yash Toxic - ಐವರು ನಾಯಕಿಯರಿಗೆ ವಾರ್ನಿಂಗ್ ಕೊಟ್ರಾ 'ರಾಯ'..? ಒಟ್ಟಿಗೇ ಬಂದ್ರೂ 'OK' ಅಂತ ಗಟ್ಸ್ ತೋರಿಸಿದ ಯಶ್!

‘ಟಾಕ್ಸಿಕ್’ ಚಿತ್ರವು ಕೇವಲ ಗನ್ ಮತ್ತು ಗ್ಯಾಂಗ್‌ಸ್ಟರ್ ಕಥೆಯಲ್ಲ, ಬದಲಿಗೆ ಮಹಿಳಾ ಶಕ್ತಿಯನ್ನು ಹೊಸ ಆಯಾಮದಲ್ಲಿ ತೋರಿಸುವ ಸಿನಿಮಾ ಆಗಲಿದೆಯೇ ಎಂಬ ಸಂಶಯ ಈ ಟೀಸರ್‌ನಿಂದ ಸೃಷ್ಟಿಯಾಗಿದೆ. ಇಂಗ್ಲಿಷ್ ಮತ್ತು ಕನ್ನಡದಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ ಈ ಚಿತ್ರವು 26 ಆಗಸ್ಟ್ 2026 ರಂದು ತೆರೆಗೆ ಬರಲಿದೆ.

Read Full Story

04:16 PM (IST) Jul 01

'ಅಪರ್ಣಾಳನ್ನು ಹೊತ್ತೊಯ್ಯುವ ತೇರು ನಾನು' - ಭಾವುಕರಾದ ನಾಗರಾಜ ವಸ್ತಾರೆ

ಅಪರ್ಣಾ ವಸ್ತಾರೆ ಅವರನ್ನು ನೆನೆದು ಸಾಹಿತಿ ನಾಗರಾಜ ವಸ್ತಾರೆ ಭಾವುಕರಾದರು. ಗ್ರಾಮಾಯಣ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ 'ಅವಳು ನನ್ನೊಳಗೇ ಇದ್ದಾಳೆ' ಎಂದ ಅವರ ಮಾತು ಎಲ್ಲರ ಮನಮುಟ್ಟಿತು.

Read Full Story

04:12 PM (IST) Jul 01

ಸೇನೆಯ ಬತ್ತಳಿಕೆಗೆ ಸೇರಲಿದೆ ಎಂದೂ ಖಾಲಿಯಾಗದ ಅನಂತ ಶಸ್ತ್ರ QRSAM Air Defence, ಚೀನಾ-ಪಾಕ್‌ಗೆ ನಡುಕ!

ಭಾರತವು ಸಂಪೂರ್ಣ ಸ್ವದೇಶಿ ತಂತ್ರಜ್ಞಾನದ 'ಅನಂತ ಶಸ್ತ್ರ' (QRSAM) ಕ್ಷಿಪಣಿ ವ್ಯವಸ್ಥೆಯನ್ನು ಸೇನೆಗೆ ಸೇರ್ಪಡೆಗೊಳಿಸಲು ಸಜ್ಜಾಗಿದೆ. DRDO ಅಭಿವೃದ್ಧಿಪಡಿಸಿದ ಈ ವ್ಯವಸ್ಥೆಯು, ಹಳೆಯ 'OSA-AK' ಬದಲಿಗೆ ಶತ್ರುಗಳ ಡ್ರೋನ್, ಹೆಲಿಕಾಪ್ಟರ್‌ಗಳನ್ನು ಹೊಡೆದುರುಳಿಸಲಿದೆ.

Read Full Story

03:41 PM (IST) Jul 01

ರಾಕಿಂಗ್ ಸ್ಟಾರ್‌ ಗೆ 8ರ ನಂಟು? ಯಶ್ 'ಟಾಕ್ಸಿಕ್' ನಂಬರ್ 8ರ ಗಂಟು ಬಿಡಿಸಿದ ಫ್ಯಾನ್ಸ್ಏ! ನಿದರ ಗುಟ್ಟು?

ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದ ಟೀಸರ್ ಬಿಡುಗಡೆಯ ಸಮಯವು ಅವರ ಅದೃಷ್ಟದ ಸಂಖ್ಯೆ 8ರೊಂದಿಗೆ ಸಂಬಂಧ ಹೊಂದಿದೆ. ಸಂಖ್ಯಾಶಾಸ್ತ್ರದ ಪ್ರಕಾರ, ಶನಿ ಮತ್ತು ಶುಕ್ರ ಗ್ರಹಗಳನ್ನು ಪ್ರತಿನಿಧಿಸುವ 8 ಮತ್ತು 6 ಸಂಖ್ಯೆಗಳು ಯಶ್ ಅವರ 'ಕೆಜಿಎಫ್' ನಿಂದ 'ಟಾಕ್ಸಿಕ್' ವರೆಗಿನ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿವೆ. ಈ ಲೇಖನವು ಯಶ್ ಅವರ ವೃತ್ತಿಜೀವನದಲ್ಲಿ ಈ ಸಂಖ್ಯೆಗಳ ಮಹತ್ವವನ್ನು ವಿವರಿಸುತ್ತದೆ.
Read Full Story

03:22 PM (IST) Jul 01

Cricket - ವೈಭವ್‌ಗೆ ಬೆದರಿತಾ ಇಂಗ್ಲೆಂಡ್? ವೈಭವ್ ಪದಾರ್ಪಣೆ ಬಗ್ಗೆ ಡ್ರೆಸ್ಸಿಂಗ್ ರೂಮ್‌ನಿಂದ ಹೊರಬಂತು ಬಿಗ್‌ ನ್ಯೂಸ್!

ಐಪಿಎಲ್‌ನಲ್ಲಿ ಮಿಂಚಿದ 15ರ ಯುವ ಆಟಗಾರ ವೈಭವ್ ಸೂರ್ಯವಂಶಿ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ. ಅವರ ಸಂಭಾವ್ಯ ಪಾದಾರ್ಪಣೆಯು ಇಂಗ್ಲೆಂಡ್ ತಂಡಕ್ಕೆ ಚಿಂತೆಗೀಡುಮಾಡಿದೆ. ಆದರೆ ಡ್ರೆಸ್ಸಿಂಗ್‌ ರೂಂನಲ್ಲಿ ನಡೆದಿದ್ದೇನು ಗೊತ್ತಾ?

Read Full Story

02:24 PM (IST) Jul 01

Yash Toxic - ಯಾವುದರಲ್ಲೂ ರುಕ್ಮಿಣಿಗೆ 'ಹೀರೋ' ಸಿಗಲ್ಲ.. ಸೋ, ರೊಚ್ಚಿಗೆದ್ದು ಗನ್ ತಗೊಂಡ್ರಾ 'ಸಪ್ತ ಸಾಗರ'ದ ಚಲುವೆ?

ನಟಿ ರುಕ್ಮಿಣಿ ವಸಂತ್ ಅವರಿಗೆ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾದಲ್ಲಿ ತೀರಾ ವಿಭಿನ್ನ ಎಂಬಂತೆ ರೆಬೆಲ್ ಲೇಡಿ ರೋಲ್ ಸಿಕ್ಕಿದೆ. ಇಡೀ ಸಿನಿಮಾದಲ್ಲೇ ಅವರಿಗೆ ಅಂತಹ ಪಾತ್ರವೋ ಅಥವಾ ಅದು ಒಂದು ಸೀನ್ ಅಷ್ಟೇನಾ ಎಂಬುದು ಸಿನಿಮಾ ತೆರೆಗೆ ಬಂದ ಬಳಿಕವಷ್ಟೇ ತಿಳಿಯಲಿದೆ!

Read Full Story

01:20 PM (IST) Jul 01

ಬಿಡದಿ ಟೌನ್‌ಶಿಪ್ ಯೋಜನೆಗೆ ತಡೆ ಕೋರಿ ಹೈಕೋರ್ಟ್‌ಗೆ ಪಿಐಎಲ್, ಪರಿಸರ ಹಾನಿಯ ಗಂಭೀರ ಆರೋಪ

ಬೆಂಗಳೂರಿನ ಹೊರವಲಯದಲ್ಲಿ ಉದ್ದೇಶಿತ 'ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್' (ಬಿಡದಿ ಟೌನ್‌ಶಿಪ್) ಯೋಜನೆಗಾಗಿ 516 ಎಕರೆಗೂ ಅಧಿಕ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳುವುದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಈ ಅರ್ಜಿಯು ಭೂಸ್ವಾಧೀನ ಕಾಯ್ದೆಯ ಉಲ್ಲಂಘನೆ, ಪ್ರಾದೇಶಿಕ ಅಸಮತೋಲನ ಮತ್ತು ಪರಿಸರ ನಾಶದಂತಹ ಗಂಭೀರ ಆರೋಪಗಳನ್ನು ಮಾಡಿದೆ.
Read Full Story

01:10 PM (IST) Jul 01

Shivamogga - ಮೊಟ್ಟೆ ಸಾಗಿಸುತ್ತಿದ್ದ ವಾಹನ ಪಲ್ಟಿ - ಸಾವಿರಾರು ಮೊಟ್ಟೆಗಳು ರಸ್ತೆ ಪಾಲು

ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯಲ್ಲಿ ಮಧ್ಯರಾತ್ರಿ ಮೊಟ್ಟೆ ಸಾಗಿಸುತ್ತಿದ್ದ ಸರಕು ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ಅಪಘಾತದಲ್ಲಿ ಅಪಾರ ಪ್ರಮಾಣದ ಮೊಟ್ಟೆಗಳು ನಾಶವಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
Read Full Story

01:09 PM (IST) Jul 01

Yash Toxic Ladies & Ladies - ಪಂಚ ಚೆಲುವೆಯರ ಜೊತೆ ರಾಯನ ಲವ್ & ವಾರ್; ಯಶ್ ಸಾಮ್ರಾಜ್ಯದಲ್ಲಿ ಲೇಡೀಸ್ ಗ್ಯಾಂಗ್!

ಟೀಸರ್ ನೋಡ್ತಾ ಇದ್ರೆ ಯಶ್ ವರ್ಸಸ್ ನಾಯಕಿಯರು ಎನ್ನುವಂತಹ ಕಥಾಹಂದರ ಏನಾದ್ರೂ ಇದೆಯಾ ಅನ್ನೋ ಪ್ರಶ್ನೆ ಮೂಡುವಂತಿದೆ. ಟಾಕ್ಸಿಕ್‌ನ ಈ ಲೇಡೀಸ್ ಅಂಡ್ ಲೇಡೀಸ್ ಟೀಸರ್ ಅಕ್ಷರಶಃ ಕಿಚ್ಚು ಹಚ್ಚಿದೆ..! 5 ನಾಯಕಿಯರನ್ನ ಪರಿಚಯಿಸೋ ಈ ಟೀಸರ್ ಟಾಕ್ಸಿಕ್ ಬಗ್ಗೆ ಸಿನಿಮಾ ಇದ್ದ ನಿರೀಕ್ಷೆಯನ್ನ 5 ಪಟ್ಟು ಹೆಚ್ಚು ಮಾಡಿದೆ..

Read Full Story

12:53 PM (IST) Jul 01

Tumkuru - ಶಿರಾ ಬಾಂಬ್ ಸ್ಫೋಟ - ಪಾಗಲ್ ಪ್ರೇಮಿಯ ಹಿಂದಿನ ಭಯಾನಕ ರಹಸ್ಯ ಬಯಲು!

ತುಮಕೂರು ಜಿಲ್ಲೆಯ ಶಿರಾ ಬಳಿ ಬಾಂಬ್ ಸಿಡಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ, ಮಹತ್ವದ ಮಾಹಿತಿಯೊಂದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಎಸ್ಪಿ ಸುದ್ದಿಗೋಷ್ಠಿ ನಡೆಸಿ  ಮಹತ್ವದ ಮಾಹಿತಿ ಬಹಿರಂಗಗೊಳಿಸಿದ್ದಾರೆ. 

Read Full Story

12:43 PM (IST) Jul 01

ಟ್ರಾಫಿಕ್, ನೀರಿನ ಸಮಸ್ಯೆ, ದುಬಾರಿ ಬಾಡಿಗೆ... ಆದರೂ ಬೆಂಗಳೂರೇ ಬೆಸ್ಟ್ ಎಂದಿದ್ಯಾಕೆ? ಟೆಕ್ಕಿಯ ಮಾತು ವೈರಲ್

ಬಾಡಿಗೆ ಪಡೆದವೆಂದರೂ ನೀರಿನ ಸಮಸ್ಯೆ, ಈ ರೀತಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಜೀವನ ನಡೆಸುವುದು ದುಸ್ತರವಾಗಿದೆ. ನಗರದಲ್ಲಿ ಇಷ್ಟೆಲ್ಲ ಸವಾಲುಗಳ ನಡುವೆ ಲಕ್ಷಾಂತರ ಮಂದಿ ಬೆಂಗಳೂರು ಏಕೆ ಬಿಡಲು ತಯಾರಿಲ್ಲ? ಎಂಬ ಪ್ರಶ್ನೆಗೆ ನಗರದ ಟೆಕ್ಕಿಯೊಬ್ಬರು ನೀಡಿದ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Read Full Story

12:11 PM (IST) Jul 01

RAKKY- Ashwini Puneeth Rajkumar - ಕಿಡಿ ಹಚ್ಚಿದ ರಕ್ಕಿ.. 'ಹಚ್ಚಿಟ್ಟಿರೋ ಪಟಾಕಿ'ನ ಹೊರಜಗತ್ತಿಗೆ ಬಿಟ್ಟ ಅಶ್ವಿನಿ ಪುನೀತ್‌ ರಾಜ್‌ಕುಮಾರ್!

ಗ್ಯಾಂಗ್‌ಸ್ಟರ್ ಕ್ರೈಮ್ ಕಥಾಹಂದರ, ವಾಣಿಜ್ಯ ಅಂಶಗಳು, ಭಾವನಾತ್ಮಕ ಕ್ಷಣಗಳು ಮತ್ತು ಉತ್ತಮ ತಾಂತ್ರಿಕ ನಿರ್ವಹಣೆಯೊಂದಿಗೆ ರಕ್ಕಿ ಕನ್ನಡ ಪ್ರೇಕ್ಷಕರಿಗೆ ಒಳ್ಳೆಯ ಸಿನಿ ಅನುಭವ ನೀಡುವ ನಿರೀಕ್ಷೆ ಮೂಡಿಸಿದೆ. ಒಟ್ಟಾರೆ 'RAKKY' ಕಿಡಿ ಹಚ್ಚಿದೆ..

Read Full Story

11:59 AM (IST) Jul 01

ರೇಣುಕಾಸ್ವಾಮಿ ಕೇಸ್‌ ನಲ್ಲಿ ಟ್ವಿಸ್ಟ್, ಕಟಕಟೆಯಲ್ಲಿ ನಿಂತು ಸತ್ಯ ಒಪ್ಪಿಕೊಂಡ ಪ್ರಮುಖ ಸಾಕ್ಷಿ!

ದರ್ಶನ್ ಪ್ರಮುಖ ಆರೋಪಿಯಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ, ಪ್ರಮುಖ ಸಾಕ್ಷಿಯೊಬ್ಬರು ತಮಗೆ ಸಾಕ್ಷ್ಯ ತಿರುಚಲು ಅಪರಿಚಿತರಿಂದ ಒತ್ತಡ ಹೇರಲಾಗುತ್ತಿದೆ ಎಂದು ನ್ಯಾಯಾಲಯದಲ್ಲಿ ಬಹಿರಂಗಪಡಿಸಿದ್ದಾರೆ. ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ಸಾಕ್ಷಿಗೆ ಸೂಕ್ತ ರಕ್ಷಣೆ ಒದಗಿಸಲು ಆದೇಶಿಸಿದ್ದು, ಸಾಕ್ಷ್ಯ ತಿರುಚಲು ಯತ್ನಿಸುವವರಿಗೆ ಕಠಿಣ ಎಚ್ಚರಿಕೆ ನೀಡಿದೆ.
Read Full Story

11:15 AM (IST) Jul 01

Dharwad - ದಪ್ಪಗಿದ್ದೀಯಾ..... ನಿನಗೆ ಮಗು ಆಗಲ್ಲವೆಂದು ಹೀಯಾಳಿಸಿ ಹೆಂಡತಿಯ ಕತ್ತು ಹಿಸುಕಿ ಕೊಂದ ಗಂಡ!

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ, ವರದಕ್ಷಿಣೆ ಹಾಗೂ ದಪ್ಪಗಿದ್ದಾಳೆಂಬ ಕ್ಷುಲ್ಲಕ ಕಾರಣಕ್ಕೆ ಪತಿಯೇ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಮದುವೆಯಾದ ಒಂದು ವರ್ಷದಲ್ಲೇ ನಡೆದ ಈ ಘೋರ ಕೃತ್ಯಕ್ಕೆ ಸಂಬಂಧಿಸಿದಂತೆ, ಪತಿ ಬಸವರಾಜ್ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
Read Full Story

09:56 AM (IST) Jul 01

ಬೆಂಗಳೂರು ಪ್ರಯಾಣಿಕರೇ ಇಂದಿನಿಂದ ನಗರದ 2 ಪ್ರಮುಖ ರಸ್ತೆಗಳಲ್ಲಿ ಟೋಲ್ ದರ ಹೆಚ್ಚಳ, ಬೈಕ್ ಸವಾರರೂ ಟೋಲ್ ಕಟ್ಟಲೇಬೇಕು!

ಬೆಂಗಳೂರಿನ ಪ್ರಮುಖ ಕಾರಿಡಾರ್‌ಗಳಾದ ನೈಸ್ ರಸ್ತೆ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇಯಲ್ಲಿ ಜುಲೈ 1, 2026 ರಿಂದ ಟೋಲ್ ಶುಲ್ಕವನ್ನು ಹೆಚ್ಚಿಸಲಾಗಿದೆ. ಈ ದರ ಏರಿಕೆಯು ಕಾರು, ದ್ವಿಚಕ್ರ ವಾಹನ ಸವಾರರು ಸೇರಿದಂತೆ ನಿತ್ಯ ಪ್ರಯಾಣಿಕರ ಮೇಲೆ ಪರಿಣಾಮ ಬೀರಲಿದ್ದು, ಬಿಎಂಟಿಸಿ ಬಸ್ ಪ್ರಯಾಣ ದರವೂ ಹೆಚ್ಚಾಗುವ ಸಾಧ್ಯತೆಯಿದೆ.
Read Full Story

09:13 AM (IST) Jul 01

ಮಂಗಳೂರು - ಭಾರೀ ಮಳೆಗೆ ನಾಗುರಿಯಲ್ಲಿ ನಸುಕಿನ ವೇಳೆ ಗುಡ್ಡ ಕುಸಿದು ಬಿಹಾರಿ ಕುಟುಂಬ ಸೇರಿ ಮೂರು ಸಾವು!

ಮಂಗಳೂರಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ನಾಗುರಿ ಬಳಿ ತಡೆಗೋಡೆ ಕುಸಿದು ಭೀಕರ ದುರಂತ ಸಂಭವಿಸಿದೆ. ಈ ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಮೂವರು ಮೃತಪಟ್ಟಿದ್ದು, ಅವಶೇಷಗಳಡಿ ಸಿಲುಕಿದ್ದ ಮೂವರನ್ನು ರಕ್ಷಿಸಲಾಗಿದೆ. ಬಿಹಾರ ಮೂಲದ ಕುಟುಂಬ ಹಾಗೂ ಸ್ಥಳೀಯ ಕುಟುಂಬವೊಂದು ಈ ದುರಂತಕ್ಕೆ ತುತ್ತಾಗಿದೆ.
Read Full Story

09:09 AM (IST) Jul 01

ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಮೂರು ಸರ್ಕಾರಿ ಕಾಲೇಜುಗಳಲ್ಲಿ ಬಿಎ ವಿಭಾಗ ಬಂದ್‌

ವಿದ್ಯಾರ್ಥಿಗಳ ಕೊರತೆಯಿಂದಾಗಿ, ಮಂಗಳೂರು ವಿಶ್ವವಿದ್ಯಾಲಯವು ಮೂರು ಸರ್ಕಾರಿ ಕಾಲೇಜುಗಳಲ್ಲಿ 2026-27ನೇ ಸಾಲಿನಿಂದ ಬಿಎ ಕೋರ್ಸ್‌ಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ವಾಣಿಜ್ಯ ಮತ್ತು ತಂತ್ರಜ್ಞಾನ ಆಧಾರಿತ ಕೋರ್ಸ್‌ಗಳತ್ತ ವಿದ್ಯಾರ್ಥಿಗಳ ಒಲವು ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಹೊಸ ಉದ್ಯೋಗ ಆಧಾರಿತ ಕೋರ್ಸ್‌ಗಳನ್ನು ಪರಿಚಯಿಸಲಾಗುತ್ತಿದೆ.
Read Full Story

08:49 AM (IST) Jul 01

Online FIR - ಪೊಲೀಸ್ ಸೇವೆ ಮತ್ತಷ್ಟು ಡಿಜಿಟಲ್! ನೀವಿರುವಲ್ಲಿಂದಲೇ FIR ಮಾಡಿ, ಗೃಹಸಚಿವ ಪ್ರಿಯಾಂಕ್ ಖರ್ಗೆ ಮಹತ್ವದ ಸೂಚನೆ

ದೂರು ಸ್ವೀಕಾರಕ್ಕೆ ಪೊಲೀಸರು ಹಿಂದೇಟು ಹಾಕುತ್ತಿರುವ ಆರೋಪ ಕೇಳಿಬಂದ ಬೆನ್ನಲ್ಲೇ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಜನಸ್ನೇಹಿ ವ್ಯವಸ್ಥೆ ಜಾರಿಗೆ ದಿಟ್ಟ ಕ್ರಮ. ಇನ್ನು ದೂರು ಕೊಡಲು ಪೊಲೀಸ್ ಠಾಣೆಗೆ ಹೋಗಬೇಕಿಲ್ಲ, ನೀವಿರುವಲ್ಲಿಂದಲೇ ಆನ್‌ಲೈನ್ ಮೂಲಕ ಪೊಲೀಸರಿಗೆ ದೂರು ನೀಡಿ ಸ್ವೀಕೃತಿ ಪಡೆಯಬಹುದಾಗಿದೆ. 

Read Full Story

08:47 AM (IST) Jul 01

ಹುಣಸೂರು ಶಾಸಕ ಜಿ.ಡಿ. ಹರೀಶ್‌ ಗೌಡರ ಪತ್ನಿಗೆ ಅಶ್ಲೀಲ ಕಮೆಂಟ್‌; ಮೈಸೂರಿನಲ್ಲಿ ದೂರು ದಾಖಲು

ಹುಣಸೂರು ಶಾಸಕ ಜಿ.ಡಿ. ಹರೀಶ್‌ ಗೌಡ ಅವರ ಪತ್ನಿ ವರ್ಷ ಹರೀಶ್‌ ಗೌಡ ಅವರು, ತಮ್ಮ ಇನ್ಸ್ಟಾಗ್ರಾಂ ಪೋಸ್ಟ್‌ಗೆ ಅಶ್ಲೀಲ ಕಮೆಂಟ್‌ ಹಾಕಿದ ಅನಾಮಿಕ ಖಾತೆಯ ವಿರುದ್ಧ ಮೈಸೂರಿನ ಸೆನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

Read Full Story

08:35 AM (IST) Jul 01

ತುಮಕೂರು-ರಾಯದುರ್ಗ-ಪಾವಗಡ ರೈಲು ಮಾರ್ಗಕ್ಕೆ ಮರುಜೀವ; ಯಾವಾಗ ಶುರುವಾಗಲಿದೆ ಸಂಚಾರ?

ತುಮಕೂರು-ರಾಯದುರ್ಗ ಹೊಸ ರೈಲು ಮಾರ್ಗದ ನೆನೆಗುದಿಗೆ ಬಿದ್ದಿದ್ದ ಕಾಮಗಾರಿಗೆ ಮರುಚಾಲನೆ ಸಿಕ್ಕಿದೆ. ಕೇಂದ್ರ ಸಚಿವ ವಿ.ಸೋಮಣ್ಣ 2027ರೊಳಗೆ ಪೂರ್ಣಗೊಳಿಸುವ ಭರವಸೆ ನೀಡಿದ್ದರೆ, ಡಿಸಿಎಂ ಡಾ.ಜಿ.ಪರಮೇಶ್ವರ್ ಒಂದು ವರ್ಷದೊಳಗೆ ತುಮಕೂರು-ಪಾವಗಡ ಮಾರ್ಗ ಪೂರ್ಣಗೊಳಿಸಲು ಸೂಚಿಸಿದ್ದಾರೆ. 

Read Full Story

08:11 AM (IST) Jul 01

Kadur - ಶತಮಾನದ ಬಳಿಕ ಪೊಲೀಸರ ಬಿಗಿ ಭದ್ರತೆಯಲ್ಲಿ ಹನುಮ ದೇಗುಲ ಪ್ರವೇಶಿಸಿದ ದಲಿತರು

ನಿಡಘಟ್ಟದ ಶ್ರೀ ಆಂಜನೇಯಸ್ವಾಮಿ ದೇವಾಲಯಕ್ಕೆ ಶತಮಾನದ ನಂತರ ದಲಿತರು ಪ್ರವೇಶಿಸುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ತಾಲೂಕು ಆಡಳಿತ ಮತ್ತು ಪೊಲೀಸ್ ಬಂದೋಬಸ್ತ್‌ನಲ್ಲಿ, ಮೇಲ್ವರ್ಗದವರ ಸಹಕಾರದೊಂದಿಗೆ ಈ ದೇವಾಲಯ ಪ್ರವೇಶವು ಶಾಂತಿಯುತವಾಗಿ ನಡೆದು, ದಲಿತ ಸಮುದಾಯದ ಶತಮಾನದ ಕನಸು ನನಸಾಗಿದೆ.

Read Full Story

08:08 AM (IST) Jul 01

2500 Govt Jobs - ಸರ್ಕಾರಿ ನೌಕರಿ ಕನಸು ಕಂಡವರಿಗೆ ಬಂಪರ್ ಸುದ್ದಿ - ಬರೋಬ್ಬರಿ 2500 ಹುದ್ದೆಗಳಿಗೆ ನೇಮಕಾತಿ ಬಿಗ್ ಅಪ್ಡೇಟ್!

ಸರ್ಕಾರಿ ನೌಕರಿ ಕನಸು ಕಂಡವರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ರಾಜ್ಯದ ಸರ್ಕಾರಿ ಶಾಲೆಗಳಿಗೆ 2,500 ಕಂಪ್ಯೂಟರ್ ಸೈನ್ಸ್ (ಗಣಕ ವಿಜ್ಞಾನ) ಶಿಕ್ಷಕರ ಹುದ್ದೆಗಳನ್ನು ಮಂಜೂರು ಮಾಡಿದ್ದ ಸರ್ಕಾರವು, ಈ ಹುದ್ದೆಗಳ ನೇಮಕಾತಿಗೆ ನಿಯಮಾವಳಿಗೆ ತಿದ್ದುಪಡಿ ಮಾಡಿ ಕರಡು ಅಧಿಸೂಚನೆ ಹೊರಡಿಸಿದೆ.

Read Full Story

07:58 AM (IST) Jul 01

ಕೊನೆಗೂ ಕುಮಟಾದ ಯಡ್ತಾರೆ-ಕಬ್ಬರ್ಗಿ ಗ್ರಾಮಕ್ಕೆ ಬಂತು ಬಸ್; ಅಧಿಕೃತವಾಗಿ ಪ್ರತಿನಿತ್ಯ ಸಂಚಾರ

ಶಾಸಕ ದಿನಕರ ಶೆಟ್ಟಿ ಅವರು ಕುಮಟಾದ ಯಡ್ತಾರೆ-ಕಬ್ಬರ್ಗಿ ಗ್ರಾಮಕ್ಕೆ ಬಹುನಿರೀಕ್ಷಿತ ಸಾರಿಗೆ ಬಸ್ ಸಂಚಾರಕ್ಕೆ ಚಾಲನೆ ನೀಡಿದರು. ಗ್ರಾಮಸ್ಥರ ಬಹುದಿನಗಳ ಬೇಡಿಕೆ ಈಡೇರಿದ್ದು, ಈ ಭಾಗದ ರಸ್ತೆ, ಸೇತುವೆ, ನೀರಿನ ಯೋಜನೆಗಳಂತಹ ಇತರ ಅಭಿವೃದ್ಧಿ ಕಾರ್ಯಗಳ ಬಗ್ಗೆಯೂ ಶಾಸಕರು ಮಾಹಿತಿ ನೀಡಿದರು.
Read Full Story

07:37 AM (IST) Jul 01

Illegal Bangladeshi in Bengaluru - ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದ 12 ಮಂದಿ ಬಾಂಗ್ಲಾದೇಶಿಗರ ಬಂಧನ

ಬೆಂಗಳೂರು ನಗರದಲ್ಲಿ ಅಕ್ರಮವಾಗಿ ನೆಲೆಸಿ, ಅನೈತಿಕ ಚಟುವಟಿಕೆಯಲ್ಲಿ ಭಾಗಿಯಾಗಿದ್ದ 12 ಬಾಂಗ್ಲಾದೇಶ ಮೂಲದ ಪ್ರಜೆಗಳನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾನವ ಕಳ್ಳ ಸಾಗಣೆ ಮೂಲಕ ಬಾಂಗ್ಲಾದೇಶದಿಂದ ಮಹಿಳೆಯರನ್ನು ಕರೆಯಿಸಿ ಅನೈತಿಕ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಆರೋಪಿಗಳು.

Read Full Story

07:23 AM (IST) Jul 01

ತಾಂಡಾಗಳಲ್ಲಿ ಕ್ರಾಂತಿಕಾರಿ ಹೆಜ್ಜೆ; ನಿಯಮ ಉಲ್ಲಂಘಿಸಿದವರಿಗೆ 1 ಲಕ್ಷ ರೂಪಾಯಿ ದಂಡ

ಲಂಬಾಣಿ ತಾಂಡಾಗಳಲ್ಲಿ, ಬಂಜಾರಾ ಕ್ರಾಂತಿದಳ ಮತ್ತು ಸೇವಾಲಾಲ ಜಯಂತಿ ಸಮಿತಿಗಳು ವರದಕ್ಷಿಣೆ ಪಿಡುಗಿನ ವಿರುದ್ಧ ಹೊಸ ಕ್ರಾಂತಿಯನ್ನು ಆರಂಭಿಸಿವೆ. ವರದಕ್ಷಿಣೆ ಕೊಡು-ಕೊಳ್ಳುವಿಕೆಯನ್ನು ನಿಷೇಧಿಸಿ, ನಿಯಮ ಉಲ್ಲಂಘಿಸಿದವರಿಗೆ 1 ಲಕ್ಷ ರೂಪಾಯಿ ದಂಡ ವಿಧಿಸುವ ಐತಿಹಾಸಿಕ ನಿರ್ಧಾರ ಕೈಗೊಳ್ಳುವ ಮೂಲಕ ಸರಳ ವಿವಾಹಗಳಿಗೆ ಆದ್ಯತೆ ನೀಡುತ್ತಿವೆ.

Read Full Story

More Trending News