ಕಮಿಷನರ್ ಕಪ್ ಕ್ರಿಕೆಟ್ ಪಂದ್ಯಾವಳಿ: ಮಾಧ್ಯಮ ಮತ್ತು ಪೊಲೀಸರ ಮಧ್ಯೆ ಸೌಹಾರ್ದದ ಕ್ರೀಡಾ ಹಬ್ಬ
ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕ್ರಿಕೆಟ್ ಪಂದ್ಯಾವಳಿವನ್ನು ನಗರದ ಎಂ.ಜಿ.ರಸ್ತೆಯ ಆರ್.ಎಸ್.ಐ ಗ್ರೌಂಡ್‌ನಲ್ಲಿ ಆಯೋಜನೆ ಮಾಡಲಾಗಿದೆ. ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ದೀಪ ಬೆಳಗಿಸಿ ಉದ್ಘಾಟಿಸಿದರು.

ಪೊಲೀಸ್ ಆಯುಕ್ತರ ಕ್ರಿಕೆಟ್ ಕಪ್
ಬೆಂಗಳೂರು (ನ.02): ಪೊಲೀಸರು ಹಾಗೂ ಮಾಧ್ಯಮದವರ ನಡುವೆ ಸೌಹಾರ್ದಯುತವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕ್ರಿಕೆಟ್ ಕಪ್ ಮ್ಯಾಚ್‌ಗೆ ಚಾಲನೆ ನೀಡಲಾಯ್ತು.
ದೀಪ ಬೆಳಗಿಸಿ ಉದ್ಘಾಟನೆ
ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕ್ರಿಕೆಟ್ ಪಂದ್ಯಾವಳಿವನ್ನು ನಗರದ ಎಂ.ಜಿ.ರಸ್ತೆಯ ಆರ್.ಎಸ್.ಐ ಗ್ರೌಂಡ್‌ನಲ್ಲಿ ಆಯೋಜನೆ ಮಾಡಲಾಗಿದೆ. ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಹಲವು ತಂಡಗಳು ಭಾಗಿ
ಬೆಂಗಳೂರು ನಗರ ಕ್ರೈಂ ರಿಪೋರ್ಟರ್ಸ್‌ನ ಬಿಸಿಆರ್ ಪ್ಯಾಂಥರ್ಸ್, ಹೆಡ್‌ಲಾಡ್‌ಲೈನ್ ಹಿಟ್ಲರ್ಸ್. ನ್ಯಾಷನಲ್ ಮೀಡಿಯಾದ ಒಲ್ಡ್ ಮಾಂಕ್ಸ್ ತಂಡ ಭಾಗಿಯಾಗಿತ್ತು.
ಕಪ್‌ಗಾಗಿ ಸೆಣಸಾಟ
ಬೆಂಗಳೂರು ನಗರ ಪೊಲೀಸ್ ಸಿಬ್ಬಂದಿ ಪರವಾಗಿ, ಕಾಶಿ ಲಯನ್, ಐಪಿಎಸ್ ಅಧಿಕಾರಿಗಳ ಟಾಪ್ ಗನ್ಸ್ ಹಾಗೂ ನಗರ ಡಿಸಿಪಿ ಹಾಗೂ ಎಸಿಪಿಗಳ ಸೆಂಚುರಿ ನೈಟ್ಸ್ ತಂಡಗಳು ಪೊಲೀಸ್ ಕಮಿಷನರ್ ಕಪ್‌ಗಾಗಿ ಸೆಣಸಾಟ ನಡೆಸಿವೆ.
ಸೋಲು ಗೆಲುವು ಮುಖ್ಯವಲ್ಲ
ಈ ವೇಳೆ ಮಾತನಾಡಿದ ಕಮಿಷನರ್ ಸೋಲು ಗೆಲುವು ಮುಖ್ಯವಲ್ಲ. ಕ್ರೀಡಾಕೂಟದಲ್ಲಿ ಭಾಗಿಯಾಗುವುದು ಮುಖ್ಯವಾದದ್ದು. ಮಾಧ್ಯಮ ಹಾಗೂ ಪೊಲೀಸರ ನಡುವಿನ ಸೌಹಾರ್ದಯುತವಾಗಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಹೇಳಿದ್ರು.