- Home
- Entertainment
- TV Talk
- BBK 12: ದೊಡ್ಡ ಮೋಸ ಮಾಡಿ ವೀಕ್ಷಕರ ಕೆಂಗಣ್ಣಿಗೆ ಗುರಿಯಾದ ಸೂರಜ್; ರಾಶಿಕಾಗೋಸ್ಕರ ಹೀಗೆ ಮಾಡಿದ್ರಾ? ಛೇ..
BBK 12: ದೊಡ್ಡ ಮೋಸ ಮಾಡಿ ವೀಕ್ಷಕರ ಕೆಂಗಣ್ಣಿಗೆ ಗುರಿಯಾದ ಸೂರಜ್; ರಾಶಿಕಾಗೋಸ್ಕರ ಹೀಗೆ ಮಾಡಿದ್ರಾ? ಛೇ..
BBK 12 Updates: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಸೂರಜ್ ಸಿಂಗ್ ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟಾಕ್ಷಣ ವೀಕ್ಷಕರು ಖುಷಿಪಟ್ಟಿದ್ದರು. ತನಗೆ ಕ್ಯಾಪ್ಟನ್ಸಿ ಟಾಸ್ಕ್ ಆಡುವ ಅರ್ಹತೆ ಸಿಕ್ಕಿದ್ದರೂ ಕೂಡ, ಅದನ್ನು ಟೀಂಗೆ ಕೊಟ್ಟಿದ್ದ ಸೂರಜ್ ಈಗ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ನಿಯಮ ಏನು?
ಬಿಗ್ ಬಾಸ್ ಮನೆಯಲ್ಲಿ ಕಾಲೇಜು ಟಾಸ್ಕ್ ವೇಳೆ ಎರಡು ಟೀಂ ಮಾಡಲಾಗಿತ್ತು. ಸೂರಜ್ ಹಾಗೂ ರಾಶಿಕಾ ಶೆಟ್ಟಿ ಅವರು ವಿರುದ್ಧದ ಟೀಂನಲ್ಲಿದ್ದರು. ಎರಡು ಟೀಂ ನಡುವೆ ಕಬಡ್ಡಿ ಆಟ ಇತ್ತು. ಎರಡು ತಂಟ ಆಟ ಆಡಿ ಟೈ ಆಗಿತ್ತು. ಹೀಗಾಗಿ ಬಿಗ್ ಬಾಸ್ ಟೈ ಬ್ರೇಕರ್ ರೈಡ್ ಮಾಡಬೇಕು ಎಂದಿದ್ದರು. ಯಾರು ಡಿಫೆಂಡ್ ಮಾಡ್ತಾರೆ? ಯಾರು ರೈಡ್ ಮಾಡಬೇಕು ಎನ್ನೋದು ಕ್ಯಾಪ್ಟನ್ ರಘು ನಿರ್ಧಾರ ಆಗಿತ್ತು.
ಆಟದಲ್ಲಿ ಏನು ಮಾಡಿದ್ರು?
ಅಭಿಷೇಕ್, ಸೂರಜ್ ಡಿಫೆಂಡ್ ಮಾಡಬೇಕು, ಧನುಷ್ ರೈಡ್ ಮಾಡ್ತಾರೆ. ಅಭಿಷೇಕ್ ಹಾಗೂ ಸೂರಜ್ ಅವರು ಹಿಂದೆ ಇರಬೇಕು, ಧನುಷ್ ಅವರು ತಮ್ಮನ್ನು ಮುಟ್ಟದೆ ಗೆರೆ ದಾಟದಂತೆ ನೋಡಿಕೊಳ್ಳಬೇಕು. ಅಭಿಷೇಕ್ ಅವರು ಮಧ್ಯ ಗೆರೆಯಿಂದ ಹಿಂದೆ ಇರಬೇಕು, ಆದರೆ ಸೂರಜ್ ಅವರು ಮಧ್ಯ ಗೆರೆಯ ಬಳಿ ಹೋದರು, ಆಗ ಧನುಷ್ ಅವರು ಸೂರಜ್‌ರನ್ನು ಮುಟ್ಟಿ ಮಧ್ಯ ಗೆರೆ ದಾಟಿದರು. ರಾಶಿಕಾ ಟೀಂ ಗೆಲ್ಲಬೇಕು ಎಂದು ಸೂರಜ್ ಈ ರೀತಿ ಮಾಡಿದರು ಎಂಬ ಆರೋಪ ಕೇಳಿ ಬರುತ್ತಿದೆ.
ಸೂರಜ್ ಆಟ ಸರಿ ಇಲ್ಲ
ಕಾವ್ಯ ಶೈವ ಕೂಡ ಸೂರಜ್ ಬಳಿ ಆಟದ ಬಗ್ಗೆ ಮಾತನಾಡಿದ್ದಾರೆ. “ನೀನು ಗೆರೆ ಹತ್ತಿರ ಹೋದೆ, ಇದರಿಂದಲೇ ಔಟ್ ಆದೆ, ಯಾಕೆ ಹೀಗೆ ಮಾಡಿದೆ?” ಎಂದು ಪ್ರಶ್ನೆ ಮಾಡಿದ್ದಾರೆ. ಅಭಿಷೇಕ್ ದೂರ ಇದ್ದರೂ ಕೂಡ, ಸೂರಜ್ ಮಾತ್ರ ನನ್ನ ಮುಟ್ಟಿ ಔಟ್ ಮಾಡು ಎನ್ನೋ ಥರ ಆಡಿದ್ರು. ಈ ಕ್ಲಿಪ್ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿದೆ.
ರಾಶಿಕಾಗೆ ಸಪೋರ್ಟ್ ಯಾಕೆ?
ಇನ್ನು ಸೂರಜ್ ಹಾಗೂ ರಾಶಿಕಾ ಅವರು ಬೇರೆ ಬೇರೆ ಟೀಂನಲ್ಲಿದ್ದಾರೆ. ರಾಶಿಕಾಗೆ ಸ್ಟುಡೆಂಟ್ ಆಫ್ ದಿ ವೀಕ್ ಪಟ್ಟ ಸಿಗದಿರೋಕೆ ರಾಶಿಕಾ ಕಾರಣ. ಬೇರೆ ಟೀಂನಲ್ಲಿದ್ದರೂ ಕೂಡ ಸೂರಜ್ ಅವರು ಬಂದು, “ರಾಶಿ ನೀನು ಮಾತನಾಡಬೇಕು, ನೀನು ಬಿಟ್ಟುಕೊಡಬಾರದು” ಎಂದೆಲ್ಲ ಸಲಹೆ ನೀಡಿದ್ದರು.
ಸೂರಜ್ ಮೇಲೆ ಬೇಸರ
ತನ್ನ ಸೌಂದರ್ಯದಿಂದಲೇ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದ ಸೂರಜ್ ಅವರು ರಾಶಿಕಾ ಶೆಟ್ಟಿ ಜೊತೆ ಸೇರಿ ಆಟವನ್ನು ಹಾಳು ಮಾಡಿಕೊಂಡರು ಎಂದು ವೀಕ್ಷಕರು ಹೇಳುತ್ತಿದ್ದಾರೆ. ರಾಶಿಕಾ ಆಟದ ಬಗ್ಗೆ ವೀಕ್ಷಕರಿಗೆ ಅಸಮಾಧಾನ ಇದೆ. ಅಂಥದರಲ್ಲಿ ಅವರ ಜೊತೆ ಸೂರಜ್ ಸೇರಿರೋದು, ಲವ್, ಸ್ನೇಹ ಎಂದು ದಿನ ಕಳೆಯುತ್ತಿರೋದು ವೀಕ್ಷಕರಿಗೆ ಬೇಸರ ತಂದಿದೆ.