- Home
- Entertainment
- TV Talk
- ನನ್ನ ಹಿಂದೆ ಬೀಳಬೇಡಿ, I am Committed ಎಂದ ಗಿಲ್ಲಿ ನಟ; ನನ್ನ ಗುಂಡಿ ನಾನ್ಯಾಕೆ ತೋಡಿಕೊಳ್ಳಲಿ
ನನ್ನ ಹಿಂದೆ ಬೀಳಬೇಡಿ, I am Committed ಎಂದ ಗಿಲ್ಲಿ ನಟ; ನನ್ನ ಗುಂಡಿ ನಾನ್ಯಾಕೆ ತೋಡಿಕೊಳ್ಳಲಿ
'ಸೂಪರ್ ಸಂಡೇ ವಿತ್ ಬಾದ್‌ಷಾ ಸುದೀಪ' ಸಂಚಿಕೆಯಲ್ಲಿ, ಕಾವ್ಯಾ ಮತ್ತು ಸೂರಜ್ ಡ್ಯಾನ್ಸ್ ಬಗ್ಗೆ ಗಿಲ್ಲಿ ನಟ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಅಶ್ವಿನಿ ಗೌಡ ಗಿಲ್ಲಿಯನ್ನು ಕಾಲೆಳೆದಾಗ, 'ನಾನು ಕಮಿಟೆಡ್' ಎಂದು ಹೇಳುವ ಮೂಲಕ ಎಲ್ಲರಲ್ಲೂ ಕುತೂಹಲ ಮೂಡಿಸಿದ್ದಾರೆ.

ಸೂಪರ್ ಸಂಡೇ ವಿತ್ ಬಾದ್‌ಷಾ
ಈ ಭಾನುವಾರದ 'ಸೂಪರ್ ಸಂಡೇ ವಿತ್ ಬಾದ್‌ಷಾ ಸುದೀಪ' ಸಂಚಿಕೆಯ ಪ್ರೋಮೋ ಬಿಡುಗಡೆಯಾಗಿದ್ದು, ನನ್ನ ಹಿಂದೆ ಬೀಳಬೇಡಿ, I am Committed ಎಂದು ಗಿಲ್ಲಿ ನಟ ಹೇಳಿದ್ದಾರೆ. ಹಾಗೆಯೇ ನನ್ನು ಗುಂಡಿಯನ್ನು ನಾನ್ಯಾಕೇ ತೋಡಿಕೊಳ್ಳಲಿ ಅಂತ ಗಿಲ್ಲಿ ನಟ ತಮಾಷೆ ಮಾಡಿದ್ದಾರೆ.
ಕಾವ್ಯಾ ಮತ್ತು ಸೂರಜ್ ಡ್ಯಾನ್ಸ್
ಬಿಬಿ ಕಾಲೇಜಿನ ಫೆಸ್ಟ್ ಕಾರ್ಯಕ್ರಮದಲ್ಲಿ ಕೆಂಪು ತಂಡದ ಕಾವ್ಯಾ ಶೈವ ಮತ್ತು ಸೂರಜ್ ಸಿಂಗ್ ರೊಮ್ಯಾಂಟಿಕ್ ಹಾಡಿಗೆ ಡ್ಯಾನ್ಸ್ ಮಾಡಿದ್ದರು. ಕಾವ್ಯಾ ಮತ್ತು ಸೂರಜ್ ಡ್ಯಾನ್ಸ್ ಪ್ರ್ಯಾಕ್ಟಿಸ್ ಮಾಡುತ್ತಿರೋದನ್ನು ಗಿಲ್ಲಿ ನಟ ಬಾಗಿಲು ಬಳಿಯಲ್ಲಿಯೇ ನಿಂತು ನೋಡುತ್ತಿದ್ದರು. ಈ ಬಗ್ಗೆ ಇಂದಿನ ಸಂಚಿಕೆಯಲ್ಲಿ ಸುದೀಪ್ ಮಾತನಾಡಿದ್ದಾರೆ.
ಜಲ್ಲಿಕಟ್ಟಿನಲ್ಲಿ ಗೂಳಿ
ಕಾವ್ಯಾ-ಸೂರಜ್ ಅವರದ್ದು ರೊಮ್ಯಾಂಟಿಕ್ ಡ್ಯಾನ್ಸ್ ಆಗಿರಲಿಲ್ಲ. ಜಲ್ಲಿಕಟ್ಟಿನಲ್ಲಿ ಗೂಳಿ ಹಿಡಿಯುವ ರೀತಿಯಲ್ಲಿತ್ತು ಎಂದು ಗಿಲ್ಲಿ ನಟ ಹೇಳುತ್ತಾರೆ. ತುಂಬಾ ಚೆನ್ನಾಗಿ ಮಾಡಬೇಕೆಂದು ಪ್ರ್ಯಾಕ್ಟಿಸ್ ಮಾಡಿದ್ದರೂ ಆದು ಹಾಳಾಯ್ತು ಅಂತ ಕಾವ್ಯಾ ಹೇಳ್ತಾರೆ. ಡ್ಯಾನ್ಸ್ ಮಾಡೋಕೆ ಗಿಲ್ಲಿ ನಿಮಗೆ ಹೆಲ್ಪ್ ಮಾಡಿದ್ರಾ ಪ್ರಶ್ನೆಗೆ ನಾನ್ಯಾಕೆ ಹೇಳಿಕೊಡಲಿ ಅಣ್ಣಾ, ನನ್ನ ಗುಂಡಿ ನಾನ್ಯಾಕೆ ತೋಡಿಕೊಳ್ಳಲಿ ಅಂತಾರೆ.
ಗಿಲ್ಲಿಗೆ ಹೊಟ್ಟೆ ಉರಿ
ಕಾವ್ಯಾ ಮತ್ತು ಸೂರಜ್ ಡ್ಯಾನ್ಸ್ ನೋಡಿ ಗಿಲ್ಲಿಗೆ ಹೊಟ್ಟೆ ಉರಿಯೋದು ನೋಡಿ ನನಗೆ ತುಂಬಾನೇ ಖುಷಿಯಾಯ್ತು ಅಂತ ಅಶ್ವಿನಿ ಗೌಡ ಎಲ್ಲರನ್ನು ನಗಿಸುತ್ತಾರೆ. ಇದಕ್ಕೆ ತಿರುಗೇಟು ನೀಡಿದ ಗಿಲ್ಲಿ ನಟ, ಇವರು ಯಾಕೆ ನನ್ನ ಹಿಂದೆ ಬಿದ್ದಿದ್ದಾರಂತೆ ಗೊತ್ತಾಗುತ್ತಿಲ್ಲ. ನಾನು ಕಮಿಟೆಡ್ ಆಗಿದ್ದೀನಿ ಅಂತ ಹೇಳಿ ಕಾವ್ಯಾ ಮುಖ ನೋಡಿ ಮತ್ತಷ್ಟು ನಗಿಸುತ್ತಾರೆ.
ಇದನ್ನೂ ಓದಿ: Bigg Boss ಮಲ್ಲಮ್ಮನ ಜೊತೆ ದಿಢೀರ್ ಕಾಣಿಸಿಕೊಂಡ ಭಾರ್ಗವಿ ಎಲ್ಎಲ್ಬಿ ಅರ್ಜುನ್: ಇದೇನಿದು ಟ್ವಿಸ್ಟ್?
ಬಿಗ್‌ಬಾಸ್ ಮನೆ
ಬಿಗ್‌ಬಾಸ್ ಮನೆಯಲ್ಲಿ ಒಬ್ಬರಿಗೊಬ್ಬರು ಟಾಂಗ್ ಕೊಡುತ್ತಲೇ ತಿರುಗಾಡುವ ಅಶ್ಚಿನಿ ಗೌಡ ಮತ್ತು ಗಿಲ್ಲಿ ನಟ ಒಂದೇ ತಂಡದಲ್ಲಿದ್ದರು. ಬಿಗ್‌ಬಾಸ್ ಕಾಲೇಜಿನ ಫೆಸ್ಟ್‌ನಲ್ಲಿ ಇಬ್ಬರು ಜೊತೆಯಾಗಿ ಡ್ಯಾನ್ಸ್ ಮಾಡುವ ಮೂಲಕ ಎಲ್ಲರನ್ನು ರಂಜಿಸಿದ್ದರು. ಒಂದೇ ತಂಡದಲ್ಲಿದ್ರೂ ಇಬ್ಬರು ನಡುವಿನ ಮನಸ್ತಾಪವೇನು ಕಡಿಮೆಯಾಗಿರಲಿಲ್ಲ.
ಇದನ್ನೂ ಓದಿ: BBK 12: ಒಂದಾದ್ಮೇಲೆ ಒಂದು ಕಂಪ್ಲೇಂಟ್ ಮಾಡಿದ ರಾಶಿಕಾಗೆ ಮುಖಭಂಗ; ಕಿಚ್ಚ ಸುದೀಪ್ ಮುಂದೆ ಆ ಘಟನೆ ನಡೀತು