ಹಾಸನ: ಈ ಬಾರಿಯ ಭಾರೀ ಮಳೆಯಿಂದ ರಾಜ್ಯದಾದ್ಯಂತ ಸುಮಾರು 15 ಲಕ್ಷ 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಶೀಘ್ರದಲ್ಲೆ ರೈತರ ಖಾತೆಗಳಿಗೆ ಜಮೆ ಮಾಡಲಾಗುವುದು ಎಂದು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ವಿಶ್ವಾಸ ವ್ಯಕ್ತಪಡಿಸಿದರು. ನಗರದ ಯೂತ್ ಹಾಸ್ಟೆಲ್‌ನಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯ ಸರ್ಕಾರದಿಂದ 2798 ಕೋಟಿ ರು. ಬೆಳೆ ಪರಿಹಾರ ಅಂದಾಜಿಸಿದ್ದು, 200 ಕೋಟಿಗೂ ಹೆಚ್ಚು ಪರಿಹಾರ ಈಗಾಗಲೇ ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ. ಉಳಿದ ರೈತರಿಗೂ ಶೀಘ್ರದಲ್ಲೇ ಪರಿಹಾರ ಹಣ ನೇರವಾಗಿ ವರ್ಗಾಯಿಸಲಾಗುವುದು.

10:58 PM (IST) Nov 02
09:45 PM (IST) Nov 02
ಕಳೆದ ನಾಲ್ಕು ವಾರಗಳಿಂದ ತೆರೆಮರೆಯಲ್ಲಿದ್ದ ಮೂವರು ಸ್ಪರ್ಧಿಗಳನ್ನು ಕಿಚ್ಚ ಸುದೀಪ್ ಸ್ವಾಗತಿಸಿದ್ದಾರೆ. ಈ ವಾರ ಧನುಷ್ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದು, ಮನೆಯ ಲವ್ ಬರ್ಡ್ಸ್ ಸೂರಜ್-ರಾಶಿಕಾ ಪ್ರೀತಿಯ ವಿಚಾರವನ್ನು ಸುದೀಪ್ ಬಯಲು ಮಾಡಿದ್ದಾರೆ.
08:46 PM (IST) Nov 02
ಟಗರಿಗೆ ಠಕ್ಕರ್ ಕೊಡೋರು ಯಾರು ಇಲ್ಲ, ಸಿದ್ದರಾಮಯ್ಯ ಸಿಎಂ ಎಂದು ಸಂದೇಶ ರವಾನಿಸಿದ ಜಮೀರ್, ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ ಎಂದಿದ್ದಾರೆ. ಇಷ್ಟೇ ಅಲ್ಲ 2028ರ ವರೆಗೆ ಸಿಎಂ ಬದಲಾವಣೆಯೂ ಇಲ್ಲ ಎಂದಿದ್ದಾರೆ.
05:14 PM (IST) Nov 02
05:13 PM (IST) Nov 02
Man wears pan instead of helmet: ಬೆಂಗಳೂರಿನಲ್ಲಿ ಹಿಂಬದಿ ಸವಾರನೊಬ್ಬ ಟ್ರಾಫಿಕ್ ಚಲನ್ ತಪ್ಪಿಸಿಕೊಳ್ಳಲು ಹೆಲ್ಮೆಟ್ ಬದಲು ತಲೆಗೆ ಬಾಣಲೆ ಧರಿಸಿ ಸಂಚರಿಸಿದ್ದಾನೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
04:38 PM (IST) Nov 02
04:22 PM (IST) Nov 02
Bigg Boss Show: ಬಿಗ್ ಬಾಸ್ ಮನೆಯಲ್ಲಿ ಕೆಲವೊಮ್ಮೆ ಸಣ್ಣ ವಿಷಯಕ್ಕೂ ನಗುತ್ತಾರೆ, ಜಗಳ ಆಡುತ್ತಾರೆ. ಯಾವ ಸಂದರ್ಭ ಎನ್ನೋದು ಮ್ಯಾಟರ್ ಆಗುವುದು. ನನಹೆ ಹಾಗಂದ್ರು, ಹೀಗಂದ್ರು ಎಂದು ಜಗಳ ಆಡೋರು ಈಗ, ಚಪ್ಪಲಿಯಲ್ಲಿ ಹೊಡೆದರೂ ಕೂಡ ನಕ್ಕಿದ್ದಾರೆ. ಎಂಥ ದುರಂತ ನೋಡಿ…ತಮಾಷೆಗೆ ಲಿಮಿಟ್ ಇಲ್ಲವಾ?
03:44 PM (IST) Nov 02
Father Vil: ಬರುವಾಗ ಬೆತ್ತಲೆ, ಹೋಗುವಾಗ ಬೆತ್ತಲೆ ಎಂಬ ಮಾತಿದೆ. ಅಪ್ಪನೊಬ್ಬ ತೀರಿಕೊಳ್ಳುವ ಮುಂಚೆ, ವಿಲ್ ಬರೆದಿದ್ದನು. ಅಂತ್ಯಕ್ರಿಯೆ ಮಾಡುವ ಮುನ್ನ ಮಗ ಆ ವಿಲ್ ಓದಿದ್ದಾನೆ. ಆ ವಿಲ್ ಓದಿ ಕಣ್ಣೀರು ಹಾಕಿದ್ದಾನೆ. ಆ ಪತ್ರದಲ್ಲಿ ಏನಿತ್ತು?
03:13 PM (IST) Nov 02
Bigg Boss Kannada Season 12 Episode Update: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟ ಒಂದೇ ವಾರಕ್ಕೆ ಸೂರಜ್ ಸಿಂಗ್, ರಾಶಿಕಾ ಶೆಟ್ಟಿ ಅವರು ಆತ್ಮೀಯತೆಯಿಂದ ಇದ್ದರು. ಇವರಿಬ್ಬರ ಬಾಂಡಿಂಗ್ ಬಗ್ಗೆ ಇಡೀ ಮನೆ ಹಾಗೂ ವೀಕ್ಷಕರು ಕೂಡ ಮಾತನಾಡಿದ್ದುಂಟು.
02:39 PM (IST) Nov 02
ಬಿಗ್ ಬಾಸ್ ಕನ್ನಡ 12 ಶೋನಲ್ಲಿ ರಕ್ಷಿತಾ ಶೆಟ್ಟಿ ಹೆಸರು ಜೋರಾಗಿ ಕೇಳಿ ಬರುತ್ತಿದೆ. ಜಾಹ್ನವಿ, ಅಶ್ವಿನಿ ಗೌಡ, ರಿಷಾ ಗೌಡ, ಅಶ್ವಿನಿ ಗೌಡ ಜೊತೆ ರಕ್ಷಿತಾ ಜಗಳ ಆಡಿದ್ದರು. ಈಗ ರಕ್ಷಿತಾ ಕಲಾವಿದರಿಗೆ ಅವಮಾನ ಮಾಡಿದ್ದಾರೆ, ದೂರು ಕೊಡ್ತೀನಿ ಎಂದು ರಂಗಭೂಮಿ ಕಲಾವಿದೆ ಕುಶಲಾ ಎನ್ನುವವರು ಹೇಳಿದ್ದಾರೆ.
01:55 PM (IST) Nov 02
ಬಾಹುಬಲಿಯಲ್ಲಿ ಶಿವಗಾಮಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಮಹೇಂದ್ರ ಬಾಹುಬಲಿಯನ್ನು ಕಾಪಾಡುತ್ತಾಳೆ. ಆ ದೃಶ್ಯಕ್ಕೆ 48 ವರ್ಷಗಳ ಹಿಂದೆ ಆಂಧ್ರಪ್ರದೇಶದಲ್ಲಿ ನಡೆದ ನಿಜವಾದ ಘಟನೆಯೇ ಸ್ಫೂರ್ತಿ ಅನ್ನೋದು ನಿಮಗೆ ಗೊತ್ತಾ?
01:29 PM (IST) Nov 02
Bigg Boss Kannada Season 12 Updates: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಕಬಡ್ಡಿ ಆಟ ಆಡಿಸಲಾಗಿತ್ತು. ರಕ್ಷಿತಾ ಮೇಲೆ ಸ್ಪಂದನಾ ಸೋಮಣ್ಣ, ರಾಶಿಕಾ ಶೆಟ್ಟಿ ಬಿದ್ದು ಹೊರಳಾಡಿದ್ದರು. ಆ ವೇಳೆ ರಕ್ಷಿತಾ ಅವರ ಬಟ್ಟೆ ಆ ಕಡೆ ಈ ಕಡೆ ಆಯ್ತು. ಇದರಿಂದ ಮತ್ತೆ ಗೇಮ್ ಆಡಿಸಿದರು. ಆಮೇಲೆ ಏನಾಯಿತು?
01:26 PM (IST) Nov 02
Richmond Circle fatal crash: ಬೆಂಗಳೂರಿನ ರಿಚ್‌ಮಂಡ್ ಸರ್ಕಲ್‌ನಲ್ಲಿ ರೋಗಿಗಳಿಲ್ಲದೇ ಇದ್ದರೂ ಸೈರನ್ ಹಾಕಿಕೊಂಡು ವೇಗವಾಗಿ ಬಂದ ಆಂಬುಲೆನ್ಸ್ ರೆಡ್ ಸಿಗ್ನಲ್ ಜಂಪ್ ಮಾಡಿ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ಸ್ಕೂಟರ್‌ನಲ್ಲಿದ್ದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
01:23 PM (IST) Nov 02
ಶ್ರೀಲಂಕಾದಿಂದ ತಮಿಳು ನಿರಾಶ್ರಿತರಾಗಿ ಕರ್ನಾಟಕಕ್ಕೆ ಬಂದು ಪ್ರಸಕ್ತ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಮರ್ಧಾಳದಲ್ಲಿ ನೆಲೆಸಿದ್ದಾರೆ ಕನ್ನಡ ಪುಸ್ತಕ ಮಾರಾಟದ ಪ್ರೇಮಿ ರವಿಚಂದ್ರ. ಇವರ ತಂದೆ, ತಾಯಿ ಇಲ್ಲಿಗೆ ನಿರಾಶ್ರಿತರಾಗಿ ಬಂದು ರಬ್ಬರ್ ಕೂಲಿ ಕಾರ್ಮಿಕರಾಗಿ ದುಡಿದವರು.
01:03 PM (IST) Nov 02
ಅನುಷ್ಕಾ ಶೆಟ್ಟಿ ತನ್ನ ವೃತ್ತಿಜೀವನದಲ್ಲಿ ಮಾಡಿದ ಒಂದು ಸಿನಿಮಾದಿಂದಾಗಿ ಒಂದು ವರ್ಷ ಅತ್ತಿದ್ದರಂತೆ. ಆದರೆ ಅದೇ ಚಿತ್ರ ಅನುಷ್ಕಾ ಅವರ ಹಣೆಬರಹವನ್ನೇ ಬದಲಾಯಿಸಿತು. ಟಾಲಿವುಡ್‌ನಲ್ಲಿ ಲೇಡಿ ಸೂಪರ್ ಸ್ಟಾರ್ ಆಗಿ ಬೆಳೆಯಲು ಕಾರಣವಾಯಿತು.
12:49 PM (IST) Nov 02
12:40 PM (IST) Nov 02
ಬಿಗ್ ಬಾಸ್ ಕನ್ನಡ 12 ಶೋನಲ್ಲಿ ಈ ವಾರ ಕಾಲೇಜು ಟಾಸ್ಕ್‌ನಲ್ಲಿ ರಘು ಅವರು ಪ್ರಿನ್ಸಿಪಾಲ್ ಆಗಿದ್ದರು. ಪ್ರಿನ್ಸಿಪಾಲ್ ಆಗಿ ಅವರು ಚೆನ್ನಾಗಿ ಟಾಸ್ಕ್ ಮಾಡಿದರಾ? ಫೇವರಿಸಂ ಮಾಡಿದ್ದಾರಾ ಎಂದು ಕಿಚ್ಚ ಸುದೀಪ್ ಪ್ರಶ್ನೆ ಮಾಡಿದಾಗ, ರಾಶಿಕಾ ಶೆಟ್ಟಿ ಮಾತ್ರ ಫೇವರಿಸಂ ಮಾಡಿದರು ಎಂದು ಆರೋಪ ಮಾಡಿದ್ರು.
12:36 PM (IST) Nov 02
Man killed with dumbbell in office: ಬೆಂಗಳೂರಿನ ಗೋವಿಂದರಾಜ ನಗರದಲ್ಲಿ ಲೈಟ್ ಸ್ವಿಚ್ ಆಫ್ ಮಾಡುವ ವಿಚಾರಕ್ಕೆ ನಡೆದ ಜಗಳವು ಸಹೋದ್ಯೋಗಿಯ ಕೊಲೆಯಲ್ಲಿ ಅಂತ್ಯವಾಗಿದೆ. ರಾತ್ರಿ ಪಾಳಿಯಲ್ಲಿದ್ದ ಸೋಮಾಲ ವಂಶಿ ಎಂಬ ಯುವಕ, ಭೀಮೇಶ್ ಬಾಬು ಎಂಬುವರ ತಲೆಗೆ ಡಂಬಲ್ಸ್‌ನಿಂದ ಹೊಡೆದು ಹತ್ಯೆ ಮಾಡಿದ್ದಾನೆ.
12:28 PM (IST) Nov 02
ರಾಜ್ಯದಲ್ಲಿ ನವೆಂಬರ್ ಕ್ರಾಂತಿ ನಡೆಯಲಿದೆ ಎಂಬ ಮಾತು ಕೇವಲ ವದಂತಿ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಸಿಎಂ ಆಗುತ್ತಾರೆ ಎನ್ನುವ ವಿಷಯ ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದರು.
12:22 PM (IST) Nov 02
ರಾಜ್ಯದ ಎಲ್ಲ ಮದರಸಾಗಳಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯ ಹಾಗೂ ಉರ್ದು ಶಾಲೆಗಳಲ್ಲಿ ಪ್ರಥಮ ಭಾಷೆ ಕನ್ನಡ ಅಳವಡಿಸಲು ಕ್ರಮ ವಹಿಸಲಾಗಿದೆ ಎಂದು ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.
12:09 PM (IST) Nov 02
ಬಿಗ್‌ಬಾಸ್‌ನ ಸ್ಟ್ರಾಂಗ್ ಸ್ಪರ್ಧಿ ಮಲ್ಲಮ್ಮ ಮನೆಯಿಂದ ಹೊರಬಂದಿದ್ದಾರೆ ಎಂಬ ಸುದ್ದಿಯ ನಡುವೆಯೇ, 'ಭಾರ್ಗವಿ ಎಲ್‌ಎಲ್‌ಬಿ' ಖ್ಯಾತಿಯ ನಟ ಮನೋಜ್ ಕುಮಾರ್ ಜೊತೆಗಿನ ಅವರ ವಿಡಿಯೋ ವೈರಲ್ ಆಗಿದೆ. ಮನೋಜ್ ಕುಮಾರ್ ಅವರು ಮಲ್ಲಮ್ಮ ಪರವಾಗಿ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡುತ್ತಿದ್ದಾರೆ
11:57 AM (IST) Nov 02
Bigg Boss Kannada 12: ಬಿಗ್ ಬಾಸ್ ಕನ್ನಡ 12 ಶೋನಲ್ಲಿ ರಕ್ಷಿತಾ ಶೆಟ್ಟಿ ಕಂಡರೆ ರಿಷಾ ಗೌಡ ಉರಿದು ಬೀಳ್ತಾರೆ, ರಕ್ಷಿತಾಗೆ ಚೆನ್ನಾಗಿಯೇ ಕನ್ನಡ ಮಾತನಾಡುತ್ತಾರೆ, ಆದರೆ ಸುಮ್ನೆ ನಾಟಕ ಮಾಡ್ತಾರೆ ಎಂದು ಸಾಕಷ್ಟು ಬಾರಿ ಮಿಮಿಕ್ರಿ ಮಾಡಿದ್ದರು. ಈಗ ಕಿಚ್ಚನ ಪಂಚಾಯಿತಿಯಲ್ಲಿ ಇದೇ ವಿಚಾರ ಚರ್ಚೆ ಆಗಿದೆ.
11:47 AM (IST) Nov 02
ರಜನಿಕಾಂತ್ ಚಿತ್ರರಂಗದಲ್ಲಿ 5 ದಶಕಗಳನ್ನು ಪೂರೈಸಿದ್ದಾರೆ, ಈಗ ಕಮಲ್ ಹಾಸನ್ ಜೊತೆಗಿನ ಬಿಗ್ ಬಜೆಟ್ ಚಿತ್ರದ ಬಗ್ಗೆ ಚರ್ಚೆ ನಡೆಯುತ್ತಿದೆ. ವರದಿಗಳ ಪ್ರಕಾರ, ಈ ಚಿತ್ರವೇ ಅವರ ಕೊನೆಯ ಚಿತ್ರವಾಗಬಹುದು, ಆದರೆ ನಿವೃತ್ತಿಯ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ.
11:42 AM (IST) Nov 02
ಡಿವೋರ್ಸ್ ಬಳಿಕ ಹಾಟ್ ಫೋಟೋಗಳಿಂದ ಟ್ರೋಲ್ ಆಗುತ್ತಿರುವ ನಿವೇದಿತಾ ಗೌಡ ಅವರಿಗೆ ಬರುವ ಕೆಟ್ಟ ಕಮೆಂಟ್‌ಗಳೇ ಈಗ ಸುದ್ದಿಯಲ್ಲಿವೆ. ಈ ಅಶ್ಲೀಲ ಮತ್ತು ಅವಮಾನಕಾರಿ ಕಮೆಂಟ್‌ಗಳನ್ನೇ ಬಳಸಿ 'ಕಮೆಂಟ್‌ಬಾಕ್ಸ್ ಕನ್ನಡ' ಎಂಬ ಖಾತೆಯು ಒಂದು ವಿಶಿಷ್ಟವಾದ ರಾಪ್ ಹಾಡನ್ನು ಸೃಷ್ಟಿಸಿದ್ದಾರೆ.
11:17 AM (IST) Nov 02
ತಮನ್ನಾ ಭಾಟಿಯಾ ಸಂದರ್ಶನವೊಂದರಲ್ಲಿ, ಸಂಬಂಧದಲ್ಲಿದ್ದಾಗ ಸುಳ್ಳು ಹೇಳುವವರನ್ನು ತಾನು ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ತಮನ್ನಾ, ವಿಜಯ್ ವರ್ಮಾ ಜೊತೆ ಬ್ರೇಕಪ್ ಮಾಡಿಕೊಂಡಿದ್ದರು.
11:10 AM (IST) Nov 02
Bigg Boss Kannada Season 12 Updates: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ರಕ್ಷಿತಾ ಶೆಟ್ಟಿ ನಾಲ್ಕು ಬಾರಿ ಚಪ್ಪಲಿ ತೋರಿಸಿದ್ದಾರೆ ಎಂದು ಅಶ್ವಿನಿ ಗೌಡ ಹೇಳಿದ್ದಾರೆ. ಕಿಚ್ಚನ ಪಂಚಾಯಿತಿಯಲ್ಲಿ ಕೂಡ ಈ ರೀತಿ ಆಗಿದೆ. ಹಾಗಾದರೆ ಅಸಲಿ ವಿಷಯ ಏನು?
10:51 AM (IST) Nov 02
ಎಲ್ಲ ಸೇರಿ ಜಪಾನ್ ಪ್ರವಾಸಕ್ಕೆ ಹೋಗಿ ಬಂದರು. ಅವರು ಆ ಪ್ರವಾಸದಲ್ಲಿ ಇದ್ದಾಗ ಒಂದು ಸ್ವಾರಸ್ಯಕರ ಘಟನೆ ನಡೆಯಿತು. ಆದೇನಪ್ಪ ಅಂದರೆ ಅವರು ಯಿಕೋಮ ಪ್ರಾಂತದ ಹೊಜಾನ ಜಿ- ಬುದ್ಧ ಮಂದಿರಕ್ಕೆ ಹೋಗಿದ್ದರು.
10:46 AM (IST) Nov 02
BBK 12: ವೀಕೆಂಡ್ ಸಂಚಿಕೆಯಲ್ಲಿ ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ ತನ್ನಗೆ ಚಪ್ಪಲಿ ತೋರಿಸಿ ಸೀರಿಯಲ್ ಕಲಾವಿದರಿಗೆ ಅವಮಾನಿಸಿದ್ದಾರೆ ಎಂದು ಆರೋಪಿಸಿದರು. ಆದರೆ, ಕಾವ್ಯಾ ಶೈವ ಮಧ್ಯ ಪ್ರವೇಶಿಸಿ, ಅಶ್ವಿನಿ ತಮ್ಮ ಅನುಕೂಲಕ್ಕೆ ತಕ್ಕಂತೆ ರಕ್ಷಿತಾ ಹೇಳಿಕೆಯನ್ನು ತಿರುಚಿದ್ದಾರೆ ಎಂದು ಹೇಳಿದರು.
10:01 AM (IST) Nov 02
ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಈ ವರ್ಷದ ಜುಲೈನಲ್ಲಿ ತಮ್ಮ ಮಗಳನ್ನು ಸ್ವಾಗತಿಸಿದರು. ಕಿಯಾರಾ ಸದ್ಯ ಹೆರಿಗೆ ರಜೆಯಲ್ಲಿದ್ದು, ಅವರ ಮುಂಬರುವ ಯಾವುದೇ ಚಿತ್ರದ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲ.
09:48 AM (IST) Nov 02
ಇಂದು ಬಾಲಿವುಡ್ ನಟ ಶಾರುಖ್ ಖಾನ್ ತಮ್ಮ 60ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 60ನೇ ವಯಸ್ಸಿಗೆ ಕಾಲಿಡುತ್ತಿರುವ ಶಾರುಖ್ ಅವರನ್ನು ನೋಡಿ ಅವರ ವಯಸ್ಸನ್ನು ಊಹಿಸುವುದು ತುಂಬಾ ಕಷ್ಟ.
09:48 AM (IST) Nov 02
Kiran Raj Movies: ಜಾಕಿ 42 ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಟೀಸರ್ ಸಿನಿಮಾ ಪ್ರೇಕ್ಷಕನ ಗಮನ ಸೆಳೆದಿದೆ, ಗೋಲ್ಡನ್ ಗೇಟ್ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಭಾರತಿ ಸತ್ಯನಾರಾಯಣ ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಹಾರ್ಸ್ ರೇಸ್ ಹಿನ್ನೆಲೆಯಲ್ಲಿ ನಡೆಯುವ ಕಥೆ ಈ ಟೀಸರ್‌ನ ಹೈಲೆಟ್ಸ್ ಇದಾಗಿದೆ.
09:24 AM (IST) Nov 02
ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕ್ರಿಕೆಟ್ ಪಂದ್ಯಾವಳಿವನ್ನು ನಗರದ ಎಂ.ಜಿ.ರಸ್ತೆಯ ಆರ್.ಎಸ್.ಐ ಗ್ರೌಂಡ್‌ನಲ್ಲಿ ಆಯೋಜನೆ ಮಾಡಲಾಗಿದೆ. ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ದೀಪ ಬೆಳಗಿಸಿ ಉದ್ಘಾಟಿಸಿದರು.
09:12 AM (IST) Nov 02
ಇಂಗ್ಲಿಷ್ ಭಾಷೆ ನಮ್ಮ ಕನ್ನಡತನಕ್ಕೆ ಸವಾಲನ್ನು ಒಡ್ಡುತ್ತಿರುವ ದುರಂತವನ್ನು ಮತ್ತೆ ಕನ್ನಡಿಗರೆಲ್ಲ ಒಂದಾಗುವ ಮೂಲಕ ತಪ್ಪಿಸಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಕರೆ ನೀಡಿದರು.
09:12 AM (IST) Nov 02
ನಗರದಲ್ಲಿ ಸುರಂಗ ರಸ್ತೆ(ಟನಲ್ ರೋಡ್) ವಿಚಾರವಾಗಿ ವಿಪಕ್ಷ ನಾಯಕ ಆರ್.ಅಶೋಕ್ ಅವರ ನೇತೃತ್ವದಲ್ಲಿಯೇ ಸಮಿತಿ ರಚನೆ ಮಾಡಲು ನಾನು ತಯಾರಿದ್ದೇನೆ. ಅವರು ಸೂಚಿಸಿದ ಕಡೆಯೇ ಲಾಲ್‌ಬಾಗ್ ಬಳಿ ಪ್ರವೇಶ-ನಿರ್ಗಮನ ತಾಣ ರೂಪಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
09:00 AM (IST) Nov 02
ಮುಂಬೈ ಮಾದರಿಯಲ್ಲಿ ಪ್ರಮುಖ ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆ ಮಾಡುವವರಿಗೇ ಅದೇ ರಸ್ತೆಯ ತ್ಯಾಜ್ಯ ನಿರ್ವಹಣೆ ಹೊಣೆ ನೀಡುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
08:56 AM (IST) Nov 02
ಅಪ್ಪ- ಮಕ್ಕಳು ಇನ್ನು ಎಷ್ಟು ವರ್ಷ ದೇವೇಗೌಡರ ಹೆಸರಲ್ಲಿ ರಾಜಕಾರಣ ಮಾಡುತ್ತಾರೋ ಗೊತ್ತಿಲ್ಲ. ಅವರ ಹೆಸರಿನಲ್ಲಿ ರಾಜಕಾರಣ ಮಾಡೋದು ಬಿಟ್ಟು ಸ್ವತಂತ್ರವಾಗಿ ರಾಜಕೀಯ ಮಾಡುವಂತೆ ಸಚಿವ ಎನ್.ಚಲುವರಾಯಸ್ವಾಮಿ ಸಲಹೆ ನೀಡಿದರು.
08:22 AM (IST) Nov 02
ಕನ್ನಡ ರಾಜ್ಯೋತ್ಸವದ ದಿನ ಕರ್ನಾಟಕ ರತ್ನ ನಟ ಪುನೀತ್ ರಾಜ್‌ಕುಮಾರ್ ಭಾವಚಿತ್ರ, ಕನ್ನಡಪರ ಘೋಷಣೆಗಳನ್ನು ಹೊತ್ತ ನಮ್ಮ ಮೆಟ್ರೋ ರೈಲಿನ ಸಂಚಾರ ಜನಮನ ಸೆಳೆಯಿತು. ಮೆಟ್ರೋದ ಬೋಗಿಗಳ ಮೇಲೆ ಕನ್ನಡ ಬಾವುಟ, ‘ಕನ್ನಡವೇ ಸತ್ಯ, ಕನ್ನಡವೇ ನಿತ್ಯ’, ಘೋಷಣೆಗಳು ರಾರಾಜಿಸಿದವು.
08:03 AM (IST) Nov 02
ಎಲ್ಲೆಲ್ಲೂ ರಾರಾಜಿಸಿದ ಹಳದಿ-ಕೆಂಪು ಬಾವುಟ, ಕನ್ನಡ ಪರ ಘೋಷಣೆ, ಕನ್ನಡ ಪರ ಸಂಘಟನೆಗಳಿಂದ ವಿವಿಧ ಕಡೆ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳ ಕಲರವ, ಸಂಘ-ಸಂಸ್ಥೆಗಳಿಂದ ಭುವನೇಶ್ವರಿ ದೇವಿಗೆ ನಮನ, ಆಟೋ ಸೇರಿದಂತೆ ವಿವಿಧ ವಾಹನಗಳಲ್ಲಿ ಹಾರಾಡಿದ ಕನ್ನಡ ಧ್ವಜ.
07:50 AM (IST) Nov 02
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿ, 22 ವರ್ಷದ ತಾಯಿಯೊಬ್ಬಳು ತನ್ನ 10 ದಿನದ ಹಾಗೂ ಎರಡು ವರ್ಷದ ಹೆಣ್ಣು ಮಕ್ಕಳನ್ನು ಕೊಂದು ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆಯ ತನಿಖೆ ನಡೆಯುತ್ತಿದ್ದು, ಇದೇ ವೇಳೆ ನಂಜನಗೂಡಿನಲ್ಲಿ ಅಪರಿಚಿತ ವೃದ್ಧೆ ಹಾಗೂ ವ್ಯಕ್ತಿಯ ಶವಗಳು ಪತ್ತೆಯಾಗಿವೆ.