Published : Oct 30, 2025, 06:36 AM ISTUpdated : Oct 30, 2025, 11:11 PM IST

Karnataka Latest News Live: 10, 12ನೇ ತರಗತಿಯ ಬೋರ್ಡ್‌ ಪರೀಕ್ಷೆಯ ದಿನಾಂಕ ಪ್ರಕಟಿಸಿದ ಸಿಬಿಎಸ್‌ಇ

ಸಾರಾಂಶ

ಬೆಂಗಳೂರು: ರಾಜ್ಯದ ಸಾರಥ್ಯ ಬ್ಲಾಕ್‌ ಹಾರ್ಸ್ ಕೈಗೆ ಸಿಗಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸ್ಫೋಟಕ ಹೇಳಿಕೆ ನೀಡಿದರು. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ ಆಗಲಿ, ಸತೀಶ ಜಾರಕಿಹೊಳಿಯಾಗಲಿ ಮುಖ್ಯಮಂತ್ರಿ ಆಗುವುದಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ. ಒಮ್ಮೆ ಸಿಎಂ ಆಗಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಕಾಯುತ್ತಿದ್ದಾರೆ. ಸಿಎಂ ಪುತ್ರ ಕೂಡ ಬೆಳಗಾವಿಗೆ ಬಂದು ಸತೀಶ್ ಜಾರಕಿಹೊಳಿ‌ ಹೆಸರು ಹೇಳಿ ಹೋಗಿದ್ದಾರೆ. ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಆಗಲಿದೆ. ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಲಿದ್ದಾರೆ ಎಂದು ಭವಿಷ್ಯ ನುಡಿದರು.

CBSE Board Exam 2026 Date sheet Out

11:11 PM (IST) Oct 30

10, 12ನೇ ತರಗತಿಯ ಬೋರ್ಡ್‌ ಪರೀಕ್ಷೆಯ ದಿನಾಂಕ ಪ್ರಕಟಿಸಿದ ಸಿಬಿಎಸ್‌ಇ

CBSE Board Exam 2026 Class 10 & 12 Final Date Sheet Released Exams Begin Feb 17 ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) 2026ರ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳ ದಿನಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. 

Read Full Story

10:44 PM (IST) Oct 30

ಜೆಮಿಮಾ ಮಹಾನ್‌ ಸೆಂಚುರಿ, ಹಾಲಿ ಚಾಂಪಿಯನ್ ಆಸೀಸ್‌ ಮಣಿಸಿ ಫೈನಲ್‌ಗೇರಿದ ಭಾರತ!

Sensational Jemimah Century & Harmanpreet Fifty Power India to World Cup Final ಮಹಿಳಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ನೀಡಿದ 339 ರನ್‌ಗಳ ಬೃಹತ್ ಗುರಿಯನ್ನು ಭಾರತ ಯಶಸ್ವಿಯಾಗಿ ಬೆನ್ನಟ್ಟಿ ಫೈನಲ್‌ಗೇರಿದೆ.

Read Full Story

10:05 PM (IST) Oct 30

ನಮ್ಮ ಮೆಟ್ರೋ ಮೂಲಕ ಮತ್ತೊಮ್ಮೆ ಶ್ವಾಸಕೋಶ, ಹೃದಯ ಸಾಗಾಣೆ!

Bengaluru Metro Facilitates 3rd Organ Transport Lungs and Heart Travel 33 Kms in 61 Minutes ಬೆಂಗಳೂರಿನ ನಮ್ಮ ಮೆಟ್ರೋ, ಯಶವಂತಪುರದ ಸ್ಪರ್ಶ ಆಸ್ಪತ್ರೆಯಿಂದ ನಾರಾಯಣ ಹೆಲ್ತ್ ಸಿಟಿ ಮತ್ತು ಆಸ್ಟರ್ ಆರ್‌ವಿ ಆಸ್ಪತ್ರೆಗೆ ಹೃದಯ ಮತ್ತು ಶ್ವಾಸಕೋಶವನ್ನು ಸಾಗಿಸಲು ನೆರವಾಯಿತು. 

Read Full Story

09:22 PM (IST) Oct 30

ಮಲೆ ಮಹದೇಶ್ವರ ವನ್ಯಧಾಮದಲ್ಲಿ 6 ಹುಲಿಗಳ ಹತ್ಯೆ, ಕಾಡಂಚಿನ ಜನರ ಹಸುಗಳಿಗೆ ಕಿವಿಯೋಲೆ ಹಾಕಲು ಮುಂದಾದ ಅರಣ್ಯ ಇಲಾಖೆ

ಚಾಮರಾಜನಗರದ ಅರಣ್ಯ ಪ್ರದೇಶಗಳಲ್ಲಿ ಮಾನವ-ವನ್ಯಜೀವಿ ಸಂಘರ್ಷ ತೀವ್ರಗೊಂಡಿದ್ದು, ಹುಲಿಗಳ ದಾಳಿಗೆ ಜಾನುವಾರುಗಳು ಬಲಿಯಾಗುತ್ತಿವೆ. ಇದಕ್ಕೆ ಪ್ರತೀಕಾರವಾಗಿ ಹುಲಿಗಳನ್ನು ಕೊಲ್ಲುವುದನ್ನು ತಡೆಯಲು, ಅರಣ್ಯ ಇಲಾಖೆಯು ಜಾನುವಾರುಗಳಿಗೆ ಕಿವಿಯೋಲೆ ಹಾಕಲು ಮುಂದಾಗಿದೆ.

Read Full Story

08:57 PM (IST) Oct 30

ಬಡವರಿಗೆ ವರದಾನವಾದ ರಾಯಚೂರು ಹಾಸ್ಪಿಟಲ್, ತಿಂಗಳಲ್ಲಿ 200 ಹೆರಿಗೆ ಮಾಡಿದ ಸರ್ಕಾರಿ ಆಸ್ಪತ್ರೆ!

ರಾಯಚೂರಿನಲ್ಲಿ ಆರಂಭವಾದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯು ಇದೀಗ ಬಡ ರೋಗಿಗಳ ಪಾಲಿಗೆ ಸಂಜೀವಿನಿಯಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಸೆಡ್ಡು ಹೊಡೆಯುವಂತೆ ಉತ್ತಮ ಗುಣಮಟ್ಟದ ಚಿಕಿತ್ಸೆ ಮತ್ತು ಆರೈಕೆಯನ್ನು ನೀಡುತ್ತಿದ್ದು, ಈ ತಿಂಗಳಲ್ಲೇ 200ಕ್ಕೂ ಹೆಚ್ಚು ಹೆರಿಗೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ.
Read Full Story

08:53 PM (IST) Oct 30

ಕಟ್ಟಡ ನವೀಕರಣದ ವೇಳೆ ಕುಸಿದ ಸೆಂಟ್ರಿಂಗ್‌, ಓರ್ವ ಕಾರ್ಮಿಕ ದಾರುಣ ಸಾವು!

Worker Dies in Mahadevapura as Building Renovation Centering Collapses ಬೆಂಗಳೂರಿನ ಮಹದೇವಪುರದಲ್ಲಿ ಕಟ್ಟಡ ನವೀಕರಣದ ವೇಳೆ ಸೆಂಟ್ರಿಂಗ್ ಕುಸಿದು ಯೂಸೂಫ್ ಶರೀಫ್ ಎಂಬ ಕಾರ್ಮಿಕ ಮೃತಪಟ್ಟಿದ್ದಾರೆ. ಈ ದುರಂತದಲ್ಲಿ, ಸಮೀಪದಲ್ಲಿ ಚಹಾ ಕುಡಿಯುತ್ತಿದ್ದ ದಂಪತಿ ತೀವ್ರವಾಗಿ ಗಾಯಗೊಂಡಿದ್ದಾರೆ.

Read Full Story

08:42 PM (IST) Oct 30

ಚಿತ್ತಾಪುರ ಆರ್‌ಎಸ್‌ಎಸ್ ಪಥಸಂಚಲನ ಸಂಧಾನ ವಿಫಲ, ನ. 7 ಕ್ಕೆ ವಿಚಾರಣೆ ಮೂದೂಡಿದ ಕಲಬುರಗಿ ಹೈಕೋರ್ಟ್

ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಕ್ಷೇತ್ರವಾದ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಅನುಮತಿ ಕೋರಿದ ಅರ್ಜಿ ವಿಚಾರಣೆ ಕಲಬುರಗಿ ಹೈಕೋರ್ಟ್‌ನಲ್ಲಿ ನಡೆದಿದೆ. ಶಾಂತಿ ಸಭೆ ವಿಫಲವಾದ ಹಿನ್ನೆಲೆಯಲ್ಲಿ, ನ್ಯಾಯಾಲಯವು ವಿಚಾರಣೆಯನ್ನು ನವೆಂಬರ್ 7ಕ್ಕೆ ಮುಂದೂಡಿದೆ.  

Read Full Story

07:32 PM (IST) Oct 30

ನ.12ರವರೆಗೂ ಧರ್ಮಸ್ಥಳ ಪ್ರಕರಣದ ವಿಚಾರಣೆಗೆ ಹೈಕೋರ್ಟ್‌ ತಡೆ

High Court Stays Dharmasthala Burude Gang Case Probe Till Nov 12 ಧರ್ಮಸ್ಥಳ ಷಡ್ಯಂತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ, ತಾವೇ ನೀಡಿದ ದೂರಿನ ತನಿಖೆ ರದ್ದು ಕೋರಿ 'ಬುರುಡೆ ಗ್ಯಾಂಗ್' ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ನ.12ರವರೆಗೆ ತನಿಖೆಗೆ ಮಧ್ಯಂತರ ತಡೆ ನೀಡಿದೆ. 

Read Full Story

07:22 PM (IST) Oct 30

ಸುಪ್ರೀಂ ಕೋರ್ಟ್‌ಗೆ ನೂತನ ಸಿಜೆಐ ನೇಮಕ, ಹಳ್ಳಿಯಿಂದ ದಿಲ್ಲಿಗೆ ಪಯಣಿಸಿದ ನ್ಯಾ ಸೂರ್ಯಕಾಂತ್ ಯಾರು?

ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ನೇಮಿಸಲಾಗಿದೆ. ಪ್ರಸ್ತುತ ಸಿಜೆಐ ಭೂಷಣ್ ಆರ್. ಗವಾಯಿ ಅವರ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ಈ ಆದೇಶ ಹೊರಡಿಸಿದ್ದು, ಅವರು ನವೆಂಬರ್ 24, 2025 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

Read Full Story

06:19 PM (IST) Oct 30

ಹಿರಿಯ ನಟಿ ಉಮಾಶ್ರೀಗೆ ಡಾ.ರಾಜ್‌ಕುಮಾರ್‌ ಪ್ರಶಸ್ತಿ ಘೋಷಣೆ

Veteran Actress Umashree Conferred Dr. Rajkumar Award 2019ರ ಸಾಲಿನ ಡಾ. ರಾಜ್‌ಕುಮಾರ್, ಡಾ. ವಿಷ್ಣುವರ್ಧನ್ ಹಾಗೂ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗಳನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. 

Read Full Story

06:18 PM (IST) Oct 30

ಕೌಶಲ್ಯ ತರಬೇತಿ ಕೇಂದ್ರ ಆರಂಭಿಸುವವರಿಗೆ ಸರ್ಕಾರದಿಂದ ಅಗತ್ಯ ಭೂ ಮಂಜೂರು, ಅತಿ ಶೀಘ್ರದಲ್ಲಿ ಡ್ಯುಯಲ್‌ ಅಪ್ರೆಂಟಿಶಿಪ್‌ ಯೋಜನೆ

ರಾಜ್ಯದ ಯುವಕರಿಗೆ ಉದ್ಯೋಗಾವಕಾಶ ಹೆಚ್ಚಿಸಲು, ಕೌಶಲ್ಯ ತರಬೇತಿ ಪ್ರಯೋಗಾಲಯಗಳನ್ನು ಸ್ಥಾಪಿಸಲು ಇಚ್ಛಿಸುವವರಿಗೆ ಅಗತ್ಯ ಭೂಮಿ ಮತ್ತು ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಸಚಿವ ಡಾ. ಶರಣಪ್ರಕಾಶ ಪಾಟೀಲ್ ಘೋಷಿಸಿದ್ದಾರೆ.  

Read Full Story

06:17 PM (IST) Oct 30

ಟೋಲ್‌ ಕೇಳಿದ್ದಕ್ಕೆ ನನ್ನ ಅಪ್ಪ ಯಾರು ಗೊತ್ತಾ? ಎಂದು ಕೇಳಿ ಟೋಲ್ ಸಿಬ್ಬಂದಿ ಮೇಲೆ ಹಲ್ಲೆ

Vijayapura toll gate assault: ವಿಜಯಪುರದ ಟೋಲ್ ಗೇಟ್‌ನಲ್ಲಿ, ಟೋಲ್ ಕೇಳಿದ ಸಿಬ್ಬಂದಿ ಮೇಲೆ ಬಿಜೆಪಿ ನಾಯಕ ವಿಜು ಗೌಡ ಪಾಟೀಲ್ ಅವರ ಪುತ್ರ ಸಮರ್ಥ್‌ಗೌಡ ಪಾಟೀಲ್ ಹಲ್ಲೆ ನಡೆಸಿದ್ದಾರೆ. ಈ ಘಟನೆಯು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

Read Full Story

06:08 PM (IST) Oct 30

Bigg Boss ಮನೆಯಲ್ಲಿ ಶಾಕಿಂಗ್​ ಘಟನೆ - ನಡೆಯುತ್ತಲೇ ಕುಸಿದು ಬಿದ್ದ ಸ್ಪರ್ಧಿ- ಆತಂಕದ ವಾತಾವರಣ

ಬಿಗ್ ಬಾಸ್ ತಮಿಳು ಸೀಸನ್ 9ರಲ್ಲಿ ಸ್ಪರ್ಧಿ ರಮ್ಯಾ ಅವರು ಇದ್ದಕ್ಕಿದ್ದಂತೆ ತಲೆತಿರುಗಿ ಬಿದ್ದ ಘಟನೆ ನಡೆದಿದೆ. ತಕ್ಷಣವೇ ವೈದ್ಯಕೀಯ ನೆರವು ನೀಡಲಾಗಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿನ ಕುಸಿತದಿಂದ ಹೀಗಾಗಿದೆ ಎಂದು ತಿಳಿದುಬಂದಿದೆ. ಈ ಘಟನೆಯು ಮನೆಯ ಇತರ ಸದಸ್ಯರಲ್ಲಿ ಆತಂಕವನ್ನು ಸೃಷ್ಟಿಸಿತು.
Read Full Story

05:34 PM (IST) Oct 30

ಸಂಪುಟ ಸಭೆಯಲ್ಲಿ ಕಿತ್ತಾಡಿಕೊಂಡ ಸಚಿವರಾದ ಜಾರ್ಜ್ ಮತ್ತು ಎಚ್.ಸಿ. ಮಹದೇವಪ್ಪ, ಸಿಎಂ ಮಧ್ಯಪ್ರವೇಶದಿಂದ ನಿಂತ ಜಗಳ

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ಸಚಿವ ಸಂಪುಟ ಸಭೆಯಲ್ಲಿ ಗಂಗಾ ಕಲ್ಯಾಣ ಯೋಜನೆ ಕುರಿತು ಸಚಿವರಾದ ಕೆ.ಜೆ. ಜಾರ್ಜ್ ಮತ್ತು ಎಚ್.ಸಿ. ಮಹದೇವಪ್ಪ ನಡುವೆ ತೀವ್ರ ವಾಗ್ವಾದ ನಡೆಯಿತು. ಎಸ್‌ಸಿಪಿ-ಟಿಎಸ್‌ಪಿ ಅನುದಾನ ಬಳಕೆ ಮತ್ತು ಯೋಜನೆ ವಿಳಂಬದ ಬಗ್ಗೆ ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದರು

Read Full Story

05:32 PM (IST) Oct 30

ನಟ ಪ್ರಕಾಶ್‌ ರಾಜ್‌ ಸೇರಿದಂತೆ 70 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಿದ ಸರ್ಕಾರ

Karnataka Rajyotsava Awards 2025 Announced ಸಿದ್ದರಾಮಯ್ಯ ಸರ್ಕಾರವು 70 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಿದೆ. ಈ ಬಾರಿ ಹಿರಿಯ ನಟ ಪ್ರಕಾಶ್ ರಾಜ್, ಕೋಣಂದೂರು ಲಿಂಗಪ್ಪ ಮತ್ತು ಪೌರ ಕಾರ್ಮಿಕರಾದ ಫಕೀರವ್ವ ಸೇರಿದಂತೆ ಹಲವು ಸಾಧಕರಿಗೆ ಈ ಗೌರವ ಸಂದಿದೆ. 

Read Full Story

05:15 PM (IST) Oct 30

Bigg Bossಗೆ ಭಾಗ್ಯಲಕ್ಷ್ಮಿ ಎಂಟ್ರಿ! ಕಾವ್ಯಾಳನ್ನು ಎತ್ತಿ 'ಪ್ರೀತಿಯ ಸುಖ' ಎನ್ನುತ್ತ ಸೂರಜ್​ ರೊಮಾನ್ಸ್​ - ರಾಶಿಕಾ ಹೊಟ್ಟೆಗೆ ಬೆಂಕಿ!

ಬಿಗ್ ಬಾಸ್ ಮನೆಗೆ 'ಭಾಗ್ಯಲಕ್ಷ್ಮಿ' ಸೀರಿಯಲ್ ಸುಷ್ಮಾ ಕೆ. ರಾವ್ ಮತ್ತು ಪ್ರಿಯಾ ಜೆ. ಆಚಾರ್ ಆಗಮಿಸಿದ್ದಾರೆ. ಈ ಫೆಸ್ಟಿವಲ್ ಸಂಚಿಕೆಯಲ್ಲಿ, ಸೂರಜ್ ಸಿಂಗ್ ಕಾವ್ಯಾಳನ್ನು ಎತ್ತಿಕೊಂಡು ನೃತ್ಯ ಮಾಡಿದ್ದು ರಾಶಿಕಾ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಗಿಲ್ಲಿ ನಟ ಅಶ್ವಿನಿಯನ್ನು ಎತ್ತಲು ಹೋಗಿ ಬೀಳಿಸಿದ್ದಾರೆ!

Read Full Story

04:55 PM (IST) Oct 30

ಸಚಿವ ಸಂಪುಟ ಸಭೆ ಮುಕ್ತಾಯ, ಬೆಂಗಳೂರು ರಸ್ತೆ ಅಭಿವೃದ್ಧಿಗೆ 1241 ಕೋಟಿ ರೂ. ಸೇರಿ ಹಲವು ಯೋಜನೆಗಳಿಗೆ ಅನುಮೋದನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ರಾಜ್ಯದ ಮೂಲಸೌಕರ್ಯ, ಶಿಕ್ಷಣ, ಆರೋಗ್ಯ ಹಾಗೂ ಅರಣ್ಯ ಕ್ಷೇತ್ರಗಳ ಅಭಿವೃದ್ಧಿಗೆ ಸಂಬಂಧಿಸಿದ ಅನೇಕ ಮಹತ್ವದ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.  

Read Full Story

04:33 PM (IST) Oct 30

BBK 12 - ಗಿಲ್ಲಿ ನಟನ ಕಣ್ಣಿಗೆ ಬಿತ್ತು ಕಾಕ್ರೋಚ್‌ ಸುಧಿ, ಅಶ್ವಿನಿ ಗೌಡ ಕಣ್ಸನ್ನೆ ಕಳ್ಳಾಟ; ವಿಡಿಯೋ ವೈರಲ್

ಬಿಗ್‌ ಬಾಸ್‌ ಕನ್ನಡ 12 ಶೋನಲ್ಲಿ ಬಿಗ್‌ ಬಾಸ್‌ ಕಾಲೇಜ್‌ ಎಂದು ಟಾಸ್ಕ್ ನಡೆಯುತ್ತಿದೆ. ಫಿಸಿಕಲ್‌ ಟಾಸ್ಕ್‌ನಲ್ಲಿ ರಾಶಿಕಾ ಚೆನ್ನಾಗಿ ಟಾಸ್ಕ್‌ ಆಡಿದ್ದರು. ಅಶ್ವಿನಿ ಗೌಡ ಇದ್ದ ಟೀಂನವರು ರಾಶಿಕಾಗೆ ಸ್ಟುಡೆಂಟ್‌ ಆಫ್‌ ದಿ ವೀಕ್‌ ಪಟ್ಟ ಕೊಡಬೇಕು ಎಂದುಕೊಂಡಿದ್ದರು. ಅದಕ್ಕೆ ಗಿಲ್ಲಿ ನಟ ಒಪ್ಪಲಿಲ್ಲ.

Read Full Story

03:54 PM (IST) Oct 30

BBK 12 - ಅಶ್ವಿನಿ ಗೌಡ ಮಾತು ಕೇಳಕಾಗ್ತಿಲ್ಲ, ಸ್ವಯಂ ಎಲಿಮಿನೇಟ್‌ ಆಗ್ತೀನಿ ಎಂದ ಗಿಲ್ಲಿ ನಟ! ಇಂಥ ನಿರ್ಧಾರ ಯಾಕೆ?

BBK 12 Updates: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಕಾಲೇಜು ಟಾಸ್ಕ್‌ನಲ್ಲಿ ಅಶ್ವಿನಿ ಗೌಡ ಅವರು ಒಂದಿಷ್ಟು ಮಾತನಾಡಿದ್ದರು. ಈ ಮಾತು ಕೇಳಿ ಗಿಲ್ಲಿ ನಟ ಅವರು ಸೆಲ್ಫ್‌ ಎಲಿಮಿನೇಶನ್‌ ಮಾಡ್ಕೋತಿನಿ ಎಂದು ಹೇಳಿದ್ದಾರೆ. ಗಿಲ್ಲಿ ನಟನ ಮಾತುಗಳು ಎಲ್ಲರ ಮುಖದಲ್ಲೂ ನಗು ತಂದಿದೆ.

 

Read Full Story

03:28 PM (IST) Oct 30

Karna Serial - ನಿತ್ಯಾ ಮೊಗದಲ್ಲಿ ಮಂದಹಾಸ, ಇಂಗು ತಿಂದು ಮಂಗನಂತೆ ಮುಖ ಮಾಡಿದ ರಮೇಶ್

Karna Serial: ರಮೇಶ್‌ನ ಕುತಂತ್ರವನ್ನು ಆತನ ಹೆಂಡತಿ ಮಾಲತಿಯೇ ಕರ್ಣನ ಮುಂದೆ ಬಯಲು ಮಾಡುತ್ತಾಳೆ. ಕಾಣೆಯಾಗಿದ್ದ ತೇಜಸ್ ಚಿಕ್ಕಮಗಳೂರಿನಲ್ಲಿರುವ ವಿಷಯ ತಿಳಿದು, ಕರ್ಣ ಮತ್ತು ನಿತ್ಯಾ ಆತನನ್ನು ಹುಡುಕಲು ಹನಿಮೂನ್ ನೆಪದಲ್ಲಿ ಹೊರಡುತ್ತಾರೆ.

Read Full Story

03:17 PM (IST) Oct 30

ಹೋದ ವರ್ಷ ಬ್ರೇಕಪ್‌, ಈ ವರ್ಷ ಎಂಗೇಜ್‌ಮೆಂಟ್;‌ ಪ್ರೀತಿ, ಗೀತಿ, ಇತ್ಯಾದಿ ಮಾಡ್ಕೊಂಡ Bigg Boss ಸ್ಪರ್ಧಿಯಾರು?

Bigg Boss And Tv Actress Engagement Photos: ಇಲ್ಲೋರ್ವ ನಟಿ ಒಬ್ಬರಾದ ಒಬ್ಬರನ್ನು ಬ್ಯಾಕ್‌ ಟು ಬ್ಯಾಕ್‌ ಲವ್‌ ಮಾಡಿ ಈಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಆದರೆ ಈ ಬಾರಿ ಬಾಯ್‌ಫ್ರೆಂಡ್‌ ಯಾರು ಎಂದು ಹೇಳಿಕೊಂಡಿಲ್ಲ. ಹಾಗಾದರೆ ಅವರು ಯಾರು?

Read Full Story

03:07 PM (IST) Oct 30

ಪರಪ್ಪನ ಅಗ್ರಹಾರದಲ್ಲಿ ಸೌಲಭ್ಯವಿಲ್ಲದೆ ಕುಗ್ಗಿದ ನಟ ದರ್ಶನ್‌, ಬರೋಬ್ಬರಿ 10 ಕೆಜಿ ಇಳಿಕೆ!

ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ಗೆ ಹಾಸಿಗೆ, ದಿಂಬು ನಿರಾಕರಿಸಲಾಗಿದೆ. ತೀವ್ರ ಮಾನಸಿಕ ಒತ್ತಡದಿಂದಾಗಿ ಅವರು ಸುಮಾರು 10 ಕೆಜಿ ತೂಕ ಕಳೆದುಕೊಂಡಿದ್ದು, ಕ್ವಾರಂಟೈನ್ ಸೆಲ್‌ನಲ್ಲಿ ಬಿಗಿ ಭದ್ರತೆಯಲ್ಲಿ ಒಂಟியாக ಕಾಲ ಕಳೆಯುತ್ತಿದ್ದಾರೆ.
Read Full Story

02:45 PM (IST) Oct 30

Karna Serial - ನಿತ್ಯಾ, ಕರ್ಣ ಹನಿಮೂನ್‌ಗೆ ನಿಧಿಯೋ ಹೋದಳಾ? ಲೀಕ್‌ ಆದ ಫೋಟೋದ ಹಿಂದಿನ ಸತ್ಯ ಏನು?

Karna Kannada Serial Actress Bhavya Gowda: ಕರ್ಣ ಧಾರಾವಾಹಿಯಲ್ಲಿ ನಿತ್ಯಾ, ಕರ್ಣ ತಾವು ಮದುವೆ ಆಗಿರೋದಾಗಿ ನಾಟಕ ಮಾಡಿದ್ದಾರೆ. ಇದು ಮಾಲತಿ ಬಿಟ್ಟು ಬೇರೆ ಯಾರಿಗೂ ಗೊತ್ತಿಲ್ಲ. ಇನ್ನೊಂದು ಕಡೆ ತೇಜಸ್‌ ಚಿಕ್ಕಮಗಳೂರಿನಲ್ಲಿರೋದು ವೀಕ್ಷಕರಿಗೆ ಗೊತ್ತಾಗಿದೆ. ಮುಂದೆ ಏನಾಗುವುದು?

Read Full Story

02:02 PM (IST) Oct 30

ಬೆಂಗಳೂರಿನ ತ್ಯಾಜ್ಯ ಸಮಸ್ಯೆಗೆ ಹೊಸ ಸೂತ್ರ - BSWMLನ ಕ್ರಾಂತಿಕಾರಿ ಹೆಜ್ಜೆ, ಪ್ರಾಣಿ ತ್ಯಾಜ್ಯಕ್ಕೂ ಹೊಸ ರೂಲ್ಸ್

ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಸಂಸ್ಥೆಯು (BSWML) ನಗರದ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಹೊಸ ಪರಿಹಾರಗಳನ್ನು ಕಂಡುಕೊಂಡಿದೆ. ಭಾರೀ ತ್ಯಾಜ್ಯ ಸಂಗ್ರಹಕ್ಕೆ ಮೊಬೈಲ್ ಆಪ್ ಹಾಗೂ ಪ್ರಾಣಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಮರುಬಳಕೆ ಮಾಡಲು ಪ್ರತ್ಯೇಕ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ.
Read Full Story

01:57 PM (IST) Oct 30

2028ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೇರುವುದು ಖಚಿತ - ಸಚಿವ ಜಮೀರ್ ಅಹಮ್ಮದ್

2028ರ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಎಂದು ವಸತಿ, ವಕ್ಫ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮ್ಮದ್ ಖಾನ್ ಭವಿಷ್ಯ ನುಡಿದರು.

Read Full Story

01:57 PM (IST) Oct 30

Kannada Serial TRP - ಅಂಥ ಟ್ವಿಸ್ಟ್‌ ಕೊಟ್ರು, ಸೀರಿಯಲ್‌ ಮತ್ತೆ No 1 ಸ್ಥಾನಕ್ಕೆ ಬಂತು! ಯಾವುದು?

Kannada Serial TRP 2025: ವಾರದಿಂದ ವಾರಕ್ಕೆ ಟಿಆರ್‌ಪಿ ಏರಿಳಿತ ಆಗುವುದು. ಈ ಬಾರಿ ಕೂಡ ಸೀರಿಯಲ್‌ನಲ್ಲಿ ಬಹಳ ವ್ಯತ್ಯಾಸ ಕಂಡು ಬಂದಿದೆ. ಟ್ವಿಸ್ಟ್‌ಗಳಿಂದಲೇ ಈ ಬಾರಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಹಾಗಾದರೆ ಆ ಸೀರಿಯಲ್‌ ಯಾವುದು?

Read Full Story

01:40 PM (IST) Oct 30

ರಿಪೋರ್ಟರ್ ಟಿವಿ ವಿರುದ್ಧ 100 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ ರಾಜೀವ್ ಚಂದ್ರಶೇಖರ್

ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್, ತಮ್ಮ ವಿರುದ್ಧ ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದಕ್ಕಾಗಿ ರಿಪೋರ್ಟರ್ ಟಿವಿ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

Read Full Story

01:40 PM (IST) Oct 30

ಧರ್ಮಸ್ಥಳ ಕೇಸ್ ಕೊಟ್ಟವರ ಒಂದೊಂದೇ ಬಣ್ಣ ಈಗ ಬಯಲಾಗುತ್ತಿದೆ - ಸಂಸದ ಯದುವೀರ್ ಒಡೆಯರ್ ಕಿಡಿ

ಕೇಸ್ ಕೊಟ್ಟವರ ಒಂದೊಂದೇ ಬಣ್ಣ ಈಗ ಬಯಲಾಗುತ್ತಿದೆ. ಧರ್ಮಸ್ಥಳದ ಹೆಸರಿಗೆ ಕಪ್ಪು ಮಸಿ ಬಳಿಯಲು ಷಡ್ಯಂತ್ರ ನಡೆದಿತ್ತು ಎಂಬುದು ಮೊದಲಿನಿಂದಲೂ ಗೊತ್ತು ಎಂದು ಸಂಸದ ಯದುವೀರ್ ಒಡೆಯರ್ ಹೇಳಿದರು.

Read Full Story

01:36 PM (IST) Oct 30

ರಾಕಿಂಗ್ ಸ್ಟಾರ್ ಯಶ್ 'ಟಾಕ್ಸಿಕ್' ಸಿನಿಮಾ ಬಿಡುಗಡೆ ದಿನಾಂಕ ಫಿಕ್ಸ್; ವಿಶ್ವದಾದ್ಯಂತ ಧೂಳ್ ಎಬ್ಬಿಸಲು ರೆಡಿ!

ಕನ್ನಡ ಚಿತ್ರರಂಗದ ನಾಯಕ, ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿರುವ ರಾಕಿಂಗ್ ಸ್ಟಾರ್ ಯಶ್ ಅವರ ಬಹು ನಿರೀಕ್ಷಿತ ಚಿತ್ರ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಬಿಡುಗಡೆ ದಿನಾಂಕದ ಬಗ್ಗೆ ಹಬ್ಬಿದ್ದ ಎಲ್ಲಾ ವದಂತಿಗಳಿಗೆ ತೆರೆ ಬಿದ್ದಿದೆ!ಈ ಸಿನಿಮಾ ಬಿಡುಗಡೆ ಬಗ್ಗೆ ಅಪ್‌ಡೇಟ್ ಇಲ್ಲಿದೆ ನೋಡಿ.. 

 

Read Full Story

01:24 PM (IST) Oct 30

ಮಾರಣಾಂತಿಕವಾಗಿ ಗಾಯಗೊಂಡಿದ್ದ ಶ್ರೇಯಸ್ ಅಯ್ಯರ್ ಆಸ್ಪತ್ರೆಯಿಂದಲೇ ಮೊದಲ ಮೆಸೇಜ್! ಆರೋಗ್ಯದ ಅಪ್‌ಡೇಟ್ ಔಟ್

ಸಿಡ್ನಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಕ್ಯಾಚ್ ಹಿಡಿಯುವ ಯತ್ನದಲ್ಲಿ ಗಾಯಗೊಂಡಿದ್ದ ಶ್ರೇಯಸ್ ಅಯ್ಯರ್, ಇದೀಗ ಆಸ್ಪತ್ರೆಯಿಂದಲೇ ತಮ್ಮ ಆರೋಗ್ಯದ ಅಪ್‌ಡೇಟ್ ನೀಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

 

Read Full Story

12:59 PM (IST) Oct 30

10 ವರ್ಷಗಳ ನಂತರ ಟಾಲಿವುಡ್‌ಗೆ ಮರಳುತ್ತಿದ್ದಾರೆ ಕೆಜಿಎಫ್‌ನ ರಮಿಕಾ ಸೇನ್ - ಸೂರ್ಯ ಸಿನಿಮಾದಲ್ಲಿ ಸ್ಪೆಷಲ್ ರೋಲ್

ಒಂದು ಕಾಲದಲ್ಲಿ ಕಿಂಗ್ ನಾಗಾರ್ಜುನ, ನಟಸಿಂಹ ಬಾಲಯ್ಯ ಜೊತೆ ರೊಮ್ಯಾನ್ಸ್ ಮಾಡಿದ್ದ ಸ್ಟಾರ್ ನಟಿ.. ದೊಡ್ಡ ಗ್ಯಾಪ್ ನಂತರ ಮತ್ತೆ ಟಾಲಿವುಡ್‌ಗೆ ಕಾಲಿಡುತ್ತಿದ್ದಾರೆ. ಸೂರ್ಯ ಸಿನಿಮಾ ಮೂಲಕ ಕಮ್‌ಬ್ಯಾಕ್ ಮಾಡಲಿರುವ ಆ ಹಿರಿಯ ನಟಿ ಯಾರು ಗೊತ್ತಾ?

Read Full Story

12:57 PM (IST) Oct 30

ಮದುವೆಗೆ ಒಂದು ದಿನ ಮುಂಚೆ ಮುನ್ನವೇ ವಧುವಿನ ಬಾಳಲ್ಲಿ ವಿಧಿಯಾಟ! ಹೃದಯಾಘಾತಕ್ಕೆ ಬಲಿಯಾದ ಮಧುಮಗಳು

ಅಜ್ಜಂಪುರ ತಾಲೂಕಿನ ಸೊಲ್ಲಾಪುರ ಗ್ರಾಮದ 24 ವರ್ಷದ ಶೃತಿ, ಮದುವೆಗೆ ಕೇವಲ ಒಂದು ದಿನ ಬಾಕಿ ಇರುವಾಗ ಅಕಾಲಿಕವಾಗಿ ಮೃತಪಟ್ಟಿದ್ದಾರೆ. ಲೋ ಬಿಪಿ ಮತ್ತು ಹೃದಯಾಘಾತದಿಂದ ಸಾವು ಸಂಭವಿಸಿರಬಹುದೆಂದು ಶಂಕಿಸಲಾಗಿದ್ದು, ಮದುವೆ ಮನೆಯಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. 

Read Full Story

12:55 PM (IST) Oct 30

ಬೆಂಗಳೂರಿನ ಈ ಏರಿಯಾದ ದೋಸೆಗೂ ಪಿಎಚ್​ಡಿ ಡಿಗ್ರಿ! ಇಲ್ಲಿ ಮಕ್ಕಳು ಹುಟ್ಟಿದ ತಕ್ಷಣ ಅಳೋದೇ ಇಲ್ಲರೀ!

ಬೆಂಗಳೂರಿನ ಪ್ರಸಿದ್ಧ ಬಡಾವಣೆ ಮಲ್ಲೇಶ್ವರದ ಬಗ್ಗೆ ಹಾಸ್ಯನಟಿ ಸೌಮ್ಯಾ ವೇಣುಗೋಪಾಲ್ ಅವರ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ, ಮಲ್ಲೇಶ್ವರದ ಜನರ ಶಿಕ್ಷಣ, ಆಹಾರ ಪದ್ಧತಿ ಮತ್ತು ಜೀವನಶೈಲಿಯನ್ನು ತಮಾಷೆಯಾಗಿ ವಿವರಿಸಲಾಗಿದೆ.  

Read Full Story

12:27 PM (IST) Oct 30

ರಾಜ್ಯದಲ್ಲಿ ಒಳ ಮೀಸಲಾತಿ ಸಮರ್ಪಕ ಜಾರಿಗೆ ಕಾಯ್ದೆ ರಚನೆ - ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಒಳ ಮೀಸಲಾತಿ ಅನುಷ್ಠಾನಗೊಳಿಸುವ ಸಂಬಂಧ ನೂತನ ಕಾಯ್ದೆ ಜಾರಿಗೆ ಸರ್ಕಾರದ ಮುಂದಾಗಿದ್ದು, ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಕರಡು ಮಸೂದೆ ಮಂಡಿಸಲು ನಿರ್ಧರಿಸಲಾಗಿದೆ.

Read Full Story

12:25 PM (IST) Oct 30

ನಮ್​ ಗಗನಾಗೆ ಭಾರಿ ಮೋಸ ಆಗೋಯ್ತು - Bigg Boss ಗಿಲ್ಲಿ-ಕಾವ್ಯಾ ಜೋಡಿ ನೋಡಿ ಫ್ಯಾನ್ಸ್​ ಭಾರಿ ಅಸಮಾಧಾನ!

ಬಿಗ್ ಬಾಸ್ ಮನೆಯಲ್ಲಿ ಕಾವ್ಯಾ ಶೈವ ಜೊತೆಗಿನ ಗಿಲ್ಲಿ ನಟನ ಸ್ನೇಹ ಚರ್ಚೆಯಾಗುತ್ತಿರುವಾಗಲೇ, ಗಗನಾ ಜೊತೆಗಿನ ಅವರ ರೊಮ್ಯಾಂಟಿಕ್ ವಿಡಿಯೋ ವೈರಲ್ ಆಗಿದೆ. ಈ ಹಿಂದೆ ಮಹಾನಟಿ ಶೋನಿಂದಲೂ ಫೇಮಸ್ ಆಗಿದ್ದ ಈ ಜೋಡಿಯ ವಿಡಿಯೋ ನೋಡಿ, ನೆಟ್ಟಿಗರು ಗಗನಾಗೆ ಮೋಸ ಮಾಡುತ್ತಿದ್ದೀರಾ ಎಂದು ಕಾಲೆಳೆಯುತ್ತಿದ್ದಾರೆ.

Read Full Story

12:02 PM (IST) Oct 30

BBK 12 - ಆಟದಲ್ಲಿ ಮೋಸ ಮಾಡಿ ವೀಕ್ಷಕರ ಕೆಂಗಣ್ಣಿಗೆ ಗುರಿಯಾದ ಸೂರಜ್;‌ ರಾಶಿಕಾಗೋಸ್ಕರ ಹೀಗೆ ಮಾಡಿದ್ರಾ? ಛೇ..

BBK 12 Updates: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಸೂರಜ್‌ ಸಿಂಗ್‌ ವೈಲ್ಡ್‌ಕಾರ್ಡ್‌ ಎಂಟ್ರಿ ಕೊಟ್ಟಾಕ್ಷಣ ವೀಕ್ಷಕರು ಖುಷಿಪಟ್ಟಿದ್ದರು. ತನಗೆ ಕ್ಯಾಪ್ಟನ್ಸಿ ಟಾಸ್ಕ್‌ ಆಡುವ ಅರ್ಹತೆ ಸಿಕ್ಕಿದ್ದರೂ ಕೂಡ, ಅದನ್ನು ಟೀಂಗೆ ಕೊಟ್ಟಿದ್ದ ಸೂರಜ್‌ ಈಗ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Read Full Story

12:00 PM (IST) Oct 30

ಸ್ನೇಹಿತೆಯ ಮನೆಯಲ್ಲೇ ಕಳ್ಳತನ ಮಾಡಿ ಮಹಿಳಾ ಪೊಲೀಸ್ ಅಧಿಕಾರಿ ಪರಾರಿ - ಸಿಸಿಟಿವಿಯಲ್ಲಿ ದೃಶ್ಯ ಸೆರೆ

Female DSP steals Money:  ಭೋಪಾಲ್‌ನಲ್ಲಿ, ಹಿರಿಯ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಸ್ನೇಹಿತೆಯ ಮನೆಯಿಂದಲೇ ₹2 ಲಕ್ಷ ನಗದು ಮತ್ತು ಮೊಬೈಲ್ ಫೋನ್ ಕದ್ದ ಪರಾರಿಯಾಗಿದ್ದಾರೆ. ಅವರ  ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪ್ರಕರಣ ದಾಖಲಾಗಿದೆ.

Read Full Story

11:58 AM (IST) Oct 30

ಸುಳ್ಳು ಸುದ್ದಿಗೆ ಬ್ರೇಕ್‌ ಹಾಕಿದ ಟಾಕ್ಸಿಕ್‌ ಚಿತ್ರತಂಡ - ಕೊನೆಗೂ ಯಶ್ ಸಿನಿಮಾದ ಚಿತ್ರೀಕರಣ ಪೂರ್ಣ!

ಯಶ್‌ ಅಭಿನಯದ ‘ಟಾಕ್ಸಿಕ್‌’ ಚಿತ್ರದ ವಿಎಫ್‌ಎಕ್ಸ್‌ ಕೆಲಸ ನಡೆಯುತ್ತಿದ್ದು, ಸದ್ಯದಲ್ಲೇ ಈ ಕೆಲಸ ಕೂಡ ಪೂರ್ಣಗೊಳ್ಳಲಿದೆ ಎನ್ನುವ ಮಾಹಿತಿ ಬಂದಿದೆ. ಟಾಕ್ಸಿಕ್‌ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗುವ ಸಾಧ್ಯತೆಗಳಿವೆ.

Read Full Story

11:54 AM (IST) Oct 30

ಒಂದೇ ಒಂದು ಡೈಲಾಗ್ ಹೊಡೆದು ಅಶ್ವಿನಿ ಗೌಡ ಬಾಯಿ ಮುಚ್ಚಿಸಿದ ರಕ್ಷಿತಾ ಶೆಟ್ಟಿ; ರಾಜಮಾತೆ ಫುಲ್ ಸೈಲೆಂಟ್

Rakshitha Shetty Vs Ashwini Gowda: ಬಿಗ್‌ಬಾಸ್ ಮನೆಯ ಬಿಬಿ ಕಾಲೇಜು ಟಾಸ್ಕ್‌ನಲ್ಲಿ, ಕ್ಯಾಪ್ಟನ್ಸಿ ಸ್ಪರ್ಧಿಯನ್ನು ಆಯ್ಕೆ ಮಾಡಲು ನೀಲಿ ತಂಡ ವಿಫಲವಾಯಿತು. ಇದನ್ನು ಸಂಭ್ರಮಿಸಿದ ಕೆಂಪು ತಂಡದ ರಕ್ಷಿತಾ ಶೆಟ್ಟಿ, ತನ್ನನ್ನು ಪ್ರಶ್ನಿಸಿದ ಅಶ್ವಿನಿ ಗೌಡರಿಗೆ  ಖಡಕ್ ಉತ್ತರ ನೀಡಿ ಬಾಯಿ ಮುಚ್ಚಿಸಿದರು.

Read Full Story

11:36 AM (IST) Oct 30

ಈ ಬಾರಿಯ Bigg Bossನಲ್ಲಿ ಗೆಲುವು ಯಾರಿಗೆ? ಸ್ಪರ್ಧಿ ಅಶ್ವಿನಿ ಎಸ್​.ಎನ್​​ ಕೊಟ್ಟೇ ಬಿಟ್ಟರು ಹಿಂಟ್​!

ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆಗಿರುವ ಸ್ಪರ್ಧಿ ಅಶ್ವಿನಿ S.N, ಸೀಸನ್ 12ರ ಸಂಭಾವ್ಯ ವಿಜೇತರ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅವರ ಪ್ರಕಾರ, ಗಿಲ್ಲಿ ನಟ ಅವರಿಗೆ ಗೆಲ್ಲುವ ಅರ್ಹತೆ ಇದ್ದು, ಜೊತೆಗೆ ಸಹ ಸ್ಪರ್ಧಿಗಳಾದ ರಕ್ಷಿತಾ ಮತ್ತು ಮಲ್ಲಮ್ಮ ಅವರ ಆಟದ ವೈಖರಿಯ ಬಗ್ಗೆಯೂ ಮಾತನಾಡಿದ್ದಾರೆ.

Read Full Story

More Trending News