ಅಚ್ಚರಿ ಒಗಟಿನ ಮೂಲಕ ಬಿಗ್‌ಬಾಸ್ ಆಟಕ್ಕೆ ಮಲ್ಲಮ್ಮ ವಿದಾಯ; ಹೃದಯ ಗೆದ್ದ ಮಾಳು ನಿಪನಾಳ
ಸೋಶಿಯಲ್ ಮೀಡಿಯಾದಿಂದ ಖ್ಯಾತಿ ಪಡೆದಿದ್ದ ಮಲ್ಲಮ್ಮ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾರೆ. ಅವರ ಎಲಿಮಿನೇಷನ್‌ನಿಂದ ಮನೆಯ ಸದಸ್ಯರು ಭಾವುಕರಾಗಿದ್ದು, ಹೊರಹೋಗುವ ಮುನ್ನ ಮಲ್ಲಮ್ಮ ಬಿಗ್‌ಬಾಸ್‌ಗೆ ಒಂದು ಒಗಟು ಹೇಳಿ ಗಮನ ಸೆಳೆದರು.

ಮಲ್ಲಮ್ಮ
ತಮ್ಮ ಮಾತುಗಳಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದ ಗ್ರಾಮೀಣ ಭಾಗದ ಸಾಮಾನ್ಯ ಮಹಿಳೆ ಮಲ್ಲಮ್ಮ ಬಿಗ್‌ಬಾಸ್ ಮನೆಯಲ್ಲಿ ಆಟವಾಡಿ ಹೊರಗೆ ಬಂದಿದ್ದಾರೆ. ಮಲ್ಲಮ್ಮ ಅವರು ವಿಡಿಯೋ ಪ್ಲೇ ಆಗುತ್ತಿದ್ದಂತೆ ಮನೆಯ ಸದಸ್ಯರೆಲ್ಲರೂ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.
ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಕಣ್ಣೀರು
ಬಿಗ್‌ಬಾಸ್ ಮನೆಯಲ್ಲಿ ಮಲ್ಲಮ್ಮ ಬಹುತೇಕ ಎಲ್ಲರೊಂದಿಗೆ ಆತ್ಮೀಯವಾಗಿದ್ದರು. ಮಲ್ಲಮ್ಮ ಅವರ ವಿಡಿಯೋ ಪ್ಲೇ ಆಗುತ್ತಿದ್ದಂತೆ ಭಾವುಕರಾಗಿ ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಕಣ್ಣೀರು ಹಾಕಲು ಆರಂಭಿಸಿದರು. ವಿಡಿಯೋ ಮುಗಿಯುತ್ತಿದ್ದಂತೆ ಮಲ್ಲಮ್ಮ ಅವರೇ ಮನೆಯಲ್ಲಿರಲಿ ನಾನೇ ಹೊರಗೆ ಹೋಗುವೆ ಎಂದು ಮಾಳು ನಿಪನಾಳ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಳು ನಿಪನಾಳ ನಿರ್ಧಾರ
ಮಾಳು ನಿಪನಾಳ ನಿರ್ಧಾರ ಗೌರವಿಸಿದ ಸುದೀಪ್, ಇದು ಜನರ ಅಭಿಪ್ರಾಯವಾಗಿದೆ ಎಂದು ಹೇಳಿದರು. ಮಲ್ಲಮ್ಮ ಅವರನ್ನು ತಬ್ಬಿಕೊಂಡ ರಕ್ಷಿತಾ ಶೆಟ್ಟಿ ಕಣ್ಣೀರು ಹಾಕಿದರು. ಬೆಳಕಿನ ಚಪ್ಪರದ ಮೂಲಕ ಮಲ್ಲಮ್ಮ ಅವರಿಗೆ ಬೀಳ್ಕೊಡುಗೆ ನೀಡಲಾಯ್ತು. ಬಿಗ್‌ಬಾಸ್ ಆಟಕ್ಕೆ ಹೊಸ ವ್ಯಾಖ್ಯಾನ ನೀಡಿದ ಪ್ರಜ್ಞಾವಂತ ಸ್ಪರ್ಧಿ ಮಲ್ಲಮ್ಮ ಎಂದು ಹೇಳಿದರು. ಸ್ಪರ್ಧಿಗಳೆಲ್ಲರೂ ಗಟ್ಟಿಗಿತ್ತಿ ಮಲ್ಲಮ್ಮಗೆ ಜೈ ಎಂದು ಘೋಷಣೆ ಕೂಗುವ ಮೂಲಕ ಕಳುಹಿಸಲಾಯ್ತು.
ಮಲ್ಲಮ್ಮ ಒಗಟು
ಬಿಗ್‌ಬಾಸ್ ಮನೆಯಿಂದ ಹೊರ ಹೋಗುವ ಮುನ್ನ ಮಲ್ಲಮ್ಮ ಮತ್ತೊಂದು ಒಗಟು ಹೇಳಿದರು. ಅತ್ತೆ-ಸೊಸೆ ಇಬ್ಬರು, ಗಂಡ-ಹೆಂಡತಿ ಇಬ್ಬರು, ತಾಯಿ-ಮಗ ಇಬ್ಬರು, ಮೂರು ಹೋಳಿಗೆ, ಹರಿಯದಂತೆ ಹಂಚಬೇಕು ಎಂದು ಬಿಗ್‌ಬಾಸ್‌ಗೆ ಒಗಟು ಕೇಳಿದರು. ಮಲ್ಲಮ್ಮ ಅವರ ಒಗಟು ಮತ್ತು ಆಟಕ್ಕೆ ಬಿಗ್‌ಬಾಸ್ ಅವರೇ ಶರಣು ಎಂದು ಹೇಳಿದರು.
ಮಲ್ಲಮ್ಮ ಧನ್ಯವಾದ
ನಾನು ಇನ್ನು ಮನೆಯಲ್ಲಿರಬೇಕು ಎಂದು ಅಂದ್ಕೊಂಡಿದ್ದೆ. ಯಾರು ಸಹ ನನ್ನೊಂದಿಗೆ ಜಗಳವೇ ಆಡಲಿಲ್ಲ. ಅಮ್ಮಾ ಅಮ್ಮಾ ಅಂತ ಎಲ್ಲರೂ ನನಗೆ ಪ್ರೀತಿಯನ್ನು ತೋರಿದರು. ಹಾಗಾಗಿ ಮನೆಯಿಂದ ಹೊರಗೆ ಬಂದೆ. ತಾವು ಬಿಗ್‌ಬಾಸ್ ಮನೆಗೆ ಹೋಗಲು ಕಾರಣರಾದ ಪ್ರಿಯಾಂಕಾ ಅವರಿಗೆ ಮಲ್ಲಮ್ಮ ಧನ್ಯವಾದ ತಿಳಿಸಿದರು.