- Home
- Entertainment
- TV Talk
- ಈ ಬಾರಿಯ Bigg Bossನಲ್ಲಿ ಗೆಲುವು ಯಾರಿಗೆ? ಸ್ಪರ್ಧಿ Ashwini SN ಕೊಟ್ಟೇ ಬಿಟ್ಟರು ಹಿಂಟ್!
ಈ ಬಾರಿಯ Bigg Bossನಲ್ಲಿ ಗೆಲುವು ಯಾರಿಗೆ? ಸ್ಪರ್ಧಿ Ashwini SN ಕೊಟ್ಟೇ ಬಿಟ್ಟರು ಹಿಂಟ್!
ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆಗಿರುವ ಸ್ಪರ್ಧಿ ಅಶ್ವಿನಿ S.N, ಸೀಸನ್ 12ರ ಸಂಭಾವ್ಯ ವಿಜೇತರ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅವರ ಪ್ರಕಾರ, ಗಿಲ್ಲಿ ನಟ ಅವರಿಗೆ ಗೆಲ್ಲುವ ಅರ್ಹತೆ ಇದ್ದು, ಜೊತೆಗೆ ಸಹ ಸ್ಪರ್ಧಿಗಳಾದ ರಕ್ಷಿತಾ ಮತ್ತು ಮಲ್ಲಮ್ಮ ಅವರ ಆಟದ ವೈಖರಿಯ ಬಗ್ಗೆಯೂ ಮಾತನಾಡಿದ್ದಾರೆ.

ನಿರ್ಣಾಯಕ ಹಂತ
ಬಿಗ್‌ಬಾಸ್ ಸೀಸನ್ 12 (Bigg Boss 12) ಈಗ ನಿರ್ಣಾಯಕ ಹಂತ ತಲುಪಿರುವ ಹಿನ್ನೆಲೆಯಲ್ಲಿ, ಗೆಲುವು ಯಾರಿಗೆ, ಸೋಲು ಯಾರಿಗೆ ಎನ್ನುವ ಲೆಕ್ಕಾಚಾರ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿಯೇ ನಡೆಯುತ್ತಿದೆ.
ಮೂವರು ಔಟ್- ಮೂವರು ಇನ್
ಇದಾಗಲೇ ಮೂವರು ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದು, ಮೂವರು ವೈಲ್ಡ್ಕಾರ್ಡ್ ಎಂಟ್ರಿ ಕೊಟ್ಟಾಗಿದೆ. ಇರುವ ಜನರಲ್ಲಿ ಹೊರಗೆ ಯಾರು ಹೋಗಬೇಕು, ಫೈನಲ್ವರೆಗೆ ಯಾರು ಇರಬೇಕು ಎಂದು ಇದಾಗಲೇ ಹಲವರು ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
ಅಶ್ವಿನಿ ಅಭಿಪ್ರಾಯ
ಇದೀಗ ಎಲಿಮಿನೇಟ್ ಆಗಿರೋ ಸ್ಪರ್ಧಿ ಅಶ್ವಿನಿ SN ಅವರು ಇಲ್ಲಿಯವರೆಗಿನ ಸ್ಪರ್ಧೆಯ ಬಗ್ಗೆ ವೀಕ್ಷಿಸಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಯಾರು ವಿನ್ ಆಗ್ತಾರೆ?
ಅಶ್ವಿನಿ ಅವರ ಪ್ರಕಾರ, ಗಿಲ್ಲಿ ನಟ ವಿಜೇತರಾಗುವ ಸಾಧ್ಯತೆ ಇದೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಅವರು ಹೇಳಿದ್ದಾರೆ. ವೈಲ್ಡ್ಕಾರ್ಡ್ ಎಂಟ್ರಿಗಳ ಬಗ್ಗೆ ನನಗೆ ಗೊತ್ತಿಲ್ಲ. ಏಕೆಂದರೆ ಅವರು ನಾನು ಹೊರಗೆ ಬಂದ ಮೇಲೆ ಬಂದವರು. ಆದರೆ ನಾನು ಇರುವಷ್ಟು ದಿನಗಳ ಬಗ್ಗೆ ಹೇಳುವುದಾದರೆ ಗಿಲ್ಲಿ ನಟ ಅವರಿಗೆ ಎಲ್ಲ ರೀತಿಯ ಅರ್ಹತೆ ಇದೆ ಎಂದಿದ್ದಾರೆ.
ಯಾರು ಬರಬಾರದು?
ಯಾರು ಫೈನಲ್ಗೆ ಬರಬಾರದು ಎಂಬ ಪ್ರಶ್ನೆಗೆ ಅಶ್ವಿನಿ ಅವರು ಜಾಣ್ಮೆಯಿಂದ ನುಣುಚಿಕೊಂಡಿದ್ದಾರೆ. ನನಗೆ ಯಾರೂ ಹಾಗೆ ಅನ್ನಿಸಲಿಲ್ಲ. ಕೆಲವೇ ದಿನ ಇದ್ದ ಕಾರಣ, ನಾನು ಆ ಬಗ್ಗೆ ಯೋಚನೆ ಮಾಡಲಿಲ್ಲ ಎಂದಿದ್ದಾರೆ.
ರಕ್ಷಿತಾ ಬಗ್ಗೆ
ಇದೇ ವೇಳೆ ರಕ್ಷಿತಾ ಅವರಿಗೆ ಕನ್ನಡ ಬರುವುದಿಲ್ಲ ಎಂದು ನಾಟಕವಾಡುತ್ತಿದ್ದಾರೆ ಎನ್ನುವ ಆರೋಪದ ಬಗ್ಗೆಯೂ ಮಾತನಾಡಿರುವ ಅಶ್ವಿನಿ, ಅದು ಸರಿಯಲ್ಲ ಎಂದಿದ್ದಾರೆ. ಯಾರದ್ದೇ ಮಾತೃಭಾಷೆ ಕನ್ನಡ ಆಗಿದ್ದರೆ, ಅವರು ತುಂಬಾ ದಿನ ಫೇಕ್ ಮಾಡಲು ಆಗುವುದಿಲ್ಲ. ಒಂದಿಲ್ಲೊಂದು ದಿನ ಅದು ಬಹಿರಂಗವಾಗಲೇಬೇಕು. ಆದ್ದರಿಂದ ರಕ್ಷಿತಾ ಶೆಟ್ಟಿ ಅವರು ಫೇಕ್ ಮಾಡುತ್ತಿದ್ದಾರೆ ಎಂದು ನನಗೆ ಅನ್ನಿಸುತ್ತಿಲ್ಲ ಎಂದು ಹೇಳಿದ್ದಾರೆ ಅಶ್ವಿನಿ SN.
ಮಲ್ಲಮ್ಮ ಬಗ್ಗೆ...
ಮಲ್ಲಮ್ಮ ಕುರಿತು ಹೇಳಿರುವ ಅಶ್ವಿನಿ ಅವರು, ಮಲ್ಲಮ್ಮನವರು ತುಂಬಾ ಚೆನ್ನಾಗಿ ಆಡುತ್ತಿದ್ದಾರೆ. ಯಾರ ತಂಟೆಗೂ ಅವರು ಹೋಗುವುದಿಲ್ಲ. ಯಾರಾದರೂ ಅವರ ತಂಟೆಗೆ ಬಂದರೆ ಬಿಡುವುದಿಲ್ಲ. ಅವರು ತುಂಬಾ ಒಳ್ಳೆಯ ಸ್ಪರ್ಧಿ ಎಂದಿದ್ದಾರೆ.