ಬೆಂಗಳೂರು: ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ ರಾಜ್ಯ ಸರ್ಕಾರ ರೈತರಿಂದ ಖರೀದಿಸಿದ್ದ ರಾಗಿ, ಜೋಳದ ಬಾಕಿಯಲ್ಲಿ ₹357.39 ಕೋಟಿಯನ್ನು ಗುರುವಾರ ಬಿಡುಗಡೆಗೊಳಿಸಲಿದೆ ಎಂದು ಮೂಲಗಳು ತಿಳಿಸಿವೆ.
2025-26ನೇ ಸಾಲಿನಲ್ಲಿ ಎಂಎಸ್‌ಪಿ ಅಡಿ ರೈತರಿಂದ ಖರೀದಿಸಿದ್ದ ರಾಗಿ, ಜೋಳದ ಬಾಬ್ತು ₹1128.13 ಕೋಟಿ ಬಾಕಿ ಉಳಿಸಿಕೊಳ್ಳಲಾಗಿತ್ತು. ಇದರಲ್ಲಿ ₹357.39 ಕೋಟಿಯನ್ನು ಬಿಡುಗಡೆ ಮಾಡಲು ಆಹಾರ ಇಲಾಖೆಯು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮಕ್ಕೆ ಬುಧವಾರ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಹಿರಿತನದ ಆಧಾರದಲ್ಲಿ ರೈತರ ಖಾತೆಗಳಿಗೆ ನೇರವಾಗಿ ಹಣ ಸಂದಾಯವಾಗಲಿದೆ.
ಎಂಎಸ್‌ಪಿ ಅಡಿ ಪ್ರಸಕ್ತ ಸಾಲಿನಲ್ಲಿ ರಾಗಿ, ಜೋಳ, ಭತ್ತ ಖರೀದಿಸಿದ ರೈತರಿಗೆ ಈಗಾಗಲೇ ₹2487.69 ಕೋಟಿ ಪಾವತಿಸಲಾಗಿತ್ತು. ಭತ್ತ ಮಾರಾಟ ಮಾಡಿದ್ದ ರೈತರಿಗೆ ಪೂರ್ಣ ಪ್ರಮಾಣದಲ್ಲಿ ಹಣ ಸಂದಾಯವಾಗಿದ್ದು ರಾಗಿ ಮತ್ತು ಜೋಳ ಮಾರಾಟ ಮಾಡಿದ್ದವರಿಗೆ ₹1,128.13 ಕೋಟಿ ಪಾವತಿಸಬೇಕಿತ್ತು. ಅದರಲ್ಲಿ ಈಗ ₹357.39 ಕೋಟಿ ಪಾವತಿಸಲಿದ್ದರೂ ಇನ್ನೂ ಸಹಸ್ರಾರು ರೈತರಿಗೆ ₹770.74 ಕೋಟಿ ಬಾಕಿ ಉಳಿಸಿಕೊಳ್ಳಲಾಗಿದೆ. ರೈತರಿಗೆ ಎಂಎಸ್‌ಪಿ ಹಣ ಬಾಕಿ ಉಳಿಸಿಕೊಂಡಿರುವ ಬಗ್ಗೆ ‘ಕನ್ನಡಪ್ರಭ’ ವಿಶೇಷ ವರದಿಗಳನ್ನು ಪ್ರಕಟಿಸಿ ಸರ್ಕಾರದ ಗಮನ ಸೆಳೆದಿತ್ತು.
11:55 PM (IST) Aug 06
ಚಿತ್ರಮಂದಿರಗಳಲ್ಲಿ 100 ದಿನ ಯಶಸ್ವಿ ಪ್ರದರ್ಶನ ಕಂಡ ಅಯೋಗ್ಯ ಸಿನಿಮಾ, ಕಿರುತೆರೆಯಲ್ಲೂ ದಾಖಲೆ ಬರೆದು 400ಕ್ಕೂ ಹೆಚ್ಚು ಬಾರಿ ಪ್ರಸಾರ ಕಂಡಿದೆ ಎಂಬುದು ನಮಗೆ ದೊಡ್ಡ ಹೆಮ್ಮೆ ಎಂದರು ಸತೀಶ್ ನೀನಾಸಂ.
11:05 PM (IST) Aug 06
10:49 PM (IST) Aug 06
ಈ ವರ್ಷ ಸೆಪ್ಟೆಂಬರ್ 19 ಬಂದರೆ ‘ಶಾಂತಿ ಕ್ರಾಂತಿ’ ಬಿಡುಗಡೆಯಾಗಿ 25 ವರ್ಷಗಳಾಗುತ್ತದೆ. 90ನೇ ದಶಕದ ಆರಂಭಕ್ಕೇ 10 ಕೋಟಿಯಲ್ಲಿ ತಯಾರಾದ ಸಿನಿಮಾ ಅಂತ ಜನ ಹೇಳುತ್ತಾರೆ ಎಂದರು ವಿಕ್ರಮ್ ರವಿಚಂದ್ರನ್.
10:14 PM (IST) Aug 06
‘ಡಿಟೆಕ್ಟಿವ್ ತೀಕ್ಷ್ಣ’ ನನ್ನ 50ನೇ ಸಿನಿಮಾ. ಏನಾದರೂ ವಿಶೇಷತೆ ಇರಬೇಕು ಎಂದುಕೊಂಡಾಗ ಸಿಕ್ಕ ಸಿನಿಮಾ. ನಾಯಕಿ ಕೇಂದ್ರಿತ ಪತ್ತೇದಾರಿಕೆ ಸಿನಿಮಾಗಳು ಕನ್ನಡದಲ್ಲಿ ಬಂದಿಲ್ಲ ಎಂದು ಸಂದರ್ಶನದಲ್ಲಿ ಪ್ರಿಯಾಂಕ ಉಪೇಂದ್ರ ಹೇಳಿದರು.
09:32 PM (IST) Aug 06
ಸಿಂಗಲ್ ಡೋರ್ ಫ್ರಿಡ್ಜ್‌ನ ಫ್ರೀಜರ್‌ನಲ್ಲಿ ಬೆಟ್ಟದಂತೆ ಶೇಖರವಾಗುವ ಐಸನ್ನು, ಚಾಕು ಬಳಸದೆ, ಬರೀ ಬಿಸಿ ನೀರಿನ ಹಬೆಯಿಂದ ಸುಲಭವಾಗಿ ಕರಗಿಸುವುದು ಹೇಗೆಂದು ಇಲ್ಲಿ ವಿವರವಾಗಿ ತಿಳಿಯೋಣ.
09:05 PM (IST) Aug 06
ಕರ್ನಾಟಕದ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಸುಮಾರು 1.11 ಕೋಟಿ ಮತದಾರರನ್ನು 'ಎಎಸ್‌ಡಿಡಿಒ' ವರ್ಗದಲ್ಲಿ ಗುರುತಿಸಲಾಗಿದೆ. ಈ ಹೆಸರುಗಳು ಪಟ್ಟಿಯಿಂದ ಡಿಲೀಟ್ ಆಗುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ನಿಮ್ಮ ಹೆಸರೂ ಲಿಸ್ಟ್‌ನಲ್ಲಿದೆಯಾ ಎಂದು ಹೀಗೆ ಚೆಕ್ ಮಾಡಿ.
08:35 PM (IST) Aug 06
Nammoora Mandara Hoove 30 Years: ‘ನಮ್ಮೂರ ಮಂದಾರ ಹೂವೆ’ ಸಿನಿಮಾ ಬಿಡುಗಡೆಯಾಗಿ ಬರೋಬ್ಬರಿ 30 ವರ್ಷಗಳು ಕಳೆದಿದ್ದು, ಇದೀಗ ಚಿತ್ರದ ನೆನಪುಗಳು ಮತ್ತೊಮ್ಮೆ ಸಿನಿಪ್ರಿಯರ ಮುಂದೆ ಬಂದಿವೆ.
07:44 PM (IST) Aug 06
ಪ್ರಕೃತಿಯಲ್ಲಿ ಕೆಲವು ಜೀವಿಗಳು ನಿಜಕ್ಕೂ ಕಾಲ್ಪನಿಕ ಲೋಕದಿಂದ ಹೊರಬಂದಂತೆ ಕಾಣುತ್ತವೆ. ಅಂತಹ ಅಪರೂಪದ ಜೀವಿಗಳ ಪೈಕಿ ಇದೀಗ ‘ಡ್ರ್ಯಾಗನ್ ಸ್ನೇಕ್’ ಎಂದೇ ಗಮನ ಸೆಳೆಯುತ್ತಿರುವ ಒಂದು ಹಾವು ಸಾಕಷ್ಟು ಕುತೂಹಲ ಮೂಡಿಸಿದೆ.
07:24 PM (IST) Aug 06
Sauna Benefits: ಸೌನಾ ಸ್ನಾನದಿಂದ ದೇಹಕ್ಕೆ ವಿಶ್ರಾಂತಿ ಸಿಗುವುದಷ್ಟೇ ಅಲ್ಲ, ರೋಗನಿರೋಧಕ ವ್ಯವಸ್ಥೆಯ ಮೇಲೂ ಅಲ್ಪಾವಧಿಯ ಪರಿಣಾಮ ಉಂಟಾಗಬಹುದು ಎಂದು ಹೊಸ ಸಂಶೋಧನೆಯೊಂದು ಸೂಚಿಸಿದೆ.
07:04 PM (IST) Aug 06
Vinegar Laundry Benefits: ಸಾಮಾನ್ಯವಾಗಿ ಅಡುಗೆಮನೆಯಲ್ಲಿರುವ ಡಿಸ್ಟಿಲ್ಡ್ ವೈಟ್ ವಿನೆಗರ್ ಸಾಕಷ್ಟು ಉಪಯೋಗಗಳನ್ನು ಹೊಂದಿದ್ದರೂ, ಲಾಂಡ್ರಿಯಲ್ಲಿ ಅದರ ಬಳಕೆಯ ಬಗ್ಗೆ ಹೆಚ್ಚಿನವರಿಗೆ ತಿಳಿದಿರುವುದಿಲ್ಲ.
06:32 PM (IST) Aug 06
ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವ ಸ್ಥಾನ ವಂಚಿತ ಆಕಾಂಕ್ಷಿಗಳ ಅಸಮಾಧಾನ ಮುಂದುವರಿದಿದೆ. ಈ ನಡುವೆ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣವರ ಅವರು ಸಚಿವ ಸ್ಥಾನ ಕೈತಪ್ಪಿದ ಬೆಳವಣಿಗೆಗಳ..
06:15 PM (IST) Aug 06
Kodagu: ಪಕ್ಷ ತಾಯಿ ಇದ್ದಂತೆ, ಅದಕ್ಕೆ ಯಾವುದೇ ಕಾರಣಕ್ಕೂ ಮೋಸ ಮಾಡದಂತೆ ಪ್ರಾಮಾಣಿಕವಾಗಿ ಇರುವವರನ್ನು ಪಕ್ಷವೇ ಗುರುತ್ತಿಸುತ್ತದೆ. ಹಾಗೆಯೇ ನಾಗೇಂದ್ರ ಅವರನ್ನು ಹೈಕಮಾಂಡ್ ಗುರುತ್ತಿಸಿ ಸಚಿವ ಸ್ಥಾನ ನೀಡಿದೆ.
06:02 PM (IST) Aug 06
ಕಿಚ್ಚ ಸುದೀಪ್ ಎಂದರೆ ಅಭಿಮಾನಿಗಳಿಗೆ ಕೇವಲ ನಟನಲ್ಲ, ಅವರೊಂದಿಗೆ ಭಾವನಾತ್ಮಕ ನಂಟು ಹೊಂದಿರುವ ಸ್ಟಾರ್. ಈ ಮಾತಿಗೆ ಮತ್ತೊಮ್ಮೆ ಸಾಕ್ಷಿಯಾಗಿದೆ ರಾಮನಗರ ಕರಗ ಉತ್ಸವದಲ್ಲಿ ನಡೆದ ಘಟನೆ. ಮಳೆಯ ನಡುವೆಯೂ..
05:35 PM (IST) Aug 06
ಬಿಗ್ ಬಾಸ್ ಕನ್ನಡ ಸೀಸನ್ 13 ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಕಿಚ್ಚ ಸುದೀಪ್ ಅವರ ಪ್ರೊಮೋ ಬಿಡುಗಡೆಯಾಗಿದ್ದು, ಹೊಸ ಸೀಸನ್‌ಗಾಗಿ ಅಭಿಮಾನಿಗಳ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
05:22 PM (IST) Aug 06
05:15 PM (IST) Aug 06
ನಟ ವಿಕ್ರಮ್ ರವಿಚಂದ್ರನ್ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಕೆಲ ದಿನಗಳಿಂದ ಡಿಜಿಟಲ್ ಸ್ಪೇಸ್‌ನಿಂದ ದೂರವಿದ್ದ ವಿಕ್ರಮ್, ಇದೀಗ ತಮ್ಮ ಬಹುನಿರೀಕ್ಷಿತ ಸಿನಿಮಾ ‘ಮುಧೋಳ್’ ಕುರಿತು..
04:51 PM (IST) Aug 06
ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಸೊಂಟದ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ತಮ್ಮ ದೈನಂದಿನ ಜೀವನದ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು…
04:27 PM (IST) Aug 06
ಒಂದು ಸಿನಿಮಾ ಗೆದ್ದರೆ ಹೀರೋಗೆ ಹೆಚ್ಚಿನ ಕ್ರೆಡಿಟ್ ಸಿಗೋದು. ಗೆದ್ದ ತಕ್ಷಣ ಕನ್ನಡಿಗರು ಬೇಡ, ಬೇರೆಯವರು ಇವರಿಗಿಂತ ಚೆನ್ನಾಗಿ ಮಾಡ್ತಾರೆ ಅನ್ನುವ ಮನೋಭಾವ ಹೀರೋಗಳಲ್ಲಿ ಜಾಸ್ತಿ ಆಗುತ್ತಿದೆ ಎಂದರು ಓಂ ಪ್ರಕಾಶ್ ರಾವ್.
04:11 PM (IST) Aug 06
04:10 PM (IST) Aug 06
03:48 PM (IST) Aug 06
03:37 PM (IST) Aug 06
cobra meat : ಹಾವು ಕಂಡ್ರೆ ಭಯ ಶುರುವಾಗುತ್ತೆ. ಅದ್ರಲ್ಲೂ ನಾಗರಹಾವು ಅಂದ್ರೆ ನಿದ್ರೆಯಲ್ಲೂ ಜನ ಬೆವರ್ತಾರೆ. ಆದ್ರೆ ಈಗ ನಾವು ಹೇಳ್ತಿರೋ ಜಾಗದಲ್ಲಿ ಜನರು ಹಾವನ್ನು ಪಕೋಡಾ ಮಾಡಿ ತಿಂತಾರೆ.
03:14 PM (IST) Aug 06
ಉತ್ತರ ಕನ್ನಡ ಜಿಲ್ಲೆಗೆ ಸಚಿವ ಸ್ಥಾನ ಕೈತಪ್ಪಲು ಶಾಸಕರ ನಡುವಿನ ಒಗ್ಗಟ್ಟಿನ ಕೊರತೆಯೇ ಕಾರಣ ಎಂದು ಶಾಸಕ ಸತೀಶ್ ಸೈಲ್ ಆರೋಪಿಸಿದ್ದಾರೆ. ಹಿರಿಯ ಶಾಸಕರಾದ ಆರ್.ವಿ. ದೇಶಪಾಂಡೆ ಮತ್ತು ಮಂಕಾಳು ವೈದ್ಯರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದು, ಇತ್ತ ಮಂಕಾಳು ವೈದ್ಯರಿಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಮೀನುಗಾರ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ.
01:54 PM (IST) Aug 06
01:43 PM (IST) Aug 06
ಒಗ್ಗಟ್ಟಿನ ಸಾರವನ್ನು ಸಾರುವ ಸುಂದರ ಕೂಡು ಕುಟುಂಬದ ಕಥೆ.ತಂದೆಯ ಹಿಟ್ಟಿನ ಗಿರಣಿಯನ್ನು ಒಟ್ಟಾಗಿ ನಿರ್ವಹಿಸೋ ನಾಲ್ಕು ಜನ ಸಹೋದರರು ಧರ್ಮ, ಅರ್ಜುನ್, ಭುವನ್ ಮತ್ತು ನಕುಲ್'ಆನಂದ ನಿಲಯಕ್ಕೆ ಮಹಾಲಕ್ಷ್ಮೀಯಂತಿರೋ ಧರ್ಮನ ಪತ್ನಿ ಸುಧಾ. ಮೈದುನರನ್ನು ಮಕ್ಕಳಂತೆ ಸಾಕಿ ಧರ್ಮನ ಸಹೋದರರಿಗೆ ಅಮ್ಮನಂತಿರೋ ಅತ್ತಿಗೆ
01:30 PM (IST) Aug 06
ಆಗಸ್ಟ್ 3 ರಂದು ನಡೆದ ಸಚಿವ ಸಂಪುಟ ವಿಸ್ತರಣೆಯ ಹಿಂದಿನ ಅಸಲಿ ಕಥೆ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಸಿದ್ಧಪಡಿಸಿದ್ದ 'ಮಾಸ್ಟರ್ ಪ್ಲಾನ್' ಬಗ್ಗೆ ಅವರ ಪುತ್ರ ಹಾಗೂ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಮೈಸೂರಿನಲ್ಲಿ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಸಿದ್ದರಾಮಯ್ಯ ಅವರ ಶಿಫಾರಸ್ಸು ಪಟ್ಟಿಯಲ್ಲಿದ್ದವರು ಯಾರು? ಹೈಕಮಾಂಡ್ ಅದಕ್ಕೆ ಹೇಗೆ ಪ್ರತಿಕ್ರಿಯಿಸಿತು ಎಂಬ ಇಡೀ 'ಸೀಕ್ರೆಟ್' ಈಗ ಬಹಿರಂಗವಾಗಿದೆ.
12:56 PM (IST) Aug 06
12:47 PM (IST) Aug 06
12:19 PM (IST) Aug 06
11:51 AM (IST) Aug 06
11:02 AM (IST) Aug 06
10:07 AM (IST) Aug 06
ಲಕ್ಷ್ಮೀ ನಿವಾಸ ಧಾರಾವಾಹಿಯ ನಟಿ ಯಮುನಾ ಶ್ರೀನಿಧಿ, ತಮ್ಮ ಸಹನಟ ದೀಪಕ್ (ಜಯಂತ್) ಬಗ್ಗೆ ಫೇಸ್‌ಬುಕ್‌ನಲ್ಲಿ ಮೆಚ್ಚುಗೆಯ ಮಾತುಗಳನ್ನು ಹಂಚಿಕೊಂಡಿದ್ದಾರೆ. ತೆರೆಯ ಮೇಲೆ ದೀಪಕ್ ಅವರ ನಟನೆ ಎಷ್ಟು ಅದ್ಭುತವೋ, ತೆರೆಮರೆಯಲ್ಲಿ ಅವರ ವ್ಯಕ್ತಿತ್ವವೂ ಅಷ್ಟೇ ಶ್ರೇಷ್ಠ ಎಂದು ಬಣ್ಣಿಸಿದ್ದಾರೆ.
10:04 AM (IST) Aug 06
09:31 AM (IST) Aug 06
ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಮೆದರಗೋಳ ಗ್ರಾಮದ ನಿವಾಸಿ ಭೀಮರಾಯ (42) ಮೃತಪಟ್ಟ ದುರ್ದೈವಿ. ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ..
09:02 AM (IST) Aug 06
ಶೇಖ್ ಹಸೀನಾ ಜೊತೆ ಕಾಣಿಸಿಕೊಂಡ ಬೆನ್ನಲ್ಲೇ ಶಕೀಬ್ ಅಲ್ ಹಸನ್ ಮನೆ ಮೇಲೆ ಪೆಟ್ರೋಲ್ ಬಾಂಬ್ ದಾಳಿ! ಬಾಂಗ್ಲಾದೇಶದಲ್ಲಿ ಕ್ರಿಕೆಟ್ ದಿಗ್ಗಜನಿಗೆ ಹೆಚ್ಚಿದ ಭೀತಿ. ಸಂಪೂರ್ಣ ವಿವರ ಈ ಸ್ಟೋರಿಯಲ್ಲಿದೆ..
07:33 AM (IST) Aug 06
07:12 AM (IST) Aug 06
06:51 AM (IST) Aug 06
ಶಿವಮೊಗ್ಗ ಜಿಲ್ಲೆಯ ಮಹತ್ವಾಕಾಂಕ್ಷೆಯ ಕೋಟೆಗಂಗೂರು ಕೋಚಿಂಗ್ ಡಿಪೋ ಕಾಮಗಾರಿಯು ಶೇ.77ಕ್ಕೂ ಹೆಚ್ಚು ಆರ್ಥಿಕ ಪ್ರಗತಿ ಸಾಧಿಸಿ ವೇಗವಾಗಿ ಪೂರ್ಣಗೊಳ್ಳುವತ್ತ ಸಾಗಿದೆ. ಸಂಸದ ಬಿ.ವೈ. ರಾಘವೇಂದ್ರ ಅವರು ಬಾಕಿ ಯೋಜನೆಗಳ ತ್ವರಿತ ಜಾರಿಗೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
06:40 AM (IST) Aug 06
06:33 AM (IST) Aug 06