Veteran Actress Umashree Conferred Dr. Rajkumar Award 2019ರ ಸಾಲಿನ ಡಾ. ರಾಜ್‌ಕುಮಾರ್, ಡಾ. ವಿಷ್ಣುವರ್ಧನ್ ಹಾಗೂ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗಳನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. 

ಬೆಂಗಳೂರು (ಅ.30): ರಾಜ್ಯ ಸರ್ಕಾರದಿಂದ ಕೊಡಮಾಡುವ ಡಾ.ರಾಜ್‌ಕುಮಾರ್‌ ಪ್ರಶಸ್ತಿ, ಡಾ.ವಿಷ್ಣುವರ್ಧನ್‌ ಪ್ರಶಸ್ತಿ ಹಾಗೂ ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿಗೆ ಹೆಸರು ಪ್ರಕಟ ಮಾಡಲಾಗಿದೆ. ಹಿರಿಯ ನಟಿ ಉಮಾಶ್ರೀ ಅವರಿಗೆ 2019ರ ಸಾಲಿನ ಡಾ. ರಾಜ್‌ಕುಮಾರ್‌ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅದರೊಂದಿಗೆ ನಿರ್ದೇಶಕ ಎನ್‌ಆರ್‌ ನಂಜುಂಡೇಗೌಡ ಅವರಿಗೆ ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಅದರೊಂದಿಗೆ ರಿಚರ್ಡ್‌ ಕ್ಯಾಸ್ಟಲಿನೋ ಅವರಿಗೆ ಡಾ. ವಿಷ್ಣುವರ್ಧನ್‌ ಪ್ರಶಸ್ತಿ ಪ್ರಕಟಿಸಲಾಗಿದೆ. ಈ ಮೂರೂ ಪ್ರಶಸ್ತಿಗಳು ಐದು ಲಕ್ಷ ರೂಪಾಯಿ ನಗದು ಹಾಗೂ ಐವತ್ತು ಗ್ರಾಮ್‌ ಚಿನ್ನದ ಪದಕ ಹೊಂದಿದೆ.

ಇದೇ ವೇಳೆ ಬೆಳ್ಳಿ ತೊರೆ ಸಿನಿಮಾ ಪ್ರಬಂಧ ಹಾಗೂ ಗುಳೆ ಕಿರು ಚಿತ್ರಕ್ಕೂ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಬೆಳ್ಳಿ ತೊರೆ ಸಿನಿಮಾಗೆ ಉತ್ತಮ ಸಿನಿಮಾ ಪ್ರಬಂಧ ಎಂದು ಪ್ರಶಸ್ತಿ ನೀಡಲಾಗಿದ್ದರೆ, ಗುಳೆ ಸಿನಿಮಾಗೆ ಉತ್ತಮ ಕಿರು ಚಿತ್ರ ಎಂದು ಪ್ರಶಸ್ತಿ ನೀಡಲಾಗಿದೆ. ಪ್ರಬಂಧ ಬರೆದ ಲೇಖಕರು ಹಾಗೂ ಕಿರುಚಿತ್ರ ನಿರ್ದೇಶನ ಮಾಡಿದ ನಿರ್ದೇಶಕರಿಗೆ ತಲಾ ಇಪ್ಪತ್ತೈದು ಸಾವಿರ ನಗದು ಐವತ್ತು ಗ್ರಾಂ ಬೆಳ್ಳಿ ಪದಕ ಬಹುಮಾನ ನೀಡಲಾಗುತ್ತದೆ.